ಕೋವಿಡ್ ಸಂಕಷ್ಟ: ಮೊಯರ್ ಸೇವಾ ಸಮಿತಿಯಿಂದ ಸಹಾಯ

Tuesday, June 2nd, 2020
Moyar

ಮುಂಬಯಿ : ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಕರಾವಳಿ ಪ್ರದೇಶದಿಂದ ಇತರ ಸಮುದಾಯದಂತೆ ಶತಮಾನದ ಹಿಂದೆಯೇ ಹೊಟ್ಟೆಪಾಡಿಗಾಗಿ ಮುಂಬಯಿ ಸೇರಿ ಹಗಲು ದುಡಿದು ರಾತ್ರಿ ಶಾಲೆಯಲ್ಲಿ ಕಲಿತು ತವರೂರಲ್ಲೂ ಕೆಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶೈಕ್ಷಣಿಕ ಕ್ಷೇತ್ರದಲ್ಲೂ ಸಾಧನೆ ಮಾಡಿದ ಬೋವಿ ಮೋಯಾ ಸಮುದಾಯವು ಮಹಾನಗರದಲ್ಲಿ ಅನೇಕ ಸಂಘಟನೆಗಳನ್ನು ಕಟ್ಟಿ ಸಮಾಜ ಸೇವಾ ನಿರತವಾಗಿದೆ. ಮುಂಬಯಿಯಲ್ಲಿ ಬೋವಿ ಮೋಯಾ ಸಮಾಜದ ಅನೇಕರು ಲೋಕ್ ಡೌನ್ ನಿಂದಾಗಿ ವಿವಿಧ ರೀತಿಯ ಅನಾನುಕೂಲತೆಯನ್ನು ಅನುಭವಿಸುತ್ತಿದ್ದು ಇದನ್ನರಿತ ಸಮಾಜದ ಸಮಾನ ಮನಸ್ಸಿನ […]

ವಿಡಿಯೋ ಕಾನ್ಫರೆನ್ಸ್ : ಮುಂಬಯಿ ಕನ್ನಡಿಗರ ಸಮಸ್ಯೆ ಬಗ್ಗೆ ಸಂಸದರ ಮೂಲಕ ಮುಖ್ಯ ಮಂತ್ರಿಗೆ ಮನವಿ

Sunday, May 31st, 2020
Jayakrishna

ಮುಂಬಯಿ : ಕರಾವಳಿಯ ಮೂರು ಜಿಲ್ಲೆಗಳ ಅಭಿವೃದ್ದಿಗಾಗಿ ಕಳೆದ ಹಲವಾರು ವರ್ಷಗಳಿಂದ ಯಶಸ್ವಿ ಹೋರಾಟ ನಡೆಸುತ್ತಾ ಬಂದಿರುವ, ವಿವಿಧ ಸಮಾಜದ ಪ್ರಮುಖರನ್ನೊಳಗೊಂಡ ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಮುಂಬಯಿ ಹಾಗೂ ಮಹಾರಾಷ್ಟದಲ್ಲಿರುವ ತುಳು-ಕನ್ನಡಿಗರಿಗೆ ತಾಯ್ನಾಡಿಗೆ ಪ್ರವೇಶಿಸಲು ಅವಕಾಶವನ್ನು ಕೋರಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕರೂ, ಅಧ್ಯಕ್ಷರೂ ಆದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರ ನೇತೃತ್ವದಲ್ಲಿ ಸಮಿತಿ ಯ ವಿಡಿಯೋ ಕಾನ್ಫರೆನ್ಸ್ ಸಭೆ ನಡೆದಿದ್ದು ಇದರಲ್ಲಿ ಮಹಾನಗರದ ವಿವಿಧ ಸಮುದಾಯದ ೪೨ ಕ್ಕೂ […]

