ಸ್ಕೂಟರ್‌ಗೆ ಸ್ಕಾರ್ಪಿಯೋ ಕಾರು ಡಿಕ್ಕಿ ಸವಾರ ಲಾರಿಯ ಅಡಿಗೆ ಬಿದ್ದು ಸಾವು

Saturday, August 4th, 2018
Raveendra Nayak

ಹಳೆಯಂಗಡಿ : ಪಾವಂಜೆ ಬಳಿ ಶನಿವಾರ ಬೆಳಗ್ಗೆ 8.30ಕ್ಕೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ. ಕೊಲ್ನಾಡು ನಿವಾಸಿ ರವೀಂದ್ರ ನಾಯಕ್ ( 45 ) ಸಾವನ್ನಪ್ಪಿದ ದುರ್ದೈವಿ. ರವೀಂದ್ರ ನಾಯಕ್ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಸಂದರ್ಭ ಸ್ಕೂಟರ್‌ಗೆ ಸ್ಕಾರ್ಪಿಯೋ ಕಾರು ಡಿಕ್ಕಿ ಹೊಡೆದಿದೆ. ಇದರ ರಭಸಕ್ಕೆ ರವೀಂದ್ರ ನಾಯಕ್ ಸಮೀಪದಲ್ಲಿ ಚಲಿಸುತ್ತಿದ್ದ ಲಾರಿಯ ಅಡಿಗೆ ಬಿದ್ದು ಅಪಘಾತ ಸಂಭವಿಸಿದೆ. ಸ್ಕಾರ್ಪಿಯೋ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಪೋಲಿಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಸುರತ್ಕಲ್ ನ […]

ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಹತ್ತನೇ ತರಗತಿಯ ವಿದ್ಯಾರ್ಥಿ

Friday, August 3rd, 2018
ramana

ಪುತ್ತೂರು :  ಬೆಟ್ಟಂಪಾಡಿಯ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇರ್ದೆ ಗ್ರಾಮದ ದೂಮಡ್ಕಎಂಬಲ್ಲಿ ಶುಕ್ರವಾರ  ಬೆಳಗ್ಗೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕನನ್ನು ಜೋಗಿಮೂಲೆ ನಿವಾಸಿ ರಮಣ್ ಕುಮಾರ್ (15) ಎಂದು ಗುರುತಿಸಲಾಗಿದೆ. ರಮಣ್ ಕುಮಾರ್ ಮೂಲತಃ ಸುಳ್ಯದ ದಿ. ಕೆ.ಸತ್ಯನಾರಾಯಣ ಹಾಗೂ ಸಂಧ್ಯಾಲಕ್ಷ್ಮೀಯ ಪುತ್ರ. ಈತ ಕಳೆದ 2 ವರ್ಷಗಳಿಂದ ತನ್ನ ಮಾವ ದೂಮಡ್ಕ ನಿವಾಸಿ ನರಸಿಂಹ ಪ್ರಸಾದ್ ರವರ ಮನೆಯಿಂದ ಶಾಲೆಗೆ ಹೋಗುತ್ತಿದ್ದ. ಈತನ ಮೃತದೇಹವು […]

ಐದು ವರ್ಷದ ಮಗಳೊಂದಿಗೆ ಬಾವಿಗೆ ಹಾರಿದ ತಾಯಿ

Friday, August 3rd, 2018
suicide

ಮಂಗಳೂರು : ಮಗಳಿಗೆ ಅನಾರೋಗ್ಯ ಎಂದು ತಾಯಿ – ಮಗಳು ಅತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರ ಹೊರವಲಯದ ಮುಲ್ಕಿ ಸಮೀಪದ ಗೇರುಕಟ್ಟೆ ಎಂಬಲ್ಲಿ ಈ ಘಟನೆ ನಡೆದಿದೆ. ಸುಜಾತ(48), ಕೃತಿಕಾ(5) ಅತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. 5 ವರ್ಷದ ಬಾಲಕಿ ಕೃತಿಕಾ ಕಳೆದ ಹಲವಾರು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತಿದ್ದಳು. ಈ ಹಿನ್ನೆಲೆಯಲ್ಲಿ ತಾಯಿ ಸುಜಾತ ನೊಂದಿದ್ದು, ತಾಯಿ ಮತ್ತು ಮಗಳ ಆತ್ಮಹತ್ಯೆಗೆ ಇದೇ ಕಾರಣ ಎಂದು ಹೇಳಲಾಗುತ್ತಿದೆ. ಗುರುವಾರ ಮನೆಯಲ್ಲಿ ಯಾರು ಇಲ್ಲದ […]

