ಮಂಗಳೂರಿನಿಂದ ಕೇರಳಕ್ಕೆ ವಿದ್ಯುತ್ ಸರಬರಾಜು, ಹಲವು ಕೃಷಿ ಭೂಮಿಗಳಿಗೆ ಆಪತ್ತು

Thursday, January 14th, 2021
Ramanatha Rai

ಮಂಗಳೂರು: ಯುಪಿಸಿಎಲ್‌ ಕಂಪೆನಿಯು ನಂದಿಕೂರಿನಿಂದ ಕೇರಳಕ್ಕೆ ಅಳವಡಿಸಲಿರುವ ವಿದ್ಯುತ್‌ ಪ್ರಸರಣ ತಂತಿ ಹಾದು ಹೋಗುವ ಪ್ರದೇಶಗಳ ಕುರಿತು ಸರಕಾರ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಭೂಮಿಯ ಮೇಲ್ಭಾಗದಲ್ಲಿ ತಂತಿ ಎಳೆಯುವ ಬದಲು ಭೂಗತ ಕೇಬಲ್‌ ಅಳವಡಿಸುವುದು ಸೂಕ್ತ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ. ನಂದಿಕೂರಿನಿಂದ ಮೂಡುಬಿದಿರೆ- ಬಂಟ್ವಾಳ-ವಿಟ್ಲ- ಕರೋ ಪಾಡಿ ಮೂಲಕ ಕಾಸರಗೋಡು ಭಾಗಕ್ಕೆ ವಿದ್ಯುತ್‌ ಲೈನ್‌ ಕೊಂಡೊಯ್ಯುವ ಬಗ್ಗೆ ಗೂಗಲ್‌ ಸರ್ವೇ ನಡೆದಿದೆ ಎಂಬ ಮಾಹಿತಿ ಇದೆ. ಆದರೆ ಬಂಟ್ವಾಳ ತಾಲೂಕಿನ […]

ಜನವರಿ 15ರಿಂದ ದೇಶಾದ್ಯಂತ ಅಯೋಧ್ಯೆ ಶ್ರೀ ರಾಮಮಂದಿರಕ್ಕೆ ನಿಧಿ ಸಮರ್ಪಣಾ ಅಭಿಯಾನ ಆರಂಭ

Thursday, January 14th, 2021
vhp

ಮಂಗಳೂರು: ಅಯೋಧ್ಯೆಯಲ್ಲಿ ಅಂದಾಜು 1,100 ಕೋಟಿ ಮೊತ್ತದಲ್ಲಿ ನಿರ್ಮಾಣ ಆಗಲಿರುವ  ಶ್ರೀ ರಾಮಮಂದಿರಕ್ಕೆ ನಿಧಿ ಸಮರ್ಪಣಾ ಅಭಿಯಾನ ದೇಶಾದ್ಯಂತ ಜ.15ರಿಂದ ಆರಂಭಗೊಳ್ಳಲಿದೆ. ಅದರಂತೆ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಕಾಸರಗೋಡು ಜಿಲ್ಲೆಗಳ ಎಲ್ಲಾ ಮನೆಗಳನ್ನು ಸಂಪರ್ಕ ಮಾಡಬೇಕೆಂದು ಪೂರ್ವ ಸಿದ್ಧತೆ ಮಾಡಲಾಗಿದೆ ಎಂದು ವಿಹಿಂಪ ಮಂಗಳೂರು ವಿಭಾಗದ ಕಾರ್ಯದರ್ಶಿ ಶರಣ್ ಪಂಪ್ ವೆಲ್ ತಿಳಿಸಿದರು. ಅಯೋಧ್ಯೆ ಶ್ರೀ ರಾಮಮಂದಿರಕ್ಕೆ ಒಟ್ಟು 450-500 ಕೋಟಿ ರೂ. ಆಗಲಿದ್ದು, ಉಳಿದಂತೆ ವಸತಿ ಗೃಹ, ಅನ್ನಚತ್ರ, ಗ್ರಂಥಾಲಯ ಇತ್ಯಾದಿ ಒಳಗೊಂಡಂತೆ ಸುಮಾರು 600 ಕೋಟಿ […]

