ಬಿಜೆಪಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ -ವಸಂತ ಬಂಗೇರ ಆರೋಪ

Saturday, December 7th, 2019
vasanth-bangera

ಬೆಳ್ತಂಗಡಿ :  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರವೇರಿಸಿದ್ದ ಕಾಮಗಾರಿಯನ್ನು ಮತ್ತೆ ಉದ್ಘಾಟಿಸಲು ಸಿಎಂ ಬಿ.ಎಸ್. ಯಡಿಯೂರಪ್ಪ ಮುಂದಾಗಿದ್ದು, ಕಾಮಗಾರಿಯ ಲಾಭಪಡೆಯಲು ಮುಂದಾಗಿದ್ದಾರೆ . ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಭಾಗವಹಿಸುತ್ತಿರುವುದು ವಿಷಾದನೀಯ  ಎಂದು ಮಾಜಿ ಶಾಸಕ ವಸಂತ ಬಂಗೇರ ಆರೋಪಿಸಿದ್ದಾರೆ. ಪಟ್ಟಣ ಪಂಚಾಯತಿಗೆ ಬಂದಿರುವ ಹತ್ತು ಕೋಟಿ ಅನುದಾನದ ಕಾಮಗಾರಿಗಳಲ್ಲಿ ಕೆಲ ಕಾಮಗಾರಿಗಳ ಶಿಲಾನ್ಯಾಸವನ್ನು ಈ ಹಿಂದೆ ಯೇ ನಡೆದಿತ್ತು ಎಂದು ಅವರು ಹೇಳಿದ್ದಾರೆ. ಬೆಳ್ತಂಗಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಈ ಹಿಂದೆ ಕಾಂಗ್ರೆಸ್ ಸರಕಾರದ […]

ಐದು ಸಾವಿರ ಹಣ ಡಿಪಾಸಿಟ್ ಕೊಟ್ಟರೆ ಒಂದು ಲಕ್ಷ ಸಾಲ ! ಮೋಸ ಹೊದೀರಿ ಜೋಕೆ

Friday, December 6th, 2019
latha

ಮಂಗಳೂರು  : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನತೆ ಜಾಗರೂಕರಾಗಿ ಇಲ್ಲವಾದಲ್ಲಿ ನಿಮಗೂ ಆಗುತ್ತೆ ಮೋಸ. ಲತಾ ಶೆಟ್ಟಿ ಎಂಬ ಹೆಸರಿನ ಮಹಿಳೆ ತುಂಬಾ ಜನರಿಗೆ ಪಂಗನಾಮ ಹಾಕಿದ್ದಾಳೆ, ಈಕೆ ಜನರಲ್ಲಿ ನಿಮಗೆ ಒಂದು ಲಕ್ಷ ಸಾಲ ಕೊಡುತ್ತೇನೆ ನಿಮ್ಮ ಆಧಾರ್ ಓಟರ್ ಐಡಿ ಬ್ಯಾಂಕ್ ಪುಸ್ತಕ ಇದರ ಜೆರಾಕ್ಸ್ 2 ಫೋಟೋ ಕೊಟ್ಟು ಐದು ಸಾವಿರ ಹಣ ಡಿಪಾಸಿಟ್ ಕೊಟ್ಟರೆ ಒಂದು ವಾರದಲ್ಲಿ ಒಂದು ಲಕ್ಷ ಹಣ ಸಾಲ ಕೊಡುತ್ತೇವೆ ಎಂದು ಜನರು ನಂಬುವ ಹಾಗೆ […]

ಉಪ್ಪಿನಂಗಡಿ : ಕಾಲೇಜು ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

Friday, December 6th, 2019
Pratham

ಉಪ್ಪಿನಂಗಡಿ : ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಕ್ಕಾರು ಎಂಬಲ್ಲಿ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಮರಮೆ ಮನೆ ನಿವಾಸಿ ಪ್ರಥಮ್ ಕೊಂಡೆ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಇವರು ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿಯಾಗಿದ್ದರು. ನಿನ್ನೆ ರಾತ್ರಿ ಮನೆಯಲ್ಲಿದ್ದ ಇವರು ಬೆಳಗ್ಗೆ ಮನೆಯ ಬಳಿಯ ಮಾವಿನಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ […]

ಡಿ.15 ರೊಳಗೆ ರಸ್ತೆ ದುರಸ್ತಿ ಕಾರ್ಯ ಆರಂಭಿಸದಿದ್ದಲ್ಲಿ ಮಡಿಕೇರಿ ನಗರ ಬಂದ್ : ಹರೀಶ್ ಜಿ.ಆಚಾರ್ಯ ಎಚ್ಚರಿಕೆ

