ಒಬ್ಬ ಶಾಸಕನ ಹಿಂದೆ ಜನ ಓಡಾಡುವುದಕ್ಕಿಂತಲೂ, ಪಕ್ಷದ ಹಿಂದೆ ಹೋಗಿ : ರಾಜೇಶ್ ನಾಯ್ಕ್ ಉಳಿಪ್ಪಾಡಿ

Sunday, July 25th, 2021
Bantwal MLA

ಬಂಟ್ವಾಳ  : ಒಬ್ಬ ಶಾಸಕನ ಹಿಂದೆ ಜನ ಓಡಾಡುವುದಕ್ಕಿಂತಲೂ ಪಕ್ಷದ ಹಿಂದೆ ಕಾರ್ಯಕರ್ತರು ಹೋದಾಗ ಪಕ್ಷ ಗಟ್ಟಿಯಾಗಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಬಂಟ್ವಾಳದಲ್ಲಿ ಬಿಜೆಪಿಯನ್ನು ಬಲಿಷ್ಠ ಪಡಿಸುವ ದೃಷ್ಟಿಯಿಂದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಲಹೆ ಪಡೆದು ಕೆಲಸ ಮಾಡಲಾಗುತ್ತಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು. ಅವರು ಬಿಸಿರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಬಿಜೆಪಿ ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಪಕ್ಷವನ್ನು ಬಲಪಡಿಸಿದಾಗ ಮಾತ್ರ ಕಾರ್ಯಕರ್ತರಿಗೆ ಅಧಿಕಾರ ಸಿಗುತ್ತದೆ, ಅಮೂಲಕ […]

ಆಪತ್ಕಾಲದಲ್ಲಿ ಜೀವಂತವಾಗಿರಲಿಕ್ಕಾದರೂ ಸಾಧನೆ ಮಾಡಿ ! – ಪೂ. ರಮಾನಂದ ಗೌಡ

Sunday, July 25th, 2021
Guru Poornima

ಮಂಗಳೂರು : ಅಡಚಣೆಯ ಸಮಯದಲ್ಲಿ ನಮಗೆ ಸಹಾಯವಾಗಬೇಕು; ಅದಕ್ಕಾಗಿ ನಾವು ಬ್ಯಾಂಕಿನಲ್ಲಿ ಹಣ ಇಡುತ್ತೇವೆ. ಅದರಂತೆ ಆಪತ್ಕಾಲದ ಸಮಯದಲ್ಲಿ ಸಹಾಯವಾಗಬೇಕೆಂದು ಸಾಧನೆಯ ಸಂಗ್ರಹವು ನಮ್ಮ ಸಂಗ್ರಹದಲ್ಲಿರುವುದು ಅಗತ್ಯವಿದೆ. ಇದರಿಂದಲೇ ಆಪತ್ಕಾಲದ ಸಮಯದಲ್ಲಿ ನಮಗೆ ಸಹಾಯವಾಗುತ್ತದೆ. ಭಗವಾನ ಶ್ರೀಕೃಷ್ಣನು ‘ನ ಮೆ ಭಕ್ತಃ ಪ್ರಣಶ್ಯತಿ’, ಅಂದರೆ ‘ನನ್ನ ಭಕ್ತರ ನಾಶ ಎಂದಿಗೂ ಆಗುವುದಿಲ್ಲ’, ಎಂಬ ವಚನವನ್ನು ಭಕ್ತರಿಗೆ ನೀಡಿದ್ದಾರೆ. ಆದ್ದರಿಂದ ನಾವು ಸಾಧನೆಯನ್ನು ಹೆಚ್ಚಿಸಿ ದೇವರ ಭಕ್ತರಾಗಬೇಕು. ಈ ಹಿಂದೆ ಆನಂದಪ್ರಾಪ್ತಿಗಾಗಿ ಸಾಧನೆಯನ್ನು ಮಾಡಿ, ಎಂದು ನಾವು ಹೇಳುತ್ತಿದ್ದೆವು; ಆದರೆ […]

