ಪ್ರತೀ ಜಿಲ್ಲೆಯಲ್ಲಿ ಡಿಜಿಟಲ್ ಸಂಪರ್ಕ ಜಾಲದ ಮೂಲಕ ಐಟಿ ಕ್ಷೇತ್ರದ ಅಭಿವೃದ್ಧಿ : ರಾಜೀವ್ ಚಂದ್ರಶೇಖರ್

Wednesday, August 18th, 2021
Janashirvada

ಮಂಗಳೂರು : ಕರ್ನಾಟಕದಲ್ಲಿ ಪ್ರತೀ ಜಿಲ್ಲೆಯಲ್ಲಿ ಒಂದು ಹಳ್ಳಿಯನ್ನು ಆಯ್ಕೆ ಮಾಡಿಕೊಂಡು ಭಾರತ್ ನೆಟ್ ಯೋಜನೆಯ ಮೂಲಕ ಸಂಪೂರ್ಣ ಡಿಜಿಟಲ್‌ ಸಂಪರ್ಕ ಕಲ್ಪಿಸುವ ಪೈಲಟ್ ಯೋಜನೆ ಈಗಾಗಲೇ ಜಾರಿಗೊಂಡಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಕೌಶ ಲ್ಯಾಭಿವೃದ್ಧಿ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ. ಬಿಜೆಪಿಯ ಜನಾರ್ಶೀವಾದ ಯಾತ್ರೆ ಕಾರ್ಯಕ್ರಮದ ಬಳಿಕ ನಗರದ ಓಶಿಯನ್ ಪರ್ಲ್ ಸಭಾಂಗಣದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಖಾಸಗಿ ಮತ್ತು ಸಾರ್ವಜನಿಕ ಜಂಟಿ ಸಹಯೋಗದೊಂದಿಗೆ ಐಟಿ ಪಾರ್ಕ್ ಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಸರಕಾರ ಹೊಂದಿದೆ ಎಂದು ರಾಜೀವ್ […]

ತುಳು ಅಕಾಡೆಮಿ ತೌಳವರ ತವರೂರು ಇದ್ದಂತೆ” – ದಯಾನಂದ ಜಿ ಕತ್ತಲ್‌ಸಾರ್

Wednesday, August 18th, 2021
Sarayu Yakshagana

ಮಂಗಳೂರು : ತುಳು ಅಕಾಡೆಮಿಯು ಕೊರೊನಾದ ಸಂಕಷ್ಟ ಕಾಲದಲ್ಲೂ ಕಲೆ, ಕಲಾವಿದರಿಗಾಗಿ ಸದಾ ತೆರೆದಿದೆ. ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಯಾರಿಗೂ ನಾವು ಅನುಮತಿ ನಿರಾಕರಿಸಿಲ್ಲ. ಇದು ತುಳುವ ಬಂಧುಗಳಿಗೆ ತವರೂರು ಆಗಿಯೇ ಇದೆ. ಅಂತಹಾ ಅವಕಾಶವನ್ನು ಎಲ್ಲಾ ತೌಳವ ಬಂಧುಗಳು ಬಳಸಿಕೊಂಡು ಕಮರಿ ಹೋದ ಕಲಾಬದುಕನ್ನು ಖಂಡಿತಾ ಪುನಃ ಕಟ್ಟಿಕೊಳ್ಳಬಹುದು. ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ ಕತ್ತಲ್‌ಸಾರ್‌ರವರು ತುಳುವೆರೆ – ಏಳಾಟೊ – ಸರಯೂ ಸಪ್ತಾಹೊದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷೀಯ ಭಾಷಣದಲ್ಲಿ […]

ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್: ವೆಂಟಿಲೇಟರ್ ಕೊಡುಗೆ

Wednesday, August 18th, 2021
Karnataka Bank

ಸುರತ್ಕಲ್ : ಮುಕ್ಕದಲ್ಲಿರುವ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್ ನಲ್ಲಿ ಆಗಸ್ಟ್ 15 ರಂದು ಹೊಸ ವೆಂಟಿಲೇಟರ್ ಯಂತ್ರವನ್ನು ಕರ್ನಾಟಕ ಬ್ಯಾಂಕ್ ಪ್ರಧಾನ ಕಚೇರಿ ಮಂಗಳೂರು ಇವರ ವತಿಯಿಂದ ಕೊಡುಗೆಯಾಗಿ ನೀಡಲಾಯಿತು. ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಎ ಶಾಮ್ ರಾವ್ ಪ್ರತಿಷ್ಠಾನಾದ ಅಧ್ಯಕ್ಷಾರಾದ ಡಾ. ಸಿಎ. ಎ. ರಾಘವೇಂದ್ರ ರಾವ್ ರವರ ಆಶೀರ್ವಾದದೊಂದಿಗೆ ಮತ್ತು ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದಂತ ಮಹಾಬಲೆಶ್ವರ ಎಂ. ಎಸ್. ಇವರ ಉಪಸ್ಥಿಯೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು. […]

ಮಾರಾಕಾಸ್ತ್ರದಿಂದ ತಲೆಗೆ ಹೊಡೆದು ಪತ್ನಿಯ ಕೊಲೆ, ಗಂಡನ ಬಂಧನ

Wednesday, August 18th, 2021
sunitha

ಮೂಡುಬಿದಿರೆ : ಮಾರಾಕಾಸ್ತ್ರದಿಂದ ಮಹಿಳೆಯ ತಲೆಗೆ ಹೊಡೆದು ಕೊಂದ ಘಟನೆ ಮೂಡುಬಿದಿರೆ ತಾಲೂಕಿನ ದರೆಗುಡ್ಡೆ ಗ್ರಾ.ಪಂ ವ್ಯಾಪ್ತಿಯ ಮಠ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ. ಮಠ ನಿವಾಸಿ ಸುನೀತಾ(30) ಕೊಲೆಯಾದವರು. ಇವರ ಪತಿ ಮೂಡುಬಿದಿರೆಯ ದಿನ್ ರಾಜ್ ಕೊಲೆ ಆರೋಪಿಯಾಗಿದ್ದು, ಆತನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಸಂಜೆಯ ವೇಳೆ ಪತಿ- ಪತ್ನಿ ಮಧ್ಯೆ ಜಗಳ ನಡೆದಿದ್ದು, ಈ ಸಂದರ್ಭ ದಿನ್ ರಾಜ್ ಯಾವುದೋ ಮೊಂಡಾದ ಆಯುಧದಿಂದ ಪತ್ನಿಯ ತಲೆಗೆ ಮಾರಣಾಂತಿಕವಾಗಿ ಹೊಡೆದಿದ್ದಾನೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಸುನೀತಾ […]

ಗ್ರಾಮ ಸ್ವರಾಜ್ಯ ರಥಕ್ಕೆ ಅಡ್ಡಿ ಪಡಿಸಿದ ಮೂವರು ಎಸ್‌ಡಿಪಿಐ ಕಾರ್ಯಕರ್ತರಿಗೆ ಜಾಮೀನು

Tuesday, August 17th, 2021
sdpi workers

ಪುತ್ತೂರು : ಪುತ್ತೂರಿನ ಕಬಕದಲ್ಲಿ ಗ್ರಾಮ ಸ್ವರಾಜ್ಯ ರಥಕ್ಕೆ ಎಸ್‌ಡಿಪಿಐ ಕಾರ್ಯಕರ್ತರು ಅಡ್ಡಿ ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮೂವರು ಆರೋಪಿಗಳಿಗೆ ಒಂದೇ ದಿನದಲ್ಲಿ ಜಾಮೀನು ಮಂಜೂರಾಗಿದೆ. ನ್ಯಾಯಾಂಗ ಬಂಧನಕ್ಕೊಳಗಾಗಿದ್ದ  ಆರೋಪಿಗಳಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ಹಲವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಝೀಜ್, ಸಮೀರ್, ಅಬ್ದುಲ್ ರಹಿಮಾನ್ ನನ್ನು ಪೊಲೀಸರು ಬಂಧಿಸಿದ್ದರು. ಇದೀಗ ಮೂವರಿಗೂ ಪುತ್ತೂರು ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದೆ.  

