ಬಲ್ಮಠ ಬ್ಯಾಂಕ್ ಆಫ್ ಬರೋಡದ ಶಾಖಾ ಕಚೇರಿಯಲ್ಲಿ ಬೆಂಕಿ ಅವಘಡ

Wednesday, September 30th, 2020
Bankof Baroda

ಮಂಗಳೂರು : ನಗರದ ಬಲ್ಮಠದಲ್ಲಿರುವ ಬ್ಯಾಂಕ್ ಆಫ್ ಬರೋಡದ ಶಾಖಾ ಕಚೇರಿಯಲ್ಲಿ ಇಂದು ಮುಂಜಾನೆ ಸಂಭವಿಸಿದ  ಬೆಂಕಿ‌ ಅನಾಹುತದಲ್ಲಿ ಐದು ಹವಾನಿಯಂತ್ರಣ ಯಂತ್ರ, ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟುಹೋಗಿವೆ. ಮುಂಜಾನೆ ‌5:30ರಿಂದ 6 ಗಂಟೆಯ‌ ಮಧ್ಯೆ‌ ಈ ಅನಾಹುತ ಸಂಭವಿಸಿದೆ ಎನ್ನಲಾಗುತ್ತಿದೆ. ಕೂಡಲೇ  ಅಗ್ನಿಶಾಮಕ ದಳ ಸ್ಥಳಕ್ಕೆಆಗಮಿಸಿ ಬೆಂಕಿಯನ್ನು ನಂದಿಸಲು ಸಫಲವಾಯಿತು. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ‌ ಅನಾಹುತ ನಡೆದಿದೆ ಎಂದು ಹೇಳಲಾಗುತ್ತಿದೆ. ದುರಂತದ ಬಗ್ಗೆ ‌ಬ್ಯಾಂಕ್ ಅಧಿಕಾರಿಗಳು ಮತ್ತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗ‌ […]

ಕೊರೋನ ಸೋಂಕು ಸೆ. 29 : ದಕ್ಷಿಣ ಕನ್ನಡ -362, ಒಂಬತ್ತು ಸಾವು, ಉಡುಪಿ – 319, ಎರಡು ಸಾವು

Tuesday, September 29th, 2020
corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 362 ಮಂದಿಗೆ ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೊರೋನ ಸೋಂಕಿನಿಂದಾಗಿ ಮತ್ತೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ 232 ಮಂದಿ ಗುಣಮುಖರಾಗಿದ್ದಾರೆ.  ಕೊರೋನದಿಂದ 9 ಮಂದಿ ಮೃತಪಟ್ಟಿದ್ದು, 190 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್‌ಎಚ್‌ಎಂ) ಸಿಬ್ಬಂದಿಯು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ಈಗಾಗಲೇ ಒಂದು ವಾರ ಪೂರೈಸಿದೆ. ಇದರಿಂದ ಮಂಗಳವಾರವೂ ದ.ಕ. ಜಿಲ್ಲೆಯ ಕೋವಿಡ್ ಬುಲೆಟಿನ್ ಪ್ರಕಟವಾಗಿಲ್ಲ. ಉಡುಪಿ ಜಿಲ್ಲೆಯಲ್ಲಿ […]

ತುಳುನಾಡ ರಕ್ಷಣಾ ವೇದಿಕೆಯ ಅಬ್ದುಲ್ ರಶೀದ್ ಸ್ಮರಣಾರ್ಥ ರಕ್ತದಾನ ಶಿಬಿರ

Tuesday, September 29th, 2020
trv Blood camp

ಮಂಗಳೂರು  : ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮತ್ತು ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಕೋಶಾಧಿಕಾರಿಯಾಗಿ ಜಪ್ಪು ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಇಹಲೋಕ ತ್ಯಜಿಸಿದ ಅಬ್ದುಲ್ ರಶೀದ್ ಅವರ ಸ್ಮರಣಾರ್ಥ ರಕ್ತದಾನ ಶಿಬಿರ ಜೆಪ್ಪು ರೈಲ್ವೇ ಗೇಟ್ ಬಳಿಯಿರುವ ಸಂಕಪ್ಪ ಮೆಮೋರಿಯಲ್ ಹಾಲ್ ನಲ್ಲಿ ನಡೆಯಿತು. ತುಳುನಾಡ ರಕ್ಷಣಾ ವೇದಿಕೆ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಕಾರ್ಯಕ್ರವನ್ನು ಉದ್ಘಾಟಿಸಿದರು. ತುಳುನಾಡ ರಕ್ಷಣಾ […]

