ಕೂಳೂರು ಪರಿಸರದಲ್ಲಿ ರಾಮಕೃಷ್ಣ ಮಿಷನ್‌ ಸ್ವಚ್ಛ ಮಂಗಳೂರು ಅಭಿಯಾನ

Monday, September 9th, 2019
shishir-shetty

ಮಂಗಳೂರು : ಮಹಾತ್ಮಾ ಗಾಂಧೀಜಿಯವರು ಹೇಳಿದಂತೆ ‘ಸ್ವಾತಂತ್ರ್ಯಕ್ಕಿಂತಲೂ ಶುಚಿತ್ವ ಮಹತ್ವವಾದುದು’ ಎಂಬ ನೆಲೆಯಲ್ಲಿ ಸ್ವಚ್ಛತೆಯತ್ತ ಪ್ರತಿಯೊಬ್ಬರು ಗಮನ ನೀಡಬೇಕು. ವಿಶೇಷವಾಗಿ ಯುವಜನರು ಸ್ವಚ್ಚತೆಯನ್ನು ಮೈಗೂಡಿಸಿಕೊಂಡು ಅದನ್ನು ಸಮಾಜದಲ್ಲಿ ಪಸರಿಸುವ ಕೆಲಸ ಮಾಡುವಂತಾಗಬೇಕು ಎಂದು ಎ.ಬಿ. ಶೆಟ್ಟಿ ದಂತ ಮಹಾವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಮುಖ್ಯಸ್ಥ ಡಾ| ಶಿಶಿರ್‌ ಶೆಟ್ಟಿ ಹೇಳಿದರು. ರಾಮಕೃಷ್ಣ ಮಿಷನ್‌ ಮಾರ್ಗದರ್ಶನದಲ್ಲಿ 4 ವರ್ಷಗಳಿಂದ ಹಮ್ಮಿಕೊಳ್ಳಲಾಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 40ನೇ ಶ್ರಮದಾನವನ್ನು ಕೂಳೂರು ಪರಿಸರದಲ್ಲಿ ರವಿವಾರ ಕೈಗೊಳ್ಳಲಾಯಿತು. ಮುಖ್ಯ ಅತಿಥಿಯಾಗಿದ್ದ […]

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 36 ನೇ ಶ್ರಮದಾನ

Monday, June 18th, 2018
ramakrisna mission

ಮಂಗಳೂರು  :  ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 36  ನೇ ಶ್ರಮದಾನವನ್ನು ಊರ್ವಾ ಮಾರ್ಕೆಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ  ರವಿವಾರದಂದು ಬೆಳಿಗ್ಗೆ 7:30 ರಿಂದ 10 ಗಂಟೆಯವರೆಗೆ  ಆಯೋಜಿಸಲಾಗಿತ್ತು. ಬೆಳಿಗ್ಗೆಯಿಂದ  ನಿರಂತರವಾಗಿ ಸುರಿಯುತ್ತಿದ್ದ ಮಳೆಗೆ   ಕಾರ್ಯಕರ್ತರು  ಆಗಮಿಸಿದ್ದರು. ಮಳೆಯು ಜೋರಾಗಿದ್ದರಿಂದ ಶ್ರಮದಾನ ಮಾದಲು ಅಡ್ಡಿಯಾಗಿತ್ತು. ಆದರೆ ಕಾರ್ಯಕರ್ತರು ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ನೇತೃತ್ವದಲ್ಲಿ ಸ್ವಚ್ಛತೆಯ ಕುರಿತು ವಿಚಾರ ವಿನಿಮಯ ಮಾಡಿಕೊಂಡರು. ಆರಂಭದಲ್ಲಿ ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂzಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಳೆದ ಮೂರುವರೆ ವರ್ಷಗಳಿಂದ ಕಾರ್ಯಕರ್ತರ ಅಪರಿಮಿತ ಉತ್ಸಾಹ […]

