ಲಾಕ್ ಡೌನ್ ಸಂಕಷ್ಟದ್ದ ರೈತನಿಂದ 3000 ಕೆಜಿ ಈರುಳ್ಳಿ ಖರೀದಿಸಿದ ನಟ ಉಪೇಂದ್ರ

Monday, May 17th, 2021
onion

ಹಿರಿಯೂರು: ಲಾಕ್ ಡೌನ್ ನಿಂದ ಬೆಳೆದ ಬೆಳೆ ಮಾರಲಾಗದೆ ಸಂಕಷ್ಟದಲ್ಲಿದ್ದ ಹಿರಿಯೂರು ತಾಲ್ಲೂಕಿನ ಪಟ್ರೇಹಳ್ಳಿ ಗ್ರಾಮದ ಮಹೇಶ್ ಅವರ 60 ಚೀಲ ಈರುಳ್ಳಿಯನ್ನು ನಟ ಉಪೇಂದ್ರ ಖರೀದಿಸಿದ್ದಾರೆ. ಲಾಕ್ ಡೌನ್ ವೇಳೆ ವ್ಯಾಪಾರವಾಗದೇ ಸಂಕಷ್ಟದಲ್ಲಿರುವ ರೈತರಿಗೆ ನಟ ಉಪೇಂದ್ರ ಅವರು ” ನಮಗೆ ಅವಶ್ಯಕತೆ ಇರುವ ಬೆಳೆಯನ್ನು ನಿಮ್ಮ ಬಳಿ ಸೂಕ್ತ ಬೆಲೆಗೆ ಕೊಂಡು ಬೇಕಿರುವವರಿಗೆ ಹಂಚುತ್ತೇವೆ” ಎಂದು ತನ್ನ ಮೊಬೈಲ್ ನಂಬರ್ ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಿದ್ದರು. ಇದನ್ನು ಗಮನಿಸಿದ ಮಹೇಶ್ ಉಪೇಂದ್ರ ಅವರಿಗೆ ಕರೆ ಮಾಡಿ ವಿಚಾರಿಸಿ […]

ಕರ್ನಾಟಕಕ್ಕೆ ಈ ವಾರ 4.25 ಲಕ್ಷ ವಯಲ್ಸ್ ರೆಮ್ಡೆಸಿವಿರ್ ಹಂಚಿಕೆ : ಸದಾನಂದ ಗೌಡ

Monday, May 17th, 2021
DV Sadananda

ಬೆಂಗಳೂರು : ಕೇಂದ್ರ ಸರ್ಕಾರವು ಬೇರೆ ಬೇರೆ ರಾಜ್ಯಗಳಿಗೆ ಮೇ 17ರಿಂದ ಮೇ 23ರವರೆಗಿನ ಬಳಕೆಗಾಗಿ 23 ಲಕ್ಷ ವಯಲ್ಸ್ (ಸೀಸೆ) ರೆಮ್ಡೆಸಿವಿರ್ ಚುಚ್ಚುಮದ್ದನ್ನು ಹಂಚಿಕೆ ಮಾಡಿದ್ದು ಕರ್ನಾಟಕಕ್ಕೆ ಈ ಸಲ ಉಳಿದ ರಾಜ್ಯಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಂದರೆ 4.25 ಲಕ್ಷ ವಯಲ್ಸ್ ರೆಮ್ಡೆಸಿವಿರ್ ಒದಗಿಸಲಾಗಿದೆ. ಇಂದು ಇಲ್ಲಿ ಹೇಳಿಕೆಯೊಂದರಲ್ಲಿ ಈ ವಿಷಯ ತಿಳಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದಗೌಡ ಅವರು ಕರ್ನಾಟಕದಲ್ಲಿರುವ ಅತಿಹೆಚ್ಚು ಸಕ್ರೀಯ ಪ್ರಕರಣವನ್ನು ಆಧರಿಸಿ ರಾಜ್ಯಕ್ಕೆ ಈ […]

