ಸಂಸದ ನಳಿನ್ ಕುಮಾರ್ ಕಟೀಲ್ ಸೋಮೇಶ್ವರ, ಉಚ್ಚಿಲ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ

Thursday, August 8th, 2019
Nalin-Someshwara

ಮಂಗಳೂರು  : ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಶ್ರೀ ನಳಿನ್ ಕುಮಾರ್ ಕಟೀಲ್ ಇವರು ಸೋಮೇಶ್ವರ, ಉಚ್ಚಿಲ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ನಡುವೆ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಪ್ರದೇಶ ಗಳಲ್ಲಿ ಕಡಲ್ಕೊರೆತ ಮುಂದುವರಿದಿದ್ದು ಕಡಲ ತಡಿಯ ಜನರ ಆತಂಕ ಮುಂದುವರಿದಿದೆ. ಕಳೆದ ಎರಡು ವರುಷಗಳಿಂದ ಸೋಮೇಶ್ವರ ಉಚ್ಚಿಲ ಪ್ರದೇಶಗಳಲ್ಲಿ ಕಡಲ್ಕೊರೆತವು ತೀವ್ರಗೊಂಡಿದ್ದು, ಈ ಭಾಗದಲ್ಲಿ ಬ್ರೇಕ್ ವಾಟರ್ ಕಾಮಗಾರಿ ನಡೆಸಲಾಗಿದ್ದರೂ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ […]

ದಕ್ಷಿಣ ಕನ್ನಡದಲ್ಲಿ ಯಾರೂ ಕೂಡ ಸಚಿವ ಸ್ಥಾನದ ಆಕಾಂಕ್ಷಿಗಳಿಲ್ಲ : ಶಾಸಕ ಸಂಜೀವ ಮಠಂದೂರು

Thursday, August 8th, 2019
matandoor

ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯಿಂದ ಯಡಿಯೂರಪ್ಪ ಅವರ ಸಂಪುಟದಲ್ಲಿ ಯಾರನ್ನು ಮಂತ್ರಿ ಮಾಡಿದರೂ, ಅದನ್ನು ಒಂದೇ ರೀತಿಯಲ್ಲಿ ಸ್ವೀಕರಿಸಲಾಗುತ್ತೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ. ಮಂಗಳೂರಿನಲ್ಲಿ ಬಿಜೆಪಿ ಶಾಸಕರಿಂದ ಪತ್ರಿಕಾಗೋಷ್ಠಿಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ನೀಡುವುದು ರಾಜ್ಯದ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ದಕ್ಷಿಣ ಕನ್ನಡದಲ್ಲಿ ಯಾರೂ ಕೂಡ ಸಚಿವ ಸ್ಥಾನದ ಆಕಾಂಕ್ಷಿಗಳಿಲ್ಲ. ಕೇಂದ್ರ ವರಿಷ್ಠರು, ಮುಖ್ಯಮಂತ್ರಿ ಗಳು ಯಾರನ್ನು ಉಸ್ತುವಾರಿ ಸಚಿವ ಮಾಡಿದರೂ ಅದನ್ನು ಸಮಾನವಾಗಿ ಸ್ವೀಕರಿಸುತ್ತೇವೆ ಎಂದರು. […]

ಕೆ.ಎಸ್.ಆರ್.ಟಿ.ಸಿ ನಿಲ್ದಾಣದಲ್ಲಿ ಆರೋಗ್ಯ ಜಾಗೃತಿ- ವಸ್ತು ಪ್ರದರ್ಶನ

Thursday, August 8th, 2019
ksrtc-helth

ಮಂಗಳೂರು : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ವಿವಿಧ ಸಾಂಕ್ರಾಮಿಕ ರೋಗಗಳ ಹಾಗೂ ಆರೋಗ್ಯ ಜಾಗೃತಿ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು, ಮಾಹಿತಿ ಪ್ರದರ್ಶನ ನಗರದ ಲಾಲ್‍ಬಾಣ್ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ರಾವ್ ಅವರು ಪ್ರದರ್ಶನ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಾಂಕ್ರಾಮಿಕ ರೋಗಗಳ ನಿಯಂತ್ರಣ ನಮ್ಮಿಂದಲೇ ಸಾಧ್ಯ. ವೈದ್ಯಕೀಯ ಚಿಕಿತ್ಸೆಗಳ ಮೂಲಕ ರೋಗದ ತೀವೃತೆ ಕಡಿಮೆ ಮಾಡಬಹುದಾದರೂ, ರೋಗದ […]

