ಅಣ್ಣಾಮಲೈ ಸೇರಿ ಐವರು ಐಪಿಎಸ್​ ಅಧಿಕಾರಿಗಳ ವರ್ಗಾವಣೆ

Tuesday, October 16th, 2018
annamalia

ಬೆಂಗಳೂರು: ಮತ್ತೆ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಚಿಕ್ಕಮಗಳೂರಿನಿಂದ ಎಸ್ಪಿ ಅಣ್ಣಾಮಲೈ ಸೇರಿದಂತೆ ವರ್ಗಾವಣೆಗೊಂಡಿರುವ ಅಧಿಕಾರಿಗಳ ಮಾಹಿತಿ ಇಂತಿದೆ… ಹರಿಶೇಖರನ್-ಐಜಿಪಿ, ಎಸಿಪಿ ಟ್ರಾಫಿಕ್ ಬೆಂಗಳೂರು ಅಜಯ್ ಹಿಲೋರಿ-ಕೆಎಸ್ಆರ್ ಪಿ ಕಮಾಂಡೆಂಟ್ 1 ಬ್ಯಾಟಲಿಯನ್, ಕೆ.ಅಣ್ಣಾಮಲೈ-ಡಿಸಿಪಿ,ದಕ್ಷಿಣ ವಿಭಾಗ ಬೆಂಗಳೂರು. ರಾಹುಲ್ ಕುಮಾರ್-ಡಿಸಿಪಿ ಪೂರ್ವ ವಿಭಾಗ ಬೆಂಗಳೂರು. ಹರೀಶ್ ಪಾಂಡೆ- ಅವರನ್ನು ಚಿಕ್ಕಮಗಳೂರು ಎಸ್ಪಿ ಆಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಸಮಾಜದ ಸ್ವಾಸ್ಥ್ಯ ಕದಡುವ ಕಿಡಿಗೇಡಿಗಳಿಗೆ ಸೂಕ್ತ ಉತ್ತರ : ಐಜಿಪಿ ಹೇಮಂತ್ ನಿಂಬಾಳ್ಕರ್

Wednesday, August 16th, 2017
Hemanth Nimbalkar IGP

ಮಂಗಳೂರು : ನೂತನ ಪಶ್ಚಿಮ ವಲಯ ಐಜಿಪಿಯಾಗಿ ಹೇಮಂತ್ ನಿಂಬಾಳ್ಕರ್ ಬುಧವಾರ ಅಧಿಕಾರ ಸ್ವೀಕರಿಸಿದರು. ಪಶ್ಚಿಮ ವಲಯ ಐಜಿಪಿಯಾಗಿದ್ದ ಹರಿಶೇಖರನ್ ಅವರು ನೂತನ ಐಜಿಪಿಗೆ ಅಧಿಕಾರ ಹಸ್ತಾಂತರ ಮಾಡಿದರು. ಈ ಸಂದರ್ಭ ಮಾತನಾಡಿದ ಹೇಮಂತ್ ನಿಂಬಾಳ್ಕರ್, ಪೊಲೀಸ್ ಇಲಾಖೆ ಇರುವುದೇ  ಸಾಮಾನ್ಯ ಜನರ ಸೇವೆ ಮಾಡುವುದಕ್ಕೆ, ಸಮಾಜದ ಸ್ವಾಸ್ಥ್ಯ ಕದಡುವ ಚಟುವಟಿಕೆಗೆ ಕಾನೂನು ರೀತಿಯಲ್ಲಿ ತಕ್ಕ ಉತ್ತರ ನೀಡುವ ವ್ಯವಸ್ಥೆಯಿದೆ. ಸಾಮಾನ್ಯ ಜನರಿಗೆ ಸೇವೆ ನೀಡಲು‌ ಇಲಾಖೆಯಿಂದ ಸೂಕ್ತ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು. ಸಾಮಾನ್ಯ ಜನರ ನೆಮ್ಮದಿಯ ಜೀವನಕ್ಕೆ ಅಡ್ಡ ಬರುವವರಿಗೆ ತಕ್ಕ ಉತ್ತರ […]

ಪಶ್ಚಿಮ ವಲಯ ಐಜಿಪಿಯಾಗಿದ್ದ ಜೆ.ಅರುಣ್ ಚಕ್ರವರ್ತಿ ಅವರಿಂದ ಅಧಿಕಾರ ವಹಿಸಿಕೊಂಡ ಹರಿಶೇಖರನ್

Saturday, January 7th, 2017
Harishekaran

ಮಂಗಳೂರು: ಪಶ್ಚಿಮ ವಲಯದ ಪೊಲೀಸ್‌ ಮಹಾನಿರ್ದೇಶಕರಾಗಿ ಪಿ. ಹರಿಶೇಖರನ್ ಇಂದು ಅಧಿಕಾರ ವಹಿಸಿಕೊಂಡರು. ಪಶ್ಚಿಮ ವಲಯ ಐಜಿಪಿಯಾಗಿದ್ದ ಜೆ.ಅರುಣ್ ಚಕ್ರವರ್ತಿ ಅವರಿಂದ ಹರಿಶೇಖರನ್ ಅಧಿಕಾರ ವಹಿಸಿಕೊಂಡರು. ಈ ವೇಳೆ ಮಾತನಾಡಿದ ಅವರು, ಈ ಹಿಂದೆ ವೀರಪ್ಪನ್ ಕಾರ್ಯಾಚರಣೆ, ನಕ್ಸಲ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದೇನೆ. ಆದ್ದರಿಂದ ಸವಾಲುಗಳು ತನಗೆ ಹೊಸತಲ್ಲ. ಜನಸ್ನೇಹಿ ಪೊಲೀಸ್ ವ್ಯವಸ್ಥೆ ತನ್ನ ಉದ್ದೇಶ. ತನ್ನಿಂದ ಉತ್ತಮ ಸೇವೆಯನ್ನು ಜನ ಪಡೆದುಕೊಳ್ಳುವಂತೆ ಈ ಹುದ್ದೆಯ ಸದುಪಯೋಗವಾಗಬೇಕೆಂದರು. ಕರಾವಳಿಗಿರುವ ಭಯೋತ್ಪಾದನೆ ಸಂಪರ್ಕ ಕುರಿತು ಅಧ್ಯಯನ ಮಾಡಿ, ಕರಾವಳಿ ಕಾವಲು […]