ಟೌಟೆ ಚಂಡಮಾರುತಕ್ಕೆ ಸಿಲುಕಿದವರ ರಕ್ಷಣೆ ಕಾರ್ಯಾಚರಣೆ ಜಾರಿ: ಸಚಿವ ಆರ್ ಅಶೋಕ್ ಮಾಹಿತಿ*

Monday, May 17th, 2021
R Ashoka

ಬೆಂಗಳೂರು : ಟೌಟೆ ಚಂಡಮಾರುತ ಹಿನ್ನೆಯಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕಾ ನೀಡಿದ್ದಾಗಲೂ ದಡ ಸೇರದ ಎಂ ಆರ್ ಪಿ ಎಲ್ ಅಂಡರ್ ವಾಟರ್ ಏಜೆನ್ಸಿಯ ಅಲಯನ್ಸ್ ಟಗ್ ನಲ್ಲಿದ್ದ 8 ಜನರಲ್ಲಿ ಮೂವರು ನಾಪತ್ತೆಯಾಗಿದ್ದಾರೆ. ಉಳಿದ ಇಬ್ಬರ ಮೃತದೇಹ ಸಿಕ್ಕಿದ್ದು, ಮೂವರು ಈಜಿ ದಡ ಸೇರಿದ್ದಾರೆ. ಟಗ್ ನ ಅವಶೇಷಗಳು ಪಡುಬಿದ್ರೆ ಬೀಚ್ ಬಳಿ ಪತ್ತೆಯಾಗಿವೆ, ಎಂದು ಕಂದಾಯ ಸಚಿವ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಖಾರದ ಉಪಾಧ್ಯಕ್ಷರಾದ ಆರ್ ಅಶೋಕ್ ತಿಳಿಸಿದ್ದಾರೆ. ಈ ಕುರಿತಂತೆ ವಿವರಗಳನ್ನ ನೀಡಿದ ಆರ್ […]

ಆಹಾರ ತಜ್ಞರ ಪ್ರಕಾರ ಒಂದು ವರ್ಷದ ಒಳಗಿನ ಮಕ್ಕಳಿಗೆ ಈ ಆಹಾರ ಪದಾರ್ಥಗಳನ್ನು ಕೊಡಬಾರದು

Monday, May 17th, 2021
Baby

ಆಹಾರ ತಜ್ಞರ ಪ್ರಕಾರ ಒಂದು ವರ್ಷದ ಒಳಗಿನ ಮಕ್ಕಳಿಗೆ ಯಾವ ಆಹಾರ ಪದಾರ್ಥಗಳನ್ನು ಕೊಡಬಾರದು ಎಂಬುದರ ಲಿಸ್ಟ್ ಇಲ್ಲಿದೆ. ಹಾಲು : ಹಸು ಅಥವಾ ಎಮ್ಮೆ ಹಾಲಿನಲ್ಲಿ ಪ್ರೋಟೀನ್ಸ್ ಮತ್ತು ಮಿನರಲ್ಸ್ ಗಳು ಅತ್ಯಧಿಕವಾಗಿರುವುದರಿಂದ ಮಕ್ಕಳು ಲ್ಯಾಕ್ಟೋಸ್ ಅಸಹಿಷ್ಣುತೆಗೆ ಒಳಗಾಗುತ್ತಾರೆ. ಆದ್ದರಿಂದ ಒಂದು ವರ್ಷದ ಒಳಗಿನ ಮಕ್ಕಳಿಗೆ ತಾಯಿ ಹಾಲು ಅಥವಾ ಫಾರ್ಮುಲಾವನ್ನು ಮಾತ್ರ ಕೊಡಬೇಕು. ಸಿಟ್ರಸ್ ಹಣ್ಣುಗಳು : ಸ್ಟ್ರಾಬೆರೀಸ್, ರಾಸ್ಪ್ ಬೆರೀಸ್, ಬ್ಲೂಬೆರೀಸ್ ಮತ್ತು ಬ್ಲಾಕ್ ಬೆರೀಸ್ ಹಣ್ಣುಗಳಲ್ಲಿ ಪ್ರೊಟೀನ್ ಅಧಿಕವಿರುವುದರಿಂದ ಮಕ್ಕಳು ಇದನ್ನು […]