ಉಡುಪಿ ಅಂಬಲಪಾಡಿ ಮಹಾಕಾಳಿಗೆ 2 ಲಕ್ಷ ರೂ ಖರ್ಚಿನಲ್ಲಿ ಹೂವಿನ ಪೂಜೆ ಮಾಡಿದ ಭಕ್ತ

Friday, August 3rd, 2018
Ambalpady

ಉಡುಪಿ : ಚಿಕ್ಕಬಳ್ಳಾಪುರದ ಬಾಬು ಎಂಬ ವ್ಯಾಪಾರಿಯೊಬ್ಬರು ಅವರ ಬಳಗದೊಂದಿಗೆ ಉಡುಪಿ ಅಂಬಲಪಾಡಿ ಮಹಾಕಾಳಿ ದೇವಸ್ಥಾನದಲ್ಲಿ ಪ್ರತಿವರ್ಷ ಆಷಾಡ ತಿಂಗಳಿನ ಒಂದು  ಶುಕ್ರವಾರ ಮಹಾಕಾಳಿಗೆ ಇಷ್ಟವಾಗುವಷ್ಟು ಹೂವುಗಳಿಂದ ಶೃಂಗರಿಸಿ ಪೂಜೆ ಮಾಡುತ್ತಾರಂತೆ. ಅಷ್ಟು ಮಾತ್ರವಲ್ಲ ಆ ದಿನ ದೇವಸ್ಥಾನದಲ್ಲಿ ನಡೆಯುವ ಎಲ್ಲಾ ಸೇವೆಗಳ ಖರ್ಚನ್ನು ಅವರೇ ನೋಡಿಕೊಳ್ಳುತ್ತಾರೆ. ಅದು ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಘಟನೆ. ಇದೇ ಬಾಬು ಎನ್ನುವ ವ್ಯಕ್ತಿ ಇಪ್ಪತು ವರ್ಷದ ಹಿಂದೆ ಇದೇ ಅಂಬಲಪಾಡಿ ಮಹಾಕಾಳಿ ಸನ್ನಿಧಿಗೆ ಬಂದಿದ್ದಾಗ ಕತ್ತಲೆಯಾಗಿತ್ತಂತೆ. ಆ ದೇವಸ್ಥಾನದಲ್ಲಿ […]

ಶ್ರೀಧಾಮ ಮಾಣಿಲದಲ್ಲಿ ಮೂಡಪ್ಪಸೇವೆ, ರಂಗ ಪೂಜೆ ಮತ್ತು ಅಂಗಾರಕ ಸಂಕಷ್ಟಿ

Thursday, August 2nd, 2018
Sri Dhama Manila

ಮಾಣಿಲ : ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಒಂದು ಮಂಡಲ ಲಕ್ಷ್ಮೀ ಪೂಜೆ, ವ್ರತಾಚರಣೆ ಪ್ರಯುಕ್ತ ಜುಲೈ 31ರಂದು ಮೂಡಪ್ಪಸೇವೆ, ರಂಗ ಪೂಜೆ ಮತ್ತು ಅಂಗಾರಕ ಸಂಕಷ್ಟಿಯ ವಿಶೇಷ ಪೂಜೆ ನಡೆಯಿತು. ಬೆಳಗ್ಗಿನಿಂದಲೇ ಸಾವಿರಾರು ಭಕ್ತರು ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪುನೀತರಾದರು. ಬೆಳಗ್ಗೆ ಗಣಪತಿ ಹವನ, ಪಂಚಾಂಮೃತ ಅಭಿಷೇಕ, ಕಲ್ಪೋಕ್ತ ಪೂಜೆ, ಲಕ್ಷ್ಮೀ ಪೂಜೆ, ಗುರುಪೂಜೆ ನಡೆಯಿತು. ಸಮೂಹಿಕ ಕುಂಕುಮಾರ್ಚನೆ, ಸಮೂಹಿಕ ವಿಷ್ಣು ಸಹಸ್ರನಾಮ ಪಠಣ, ಶ್ರೀ ದುರ್ಗಾ ಪೂಜೆ, ಆಶ್ಲೇಷ ಬಲಿ ಈ […]