ಮೊಬೈಲ್ ಕಂಪೆನಿಗಳ ಹೆಸರಲ್ಲಿ ಬಹುಮಾನ ಬಂದಿದೆ ಎಂದು ಪಾಕ್ ಸಿಮ್ ಬಳಸಿ ವಂಚನೆ

Wednesday, January 13th, 2021
fraud call

ಮಂಗಳೂರು : ಮೊಬೈಲ್ ಕಂಪೆನಿಗಳ ಹೆಸರಲ್ಲಿ 25 ಲಕ್ಷ ರೂ ಬಹುಮಾನ ಬಂದಿದೆ ಎಂದು ಪಾಕ್ ಸಿಮ್ ಬಳಸಿ ಕಾರ್ಯಾಚರಿಸುತ್ತಿರುವ ಜಾಲವೊಂದು ಸಕ್ರಿಯವಾಗಿದೆ ಕೌನ್‌ ಬನೇಗಾ ಕರೋಡ್‌ಪತಿ(ಕೆಬಿಸಿ) ಹೆಸರಲ್ಲಿ ಅದರ ಕೆಲವು ಕ್ಲಿಪ್ ಗಳನ್ನು ಉಪಯೋಗಿಸುವ ಮೂಲಕ ವಂಚನೆ ಮಾಡುತ್ತಿರುವ ಜಾಲವೊಂದು ಅಮಾಯಕ ಜನರ ಹಣ ದೋಚಲು ಹೊಂಚು ಹಾಕುತ್ತಿದೆ. ಮಂಗಳೂರಿನ ಸರ್ಕಾರಿ ನೌಕರರೊಬ್ಬರು ಇಂಥದ್ದೊಂದು ಜಾಲದ ಸುಳಿಗೆ ಸಿಲುಕಿ ಸಾವಿರಾರು ಕಳೆದುಕೊಂಡಿದ್ದಾರೆ. ಪಾಕಿಸ್ತಾನದ ಮೂಲದ್ದೂ ಎನ್ನಲಾದ ಅನಾಮಿಕ ಕರೆ(+923059296144)ಯೊಂದು ಇವರನ್ನು ವಂಚನೆಯ ಖೆಡ್ಡಾಕ್ಕೆ ಬೀಳಿಸಿದೆ. ಮಂಗಳೂರಿನ ಈ ಸಿಬ್ಬಂದಿ […]

ಕೋಟೆಕಾರಿನಿಂದ ಬಾಕ್ರಬೈಲುಗೆ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಲಾರಿ ವಶ

Wednesday, January 13th, 2021
cows

ಕೊಣಾಜೆ : ಕೋಟೆಕಾರಿನಿಂದ ಬಾಕ್ರಬೈಲುಗೆ ಜಾನುವಾರನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಮಂಗಳವಾರ ಸಂಜೆ  ಮುಡಿಪು ಸಮೀಪ‌ ನಡೆದಿದೆ. ಕೋಟೆಕಾರಿನಿಂದ ಬಾಕ್ರಬೈಲುಗೆ ಜಾನುವಾರನ್ನು ಲಾರಿಯಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ಕೊಣಾಜೆ ಪೊಲೀಸರು ಆಗಮಿಸಿ ಲಾರಿ ವಶಪಡಿಸಿಕೊಂಡಿದ್ದಾರೆ‌. ಈ ಬಗ್ಗೆ ಕೊಣಾಜೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಧ್ವನಿವರ್ಧಕ ಬಳಸಿ ಅಜಾನ್ ಕೂಗುವುದರ ವಿರುದ್ಧ ಕೂಡಲೇ ಕ್ರಮ ಜರುಗಿಸಿ

Tuesday, January 12th, 2021
Ajan

ಮಂಗಳೂರು  : ಧಾರ್ಮಿಕ ಸ್ಥಳಗಳಲ್ಲಿ ಕಾನೂನುಬಾಹಿರ ಧ್ವನಿವರ್ಧಕ ಬಳಕೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಉಚ್ಚ ನ್ಯಾಯಾಲಯದ ತೀರ್ಪು ತೀರ್ಪು ಸ್ವಾಗತಾರ್ಹ, ರಾಜ್ಯ ಸರ್ಕಾರವು ಕೂಡಲೇ ಕ್ರಮ ಜರುಗಿಸಬೇಕು ಎಂದು  ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠವು ಧಾರ್ಮಿಕ ಸ್ಥಳಗಳಲ್ಲಿ ನಿಯಮ ಉಲ್ಲಂಘಿಸಿ ಧ್ವನಿವರ್ಧಕ ಬಳಕೆ ಮಾಡುವುದರ ವಿರುದ್ಧ ಕ್ರಮ ಜರುಗಿಸಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪೋಲಿಸ್ ಇಲಾಖೆಗೆ ನಿರ್ದೇಶನ ನೀಡಿರುವುದು ಅತ್ಯಂತ […]

ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ನಿವೃತ್ತ ನೌಕರರ ವಾರ್ಷಿಕ ಸ್ನೇಹ ಮಿಲನ 

Tuesday, January 12th, 2021
sneha milana

ಮಂಗಳೂರು : ಕುಲಶೇಖರದಲ್ಲಿರುವ ಒಕ್ಕೂಟದ ಸಭಾಗೃಹದಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟದ ನಿವೃತ್ತ ನೌಕರರು ತೃತೀಯ ವರ್ಷದ ಸ್ನೇಹ ಮಿಲನ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಿದರು. ಕಾರ್ಯಕ್ರಮಕ್ಕೆ ದೀಪ ಪ್ರಜ್ವಲನದ ಮೂಲಕ ಚಾಲನೆ ನೀಡಿದ, ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆಯವರು, ನಿವೃತ್ತ ನೌಕರರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಪಡೆದ ಸಂಪನ್ಮೂಲ ವ್ಯಕ್ತಿಗಳಿದ್ದು, ತಮ್ಮ ಅನನ್ಯ ಸೇವೆಯಿಂದ ಸಂಸ್ಥೆಗೆ ಭದ್ರ ಬುನಾದಿ ಹಾಕಿದ್ದಾರೆ. ಇವರ ಸೇವಾ ತತ್ಪರತೆ, ಅಭಿಮಾನ ಪರಿಶ್ರಮದಿಂದ ಒಕ್ಕೂಟವು ರಾಜ್ಯ, ರಾಷ್ಟ್ರ ಮಟ್ಟದ ಕೀರ್ತಿಗೆ ಪಾತ್ರವಾಗಿದೆಯೆಂದು ನೌಕರರ […]

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಕಚೇರಿಗೆ ಭೇಟಿ ನೀಡಿದ ಮಾಣಿಲ ಸ್ವಾಮೀಜಿ

Tuesday, January 12th, 2021
Rajesh Naik

ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಅವರನ್ನು ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದ ಕರ್ಮ ಯೋಗಿ ಶ್ರೀಶ್ರೀಶ್ರೀ ಮೋಹನದಾಸ ಸ್ವಾಮೀಜಿ ಅವರು ಶಾಸಕರ ಕಚೇರಿಯಲ್ಲಿ ಬೇಟಿ ಮಾಡಿದರು. ಶಾಸಕರ ಜೊತೆ ಕೆಲಹೊತ್ತು  ಸಮಾಜದ ಹಾಗುಹೋಗುಗಳ ಬಗ್ಗೆ ಚರ್ಚೆ ನಡೆಸಿದರು. ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳನ್ನು ಇನ್ನಷ್ಟು ಬೆಳೆಸುವ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಪೂರಕವಾಗಿ ಹೊಸ ಕಾರ್ಯಕ್ರಮ ಗಳನ್ನು ರೂಪಿಸುವಂತೆ ಮಾನವಿ ಮಾಡಿದರು.  ಈ ಸಂದರ್ಭದಲ್ಲಿ ಬೂಡ ಅಧ್ಯಕ್ಷ ದೇವದಾಸ ಶೆಟ್ಟಿ,  ಕಲಾವಿದ ಮಾಣಿಲ ಕ್ಷೇತ್ರದ ಟ್ರಸ್ಟಿಗಳಾದ ಮಂಜುವಿಟ್ಲ, […]