ಕೊರೊನಾ ಸೋಂಕಿತ ಅಣ್ಣ ಮನೆಗೆ ಬಂದಿದಕ್ಕೆ ಕೊಚ್ಚಿ ಕೊಲೆ ಮಾಡಿದ ತಮ್ಮ

Monday, May 17th, 2021
kalasa

ಚಿಕ್ಕಮಗಳೂರು: ಆಸ್ಪತ್ರೆಯಿಂದ ಮನೆಗೆ ಬಂದಕೊರೊನಾ ಸೋಂಕಿತ ಅಣ್ಣನನ್ನು ತಮ್ಮನೇ ಕೊಚ್ಚಿ ಕೊಲೆಗೈದಿರುವ ಆಘಾತಕಾರಿ ಘಟನೆ ಜಿಲ್ಲೆಯ ಕಳಸ ತಾಲೂಕಿನ ಮರಸಣಿಗೆ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು 45 ವರ್ಷದ ಮಹಾವೀರ್ ಎಂದು ಗುರುತಿಸಲಾಗಿದೆ. ಅಣ್ಣ ತಮ್ಮಂದಿರ ಜಗಳ ನಡೆಯುವಾಗ ಮಹಾವೀರ್ ಅಮ್ಮ ಅಕ್ಕಪಕ್ಕದ ಮನೆಯವರನ್ನು ಕರೆದರೂ  ಸೋಂಕಿಗೆ ಹೆದರಿ ಜಗಳ ಬಿಡಿಸಲು ಯಾರೂ ಬರಲಿಲ್ಲ ಎನ್ನಲಾಗಿದೆ. ಮೂಡಿಗೆರೆ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಅಣ್ಣ ಮಹಾವೀರ  ಕೊರೊನಾ ದೃಢ ಪಟ್ಟು ದಾಖಲಾಗಿದ್ದ. ಆದರೆ ಮಹಾವೀರ್ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ನರ್ಸ್‍ಗಳ ಜೊತೆ […]

ಲಾಕ್‌ಡೌನ್‌ ಪರಿಣಾಮ ನೂರಾರು ಬ್ಯಾಕ್ಸ್‌ ಟೊಮೆಟೋವನ್ನು ರಸ್ತೆ ಬದಿಯಲ್ಲೇ ಸುರಿದ ರೈತರು

Sunday, May 16th, 2021
Tomato

ಕೋಲಾರ :  ಸೂಕ್ತ ಬೆಲೆ ಸಿಗದೇ,ಬೆಳೆಗಾರರು ನೂರಾರು ಬ್ಯಾಕ್ಸ್‌ ಟೊಮೆಟೋವನ್ನು ರಸ್ತೆ ಬದಿಯಲ್ಲೇ ಸುರಿದು ಹೋಗಿರುವ ಘಟನೆ ತಾಲೂಕಿನ ಎನ್‌.ವಡ್ಡಹಳ್ಳಿ ಮಾರುಕಟ್ಟೆಯಲ್ಲಿ ನಡೆದಿದೆ. ನೀರಿನ ಸಮಸ್ಯೆ ಮಧ್ಯೆಯೂ ಲಕ್ಷಾಂತರ ರೂ. ಖರ್ಚು ಮಾಡಿ ತಾಲೂಕಿನ ಯಲುವಹಳ್ಳಿ ಗ್ರಾಮದ ಟಿ.ಆರ್‌.ವೇಣುಗೋಪಾಲ್‌ 5ಎಕರೆ, ಶಂಕರ್‌ 1 ಎಕರೆ ಮತ್ತು ರಾಮಚಂದ್ರಪ್ಪ3 ಎಕರೆ ಜಮೀನಿನಲ್ಲಿ ಟೊಮೆಟೋ ಬೆಳೆದಿದ್ದರು ಕೋವಿಡ್ ಲಾಕ್‌ಡೌನ್‌ ಪರಿಣಾಮ ಬೆಲೆ ಪಾಳಕ್ಕೆ ಕುಸಿದ ಪರಿಣಾಮ ಬೆಳೆಗೆ ಬೆಲೆ ಇಲ್ಲದಾಗಿದೆ. ಅವರು ಎರಡು ಮೂರು ದಿನಗಳಿಗೊಮ್ಮೆ750 ರಿಂದ 800 ಬಾಕ್ಸ್‌ ಟೊಮೆಟೋವನ್ನುಎನ್‌.ವಡ್ಡಹಳ್ಳಿ ಮಾರುಕಟ್ಟೆಗೆ ತರುತ್ತಿದ್ದರು. ಸರ್ಕಾರ […]

