ಗುಂಡು ಹಾರಿಸಿಕೊಂಡು ಹೊಟೇಲ್ ಉದ್ಯಮಿ ಆತ್ಮಹತ್ಯೆ

Sunday, September 27th, 2020
Sunil Shetty

ಕಾರ್ಕಳ : ಪುಣೆಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ  ಹಿರ್ಗಾನ ಚಿಕ್ಕಲ್ ಬೆಟ್ಟು ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಸುನೀಲ್ ಶೆಟ್ಟಿ (45)  ಎಂದು ಗುರುತಿಸಲಾಗಿದೆ. ಸುನೀಲ್ ಶೆಟ್ಟಿ ಪುಣೆಯಲ್ಲಿ ಹೊಟೇಲ್ ಉದ್ಯಮ ನಡೆಸುತಿದ್ದರು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಪುಣೆಯಿಂದ ಊರಿಗೆ ಮರಳಿದ್ದರು. ಎಂಟು ತಿಂಗಳಿಂದ ಮನೆಯಲ್ಲಿ ಇದ್ದ ಅವರು ರವಿವಾರ ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿದ ಬಳಿಕ ಪರವಾನಿಗೆಯ ಕೋವಿ ಹಿಡಿದುಕೊಂಡು ಮನೆಯ ಮುಂಭಾಗದ ಕೃಷಿ ತೋಟದ ಕಡೆಗೆ ತೆರಳಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. […]

ದುಬೈನಿಂದ ಬಂದ ವಿಮಾನದ ಸೀಟಿನ ಅಡಿಯಲ್ಲಿ ಸಾಗಿಸುತ್ತಿದ್ದ ಚಿನ್ನದ ಬಿಸ್ಕತ್ತು ವಶ

Sunday, September 27th, 2020
gold Biscut

ಮಂಗಳೂರು : ಕಸ್ಟಮ್ಸ್ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ರವಿವಾರ ದುಬೈನಿಂದ ಬಂದಿಳಿದ ಪ್ರಯಾಣಿಕನಿಂದ  33.88 ಲಕ್ಷ ರೂ. ಮೌಲ್ಯದ 671 ಗ್ರಾಂ ತೂಕದ 6 ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ದುಬೈ- ಮಂಗಳೂರು- ಹೈದರಾಬಾದ್ ವಿಮಾನದಲ್ಲಿ ಚಿನ್ನದ ಬಿಸ್ಕತ್ತುಗಳನ್ನು ಒಳಗೆ ಸೀಟಿನ ಅಡಿಯಲ್ಲಿ ಅಡಗಿಸಿಡಲಾಗಿತ್ತು. ದುಬೈನಿಂದ ಮಂಗಳೂರು ತನಕ ಅಂತಾರಾಷ್ಟ್ರೀಯ ಯಾನವಾಗಿ ಹಾಗೂ ಮಂಗಳೂರು- ಹೈದರಾಬಾದ್ ನಡುವೆ ದೇಶೀಯ ವಿಮಾನವಾಗಿ ಕಾರ್ಯಾಚರಿಸುತ್ತಿದ್ದು, ಮಂಗಳೂರಿನಿಂದ ಹೈದರಾಬಾದ್‌ಗೆ ಪ್ರಯಾಣಿಸುವ ಪ್ರಯಾಣಿಕ ಈ ಚಿನ್ನವನ್ನು ಸಂಗ್ರಹಿಸಿ ಕೊಂಡೊಯ್ಯುವ ಉದ್ದೇಶ ಹೊಂದಿದ್ದ ಎನ್ನಲಾಗಿದೆ. ದೇಶೀಯ […]

ಹಿರಿಯ ಯಕ್ಷಗಾನ ಭಾಗವತ, ಯಕ್ಷಗುರು ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ನಿಧನ

