ಬಂದರು ಹಾಗೂ ಒಳನಾಡು ಜಲಸಾರಿಗೆ,ಮೀನುಗಾರಿಕೆ ಇಲಾಖೆಗೆ ರೂ.325.15 ಲಕ್ಷ ಹೆಚ್ಚುವರಿ ಅನುದಾನ

Wednesday, March 30th, 2011
ಶ್ರೀ ಕೃಷ್ಣ ಜೆ.ಪಾಲೇಮಾರ್

ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿ ಹಾಗೂ ತಾಲ್ಲೂಕಿನಲ್ಲಿ ಮೀನುಗಾರಿಕೆಗೆ ಸಂಬಂಧಿಸಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕರ್ನಾಟಕ ಸರ್ಕಾರದ 2010-11 ನೇ ಸಾಲಿನಲ್ಲಿ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಗೆ 8 ಕಾಮಗಾರಿಗಳ ಅನುಷ್ಠಾನಕ್ಕಾಗಿ ರೂ.123.45 ಲಕ್ಷ ಹಾಗೂ ಮೀನುಗಾರಿಕಾ ಇಲಾಖೆಗೆ 14 ಕಾಮಗಾರಿಗಳಿಗೆ ರೂ.201.70ಲಕ್ಷ,ಹೆಚ್ಚುವರಿ ಅನುದಾನ ಒದಗಿಸಿದೆಯೆಂದು ರಾಜ್ಯದ ಜೀವಿಶಾಸ್ತ್ರ,ಪರಿಸರ,ಬಂದರು,ವಿಜ್ಞಾನ ಮತ್ತು ತಂತ್ರಜ್ಞಾನ, ಮೀನುಗಾರಿಕೆ ಹಾಗೂ ಜಲಸಾರಿಗೆ  ಸಚಿವರಾದ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣ ಜೆ.ಪಾಲೇಮಾರ್  ತಿಳಿಸಿರುತ್ತಾರೆ. ಮಂಗಳೂರು ತಣ್ಣೀರುಬಾವಿ ಬೆಂಗ್ರೆ […]

ಸಿಎಂ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ

Tuesday, March 29th, 2011
ಸಿಎಂ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ವರದಿ ನೀಡುವಂತೆ ಲೋಕಾಯುಕ್ತ ವಿಶೇಷ ಕೋರ್ಟ್ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ಮಂಗಳವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕುಟುಂಬ ವರ್ಗದ ವಿರುದ್ಧದ ಭೂ ಹಗರಣದ ಕುರಿತಂತೆ ಲೋಕಾಯುಕ್ತ ಕೋರ್ಟ್ ಆದೇಶಕ್ಕೆ ತಡೆ ನೀಡಬೇಕೆಂದು ಕೋರಿ ಸಿಎಂ ಅಳಿಯ ಸೋಹನ್ ಕುಮಾರ್ ಸೋಮವಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, […]

ದಕ್ಷಿಣ ಕನ್ನಡ ಜಿಲ್ಲೆಯ ನೂತನ ಎಸ್.ಪಿ ಯಾಗಿ ಲಾಬೂರಾಂ

Tuesday, March 29th, 2011
ಲಾಬೂರಾಂ

ಮಂಗಳೂರು : ರಾಜಸ್ಥಾನ ಮೂಲದ ಲಾಬೂರಾಂ ದಕ್ಷಿಣ ಕನ್ನಡ ಜಿಲ್ಲಾ ನೂತನ ಎಸ್ಪಿಯಾಗಿ ಅಧಿಕಾರ ವಹಿಸಿದ್ದಾರೆ, ಅವರು ನಿರ್ಗಮನ ಎಸ್ಪಿ ಡಾ.ಎ.ಎಸ್.ರಾವ್‌ರಿಂದ ಸೋಮವಾರ ಸಂಜೆ ಅಧಿಕಾರ ಸ್ವೀಕರಿಸಿದರು. ಲಾಬೂರಾಂ ಬಿಎಸ್ಸಿ ಪದವೀಧರಾಗಿದ್ದು. 2003ರಲ್ಲಿ  ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, 2004ನೆ ಸಾಲಿನಲ್ಲಿ ಐಪಿಎಸ್ ಅಧಿಕಾರಿಯಾಗಿ ಕೆಲಸ ಆರಂಭಿಸಿದರು. 2006ರಲ್ಲಿ ದ.ಕ. ಜಿಲ್ಲೆಯಲ್ಲಿ ಪ್ರೊಬೇಷನರಿ ಅವಧಿ ಪೂರೈಸಿ, ಉಡುಪಿ ಜಿಲ್ಲೆಯ ಪ್ರಭಾರ ಎಸ್ಪಿಯಾಗಿ, ಹಾಸನ ಜಿಲ್ಲಾ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು. ಚಿತ್ರದುರ್ಗ ಜಿಲ್ಲೆಯಲ್ಲೂ ಎಸ್ಪಿಯಾಗಿ ಸೇವೆ […]

