ಯು.ಎಸ್ ಓಪನ್ ಕೂಟದಲ್ಲಿ ಬೋಪಣ್ಣ-ಕುರೇಶಿ ಸೆಮಿಫೈನಲಿಗೆ.

Thursday, September 9th, 2010
ಯು.ಎಸ್ ಓಪನ್ ಕೂಟದಲ್ಲಿ ಬೋಪಣ್ಣ-ಕುರೇಶಿ ಸೆಮಿಫೈನಲಿಗೆ.

ನ್ಯೂಯಾರ್ಕ್: ಯು.ಎಸ್ ಓಪನ್ ಕೂಟದ ಪುರುಷರ ಡಬಲ್ಸ್ ವಿಭಾಗದಲ್ಲಿ ಕರ್ನಾಟಕದ ರೋಹನ್ ಬೋಪಣ್ಣ ಅವರು ಪಾಕಿಸ್ಥಾನದ ಐಸಾಮ್ ಉಲ್ ಹಕ್ ಕುರೇಶಿ ಜತೆಗೂಡಿ ಸೆಮಿಫೈನಲ್ ಹಂತಕ್ಕೇರಿದ್ದಾರೆ.  ಬೋಪಣ್ಣ ಮೊದಲ ಬಾರಿಗೆ ಗ್ರ್ಯಾನ್ ಸ್ಲಾಮ್ ಉಪಾಂತ್ಯ ತಲುಪಿದ ಸಾಧನೆಯಾಗಿದೆ. ಯು.ಎಸ್ ಓಪನ್ ಕೂಟದ 16ನೇ ಶ್ರೇಯಾಂಕಿತರಾದ ಬೋಪಣ್ಣ – ಕುರೇಶಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 10ನೇ ಶ್ರೇಯಾಂಕದ ದಕ್ಷಿಣ ಆಫ್ರಿಕಾದ ವೆಸ್ಲೆ ಮೂಡಿ ಮತ್ತು ಬೆಲ್ಜಿಯಂನ ಡಿಕ್ ನಾರ್ಮನ್ ವಿರುದ್ಧ 7-5, 7-6 ಅಂತರದಿಂದ ಜಯ ದಾಖಲಿಸಿದರು. ಈ […]

ಚಿತ್ರ ನಟ ಮುರಳಿ ಇನ್ನಿಲ್ಲ

Wednesday, September 8th, 2010
ಚಿತ್ರ ನಟ ಮುರಳಿ ಇನ್ನಿಲ್ಲ

ಚೆನ್ನೈ : ಕನ್ನಡ ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿಮಿಂಚಿದ ನಟ ಮುರಳಿ (46) ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಕನ್ನಡದಲ್ಲಿ ಅಜಯ್ ವಿಜಯ್, ಪ್ರೇಮ ಪರ್ವ, ಪ್ರೇಮ ಪ್ರೇಮ ಪ್ರೇಮ ಮತ್ತಿತರ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.ಮಂಗಳವಾರ  ಮಗಳ ನಿಶ್ಚಿತಾರ್ಥ ಮುಗಿಸಿ ಮಲಗಿದ್ದ ಮುರಳಿ ಬೆಳಗ್ಗೆ ಏಳದ್ದನ್ನು ನೋಡಿ ಮನೆಯವರು ಎಬ್ಬಿಸಲು ಹೋದಾಗ ಅವರು ತೀರಿಕೊಂಡ ವಿಚಾರ ಬೆಳಕಿಗೆ ಬಂದಿದೆ ಮುರಳಿ ಪತ್ನಿ ಶೋಭಾ, ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಕನ್ನಡದಲ್ಲಿ ಹಲವು ಜನಪ್ರಿಯ ಹಾಡುಗಳಲ್ಲಿ […]

ದ.ಕ. ಜಿ. ಪಂ. ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಶಿಕ್ಷಕ ದಿನಾಚರಣೆ