Friday, December 6th, 2019
Harish

ಮಡಿಕೇರಿ : ನಗರದ ರಸ್ತೆಗಳ ಅವ್ಯವಸ್ಥೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ವೀರನಾಡು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಹರೀಶ್ ಜಿ.ಆಚಾರ್ಯ ಡಿ.15 ರೊಳಗೆ ರಸ್ತೆ ದುರಸ್ತಿ ಕಾರ್ಯ ಆರಂಭಿಸದಿದ್ದಲ್ಲಿ ಮಡಿಕೇರಿ ನಗರ ಬಂದ್‌ಗೆ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಳೆಗಾಲ ಕಳೆದು ಬಿಸಿಲಿನ ವಾತಾವರಣ ಮೂಡಿದ್ದರೂ ರಸ್ತೆ ದುರಸ್ತಿಯ ಬಗ್ಗೆ ನಗರಸಭೆ ಕಾಳಜಿ ತೋರುತ್ತಿಲ್ಲ. ವಿವಿಧ ಸಂಘ, ಸಂಸ್ಥೆಗಳು ಹಾಗೂ ಸಾರ್ವಜನಿಕರು ಪ್ರತಿಭಟನೆ ಅನೇಕ ಪ್ರತಿಭಟನೆಗಳನ್ನು ನಡೆಸಿದ್ದರೂ ಜಿಲ್ಲಾಡಳಿತದಿಂದ ಯಾವುದೇ ಸ್ಪಂದನೆ […]

ಡಾ|| ಪ್ರಿಯಾಂಕ ರೆಡ್ಡಿ ಹಾಗೂ ಗುಲ್ಬರ್ಗಾದ 8 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಖಂಡಿಸಿ, ಬೃಹತ್ ಕಾಲ್ನಡಿಗೆ ಜಾಥಾ

Wednesday, December 4th, 2019
nsui

ಮಂಗಳೂರು  : ಪಶುವೈದ್ಯೆ ಡಾ|| ಪ್ರಿಯಾಂಕ ರೆಡ್ಡಿಯವರ ಮೇಲೆ ನಡೆದ ಅತ್ಯಾಚಾರ ಮತ್ತು ಜೀವಂತವಾಗಿ ದಹಿಸಿದ ಹಾಗೂ ನಿನ್ನೆ ಗುಲ್ಬರ್ಗಾದಲ್ಲಿ ನಡೆದ 8ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನು ಆಗ್ರಹಿಸಿ ದ.ಕ ಜಿಲ್ಲಾ ವಿದ್ಯಾರ್ಥಿ ಕಾಂಗ್ರೆಸ್ ಮತ್ತು ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ಬಲ್ಮಠ ಕಲೆಕ್ಟರ್ ಗೇಟ್ ಸರ್ಕಲ್‌ನಿಂದ ಆರಂಭಗೊಂಡ ಕಾಲ್ನಡಿಗೆ ಜಾಥಾವು ಸಂತ ಸೆಬಾಸ್ಟಿಯನ್ ಚರ್ಚ್ ಮುಂಭಾಗದವರೆಗೆ ಬುಧವಾರದಂದು ನಡೆಯಿತು. ಪ್ರತಿಭಟನೆಯಲ್ಲಿ ಆರೋಪಿಗಳ ಪ್ರತಿಕೃತಿ ದಹಿಸಿ ಮಾನವ […]

ವಿಕಲಚೇತನರ ದಿನಾಚರಣೆ : ಛಲದಿಂದ ಯಶಸ್ಸು ಸಾಧ್ಯ; ವಿ.ವಿ.ಮಲ್ಲಾಪುರ

Tuesday, December 3rd, 2019
madikeri

ಮಡಿಕೇರಿ : ಛಲದಿಂದ ಮಾತ್ರ ಯಶಸ್ಸು ಸಾಧ್ಯ, ಇದನ್ನು ಪ್ರತಿಯೊಬ್ಬ ವಿಕಲಚೇತನರು ಮನಗೊಂಡು ಯಶಸ್ಸುಗಳಿಸುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಅವರು ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿಶೇಷ ಮಕ್ಕಳ ಶಾಲೆಗಳು, ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ […]