ಕರಾವಳಿಯಲ್ಲಿ ವಾಯುಭಾರ ಕುಸಿತದಿಂದ ಮತ್ತೆ ಭಾರೀ ಮಳೆಯಾಗುವ ಸೂಚನೆ

Thursday, August 8th, 2019
Subrhmanya

ಮಂಗಳೂರು : ಕರಾವಳಿಯಲ್ಲಿ ಈಗಾಗಲೇ ರೆಡ್ ಅಲರ್ಟ್ ಘೋಷಿಸಿರುವ ಹವಾಮಾನ ಇಲಾಖೆ ಮತ್ತೆ ವಾಯುಭಾರ ಕುಸಿತದಿಂದ ಭಾರೀ ಮಳೆಯಾಗುವ ಸೂಚನೆ ನೀಡಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ವರ್ಷಾಧಾರೆಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತೆ ಶಾಲೆ-ಕಾಲೇಜಿಗೆ ರಜೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಶಿಶಿಲ ಗ್ರಾಮದ ಶಿಶಿಲೇಶ್ವರ ದೇವಳದ ಸಮೀಪ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಪ್ರವಾಹ ಅಧಿಕವಾಗಿದ್ದು ನದಿಯಲ್ಲಿ ಬೃಹತ್ ಎರಡು ಮರಗಳು ನೀರಿನಲ್ಲಿ ಬಂದು ಕಿಂಡಿ ಅಣೆಕಟ್ಟಿಗೆ ಸಿಲುಕಿ ಕೃತಕ ಪ್ರವಾಹ ಉಂಟಾಗಿ ಶಿಶಿಲ […]

ಪೈಲೆಟ್ ತನ್ನ ಕೆಲಸದ ಅವಧಿ ಮುಗಿದಿದೆ ಎಂದು ಪ್ಲೈಟ್ ಬಿಟ್ಟು ಹೋದ ; ಪ್ರಯಾಣಿಕರು 7 ಗಂಟೆಗೂ ಹೆಚ್ಚು ಕಾಲ ಬಂಧಿ

Thursday, August 8th, 2019
AirIndia Coimbutooru

ಮಂಗಳೂರು : ದುಬೈನಿಂದ ಮಂಗಳೂರು ಅಂತರ್ ರಾಷ್ಟೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಮುಂಜಾನೆ 4:25ಕ್ಕೆ ಬಂದಿಳಿಯಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಕೊಯಮುತ್ತೂರು ವಿಮಾನ ನಿಲ್ದಾಣದಲ್ಲಿ ಇಳಿಯಿತು. ಈ ಹಠಾತ್ ಬೆಳವಣಿಗೆಯಿಂದ ಪ್ರಯಾಣಿಕರು ಸಂಕಷ್ಟಕ್ಕೊಳಗಾದರು. ಬಳಿಕ ಪೈಲೆಟ್ ತನ್ನ ಕೆಲಸದ ಅವಧಿ ಮುಗಿದಿದೆ ಎಂದು ಪ್ಲೈಟ್ ಬಿಟ್ಟು ಹೋದ ಘಟನೆ ನಡೆಯಿತು. ಬಳಿಕ ಸುಮಾರಾಕ್  ಗಂಟೆಗಳ ಕಾಲ ಪ್ರಯಾಣಿಕರು ವಿಮಾನದಲ್ಲೇ ಕಳೆಯುವಂತಾಯಿತು. ಏರ್ ಇಂಡಿಯಾದ ಐಎಕ್ಸ್ 418 ವಿಮಾನವು 180 ಪ್ರಯಾಣಿಕರನ್ನು ಹೊತ್ತು ದುಬೈನಿಂದ ಹೊರಟಿದ್ದು, ಇಂದು […]