ಕಂದಾಯ ಸಚಿವ ಆರ್ ಅಶೋಕ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ

Sunday, July 25th, 2021
Ashok-Flood-Area

ಬೆಂಗಳೂರು  : ಅತಿವೃಷ್ಠಿಯಿಂದ ಹಾನಿಗೊಳಗಾಗಿರುವ ಹಾಸನ ಜಿಲ್ಲೆಯ ದೊಣಿಗಲ್‍ಗೆ ಕಂದಾಯ ಸಚಿವ ಆರ್ ಅಶೋಕ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ, “ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದ್ದೇನೆ. ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡುವಂತೆ ಮತ್ತು ರಸ್ತೆ ದುರಸ್ತಿ ಕಾರ್ಯಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದೇನೆ. ಎನ್‍ಡಿಆರ್‍ಎಫ್ ನಿಧಿಯಡಿ ಪರಿಹಾರ ನೀಡುವಂತೆ ಡಿಸಿಗಳಿಗೆ ಆದೇಶಿಸಲಾಗಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸಚಿವರು ಮತ್ತು ಅಧಿಕಾರಿಗಳೊಂದಿಗೆ ನಿರಂತರ […]

ತಮ್ಮನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಅಣ್ಣ

Sunday, July 25th, 2021
Rafeeq

ಕಾಸರಗೋಡು : ಸೀತಾಂಗೋಳಿಯ ಮುಗು ಎಂಬಲ್ಲಿ ತಮ್ಮನನ್ನು ಅಣ್ಣ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಕೊಲೆಗೀಡಾದವರನ್ನು ಮುಗು ಉರ್ಮಿಯ ಅಬ್ದುಲ್ಲ ಮುಸ್ಲಿಯಾರ್ ರವರ ಪುತ್ರ ನಿಸಾರ್ (29) ಎಂದು ಗುರುತಿಸಲಾಗಿದೆ. ಸಹೋದರ ರಫೀಕ್ (31)ನನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ. ನಿಸಾರ್‌‌ನನ್ನು ಕೂಡಲೇ ಕುಂಬಳೆಯ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ಬದಿಯಡ್ಕ ಠಾಣಾ ಪೊಲೀಸರು ಘಟನಾ ಸ್ಥಳಕ್ಕಾಮಿಸಿದ್ದು ತನಿಖೆ ನಡೆಸುತ್ತಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯದ ದೇವರ ದರ್ಶನಕ್ಕೆ ಬಂದಿದ್ದ ಭಕ್ತರ ಬ್ಯಾಗ್ ಕಳವು

Saturday, July 24th, 2021
Kukke Subrahmanya

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ದೇವರ ದರ್ಶನಕ್ಕೆ ಬಂದಿದ್ದ ಭಕ್ತರ ಬ್ಯಾಗೊಂದನ್ನು ಉಪಹಾರ ಸೇವಿಸುತ್ತಿದ್ದ ವೇಳೆ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಅದರಲ್ಲಿ ಸುಮಾರು 17 ಲಕ್ಷ ರೂ. ಮೌಲ್ಯದ ಸ್ವತ್ತುಗಳಿತ್ತು ಎನ್ನಲಾಗಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಗ್ರಾಮದ ಬೈರಲಿಂಗೇನ ಹಳ್ಳಿಯ ಗಂಗಮ್ಮ ಮತ್ತು ಮನೆಯವರು ಜು.20ಕ್ಕೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಖಾಸಗಿ ವಸತಿಗೃಹದಲ್ಲಿ ಉಳಿದಿದ್ದರು. ಮರು ದಿನ ಬೆಳಗ್ಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ರಥ ಬೀದಿಯ ಖಾಸಗಿ ಹೋಟೆಲ್ವೊಂದರಲ್ಲಿ ಉಪಹಾರ ಸೇವಿಸಿದ್ದಾರೆ. ಈ […]

