“ಬಿಜೆಪಿಗರು ಕೋಟ, ಬೊಮ್ಮಾಯಿ, ಸುಧಾಕರ್ ಮನೆಗೆ ಪಾದಯಾತ್ರೆ ಮಾಡಲಿ!“ಐವನ್ ಡಿಸೋಜ ಗುಡುಗು

Saturday, August 3rd, 2024
Ivan-D-Souza

ಮಂಗಳೂರು: ಬಿಜೆಪಿ ಆತ್ಮವಂಚನೆ ಮಾಡಿಕೊಳ್ತಾ ಇದೆ. ವಾಲ್ಮೀಕಿ ಇಲಾಖೆಯಲ್ಲಿ ಹಗರಣ ಆಗಿದೆ ಕ್ರಮ ಕೈಗೊಂಡಿದ್ದೇವೆ. ಅದನ್ನೇ ರಾಜಕೀಯಕ್ಕೆ ಬಳಸಿಕೊಂಡು ಪಾದಯಾತ್ರೆ ಮಾಡುವುದಾದರೆ ನಿಮ್ಮ ಸರಕಾರ ಇದ್ದಾಗ ಇಲಾಖೆಯ ಹಣ ನುಂಗಿ ನೀರು ಕುಡಿದಿರುವ ಕೋಟ ಶ್ರೀನಿವಾಸ್ ಪೂಜಾರಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸುಧಾಕರ್ ಮನೆಗೆ ಮಾಡಿ ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಪತ್ರಿಕಾಗೋಷ್ಟಿಯಲ್ಲಿ ಗುಡುಗಿದ್ದಾರೆ. ನಗರದ ಕಾಂಗ್ರೆಸ್ ಭವನದಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತಾಡಿದ ಅವರು, ಸುಧಾಕರ್ ಕೊರೋನ ಹೆಸರಲ್ಲಿ ನೂರಾರು ಕೋಟಿ ರೂಪಾಯಿ […]

ಬೀದಿ ಬದಿ ವ್ಯಾಪಾರಿಗಳ ಮೇಲಿನ ಟೈಗರ್ ಕಾರ್ಯಾಚರಣೆ ನಿಲ್ಲಿಸಿ : ರಮಾನಾಥ ರೈ ಆಗ್ರಹ

Saturday, August 3rd, 2024
Ramanatha-Rai

ಮಂಗಳೂರು‌: ನಗರದ ಬೀದಿ ಬದಿ ವ್ಯಾಪಾರಿಗಳನ್ನು ತೆರವು ಮಾಡುವ ಬಿಜೆಪಿ ಆಡಳಿತದ ಮಂಗಳೂರು ಮಹಾನಗರ ಪಾಲಿಕೆಯ ಟೈಗರ್ ಕಾರ್ಯಾಚರಣೆ ಅನ್ಯಾಯ ಮತ್ತು ತಾರತಮ್ಯದಿಂದ ಕೂಡಿದೆ. ಕೂಡಲೆ ಟೈಗರ್ ಕಾರ್ಯಾಚರಣೆ ಸ್ಥಗಿತಗೊಳಿಸಿ ಬೀದಿ ಪಾಲಾಗಿರುವ ಬೀದಿ ಬದಿ ವ್ಯಾಪಾರಿಗಳಿಗೆ ಮಹಾನಗರ ಪಾಲಿಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳಿಗೆ ಬದಲಿ ವ್ಯವಸ್ಥೆ ಮಾಡದೆ ಅವರ ಸೊತ್ತುಗಳನ್ನು ಜೆಸಿಬಿ ಬಳಸಿ ಧ್ವಂಸ ಮಾಡಿ ತೆರವು ಮಾಡಿರುವ ಪಾಲಿಕೆಯ ಕಾರ್ಯಾಚರಣೆ ಅನ್ಯಾಯ ಮತ್ತು ಅಮಾನವೀಯ. ಬೀದಿ […]

