ವಿವಿ ಕಾಲೇಜು:  ಜಿಲ್ಲಾಧಿಕಾರಿಗಳಿಂದ ಸಂಚಾರಿ ಲಸಿಕಾ ಕೇಂದ್ರಕ್ಕೆ ಚಾಲನೆ

Saturday, June 19th, 2021
Vaccination

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್‌ ಕ್ರಾಸ್‌ ಘಟಕ ಮತ್ತು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಇವುಗಳ ಜಂಟಿ ಸಹಯೋಗದಲ್ಲಿ ಬಸ್‌ ಸಿಬ್ಬಂದಿ ಮತ್ತು ಆಟೋ ಚಾಲಕರಿಗಾಗಿ ಕೊವಿಡ್‌- 19 ಲಸಿಕಾ ಅಭಿಯಾನವನ್ನು ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶನಿವಾರ ಆಯೋಜಿಸಲಾಗಿತ್ತು. ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಮತ್ತು ಬ್ಯಾಂಕ್‌ ಆಫ್‌ ಬರೋಡಾದ ಪ್ರಧಾನ ವ್ಯವಸ್ಥಾಪಕಿ ಮತ್ತು ವಲಯ ಮುಖ್ಯಸ್ಥೆ ಗಾಯತ್ರಿ ಆರ್‌ ಕಾರ್ಯಕ್ರಮ ಉದ್ಘಾಟಿಸಿದರು. ಗಣ್ಯರನ್ನು ಸ್ವಾಗತಿಸಿದ ಭಾರತೀಯ ರೆಡ್‌ ಕ್ರಾಸ್‌ ಸೊಸೈಟಿಯ […]

ಟ್ಯಾಕ್ಸಿ ಚಾಲಕರಿಗೆ ಕೊರೊನಾ ಲಸಿಕೆ :  ಶಾಸಕ ಡಾ.ಭರತ್ ಶೆಟ್ಟಿ ಭಾಗಿ

Saturday, June 19th, 2021
Auto Driver

ಮಂಗಳೂರು :  ಜಿಲ್ಲಾಡಳಿತ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಹಭಾಗಿತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಟ್ಯಾಕ್ಸಿ ಚಾಲಕರಿಗೆ ಕೊರೊನಾ ಲಸಿಕೆ ನೀಡಲು ನಿರ್ಧರಿಸಲಾಗಿದ್ದು, ಶನಿವಾರ ಮಂಗಳೂರಿನ ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಅಭಿಯಾನವನ್ನು ಉದ್ಘಾಟಿಸಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲೆಯ ಅಶಕ್ತ ವ್ಯಕ್ತಿಗಳಿಗೆ ಅವರ ಸೂರಿಗೆ ತೆರಳಿ ಲಸಿಕೆ ನೀಡುವ ವಿನೂತನ ಅಭಿಯಾನಕ್ಕೂ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಕೋಟಾ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡ ಜಿಲ್ಲೆಯ ಮಾನ್ಯ ಸಂಸದರೂ […]

ಮಂಗಳೂರು ಮಹಾನಗರಪಾಲಿಕೆಯ ಬೋಳೂರು ಸ್ಮಶಾನದಲ್ಲಿ ವಿದ್ಯುತ್ ಚಿತಾಗಾರ ಕಾರ್ಯಾರಂಭ

Saturday, June 19th, 2021
crematorium

ಮಂಗಳೂರು : ಮಹಾನಗರಪಾಲಿಕೆ ವ್ಯಾಪ್ತಿಯೊಳಗೆ ಕೋವಿಡ್ ಹಾಗು ಇತರೆ ಕಾರಣಗಳಿಂದ ಮೃತಪಟ್ಟ ಶವಗಳ ಅಂತ್ಯಕ್ರಿಯೆಗಾಗಿ ಮನಪಾ ಅಧೀನದ ಬೋಳೂರು ಸ್ಮಶಾನದಲ್ಲಿ ಸರ್ಕಾರದ ಅನುದಾನದಡಿ ರೂ. 71.00 ಲಕ್ಷ ವೆಚ್ಚದಲ್ಲಿ ವಿದ್ಯುತ್ ಚಿತಾಗಾರವನ್ನು ಅಭಿವೃದ್ದಿಪಡಿಸುವ ಕಾಮಗಾರಿಯನ್ನು ಮಂಗಳೂರು ಮಹಾನಗರಪಾಲಿಕೆ ವತಿಯಿಂದ ಕೈಗೆತ್ತಿಕೊಂಡಿದ್ದು,  ಪ್ರಸ್ತುತ 2 ಸಂಖ್ಯೆಯ ವಿದ್ಯುತ್ ಕುಲುಮೆ (Furnace) ಯನ್ನು ಅಭಿವೃದ್ದಿಪಡಿಸಲಾಗುತ್ತಿದ್ದು, ಈ ಪೈಕಿ ಈಗಾಗಲೇ 1 ವಿದ್ಯುತ್ ಕುಲುಮೆ (Furnace) ಯ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಉಪಯೋಗಕ್ಕೆ ಸಿದ್ಧವಾಗಿದ್ದು, ಇನ್ನೊಂದು ವಿದ್ಯುತ್ ಕುಲುಮೆ (Furnace) ಯು […]

