ಅಗಸ್ಟ್ 31ರ ವರೆಗೆ ಸಾಲದ ಕಂತು ಕಟ್ಟುವಂತಿಲ್ಲ : ದೇಶದ ಜನತೆಗೆ ಬಿಗ್ ರಿಲೀಫ್ ಕೊಟ್ಟ ಆರ್ ಬಿಐ

Friday, May 22nd, 2020
Shashikanth-das

ಪುತ್ತೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆ ಕುಸಿತವಾಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಲದ ಮೇಲಿನ ಕಂತುಗಳ ಪಾವತಿಗೆ ಮತ್ತೆ ಮೂರು ತಿಂಗಳ ಕಾಲ ವಿನಾಯಿತಿ ನೀಡಲಾಗಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ದೇಶದಾದ್ಯಂತ ಲಾಕ್ ಡೌನ್ 4.0 ಹೇರಿಕೆಯಾಗಿರುವ ಬೆನ್ನಲ್ಲೇ ಸುದ್ದಿಗೋಷ್ಟಿ ನಡೆಸಿರುವ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಈ ಹಿಂದೆ ಮೇ 31ರ ವರೆಗೂ ಇಎಂಐ ಪಾವತಿಗೆ ಮೂರು ತಿಂಗಳ ವಿನಾಯಿತಿಯನ್ನು ನೀಡಲಾಗಿತ್ತು. […]

ಉತ್ತರ ಮುಂಬಯಿಯ ಬಿಜೆಪಿ ಉಪಾಧ್ಯಕ್ಷ ಎರ್ಮಾಳು ಹರೀಶ್ ಶೆಟ್ಟಿಗೆ ಅಭಿನಂದನೆ

Friday, May 22nd, 2020
billava association

ಮುಂಬಯಿ  : ಇತ್ತೀಚೆಗೆ ಉತ್ತರ ಮುಂಬಯಿಯ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕಗೊಂಡ ಸಮಾಜ ಸೇವಕ, ಹೋಟೇಲು ಉದ್ಯಮಿ ಎರ್ಮಾಳು ಹರೀಶ್ ಶೆಟ್ಟಿಯವರನ್ನು ಬಿಲ್ಲವರ ಅಸೋಷಿಯೇಶನ್ ಮುಂಬಯಿಯ ಪರವಾಗಿ ಅಭಿನಂದಿಸಲಾಯಿತು. ಅಶೋಷಿಯೇಶನಿನ ಬೊರಿವಲಿ ಸ್ಥಳೀಯ ಸಮಿತಿಯ ಉಪಕಾರ್ಯಾಧ್ಯಕ್ಷ ರಜಿತ್ ಸುವರ್ಣ, ಭಾರತ್ ಬ್ಯಾಂಕಿನ ನಿರ್ದೇಶಕ ಪ್ರೇಮನಾಥ ಕೋಟ್ಯಾನ್, ಅಸೋಷಿಯೇಶನ್ ನ ಸದಸ್ಯರುಗಳಾದ ಲತೀಶ್ ಪೂಜಾರಿ ಮತ್ತು ಈಶ್ವರ ಎಂ. ಐಲ್ ಉಪಸ್ಥಿತರಿದ್ದರು.

ರಾಷ್ಟ್ರವ್ಯಾಪಿ ಲಾಕ್ ಡೌನ್ ಮೇ 31ರವರೆಗೂ ಮುಂದುವರಿಕೆ, ಗರ್ಭಿಣಿಯರು, ಮಕ್ಕಳು, ವೃದ್ಧರು ಮನೆಯ ಹೊರಗೆ ಬರುವಂತಿಲ್ಲ

Sunday, May 17th, 2020
lockdown

ನವದೆಹಲಿ: ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ  ಮೇ 31ರ ವರೆಗೂ ದೇಶಾದ್ಯಂತ ಲಾಕ್ ಡೌನ್ ವಿಸ್ತರಣೆಯಾಗಿದ್ದು, ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳು, ರಾಜ್ಯಸರ್ಕಾರ , ಕೇಂದ್ರಾಡಳಿತ ಸರ್ಕಾರಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ ಕೋವಿಡ್ ಸಂಬಂಧಿತ ರಾಷ್ಟ್ರವ್ಯಾಪಿ ಲಾಕ್ ಡೌನ್ ಇನ್ನೆರಡು ವಾರಗಳ ಕಾಲ ಮುಂದುವರಿಯಲಿದೆ.   ದೇಶಾದ್ಯಂತ ಈ ಎಲ್ಲಾ ಚಟುವಟಿಕೆಗಳ ಮೇಲೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಕೇಂದ್ರ ಗೃಹಸಚಿವಾಲಯದ ಅನುಮತಿ ಮೇರೆಗೆ ತುರ್ತು ವೈದ್ಯಕೀಯ […]

