ಗಾಂಧಿ ಹತ್ಯೆ ಮರುತನಿಖೆ, ಅಮಿಕಸ್ ಕ್ಯೂರಿ ನೇಮಿಸಿದ ಸುಪ್ರೀಂಕೋರ್ಟ್‌

Friday, October 6th, 2017
ghandhi

ನವದೆಹಲಿ: ಮಹಾತ್ಮ ಗಾಂಧಿ ಹತ್ಯೆ ಪ್ರಕರಣದ ಮರುತನಿಖೆ ನಡೆಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಈ ಸಂಬಂಧ ನ್ಯಾಯಾಲಯಕ್ಕೆ ನೆರವಾಗಲು ಅಮಿಕಸ್‌ ಕ್ಯೂರಿ (ನ್ಯಾಯಾಲಯಕ್ಕೆ ಸಹಕರಿಸುವ ವಕೀಲ) ನೇಮಿಸಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‌.ಎ. ಬೋಬ್ಡೆ ಮತ್ತು ಎಲ್‌. ನಾಗೇಶ್ವರ ರಾವ್‌ ಅವರಿದ್ದ ನ್ಯಾಯಪೀಠವು ಹಿರಿಯ ವಕೀಲ ಅಮರೇಂದರ್‌ ಶರಣ್‌ ಅವರನ್ನು ಅಮಿಕಸ್‌ ಕ್ಯೂರಿಯಾಗಿ ನೇಮಕ ಮಾಡಿದೆ. ಮಹಾತ್ಮ ಗಾಂಧಿ ಹತ್ಯೆ ಕುರಿತು ಪೂರ್ಣ ಸತ್ಯ ಹೊರಬರಬೇಕಿದ್ದು, ಈ ಬಗ್ಗೆ ಮರುತನಿಖೆಗೆ ಆದೇಶಿಸಬೇಕು […]

ವಿ5 ಹೆಲಿಕಾಪ್ಟರ್ ಪತನ: 7 ಯೋಧರ ಸಾವು

Friday, October 6th, 2017
new delhi

ನವದೆಹಲಿ: ಭಾರತೀಯ ವಾಯುಪಡೆಗೆ ಸೇರಿದ ವಿ5 ಹೆಲಿಕಾಪ್ಟರ್ ಅರುಣಾಚಲ ಪ್ರದೇಶದ ತೆವಾಂಗ್‌ನಲ್ಲಿ ಪತನಗೊಂಡದ್ದು, ಹೆಲಿಕಾಪ್ಟರ್‌ನಲ್ಲಿದ್ದ 7 ಮಂದಿ ಯೋಧರು ಮೃತಪಟ್ಟಿದ್ದಾರೆ. ವಿಶ್ವದ ಅತ್ಯಾಧುನಿಕ ಸೇನಾ ಹೆಲಿಕಾಪ್ಟರ್‌ಗಳಲ್ಲಿ ಒಂದಾಗಿರುವ ವಿ5 ಹೆಲಿಕಾಪ್ಟರ್ (ಮಿ-17) ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಪತನಗೊಂಡಿದೆ. ಹೆಲಿಕಾಪ್ಟರ್‌ನಲ್ಲಿ ಪೈಲಟ್‌ ಸೇರಿದಂತೆ 7 ಮಂದಿ ಯೋಧರಿದ್ದರು ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.  

ರೈತರ ಅಭಿವೃದ್ಧಿ, ಗ್ರಾಮೀಣ ಜನತೆಗೆ ಉದ್ಯೋಗ ಮತ್ತು ಮೂಲಭೂತ ಸೌಲಭ್ಯ ಸರ್ಕಾರದ ಮೂಲ ಆದ್ಯತೆ: ಜೈಟ್ಲಿ