ತುಳು ಧ್ವಜಕ್ಕೆ ಅವಮಾನ ಮಾಡಿದ ಪ್ರಕರಣ, ಬೆಂಗಳೂರು ಮೂಲದ ಆರೋಪಿ ಬಂಧನ

Friday, June 18th, 2021
surya-NK

ಮಂಗಳೂರು : ತುಳು ಧ್ವಜಕ್ಕೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಸೂರ್ಯ ಎನ್ ಕೆ. ಬೆಂಗಳೂರಿನ ಶ್ರೀ ರಾಂಪುರ ನಿವಾಸಿ ಎನ್ನಲಾಗಿದೆ ಆರೋಪಿ ಸೂರ್ಯ ಎನ್ ಕೆ.ಪಾದರಕ್ಷೆಯಲ್ಲಿ ತುಳುನಾಡಿನ ಧ್ವಜದ ಚಿತ್ರ ಬಿಡಿಸಿ ತುಳುಭಾಷೆಗೆ ತುಳುನಾಡಿಗೆ ಅವಮಾನ ಎಸಗಿದ್ದ. ಚಪ್ಪಲಿಯಲ್ಲಿ ತುಳು ಧ್ವಜ ಬಳಸಿ ಎಡಿಟ್ ಮಾಡಿದ್ದ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಸೂರ್ಯ ಎಂಬ ಹೆಸರಿನಲ್ಲಿ ಪೋಸ್ಟ್ ಮಾಡಿದ್ದ. ಈತ ತನ್ನ ಫೇಸ್ ಬುಕ್ ಪೋಸ್ಟ್ ನಲ್ಲಿ ಈಗ ತುಳುನಾಡು ಚಪ್ಪಲ್ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶಕ್ತರ ನಿವಾಸಕ್ಕೆ ತೆರಳಿ ಲಸಿಕೆ‌ ನೀಡಲು ಜಿಲ್ಲಾಡಳಿತ ನಿರ್ಧಾರ

Friday, June 18th, 2021
vaccination

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ನೀಡಲ್ಪಡುವ ಉಚಿತ ಲಸಿಕಾ ಶಿಬಿರ ಮುಂದುವರೆದಿದ್ದು, ಮುಂದಿನ ದಿನಗಳಲ್ಲಿ ಅಶಕ್ತರಿಗೂ ಉಚಿತ ಲಸಿಕೆ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ.ಈ ಹಿನ್ನಲೆಯಲ್ಲಿ ಅನಾರೋಗ್ಯಕ್ಕೀಡಾದವರಿಗೆ ಮತ್ತು ಅಶಕ್ತ ಹಿರಿಯ ನಾಗರಿಕರು ಸೇರಿದಂತೆ ಮನೆಯಿಂದ ಹೊರ ಬಂದು ಲಸಿಕೆ‌ ಹಾಕಿಸಿಕೊಳ್ಳಲು ಸಾಧ್ಯವಾಗದಿರುವವರ ಮನೆ ಮನೆಗೆ ಬಂದು ಲಸಿಕೆ‌ ನೀಡಲು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ.ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ,ರೋಟರಿ ಮಂಗಳೂರು ಹಾಗೂ ಬ್ಯಾಂಕ್ ಆಫ್ ಬರೋಡಾ ಇವರ […]