ಗೋಮಾತೆಯನ್ನು‌ ನಿಂದಿಸಿದ ಪಕ್ಷಗಳು ನೆಲಕಚ್ಚಿ ಹೋಗಿವೆ : ಕೆಎಸ್ ಈಶ್ವರಪ್ಪ

Tuesday, January 12th, 2021
ks Eshwarappa

ಬಂಟ್ವಾಳ :  ಜಿಲ್ಲಾ ಬಿಜೆಪಿ ವತಿಯಿಂದ ಜನಸೇವಕ ಸಮಾವೇಶ ಬಂಟ್ವಾಳದ ಬಂಟರ ಭವನದಲ್ಲಿಸೋಮವಾರ  ನಡೆಯಿತು. ಸಮಾವೇಶವನ್ನು ರಾಜ್ಯ ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆಎಸ್ ಈಶ್ವರಪ್ಪ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟನೆ ಮಾಡಿದರು. ಇದೇ ವೇಳೆ ಮಾತನಾಡಿದ ಅವರು, ಗೋಮಾತೆಯ ಶಾಪದಿಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಪದವಿಯನ್ನು ಕಳೆದುಕೊಂಡಿದ್ದಾರೆ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದಾರೆ. ಪಾಕಿಸ್ಥಾನ ಝಿಂದಾಬಾದ್ ಘೋಷಣೆ ಕೂಗಿರುವುದನ್ನು ಖಂಡಿಸುವ ಯೋಗ್ಯತೆ ಇಲ್ಲದ ಸಿದ್ದರಾಮಯ್ಯ ಗೋಮಾಂಸ ತಿನ್ನುತ್ತೇನೆ ಎಂದು ಹೇಳುತ್ತಾರೆ. ಅವರು ಗೋ ಮಾಂಸ ತಿಂದು ಸಾಯಲಿ […]

ದೊಡ್ಡ ಕೊಂಬಿನ ಜಿಂಕೆ ದಾಳಿ ಗೊಳಗಾಗಿದ್ದ ವ್ಯಕ್ತಿ ಸಾವು

Tuesday, January 12th, 2021
deer

ಕೋಟ :  ಮೋಟಾರುಬೈಕ್‌ನಲ್ಲಿ ಹೋಗುತಿದ್ದಾಗ ರಸ್ತೆಯ ಹಾಡಿಯಿಂದ ದೊಡ್ಡ ಕೊಂಬಿನ ಎರಡು ಜಿಂಕೆಗಳು ಹಠಾತ್ತನೆ  ಮೈಮೇಲೆ ಬಿದ್ದಾಗ, ಮೋಟಾರು ಸೈಕಲ್ ಸಮೇತ ರಸ್ತೆ ಉರುಳಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ರಾಮ (22) ಎಂಬ ಯುವಕ ರವಿವಾರ ಮನೆಯಲ್ಲಿ ಮೃತಪಟ್ಟಿದ್ದಾರೆ. ಕಳೆದ ಡಿ.28ರಂದು ಸಂಜೆ 7:10ರ ಸುಮಾರಿಗೆ ಸಾಬರಕಟ್ಟೆ ಯಿಂದ ಕಾರ್ಜಳ್ಳಿ ಕಡೆಗೆ ರಾಮ ಅವರ ಮೈಮೇಲೆ ಬಿದ್ದ ಜಿಂಕೆಗಳು ಕಾಡಿನಲ್ಲಿ ಮರೆಯಾದರೂ, ರಸ್ತೆ ಬಿದ್ದು ಗಾಯಗೊಂಡಿದ್ದ ಅವರನ್ನು ಕೂಡಲೇ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆಯಲ್ಲಿರುತ್ತಾ ಅವರು […]

ಸುರತ್ಕಲ್ : ಭಜನಾ ಮಂದಿರ, ದೈವಸ್ಥಾನ ಕಳವು ಆರೋಪಿ ಬಂಧನ

Monday, January 11th, 2021
rajesh naik

ಮಂಗಳೂರು: ಸುರತ್ಕಲ್ ಸಮೀಪ ಭಜನಾ ಮಂದಿರ, ದೈವಸ್ಥಾನಗಳಲ್ಲಿ ಕಳವು ಮಾಡಿದ ಪ್ರಕರಣದ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿ ನಂದನಜಲು ರವಿ ಶೆಟ್ಟಿ ಅವರ ದೈವಸ್ಥಾನ, ಇಡ್ಯಾ ಗ್ರಾಮದ ಗುಡ್ಡೆಕೊಪ್ಪಳ ಜಾರು ಮನೆ ದೈವಸ್ಥಾನ ಹಾಗೂ ಶ್ರೀ ರಾಮಾಂಜನೇಯ ಭಜನಾ ಮಂದಿರ, ಚಿತ್ರಾಪುರ ಗ್ರಾಮದ ಸತೀಶ್ ಸುವರ್ಣರ ಮನೆಯ ದೈವಸ್ಥಾನಗಳಲ್ಲಿ ಕಳವು  ಮಾಡಿದ್ದ. ಮೂಲತಃ ಧಾರವಾಡ ತಾಲೂಕಿನ ಪ್ರಸ್ತುತ ಉಡುಪಿ ಜಿಲ್ಲೆಯ ಇಂದ್ರಾಳಿ ಸಮೀಪದ ಮಂಚಿ ಗ್ರಾಮ ನಿವಾಸಿ ರಾಜೇಶ್ ನಾಯ್ಕ್ ಅಲಿಯಾಸ್ […]