ಹೆಜ್ಮಾಡಿಯ ಪಿಟೀಲು ವಾದಕಿ ಸುಶೀಲಾ ಎಂ. ಸುವರ್ಣ ನಿಧನ

Sunday, May 17th, 2020
sushila

ಮುಂಬಯಿ: ಮುಂಬಯಿಯ ಯ ಪ್ರಸಿದ್ದ ನಾಟ್ಯಾಲಯ ಅರುಣೋದಯ ಕಲಾ ನಿಕೇತನದ ಗುರು. ಡಾ. ಮೀನಾಕ್ಷಿ ರಾಜು ಶ್ರೀಯಾನ್ ಮತ್ತು ಸ್ಥಾಪಕರಾದ ದಿ. ಗುರು ಎಮ್ ಎನ್. ಸುವರ್ಣ ರವರ ಧರ್ಮಪತ್ನಿ ಶ್ರೀಮತಿ ಸುಶೀಲ ಮಾಹಬಲಾ ಸುವರ್ಣರವರು (82) ಇವರು ಮೇ. 15 ರಂದು ಅಪಾರಹ್ನ ಹೃದಯಘಾತ ದಿಂದ ಚೆಂಬೂರಿನ ಸ್ವಗೃಹದಲ್ಲಿ ನಿಧನ ಹೊಂದಿದರು. ಮೂಲತ: ಮಂಗಳೂರಿನ ಮೂಲ್ಕಿ ಮತ್ತು ಹೆಜ್ಮಾಡಿಯರಾಗಿದ್ದು, ಅರುಣೋದಯ ಕಲಾ ನಿಕೇತನ ಸ್ಥಾಪನೆಯಲ್ಲಿ ದಿವಂಗತ. ಗುರು ಎಮ್ ಎನ್ ಸುವರ್ಣರ ಜೊತೆಯಲ್ಲಿ ದುಡಿದು ಪಿಟೀಲು […]

ಲಾಕ್ ಡೌನ್ ಸಂದರ್ಭದಲ್ಲಿ ಮುಂಬಯಿ ಜನತೆಯ ಹಸಿವು ನೀಗಿಸುವ ಹೋಟೆಲು ಉದ್ಯಮಿ, ಇನ್ನಂಜೆ ಶಶಿಧರ ಕೆ. ಶೆಟ್ಟಿ

Sunday, May 17th, 2020
shashidhara shetty

ಮುಂಬಯಿ : ಕೊರೋನಾ ಮಹಾಮಾರಿಯಿಂದಾಗಿ ಲೋಕ್ ಡೌನ್ ನ ಅಂಧಕಾರದಲ್ಲಿ ಮುಂಬಯಿ ಮಹಾನಗರ ಹಾಗೂ ಉಪನಗರಗಳು ಸಂಕಷ್ಟವನ್ನು ಅನುಭವಿಸುತ್ತಿರುವ ಈ ಸಮಯದಲ್ಲಿ ತವರೂರಲ್ಲಿ ಇದ್ದೂ ಮುಂಬಯಿಯಲ್ಲಿರುವ ತುಳು ಕನ್ನಡಿಗರ ಬಗ್ಗೆ ಕಾಳಜಿ ವಹಿಸುತ್ತಿದ್ದವರು ನಲಾಸೋಪಾರದ ಜನಪ್ರಿಯ ಹೋಟೇಲು ಉದ್ಯಮಿ ಇನ್ನಂಜೆ ಶಶಿಧರ ಕೆ. ಶೆಟ್ಟಿ ಇವರು. ಬಂಟರ ಸಂಘ ಮುಂಬಯಿ ವಸಯಿ-ದಹಾಣು ಪ್ರಾದೇಶಿಕ ಸಮಿತಿಯ ಸಂಚಾಲಕರೂ ಆದ ಇನ್ನಂಜೆ ಶಶಿಧರ ಕೆ. ಶೆಟ್ಟಿ ಯವರು ಲಾಕ್ ಡೌನ್ ನಿಂದಾಗಿ ಊರಲ್ಲಿದ್ದು ಮುಂಬಯಿಗೆ ಬರಲು ಅಸಾಧ್ಯವಾದರೂ, ಲಾಕ್ ಡೌನ್ […]