ರಾಜ್ಯ ಹೊತ್ತಿಸುವುದಾಗಿ ಹೇಳಿಕೆ ನೀಡಿರುವ ಶಾಸಕ ಯು.ಟಿ.ಖಾದರ್‌ರವರ ಮಾತುಗಳೇ ಜಿಹಾದಿ ಶಕ್ತಿಗಳಿಗೆ ಪ್ರೇರಕ : ಕೆದಿಲ

Tuesday, August 17th, 2021
Vedike

ಮಂಗಳೂರು :  ರಾಜ್ಯ ಹೊತ್ತಿಸುವುದಾಗಿ ಹೇಳಿಕೆ ನೀಡಿರುವ ಶಾಸಕ ಯು.ಟಿ.ಖಾದರ್‌ರವರ ಮಾತುಗಳೇ ಜಿಹಾದಿ ಶಕ್ತಿಗಳಿಗೆ ಪ್ರೇರಕವಾಗಿದೆ  ಎಂದು ಹಿಂದೂ ಜಾಗರಣ ವೇದಿಕೆಯ ಮುಖಂಡ ಗಣರಾಜ್ ಭಟ್ ಕೆದಿಲ ಹೇಳಿಕೆ ನೀಡಿದ್ದಾರೆ. ಹಂಪನಕಟ್ಟೆಯ ಕ್ಲಾಕ್ ಟವರ್ ಸಮೀಪ ಇಂದು ಹಿಂದೂ ಜಾಗರಣ ವೇದಿಕೆಯ ಮಂಗಳೂರು ಘಟಕದ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು,  ಎಳನೀರು ಕೆತ್ತುವ, ಹೊಟೇಲ್‌ಗಳಲ್ಲಿ ಕ್ಲೀನರ್ ಆಗಿ, ರಿಕ್ಷಾದಲ್ಲಿ ಮಕ್ಕಳನ್ನು ಕರೆದೊಯ್ಯುವ, ಮೊಬೈಲ್ ಕರೆನ್ಸಿ ಹಾಕುವ ಸೇರಿದಂತೆ ನಾನಾ ರೂಪದಲ್ಲಿ ಜಿಹಾದಿ ಶಕ್ತಿಗಳಿವೆ ಎಂದರು. ವಿವಿಧ ರೂಪದಲ್ಲಿ […]

ಅಂತ್ಯಕ್ರಿಯೆಯನ್ನು ನಡೆಸಲು ಒಂದು ಲಕ್ಷ ರೂ. ಇಟ್ಟು ಆತ್ಮಹತ್ಯೆ ಮಾಡಿಕೊಂಡ ದಂಪತಿ

Tuesday, August 17th, 2021
chitrapura-suicide

ಮಂಗಳೂರು  :  ದಂಪತಿಗಳಿಬ್ಬರು ಡೆತ್ ನೋಟ್ ಬರೆದಿಟ್ಟು, ಮಂಗಳೂರು ಪೊಲೀಸ್ ಕಮಿಷನರ್ ಗೆ ಫೋನ್ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಕುಳಾಯಿ ಚಿತ್ರಾಪುರಯಲ್ಲಿ ರೆಹಜಾ ಅಪಾರ್ಟ್ ಮೆಂಟ್ ನಲ್ಲಿ ಮಂಗಳವಾರ ಬೆಳಗ್ಗೆ  ನಡೆದಿದೆ. ಮೃತರನ್ನು ರಮೇಶ್ ಸುವರ್ಣ ಮತ್ತು ಗುಣವತಿ ಸುವರ್ಣ ಎಂದು ಗುರುತಿಸಲಾಗಿದೆ. ಕೋವಿಡ್-19 ಸೋಂಕು ಮತ್ತು ಬ್ಲ್ಯಾಕ್ ಫಂಗಸ್ ಗೆ ಹೆದರಿ ಮೊದಲು ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು ಬಳಿಕ ಪತಿಯೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮೊದಲು ಪತಿ ರಮೇಶ್ ಸುವರ್ಣ ಮಂಗಳೂರು ಪೊಲೀಸ್ ಆಯುಕ್ತ […]

ದೇಶ ವಿರೋಧಿ ಕೃತ್ಯ ಸಹಿಸಲು ಸಾಧ್ಯವಿಲ್ಲ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್