ಪೈಲೆಟ್ ಗೆ ಅನಾರೋಗ್ಯ ಸ್ಪೈಸ್ ಜೆಟ್ ವಿಮಾನ ರನ್ ವೇ ಯಲ್ಲೇ ಬಾಕಿ

Thursday, August 2nd, 2018
spice-jet

ಮಂಗಳೂರು : ದುಬೈಗೆ ತೆರಳಬೇಕಾಗಿದ್ದ 188 ಪ್ರಯಾಣಿಕರು ಅಸೌಖ್ಯದ ಕಾರಣ ಪೈಲಟ್ ಬಾರದ ಹಿನ್ನಲೆಯಲ್ಲಿ ವಿಮಾನದಲ್ಲಿ ರಾತ್ರಿ ಕಳೆದ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಪೈಲೆಟ್ ಬಾರದ ಕಾರಣ ದುಬೈಗೆ ಹಾರಬೇಕಿದ್ದ ಸ್ಪೈಸ್ ಜೆಟ್ ವಿಮಾನ ರನ್ ವೇ ಯಲ್ಲೇ ಬಾಕಿಯಾಗಿದೆ. ನಿನ್ನೆ ತಡ ರಾತ್ರಿ 12.45ಕ್ಕೆ ಮಂಗಳೂರಿನಿಂದ ದುಬೈಗೆ ಸ್ಪೈಸ್ ಜೆಟ್ -ಎಸ್ ಜಿ59 ವಿಮಾನ ಹಾರಬೇಕಿತ್ತು . 188 ಪ್ರಯಾಣಿಕರು ವಿಮಾನ ಏರಿ ಕುಳಿತ ಬಳಿಕ  ಪೈಲೆಟ್ ಗೆ ಅನಾರೋಗ್ಯ ಕಾಡಿದೆ. […]

ಶಿರೂರು ಮೂಲ ಮಠದ ಬೆಲೆಬಾಳುವ ಸೊತ್ತುಗಳು ಉಡುಪಿಗೆ

Thursday, August 2nd, 2018
Shiroor math

ಉಡುಪಿ :  ಹಿರಿಯಡ್ಕ ಸಮೀಪದ ಶಿರೂರು ಮೂಲ ಮಠದಲ್ಲಿದ್ದ ಬೆಲೆಬಾಳುವ, ಅಮೂಲ್ಯ ಸೊತ್ತುಗಳನ್ನು ಸುರಕ್ಷತೆಯ ದೃಷ್ಠಿಯಿಂದ ದ್ವಂದ್ವ ಮಠವಾದ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಇಂದು ಪೊಲೀಸರ ಸಮ್ಮುಖದಲ್ಲಿ ಉಡುಪಿಯ ಶಿರೂರು ಮಠಕ್ಕೆ ತಂದು ಅಲ್ಲಿನ ಲಾಕರ್‌ನಲ್ಲಿರಿಸಿದರು. ಶಿರೂರು ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಜು.19ರಂದು  ಮೃತಪಟ್ಟ ನಂತರ ತನಿಖೆಯ ಹಿನ್ನೆಲೆಯಲ್ಲಿ ಪೊಲೀಸರು ಶಿರೂರು ಮೂಲ ಮಠವನ್ನು ತಮ್ಮ ಸುಪರ್ದಿಗೆ ಪಡೆದು ಬಿಗಿ ಭದ್ರತೆಯನ್ನು ಒದಗಿಸಿದ್ದರು. ತೀರಾ ಗ್ರಾಮೀಣ ಪ್ರದೇಶವಾದ ಶಿರೂರಿನ ಮೂಲಮಠದಲ್ಲಿರುವ ಬೆಲೆಬಾಳುವ ಹಲವು […]