Sunday, September 27th, 2020
Tirumaleshwara Sastri

ಮಂಗಳೂರು : ಕರೋಪಾಡಿ ಗ್ರಾಮದ ತೆಂಕಬೈಲು ನಿವಾಸಿ, ಹಿರಿಯ ಯಕ್ಷಗಾನ ಭಾಗವತ, ಯಕ್ಷಗುರು ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ (76) ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೆ.27ರಂದು ನಿಧನ ಹೊಂದಿದರು. ಅವರು ಪುತ್ರ-ಹವ್ಯಾಸಿ ಭಾಗವತ-ಶಿಕ್ಷಕ ಮುರಳೀಕೃಷ್ಣ ಶಾಸ್ತ್ರಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಉಡುಪಿ ಯಕ್ಷಗಾನ ಕಲಾರಂಗ, ದ.ಕ.ಜಿಲ್ಲಾ ರಾಜ್ಯೋತ್ಸವ, ಕುರಿಯ ವಿಟ್ಠಲ ಶಾಸ್ತ್ರಿ, ಸಂಪಾಜೆ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಪದ್ಯಾಣ, ಪಟ್ಟಾಜೆ, ದಿವಾಣ ಪ್ರಶಸ್ತಿಗಳಲ್ಲದೆ ಹಲವು ಪುರಸ್ಕಾರ, ಸಮ್ಮಾನಗಳಿಗೆ ಭಾಜನರಾಗಿದ್ದರು. 1944ರಲ್ಲಿ ಪ್ರಸಿದ್ಧ ಚಕ್ರಕೋಡಿ ಮನೆತನದ ತೆಂಕಬೈಲು ಕೃಷ್ಣ […]

ಎಸ್.ಪಿ.ಬಿ. ಯವರಿಗೆ ಮಂಗಳೂರಿನಲ್ಲಿ “ಗಾನ ನಮನ” ಶ್ರದ್ಧಾಂಜಲಿ

Saturday, September 26th, 2020
SPB gnannamana

ಮಂಗಳೂರು : ಚಿತ್ರರಂಗದ ಸಾಹಿತ್ಯಗಳಿಗೆ ಭಾವನಾತ್ಮಕವಾಗಿ ಸಾತ್ವಿಕ ಶಕ್ತಿಯನ್ನು ತುಂಬಿದ ಮಹಾನ್ ಗಾಯಕ ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಎಸ್. ಪ್ರದೀಪ ಕುಮಾರ ಕಲ್ಕೂರ ನುಡಿದರು. ನಗರದ ಕೊಡಿಯಾಲ್ ಬೈಲ್ ನ ಶಾರದಾ ವಿದ್ಯಾಲಯದ ಧ್ಯಾನಮಂದಿರದಲ್ಲಿ ಇಂದು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಲಾಗಿದ್ದ ” ಎಸ್.ಪಿ.ಬಿ. ಯವರಿಗೆ ಸಾರ್ವಜನಿಕ ಶ್ರದ್ಧಾಂಜಲಿ” ಕಾರ್ಯಕ್ರಮದಲ್ಲಿ ಅವರು ನುಡಿನಮನ ಸಲ್ಲಿಸಿದರು. ಭಾರತೀಯ ಭಾಷೆಗಳೆಲ್ಲವನ್ನು ಸಮಾನ ಗೌರವದಿಂದ ಕಂಡಿರುವ ಎಸ್.ಪಿ.ವಿಶೇಷವಾಗಿ ನಮ್ಮೀ ಪ್ರದೇಶದ […]

ಅವಿವಾಹಿತ ಮಹಿಳೆಯ ಸಂಶಯಾಸ್ಪದ ಸಾವು, ಅತ್ಯಾಚಾರವೆಸಗಿ ಕೊಲೆ ಶಂಕೆ

Saturday, September 26th, 2020
Kusuma

ಕೊಣಾಜೆ :  ಅವಿವಾಹಿತ ಮಹಿಳೆಯೊಬ್ಬರು ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಹೂ ಹಾಕುವ ಕಲ್ಲು ಸಮೀಪದ ಬೆಳ್ಳೇರಿಯ ದಲ್ಲಿ ಶನಿವಾರ ವರದಿಯಾಗಿದೆ. ಇಲ್ಲಿನ ನಿವಾಸಿ ಕುಸುಮ (53) ಮೃತರು ಎಂದು ಗುರುತಿಸಲಾಗಿದ್ದು ಮಹಿಳೆಯನ್ನು ಅತ್ಯಾಚಾರವೆಸಗಿ ಕೊಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಮಹಿಳೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಸ್ಥಳೀಯರ ಪ್ರಕಾರ ಮಹಿಳೆ ಹೆಚ್ಚಾಗಿ ಯಾರ ಜೊತೆಗೂ ಬೆರೆಯುತ್ತಿರಲಿಲ್ಲ. ಮನೆಯ ಸಿಟ್ ಔಟ್ ನಲ್ಲಿ ಮೊಬೈಲ್ ಮತ್ತು ಕನ್ನಡಕ ಇತ್ತೆನ್ನಲಾಗಿದ್ದು, ಕಿಟಕಿ ಬಾಗಿಲು ತೆರೆದಿದ್ದು ಅಡುಗೆ ಕೋಣೆ ಬಳಿಯ ಬಾಗಿಲು […]