ರಾಮಕೃಷ್ಣ ಮಿಷನ್‌ ಮಂಗಳೂರಿನ ಶುಚಿತ್ವಕ್ಕೆ ಮಹತ್ತರ ಕೊಡುಗೆ ನೀಡಿದೆ: ಡಿ. ವೇದವ್ಯಾಸ ಕಾಮತ್‌

Wednesday, June 6th, 2018
ramakrishna-mission

ಮಂಗಳೂರು: ರಾಮಕೃಷ್ಣ ಮಿಷನ್‌ನ ಸ್ವಚ್ಛ ಭಾರತ್‌ ಮಂಗಳೂರಿನ ಸೌಂದರ್ಯ ಮತ್ತು ಶುಚಿತ್ವಕ್ಕೆ ಮಹತ್ತರ ಕೊಡುಗೆ ನೀಡಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್‌ ಹೇಳಿದರು. ಮಂಗಳಾದೇವಿಯ ರಾಮಕೃಷ್ಣ ಮಠದಲ್ಲಿ ಆಯೋಜಿಸಲಾದ ಸ್ವಾಮಿ ವಿವೇಕಾನಂದ ತರಬೇತಿ ಕೇಂದ್ರ ಪ್ರಾರಂಭೋತ್ಸವ ಹಾಗೂ ಶಾಲಾ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸ್ವಚ್ಛ ಭಾರತದ ಮೂಲಕ ರಾಮಕೃಷ್ಣ ಮಿಷನ್‌ ಸಮಾಜದಲ್ಲಿ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಮಠದ ಆವರಣದಲ್ಲಿ ಕಸದಿಂದ ರಸ ಉತ್ಪಾದಿಸುವ ಘಟಕ ಸ್ಥಾಪಿಸಿರುವುದು […]

‘ಕಸ ಬೀಳುವ ಜಾಗದಲ್ಲಿ ಪಾರ್ಕ್‌ ಮೂಡಲಿ’

Monday, March 26th, 2018
j-r-lobo

ಮಂಗಳೂರು: ರಾಮಕೃಷ್ಣ ಮಿಷನ್‌ ಸ್ವಚ್ಛತಾ ಅಭಿಯಾನ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಶುಭ ಘಳಿಗೆಯಲ್ಲಿ ಕರಂಗಲ್ಪಾಡಿಯಲ್ಲಿ ನವೀಕೃತಗೊಳಿಸಿರುವ ಅಕ್ಯುಪ್ರಶರ್‌ ವಾಕಿಂಗ್‌ ಟ್ರ್ಯಾಕ್ ‘ಅರೈಸ್‌ ಅವೇಕ್‌’ ಪಾರ್ಕನ್ನು ರವಿವಾರ ಉದ್ಘಾಟಿಸಲಾಯಿತು. ಶಾಸಕ ಜೆ.ಆರ್‌. ಲೋಬೋ ಅವರು ಪಾರ್ಕ್‌ ಉದ್ಘಾಟಿಸಿದರು. ಮನಸ್ಸಿನ ಸ್ವಚ್ಛತೆಯಿಂದ ಎಲ್ಲವೂ ಸಾಧ್ಯವಾಗುತ್ತದೆ. ರಾಮಕೃಷ್ಣ ಮಠದವರು ಮಾಡುತ್ತಿರುವ ಸ್ವಚ್ಛತಾ ಅಭಿಯಾನ ಸಾಕಷ್ಟು ಮಂದಿಯ ಮನಸ್ಸು ಪರಿವರ್ತನೆಯ ಜತೆಯಲ್ಲಿ ಜಾಗೃತಿಯನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದರು. ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಜಿತಕಾಮಾನಂದ ಸ್ವಾಮೀಜಿ ಮಾತನಾಡಿ, ನಗರದಲ್ಲಿ ಕಸ […]

ರಾಮಕೃಷ್ಣ ಮಿಷನ್‌ನಿಂದ ಶ್ರಮದಾನ

Monday, February 19th, 2018
ramakrishna

ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 16ನೆ ಶ್ರಮದಾನ ರವಿವಾರ ಅತ್ತಾವರದಲ್ಲಿ ನಡೆಯಿತು. ಮುಂಜಾನೆ 7:30 ಕ್ಕೆ ಕೆಎಂಸಿ ಆಸ್ಪತ್ರೆಯ ಹಿರಿಯ ಮ್ಯಾನೇಜರ್ ಶ್ರೀ ರವಿರಾಜ್, ಹಾಗೂ ಅನಿರುದ್ಧ ನಾಯಕ್ 16ನೆ ಶ್ರಮದಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಚ್ಛತೆಯ ಕುರಿತು ಚುಟುಕಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರೇಸಿ ಲೋಬೊ, ಇಮ್ತಿಯಾಝ್ ಅಹ್ಮದ್, ನಝೀರ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು. ಸ್ವಯಂ ಸೇವಕರು ಅತ್ತಾವರ ಕಟ್ಟೆಯ […]