ಮೊದಲು ಜೀವ ಉಳಿಯಬೇಕು ನಂತರ ಜೀವನ, ಲಾಖ್ಡೌನ್ ಮುಂದುವರಿಕೆಗೆ ಚಿಂತನೆ

Saturday, May 15th, 2021
DVS

ಬೆಂಗಳೂರು: ನಗರದಲ್ಲಿರುವ ಕೇಂದ್ರ ಆಯುಷ್ ಇಲಾಖೆಯ ಆಯುರ್ವೇದ ಸಂಶೋಧನಾ ಸಂಸ್ಥೆಯ ಆಸ್ಪತ್ರೆಯನ್ನು ಇನ್ನೆರಡು ವಾರಗಳಲ್ಲಿ 100 ಹಾಸಿಗೆಯ ಸುಸಜ್ಜಿತ ಕೋವಿಡ್ ಆರೈಕೆ ಕೇಂದ್ರವಾಗಿ ಪರಿವರ್ತಿಸಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಹೇಳಿದ್ದಾರೆ. ಸ್ಥಳೀಯ ಶಾಸಕರೂ ಆಗಿರುವ ಸಹಕಾರ ಸಚಿವ ಎಸ್. ಟಿ. ಸೋಮಶೇಖರ ಅವರೊಂದಿಗೆ ಉತ್ತರಹಳ್ಳಿ ಹೋಬಳಿಯಲ್ಲಿರುವ ಆಯುಷ್ ಆಸ್ಪತ್ರೆಗೆ ಭೇಟಿ ನೀಡಿದ ಕೇಂದ್ರ ಸಚಿವರು ಸಂಸ್ಥೆಯ ನಿರ್ದೇಶಕಿ ಡಾ ಸುಲೋಚನಾ ಭಟ್, ಹಿರಿಯ ಅಧಿಕಾರಿಗಳು, ಲ್ಯಾಂಡ್ […]

ರಾಜ್ಯಕ್ಕೆ ಅಪ್ಪಳಿಸಲಿರುವ ‘ತೌಕ್ತೇ’ ಚಂಡಮಾರುತ: ಅನಾಹುತ ತಪ್ಪಿಸಲು ಸರ್ಕಾರದಿಂದ ಹೈ ಅಲರ್ಟ್

Saturday, May 15th, 2021
R Ashoka

ಬೆಂಗಳೂರು : ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ತೌಕ್ತೇ ಚಂಡಮಾರುತವು ರಾಜ್ಯದ ಕಡೆಗೆ ಆಗಮಿಸಲಿದ್ದು, ಈ ಕುರಿತಂತೆ ಸಂಭವನೀಯ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರಾದ ಕಂದಾಯ ಸಚಿವ ಆರ್ ಅಶೋಕ್ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ತುರ್ತು ಸಭೆ ಕರೆದು ಮುನ್ನೆಚ್ಚರಿಕಾ ಕ್ರಮಗಳ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಸಭೆಯ ವಿವರಗಳನ್ನ ಹಂಚಿಕೊಂಡು ಸಚಿವ ಆರ್ ಅಶೋಕ್ ಅವರು,”ರಾಜ್ಯದಿಂದ ಕೇವಲ 200 ಕಿ.ಮೀ. ದೂರದಲ್ಲಿರುವ ಚಂಡಮಾರುತ ತೌಕ್ತೇ ರಾಜ್ಯಕ್ಕೆ […]