ರಾಯಚೂರಿನಲ್ಲಿ ಫಾರ್ಮಾ ಪಾರ್ಕ್‌ ಸ್ಥಾಪನೆಗೆ ಕೇಂದ್ರ ಉದ್ದೇಶ : ಡಿ ವಿ ಸದಾನಂದ ಗೌಡ

Saturday, May 30th, 2020
sadananda-gowda

ನವದೆಹಲಿ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸ್ವಾವಲಂಬಿ ಭಾರತ ಪರಿಕಲ್ಪನೆಯೊಂದಿಗೆ ನಮ್ಮ ಇಲಾಖೆಯು ಹೆಜ್ಜೆಹಾಕುತ್ತಿದೆ. ಮುಂಬರುವ ದಿನಗಳಲ್ಲಿ ಔಷಧ, ರಸಗೊಬ್ಬರ ಹಾಗೂ ರಾಸಾಯನಿಕ ವಲಯದಲ್ಲಿ ದೇಶವನ್ನು ಸಂಪೂರ್ಣ ಸ್ವಾವಲಂಬಿ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಹೇಳಿದ್ದಾರೆ. ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಒಂದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಅವರು ಔಷಧ ಮುಂತಾದ […]

ಮುಂಬಯಿ ಕನ್ನಡಿಗರ ಬಗ್ಗೆ ಕರ್ನಾಟಕ ಸರಕಾರದ ಮಲತಾಯಿ ಧೋರಣೆ : ಸಂಸದ ಗೋಪಾಲ ಶೆಟ್ಟಿಯವರಿಗೆ ಮನವಿ

Saturday, May 30th, 2020
Mumbai Mp

ಮುಂಬಯಿ : ಜೂನ್ 15 ರ ತನಕ ಹೊರರಾಜ್ಯದವರನ್ನು ಕರ್ನಾಟಕ ಪ್ರವೇಶಿಸಲು ಕರ್ನಾಟಕ ಸರಕಾರವು ನಿಶೇಧವನ್ನು ಜಾರಿಮಾಡಿದ್ದ ಬಗ್ಗೆ ಇಲ್ಲಿನ ತುಳು ಕನ್ನಡಿಗರು ಅಸಮಧಾನ ವ್ಯಕ್ತಪಡಿಸಿದ್ದು ಮುಂಬಯಿಯ ವಿವಿಧ ಸಮಾಜದ ಪ್ರಮುಖರು ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಮತ್ತು ಉತ್ತರ ಮುಂಬಯಿ ಬಿಜೆಪಿ ಉಪಾಧ್ಯಕ್ಷರಾದ ಎರ್ಮಾಳು ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ಇಂದು ಮುಂಜಾನೆ ಸಂಸದ ಗೋಪಾಲ ಶೆಟ್ಟಿಯವರನ್ನು ಸಂಪರ್ಕಿಸಿ ತುಳು ಕನ್ನಡಿಗರ ಸಮಸ್ಯೆಯನ್ನು ಅವರ ಮೂಲಕ ಕರ್ನಾಟಕದ ಮುಖ್ಯ ಮಂತ್ರಿಯವರ ಗಮನಕ್ಕೆ ಹಾಗೂ […]