ಮುಂಬಯಿ ಸಂಸದ ಮತ್ತು ಸಮಾಜ ಸೇವಕರಿಂದ ಮಂಗಳೂರಿಗೆ ಉಚಿತ ಬಸ್ ಸೇವೆ

Thursday, May 14th, 2020
harish Shetty

ಮುಂಬಯಿ : ಮೂರು ದಿನಗಳ ಹಿಂದೆ ಮುಂಬಯಿಯಿಂದ ಮಂಗಳೂರಿಗೆ ಬಸ್ಸು ಸೇವೆಯನ್ನು ಪ್ರಾರಂಭಿಸಿ ಅತೀ ಅಗತ್ಯವಿರುವ ತುಳು ಕನ್ನಡಿಗರಿಗೆ ಸಹಕರಿಸಿ ಯಶಸ್ವಿಯಾಗಿದ್ದು ಇದೀಗ ಪುನ: ಉತ್ತರ ಮುಂಬಯಿಯ ಜನಪ್ರಿಯ ಸಂಸದ ಗೋಪಾಲ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಸಮಾಜ ಸೇವಕ ಇತ್ತೀಚೆಗೆ ಉತ್ತರ ಮುಂಬಯಿ ಬಿ.ಜೆ.ಪಿ. ಪಕ್ಷದ ಉಪಾಧ್ಯಕ್ಷರಾಗಿ ಆಯ್ಕೆಯಾದ ಎರ್ಮಾಳ್ ಹರೀಶ್ ಶೆಟ್ಟಿಯವರ ಪ್ರಯತ್ನದಿಂದ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿಯ ನೂತನ ಯೋಜನೆ ಸಮಿತಿಯ ಕಾರ್ಯಾಧ್ಯಕ್ಷ ಮುಂಡಪ್ಪ ಎಸ್. […]

ಉದ್ಯಮ ವಲಯಕ್ಕೆ ತುರ್ತು ಸಾಲ, 12 ತಿಂಗಳ ಮರುಪಾವತಿಗೆ ವಿನಾಯಿತಿ – ವಿಶೇಷ ಪ್ಯಾಕೇಜ್

Wednesday, May 13th, 2020
Nirmala

ನವದೆಹಲಿ:  ಲಾಕ್ ಡೌನ್ ಜಾರಿಯಲ್ಲಿದ್ದ ಪರಿಣಾಮ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಆರ್ಥಿಕ ಚೇತರಿಕಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದ್ದು, ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಠಿ ನಡೆಸಿ ವಿವರಣೆ ನೀಡಿದ್ದಾರೆ. 25 ರಿಂದ 100 ಕೋಟಿ ರೂಪಾಯಿ ವಹಿವಾಟು ನಡೆಸುವ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂಪಾಯಿ ಸಾಲ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ […]

ಕೋವಿಡ್ ವೈರಸ್ ನಮ್ಮ ಜತೆಯಲ್ಲಿ ಅನೇಕ ವರ್ಷಗಳ ಕಾಲ ಇರುವಂಥದ್ದು : ಪ್ರಧಾನಿ

Wednesday, May 13th, 2020
Narendra Modi

ಹೊಸದಿಲ್ಲಿ: ಕೋವಿಡ್ ವೈರಸ್ ನಮ್ಮ ಜತೆಯಲ್ಲಿ ಅನೇಕ ವರ್ಷಗಳ ಕಾಲ ಇರುವಂಥದ್ದು ಎಂದು ಹಲವಾರು ತಜ್ಞರು ಹೇಳಿದ್ದಾರೆ ಎಂದ ಪ್ರಧಾನಿ, ನಾವು ಯಾವಾಗಲೂ ಮಾಸ್ಕ್ ಗಳನ್ನು ಧರಿಸೋಣ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳೋಣ. ಅವೆಲ್ಲದರ ಜತೆಗೆ ದೇಶದ ಆರ್ಥಿಕತೆಗೂ ಶ್ರಮಿಸೋಣ ಎಂದು ಪ್ರಧಾನಿ ಹೇಳಿದ್ದಾರೆ. ಕೋವಿಡ್ ಸಂಕಷ್ಟದಿಂದ ಕುಸಿದಿರುವ ದೇಶದ ಆರ್ಥಿಕತೆಯನ್ನು ಮೇಲೆತ್ತಲು ಪ್ರಧಾನಿ ಮೋದಿ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಿಸಿದ್ದಾರೆ. ಮಂಗಳವಾರ ರಾತ್ರಿ ದೂರದರ್ಶನದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, […]