ರಾಮಕೃಷ್ಣ ಮಿಷನ್‌ನಿಂದ ಮೋರ್ಗನ್ಸ್ ಗೇಟ್, ಮಹಾಕಾಳಿಪಡ್ಪುನಲ್ಲಿ ಸ್ವಚ್ಛತೆ

Monday, February 5th, 2018
ramakrishna

ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ 4ನೆ ಹಂತದ 14ನೆ ವಾರದ ಸ್ವಚ್ಛತಾ ಕಾರ್ಯಕ್ರಮ ರವಿವಾರ ಮೋರ್ಗನ್ಸ್ ಗೇಟ್, ಮಹಾಕಾಳಿಪಡ್ಪುನಲ್ಲಿ ನಡೆಯಿತು. ಬೆಳಗ್ಗೆ 7:30ಕ್ಕೆ ರಾಗತರಂಗ ಸಂಸ್ಥೆಯ ಮುಖ್ಯಸ್ಥ ಸದಾನಂದ ಉಪಾಧ್ಯಾಯ ಹಾಗೂ ಸೀತಾರಾಮ್ ಎ. ಜಂಟಿಯಾಗಿ ಅಭಿಯಾನವನ್ನು ಶುಭಾರಂಭಗೊಳಿಸಿದರು. ಈ ಸಂದರ್ಭದಲ್ಲಿ ಕೆ.ಪ್ರಸಾದ್, ಪಿ.ಎನ್.ಭಟ್, ಸುರೇಶ್ ಶೆಟ್ಟಿ, ಲೆಕ್ಕಪರಿಶೋಧಕ ಕೆ. ಶಿವಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಸುಮಾರು 250 ಮಂದಿ ಕಾರ್ಯಕರ್ತರು ಆರು ಗುಂಪುಗಳಾಗಿ ವಿಂಗಡಿಸಿಕೊಂಡು ಮಹಾಕಾಳಿಪಡ್ಪು ರೈಲ್ವೆ ಕ್ರಾಸಿಂಗ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶ್ರಮದಾನ ಕೈಗೊಂಡರು. ಸಂತ […]

ಮಂಗಳೂರಿನ ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜಿಸುವ ಮುನ್ನ ಯೋಚಿಸಿ

Saturday, January 27th, 2018
swachaa-bharat

ಮಂಗಳೂರು: ದೇಶದಾದ್ಯಂತ ಸ್ವಚ್ಛ ಭಾರತ್ ಅಭಿಯಾನದಡಿ ಹಲವಾರು ಸಂಘ ಸಂಸ್ಥೆಗಳು ದೇಶವನ್ನು ಸ್ವಚ್ಛಗೊಳಿಸುವ ನಿಸ್ವಾರ್ಥ ಸೇವೆಗೆ ತಮ್ಮನ್ನು ತೊಡಗಿಸಿಕೊಂಡಿವೆ. ಭಾನುವಾರ ಬಂತೆಂದರೆ ಪೊರಕೆ ಹಿಡಿದು ಸಾವಿರಾರು ಸ್ವಯಂ ಸೇವಕರು ರಸ್ತೆಗಿಳಿದು ಪರಿಸರವನ್ನು ಸ್ವಚ್ಛಗೊಳಿಸುತ್ತಾರೆ. ಆದರೆ ಸೋಮವಾರ ಅದೇ ಸ್ಥಳಗಳಲ್ಲಿ ಸಾರ್ಜನಿಕರು ಮತ್ತೆ ತ್ಯಾಜ್ಯ ಸುರಿದು,ಕಂಡ ಕಂಡಲ್ಲಿ ಮೂತ್ರ ವಿಸರ್ಜನೆ ಮಾಡಿ ಗಲೀಜುಗೊಳಿಸುತ್ತಾರೆ. ಸಾರ್ವಜನಿಕರ ಈ ಮನಸ್ಥತಿಯ ವಿರುದ್ದ ಮಂಗಳೂರಿನಲ್ಲಿ ಯುವಕರ ತಂಡ ಒಂದು ನೂತನ ಅಭಿಯಾನ ಆರಂಭವಾಗಿದೆ. ಬಾನುವಾರವಷ್ಟೇ ಕಸ ಗುಡಿಸಿ , ನೀರು ಹಾಕಿ ಸ್ವಚ್ಛಗೊಳಿಸಿದ […]

ಖಾಕಿ ಕಳಚಿಟ್ಟು ಮಂಗಳೂರಿನಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ ಮದನ್