ಲೋಕ್ ಡೌನ್ ಸಂದರ್ಭದಲ್ಲಿ ವೈದ್ಯಕೀಯ ಸೇವಾನಿರತರಾದವರಿಗೆ ಉದ್ಯಮಿ ಎನ್. ಟಿ. ಪೂಜಾರಿಯವರ ಸಹಾಯ

Saturday, May 30th, 2020
NT-poojary

ಮುಂಬಯಿ : ಮಹಾನಗರದ ಜನಪ್ರಿಯ ಹೋಟೇಲು ಉದ್ಯಮಿ, ಬಿಲ್ಲವ ಚೇಂಬರ್ ಆಫ್ ಕಾರ್ಮರ್ಸ್ ಮತ್ತು ಇಂಡಷ್ಟ್ರೀಸ್ ನ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿಯವರು ಜನಸಾಮಾನ್ಯರ ಸೇವೆಯಲ್ಲಿ ಈಗಾಗಲೇ ಜನಪ್ರಿಯರಾಗಿದ್ದು. ಕಳೆದ ಹಲವಾರು ವರ್ಷಗಳಿಂದ ತನ್ನ ತವರೂರಲ್ಲಿ ಅನೇಕ ಜೋಡಿಗಳಿಗೆ ತನ್ನ ಸ್ವಂಥ ಖರ್ಚಿನಿಂದ ವಿವಾಹ ಮಾಡಿಸುತ್ತಿರುವ ಕೊಡುಗೈ ದಾನಿಯಾಗಿರುವರು. ಇದೀಗ ಲೋಕ್ ಡೌನ್ ನಿಂದಾಗಿ ಆರಂಭದ ದಿನದಿಂದಲೇ ಮುಂಬಯಿ ಮಹಾನರಗದ ಪ್ರಮುಖ ಬಾಗಗಳಲ್ಲಿರುವ ’ಬಿ’ ಹಾಗೂ ’ಸಿ’ ವಾರ್ಡ್ ನ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಇನ್ನೂರಕ್ಕೂ ಅಧಿಕ […]

ಮಿಡತೆಗಳ ದಾಳಿಯಿಂದ ಭಾರತದಲ್ಲಿ ಮತ್ತೊಂದು ಆತಂಕ

Thursday, May 28th, 2020
grassoper

ಜೈಪುರ : ಒಂದೆಡೆ ದೇಶದಲ್ಲಿ ಕರೋನ ತೀವ್ರ ಆತಂಕ ಸೃಷ್ಟಿಸಿದೆ. ಮತ್ತೊಂದೆಡೆ ಗಾಯದ ಮೇಲೆ ಬರೆಯೆಳೆದಂತೆ ಅಂಫಾನ್ ಚಂಡಮಾರುತದ ಭೀಕರಕ್ಕೆ ಒರಿಸ್ಸಾ ಮತ್ತು ಪಶ್ಚಿಮ ಬಂಗಾಳ ತತ್ತರಿಸಿ ಹೋಗಿವೆ. ಇವುಗಳ ಜೊತೆಯಲ್ಲಿ ಮತ್ತೊಂದು ಆಘಾತ ಬಂದೆರಗಿದೆ. ಕೆಲವು ರಾಜ್ಯಗಳಲ್ಲಿ ಮಿಡತೆಗಳ ದಾಳಿ ಮತ್ತೊಂದು ಭೀಕರತೆ ಸೃಷ್ಟಿಸಿದೆ. ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ಮಿಡತೆಗಳ ಗುಂಪೊಂದು ಕಂಡು ಬಂದಿದೆ. ನಂತರ, ಉಜ್ಜಯಿನಿ ಜಿಲ್ಲೆಯ ರಾಣಾ ಹೆಡಾ ಗ್ರಾಮದಲ್ಲಿ ಲಕ್ಷಾಂತರ ಮಿಡತೆಗಳು ಕಂಡು ಬಂದಿವೆ. ನಂತರ ಅವು ರಾಜಸ್ಥಾನದ ಜೈಪುರದ […]