ದುಬೈ (ಯು.ಎ.ಇ.) : ನರ್ಸ್ ಹುದ್ದೆಗೆ ಅರ್ಜಿ ಆಹ್ವಾನ

Friday, August 2nd, 2024
male-nurse

ಮಂಗಳೂರು : ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ (ಕೆ.ಎಸ್.ಡಿ.ಸಿ) ಅಧೀನದಲ್ಲಿ ಬರುವ ಅಂತರಾಷ್ಟ್ರೀಯ ವಲಸಿಗರ ಕೇಂದ್ರದ ಮೂಲಕ ಗಲ್ಫ್ ದುಬೈ ದುಬೈ (ಯು.ಎ.ಇ.) ದೇಶದಲ್ಲಿ ಪುರುಷ ನರ್ಸ್ ಹುದ್ದೆಗಳಿಗೆ ಕನಿಷ್ಠ 2 ವರ್ಷ ಅನುಭವವಿರುವ ಆಸಕ್ತ ಅಭ್ಯರ್ಥಿಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು ವೇತನದ: ಪ್ರತಿ ತಿಂಗಳಿಗೆ ರೂ. 1,11,000 ವರೆಗೆ. ಕಂಪೆನಿ ವತಿಯಿಂದ ವಸತಿ, ವೈದ್ಯಕೀಯ ವಿಮೆ, ಸಾರಿಗೆ, ವೀಸಾ ಮತ್ತು ಏರ್ ಟಿಕೆಟ್ ಒದಗಿಸಲಾಗುತ್ತದೆ. ಅರ್ಹತೆ: ಬಿ.ಎಸ್ಸಿ ನರ್ಸಿಂಗ್/ಪೋಸ್ಟ್ ಬೇಸಿಕ್ ಬಿ.ಎಸ್ಸಿ ನರ್ಸಿಂಗ್. ಅರ್ಹ ಅಭ್ಯರ್ಥಿಗಳಿಗೆ 2024 […]

ಮಂಗಳೂರಿನ ಸಹ್ಯಾದ್ರಿ ಕಾಲೇಜ್ ನಲ್ಲಿ ಅಪ್ರೆಂಟಿಸ್ ಟ್ರೈನೀಸ್ ಕೇಂದ್ರೀಕೃತ ವಾಕ್-ಇನ್-ಇಂಟರ್ವ್ಯೂ

Friday, August 2nd, 2024
sahyadri college

ಮಂಗಳೂರು : ಬೆಂಗಳೂರಿನ ತಾಂತ್ರಿಕ ಶಿಕ್ಷಣ, ಕರ್ನಾಟಕ ಸರ್ಕಾರ ಮತ್ತು ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಮಂಗಳೂರು ಜಂಟಿಯಾಗಿ ಮಂಗಳೂರಿನ ಸಹ್ಯಾದ್ರಿ ಕ್ಯಾಂಪಸ್ನಲ್ಲಿ ಮಂಗಳವಾರ ದಿನಾಂಕ 6 ಆಗಸ್ಟ್ 2024 ರಂದು ಪದವೀಧರರು, ಎಂಜಿನಿಯರುಗಳು ಮತ್ತು ಡಿಪ್ಲೊಮಾ ಹೊಂದಿರುವವರಿಗೆ ಕೇಂದ್ರೀಕೃತ ವಾಕ್-ಇನ್ ಸಂದರ್ಶನವನ್ನು ಆಯೋಜಿಸಿರುತ್ತಾರೆ. ಬೆಳಿಗ್ಗೆ ಗಂಟೆ 9:30 ರಿಂದ ಪ್ರಾರಂಭ. ಬೋರ್ಡ್ ಆಫ್ ಅಪ್ರೆಂಟಿಸ್‌ಶಿಪ್ ತರಬೇತಿ, ಸೌತ್ ರೀಜನ (SR) ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿ ಸ್ವಾಯತ್ತ […]

ಸುರತ್ಕಲ್ ಎನ್ ಐಟಿಕೆ ಉಪ ನಿರ್ದೇಶಕರಾಗಿ ಡಾ.ಸುಭಾಷ್ ಸಿ.ಯರಗಲ್ ನೇಮಕ

Friday, August 2nd, 2024
Dr. Subhash C

ಮಂಗಳೂರು : ಸುರತ್ಕಲ್ ನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್ ಐಟಿಕೆ)ದ ಉಪ ನಿರ್ದೇಶಕರಾಗಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ಸುಭಾಷ್ ಸಿ.ಯರಗಲ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. 1996ರಲ್ಲಿ ಎನ್ ಐಟಿಕೆ ಸೇರಿದ ಡಾ.ಯರಗಲ್ ಅವರು ಸಂಸ್ಥೆಯ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಆಡಳಿತ ಮಂಡಳಿಯ ಸದಸ್ಯ, ಡೀನ್ (ಯೋಜನೆ ಮತ್ತು ಅಭಿವೃದ್ಧಿ) ಮತ್ತು ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಸೇರಿದಂತೆ ಹಲವಾರು ಪ್ರಮುಖ ಆಡಳಿತಾತ್ಮಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. […]

ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಆಗಸ್ಟ್ 02 ರಂದು ರಜೆ

Thursday, August 1st, 2024
school holiday

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯದ್ಯಂತ ಮಳೆ ಮುಂದುವರಿದಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಆಗಸ್ಟ್ 02 ರಂದು ಎಲ್ಲಾ ಅಂಗನವಾಡಿ, ಸರಕಾರೀ ಹಾಗೂ ಅನುದಾನಿತ ಶಾಲೆ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆ ಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಘೋಷಿಸಿದ್ದಾರೆ. ದುರ್ಭಲ ಶಿಥಿಲ ಕಟ್ಟಡಗಳಲ್ಲಿ ಪಾಠ ಪ್ರವಚನಗಳನ್ನು ಮಾಡದಂತೆ ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ಸಮುದ್ರ ತೀರಕ್ಕೆ ಸಾರ್ವಜನಿಕರು, ವಿದ್ಯಾರ್ಥಿಗಳು ತೆರಳದಂತೆ ಎಚ್ಚರಿಕೆ ನೀಡಲಾಗಿದೆ.

ಬೀದಿಬದಿ ವ್ಯಾಪಾರಸ್ಥರ ಮೇಲೆ ದೌರ್ಜನ್ಯ ನಡೆಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಸಾಮೂಹಿಕ ಧರಣಿ

Thursday, August 1st, 2024
Talapady-protest

ಮಂಗಳೂರು : ತಲಪಾಡಿ ಟೋಲ್ ಗೇಟ್ ಬಳಿಯಲ್ಲಿರುವ ಬಡ ಬೀದಿಬದಿ ವ್ಯಾಪಾರಸ್ಥರ ಮೇಲೆ ವಿನಾಃ ಕಾರಣ ದೌರ್ಜನ್ಯ ನಡೆಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಇಂದು (01-08-2024) ತಲಪಾಡಿ ಟೋಲ್ ಗೇಟ್ ಬಳಿಯಲ್ಲಿ ಸಾಮೂಹಿಕ ಧರಣಿ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಬೀದಿಬದಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗಿದರು. ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಮಾತನಾಡಿದ ದ‌.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವ್ರದ್ದಿ ಸಂಘದ ಗೌರವಾಧ್ಯಕ್ಷರಾದ ಬಿ.ಕೆ.ಇಮ್ತಿಯಾಜ್ ರವರು, *ಬದುಕಿಗೆ ಯಾವುದೇ […]

ವಿದ್ಯಾರ್ಥಿನಿ ಜೀವ ಉಳಿಸಿದ ಬಸ್ ಸಿಬ್ಬಂದಿಗೆ ಅಭಿನಂದಿಸಿದ ದ.ಕ ಬಸ್ಸು ಮಾಲಕರ ಸಂಘ

Thursday, August 1st, 2024
ವಿದ್ಯಾರ್ಥಿನಿ ಜೀವ ಉಳಿಸಿದ ಬಸ್ ಸಿಬ್ಬಂದಿಗೆ ಅಭಿನಂದಿಸಿದ ದ.ಕ ಬಸ್ಸು ಮಾಲಕರ ಸಂಘ

ಮಂಗಳೂರು : ಬಸ್ ಸಿಬ್ಬಂದಿ ಮಾನವೀಯ ಸೇವೆಗಳಿಗೆ ಇತಿಹಾಸವಿದೆ. ಗ್ರಾಮಾಂತರ ಭಾಗದಲ್ಲಿ ವಿಷದ ಹಾವು ಕಚ್ಚಿದ ರೋಗಿಯನ್ನು ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಿಸಿದ ಚರಿತ್ರೆಯಿದೆ. ಸಿಬ್ಬಂದಿಯ ಮಾನವೀಯ ಸೇವೆಗೆ ಸಾರ್ವಜನಿಕವಾಗಿ ಸಿಕ್ಕಿರುವ ಪ್ರೋತ್ಸಾಹ ಪ್ರಶಂಸನೀಯ. ಸಿಬ್ಬಂದಿ ಮೆರೆದ ಮಾನವೀಯ ಸೇವೆ ಎಲ್ಲರಿಗೂ ಮಾದರಿ ಎಂದು ದ.ಕ ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಹೇಳಿದರು‌. ಅವರು ದ.ಕ ಬಸ್ಸು ಮಾಲಕರ ಸಂಘ ಮಂಗಳೂರು‌ ಇವರ ಹಂಪನಕಟ್ಟೆ ಕಚೇರಿಯ ಪಿ.ಭಾಸ್ಕರ್ ಸಾಲಿಯಾನ್ ವೇದಿಕೆಯಲ್ಲಿ ಬಸ್ಸಿನಲ್ಲಿ ಎದೆ […]