ಸುಸಜ್ಜಿತ ಆರೈಕೆ ಕೇಂದ್ರವಾಗಿ ಬದಲಾದ ಹಜ್ ಭವನ

Saturday, May 15th, 2021
Haj Bhavan

ಬೆಂಗಳೂರು : ಬೆಂಗಳೂರಿನ ಉತ್ತರ ಭಾಗದ ಕೋವಿಡ್ ಸೋಂಕಿತರ ಅನುಕೂಲಕ್ಕಾಗಿಯೇ ಥಣಿಸಂದ್ರದ ಹಜ್ ಭವನದಲ್ಲಿ ಸಿದ್ಧಗೊಂಡಿರುವ ಸುಸಜ್ಜಿತ ಕೋವಿಡ್ ಆರೈಕೆ ಕೇಂದ್ರವನ್ನ ಕಂದಾಯ ಸಚಿವರಾದ ಆರ್ ಅಶೋಕ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಆರ್ ಅಶೋಕ್ ಅವರು,”ಈ ಭಾಗದ ಸೋಂಕಿತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಹಜ್ ಭವನವನ್ನ ಹಲವು ಅನುಕೂಲಗಳುಳ್ಳ ಸುಸಜ್ಜಿತ ಕೋವಿಡ್ ಆರೈಕೆ ಕೇಂದ್ರವಾಗಿ ಸಜ್ಜುಗೊಳಿಸಿದೆ. ಇಲ್ಲಿ ನೂರಕ್ಕೂ ಅಧಿಕ ಆಕ್ಸಿಜನ್ ಹಾಸಿಗೆ ಗಳಿದ್ದು, 50 ಐಸಿಯೂ ಹಾಗೂ 50 ಹೆಚ್‍ಡಿಯೂ ಹಾಸಿಗೆಗಳನ್ನ ಸಿದ್ಧಪಡಿಸಲು […]

ಕೋವಿಡ್-19 ರ ಎರಡನೇ ಅಲೆ ನಿರೀಕ್ಷೆಗೂ ಮೀರಿ ಎಲ್ಲೆಡೆ ಸಂದಿಗ್ದತೆಯನ್ನು ಹುಟ್ಟು ಹಾಕಿದೆ : ಬಿ ಎಸ್ ಯಡಿಯೂರಪ್ಪ

Saturday, May 15th, 2021
BS Yediturappa

ಬೆಂಗಳೂರು : ಕೋವಿಡ್-19 ರ ಮೊದಲನೇ ಅಲೆಗಿಂತಲೂ ಎರಡನೇ ಅಲೆ ನಿರೀಕ್ಷೆಗೂ ಮೀರಿ ಎಲ್ಲೆಡೆ ಸಂದಿಗ್ದತೆಯನ್ನು ಹುಟ್ಟು ಹಾಕಿದೆ. ಅಲ್ಲದೆ, ವೈದ್ಯ, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರ ಮೇಲೆ ಹೆಚ್ಚಿನ ಒತ್ತಡ ಹೇರಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಲ್ಲಿ ಇಂದು ಅಭಿಪ್ರಾಯಪಟ್ಟರು. ಕೋವಿಡ್ ಚಿಕಿತ್ಸಾ ಕಾರ್ಯದಲ್ಲಿ ತೊಡಗಿರುವ ರಾಜ್ಯದ ವಿವಿಧ ಜಿಲ್ಲಾ ಹಾಗೂ ತಾಲ್ಲೂಕು ವೈದ್ಯರೊಂದಿಗೆ ವೀಡಿಯೋ ಸಂವಾದ ನಡೆಸಿ ವೈದ್ಯರ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ಪಡೆದರಲ್ಲದೆ, ವೈದ್ಯರು ಸೇವೆಯಲ್ಲಿ […]