ಮತದಾರನ ಒಂದು ಮತ ದೇಶದ ಭದ್ರತೆಯನ್ನು ನಿರ್ಧರಿಸುತ್ತದೆ : ಟಿ.ಸಿ.ಚಂದ್ರನ್ ಅಭಿಪ್ರಾಯ

Friday, February 7th, 2020
upanyasa

ಮಡಿಕೇರಿ : ಒಬ್ಬ ಮತದಾರನ ಒಂದು ಮತ ದೇಶದ ಭದ್ರತೆಯನ್ನು ನಿರ್ಧರಿಸುವುದರಿಂದ ಪ್ರತಿಯೊಬ್ಬ ಪ್ರಜೆ ಮತದಾನದ ಹಕ್ಕನ್ನು ಚಲಾಯಿಸಬೇಕೆಂದು ಟಿ.ಸಿ.ಚಂದ್ರನ್ ಅಭಿಪ್ರಾಯಪಟ್ಟರು. ವಿರಾಜಪೇಟೆಯ ಕಾವೇರಿ ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ ವತಿಯಿಂದ ರಾಷ್ಟ್ರೀಯ ಮತದಾರರ ದಿನದ ಕುರಿತು ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮತದಾನ ಮಾಡುವವರು ಮಾತ್ರ ದೇಶದ ಪ್ರಜೆಯಾಗಲು ಸಾಧ್ಯ. ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರಕ್ಕೆ ಮತದಾರ ಆಗಲಾರ. ತಮ್ಮ ಹಕ್ಕನ್ನು ಚಲಾಯಿಸುವುದರ ಮೂಲಕ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು. ಪ್ರತಿಯೊಬ್ಬರು ತಮ್ಮ ಹಕ್ಕು […]

ವಿರಾಜಪೇಟೆಯಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ

Thursday, January 23rd, 2020
vraj

ಮಡಿಕೇರಿ : ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮತ್ತು ಯುವ ಸ್ಪಂದನ ಘಟಕದ ವತಿಯಿಂದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಯುವ ಸ್ಪಂದನ ಕಾರ್ಯಕರ್ತೆ ಜಯಂತಿ ಮಾತನಾಡಿ, ಯುವಜನರು ಅನುಭವಿಸುತ್ತಿರುವ ತೊಂದರೆ, ಮಾನಸಿಕ ತೊಳಲಾಟ, ಹದಿಹರೆಯದ ಸಮಸ್ಯೆಗಳ ಪರಿಹಾರಕ್ಕೆ ಉತ್ತಮ ಮಾರ್ಗದರ್ಶನ ಅವಶ್ಯಕ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಟಿ.ಕೆ.ಬೋಪಯ್ಯ ಮಾತನಾಡಿ, ಯುವಜನರು ಹದಿಹರೆಯದ ವಯಸ್ಸಿನಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಯುವ […]

ಇಂದು ವಿರಾಜಪೇಟೆಯ ಶ್ರೀ ಕಂಚಿಕಾಮಾಕ್ಷಿ ಅಮ್ಮನವರ ದೇವಾಲಯದ ವಾರ್ಷಿಕೋತ್ಸವ

Thursday, January 16th, 2020
kanchi

ಮಡಿಕೇರಿ : ವಿರಾಜಪೇಟೆಯ ಮೀನುಪೇಟೆಯಲ್ಲಿರುವ ಶ್ರೀ ಕಂಚಿಕಾಮಾಕ್ಷಿ ಅಮ್ಮನವರ ದೇವಾಲಯದ 7ನೇ ವಾರ್ಷಿಕೋತ್ಸವ ಜ.17 ರಂದು ನಡೆಯಲಿದೆ. ಬೆಳಗ್ಗೆ7.30ಕ್ಕೆ ಗಣಪತಿ ಹೋಮ, 8.30ಕ್ಕೆ ದುರ್ಗಾಪೂಜೆ, 12.15ಕ್ಕೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದೆ.    

ರಸ್ತೆ ಅಪಘಾತ : ಕುಂಬ್ಳೆ ವ್ಯಕ್ತಿ ವಿರಾಜಪೇಟೆಯಲ್ಲಿ ಸಾವು

Wednesday, January 8th, 2020
accident

ಮಡಿಕೇರಿ : ರಸ್ತೆ ಅವಘಡದಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬಾತ ಸಾವನ್ನಪ್ಪಿರುವ ಘಟನೆ ವಿರಾಜಪೇಟೆ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ. ಕೇರಳದ ಕಾಸರಗೋಡು ಸಮೀಪದ ಕುಂಬ್ಳೆ ನಿವಾಸಿ ರವಿ (36) ಎಂಬಾತನೆ ಸಾವನ್ನಪ್ಪಿರುವ ದುರ್ದೈವಿ. ನಗರದ ಬಂಗಾಳಿ ಬೀದಿಯ ಅಲ್ತಾಫ್ ಎಂಬವರ ಬಳಿ ಕಳೆದ ಕೆಲ ಸಮಯಗಳಿಂದ ಗುಜರಿ ಕೆಲಸ ನಿರ್ವಹಿಸುತ್ತಿದ್ದ ರವಿ, ಮಂಗಳವಾರ ಬೆಳಗ್ಗೆ ಪತ್ನಿಗೆ ಟೀ ತರಲೆಂದು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ಹೋಟೆಲ್‌ಗೆ ಆಗಮಿಸಿದ ಸಂದರ್ಭ ದುರ್ಘಟನೆ ಸಂಭವಿಸಿದೆ. ನಗರದಿಂದ ಮಡಿಕೇರಿಯತ್ತ […]