ಹೊರನಾಡ ಕನ್ನಡಿಗರನ್ನು ರೈಲಲ್ಲಿ ತವರೂರಿಗೆ ತೆರಳಲು ಸರಕಾರ ಅವಕಾಶ ನೀಡಲಿ- ಎಲ್. ವಿ. ಅಮೀನ್

Tuesday, May 26th, 2020
Lv-amin

ಮುಂಬಯಿ : ಕೊರೋನ ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಕರಾವಳಿಯ ಎಲ್ಲಾ ರಾಜಕೀಯ ಧುರೀಣರು ತಮ್ಮಿಂದಾಗುವ ಸಹಕಾರ ಪ್ರೋತ್ಸಾಹ ನೀಡುತ್ತಿರುವುದು ಅಭಿಮಾನದ ಸಂಗತಿ. ಆದರೆ ಈ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದ ತುಳು-ಕನ್ನಡಿಗರನ್ನು ರೈಲಿನಲ್ಲಿ ಸುರಕ್ಷಿತವಾಗಿ ತಾಯ್ನಾಡಿಗೆ ತೆರಳಲು ಕರ್ನಾಟಕ ಸರಕಾರವು ಅವಕಾಶ ನೀಡಬೇಕು ಎಂದು ಮುಂಬಯಿ ಮಹಾನಗರದ ಉಧ್ಯಮಿ, ಸಮಾಜ ಸೇವಕ, ಬಿಲ್ಲವರ ಅಸೋಷಿಯೇಶನಿನ ಮಾಜಿ ಅಧ್ಯಕ್ಷ ಹಾಗೂ ದಕ್ಷಿಣ ಭಾರತ ಬಿಜೆಪಿ ಘಟಕದ ಮುಂಬಯಿ ವಲಯದ ಮಾಜಿ ಅಧ್ಯಕ್ಷರೂ ಆದ ಎಲ್. ವಿ. ಅಮೀನ್ ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ […]

ಕತಾರಿನಲ್ಲಿ ’ಕರೋನಾ-19’ ಸಂಕಷ್ಟಕ್ಕೀಡಾದವರಿಗೆ ನೆರವಾಗುವ ಕನ್ನಡಿಗರ ಮಾನವೀಯತೆಯ ಸ್ಟೋರಿ

Monday, May 25th, 2020
qatar kannadiga

ಕತಾರ್ :  ದಿನೇ ದಿನೇ ಕರೋನ ಮಹಾಮಾರಿಯ ತಾಂಡವ ಹೆಚ್ಚುತ್ತಿದೆ. ಒಂದೆಡೆ ಪೀಡಿತರಾಗಿ ರೋಗಗ್ರಸ್ಥ ರಾಗಿರುವವರ ಸಂಖ್ಯೆ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಕೆಲಸ ಕಳೆದುಕೊಂಡು, ಸಂಬಳವಿಲ್ಲದೆ, ಹೊಟ್ಟೆಗೆ ಊಟವೂ ಸಿಗದಂತಹ ಪರಿಸ್ಥಿತಿ ಹಲವರನ್ನು ನಿರಾಶ್ರಿತರನ್ನಾಗಿಸಿದೆ. ಕತಾರಿನ ಭಾರತೀಯ ರಾಯಭಾರಿ ಕಾರ್ಯಾಲಯದಡಿಯಲ್ಲಿ ಕಾರ್ಯನಿರತವಾಗಿರುವ ’ಭಾರತೀಯ ಸಮುದಾಯ ಹಿತೈಶಿ ವೇದಿಕೆ’ (ಐ.ಸಿ.ಬಿ.ಎಫ಼್) ಸಂಸ್ಥೆಯು ಇಂತಹ ನಿರಾಶ್ರಿತರನ್ನು ಹುಡುಕಿ ಅವರಿಗೆ ಸಹಾಯ ಹಸ್ತ ನೀಡುತ್ತಿದೆ. ಪ್ರತ್ಯೇಕವಾಗಿ ಕನ್ನಡಿಗರಾದ ಶ್ರೀ ಮಹೇಶ್ ಗೌಡ, ಉಪಾಧ್ಯಕ್ಷರು, ಐ.ಸಿ.ಬಿ.ಎಫ಼್ ಮತ್ತು ಶ್ರೀ ಸುಬ್ರಮಣ್ಯ ಹೆಬ್ಬಾಗಿಲು, ಜಂಟಿ ಕಾರ್ಯದರ್ಶಿ, […]

ಮುಂಬಯಿ ವೈದ್ಯರ ನಿರ್ಲಕ್ಷ, ಸಾಯನ್ ನಲ್ಲಿ ಒಂದೂವರೆ ತಿಂಗಳ ಗರ್ಭಿಣಿ ವಿಧಿವಶ

Monday, May 25th, 2020
Sujatha-Praveen

ಮುಂಬಯಿ : ಸಾಯನ್ ನ ನಿವಾಸಿ ಉದ್ಯಮಿ, ಕುಲಾಲ ಸಂಘ ಮುಂಬಯಿಯ ಸಕ್ರಿಯ ಕಾರ್ಯಕರ್ತ ಪ್ರವೀಣ್ ಮೂಲ್ಯ ಇವರ ಪತ್ನಿ ಸುಜಾತ ಪ್ರವೀಣ್ ಮೂಲ್ಯ (27 ) ಅವರು ಒಂದೂವರೆ ತಿಂಗಳ ಗರ್ಭಿಣಿಯಾಗಿದ್ದು 3 ದಿನಗಳ ಹಿಂದೆ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಚಿಕಿತ್ಸೆಗಾಗಿ ಚೆಂಬೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು ಅಲ್ಲಿ ಶಸ್ತ್ರ ಚಿಕಿತ್ಸೆ ಮಾಡುವುದು ಅನಿವಾರ್ಯ ಎಂದು ಹೇಳಿದ ಕಾರಣ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಮೂರು ದಿನಗಳ ನಂತರ, ಮೇ. 24 ರಂದು ಇವರನ್ನು ಆಸ್ಪತ್ರೆಯಿಂದ […]

ಇಂಟರ್​ನೆಟ್​, ಮೊಬೈಲ್​ಫೋನ್​, ಸ್ಥಿರದೂರವಾಣಿಗಳು ಶೀಘ್ರದಲ್ಲೇ ಸ್ತಬ್ಧವಾಗಲಿದೆ !

Monday, May 25th, 2020
earth-magnet

ನವದೆಹಲಿ : ಶೀಘ್ರದಲ್ಲೇ ಉಪಗ್ರಹ ವ್ಯವಸ್ಥೆ ಹಾಗೂ ಇಂಟರ್ನೆಟ್, ಮೊಬೈಲ್ಫೋನ್ ಅಲ್ಲದೆ ಸ್ಥಿರದೂರವಾಣಿಗಳು ಸೇರಿ ಆಧುನಿಕ ಸಂವಹನ ವ್ಯವಸ್ಥೆಯೇ ಸ್ತಬ್ಧವಾಗಲಿದೆ ಎಂಬ ಆಘಾತಕಾರಿ ಮಾಹಿತಿಯೊಂದು ಸಂಶೋಧನಾ ಮೂಲವೊಂದರಿಂದ ಬಂದಿದೆ. ಮನುಷ್ಯ ಸಹಿತ ಭೂಮಿ ಮೇಲಿನ ಸಕಲ ಜೀವಿಗಳೂ ವಿನಾಶವಾಗುತ್ತವೆ ಎಂಬ ಮಾತುಗಳನ್ನು ಸಾಕಷ್ಟು ಬಾರಿ ಕೇಳಿದ್ದೇವೆ ಅದು ಆಗಲಿಲ್ಲ, ಈಗ ಬಂದಿರುವ ಸುದ್ದಿ ಅತ್ಯಂತ ಖಚಿತ ಮೂಲದಿಂದ  ಬಂದಿದೆ ಅಂತ ಜನ ಆತಂಕಗೊಂಡಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಭೂಮಿ ಮೇಲಿನ ಗುರುತ್ವಾಕರ್ಷಣ ಶಕ್ತಿ ಶೇ.10 ರಷ್ಟು ದುರ್ಭಲಗೊಳ್ಳುತ್ತಿದೆ,  ಸೌರ ವಿಕಿರಣದಿಂದ ನಮಗೆ […]