Wednesday, February 1st, 2017
Jaitley

ನವದೆಹಲಿ: 2017-18ರ ಕೇಂದ್ರ ಬಜೆಟ್ ಮಂಡಿಸಿದ ಸಚಿವ ಅರುಣ್ ಜೈಟ್ಲಿ, ರೈತರ ಅಭಿವೃದ್ಧಿ, ಗ್ರಾಮೀಣ ಜನತೆಗೆ ಉದ್ಯೋಗ ಮತ್ತು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ತಮ್ಮ ಸರ್ಕಾರದ ಮೂಲ ಆದ್ಯತೆಗಳಾಗಿವೆ ಎಂದು ಪ್ರಕಟಿಸಿದ್ದಾರೆ. ಕೃಷಿ ಮತ್ತು ರೈತರ ಅಭಿವೃದ್ಧಿಗಾಗಿ ಈ ಸಾಲಿನಲ್ಲಿ ಕೈಗೊಳ್ಳುತ್ತಿರುವ ಕ್ರಮಗಳನ್ನು ಜೈಟ್ಲಿ ಪ್ರಸ್ತಾಪಿಸಿದರು. ಮುಂದಿನ ಐದು ವರ್ಷಗಳಲ್ಲಿ ಕೃಷಿ ಆದಾಯ ದ್ವಿಗುಣಗೊಳಿಸಲು ಬದ್ಧವಿರುವುದಾಗಿ ತಿಳಿಸಿದರು. ರೈತರು ಮತ್ತು ಕೃಷಿ ಅಭಿವೃದ್ಧಿಗಾಗಿ ಬಜೆಟ್ ನಲ್ಲಿ ಘೋಷಿಸಿದ ಅಂಶಗಳು ಹೀಗಿವೆ. ಕೃಷಿ ಸಾಲ.. 1. ಮುಂದಿನ ಐದು […]

ಇಸ್ಲಾಂನ ತ್ರಿವಳಿ ತಲಾಖ್ ಅಸಂವಿಧಾನಿಕ, ಇದು ಮುಸ್ಲಿಂ ಮಹಿಳೆಯರ ಹಕ್ಕಿನ ಉಲ್ಲಂಘನೆಯಾಗಿದೆ: ಅಲಹಾಬಾದ್ ಹೈಕೋರ್ಟ್

Thursday, December 8th, 2016
trevali talak

ಲಖ್ನೋ: ದೇಶಾದ್ಯಂತ ದೊಡ್ಡ ವಿವಾದಕ್ಕೆ ಹಾಗೂ ಚರ್ಚೆಗೆ ಕಾರಣವಾಗಿದ್ದ ಇಸ್ಲಾಂನ ತ್ರಿವಳಿ ತಲಾಖ್ ಪದ್ಧತಿ ಅಸಂವಿಧಾನಿಕ, ಇದು ಮುಸ್ಲಿಂ ಮಹಿಳೆಯರ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಉತ್ತರಪ್ರದೇಶದ ಅಲಹಾಬಾದ್ ಹೈಕೋರ್ಟ್ ಪೀಠ ಮಹತ್ವದ ತೀರ್ಪನ್ನು ಗುರುವಾರ ನೀಡಿದೆ. ಮೂರು ಬಾರಿ ತಲಾಖ್ ಎಂದು ಹೇಳಿ ಮಹಿಳೆಗೆ ವಿಚ್ಛೇದನ ನೀಡುವ ಇಸ್ಲಾಂನ ಈ ಪದ್ಧತಿ ಸಂವಿಧಾನ ಬಾಹಿರವಾದದ್ದು ಎಂದು ಅಲಹಾಬಾದ್ ಹೈಕೋರ್ಟ್ ಪೀಠ ಹೇಳಿರುವುದಾಗಿ ಎಎನ್ ಐ ವರದಿ ಮಾಡಿದೆ. ತ್ರಿವಳಿ ತಲಾಖ್ ಪದ್ಧತಿ ಮುಸ್ಲಿಂ ಮಹಿಳೆಯರ ಹಕ್ಕಿನ ಉಲ್ಲಂಘನೆಯ […]

ಮಹದಾಯಿ ಮಧ್ಯಂತರ ತೀರ್ಪಿನ ಹಿನ್ನೆಲೆಯಲ್ಲಿ ಮಹತ್ವದ ಸರ್ವಪಕ್ಷ ಸಭೆ ಆಗಸ್ಟ್‌ 7ರಂದು ನಿಗದಿ

Thursday, August 4th, 2016
Mahadayi

ಬೆಂಗಳೂರು: ಮಹದಾಯಿ ಮಧ್ಯಂತರ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯದ ಮುಂದಿನ ನಡೆಗಳನ್ನು ನಿರ್ಧರಿಸಲು ಮಹತ್ವದ ಸರ್ವಪಕ್ಷ ಸಭೆ ಆಗಸ್ಟ್‌ 7ರಂದು ನಿಗದಿಯಾಗಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಕಾನೂನು ತಜ್ಞರ ಜತೆ ಚರ್ಚಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಷಯ ತಿಳಿಸಿದರು. ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರು, ರಾಜ್ಯದ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು, ಉತ್ತರ ಕರ್ನಾಟಕ ಭಾಗದ ಶಾಸಕರು, ವಿಧಾನ ಪರಿಷತ್‌ ಸದಸ್ಯರನ್ನು ಸಭೆಗೆ ಆಹ್ವಾನಿಸಲಾಗುವುದು. ಸರ್ವಪಕ್ಷ ಸಭೆಯಲ್ಲಿ ನ್ಯಾಯಾಧಿಕರಣದ ಮುಂದೆ […]

ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಮಸೂದೆಗೆ ರಾಜ್ಯಸಭೆಯ ಅನುಮೋದನೆ

Thursday, August 4th, 2016
GST

ಹೊಸದಿಲ್ಲಿ: ಒಂದು ದೇಶ-ಒಂದೇ ರೀತಿಯ ತೆರಿಗೆ’ ಎಂಬ ಧ್ಯೇಯ ಹೊಂದಿರುವ “ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆ’ಗೆ ಕೊನೆಗೂ ರಾಜ್ಯಸಭೆಯ ಅನುಮೋದನೆ ಸಿಕ್ಕಿದೆ. ಬುಧವಾರ ಮಧ್ಯಾಹ್ನ ಮಂಡಿಸಲಾದ ಐತಿಹಾಸಿಕ ಮಸೂದೆ ಕುರಿತು ಸತತ 7 ಗಂಟೆಗಳ ಚರ್ಚೆ ನಡೆದು, ಬಳಿಕ ಮಸೂದೆಯನ್ನು ಮತಕ್ಕೆ ಹಾಕಿದಾಗ, ಮಸೂದೆ ಪರ 203 ಮತ್ತು ವಿರುದ್ಧವಾಗಿ ಮತ ಚಲಾವಣೆಯಾದವು. ಈ ಮೂಲಕ ಮಸೂದೆಗೆ ಸದನವು ಬಹುಮತದ ಅನುಮೋದನೆ ನೀಡಿತು. ಮಸೂದೆಗೆ ಎಐಎಡಿಎಂಕೆ ಮಾತ್ರವೇ ವಿರೋಧ ವ್ಯಕ್ತಪಡಿಸಿತ್ತು. ಆದರೆ ಕಾಂಗ್ರೆಸ್‌ ಕೂಡಾ […]

ದೇಶದಲ್ಲಿ ಸಂಭವಿಸುವ ಅಪಘಾತ ಪ್ರಕರಣಗಳನ್ನು ಪರಿಗಣಿಸಿ ಕಠಿಣ ಕಾನೂನು ಕ್ರಮ ಜಾರಿ

Thursday, August 4th, 2016
drink-and-drive

ಹೊಸದಿಲ್ಲಿ: ದೇಶದಲ್ಲಿ ವಾರ್ಷಿಕ ಸಂಭವಿಸುವ 5 ಲಕ್ಷ ಅಪಘಾತ ಪ್ರಕರಣಗಳಲ್ಲಿ 1.5 ಲಕ್ಷ ಜನ ಸಾವನ್ನಪ್ಪುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ, ರಸ್ತೆ ಅಪಘಾತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಠಿನ ಕಾನೂನುಗಳನ್ನು ಒಳಗೊಂಡ ಮೋಟಾರು ಕಾಯ್ದೆ (ತಿದ್ದುಪಡಿ) ಮಸೂದೆ 2016ಕ್ಕೆ ಬುಧವಾರ ಅನುಮೋದನೆ ನೀಡಿದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರಿಗೆ 10,000 ರೂ. ವರೆಗೆ ದಂಡ, ಹಿಟ್‌ ಆ್ಯಂಡ್‌ ರನ್‌ ಕೇಸಲ್ಲಿ ಸಂತ್ರಸ್ತರಿಗೆ 2 ಲಕ್ಷ ರೂ. ಪರಿಹಾರ, ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರಿಗೆ 10 ಲಕ್ಷ ರೂ. […]