ಅಪಾಯದ ಮಟ್ಟಕ್ಕೆ ಮುಟ್ಟಿದ ಕುಮಾರಧಾರ ಹಾಗೂ ನೇತ್ರಾವತಿ ನದಿ ನೀರಿನ ಹರಿಯು

Thursday, August 8th, 2019
Bantwala-Natravati

ಮಂಗಳೂರು : ದ.ಕ. ಜಿಲ್ಲೆಯ ಕುಮಾರಧಾರ ಹಾಗೂ ನೇತ್ರಾವತಿ ನದಿ ಅಪಾಯದ ಮಟ್ಟದ ಸನಿಹದಲ್ಲಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚನೆ ನೀಡಿದ್ದಾರೆ. ಬಂಟ್ವಾಳದಲ್ಲಿ ನೇತ್ರಾವತಿ ನದಿ ನೀರಿನ ಹರಿಯು 8.4 ಕ್ಕೆ ಮುಟ್ಟಿದ್ದು, ಅಪಾಯದ ಮಟ್ಟ 8.5 ಆಗಿದೆ. ಉಪ್ಪಿನಂಗಡಿ ಯಲ್ಲಿ ನೇತ್ರಾವತಿ ನದಿ ನೀರಿನ ಹರಿಯು ಗರಿಷ್ಟ 29.5 ಇದ್ದು ಈಗ  30.00 ಕ್ಕೆ ಮುಟ್ಟಿದ್ದು ಅಪಾಯದ ಮಟ್ಟ ಮೀರಿದೆ. ಉಪ್ಪಿನಂಗಡಿ ಯಲ್ಲಿ ಕುಮಾರಧಾರ ನದಿ  ನೀರಿನ ಹರಿಯು ಗರಿಷ್ಟ 28.5 ಇದ್ದು ಈಗ  […]

ನಗರಾದ್ಯಂತ ವರಮಹಾಲಕ್ಷ್ಮೀ ಪೂಜೆಗೆ ಸಿದ್ಧತೆ

Thursday, August 8th, 2019
Varamahalakshmi Pooje

ಮಂಗಳೂರು : ನಗರಾದ್ಯಂತ ವರಮಹಾಲಕ್ಷ್ಮೀ ಹಬ್ಬಕ್ಕೆ ಸಿದ್ಧತೆಗಳು ಬಿರುಸುಗೊಂಡಿವೆ. ಸಾರ್ವಜನಿಕರು ಪೂಜೆಗೆ ಬೇಕಾದ ಹೂವು, ಬಳೆ, ಅರಶಿನ, ಕುಂಕುಮ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿದ್ದರೆ, ಇತ್ತ ವ್ಯಾಪಾರ ವಹಿವಾಟೂ ಜೋರಾಗಿದೆ. ದೇವಾಲಯಗಳಲ್ಲಿ ಹಬ್ಬಕ್ಕಾಗಿಯೇ ವಿಶೇಷ ತಯಾರಿಗಳು ನಡೆಯುತ್ತಿವೆ. ವರಮಹಾಲಕ್ಷ್ಮೀ ಪೂಜೆಗೆ ಮುಖ್ಯವಾಗಿ ಬೇಕಾಗಿರುವುದೇ ಹೂ ಹಣ್ಣುಗಳು. ನಗರದ ಗಲ್ಲಿಗಲ್ಲಿಗಳಲ್ಲಿ ವ್ಯಾಪಾರಸ್ಥರು ಹೂ ಮಾರಾಟದಲ್ಲಿ ತೊಡಗಿದ್ದಾರೆ. ಮಲ್ಲಿಕಟ್ಟೆ, ಬಿಜೈ, ಕಂಕನಾಡಿ, ಹಂಪನಕಟ್ಟೆ, ಸ್ಟೇಟ್ಬ್ಯಾಂಕ್‌ ರಸ್ತೆ ಬದಿಗಳಲ್ಲಿ ಹೊರ ಜಿಲ್ಲೆಗಳಿಂದ ಬಂದ ವ್ಯಾಪಾರಸ್ಥರು ವ್ಯಾಪಾರದಲ್ಲಿ ತೊಡಗಿದ್ದಾರೆ. ಮಲ್ಲಿಗೆ, ಹಬ್ಬಲ್ಲಿಗೆ, ಗುಲಾಬಿ… ಹೀಗೆ ನಾನಾ ರೀತಿಯ […]