ಆಮೆ ಮಾರಾಟ ಯತ್ನ : ವಿರಾಜಪೇಟೆಯಲ್ಲಿ ಓರ್ವನ ಬಂಧನ; ಇಬ್ಬರು ಪರಾರಿ

Thursday, November 28th, 2019
Ame

ಮಡಿಕೇರಿ : ವಿರಾಜಪೇಟೆ ಪಟ್ಟಣದ ಪಂಜರುಪೇಟೆ ಬಸ್ ತಂಗುದಾಣದಲ್ಲಿ ವಿನಾಶದಂಚಿನಲ್ಲಿರುವ ವಿಶೇಷ ಆಮೆಯೊಂದನ್ನು ಮಾರಾಟ ಮಾಡಲು ಯತ್ನಸುತ್ತಿದ್ದ ವ್ಯಕ್ತಿಯನ್ನು ವಿರಾಜಪೇಟೆ ಸಿಐಡಿ ಅರಣ್ಯ ಸಂಚಾರಿದಳ ಬಂಧಿಸಿದೆ. ಭಾಗಮಂಡಲದ ನಿವಾಸಿ ಮಹೇಶ ಎಂಬಾತನೇ ಬಂಧಿತ ಆರೋಪಿ. ರಾತ್ರಿ ವೇಳೆ ಆಮೆಯನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಸಂದರ್ಭ ಸಿಐಡಿ ಅರಣ್ಯ ಸಂಚಾರಿದಳದ ಪೊಲೀಸರು ವಶಕ್ಕೆ ಪಡೆದರು. ಆದರೆ ಕಾರ್ಯಾಚರಣೆ ಸಂದರ್ಭ ದೂರದಲ್ಲಿ ಹೊಂಚು ಹಾಕುತ್ತಿದ್ದ ಪೊನ್ನಂಪೇಟೆ ಹಳ್ಳಿಗಟ್ಟು ನಿವಾಸಿಗಳಾದ ಉಮೇಶ್ ಹಾಗೂ ರವಿ ಕಾರು ಸಹಿತ ಪರಾರಿಯಾಗಿದ್ದಾರೆ. ಆರೋಪಿಗಳ […]

ರಸ್ತೆ ವಿಸ್ತರಣೆಗೆ ವಿರೋಧ ಬೇಡ : ಶಾಸಕ ಕೆ.ಜಿ.ಬೋಪಯ್ಯ ಮನವಿ; ವಿರಾಜಪೇಟೆಯಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ

Thursday, November 14th, 2019
virajpete

ಮಡಿಕೇರಿ : ರಸ್ತೆ ವಿಸ್ತರಣೆಯಂತಹ ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕೆ ಹೊರತು ಅಡ್ಡಿ ಪಡಿಸಬಾರದೆಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಮನವಿ ಮಾಡಿದ್ದಾರೆ. ವಿರಾಜಪೇಟೆ ಸುಂಕದಕಟ್ಟೆ ತಿರುವಿನಲ್ಲಿ ಪಟ್ಟಣ ಪಂಚಾಯ್ತಿ ವತಿಯಿಂದ ಕೈಗೆತ್ತಿಕೊಂಡಿರುವ ರಸ್ತೆ ವಿಸ್ತರಣಾ ಕಾರ್ಯಕ್ಕೆ ಚಾಲನೆ ನೀಡಿ ಶಾಸಕರು ಮಾತನಾಡಿದರು. ದಿನದಿಂದ ದಿನಕ್ಕೆ ಪಟ್ಟಣ ಬೆಳೆಯುತ್ತಲೇ ಇದ್ದು, ವಾಹನದಟ್ಟಣೆಯೂ ಹೆಚ್ಚಾಗುತ್ತಿದೆ. ಕಳೆದ ಹಲವು ದಶಕಗಳಿಂದ ರಸ್ತೆ ಅಭಿವೃದ್ಧಿ ಕಾಣದೆ ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ. ರಸ್ತೆ ವಿಸ್ತರಣೆ ಅನಿವಾರ್ಯವಾಗಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು. […]

ನಿಟ್ಟೂರು ಗ್ರಾಮದಲ್ಲಿ ಕರಡಿ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ

Monday, November 11th, 2019
karadi

ಮಡಿಕೇರಿ : ವಿರಾಜಪೇಟೆ ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ಕರಡಿಯೊಂದು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಹಗಲು ಹೊತ್ತಿನಲ್ಲೇ ಕರಡಿ ರಾಜಾರೋಷವಾಗಿ ನಿಟ್ಟೂರು ಗ್ರಾಮದ ರಸ್ತೆಯಲ್ಲಿ ನಡೆದು ಬರುತ್ತಿರುವುದನ್ನು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಗ್ರಾಮದಲ್ಲಿ ಕರಡಿ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕಾಡಾನೆ ಮತ್ತು ಹುಲಿ ದಾಳಿಯಿಂದ ಕಂಗೆಟ್ಟಿದ್ದ ಊರಿನ ಜನ ಇದೀಗ ಕರಡಿಯ ಆಗಮನದಿಂದ ಮತ್ತಷ್ಟು ಭಯ ಭೀತರಾಗಿದ್ದಾರೆ.