ಭಾಸ್ಕರ್ ಎಂ ಸಾಲ್ಯಾನ್ ರಿಗೆ ಮಾತೃ ವಿಯೋಗ

Friday, July 31st, 2020
Kamala

ಮುಂಬಯಿ : ಭಾರತ್ ಬ್ಯಾಂಕಿನ ನಿರ್ದೇಶಕ ಭಾಸ್ಕರ್ ಎಂ ಸಾಲ್ಯಾನ್ ಅವರ ತಾಯಿ ಕಮಲಾ ಎಂ ಸಾಲ್ಯಾನ್ (82) ಜು. 30ರಂದು ಮೂಲ್ಕಿಯ ಸ್ವಗೃಹ ಕಮಲ ಸದನದಲ್ಲಿ ನಿಧನ ಹೊಂದಿದರು. ಮೃತರು ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷರೂ, ಬಿಲ್ಲವ ಸಮಾಜದ ಮುಖಂಡರಾದ ಜಯ ಸಿ. ಸುವರ್ಣರ ಹಿರಿಯ ಸಹೋದರಿ. ಸಮಾಜ ಸೇವಕ ದಿ. ಮುದ್ದು ಸಾಲ್ಯಾನ್ ಅವರ ಧರ್ಮಪತ್ನಿ. ಕಮಲಾ ಎಂ ಸಾಲ್ಯಾನ್ ಇವರು ಮಕ್ಕಳಾದ ತಾರಾ ಡಾ. ಜಗನ್ನಾಥ್, ಶಶೀಂದ್ರ ಎಂ ಸಾಲ್ಯಾನ್, ರವಿ. ಎಂ ಸಾಲ್ಯಾನ್, […]

ಸಾಮಾಜಿಕ ಅಂತರ ಕಾಯ್ದುಕೊಂಡು ಸ್ವಾತಂತ್ರ್ಯ ದಿನಾಚರಣೆ, ಆಗಸ್ಟ್ 5ರಿಂದ ರಾತ್ರಿ ಕರ್ಫ್ಯೂ ತೆರವು

Wednesday, July 29th, 2020
modi

ನವದೆಹಲಿ: ಕಂಟೈನ್ಮೆಂಟ್ ಝೋನ್ ಗಳನ್ನು ಹೊರತುಪಡಿಸಿ, ಉಳಿದ ಪ್ರದೇಶಗಳಲ್ಲಿ ಆಗಸ್ಟ್ 5ರಿಂದ ಜಿಮ್, ಯೋಗ ಕೇಂದ್ರ ತೆರೆಯಲು ಅನುಮತಿ ನೀಡಲಾಗಿದೆ. ಅಲ್ಲದೆ ರಾತ್ರಿ ಕರ್ಫ್ಯೂ ಅನ್ನು ಸಹ ತೆರವುಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಅನ್ ಲಾಕ್-3 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿ ಹೇಳಿಕೆ ನೀಡಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಅನುಮತಿ ನೀಡಿರುವ ಕೇಂದ್ರ ಸರ್ಕಾರ, ಮೆಟ್ರೋ, ಶಾಲಾ, ಕಾಲೇಜ್ ಗಳು, ಕೋಚಿಂಗ್ ಸೆಂಟರ್ ಗಳು ಮತ್ತು ಚಿತ್ರ ಮಂದಿರಗಳ ಮೇಲಿನ ನಿರ್ಬಂಧವನ್ನು ಆಗಸ್ಟ್ 31ರ ವರೆಗೆ ಮುಂದುವರೆಸಿದೆ. […]

ಜುಲೈ 30 ರಿಂದ ಆನ್‌ಲೈನ್ ಮೂಲಕ 9ನೆಯ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ

Wednesday, July 29th, 2020
Sanathana

ಮಂಗಳೂರು  : ಮೋದಿ ಸರಕಾರ ಕೇಂದ್ರದಲ್ಲಿ ಎರಡನೆಯ ಬಾರಿಗೆ ಬಂದ ಬಳಿಕ ಕಾಶ್ಮೀರಿ ಹಿಂದೂಗಳ ಪುನರ್ವಸತಿಯ ದೃಷ್ಟಿಯಿಂದ ಕಲಮ್ ೩೭೦ ರದ್ದುಗೊಳಿಸುವುದು, ಪೌರತ್ವ ತಿದ್ದುಪಡಿ ಕಾನೂನು (ಸಿ.ಎ.ಎ.), ಸರ್ವೋಚ್ಚ ನ್ಯಾಯಾಲಯವು ರಾಮಮಂದಿರದ ಪರವಾಗಿ ನೀಡಿರುವ ಐತಿಹಾಸಿಕ ತೀರ್ಪು, ಅಲ್ಲದೇ ೫ ಆಗಸ್ಟ್ ೨೦೨೦ ರಂದು ಆಯೋಜಿಸಲಾಗಿರುವ ರಾಮಮಂದಿರದ ಭೂಮಿಪೂಜೆ ಮುಂತಾದ ಸಕಾರಾತ್ಮಕ ವಿಷಯಗಳು ಘಟಿಸುತ್ತಿವೆ. ಇದರಲ್ಲಿ ಪೌರತ್ವ ತಿದ್ದುಪಡಿ ಕಾನೂನು ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಫಲಶ್ರುತಿಯಾಗಿದೆ. ೨೦೧೪ ನೇ ಇಸವಿಯಲ್ಲಿ ‘ಹಿಂದೂ ರಾಷ್ಟ್ರ ಅಧಿವೇಶನದಲ್ಲಿ […]

ಕೇಸರಿ ವಸ್ತ್ರ ಹಾಕಿದ್ದಾರೆಂದು ಸಾಧುವಿನ ಹತ್ಯೆ ಮಾಡಿದ ಮತಾಂಧನಿಗೆ ಶಿಕ್ಷೆ ತೀವ್ರ ಗೊಳಿಸುವಂತೆ ಆಗ್ರಹ

Saturday, July 18th, 2020
Kantiprasad

ಅಬ್ದುಲಾಪುರ : ಇಲ್ಲಿಯ ಒಂದು ಶಿವ ದೇವಸ್ಥಾನದ ಕಮಿಟಿಯ ಉಪಾಧ್ಯಕ್ಷ ಹಾಗೂ ಅರ್ಚಕರೆಂದು ಕಾರ್ಯ ಮಾಡುವ ಕಾಂತಿ ಪ್ರಸಾದ ಈ ಸಾಧುವನ್ನು ಮತಾಂಧ ಮುಸಲ್ಮಾನ ಯುವಕರು ಹಾಡುಹಗಲೇ ಹತ್ಯೆ ಮಾಡಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯು ಈ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತದೆ. ಸಾಧು ಕಾಂತಿ ಪ್ರಸಾದ ಇವರು ಕೇಸರಿ ವಸ್ತ್ರವನ್ನು ಹಾಕಿಕೊಂಡಿದ್ದರೆಂದು ಅನಸ ಕುರೈಶಿ ಈ ಮತಾಂಧನು ಅವರನ್ನು ನಿಂದಿಸಿದನು ಹಾಗೂ ಇದನ್ನು ವಿರೋಧಿಸಿದ್ದರಿಂದ ಮತಾಂಧನು ಹಿಗ್ಗಾಮುಗ್ಗಾ ಥಳಿಸುತ್ತಾ ಆ ಸಾಧುವಿನ ಹತ್ಯೆ ಮಾಡಿದನು. ಇದರಿಂದ ಹಿಂದೂ ಬಹುಸಂಖ್ಯಾತ […]