ಕಾಸರಗೋಡು – ಮಂಗಳೂರು ಕೆ.ಎಸ್.ಆರ್.ಟಿ.ಸಿ ಅಂತರ್ ರಾಜ್ಯ ಬಸ್ ಸರ್ವಿಸ್ ಶೀಘ್ರ ಪ್ರಸ್ತಾಪಿಸುವಂತೆ ಆಗ್ರಹಿಸಿ ಮನವಿ

Saturday, September 26th, 2020
Manjeshwara Bjp

ಮಂಜೇಶ್ವರ:- ಕಾಸರಗೋಡು – ಮಂಗಳೂರು ಕೆ.ಎಸ್.ಆರ್.ಟಿ.ಸಿ ಅಂತರ್ ರಾಜ್ಯ ಬಸ್ ಸರ್ವಿಸ್ ಶೀಘ್ರ ಪುನಃ ಸ್ಥಾಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕೆ.ಎಸ್.ಆರ್.ಟಿ.ಸಿ ಮೆನೇಜಿಂಗ್ ಡೈರೆಕ್ಟರ್ ರವರಿಗೆ ಬಿಜೆಪಿ ಮಂಜೇಶ್ವರದ ನಿಯೋಗದವರು ಭೇಟಿಯಾಗಿ ಮನವಿ ಸಲ್ಲಿಸಿದರು. ಓಬಿಸಿ ಮೋರ್ಚಾ ಕೇರಳ ರಾಜ್ಯ ಕೋಶಾಧಿಕಾರಿ ನ್ಯಾಯವಾದಿ ನವೀನ್ ರಾಜ್ ಕೆ.ಜೆ ಯವರು ಮನವಿ ಸಲ್ಲಿಸಿದರು. ಈ ವೇಳೆ ಬಿಜೆಪಿ ಮಂಜೇಶ್ವರ ಮಂಡಲ ಉಪಾಧ್ಯಕ್ಷ ಪದ್ಮನಾಭ ಕಡಪ್ಪರ, ಪ್ರಧಾನ ಕಾರ್ಯದರ್ಶಿ ಆದರ್ಶ್ ಬಿ.ಎಂ, ಓಬಿಸಿ ಮೋರ್ಚಾ ಮಂಜೇಶ್ವರ ಪಂಚಾಯತ್ ಸಮಿತಿ ಪ್ರಧಾನ […]

ಡ್ರಗ್ ಪ್ರಕರಣ- ಡಿಸಿಪಿ ವಿನಯ್ ಗಾಂವ್ಕರ್ ತಂಡದಿಂದ ನಿರೂಪಕಿ ಅನುಶ್ರೀ ವಿಚಾರಣೆ

Saturday, September 26th, 2020
Anushree

ಮಂಗಳೂರು:  ನಟಿ ನಿರೂಪಕಿ ಅನುಶ್ರೀ, ಶನಿವಾರ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ ಮಂಗಳೂರು ಪೊಲೀಸರ ಎದುರು ಹಾಜರಾಗಿ ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ಎದುರಿಸಿದರು. ಪಣಂಬೂರು ಠಾಣೆಯಲ್ಲಿ ಡಿಸಿಪಿ ವಿನಯ್ ಗಾಂವ್ಕರ್,  ಸಿಐ ಶಿವಪ್ರಕಾಶ್  ನೇತೃತ್ವದಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ  ಅನುಶ್ರೀ ವಿಚಾರಣೆ ನಡೆಯಿತು. ವಿಚಾರಣೆ ಮುಗಿಸಿ ಠಾಣೆಯಿಂದ ಹೊರಬಂದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅನುಶ್ರೀ, “ಪೊಲೀಸರ ಎಲ್ಲಾ ಪ್ರಶ್ನೆಗೆ ಉತ್ತರಿಸಿದ್ದೇನೆ. ಮುಂದೆಯೂ ಸಹಕಾರ ಕೊಡುತ್ತೇನೆ. ನಾನು ಯಾವುದೇ ಡ್ರಗ್ಸ್ ಪಾರ್ಟಿಗಳಲ್ಲಿ ಭಾಗವಹಿಸಿಲ್ಲ ಎಂದು ಹೇಳಿದರು. ತರುಣ್ ರಾಜ್ […]

