ಮಂಗಳೂರು ದೀಪಾವಳಿ ಹಬ್ಬಕ್ಕೆ ಸಾಮಗ್ರಿ ಖರೀದಿಯಲ್ಲಿ ಜನರು

Wednesday, October 18th, 2017
diwali

ಮಂಗಳೂರು: ಜಿಎಸ್‌‌ಟಿ ಬಿಸಿ ಇದ್ದರೂ ಮನೆ, ಮನ ಬೆಳಗುವ ಹಬ್ಬಕ್ಕೆ ಅಗತ್ಯ ಸಾಮಗ್ರಿ ಖರೀದಿಯಲ್ಲಿ ಜನರು ತೊಡಗಿದ್ದಾರೆ. ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ವಿವಿಧ ವಿನ್ಯಾಸಗಳ ಗೂಡು ದೀಪ, ಹಣತೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹಿಂದೆ ಮನೆಗಳಲ್ಲಿಯೇ ಗೂಡು ದೀಪಗಳು ತಯಾರಾಗುತ್ತಿದ್ದವು. ಆದರೆ ಇಂದು ನಿರಾಸಕ್ತಿಯ ಜೊತೆಗೆ ಮೈತುಂಬ ಕೆಲಸಗಳ ಮಧ್ಯೆ ಇಂತಹ ಕುಸುರಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಮಾರುಕಟ್ಟೆಗಳಲ್ಲಿ ಅತ್ಯಾಕರ್ಷಕ ಗೂಡು ದೀಪಗಳಿಗೆ ಬೇಡಿಕೆ ಹೆಚ್ಚಿದೆ. ಇನ್ನು ಉದ್ಯೋಗ ನಿಮಿತ್ತ ಉತ್ತರ ಕರ್ನಾಟಕದಿಂದ ಮಂಗಳೂರಿನಲ್ಲಿ […]

ಮಂಗಳೂರು: ‘ಜಿಎಸ್‌ಟಿ, ಸಾಧಕ– ಬಾಧಕ’ ಕುರಿತ ಸಮಾಲೋಚನಾ ಸಭೆ

Monday, October 9th, 2017
GST

ಮಂಗಳೂರು: ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ವಿವಿಧ ಹಂತಗಳಲ್ಲಿ ಸರಳೀಕರಣ ಮಾಡಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದು, ಎರಡನೇ ಹಂತದ ಸುಧಾರಣಾ ಕ್ರಮಗಳನ್ನು ಶೀಘ್ರದಲ್ಲಿ ಪ್ರಕಟಿಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್‌ಕುಮಾರ್‌ ಕಟೀಲ್‌ ತಿಳಿಸಿದರು. ನಗರದ ಡೊಂಗರಕೇರಿಯ ಕೆನರಾ ಪ್ರೌಢಶಾಲೆಯ ಸಭಾಂಗಣದಲ್ಲಿ ಶನಿವಾರ ನಡೆದ ‘ಜಿಎಸ್‌ಟಿ: ಸಾಧಕ– ಬಾಧಕ’ ಕುರಿತ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ‘ಅಕ್ಟೋಬರ್‌ 13ರ ಬಳಿಕ ಮೊದಲ ಹಂತದ ಸುಧಾರಣಾ ಕ್ರಮಗಳನ್ನು ಪ್ರಕಟಿಸಲು ಪ್ರಧಾನಿ ನಿರ್ಧರಿಸಿದ್ದರು. ಆದರೆ, ಮಾರುಕಟ್ಟೆಯಲ್ಲಿನ ಏರಿಳಿತಗಳಿಗೆ […]

ಜಿಎಸ್‌ಟಿ ಬದಲಾವಣೆಯಿಂದಾಗಿ ದೀಪಾವಳಿ ಬೇಗನೆ ಬಂದಿದೆ :ಮೋದಿ

Saturday, October 7th, 2017
modi

ದ್ವಾರಕಾ: ಈ ಬಾರಿಯ ಸರಕು ಮತ್ತು ಸೇವಾ ತೆರಿಗೆ ಸಮಿತಿ ಸಭೆಯಲ್ಲಿ ತೆಗೆದುಕೊಂಡ ಉತ್ತಮ ನಿರ್ಧಾರಗಳಿಂದ ಈ ಬಾರಿಯ ದೀಪಾವಳಿ ಹಬ್ಬ ಅತ್ಯಂತ ಮುಂಚಿತವಾಗಿ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎರಡು ದಿನಗಳ ಗುಜರಾತ್‌ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಈ ವೇಳೆ ಮಾತನಾಡಿರುವ ಅವರು, 27 ಸರಕು, ಸೇವೆಗಳ ತೆರಿಗೆ ದರ ಇಳಿಸಲು ಶುಕ್ರವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿರುವುದನ್ನು ಉಲ್ಲೇಖಿಸಿದ್ದಾರೆ. ಇದೇ ವೇಳೆ ಮಾತನಾಡಿದ […]