ಜುಲೈ 18 ರಿಂದ ಭಾರತದಿಂದ 28 ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ

Friday, July 17th, 2020
flight

ಹೊಸದಿಲ್ಲಿ:  ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಕೆಲವು ದೇಶಗಳ ವಿಮಾನಗಳಿಗೆ ಸಂಚರಿಸಲು ಅವಕಾಶ ನೀಡಲಾಗುವುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್‌ ಸಿಂಗ್‌ ಪುರಿ ತಿಳಿಸಿದ್ದಾರೆ. ಈ ಮೂಲಕ ಭಾರತದಿಂದ ಆಂಶಿಕವಾಗಿ ಅಂತಾರಾಷ್ಟ್ರೀಯ ವಿಮಾನ ಹಾರಾಟ ಶುರುವಾದಂತಾಗುತ್ತದೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಭಾರತ ಈಗಾಗಲೇ ಅಮೆರಿಕ ಹಾಗೂ ಫ್ರಾನ್ಸ್‌ನೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ವಿಮಾನಯಾನ ಹಾರಾಟ ಒಪ್ಪಂದಕ್ಕೆ ಸಹಿ ಹಾಕಿದೆ. ಇದರನ್ವಯ ಜುಲೈ 18ರಿಂದ ಆಗಸ್ಟ್‌ 1ರವರೆಗೆ ಏರ್‌ ಫ್ರಾನ್ಸ್‌, ದೆಹಲಿ, ಮುಂಬೈ, ಬೆಂಗಳೂರು ಮತ್ತು ಪ್ಯಾರಿಸ್‌ […]

ಬೈಕ್ ನಲ್ಲಿ ಸ್ಟಂಟ್ ಮಾಡುತ್ತಿದ್ದ ಯುವಕರಿಗೆ ಬುದ್ದಿಮಾತು ಹೇಳಿದ ಕಾರು ಚಾಲಕನ ಕೊಲೆ

Tuesday, July 14th, 2020
Raghuveer Circle

ನವದೆಹಲಿ: ಬೈಕ್ ನಲ್ಲಿ ಸ್ಟಂಟ್ ಮಾಡುತ್ತಿದ್ದ ಯುವಕರಿಗೆ ಹಾಗೆ ಮಾಡಬೇಡಿ ಎಂದಿದ್ದಕ್ಕೆ ಮೂವರು ಹುಡುಗರು ಸೇರಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. ಬುದ್ದಿಮಾತು ಹೇಳಿದ 25 ವರ್ಷದ ಯುವಕನ ಮೇಲೆ ಮೂವರು ಹುಡುಗರು ಹಲ್ಲೆ ಮಾಡಿ ಸಾಯಿಸಿರುವ ಘಟನೆ ಪಶ್ಚಿಮ ದೆಹಲಿಯ ರಘುಬಿರ್ ನಗರದಲ್ಲಿ ನಡೆದಿದೆ. ಮೃತ ಯುವಕನನ್ನು ಮನೀಶ್ ಎಂದು ಗುರುತಿಸಲಾಗಿದ್ದು ಈತ ಖಾಸಗಿ ಕಾರು ಚಾಲಕನಾಗಿದ್ದ. ಈತನನ್ನು ಕೊಂದ ಮೂವರು ಹುಡುಗರು 16-17 ವರ್ಷದವರಾಗಿದ್ದು ಅವರನ್ನು ಬಂಧಿಸಲಾಗಿದೆ. ಘಟನೆ ನಡೆದಿದ್ದು ಜುಲೈ 8ರಂದು. ಮೂವರೂ ಮನೀಶ್ […]

ಮಾಸ್ಕ್ ಧರಿಸದೆ ವಾಹನದಲ್ಲಿ ಸಂಚರಿಸುತ್ತಿದ್ದ ಎಂಎಲ್ಎ ಮಗನನ್ನು ಪ್ರಶ್ನಿಸಿದಕ್ಕೆ ಮಹಿಳಾ ಪೊಲೀಸ್ ಪೇದೆ ಕೆಲಸವನ್ನೇ ಬೇಕಾಯಿತಂತೆ!