ರೈತ ವಿರೋಧಿ ಮಸೂದೆಯನ್ನು ಖಂಡಿಸಿ ಯುವ ಕಾಂಗ್ರೆಸ್ ವತಿಯಿಂದ ದೊಂದಿ ಬೆಳಕಿನ ಪ್ರತಿಭಟನೆ

Friday, September 25th, 2020
YouthCongress

ಮಂಗಳೂರು : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ರೈತ ವಿರೋಧಿ ಮಸೂದೆಯನ್ನು ಖಂಡಿಸಿ ದಕ್ಷಿಣ ಕನ್ನಡ ಯುವ ಕಾಂಗ್ರೆಸ್ ವತಿಯಿಂದ ಮಂಗಳೂರಲ್ಲಿ ದೊಂದಿ ಬೆಳಕಿನ ಪ್ರತಿಭಟನೆ ಶುಕ್ರವಾರ ಸಂಜೆ  ನಡೆಯಿತು. ಪ್ರತಿಭಟನೆಗೆ ಅನುಮತಿವಿಲ್ಲದ ಕಾರಣ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ. ಇದೇ ವೇಳೆ ಪೊಲೀಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಅನುಮತಿ ಇಲ್ಲದೇ ಪ್ರತಿಭಟನೆ ನಡೆಸಿದ ಕಾರಣ ಕಾಂಗ್ರೆಸ್ ಮುಖಂಡರು ಹಾಗೂ ಪ್ರತಿಭಟನಾನಿರತ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ನಂತರ ಬಂಧಿತರನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ.

ಆಯುಧ ಪರವಾನಿಗೆಯ ಎಲ್ಲ ಸೇವೆಗಳಿಗೆ ಅಕ್ಟೋಬರ್ 1ರಿಂದ ಆನ್‌ಲೈನ್ ಮೂಲಕ ಆರಂಭ

Friday, September 25th, 2020
vikashkumar

ಮಂಗಳೂರು : ಕೇಂದ್ರ ಮಂತ್ರಾಲಯ ಭಾರತ ಸರಕಾರ ಹಾಗೂ ಒಳಾಡಳಿತ ಇಲಾಖೆ ಕರ್ನಾಟಕ ಸರಕಾರ ಬೆಂಗಳೂರು ಅವರ ನಿರ್ದೇಶನದಂತೆ  ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಆಯುಧ ಪರವಾನಿಗೆಯ ಎಲ್ಲ ಸೇವೆಗಳಿಗೆ ಅಕ್ಟೋಬರ್ 1ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಇಚ್ಛಿಸುವವರು www.mha.gov.inಗೆ ಲಾಗಿನ್ ಆಗಿ SERVICES > ARMS LICENCEONLINE PORTALಗೆ ಹೋಗಿ ಕಡ್ಡಾಯವಾಗಿ UIN ಸಂಖ್ಯೆಯನ್ನು ಹಾಕಿ ಆಯುಧಗಳ ಪರವಾನಿಗೆ ಸೇವೆ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂ.: 0824-2220603ಗೆ ಕರೆ ಮಾಡಬಹುದು ಎಂದು […]

ಮಹಿಳೆಯ ಚಿನ್ನದ ಸರ ಎಗರಿಸಿದ ಪ್ರಕರಣ, ಓರ್ವ ಮಹಿಳೆ ಸಹಿತ ನಾಲ್ವರು ಆರೋಪಿಗಳ ಬಂಧನ

Thursday, September 24th, 2020
Vitla Accuced

ಬಂಟ್ವಾಳ: ಮಹಿಳೆಯ ಚಿನ್ನದ ಸರ ಎಗರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸಹಿತ ಒಟ್ಟು ನಾಲ್ವರು ಆರೋಪಿಗಳನ್ನು ವಿಟ್ಲ ಎಸ್ಐ ವಿನೋದ್ ಕುಮಾರ್ ರೆಡ್ಡಿ ನೇತೃತ್ವದ ತಂಡ ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ತಾಲೂಕಿನ ಸವಣೂರು ನಿವಾಸಿಗಳಾದ ಮಹಮ್ಮದ್ ಶಾಕೀರ್ (23), ಮಹಮ್ಮದ್ ಇಕ್ಬಾಲ್ (24), ಕೆ.ಎ. ಮಹಮ್ಮದ್ ಯಾನೆ ಐಟಿ ಮಮ್ಮು (41) ಆರೋಪಿಗಳಿಗೆ ಸಹಕರಿಸಿದ ತಿಂಗಳಾಡಿ ನಿವಾಸಿ ಹಾಜೀರಾ (44)  ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಕುಂಬ್ರದ ಬ್ಯಾಂಕ್ ನಲ್ಲಿ ಅಡವಿಟ್ಟ ಕಳವು ಮಾಡಿದ ಚಿನ್ನ, ಆಕ್ಟೀವ್ […]