ಸ್ತನಪಾನದ ಅಗತ್ಯತೆಯನ್ನು ಪ್ರತಿಯೊಬ್ಬ ತಾಯಿಯು ಅರ್ಥಮಾಡಿಕೊಳ್ಳಬೇಕು

Wednesday, August 7th, 2019
brest-feeding

ಮೂಡುಬಿದಿರೆ: ಸ್ತನಪಾನ ಮಾಡಿಸುವುದರಿಂದ ತಾಯಿಯು ತನ್ನ ಮಕ್ಕಳನ್ನು ರೋಗಗಳಿಂದ ದೂರವಿಡಬಹುದು ಎಂದು ಆಳ್ವಾಸ್‌ನ ಕಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ|| ರಮೇಶ ಹೇಳಿದರು. ಅವರು ಆಳ್ವಾಸ್ ಆರೋಗ್ಯ ಕೇಂದ್ರದಿಂದ ಆಯೋಜಿಸಿದ್ದ ಸ್ತನಪಾನ ಜಾಗೃತಿ ವಾರ ಕಾರ‍್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸ್ತನಪಾನದ ಅಗತ್ಯತೆಯನ್ನು ಪ್ರತಿಯೊಬ್ಬ ತಾಯಿಯು ಅರ್ಥಮಾಡಿಕೊಳ್ಳಬೇಕು. ಆಗ ಮಗು ಆರೋಗ್ಯವಾಗಿ ಬೆಳೆಯಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಅತಿಥಿ ಕಸೂತಿ ಹಾಗೂ ಸ್ತ್ರೀ ರೋಗ ತಜ್ಞರಾದ ಡಾ|| ರೇವತಿ ಭಟ್ ಮಾತನಾಡಿ, ತಾಯಿಯ ಹಾಲು […]

ಬಿ ವಿ ಕಕ್ಕಿಲ್ಲಾಯ ಅವರ ಜನ್ಮಶತಾಬ್ದಿ ಪ್ರಯುಕ್ತ ರಾಜಕೀಯ, ಆರ್ಥಿಕ, ಸಾಮಾಜಿಕ ಗಂಭೀರ ಚರ್ಚೆ

Wednesday, August 7th, 2019
Kakkilaya

ಮಂಗಳೂರು:  ಬಿ ವಿ ಕಕ್ಕಿಲ್ಲಾಯ ಅವರ ಜನ್ಮಶತಾಬ್ದಿ ಪ್ರಯುಕ್ತ ಉಪನ್ಯಾಸ ಸಂವಾದ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈಗ ನಮ್ಮ ದೇಶದಲ್ಲಿ ಸಮಕಾಲೀನ ಪರಿಸ್ಥಿತಿ ಹೇಗಿದೆ. ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಸ್ಥಿತಿ ಹೇಗಿದೆ ಎಂಬ ಬಹಳ ಆಳವಾದ ಗಂಭೀರ ಚರ್ಚೆಯನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಸಮದರ್ಶಿ ವೇದಿಕೆಯ ಡಾ. ಬಿ ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಚಳವಳಿಯ ನಾಯಕ, ರಾಜ್ಯಸಭಾ ಸದಸ್ಯ, ಶಾಸಕರಾಗಿದ್ದ ಬಿ ವಿ ಕಕ್ಕಿಲ್ಲಾಯರು ಯಾವ ಆಶಯಗಳಿಗಾಗಿ ಹೋರಾಟ […]

ಕರ್ನಾಟಕ ದಸಂಸ ಅಂಬೇಡ್ಕರ್‌ವಾದ ದ.ಕ. ಜಿಲ್ಲಾ ಸಮಿತಿಯಿಂದ ಮಂಗಳೂರು ಪೊಲೀಸ್ ಉಪಆಯುಕ್ತರಿಗೆ ಗೌರವಾರ್ಪಣೆ

Wednesday, August 7th, 2019
DSS

ಮಂಗಳೂರು  : ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) (ಅಂಬೇಡ್ಕರ್‌ವಾದ), ದ.ಕ. ಜಿಲ್ಲಾ ಶಾಖೆ ವತಿಯಿಂದ ಬುಧವಾರ ಆಗಸ್ಟ್ 7,2019 ರಂದು ಮಂಗಳೂರು ಪೊಲೀಸ್ ಆಯುಕ್ತರ ಕಛೇರಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪೊಲೀಸ್ ಉಪಆಯುಕ್ತರಾದ ಹನುಮಂತರಾಯರವರನ್ನು ದಾವಣಗೆರೆ ಜಿಲ್ಲೆಗೆ ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ದಸಂಸ (ಅಂಬೇಡ್ಕರ್‌ವಾದ) ನಿಯೋಗ ಭೇಟಿ ಮಾಡಿ ಹೂಗುಚ್ಛ ಹಾಗೂ ಭಗವಾನ್ ಬುದ್ಧನ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಘಟಾನಾ ಸಂಚಾಲಕರಾದ ಸದಾಶಿವ ಉರ್ವಸ್ಟೋರ್‌ರವರು ಮಾತನಾಡಿ ಮಂಗಳೂರು ನಗರ ಪೊಲೀಸ್ […]