ಲೋಕಾಯುಕ್ತ ಪೊಲೀಸರಿಂದ ಸಿ.ಎಂ. ಕುಟುಂಬದ ಭೂ ಹಗರಣ ತನಿಖೆ ಆರಂಭ

Thursday, March 24th, 2011
ಬಿ.ಎಸ್.ಯಡಿಯೂರಪ್ಪ

ಬೆಂಗಳೂರು : ಲೋಕಾಯುಕ್ತ ವಿಶೇಷ ನ್ಯಾಯಾಲಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭೂಹಗರಣಗಳ ತನಿಖೆ ನಡೆಸಬೇಕೆಂದು ಲೋಕಾಯುಕ್ತ ಪೊಲೀಸರಿಗೆ ಗುರುವಾರ ಮಹತ್ವದ ಆದೇಶ ನೀಡಿದೆ. ವಕೀಲ ಸಿರಾಜುದ್ದೀನ್ ಬಾಷಾ ಮುಖ್ಯಮಂತ್ರಿ ಹಾಗೂ ಅವರ ಕುಟುಂಬ ಸದಸ್ಯರ ಭೂ ಹಗರಣಗಳ ವಿರುದ್ಧ ಸಲ್ಲಿಸಿರುವ ಮೊದಲ ದೂರಿನ ಆಧಾರದ ಮೇಲೆ 23ನೇ ಅಧೀನ ಕೋರ್ಟ್‌ನ ನ್ಯಾಯಾಧೀಶ ಸಿ.ಬಿ.ಹಿಪ್ಪರಗಿ ಮಾ.24ಕ್ಕೆ ಆದೇಶ ನೀಡುವುದಾಗಿ ತಿಳಿಸಿದ್ದರು. ಸಿಎಂ ಕುಟುಂಬದ ಭೂ ಹಗರಣಗಳ ಮೊದಲ ದೂರಿನ ವಿಚಾರಣೆ ಪೂರ್ಣಗೊಳಿಸಿದ ನಂತರ ಈ ತೀರ್ಪು ನೀಡಿದ ನ್ಯಾಯಾಧೀಶರು, […]

ಪ್ಲಾಸ್ಟಿಕ್ ನಿಷೇಧ ಆದೇಶ ಅನುಷ್ಠಾನಕ್ಕೆ ತನ್ನಿ: ಜಿಲ್ಲಾಧಿಕಾರಿ ಸೂಚನೆ

Saturday, March 12th, 2011
ಜಿಲ್ಲಾಧಿಕಾರಿ ಸುಬೋಧ್ ಯಾದವ್

ಮಂಗಳೂರು : ಜಿಲ್ಲೆಯಾದ್ಯಂತ ಪ್ಲಾಸ್ಟಿಕ್ ನಿಷೇಧ ಆದೇಶ ಸಮಗ್ರವಾಗಿ ಜಾರಿಗೆ ತರಲು ಮಾರ್ಚ್ 30 ಅಂತಿಮ ದಿನವಾಗಿದ್ದು, ಪರ್ಯಾಯವನ್ನು ಜನರಿಗೆ ನೀಡಿ ಆದೇಶ ಪಾಲನೆಗೆ ಸಜ್ಜಾಗಿ ಎಂದು ಜಿಲ್ಲಾಧಿಕಾರಿ ಶ್ರೀ ಸುಬೋಧ್ ಯಾದವ್ ಅವರು ಅಧಿಕಾರಿಗಳಿಗೆ ಆದೇಶಿಸಿದರು. ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಜಿಲ್ಲಾಡಳಿತ ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಮತ್ತು ಪ್ಲಾಸ್ಟಿಕ್ ಮುಕ್ತ ವಾತಾವರಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ಅಧಿಕಾರಿಗಳ ಕರ್ತವ್ಯಲೋಪಕ್ಕೆ ಕಠಿಣ […]

ಪುರಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ

Tuesday, March 8th, 2011
ಪುರಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಂಗಳೂರು, ಜಿಲ್ಲಾ ಮಹಿಳಾಮಂಡಳಗಳ ಒಕ್ಕೂಟ (ರಿ) ಮಂಗಳೂರು ಮತ್ತು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಇಂದು ಬೆಳಿಗ್ಗೆಪುರಭವನದಲ್ಲಿ ಆಚರಿಸಲಾಯಿತು. ದ.ಕ. ಲೋಕಸಭಾ ಸದಸ್ಯರಾದ ಶ್ರೀ ನಳಿನ್ ಕುಮಾರ್ ಕಟೀಲ್ ಸಮಾರಂಭವನ್ನು ಉದ್ಘಾಟಿಸಿದರು. ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ.ಟಿ.ಶೈಲಜಾ ಭಟ್ ರವರು ವಸ್ತು ಪ್ರದರ್ಶನ ಉದ್ಘಾಟಿಸಿದರು ಹಾಗೂ ಶ್ರೀಮತಿ ವಿದ್ಯಾ ನಾಯಕ್ ಅವರ ಸಂಗ್ರಹದ […]

ಮಾರ್ಚ್14ರಿಂದ 19ರವರೆಗೆ ನಗರದಲ್ಲಿ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ

Monday, March 7th, 2011
Kusta

ಮಂಗಳೂರು : ಮಾರ್ಚ್ 14ರಿಂದ 19ರವರೆಗೆ ಕುಷ್ಠರೋಗ ನಿರ್ಮೂಲನಾ ಆಂದೋಲನಾ ಕಾರ್ಯಕ್ರಮವನ್ನು ಮಂಗಳೂರು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಪಂಚಾಯಿತಿಯಲ್ಲಿ  ಇತ್ತೀಚೆಗೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ‘ಕುಷ್ಠರೋಗ ನಿರ್ಮೂಲನ ಮಂಗಳೂರು ನಗರ’ದಲ್ಲಿ ಸಭೆಯಲ್ಲಿ ಹೊಸ ಎಂ ಬಿ ಕುಷ್ಠರೋಗ ಪ್ರಕರಣಗಳು ವರದಿಯಾಗುತ್ತಿರುವ ಬಗ್ಗೆ ಚರ್ಚೆ ನಡೆಸಲಾಯಿತು. 2010-11ನೇ ಸಾಲಿನಲ್ಲಿ ಮಂಗಳೂರು ನಗರದಲ್ಲಿ ಹೊಸದಾಗಿ  ಒಟ್ಟು 17 ಪ್ರಕರಣಗಳನ್ನು ಪತ್ತೆ ಹಚ್ಚಿ ಎಂ ಡಿ ಟಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುಷ್ಠರೋಗ ನಿವಾರಣಾಧಿಕಾರಿ ಡಾ ಟಿ. ಎನ್. […]

ಗ್ಲೋಬಲ್ ಇಂಡೆಕ್ಸ್ ಸಂಸ್ಥೆಗೆ ಬೀಗ ನೂರಾರು ಮಂದಿಗೆ ಪಂಗನಾಮ

Friday, March 4th, 2011
ಹಣ ದ್ವಿಗುಣಗೊಳಿಸುವ ಚೈನ್ ಸಿಸ್ಟಂ ಆರೋಪಿಗಳು

ಮಂಗಳೂರು : ಹಣ ದ್ವಿಗುಣಗೊಳಿಸುವ ಚೈನ್ ಸಿಸ್ಟಂ ಬಿಸಿನೆಸ್ ಸಂಸ್ಥೆಯೊಂದು ನೂರಕ್ಕೂ ಅಧಿಕ ಮಂದಿಗೆ ವಂಚಿಸಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿ, ಹಣ ತೊಡಗಿಸಿದವರಿ ಪಂಗನಾಮ ಹಾಕಿ ಫೆಬ್ರವರಿ 7ರಿಂದ ಬಾಗಿಲು ಮುಚ್ಚಿದೆ. ನಗರದ ಕರಂಗಲ್ಪಾಡಿ ಬಳಿ ಮಹೇಂದ್ರ ಆರ್ಕೇಡ್ ಕಟ್ಟಡದಲ್ಲಿ   ಕಚೇರಿ ಹೊಂದಿದ್ದ  “ಗ್ಲೋಬಲ್ ಇಂಡೆಕ್ಸ್ ಸಂಸ್ಥೆ” ವ್ಯವಹಾರದಲ್ಲಿ ಹಣ  ತೊಡಗಿಸುವಂತೆ ಪ್ರೇರೇಪಿಸಿ ಬಳಿಕ ಸದಸ್ಯರಿಗೆ ಮೋಸ ಮಾಡಿದೆ ಎಂದು ಹೂಡಿಕೆ ದಾರರು ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರವೀಣ್ ಶೆಟ್ಟಿ ಮತ್ತು ವಸಂತ್ ಎಂಬ ಆರೋಪಿಗಳು ಅನ್‌ಲೈನ್ […]