ಮೂಲ್ಕಿ ತಾಲೂಕು ಪತ್ರಕರ್ತರ ಸಂಘದ ಅಧಿಕೃತ ರಚನೆಗೆ ಚಾಲನೆ

Friday, June 18th, 2021
Mulki Press

ಮಂಗಳೂರು : ರಾಜ್ಯದಲ್ಲಿ 100 ಕ್ಕೂ ಅಧಿಕ ಮಂದಿ ಪತ್ರಕರ್ತರು ಕೊರೋನಾ ಸಂಕಷ್ಟದ ಎರಡು ಅಲೆಗಳ ಸಂದರ್ಭದಲ್ಲಿ ಸಾವಿಗೀಡಾ ಗಿದ್ದಾರೆ ಎಂದು ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ರಾ ಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ. ಅವರು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿಂದು ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಸದಸ್ಯ ರನ್ನು ಭೇಟಿ ಮಾಡಿ. ಅಗಲಿದ ಪತ್ರಕರ್ತರಿಗೆ ಸಂತಾಪ ಸೂಚಿಸಿ ಮಾತನಾಡುತ್ತಿದ್ದರು. ಕೊರೋನಾ ಸಂದರ್ಭದಲ್ಲಿ ವ್ರತ್ತಿನಿರತ ಪತ್ರಕರ್ತರು ಸವಾಲುಗಳ ಮಧ್ಯೆ ಕಾರ್ಯ ನಿರ್ವಹಿಸಿದ್ದಾರೆ.ಈ […]

ಸಂಚಾರಿ ವಿಜಯ್ ಗೆ ಶ್ರದ್ಧಾಂಜಲಿ, ಮರಣದ ಬಳಿಕ ಅಂಗಾಂಗ ದಾನ ಮಾಡುವುದಾಗಿ ಘೋಷಿಸಿದ ಅಭಯಚಂದ್ರ ಜೈನ್

Friday, June 18th, 2021
Abhayachandra Jain

ಮಂಗಳೂರು  : ನಟ ಸಂಚಾರಿ ವಿಜಯ್ ಮರಣ ನಂತರವೂ ಏಳು ಜನರಿಗೆ ಅಂಗಗಳನ್ನು ನೀಡಿ ಇತರರಿಗೆ ಜೀವದಾನದ ಮಾದರಿಯಾಗಿದ್ದಾರೆ ಎಂದು ಮಾಜಿ ಸಚಿವ ಅಭಯ ಚಂದ್ರ ಜೈನ್ ತಿಳಿಸಿದ್ದಾರೆ. ದ.ಕ. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿಂದು ಸಂಚಾರಿ ವಿಜಯ್ ಭಾವಚಿತ್ರಕ್ಕೆ ಹೂಮಾಲೆ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಿದ ಅವರು, ಮರಣಾ ನಂತರ ತಾನೂ ಕೂಡಾ ತನ್ನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿರುವುದಾಗಿ ಪ್ರಕಟಿಸಿದರು. ನಾನು  ಮರಣ ಹೊಂದಿದ  ಬಳಿಕ ನನ್ನ ಅಂಗಾಂಗಳನ್ನು ದಾನ ಮಾಡುವಂತೆ   ವಿಲ್  ಬರೆಯಲು ನಿರ್ಧರಿಸಿದ್ದೇನೆ ಎಂದು ಹೇಳಿದ ಅವರು, ದ.ಕ. ಜಿಲ್ಲಾ […]

ಆಧುನಿಕ ಜಗತ್ತಿನ ಸವಾಲಿಗೆ ವೇದಾಂತ ಚಿಂತನೆ ಪರಿಹಾರ : ಡಾ. ವಿವೇಕ್ ಮೋದಿ

Thursday, June 17th, 2021
vivek-modi

ಮಂಗಳೂರು : “ಜಗತ್ತು ಎಷ್ಟೇ ಮುಂದುವರಿದರೂ ಭಾರತದ ಚಿಂತನೆಗಳು ಸಾರ್ವಕಾಲಿಕ. ಭಾರತೀಯ ವೇದಾಂತ ಚಿಂತನೆಗಳಲ್ಲಿ ಆಧುನಿಕ ಜಗತ್ತಿನ ಪ್ರತಿಯೊಂದು ಸವಾಲಿಗೂ ಪರಿಹಾರವಿದೆ, ಆತ್ಮಶ್ರದ್ಧೆಯೊಂದಿದ್ದರೆ ಯಾವುದೂ ಇಲ್ಲಿ ಅಬೇಧ್ಯವಲ್ಲ ಎಂಬ ಸಂದೇಶವನ್ನು ಸ್ವಾಮಿ ವಿವೇಕಾನಂದರು ನೀಡಿದ್ದಾರೆ” ಎಂದು, ಹೈದರಾಬಾದ್ನ ನಾಯಕತ್ವ ತರಬೇತುದಾರ ಡಾ. ವಿವೇಕ್ ಮೋದಿ ಹೇಳಿದರು. ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ‘ವಿವೇಕ ವಾಣಿʼ ಆನ್‌ಲೈನ್‌ ಸರಣಿ ಉಪನ್ಯಾಸ ಕಾರ್ಯಕ್ರಮದ ಐದನೇ ಉಪನ್ಯಾಸದಲ್ಲಿ “ಪ್ರಸ್ತುತ ಸವಾಲುಗಳನ್ನು ಎದುರಿಸಲು ಸ್ವಾಮಿ ವಿವೇಕಾನಂದರ ಚಿಂತನೆ” […]