Monday, September 6th, 2010
ದ.ಕ. ಜಿ. ಪಂ. ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಶಿಕ್ಷಕ ದಿನಾಚರಣೆ

ಮಂಗಳೂರು: ದ.ಕ. ಜಿ. ಪಂ. ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಮಟ್ಟದ ನಗರ ವಲಯ ಶಿಕ್ಷಕ ದಿನಾಚರಣೆ ಸಮಿತಿ ವತಿಯಿಂದ ಬಾನುವಾರ ಶಿಕ್ಷಕ ದಿನಾಚರಣೆಯನ್ನು ಜಿಲ್ಲಾ ಪಂಚಾಯತ್ ಮಂಗಳೂರು ಇಲ್ಲಿ ಕರಾವಳಿ ಅಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ ಉದ್ಘಾಟಿಸಿದರು. ವಿದ್ಯಾಥರ್ಿಗಳ ಮೇಲೆ ಸಮಾನ ಮನೋಭಾವ ಹೊಂದುವ ಮೂಲಕ ಶಿಕ್ಷಕರು ಸಮಾಜದಲ್ಲಿ ಶ್ರೇಷ್ಠತೆ ಪಡೆಯಬೇಕು ಎಂದು  ಉದ್ಘಾಟನೆ ನಡೆಸಿದ ಬಳಿಕ ಬಿ. ನಾಗರಾಜ ಶೆಟ್ಟಿ ಹೇಳಿದರು. ಪ್ರಾಥಮಿಕ ವಿಭಾಗದ ಏಳು ಮಂದಿ ಶಿಕ್ಷಕಗೆ ಹಾಗೂ ಪ್ರೌಢ […]

ಗೋವಂಶ ರಕ್ಷಣೆಗೆ ಬಿಜೆಪಿ ಕಾರ್ಯಕರ್ತರ ಒಕ್ಕೊರಳ ಧ್ವನಿ

Saturday, September 4th, 2010
ಗೋವಂಶ ರಕ್ಷಣೆಗೆ ಬಿಜೆಪಿ ಕಾರ್ಯಕರ್ತರ ಒಕ್ಕೊರಳ ಧ್ವನಿ

ಮಂಗಳೂರು : ಗೋ ಹತ್ಯೆ ನಿಷೇಧ ಕಾಯ್ದೆಗೆ ಅಂಕಿತ ಹಾಗೂ ಕಾಶ್ಮೀರಕ್ಕೆ ಸ್ವಾಯತ್ತತೆ ವಿರೋಧಿಸಿ, ಭಾರತೀಯ ಜನತಾಪಾರ್ಟಿ ವತಿಯಿಂದ ಪ್ರತಿಭಟನೆಯು ಇಂದು ಬೆಳಿಗ್ಗೆ ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿಯ ಮುಂಭಾಗದಲ್ಲಿ ಜರಗಿತು.

ಭಾರತಿ ಅರಸ್ ಬಂಧನಕ್ಕೆ ರಾಜ್ಯ ಹೈಕೋರ್ಟ್ ವಾರಂಟ್

Friday, September 3rd, 2010
ಭಾರತಿ ಅರಸ್ ಬಂಧನಕ್ಕೆ ರಾಜ್ಯ ಹೈಕೋರ್ಟ್ ವಾರಂಟ್

ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸ್ ಪುತ್ರಿ ಭಾರತಿ ಅರಸ್ ಬಂಧನಕ್ಕೆ ರಾಜ್ಯ ಹೈಕೋರ್ಟ್ ಶುಕ್ರವಾರ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ. ಚಿತ್ರಲೇಖಾ ಕೊಲೆ ಪ್ರಕರಣದ ಆರೋಪಿಗಳಾದ ಭಾರತಿ ಅರಸ್, ಚಂದ್ರಕಾಂತ್ ಹಾಗೂ ಮಧುಕರ್ ಇಂದು ವಿಚಾರಣೆ ಸಂದರ್ಭದಲ್ಲಿ ಹಾಜರಾಗದ..