ಪುನರ್ವಸತಿ ಯೋಜನೆ ಅನುಷ್ಠಾನ: ಸ್ಥಳೀಯರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ

Friday, March 4th, 2011
ಪುನರ್ವಸತಿ ಯೋಜನೆ ಅನುಷ್ಠಾನ

ಮಂಗಳೂರು : ಕುದುರೆಮುಖ ರಾಷ್ಟ್ರೀಯ ಪುನರ್ವಸತಿ ಯೋಜನೆಯನ್ವಯ ಅರಣ್ಯದೊಳಗಿಂದ ಹೊರಬಂದು ವಾಸಿಸಲು ಒಪ್ಪುವ ಕುಟುಂಬಗಳಿಗೆ ಪರಿಹಾರ  ಹಾಗೂ ಪೂರಕ ವ್ಯವಸ್ಥೆಗಳನ್ನು ನೀಡಲು ಪ್ರತೀ ಬುಧವಾರ ಸಂಬಂಧಪಟ್ಟ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ ವಾರಕ್ಕೊಂದರಂತೆ ಒಂದು ಪ್ರಕರಣವನ್ನು ಇತ್ಯರ್ಥ ಪಡಿಸುವಂತೆ ಜಿಲ್ಲಾಧಿಕಾರಿ ಶ್ರೀ ಸುಬೋಧ್ ಯಾದವ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ಇಂದು ಬೆಳ್ತಂಗಡಿಯ ನಾರಾವಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ಬಳಿಕ ಕುತ್ಲೂರಿನ ಅಳಂಬ, ನೆಲ್ಲಿಪಡ್ಕದ ಮನೆಗಳಿಗೆ ಭೇಟಿ ನೀಡಿ ಅವರ ಅಭಿಪ್ರಾಯಗಳನ್ನು […]

ಮದುವೆಯಾದ ಮಾತ್ರಕ್ಕೆ ಹೆಣ್ಣಿಗೆ ಭದ್ರತೆಯಿಲ್ಲ : ಮಧು ಭೂಷಣ್

Thursday, March 3rd, 2011
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಮಂಗಳೂರು: ಮಹಿಳಾ ಸಂಘಗಳ ಜಾಲ, ಮಂಗಳೂರು ಇದರ ಆಶ್ರಯದಲ್ಲಿ ಇಂದು 101ನೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.. ಇದರ ಅಂಗವಾಗಿ ಇಂದು ಬೆಳಿಗ್ಗೆ 9.30 ಕ್ಕೆ ಜ್ಯೋತಿ ಸರ್ಕಲ್ ನಲ್ಲಿ ಜಾಥಾವನ್ನು ಉದ್ಘಾಟಿಸಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ಶ್ರೀಮತಿ ಮೀನಾ ಕೊರಗ, ವಾಮಂಜೂರು, ಮಂಗಳೂರು, ಸ್ವಚ್ಛತಾ ಕಾರ್ಮಿಕರು, ಶ್ರೀಮತಿ ವಿಜಯಲಕ್ಷ್ಮೀ ಪೂಜಾರ್ತಿ, ಶ್ರಮಿಕ ರೈತ ಮಹಿಳೆ, ನೀರುಮಾರ್ಗ, ಡಾ| ರತಿ ರಾವ್, ಸಮತಾ ವೇದಿಕೆ, ಮೈಸೂರು, ಶ್ರೀಮತಿ ಮರಿಯಮ್ಮ ಥಾಮಸ್, ಕಾರ್ಪೋರೇಟರ್ ಮಂಗಳೂರು, ಶ್ರೀಮತಿ ಶಹನಾಜ್ ಎಂ, ಸಂಪಾದಕರು, […]