ರಿಕ್ಷಾ ಚಾಲಕ, ಪಡೀಲ್ ನಿವಾಸಿ ಮುಖೇಶ್ ಮೇಲೆ ಹಲ್ಲೆ

Thursday, July 7th, 2016
Mukhesh

ಮಂಗಳೂರು: ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿರುವ ಪಡೀಲ್ ಭಜರಂಗದಳದ ಸದಸ್ಯನೂ ಆಗಿರುವ ಯುವಕನೋರ್ವನ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ ಘಟನೆ ನಿನ್ನೆ ಸಂಜೆ ನಗರದ ಫೈಸಲ್‍ನಗರದಲ್ಲಿ ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ಪಡೀಲ್ ನಿವಾಸಿ ಮುಖೇಶ್ ಎಂದು ಗುರುತಿಸಲಾಗಿದೆ. ಮುಖೇಶ್ ತನ್ನ ರಿಕ್ಷಾದಲ್ಲಿ ಫೈಸಲ್‍ನಗರಕ್ಕೆ ಬಾಡಿಗೆಗೆ ತೆರಳಿದ್ದ. ಈ ವೇಳೆ ರಸ್ತೆಯಲ್ಲಿ ಶೇಖರಣೆಯಾಗಿದ್ದ ಕೆಸರು ನೀರು ರಸ್ತೆ ಬದಿ ನಿಂತಿದ್ದ ಯುವಕನೋರ್ವನ ಮೇಲೆ ಎರಚಿದೆ. ಇದನ್ನೇ ನೆಪವಾಗಿರಿಸಿದ ಸ್ಥಳೀಯ ಯುವಕರು ಮುಖೇಶ್‍ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಸ್ಥಳಕ್ಕೆ […]

ಲಿಪ್ಫ್ ಕೊಟ್ಟು ರೇಪ್ ಆಂಡ್ ಮರ್ಡರ್ ಮಾಡಿದವನಿಗೆ ಮರಣದಂಡನೆ

Friday, October 30th, 2015
Rape Murder

ಮುಂಬೈ: ಟೆಕ್ಕಿ ಎಸ್ತರ್ ಅನೂಹ್ಯಾ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಆರೋಪಿ ಚಂದ್ರಬಾನ್ ಸನಾಪ್ ಗೆ ಮುಂಬೈ ಕೋರ್ಟ್ ಶುಕ್ರವಾರ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿ, ಇದು ಅತ್ಯಪರೂಪ ಪ್ರಕರಣವಾಗಿದ್ದು, ಆರೋಪಿಗೆ ಗಲ್ಲುಶಿಕ್ಷೆಯೇ ಸೂಕ್ತವಾದದ್ದು ಎಂದು ಅಭಿಪ್ರಾಯವ್ಯಕ್ತಪಡಿಸಿದೆ. 2014ರ ಜನವರಿ 5ರಂದು ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಅನೂಹ್ಯಾ ಮುಂಬೈಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಲೋಕಮಾನ್ಯ ತಿಲಕ್ ರೈಲ್ವೆ ನಿಲ್ದಾಣದ ಬಳಿ ಅನೂಹ್ಯಳಿಗೆ ತಾನು ತನ್ನ ಬೈಕ್ ನಲ್ಲಿ ಲಿಫ್ಟ್ ಕೊಡುವುದಾಗಿ ತಿಳಿಸಿದ್ದ. ಸನಾಪ್ ಮಾತನ್ನು ನಂಬಿ ಬೈಕ್ ನಲ್ಲಿ […]

ಪಾಕಿಸ್ಥಾನಃ ಗಡಿ ಉಲ್ಲಂಘನೆ ಮಾಡಿದ ಆರೋಪ ೨೫ ಮೀನುಗಾರರ ಬಂಧನ

Tuesday, September 30th, 2014
Fishermen

ಇಸ್ಲಮಾಬಾದ್‌ : ಭಾನುವಾರ ಸಂಜೆ ಮೀನು ಹಿಡಿಯಲು ತೆರಳಿದ 25 ಭಾರತೀಯ ಮೀನುಗಾರರನ್ನು ಪಾಕಿಸ್ತಾನದ ಬಂದರು ರಕ್ಷಣಾ ಪಡೆ ಭಂದಿಸಿದೆ. ಗಡಿ ಉಲ್ಲಂಘನೆ ಮಾಡಿದ ಆರೋಪ ಎದುರಿಸಿತ್ತುರುವ  ಎಲ್ಲಾ ಮೀನುಗಾರರನ್ನು ಕರಾಚಿಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಇವರೆಲ್ಲರಿಗೂ ಕನಿಷ್ಠ 1 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಗಳಿವೆ.