ಕೊಣಾಜೆ : ಇಬ್ರಾಹಿಂ ಕೋಡಿಜಾಲ್ ಮಗನ ಮನೆಗೆ ನುಗ್ಗಿದ ಕಳ್ಳರು, ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿ

Thursday, March 25th, 2021
Gold Theft

ಕೊಣಾಜೆ  : ಮಂಗಳೂರು ವಿವಿ ಕ್ಯಾಂಪಸ್ ಸಮೀಪದಲ್ಲಿರುವ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಅಪಾರ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಹಾಜಿ ಇಬ್ರಾಹಿಂ ಕೋಡಿಜಾಲ್ ಅವರ ಪುತ್ರ ಹಬೀಬ್ ಅವರ ಮನೆಯಲ್ಲಿ ಈ ಕಳ್ಳತನ ಕೃತ್ಯ ನಡೆದಿದೆ. ಹಬೀಬ್, ಅವರ ಕುಟುಂಬದ ನಾಲ್ಕು ಮಂದಿ ಮನೆಯೊಳಗೆ ಇದ್ದಾಗಲೇ ರಾತ್ರಿ ವೇಳೆಯಲ್ಲಿ ಕಳ್ಳತನ ನಡೆಸಿದ್ದಾರೆ. ಮನೆಯ ಮಹಡಿಯ ಬಾಗಿಲು ಮುರಿದು ಒಳಗೆ ಪ್ರವೇಶಿಸಿರುವ ದುಷ್ಕರ್ಮಿಗಳು‌ ಕೋಣೆಯ ಕಪಾಟಿನಲ್ಲಿದ್ದ ಸುಮಾರು 100 […]

ಹೊತ್ತಿ ಉರಿದ ಕಂಟೇನರ್ ಲಾರಿ ಹಾಗೂ ಖಾಸಗಿ ಬಸ್ : ಚಾಲಕ ಸಜೀವ ದಹನ

Thursday, March 25th, 2021
lorry

ನೆಲ್ಯಾಡಿ : ಕಂಟೇನರ್ ಲಾರಿ ಹಾಗೂ ಖಾಸಗಿ ಬಸ್ ಢಿಕ್ಕಿಹೊಡೆದ ಪರಿಣಾಮ ಬೆಂಕಿ ಅವರಿಸಿಕೊಂಡು ಲಾರಿ ಚಾಲಕ ಸಜೀವ ದಹನಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿಯಲ್ಲಿ ಮಾರ್ಚ್ 24 ರ ಬುಧವಾರ ತಡರಾತ್ರಿ ನಡೆದಿದೆ. ಘಟನೆಯ ಪರಿಣಾಮ ಬಸ್ ಸಂಪೂರ್ಣ ಭಸ್ಮಗೊಂಡಿದೆ. ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಶ್ರೀ ದುರ್ಗಾ ಟ್ರಾವೆಲ್ಸ್ ಸಂಸ್ಥೆಯ ಖಾಸಗಿ ಬಸ್ ಹಾಗೂ ಬೆಂಗಳೂರು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಕಂಟೇನರ್ ಲಾರಿ ನಡುವೆ ನೆಲ್ಯಾಡಿ ಸಮೀಪ ಮಣ್ಣಗುಡ್ಡ ಎಂಬಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. […]

ಮಡಿಕೇರಿಯಲ್ಲಿಒಂಟಿ ಮಹಿಳೆಯ ಕೊಲೆ, ಮೂಡುಬಿದಿರೆಯ ಯುವಕನ ಬಂಧನ

Thursday, March 25th, 2021
Anil

ಮೂಡುಬಿದಿರೆ : ಮಡಿಕೇರಿಯಲ್ಲಿಒಂಟಿ ಮಹಿಳೆಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಮೂಡುಬಿದಿರೆಯ ಯುವಕನನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮೂಡುಬಿದಿರೆಯ ಹೊಸಬೆಟ್ಟು ನಿವಾಸಿ ಅನಿಲ್ ಎಂದು ಗುರುತಿಸಲಾಗಿದೆ. ಆರೋಪಿಯು ನಗರದ ಖಾಸಗಿ ರೆಸಾರ್ಟಿನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಯ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಮಡಿಕೇರಿಯಲ್ಲಿ 70 ವರ್ಷದ ಒಂಟಿ ಮಹಿಳೆ ಲಲಿತಾ ಅವರನ್ನು ಕೊಲೆ ಮಾಡಿ ಚಿನ್ನಾಭರಣಗಳನ್ನು ದೋಚಲಾಗಿದ್ದು, ಈ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರ್ಕರಣ ದಾಖಲಾಗಿತ್ತು. ಇನ್ನು ಆರೋಪಿಯು ಮಕ್ಯಾನಿಕ್ ಇಂಜಿನಿಯರ್ ಆಗಿದ್ದು, […]

ಬೆಕ್ಕಿನ ಜೀವ ಉಳಿಸಲು ಹೋದ ಬೈಕ್ ಸವಾರನ ಮೇಲೆ, ಕಾರು ಹರಿದು ಸಾವು

Wednesday, March 24th, 2021
Jishnu

ಕಾಸರಗೋಡು :  ಬೈಕ್ ಸವಾರರನ ಮೇಲೆ ಮೇಲೆ ಕಾರು ಹರಿದು ಮೃತಪಟ್ಟ ಘಟನೆ ಕಾಞ೦ಗಾಡ್ ನ ಅಲಾಮಿಪಳ್ಳಿ ಯಲ್ಲಿ ಮಾ.24ರ ಬುಧವಾರ ನಡೆದಿದೆ. ಘಟನೆಯಿಂದ ಸಹ ಸವಾರ ಗಾಯಗೊಂಡಿದ್ದಾನೆ . ನೀಲೇಶ್ವರ ಅಂಬಲತ್ತರ ದ ಜಿಷ್ಣು (24) ಮೃತಪಟ್ಟ ಸವಾರ. ಸಹ ಸವಾರ ರಂಜಿತ್ ಗಾಯ ಗೊಂಡಿದ್ದು , ಆಸ್ಪತ್ರೆಗೆ ದಾಖಲಿಸಲಾಗಿದೆ . ಅಡ್ಡ ಬಂದ ಬೆಕ್ಕನ್ನು ತಪ್ಪಿಸಲೆತ್ನಿಸಿದಾಗ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದಾಗ ಹಿಂಬದಿಯಿಂದ ಬಂದ ಕಾರು ಮೇಲೆ ಹರಿದು ಗಂಭೀರ ಗಾಯಗೊಂಡಿದ್ದ ರೆನ್ನಲಾಗಿದೆ. ಗಂಭೀರ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ […]

ʼಕೊವಿಡ್‌ ಲಸಿಕೆ, ಸರ್ಕಾರಿ ವ್ಯವಸ್ಥೆ ಬಗ್ಗೆ ನಂಬಿಕೆ ಇರಲಿʼ – ಡಾ. ಅಣ್ಣಯ್ಯ ಕುಲಾಲ್

Wednesday, March 24th, 2021
UCM

ಮಂಗಳೂರು: ಕೊವಿಡ್‌ ಲಸಿಕೆಯ ಕುರಿತು ಇರುವ ತಪ್ಪು ಕಲ್ಪನೆಗಳನ್ನು ಮನಸ್ಸಿಂದ ಹೊರಹಾಕಿ ಅರ್ಹರು ಲಸಿಕೆ ಹಾಕಿಸಿಕೊಳ್ಳೋಣ. ಸಾಂಕ್ರಾಮಿಕ ಕಲಿಸಿರುವ ಪಾಠದಿಂದ ಎಚ್ಚೆತ್ತು ಎರಡನೇ ಅಲೆಯನ್ನು ತಡೆಯೋಣ, ಎಂದು ಶ್ರೀನಿವಾಸ ವಿಶ್ವವಿದ್ಯಾನಿಲಯದ ಮುಖ್ಯ ಆರೋಗ್ಯಾಧಿಕಾರಿ ಮತ್ತು ಪ್ರಾಧ್ಯಾಪಕ ಡಾ. ಅಣ್ಣಯ್ಯ ಕುಲಾಲ್‌ ಕರೆ ನೀಡಿದ್ದಾರೆ. ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಯುವ ರೆಡ್‌ಕ್ರಾಸ್‌, ಎನ್‌ಸಿಸಿ, ಎನ್‌ಎಸ್‌ಎಸ್‌ ಮತ್ತು ಇತರ ಸಂಘಗಳ ಆಶ್ರಯದಲ್ಲಿ ರವೀಂದ್ರ ಸಭಾಭವನದಲ್ಲಿ ಬುಧವಾರ ನಡೆದ ಕೊವಿಡ್‌- 19 ಜಾಗೃತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಶಿಕ್ಷಕರು, ಎನ್‌ಸಿಸಿ, […]

ಮಂಗಳೂರಿನ ಐವರು ಪೊಲೀಸರು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ

Tuesday, March 23rd, 2021
Police officers

ಮಂಗಳೂರು : ದಕ್ಷಿಣ ಕನ್ನಡದಲ್ಲಿ ಸೇವೆ ಸಲ್ಲಿಸುತ್ತಿರುವ ನಾಲ್ವರು ಪೊಲೀಸರು ಮತ್ತು ಒಬ್ಬ ಪೊಲೀಸ್ ಮಹಿಳೆ 2020 ರ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯದ 115 ಅಧಿಕಾರಿಗಳಲ್ಲಿ ಪುತ್ತೂರಿನ ಪ್ರವೀಣ್ ರೈ, ಉಪ್ಪಿನಂಗಡಿ ಪೊಲೀಸ್ ಠಾಣೆ, ಬಜ್ಪೆಯ ಸಂಪತ್ ಕುಮಾರ್ ಬಿ, ಜಿಲ್ಲಾ ಪೊಲೀಸ್ ತಾಂತ್ರಿಕ ವಿಭಾಗದ  ನಯನ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ,  ಸುಜನ್ ಶೆಟ್ಟಿ ಮಂಗಳೂರು ಉತ್ತರ ಪೊಲೀಸ್ ಠಾಣೆ ಮತ್ತು ಸಿಸಿಬಿ ಮಂಗಳೂರಿನ ಅಬ್ದುಲ್ ಜಬ್ಬರ್ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾದ ಐದು ಪೊಲೀಸರು.

ಜ್ಯೋತಿಷಿ ಪ್ರಭಾವದಿಂದ ಡಿವೋರ್ಸ್ : ರಾಡ್​ನಿಂದ ಹಲ್ಲೆ ಮಾಡಿದ ವ್ಯಕ್ತಿ

Tuesday, March 23rd, 2021
Astrologer

ಬಂಟ್ವಾಳ: ವರ್ಷದ ಹಿಂದೆ  ತನ್ನ ಪತ್ನಿ ಬಿಟ್ಟು ಹೋಗಲು ಜ್ಯೋತಿಷಿಯೇ ಕಾರಣ ಎಂದು ಆರೋಪಿಸಿ ರಾಡ್ನಿಂದ ಹಲ್ಲೆಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಿ.ಸಿ. ರೋಡ್ ವಾಣಿಜ್ಯ ಸಂಕೀರ್ಣದಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ ಲಕ್ಷ್ಮೀಕಾಂತ ಭಟ್ ಯಾನೆ ಹನುಮಂತಪ್ಪ ಎಂಬ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಪಂಜಿಕಲ್ಲು ನಿವಾಸಿ ಮೋಹನ ಪ್ರಭು (38) ಎಂಬಾತನನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ಜ್ಯೋತಿಷ್ಯದ ಮೂಲಕ ತನ್ನ ಸಂಸಾರದಲ್ಲಿ ಬಿರುಕು ತಂದಿದ್ದ. ತನ್ನ ಹೆಂಡತಿ ಬಿಟ್ಟು ಹೋಗಲು ಕಾರಣವಾಗಿದ್ದ ಎಂಬ ಕೋಪದಲ್ಲಿ ಪ್ರಭು, […]

ಬಾಡಿಗೆ ಮನೆ ಕೇಳುವ ನೆಪದಲ್ಲಿ ಚಿನ್ನಾಭರಣ ಲೂಟಿ : ಆರೋಪಿಯ ಬಂಧನ

Tuesday, March 23rd, 2021
Mujeeb

ಮಂಗಳೂರು: ನಗರದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಮ ಮತ್ತು ನಿತ್ಯಾನಂದ ನಗರದ ಮನೆಗಳಿಗೆ ನುಗ್ಗಿ 1.40 ಲಕ್ಷ ರೂ. ಚಿನ್ನಾಭರಣ ಕಳವು ಮಾಡಿದ ಆರೋಪಿಯನ್ನು ಸೊತ್ತು ಸಹಿತ ಪೊಲೀಸರು ಕಾಸರಗೋಡು ಜಿಲ್ಲೆಯ ನರಿಂಗಾನ ಗ್ರಾಮದ ನೆತ್ತಿಲಪದವು ಎಂಬಲ್ಲಿ ವಶಪಡಿಸಿಕೊಂಡಿದ್ದಾರೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಉಪ್ಪಳ, ಮಂಗಲ್ಪಾಡಿ ನಿವಾಸಿ ಮುಜೀಬ್ ರೆಹಮಾನ್ ಎಂ.ಎ. ಬಂಧಿತ ಆರೋಪಿ. ಬಾಡಿಗೆ ಮನೆ ಕೇಳಿಕೊಂಡು ಬೆಳ್ಮ ಮತ್ತು ನಿತ್ಯಾನಂದ ನಗರದ ಅಶ್ವಿನಿ ಎಂಬವರ ಮನೆಗೆ ಹೋಗಿದ್ದನು. ಆರೋಪಿ ಮುಜೀಬ್ ಬಳಿಕ […]

ವಿಧಾನಸಭಾ ಚುನಾವಣೆ : ಕಾಸರಗೋಡು ಜಿಲ್ಲೆಯ ಐದು ಕ್ಷೇತ್ರಗಳಲ್ಲಿ 38 ಅಭ್ಯರ್ಥಿಗಳು ಸ್ಪರ್ಧೆಗೆ

Tuesday, March 23rd, 2021
Surendran

ಕಾಸರಗೋಡು : ಕೇರಳ ವಿಧಾನಸಭಾ ಚುನಾವಣೆ ಎಪ್ರಿಲ್ 6 ರಂದು ನಡೆಯಲಿದ್ದು ಕಾಸರಗೋಡು ಜಿಲ್ಲೆಯ ಐದು ಕ್ಷೇತ್ರಗಳಲ್ಲಿ 38 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಂಜೇಶ್ವರದಲ್ಲಿ ಆರು, ಕಾಸರಗೋಡು ಏಳು, ಉದುಮ ಆರು, ಕಾಞಂಗಾಡ್ 11, ತೃಕ್ಕರಿಪುರ ಕ್ಷೇತ್ರದಲ್ಲಿ ಎಂಟು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಂಜೇಶ್ವರ: ಎ. ಕೆ ಎಂ ಅಶ್ರಫ್ (ಮುಸ್ಲಿಂ ಲೀಗ್), ವಿ.ವಿ ರಮೇಶನ್ (ಸಿ ಪಿ ಐ ಎಂ), ಕೆ. ಸುರೇಂದ್ರನ್ (ಬಿಜೆಪಿ), ಪ್ರವೀಣ್ ಕುಮಾರ್ (ಅಣ್ಣಾ ಡೆಮೊಕ್ರಟಿಕ್ ಹ್ಯೂ ಮನ್ ರೈಟ್ಸ್ ಆಫ್ ಇಂಡಿಯಾ), ಜೋನ್ ಡಿಸೋಜ […]

67ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಭಾಗದಲ್ಲಿ ಪಿಂಗಾರ ತುಳು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ

Tuesday, March 23rd, 2021
pingara

ಮಂಗಳೂರು :  ಪಿಂಗಾರ ತುಳು ಚಿತ್ರ 2019ನೆ ಸಾಲಿನ 67ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಭಾಗದಲ್ಲಿ ಅತ್ಯತ್ತಮ ತುಳು ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ. ನಿರ್ದೇಶಕ ಆರ್. ಪ್ರೀತಂ ಶೆಟ್ಟಿ ನಿರ್ದೇಶನದ ಪಿಂಗಾರ ಸಿನಿಮಾಕ್ಕೆ ಇದೀಗ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ತುಳುನಾಡಿನ ದೈವಾರಾಧನೆ ಮತ್ತು ಅದರ ಸುತ್ತ ಒಳಗೊಂಡಿರುವ ನಂಬಿಕೆ,ದೈವದ ನುಡಿ ಯೊಂದಿಗೆ ಬೆಳೆದು ಬಂದ ಶ್ರದ್ಧೆ,ಭಕ್ತಿ ಯೊಂದಿಗೆ ಸೇರಿಕೊಂಡಿರುವ ತುಳುವರ ಬದುಕು ಸಂಸ್ಕೃತಿ, ದೈವದ ಪಾತ್ರಿಯ ದೈವಿಕ ನುಡಿಗಳನ್ನು ಅಲೌಕಿಕ ಶಕ್ತಿಯ ಆಜ್ಞೆಯೆಂದು ಪಾಲಿಸುತ್ತಾ ಬಂದಿರುವ ತುಳುವರ ಸಾಮಾಜಿಕ ಮತ್ತು ಧಾರ್ಮಿಕ ಬದುಕಿನ […]