ಸಲಹೆ, ಸೂಚನೆ ಹಾಗೂ ಚಿಕಿತ್ಸೆಗೆ ಇ-ಸಂಜೀವಿನಿ ಆ್ಯಪ್ ಬಳಸಿ ಜಿಲ್ಲಾ ಉಸ್ತುವಾರಿ ಸಚಿವ – ಕೋಟಾ ಶ್ರೀನಿವಾಸ ಪೂಜಾರಿ

Tuesday, September 29th, 2020
esanjeevini

ಮಂಗಳೂರು :  ಸಾಮಾನ್ಯ ಕೆಮ್ಮು, ನೆಗಡಿ, ಜ್ವರ ಅಲ್ಲದೇ ಇತರ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲಿಯೇ ಕುಳಿತು ಸಾರ್ವಜನಿಕರು ವೈದ್ಯರಿಂದ ಸಲಹೆ ಪಡೆಯಲು ಸರ್ಕಾರ ಇ-ಸಂಜೀವಿನಿ ಆ್ಯಪ್ ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮಂಗಳೂರು ಜಿಲ್ಲೆಯಲ್ಲಿ 24 ತಜ್ಞ ವೈದ್ಯರು ಈಗಾಗಲೇ ಆ್ಯಪ್ ನಲ್ಲಿ ಸೇವೆ ನೀಡುತ್ತಿದ್ದಾರೆ. ಹೊರೆ ಜಿಲ್ಲೆಯ 100ಕ್ಕೂ ಅಧಿಕ ರೋಗಿಗಳಿಗೆ ವಿಡೀಯೊ ಮೂಲಕ ಸಂಪರ್ಕಿಸಿ ಚಿಕಿತ್ಸೆ ನೀಡಲಾಗಿದೆ. ಈ ಆ್ಯಪ್‍ನಲ್ಲಿ ಕರ್ನಾಟಕದಲ್ಲಿ ಇರುವ ಉತ್ತಮ ವೈದ್ಯ ತಂಡವು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯ ಯಾವುದೇ […]

ಪಿಲಿಕುಳ ನಿಸರ್ಗದಾಮದಲ್ಲಿ ಮತ್ತೆ ಬೋಟಿಂಗ್ ಆರಂಭ

Tuesday, September 29th, 2020
Pilikula boating

ಮಂಗಳೂರು : ನಗರದಿಂದ ಹೊರವಲಯದಲ್ಲಿರುವ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗದಾಮದಲ್ಲಿ ಕೊರೋನಾ ವಿರಾಮದ ಬಳಿಕ ಮತ್ತೆ ಬೋಟಿಂಗ್ ಆರಂಭವಾಗಿದೆ. ಈ ಬಾರಿ ಸರಕಾರದ ಕೋವಿಡ್ ನಿಯಮಗಳ ಸೂಚನೆಯಂತೆ ಬೋಟ್ ಗಳನ್ನು ಪ್ರತಿ ದಿನ ಸ್ಯಾನಿಟೈಸಷನ್ ಮಾಡಲಾಗುತ್ತದೆ. ಬೋಟ್ ಗಳಲ್ಲಿ ಸಂಚರಿಸುವ ಮುನ್ನ ಪ್ರತಿಯೊಬ್ಬರನ್ನು ಸ್ಯಾನಿಟೈಸಷನ್ ಮಾಡಿ, ಸ್ಕ್ಯಾನಿಂಗ್ ಮಾಡಲಾಗುವುದು ಎಂದು ದೋಣಿ ವಿಹಾರ ಕೇಂದ್ರದ ಮೇಲ್ವಿಚಾರಕರಾದ ಸಂದೀಪ್ ಬಿ.ಕೆ ತಿಳಿಸಿದ್ದಾರೆ. ದೋಣಿವಿಹಾರಿಗಳಿಗೆ ವಾರದ ಏಳು ದಿನಗಳು ದೋಣಿ ವಿಹಾರ ಕೇಂದ್ರ ತೆರೆದಿರುತ್ತದೆ, ಪೆಡಲ್ ಬೋಟ್, ಫ್ಯಾಮಿಲಿ ಬೋಟ್ […]