ಬೀದಿ ಬದಿ ಗೂಡಂಗಡಿಗಳ ಮೇಲೆ ಜೆಸಿಬಿ ಬಳಸಿ “ಟೈಗರ್ ಕಾರ್ಯಾಚರಣೆ’

Thursday, August 1st, 2024
petty-shops

ಮಂಗಳೂರು: ಅನಧಿಕೃತ ಗೂಡಂಗಡಿಗಳ ತೆರವಿಗಾಗಿ ಪಾಲಿಕೆಯಿಂದ ನಡೆಯುತ್ತಿದ್ದ “ಟೈಗರ್ ಕಾರ್ಯಾಚರಣೆ’ ಮುಂದುವರಿದಿದ್ದು ಗುರುವಾರ ಬೆಳಗ್ಗೆ 10.30 ರ ಸುಮಾರಿಗೆ ಮಂಗಳೂರು ನಗರದ ಆರ್ ಟಿಓ ಬಳಿ ಆರಂಭಗೊಂಡ ಕಾರ್ಯಾಚರಣೆ ಸ್ಟೇಟ್ ಬ್ಯಾಂಕ್ ನ ಮೀನು ಮಾರುಕಟ್ಟೆಯ ಬಳಿ ಫುಟ್ ಪಾತ್ ಅತಿಕ್ರಮಿಸಿಕೊಂಡ ತರಕಾರಿ ಅಂಗಡಿ ಸೇರಿ ಹಲವು ಅಂಗಡಿಗಳನ್ನು ಜೆಸಿಬಿ ಬಳಸಿ ತೆರವು ಮಾಡಲಾಯಿತು. ಮುಟ್ಟುಗೋಲು ಹಾಕಿದ ಅಂಗಡಿಗಳ ಸರಂಜಾಮುಗಳನ್ನು ಟಿಪ್ಪರ್ ಗಳಲ್ಲಿ ತುಂಬಿಸಿ ಕೊಂಡೊಯ್ಯಲಾಗಿದೆ. ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಹಾಗೂ ಆಯುಕ್ತರಾದ ಸಿ.ಎಲ್. ಆನಂದ್ […]

ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರುವುದು ಅತ್ಯಂತ ಖಂಡನೀಯ – ಮಹಾವೀರ್‌ ಹೆಗ್ಡೆ

Thursday, August 1st, 2024
ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರುವುದು ಅತ್ಯಂತ ಖಂಡನೀಯ - ಮಹಾವೀರ್‌ ಹೆಗ್ಡೆ

ಕಾರ್ಕಳ : ಸ್ಥಳೀಯ ಕಾಂಗ್ರೆಸ್‌ ನಾಯಕರ ಒತ್ತಡಕ್ಕೆ ಮಣಿಯುತ್ತಿರುವ ರಾಜ್ಯ ಸರ್ಕಾರವು ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರದ ಪ್ರಮುಖ ಇಲಾಖೆಗಳ ಕುಂದಾಪುರ ಸಹಾಯಕ ಕಮಿಷನರ್‌, ಕಾರ್ಕಳ ತಹಶೀಲ್ದಾರರು, ಕಾರ್ಕಳ ಕಾರ್ಯನಿರ್ವಹಣಾಧಿಕಾರಿಗಳು, ಮೂಡಬಿದ್ರೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಹೆಬ್ರಿ ಹಾಗೂ ಕಾರ್ಕಳ ವನ್ಯಜೀವಿ ವಿಭಾಗದ ವಲಯ ಅರಣ್ಯ ಅಧಿಕಾರಿಗಳು, ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯ ಆರಕ್ಷಕ ಉಪನಿರೀಕ್ಷಕರು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಅವಧಿಪೂರ್ವವಾಗಿ ವರ್ಗಾವಣೆ ಮಾಡುತ್ತಿದ್ದು, ವರ್ಗಾವಣೆ ಆದ ಸ್ಥಳಕ್ಕೆ ಬದಲಿ […]