ಬಿಕ್ಷುಕರ ಕೊಲೋನಿಗೆ ಭೇಟಿ ನೀಡಿದ ಬಿ.ಎಸ್. ಯಡಿಯೂರಪ್ಪ

Saturday, August 21st, 2010
ಬಿಕ್ಷುಕರ ಕೊಲೋನಿಗೆ ಭೇಟಿ ನೀಡಿದ ಬಿ.ಎಸ್. ಯಡಿಯೂರಪ್ಪ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಆಗಿರುವ ಆವಾಂತರಕ್ಕೆ ಇಂದು ಬೆಳಿಗ್ಗೆ 9.30ರ ಹೊತ್ತಿಗೆ ಬಿಕ್ಷುಕರ ಕಾಲೊನಿಗೆ ಭೇಟಿ ನೀಡಿ ವಿಷಾದಿಸಿದ್ದಾರೆ. ಸಮಾಜ ಕಲ್ಯಾಣ ಸಚಿವರಾಗಿದ್ದ ಡಿ. ಸುಧಾಕರ್ ಅವರನ್ನು ಎತ್ತಂಗಡಿ ಮಾಡಿದ ನಂತರ ಬಿಕ್ಷುಕರ ಕಾಲೊನಿಗೆ ಭೇಟಿ ನೀಡಿರುವ  ಅವರು ಶೌಚಾಲಯ, ಆಹಾರ ಪೂರೈಕೆ ವ್ಯವಸ್ಥೆ, ಅದರ ಗುಣಮಟ್ಟ, ಭೋಜನಾಲಯ ಮುಂತಾದ ಎಲ್ಲಾ ವಿಭಾಗಗಳನ್ನೂ ಖುದ್ದಾಗಿ ಪರಿಶೀಲನೆ ನಡೆಸಿದರು. ನಿರಾಶ್ರಿತರ ಕೇಂದ್ರದ ಪ್ರತಿಯೊಂದು ಕೊಠಡಿಗೂ ಪ್ರವೇಶಿಸಿ ಪರಿಶೀಲನೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ  ಯಡಿಯೂರಪ್ಪ, ಇಲ್ಲಿ […]

ಜರ್ಮನ್ ಸ್ಫೋಟದ ಶಂಕಿತ ಆರೋಪಿ ಅಬ್ದುಲ್ ಸಮದ್ ಬಿಡುಗಡೆ

Saturday, August 21st, 2010
ಜರ್ಮನ್ ಸ್ಫೋಟದ ಶಂಕಿತ ಆರೋಪಿ ಅಬ್ದುಲ್ ಸಮದ್ ಬಿಡುಗಡೆ

ಜರ್ಮನ್ ಸ್ಫೋಟದ ಶಂಕಿತ ಆರೋಪಿ ಅಬ್ದುಲ್ ಸಮದ್ ಭಟ್ಕಳ್ ಜಾಮೀನು ಪಡೆದುಕೊಂಡ ಮೂರು ವಾರಗಳ ನಂತರ ಇದೀಗ ಆರ್ಥರ್ ರೋಡ್ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಈತ ಅಕ್ರಮ ಶಸ್ತ್ರಾಸ್ತ್ರ ವಶ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನಕ್ಕೊಳಗಾಗಿದ್ದ ಸಮದ್ ಉತ್ತರ ಕರ್ನಾಟಕದ ಭಟ್ಕಳ ನಿವಾಸಿ. 2009ರ ಅಕ್ರಮ ಶಸ್ತ್ರಾಸ್ತ್ರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾಗಿದ್ದ. ಆತನ ವಿರುದ್ಧ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಸಾಕ್ಷ್ಯಗಳು ಇಲ್ಲದ ಕಾರಣ ಇಲ್ಲಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಜಾಮೀನು ನೀಡಿತ್ತು. 25,000 ರೂಪಾಯಿ ಠೇವಣಿ ಮತ್ತು ಇಬ್ಬರು […]