ಯಡಿಯೂರಪ್ಪ ಹಸಿರು ಶಾಲು ಹೊದ್ದು ಅಧಿಕಾರಕ್ಕೇರಿ ಇದೀಗ ರೈತರಿಗೆ ಮೋಸ ಮಾಡಿದ್ದಾರೆ : ಐವನ್

Monday, September 28th, 2020
farmers Protest

ಮಂಗಳೂರು :  ಕರ್ನಾಟಕ ಬಂದ್ ಪ್ರಯುಕ್ತ ನಗರದ ಮಿನಿ ವಿಧಾನ ಸೌಧದ ಎದುರು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ, ಜಿಲ್ಲಾ ರೈತ ದಲಿತ ಕಾರ್ಮಿಕ ಜನಪರ ಚಳವಳಿಗಳ ಒಕ್ಕೂಟ  ಕೇಂದ್ರ ಹಾಗೂ ರಾಜ್ಯ ಸರಕಾರ ಹೊರಡಿಸಿರುವ ರೈತ ವಿರೋಧಿ ಮಸೂದೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿತು. ಕಾರ್ಪೊರೇಟ್ ಕಂಪನಿಗಳಿಗೆ ರತ್ನಗಂಬಳಿ ಹಾಸಿ ಅಂಬಾನಿ- ಅದಾನಿಗೆ ನೆರವಾಗುವ ನಿಟ್ಟಿನಲ್ಲಿ ಮಾಡಲಾದ ಕಾನೂನು ತಿದ್ದುಪಡಿಯಾಗಿದೆ ಎಂದು ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತ, ವ್ಯಾಪಾರ ವರ್ಗದ ಅನುಮತಿ, […]

ದಾಖಲೆ ನೀಡಲು ಸತಾಯಿಸುತ್ತಿದ್ದ ದೂರು, ತಹಶೀಲ್ದಾರ್ ಕಛೇರಿಗೆ ಡಾ.ಭರತ್ ಶೆಟ್ಟಿ ದಿಢೀರ್ ಭೇಟಿ

Monday, September 28th, 2020
Bhrath Shetty

ಮಂಗಳೂರು  : ತಾಲೂಕು ಕಛೇರಿಗೆ ದಿಢೀರ್ ಭೇಟಿ ನೀಡಿದ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಅವರು ಜನರಿಗೆ ದಾಖಲೆ ಒದಗಿಸದೆ ಸತಾಯಿಸುತ್ತಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆರ್ ಟಿ ಸಿ ಸಹಿತ ದಾಖಲೆಗಳು ಸಿಗುತ್ತಿಲ್ಲ ಎಂಬ ಜನರ ದೂರಿಗೆ ಸ್ಪಂದಿಸಿ ದಿಢೀರ್ ದಾಖಲೆ ಪರಿಶೀಲಿಸಿದ ಅವರು ಸರಿಯಾದ ಸಮಯದಲ್ಲಿ ದಾಖಲೆ ನೀಡದೆ ಜನರಿಗೆ ಸತಾಯಿಸುತ್ತಿದ್ದೀರಿ. ಜನ ಪ್ರತಿನಿಧಿಯಾಗಿ ನನಗೆ ಜನರ ಕರೆ ಬರುತ್ತಿದೆ. ಏನು ಮಾಡುತ್ತಿದ್ದೀರಿ, ಒಂದಾ ಕೆಲಸ ಮಾಡಿಸಿ ಇಲ್ಲದಿದ್ದರೆ […]