ಉತ್ತರ ಮುಂಬಯಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಎರ್ಮಾಳ್ ಹರೀಶ್ ಶೆಟ್ಟಿ ನೇಮಕ

Tuesday, May 12th, 2020
Harish-Shetty

ಮುಂಬಯಿ  : ಮಹಾನಗರದ ನಾಮಾಂಕಿತ ಸಮಾಜ ಸೇವಕ, ಅಪ್ರತಿಮ ಸಂಘಟಕ ಎರ್ಮಾಳ್ ಹರೀಶ್ ಶೆಟ್ಟಿ ಇವರು ಉತ್ತರ ಮುಂಬಯಿ (ಬೋರಿವಿಲಿ) ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕ ಗೊಂಡಿದ್ದಾರೆ. ಮಹಾನಗರದಾದ್ಯಂತ ಎರ್ಮಾಳ್ ಹರೀಶ್ ಎಂದೇ ಪರಿಚಿತರಾದ, ಬಂಟರ ಸಂಘ ಮುಂಬಯಿ ಇದರ ಶೈಕ್ಷಣಿಕ ನೂತನ ಯೋಜನಾ ಸಮಿತಿ ಉಪಾಧ್ಯಕ್ಷರಾಗಿದ್ದು ಈ ಹಿಂದೆ ಇಂಡಿಯಾನ್ ಹೊಟೇಲ್ ಎಂಡ್ ರೆಸ್ಟೋರೆಂಟ್ ಅಸೋಸಿಯೇಶನ್ (ಆಹಾರ್) ಇದರ ಉಪಾಧ್ಯಕ್ಷರಾಗಿದ್ದು, ತಮ್ಮ ಹಲವಾರು ದಶಕಗಳ ಅನುಭವ, ಅವಿರತ ಶ್ರಮದ ಮೂಲಕ ಹೋಟೇಲು ಉದ್ಯಮದಲ್ಲಿ ಪಳಗಿರುವರು. ಲಿಂಕ್ […]

ಮೈಕ್ ಹಾಕಿ ಅಜಾನ್ (ಬಾಂಗ್ ) ಕೊಡುವುದನ್ನು ಈಗಲಾದರೂ ನಿಲ್ಲಿಸಿ: ಜಾವೇದ್ ಅಖ್ತರ್

Tuesday, May 12th, 2020
Javed-Aktar

ಮುಂಬೈ :  ಮುಸಲ್ಮಾನರು ಅಜಾನ್ (ಬಾಂಗ್ ) ಕೊಡುವಾಗ ಧ್ವನಿವರ್ಧಕಗಳನ್ನು ಬಳಸಿ ಇತರರಿಗೆ ತೊಂದರೆಯಾಗುವ ಹಿನ್ನಲೆಯಲ್ಲಿ ಹಲವಾರು ದೂರುಗಳಿವೆ. ಹೈಕೋರ್ಟ್ ಸಹ ಅಜಾನ್ ಮೈಕ್ ಬಳಸಿ ಕೊಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಇದು ಉಲ್ಲಂಘನೆಯಾಗಬಾರದು ಎಂದು ಜಾವೇದ್ ಅಖ್ತರ್ ಧ್ವನಿ ಎತ್ತಿದ್ದಾರೆ. ಮತ್ತೊಬ್ಬರಿಗೆ ಧಕ್ಕೆಯಾಗುವ ಧ್ವನಿವರ್ಧಕಗಳನ್ನು ಬಳಸಿ ಪ್ರಾರ್ಥನೆ ಮಾಡುವುದನ್ನು ನಿಲ್ಲಿಸಬೇಕು ಎಂದು ಹಿರಿಯ ಬರಹಗಾರ ಗೀತರಚನೆಕಾರ ಜಾವೇದ್ ಅಖ್ತರ್ ಹೇಳಿದ್ದು, ಟ್ವೀಟ್ ಮಾಡಿದ್ದಾರೆ. ಶನಿವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಭಾರತದಲ್ಲಿ ಸುಮಾರು 50 ವರ್ಷಗಳ ಕಾಲ ಅಜಾನ್ ಹರಾಮ್ ಎಂದು […]