ಮಂಗಳೂರು ನಗರ ಪೊಲೀಸ್ ಕಮಿಶನರೇಟ್ ನ ಶ್ವಾನ ಸುಧಾ ಇನ್ನಿಲ್ಲ

Saturday, July 24th, 2021
Dog-Sudha

ಮಂಗಳೂರು: ಹಲವಾರು ಅಪರಾಧ ಕೃತ್ಯಗಳಲ್ಲಿ ಆರೋಪಿಗಳ ಪತ್ತೆಯಲ್ಲಿ ಪ್ರಮುಖ ಪಾತ್ರ ವಹಿಸಿದ ನಗರ ಪೊಲೀಸ್ ಕಮಿಶನರೇಟ್ ನ ಶ್ವಾನದಳದ ಸದಸ್ಯೆ ಸುಧಾ ಮೃತಪಟ್ಟಿದೆ. ಡೊಬರ್ ಮನ್ ಶ್ವಾನ 2011 ಮಾರ್ಚ್ 15 ರಂದು ಜನಿಸಿತ್ತು. 2013 ಏ.2ರಂದು ಸೇವೆಗೆ ಸೇರಿತ್ತು. ಸಂದೀಪ್ ಎಂಬವರು ಈ ಶ್ವಾನದ ನಿರ್ವಹಣೆ ಮಾಡುತ್ತಿದ್ದರು. ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್ ಮೊದಲಾದ ಹಿರಿಯ ಅಧಿಕಾರಿಗಳು ಮೃತ ಶ್ವಾನಕ್ಕೆ ಅಂತಿಮ ನಮನ ಸಲ್ಲಿಸಿದರು.

ವಿಶಾಲಾ ಗಾಣಿಗ ಕೊಲೆ ಪ್ರಕರಣದ ಇನ್ನೊಬ್ಬ ಆರೋಪಿ ಮುಂಬೈನಲ್ಲಿ ವಶಕ್ಕೆ

Saturday, July 24th, 2021
Vishala Ganiga

ಉಡುಪಿ  :  ವಿಶಾಲಾ ಗಾಣಿಗ ಕೊಲೆ ಪ್ರಕರಣದ ಆರೋಪಿ ರಾಮಕೃಷ್ಣ ಗಾಣಿಗನ ನಾಲ್ಕು ದಿನಗಳ ಪೊಲೀಸ್ ಕಸ್ಟಡಿ ಶುಕ್ರವಾರ ಕೊನೆಗೊಂಡಿದ್ದು ಆತನನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು. ಉಪ್ಪಿನಕೋಟೆಯ ಕುಮ್ರಗೋಡಿನ ಪ್ಲ್ಯಾಟ್ ನಲ್ಲಿ ನಡೆದ ಕೊಲೆ ಪ್ರಕರಣದ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ತನಿಖಾಧಿಕಾರಿ ಬ್ರಹ್ಮಾವರ ಸಿ.ಪಿ.ಐ ಅನಂತಪದ್ಮನಾಭ ಮತ್ತು ತಂಡ ನ್ಯಾಯಾಲಯಕ್ಕೆ ಹಾಜರುಪಡಿಸಿತು. ತಲೆಮರೆಸಿಕೊಂಡಿದ್ದ ಇನ್ನೊಬ್ಬ ಆರೋಪಿಯನ್ನು ಇದೀಗ ತನಿಖಾ ತಂಡ ಮುಂಬೈನಲ್ಲಿ ವಶಕ್ಕೆ ಪಡೆದಿದೆ ಎನ್ನಲಾಗಿದೆ. ಹಾಗೂ ಕೊಲೆಯ ಸಂದರ್ಭ ವಿಶಾಲಾ ಧರಿಸಿದ್ದ ಸುಮಾರು […]

ಕೋವಿಡ್-19 ಸೋಂಕಿನ ಸಂಭಾವ್ಯ ಮೂರನೇ ಅಲೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ

Saturday, July 24th, 2021
KV Rajendra

ಮಂಗಳೂರು : ಕೋವಿಡ್-19 ಸೋಂಕಿನ ಮೊದಲ ಹಾಗೂ ಎರಡನೇ ಅಲೆಯನ್ನು ನಿಯಂತ್ರಿಸುವಲ್ಲಿ ಜಿಲ್ಲಾಡಳಿತದೊಂದಿಗೆ ವೈದ್ಯಕೀಯ ಕಾಲೇಜುಗಳು, ಖಾಸಗಿ ಆಸ್ಪತ್ರೆಗಳು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ತಂಡಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದು, ಸಂಭಾವ್ಯ ಮೂರನೇ ಅಲೆ ಎದುರಾದಲ್ಲೀ ಅದನ್ನು ತಡೆಗಟ್ಟಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಸೂಚಿಸಿದರು. ಅವರು ಜು.23ರ ಶುಕ್ರವಾರ ನಗರದ ವೆನ್‍ಲಾಕ್ ಮಕ್ಕಳ ಆಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಭಾರತೀಯ […]

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನ್ನದಾನ ನಿಧಿಗೆ 10 ಲಕ್ಷ ರೂ. ದೇಣಿಗೆ ನೀಡಿದ ದೇವಸ್ಥಾನ ತಮಿಳು ನಿರ್ಮಾಪಕ

Saturday, July 24th, 2021
Arun Kumar

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತಮಿಳು ಚಿತ್ರರಂಗದ ನಿರ್ಮಾಪಕ, ನಿರ್ದೇಶಕ ಅರುಣ್ ಕುಮಾರ್(ಅಟ್ಲೀ) ದಂಪತಿ ಶುಕ್ರವಾರ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ವೇಳೆ ಅವರು ದೇವಳದ ಅನ್ನದಾನ ನಿಧಿಗೆ 10 ಲಕ್ಷ ರೂ. ದೇಣಿಗೆ ನೀಡಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಅವರಿಗೆ ದೇಣಿಗೆಯ ಚೆಕ್ ಅನ್ನು ಹಸ್ತಾಂತರಿಸಿದರು. ದೇವಳದ ಕಚೇರಿ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್, ಸುಬ್ರಹ್ಮಣ್ಯ ಗ್ರಾಪಂ ಸದಸ್ಯ ಹರೀಶ್ ಇಂಜಾಡಿ, ಮಾಜಿ ಸದಸ್ಯ ಸುರೇಶ್ ಭಟ್ ಉಪಸ್ಥಿತರಿದ್ದರು.

ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಸರಿಪಡಿಸಿ : ವಿ ಸುನಿಲ್ ಕುಮಾರ್ ಸೂಚನೆ

Friday, July 23rd, 2021
Mobile Network

ಕಾರ್ಕಳ : ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಕಾರ್ಕಳ ಕ್ಷೇತ್ರದ ಗ್ರಾಮೀಣ ಪ್ರದೇಶದ ಶಾಲಾ ಕಾಲೇಜು ಮಕ್ಕಳ ಆನ್ ಲೈನ್ ತರಗತಿಗಳಿಗೆ, ಮನೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಮತ್ತು ಸಾರ್ವಜನಿಕರ ಸಂಪರ್ಕಕ್ಕೆ ತುಂಬಾ ತೊಂದರೆಯಾಗುತ್ತಿದ್ದು ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಶಾಸಕರಾದ ವಿ ಸುನಿಲ್ ಕುಮಾರ್ ರವರು ವಿಕಾಸ ಕಛೇರಿಯಲ್ಲಿ ಮೊಬೈಲ್ ಸೇವಾ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು. ಮೊಬೈಲ್ ಟವರ್ ಗಳು ಇಲ್ಲದ ಪ್ರದೇಶಗಳಲ್ಲಿ ಹೊಸ ಮೊಬೈಲ್ ಟವರ್ ಸ್ಥಾಪಿಸುವ ಬಗ್ಗೆ ಮತ್ತು ನೆಟ್‌ವರ್ಕ್ ಸಿಗ್ನಲ್ […]