ಬೋಂದೆಲ್ ಸಂತ ಲಾರೆನ್ಸ್ ಚರ್ಚಿನ ವಾರ್ಷಿಕ ಮಹೋತ್ಸವಕ್ಕೆ ಹೊರೆಕಾಣಿಕೆ

Thursday, August 2nd, 2018
Bondel church

ಮಂಗಳೂರು  :  ಮಂಗಳೂರಿನ ಬೋಂದೆಲ್ ನಲ್ಲಿರುವ ಸಂತ ಲಾರೆನ್ಸ್ ಚರ್ಚಿನ ವಾರ್ಷಿಕ ಮಹೋತ್ಸವದ ಪ್ರಯುಕ್ತ ಹೊರೆಕಾಣಿಕೆಯನ್ನು ಮೌಂಟ್ ಕಾರ್ಮೆಲ್ ಶಾಲೆಯ ಆವರಣದಿಂದ ವಿಜೃಂಭಣೆಯಿಂದ ಚರ್ಚಿಗೆ ತರಲಾಯಿತು. 9 ದಿನಗಳ ನೊವೆನಾದ ಬಳಿಕ ದಿನಾಂಕ 10-08-2018 ರಂದು ನಡೆಯುವ ಈ ಹಬ್ಬದ ಪ್ರಯುಕ್ತ ಹೊರೆಕಾಣಿಕೆಯನ್ನು ಚರ್ಚಿನ ಭಕ್ತಾದಿಗಳಲ್ಲದೇ ಭಂದತಿ ಜುಮಾದಿ ಬಂಟರ ದೈವಸ್ಥಾನ ಪಚ್ಚನಾಡಿ, ಶ್ರೀದೇವಿ ಫ್ರೆಂಡ್ಸ್ ಪಚ್ಚನಾಡಿ, ಹಿಂದೂ ಜಾಗರಣ ವೇದಿಕೆ ಪಚ್ಚನಾಡಿ, ಹಿಂದೂ ಧಾರ್ಮಿಕ ಸೇವಾ ಸಮಿತಿ, ರಾಜಶ್ರೀ ಸೌಂಡ್ಸ್. ಮಹಾಲಸ ದೇವಸ್ಥಾನ, ವೆಂಕಟ್ರಮಣ ದೇವಸ್ಥಾನ, ಸಾಂಗಾತಿ ವಾಮಂಜೂರು, […]

ಪಂಪ್​ವೆಲ್​ನಲ್ಲಿ ಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ

Wednesday, August 1st, 2018
protest

ಮಂಗಳೂರು: ರಾಷ್ಟೀಯ ಹೆದ್ದಾರಿ  ಕಾಮಗಾರಿ ವಿಳಂಬ ವಿರೋಧಿಸಿ ಪಂಪ್ವೆಲ್ನಲ್ಲಿ ಮಂಗಳೂರು ದಕ್ಷಿಣ ಮತ್ತು ಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ ನಡೆಯಿತು. ಪಂಪ್ವೆಲ್ ಸರ್ಕಲ್ನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಕೃತಿಯನ್ನು ಶವದ ರೀತಿಯಲ್ಲಿ ಮಲಗಿಸಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ಆರಂಭಿಸಿ ಎಂಟು ವರ್ಷವಾದರೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ […]

ಪಾಲಿಕೆಯಿಂದ ಅನಧಿಕೃತ ಗೂಡಂಗಡಿ ಬೀದಿಬದಿ ವ್ಯಾಪಾರಿಗಳ ತೆರವು

Wednesday, August 1st, 2018
petty-shop

ಮಂಗಳೂರು  : ಪೊಲೀಸ್‌ ಭದ್ರತೆಯ ಜತೆಗೆ ಹಾಗೂ ಪಾಲಿಕೆ ಅಧಿಕಾರಿಗಳು ಮನಪಾ ಸಿಬಂದಿಗಳು  ಸ್ಟೇಟ್‌ ಬ್ಯಾಂಕ್‌, ಲೇಡಿಗೋಷನ್‌, ಸರ್ವೀಸ್‌ ಬಸ್‌ ನಿಲ್ದಾಣ ಹಾಗೂ ಸೆಂಟ್ರಲ್‌ ಮಾರ್ಕೆಟ್‌ ಸಮೀಪದಲ್ಲಿ ಅನಧೀಕೃತ ಗೂಡಂಗಡಿಗಳ ತೆರವು ಕಾರ್ಯಾಚರಣೆ ಮಂಗಳವಾರ ನಡೆಯಿತು. ಬೀದಿಬದಿ ವ್ಯಾಪಾರ ನಡೆಸುವವರನ್ನು ತೆರವು ಮಾಡುವಂತೆ ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ವ್ಯಾಪಕ ಆಗ್ರಹ ವ್ಯಕ್ತವಾಗಿತ್ತು. ಈ ಸಂಬಂಧ ಸ್ಟೇಟ್‌ಬ್ಯಾಂಕ್‌ ವ್ಯಾಪ್ತಿಯಲ್ಲಿ ಬೀದಿಬದಿ ವ್ಯಾಪಾರಿಗಳನ್ನು ತೆರವು ಮಾಡಲಾಯಿತು. ಪಾಲಿಕೆ ಕಂದಾಯ ಇಲಾಖೆ ವತಿಯಿಂದ ಪೊಲೀಸ್‌ ಭದ್ರತೆಯ ಜತೆಗೆ ಹಾಗೂ ಪಾಲಿಕೆ […]