ಸಂಗೀತದ ಆಸ್ವಾನೆಯಿಂದ ಮನೋಕ್ಲೇಶಗಳು ದೂರವಾಗುತ್ತದೆ : ನಾಗಸ್ವರ ಕಲಾವಿದ ನಾಗೇಶ್ ಎ ಬಪ್ಪನಾಡು

Tuesday, December 3rd, 2019
Udayaraga22

ಮಂಗಳೂರು : ಸಂಗೀತ ಮಾನಸಿಕ ನೆಮ್ಮದಿಗೆ ಪ್ರೇರಕ ಕಲೆಯಾಗಿದ್ದು, ಸಂಗೀತದ ಆಸ್ವಾನೆಯಿಂದ ಮನೋಕ್ಲೇಶಗಳು ದೂರವಾಗುತ್ತದೆ ಎಂದು ಹಿರಿಯ ನಾಗಸ್ವರ ಕಲಾವಿದ ನಾಗೇಶ್ ಎ ಬಪ್ಪನಾಡು ನುಡಿದರು. ಅವರು ಸುರತ್ಕಲ್ ನಾಗರಿಕ ಸಲಹಾ ಸಮಿತಿ ಹಾಗೂ ಮಣಿ ಕೃಷ್ಣಸ್ವಾಮಿ ಅಕಾಡಮಿ ಸಹಭಾಗಿತ್ವದಲ್ಲಿ ಆಯೋಜಿಸಿರುವ ಶಾಸ್ತ್ರೀಯ ಸಂಗೀತ ಸರಣಿ ಉದಯರಾಗ – 22 ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಎಳೆಯ ಕಲಾವಿದರಿಗೆ ವೇದಿಕೆ ಶ್ರೇಷ್ಠ ಕಲಾವಿದರನ್ನಾಗಿ ರೂಪಿಸುವ ಹೊಣೆಗಾರಿಕೆ ಸಂಗೀತ ಗುರುಗಳಿಗೆ ಹಾಗೂ ಸಂಸ್ಥೆಗಳಿಗಿವೆ ಎಂದರು. ನಿವೃತ್ತ ಪ್ರಾಧ್ಯಾಪಕ ಪಿ […]

ಅಂಗನವಾಡಿಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಆಗ್ರಹ : ಮಡಿಕೇರಿಯಲ್ಲಿ ಪ್ರತಿಭಟನೆ

Tuesday, December 3rd, 2019
madikeri

ಮಡಿಕೇರಿ : ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕ ಸಿಐಟಿಯು ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಿತು. ನಗರದ ಗಾಂಧಿ ಮೈದಾನದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಹಾಗೂ ಸಹಾಯಕಿಯರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಸುನಂದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ ಉದಾರೀಕರಣ ನೀತಿಗಳ ಮೂಲಕ ಸರ್ಕಾರ ಎಲ್ಲಾ […]

ಕರ್ಕಾಟಕ ರಾಶಿಯವರಿಗೆ ನಿರೀಕ್ಷಿತ ಹಣಕಾಸು ಕೈಸೇರಲಿದೆ

Tuesday, December 3rd, 2019
durganjaneya

ಶ್ರೀ ದುರ್ಗಾ ಆಂಜನೇಯ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ. ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ. ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ 9380281393 ವಿಕಾರಿ ನಾಮ ಸಂವತ್ಸರ ಮಾರ್ಗಶಿರ ಮಾಸ ನಕ್ಷತ್ರ : ಧನಿಷ್ಟ ಋತು : ಹೇಮಂತ ರಾಹುಕಾಲ 15:04 – 16:30 ಗುಳಿಕ ಕಾಲ 12:13 -13:39 ಸೂರ್ಯೋದಯ 06:30:46 ಸೂರ್ಯಾಸ್ತ 17:55:26 ತಿಥಿ : ಸಪ್ತಮಿ ಪಕ್ಷ : ಶುಕ್ಲ ಮೇಷ ರಾಶಿ ನಾವು ಹೇಗೆ ನಡೆದುಕೊಳ್ಳುತ್ತೇವೆ ಅದೇ ರೀತಿಯಲ್ಲಿ […]

ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ

Monday, December 2nd, 2019
Kudupu shashti

ಮಂಗಳೂರು :  ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ ಹಾಗೂ  ಬ್ರಹ್ಮರಥೋತ್ಸವವು  ಸೋಮವಾರ ವಿಜೃಂಭಣೆಯಿಂದ ನೆರವೇರಿತು. ದೇವರ ಬಲಿ ಉತ್ಸವ ನಡೆದ ಬಳಿಕ ರಥೋತ್ಸವ, ನಾಗಬನದಲ್ಲಿ ತಂಬಿಲ ಸೇವೆ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಸೀಯಾಳ ಅಭಿಷೇಕಗಳು ನಡೆದವು. ಚಂಪಾಷಷ್ಠಿಯಂದು ಹಗಲು ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಅನಂತಪದ್ಮನಾಭ, ನಾಗದೇವರು ಹಾಗೂ ಸುಬ್ರಹ್ಮಣ್ಯ ದೇವರು ಮೂವರು ಕೂಡಾ ಒಟ್ಟಾಗಿ ನೆಲೆಸಿರುವ ಅಪರೂಪದ ಕ್ಷೇತ್ರ ಇದಾಗಿದೆ. ದೇವಳ ದಕ್ಷಿಣಕ್ಕೆ ಪವಿತ್ರ ಭದ್ರಾ ಸರಸ್ವತಿ ಕೆರೆ. ಪೂರ್ವಭಾಗದಲ್ಲಿ 500ಕ್ಕೂ ಹೆಚ್ಚಿನ ನಾಗಶಿಲೆಗಳಿರುವ ನಾಗಬನವಿದೆ. ಕರಾವಳಿಯ […]