Sunday, July 12th, 2020
sunithayadav

ಸೂರತ್ : ಕರೊನಾ ಕರ್ಫ್ಯೂ ನಿಯಮಗಳನ್ನು ಉಲ್ಲಂಘಿಸಿ  ವಾಹನದಲ್ಲಿ ಮಾಸ್ಕ್ ಧರಿಸದೆ ತೆರಳುತ್ತಿದ್ದ ಐವರನ್ನು ಪ್ರಶ್ನಿಸಿದಕ್ಕೆ ಮಹಿಳಾ ಪೊಲೀಸ್ ಪೇದೆಯೋರ್ವರು ಕೆಲಸವನ್ನೇ ಬಿಡಬೇಕಾದ ಘಟನೆ ಗುಜರಾತ್ನ ಸೂರತ್ನಲ್ಲಿ ನಡೆದಿದೆ. ರಾತ್ರಿ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಪೇದೆಯೋರ್ವರು ಎಂಎಲ್ಎ ಎಂದು ನಾಮಫಲಕ ಹಾಕಿ ಮಾಸ್ಕ್ ಧರಿಸದೆ ವಾಹನದಲ್ಲಿ ಸಂಚರಿಸುತ್ತಿದ್ದ ಐವರನ್ನು ಪ್ರಶ್ನಿಸಿದರು, ಆದರೆ ಹಾಗೇ ಪ್ರಶ್ನೆ ಮಾಡಿದ್ದೇ ತಪ್ಪಾಗಿ ಹೋಯ್ತು ಅವರಿಗೆ ಕೆಲಸಕ್ಕೆ ರಾಜೀನಾಮೆ ನೀಡಬೇಕಾದ ಪರಿಸ್ಥಿತಿಗೆ ಬಂತು.  ಅವರ ಮೇಲಾಧಿಕಾರಿ ಆಕೆಯನ್ನು ರಾಜೀನಾಮೆ ಕೊಡಿಸುವಂತೆ ಮಾಡಿದ್ದರಂತೆ. ಗುಜರಾತ್ನ ಆರೋಗ್ಯ ಸಚಿವರಾದ ಕುಮಾರ್ ಕನನಿ ಅವರ ಮಗ ಪ್ರಕಾಶ್ ಮತ್ತು ಮಹಿಳಾ ಪೇದೆ ಸುನಿತಾ ಯಾದವ್ ನಡುವಿನ ಸಂಭಾಷಣೆಯ ಆಡಿಯೋ […]

ವಿಕಾಸ್ ದುಬೆ ಎನ್‌ಕೌಂಟರ್‌ ಆಗುವ ವಿಷಯ ಮೊದಲೇ ತಿಳಿದಿತ್ತು !

Friday, July 10th, 2020
vikas-dube

ನವದೆಹಲಿ: ಕಳೆದ ಶುಕ್ರವಾರ ಜುಲೈ 3, ಕುಖ್ಯಾತ ರೌಡಿ ಶೀಟರ್‌ ವಿಕಾಸ್‌ ದುಬೆಯನ್ನು ಬಂಧಿಸಲು ಪೊಲೀಸರು ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಬಿಕ್ರು ಗ್ರಾಮಕ್ಕೆ ತೆರಳಿದ್ದರು. ಆದರೆ, ಪೊಲೀಸರ ಬರುವಿಕೆ ಮಾಹಿತಿ ಪಡೆದಿದ್ದ ದುಬೆ ಗ್ಯಾಂಗ್‌, ಪೊಲೀಸರ ಮೇಲೆಯೇ ದಾಳಿ ನಡೆಸಿತ್ತು. ಏಕಾಏಕಿ ನಡೆದ ದಾಳಿಯಲ್ಲಿ ಡಿವೈಎಸ್‌ಪಿ ಸೇರಿದಂತೆ ಎಂಟು ಪೊಲೀಸರು ಹತ್ಯೆಯಾದರು. ಗುರವಾರ  ಕಾನ್ಪುರದ ಮಹಾಕಾಲ ದೇವಾಲಯದಲ್ಲಿ ಪೊಲೀಸರು ಆತನನ್ನು ವಶಕ್ಕೆ ಪಡೆಯುತ್ತಲೇ, ಈತನ ಎನ್‌ಕೌಂಟರ್‌ ಆಗುವ ಸಾಧ್ಯತೆಯನ್ನು ಮೊದಲೇ ಅರಿತಿದ್ದ ಕೆಲವರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು. […]

ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ, ಸ್ಥಳೀಯ ಬಿಜೆಪಿ ನಾಯಕ ಮತ್ತು ಕುಟುಂಬ ಸದಸ್ಯರ ಹತ್ಯೆ

Thursday, July 9th, 2020
vashim ahamed

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮೆರೆದಿದ್ದಾರೆ. ಬಂಡಿಪೊರ ಪ್ರದೇಶದಲ್ಲಿ ಉಗ್ರಗಾಮಿಗಳು ಬಿಜೆಪಿಯ ಸ್ಥಳೀಯ ನಾಯಕ ವಾಸೀಂ ಅಹ್ಮದ್ ಬಾರಿ ಮತ್ತು ಅವರ ಕುಟುಂಬ ಸದಸ್ಯರನ್ನು ಬುಧವಾರ ಗುಂಡಿಕ್ಕಿ ಕೊಂದಿದ್ದಾರೆ. ಘಟನೆಯಲ್ಲಿ ವಾಸೀಂ ಜತೆಗೆ ಅವರ ಸೋದರ ಉಮರ್ ಬಾರಿ ಮತ್ತು ತಂದೆ ಬಶೀರ್ ಅಹ್ಮದ್ ಕೂಡ ಹತ್ಯೆಗೀಡಾಗಿದ್ದಾರೆ. ವಾಸೀಂ ಅಹ್ಮದ್ ಅವರು ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರು. ಬಂಡಿಪೊರದಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಈ ಮೂವರೂ ತಮ್ಮ ಅಂಗಡಿಯಲ್ಲಿ ಇದ್ದ ವೇಳೆಗೆ […]

ಮೊದಲ ಬಾರಿಗೆ ಅಮರನಾಥ ಗುಹಾಲಿಂಗ ಆರತಿಯ ನೇರ ಪ್ರಸಾರಕ್ಕೆ ವ್ಯವಸ್ಥೆ!

Tuesday, July 7th, 2020
Amarnath

ಕಾಶ್ಮೀರ: ಅಮರನಾಥ ಗುಹೆಯಲ್ಲಿನ ಮಂಜಿನ ಶಿವಲಿಂಗಕ್ಕೆ ನಡೆಯುವ ಆರತಿಯನ್ನು ಇತಿಹಾಸದಲ್ಲೇ ಮೊದಲ ಬಾರಿಗೆ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ಯಾತ್ರಾರ್ಥಿಗಳಿಗೆ ನಿರ್ಬಂಧ ವಿಧಿಸಿರುವುದರಿಂದ ಅಮರನಾಥ ದೇವಾಲಯ ಮಂಡಳಿ, ಅಮರನಾಥ ಗುಹೆಯ ಶಿವಲಿಂಗಕ್ಕೆ ನಡೆಯುವ ಆರತಿಯನ್ನು ಡಿಡಿ ವಾಹಿನಿಯಲ್ಲಿ ಮತ್ತು ಆನ್  ಲೈನ್ ಪ್ರಸಾರ ಮಾಡಲು ನಿರ್ಧರಿಸಿದ್ದು, ಇದಕ್ಕೆ ಬೇಕಾದ ವ್ಯವಸ್ಥೆಗಳನ್ನು ನಡೆಸಿದೆ. ಈ ಹಿಂದಿನ ಯೋಜನೆಯ ಪ್ರಕಾರ ಜಮ್ಮು-ಕಾಶ್ಮೀರ ಆಡಳಿತ ಅಮರನಾಥ ಯಾತ್ರೆಯ ವೇಳೆ 500 ಯಾತ್ರಾರ್ಥಿಗಳಿಗೆ ಮಾತ್ರ ಪ್ರವೇಶ ಕಲ್ಪಿಸುವುದಕ್ಕೆ ನಿರ್ಧರಿಸಿತ್ತು. […]