Saturday, January 20th, 2018
Madan

ಮಂಗಳೂರು: ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಮದನ್ ಖಾಕಿ ಸಮವಸ್ತ್ರ ಕಳಚಿ ರಾಜಕೀಯ ರಂಗಕ್ಕೆ ಇಳಿದಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿರುವ ಮದನ್ ಈಗಾಗಲೇ ಚುನಾವಣೆಯ ಪ್ರಚಾರ ಆರಂಭಿಸಿದ್ದಾರೆ. ಮದನ್ ರಾಜಕೀಯ ಪ್ರವೇಶಿಸುತ್ತಿರುವ ನಿರ್ಧಾರವನ್ನು ಸ್ವಾಗತಿಸಿರುವ ಯುವ ಸಮುದಾಯ ಮದನ್ ಪರ ಪ್ರಚಾರ ಆರಂಭಿಸಿದೆ. ಪೊಲೀಸ್ ಸಮವಸ್ತ್ರ ಕಳಚಿಟ್ಟು ರಾಜಕಾರಣಿಯಾಗಲು ಹೊರಟ ಮಂಗಳೂರಿನ ಮದನ್ ಮೂಲತಃ ಕೊಡಗಿನವರಾದ ಮದನ್ ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ ಬಂದರು […]

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 10 ನೇ ವಾರದ ಸ್ವಚ್ಛತಾ ಕಾರ್ಯಕ್ರಮ

Monday, January 8th, 2018
swatchaa

ಮಂಗಳೂರು: ನಾಲ್ಕನೇ ಹಂತದ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 10ನೇ ವಾರದ ಸ್ವಚ್ಛತಾ ಕಾರ್ಯಕ್ರಮವನ್ನು 7 ಜನವರಿ 2018 ಭಾನುವಾರದಂದು ಕದ್ರಿಯಲ್ಲಿರುವ ವೀರ ಯೋಧರ ಸ್ಮಾರಕದ ಎದುರುಗಡೆ ಹಮ್ಮಿಕೊಳ್ಳಲಾಗಿತ್ತು. ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಘನ ಉಪಸ್ಥಿತಿಯಲ್ಲಿ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಹಾಗೂ ಖ್ಯಾತ ವೈದ್ಯರಾದ ಡಾ. ಜೀವರಾಜ್ ಸೊರಕೆ ಅಭಿಯಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿ ಶುಭ ಹಾರೈಸಿದರು. ಪ್ರಥಮ್ ಮಾತನಾಡಿ ರಾಮಕೃಷ್ಣ ಮಿಷನ್ನಿನ ಕಾರ್ಯ ಇಡೀ ದೇಶಕ್ಕೆ ಮಾದರಿಯಾಗುವಂತದ್ದು. ಇದು ಕೇವಲ […]

40 ವಾರಗಳ ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಮೊದಲ ವಾರದ ಶ್ರಮದಾನ

Monday, November 6th, 2017
swacchata abhiyan

ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಚತಾ ಅಭಿಯಾನದ ಅಂಗವಾದ ಸ್ವಚ್ಛತಾ ಅಭಿಯಾನದ ಪ್ರಥಮ ಶ್ರಮದಾನಕ್ಕೆ5 ನವೆಂಬರ್ ಬೆಳಿಗ್ಗೆ 7.30 ಕ್ಕೆ ರಾಮಕೃಷ್ಣ ಮಠದ ಮುಂಭಾಗದಲ್ಲಿ ಚಾಲನೆ ನೀಡಲಾಯಿತು. ಮಂಗಳೂರು ರಾಮಕೃಷ್ಣ ಮಠದ ಮುಖ್ಯಸ್ಥರಾದ ಸ್ವಾಮಿ ಜಿತಕಾಮಾನಂದಜಿ ನೇತೃತ್ವದಲ್ಲಿ ರಾಮಕೃಷ್ಣ ಮಠ ಮತ್ತು ಮಿಷನ್ನಿನ ವಿಶ್ವಸ್ತರಾದ ಸ್ವಾಮಿ ಮುಕ್ತಿದಾನಂದಜಿ ಹಾಗೂ ಎಮ್. ಆರ್. ಪಿ. ಎಲ್ ನ ಜನರಲ್ ಮ್ಯಾನೇಜರ್ ಆದ ಶ್ರೀ ಬಿ. ಹೆಚ್. ವಿ. ಪ್ರಸಾದ್ ಅಭಿಯಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಲಂಡನ್ ರಾಮಕೃಷ್ಣ ವೇದಾಂತ […]