ಉಡುಪಿಯಲ್ಲಿ ಬಸ್ ಸಂಚಾರವನ್ನು ತಡೆಹಿಡಿದ ಪ್ರತಿಭಟನಾಕಾರರು, ಪೊಲೀಸರಿಂದ ಬಂಧನ

Monday, September 28th, 2020
udupi bundh

ಉಡುಪಿ : ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಉಡುಪಿ ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಇಂದು ಬೆಳಗ್ಗೆ ವಿವಿಧ ಸಂಘಟನೆಗಳು ರಸ್ತೆ ತಡೆ ನಡೆಸಿ ಬಸ್ ಸಂಚಾರವನ್ನು ತಡೆಹಿಡಿದರು.  ಈ ಸಂದರ್ಭ ಅಲ್ಲಿಗೆ ಬಂದ ಪೊಲೀಸರು ಪ್ರತಿಭಟನಾಕಾರರನ್ನುಬಂಧಿಸಿದ್ದಾರೆ. ಬಂದ್ ಬೆಂಬಲ ಕೊಟ್ಟ ವಿವಿಧ ಸಂಘಟನೆಯವರು ಬಂದ್ ಕರೆ ಕೊಟ್ಟರೂ ಸರ್ವಿಸ್ ಮತ್ತು ಸಿಟಿ ಬಸ್ಸುಗಳು ಬೆಳಗ್ಗೆ ನಿಲ್ದಾಣಕ್ಕೆ ಆಗಮಿಸಿರುವುದರಿಂದ ಬಸ್ ಸಂಚಾರ ನಡೆಸದಂತೆ ಪ್ರತಿಭಟನಾಕಾರರು ಮನವಿ ಮಾಡಿದರೆನ್ನಲಾಗಿದೆ. ಬಸ್ ಸಂಚಾರ ಮುಂದುವರಿಸುವುದಾಗಿ ಪಟ್ಟು ಹಿಡಿದ ಚಾಲಕರ ಹಾಗೂ ನಿರ್ವಾಹಕರ ಧೋರಣೆ ವಿರೋಧಿಸಿ ಪ್ರತಿಭಟನಾಕಾರರು […]

ವಿಶ್ವ ಹಿಂದೂ ಪರಿಷತ್ ಕಾಸರಗೋಡು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅಂಗಾರ ಶ್ರೀಪಾದ ನಿಧನ

Monday, September 28th, 2020
Angara Sripada

ಕಾಸರಗೋಡು : ಉಪ್ಪಳ ಬಾಯಾರಿನ ಪೆರ್ವೋಡಿ ನಿವಾಸಿ ಅಂಗಾರ ಶ್ರೀಪಾದ (69) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಬೆಳಗ್ಗೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಬಾಯಾರು ಸಹಕಾರಿ ಬ್ಯಾಂಕ್ ನ ನಿರ್ದೇಶಕರೂ ಆಗಿದ್ದ ಇವರು ಈ ಹಿಂದೆ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಕಳೆದ ಹತ್ತು ವರ್ಷಗಳಿಂದ ವಿಶ್ವ ಹಿಂದೂ ಪರಿಷತ್ ನ ಕಾಸರಗೋಡು ಜಿಲ್ಲಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ರೈತ ಸಂಘಟನೆಗಳ ‘ಕರ್ನಾಟಕ ಬಂದ್’ ಕರೆಗೆ ಜಿಲ್ಲೆಯಾದ್ಯಂತ ಬಿಗು ಬಂದೋಬಸ್ತ್

Sunday, September 27th, 2020
Lakshmi Prasad

ಮಂಗಳೂರು : ಸೋಮವಾರ  ರೈತ ಸಂಘಟನೆಗಳು ಜಂಟಿಯಾಗಿ ಕರೆ ನೀಡಿರುವ ‘ಕರ್ನಾಟಕ ಬಂದ್’ ವೇಳೆ ದ.ಕ.ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬಂದೋಬಸ್ತ್ಗಾಗಿ ಜಿಲ್ಲೆಯಾದ್ಯಂತ 3 ಮಂದಿ ಎಎಸ್‌ಪಿ/ಡಿವೈಎಸ್‌ಪಿ, 8 ಮಂದಿ ಸಿಪಿಐ/ಪಿಐ, 25 ಮಂದಿ ಪಿಎಸ್ಐ, 45 ಮಂದಿ ಎಎಸ್ಐ, 320 ಮಂದಿ ಹೆಡ್ ಕಾನ್‌ಸ್ಟೇಬಲ್/ ಪೊಲೀಸ್ ಕಾನ್‌ಸ್ಟೇಬಲ್, 50 ಗೃಹರಕ್ಷಕ ಸಿಬ್ಬಂದಿ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ಬಿಸಿರೋಡ್, ಪುತ್ತೂರು, ಕಲ್ಲಡ್ಕ, ಉಪ್ಪಿನಂಗಡಿ, ಸುಳ್ಯ, ಬೆಳ್ತಂಗಡಿ  […]