ಪಾಲಿಕೆಯ ಅಧಿಕಾರಿಗಳೆಂದುಕೊಂಡು ಲಾಕ್‌ಡೌನ್ ವೇಳೆ ತೆರೆದಿದ್ದ ಬಟ್ಟೆ ಅಂಗಡಿಯಲ್ಲಿ ವಸೂಲಿ

Thursday, June 17th, 2021
manapa

ಮಂಗಳೂರು : ಮಹಾನಗರ ಪಾಲಿಕೆಯ ಅಧಿಕಾರಿಗಳೆಂದು ಹೇಳಿಕೊಂಡು ನಗರದ ಟೋಕಿಯೋ ಮಾರ್ಕೆಟ್‌ನಲ್ಲಿರುವ ಬಟ್ಟೆ ಅಂಗಡಿಯೊಂದಕ್ಕೆ ಬಂದ ಮೂವರು ಅಂಗಡಿ ತೆರೆದಿರುವುದಕ್ಕೆ ದಂಡ ಕಟ್ಟಲು ಹೇಳಿರುವುದಾಗಿ  ಆರೋಪಿಸಿ ನಗರದ ಬಂದರು ಠಾಣೆಯಲ್ಲಿ ದೂರು ದಾಖಲಾಗಿದೆ. ಲಾಕ್‌ಡೌನ್ ವೇಳೆ ಅಂಗಡಿ ತೆರೆದಿದ್ದ ವೇಳೆ  ಟೋಕಿಯೊ ಮಾರ್ಕೆಟ್‌ ಶಾಪಿಂಗ್ ಮಳಿಗೆಗೆ ಗುರುವಾರ  ಬೆಳಗ್ಗೆ 9 ಗಂಟೆ ಸುಮಾರಿಗೆ ಭೇಟಿ ನೀಡಿದ ಮೂವರು, ತಾವು ಪಾಲಿಕೆ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಲಾಕ್‌ಡೌನ್ ವೇಳೆ ಅಂಗಡಿ ತೆರೆದಿರುವುದಕ್ಕೆ 50,000 ರೂ. ನೀಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ತಾನು ಒಪ್ಪದಿದ್ದಾಗ ಎಲ್ಲ ಸರಿ […]

ಅಕ್ಕಿ ಸಾಗಾಟದ ಲಾರಿ ಮೂಡುಬಿದಿರೆ ಬಳಿ ದಂಡೆಗೆ ಢಿಕ್ಕಿ

Thursday, June 17th, 2021
raise-lorry

ಬಂಟ್ವಾಳ : ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಬಂಟ್ವಾಳ- ಮೂಡುಬಿದಿರೆ ರಸ್ತೆಯ ವಿದ್ಯಾಗಿರಿ ಬಳಿ ರಸ್ತೆ ಬದಿಯ ದಂಡೆಗೆ ಢಿಕ್ಕಿ ಹೊಡೆದ ಘಟನೆ ಗುರುವಾರ ನಡೆದಿದೆ. ಘಟನೆಯಲ್ಲಿ ಲಾರಿಯ ಚಾಲಕ ಹಾಗೂ ನಿರ್ವಾಹಕ ಗಾಯಗೊಂಡಿದ್ದಾರೆ. ಲಾರಿಯು ಶಿವಮೊಗ್ಗದಿಂದ ಪುತ್ತೂರಿಗೆ ಅಕ್ಕಿ ಸಾಗಾಟ ಮಾಡುತ್ತಿತ್ತು. ಲಾರಿಯನ್ನು ಕ್ರೇನ್ ಮೂಲಕ ಮೇಲಕ್ಕೆತ್ತಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೊಲೀಸರು ಭೇಟಿ ನೀಡಿದ್ದಾರೆ.