Tuesday, August 17th, 2021
Nalin-Kumar Kateel

ಮಂಗಳೂರು : ಪುತ್ತೂರಿನ ಕಬಕದಲ್ಲಿ ಗ್ರಾಮ ಸ್ವರಾಜ್ಯ ರಥಕ್ಕೆ ಎಸ್‌ಡಿಪಿಐ ಕಾರ್ಯಕರ್ತರು ಅಡ್ಡಿ ಪಡಿಸಿರುವುದು ದೇಶ ವಿರೋಧಿ ಕೃತ್ಯವಾಗಿದೆ. ವೀರ ಸಾವರ್ಕರ್ ಅವರಿಗೆ ಅಪಮಾನ ಮಾಡುವವರನ್ನು ಸಹಿಸಲು ಸಾಧ್ಯವಿಲ್ಲ. ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಬಿಜೆಪಿ ರಾಜ್ಯಾಧ್ಯಕ್ಷ , ಸಂಸದ ನಳಿನ್‌ಕುಮಾರ್ ಕಟೀಲ್ ಅವರು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ. ಐಸಿಸ್ ಉಗ್ರರ ಜತೆ ಸಂಬಂಧ ಇರಿಸಿಕೊಂಡವರನ್ನು ಇತ್ತೀಚೆಗೆ ಉಳ್ಳಾಲದಲ್ಲಿ ಬಂಧಿಸಲಾಗಿದೆ. ಇದೀಗ ಕಬಕದಲ್ಲಿ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸುವ ಪ್ರಕರಣ ನಡೆದಿದೆ. ಕರಾವಳಿಯಲ್ಲಿ ಸಮಾಜ […]

ಗುಡ್ಡೆಯಂಗಡಿಯಲ್ಲಿ ಕಾಡು ಪ್ರಾಣಿ ಬೇಟೆಯಾಡುತ್ತಿದ್ದ 12 ಜನರ ಬಂಧನ

Tuesday, August 17th, 2021
animal hunt

ಮಂಗಳೂರು   : ಮೂಡುಬಿದಿರೆ ಪೊಲೀಸ್‌ ಠಾಣಾ ವ್ಯಾಪ್ತಿಯ ಕೊಡ್ಯಡ್ಕ ಗುಡ್ಡೆಯಂಗಡಿಯಲ್ಲಿ ಕಾಡು ಪ್ರಾಣಿ ಬೇಟೆಯಾಡುತ್ತಿದ್ದ12 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಜಾನ್‌ ಮನೆಜಸ್‌‌, ಶ್ರೀನಿವಾಸ್‌, ಗುರುಪ್ರಸಾದ್‌, ಜೋಯಲ್‌ ಅನಿಲ್‌ ಡಿಸೋಜಾ, ಅನಜಯ್‌‌, ಸನತ್‌, ಹರೀಶ್‌ ಪೂಜಾರಿ, ಮೋಹನ್‌ ಗೌಡ, ನೋಣಯ್ಯ, ವಿನಯ್‌‌ ಪೂಜಾರಿ, ರಮೇಶ್‌ ಹಾಗೂ ಗಣೇಶ್‌ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 4 ಗನ್, 1 ಗ್ಯಾಸ್ ಸಿಲಿಂಡರ್, 12 ಮೊಬೈಲ್ ಫೋನ್, 2ಮರದ ತುಂಡು, ಗ್ಯಾಸ್ ಬರ್ನರ್, ನೆಟ್, 2 ಓಮ್ನಿ ಕಾರ್ ಮತ್ತು ಇತರ […]

ಸಿ ಟಿ ರವಿ ಸಲಹೆ, ದೇಶದ್ರೋಹದ ಹೇಳಿಕೆಯಾಗಿದೆ : ಬಿ ರಮಾನಾಥ ರೈ

Monday, August 16th, 2021
Ramantha Rai

ಮಂಗಳೂರು : ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಹೆಸರಿನಲ್ಲಿ ಹುಕ್ಕಾ ಬಾರ್ ಮಾಡಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಸಲಹೆ ನೀಡಿರುವುದು  ದೇಶದ್ರೋಹದ ಹೇಳಿಕೆಯಾಗಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಕಾಂಗ್ರೆಸ್ ಕಚೇರಿಯಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ರೈ ದೇಶದ ಸ್ವಾತಂತ್ರ್ಯಕ್ಕಾಗಿ ಯಾರೇ ನಾಲ್ಕು ದಿನ ಜೈಲಿಗೆ ಹೋಗಿದ್ದರೂ ಅವರನ್ನು ಅಪಮಾನ ಮಾಡುವುದು ದೇಶದ್ರೋಹ. ಅಂತಹುದರಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲು ಸೇರಿದ್ದ ನೆಹರು ಅವರನ್ನು […]