ತನ್ನ ಕಾಯಿಲೆಯನ್ನು ಮನೆಯವರಿಗೆ ತಿಳಿಸದೆ ಜೀವ ಕಳಕೊಂಡ ವಿದ್ಯಾರ್ಥಿನಿ

Monday, July 30th, 2018
Yakshitha

ಮೂಡಬಿದಿರೆ : ವಿದ್ಯಾರ್ಥಿನಿಯೊಬ್ಬಳು ತನಗೆ ಖಾಯಿಲೆ ಇದ್ದರೂ ಮನೆಯವರಿಗೆ ತಿಳಿಸದೆ ಮುಚ್ಚಿಟ್ಟ ಪರಿಣಾಮ ಆಕೆ ತನ್ನ ಜೀವವನ್ನೇ ತೆರಬೇಕಾಯಿತು. ಆಕೆಗಿನ್ನೂ ಹತ್ತೊಂಬತ್ತು ವರ್ಷಪ್ರಾಯ ಮೂಡಬಿದ್ರೆಯ ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವತೀಯ ಬಿಕಾಂ ವಿದ್ಯಾರ್ಥಿನಿ. ಮೂಡಬಿದ್ರೆಯ ನೀರ್ಕರೆಯ ಅಶ್ವತ್ಥಪುರ ನಿವಾಸಿ ಕೃಷ್ಣ ಪುಜಾರಿ ಎಂಬವಳ ಮಗಳು ಯಕ್ಷಿತಾ ಎಂಬವಳು ಮೃತ ಪಟ್ಟ ದುರ್ದೈವಿ. ಆಕೆಯ ಅಶ್ವಸ್ಥತೆಯ ಬಗ್ಗೆ ಸ್ವತಃ ಆಕೆಗೆ ಮಾತ್ರ ತಿಳಿದಿತ್ತು. ಸಕ್ಕರೆಕಾಯಿಲೆ ಮತ್ತು ರಕ್ತದೊತ್ತಡ ಆಕೆಯನ್ನು ಕಾಡುತ್ತಿತ್ತು. ಆಕೆಗೆ ಸುಸ್ತಾಗುತ್ತಿತ್ತು, ಸರಿಯಾದ ಸಮಯಕ್ಕೆ […]

ತುಳು ಓದಲು ಬೆರೆಯಲು ಕಲಿಯುವವರಿಗೆ ಇಲ್ಲಿದೆ ಸುವರ್ಣಾವಕಾಶ

Monday, July 30th, 2018
Tulu

ಮಂಗಳೂರು :  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು “ತುಳು ಲಿಪಿ ಕಲ್ಪುಗ” ಯೋಜನೆಯಡಿ ಆಸಕ್ತರಿಗೆ ತುಳು ಲಿಪಿ ಕಲಿಸುವ ಸಲುವಾಗಿ ಉಚಿತ ತುಳು ಲಿಪಿ ಕಲಿಕಾ ತರಗತಿಯನ್ನು ಆಯೋಜಿಸುತ್ತಿದೆ. ಅಕಾಡೆಮಿ ಸಿರಿ ಚಾವಡಿಯಲ್ಲಿ ತರಗತಿಗಳನ್ನು ಸಪ್ಟೆಂಬರ್ 9 ರಿಂದ 4ಭಾನುವಾರಗಳಂದು ವ್ಯವಸ್ಥೆ ಮಾಡಲಾಗುವುದು. ತುಳು ಲಿಪಿ ಕಲಿಯಲಿಚ್ಚಿಸುವ ಆಸ್ತಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ. ಆಸಕ್ತರು ಅಕಾಡೆಮಿ ಮೊಬೈಲ್ ಸಂಖ್ಯೆ: 9901016962 ಗೆ SMS ಅಥವಾ ಕರೆ ಮೂಲಕ ಅಕಾಡೆಮಿಗೆ ದಿನಾಂಕ 20-08-2018 ರ ಒಳಗಾಗಿ […]

ಗುರು-ಶಿಷ್ಯ ಪರಂಪರೆ ಜಗತ್ತಿಗೇ ಹಿಂದೂ ಧರ್ಮ ನೀಡಿದ ಅಮೂಲ್ಯ ಕೊಡುಗೆ

Monday, July 30th, 2018
Gurupurnime

ಮಂಗಳೂರು : ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಂಗಳೂರಿನ ಎಸ್.ಡಿ.ಎಮ್. ಲಾ ಕಾಲೇಜಿನ ಸಭಾಗೃಹದಲ್ಲಿ ಗುರುಪೂರ್ಣಿಮಾ ಮಹೋತ್ಸವವನ್ನು ಆಯೋಜಿಸಲಾಗಿತ್ತು. ಬೆಳಿಗ್ಗೆ ಗುರುಪೂಜೆ ಹಾಗೂ ಸಾಯಂಕಾಲ ಸಭಾ ಕಾರ್ಯಕ್ರಮ ನೆರವೇರಿತು. ಬೆಳಿಗ್ಗೆ ಆದಿಗುರು ಮಹರ್ಷಿ ವ್ಯಾಸರ ಪ್ರತಿಮೆಯ ಪೂಜೆಯನ್ನು ಮಾಡಲಾಯಿತು. ಗುರುಪೂಜೆಯನ್ನು ಸನಾತನದ ಸಾಧಕ ದಂಪತಿಗಳಾದ ಶ್ರೀ. ವೇಣು ಗೋಪಾಲ ರಾಮ ಮತ್ತು ಸೌ. ಪರಮೇಶ್ವರಿ ಇವರು ಮಾಡಿದರು. ಸನಾತನ ಸಂಸ್ಥೆಯ ಶ್ರದ್ಧಾಸ್ಥಾನ ಪ.ಪೂ ಭಕ್ತರಾಜ ಮಹಾರಾಜರ ಪ್ರತಿಮೆಗೆ ಆರತಿ ಬೆಳಗಲಾಯಿತು. ಗುರುಪೂಜೆಯ ಪೌರೋಹಿತ್ಯವನ್ನು […]

ಧಾರವಾಡ : ಮಿಲಾನ್ ಗರ್ಲ್ ಐಕಾನ್ ಲೀಡರ್ಸ್ ಗೆ ಸನ್ಮಾನ

Monday, July 30th, 2018
Milan

ಧಾರವಾಡ : ಹೆಣ್ಣು ಮಕ್ಕಳು ತಮ್ಮ ಗುರಿಗಳನ್ನು ತಲುಪಲು ನಿರ್ದಿಷ್ಟವಾದ ಯೋಜನೆಗಳನ್ನು ಹಮ್ಮಿಕೊಂಡು ಅದರ ಯಶಸ್ಸಿಗೆ ಶ್ರಮಿಸುತ್ತ ಸತತ ಪ್ರಯತ್ನ ಮಾಡಬೇಕೆಂದು ಧಾರವಾಡ ಜಿಲ್ಲಾ ಪಂಚಾಯತ ಸಿ.ಇ.ಓ ಸ್ನೇಹಲ್ ಆರ್ ಅವರು ಹೇಳಿದರು. ಅವರು ಇತ್ತೀಚೆಗೆ ಧಾರವಾಡದ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜರುಗಿದ ಮಿಲಾನ್ ಗರ್ಲ್ ಐಕಾನ್ ಲೀಡರ್ಸ್ ಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಸಾಧನ ಸಂಸ್ಥೆ ಸಂಸ್ಥಾಪಕಿ ಇಸಾಬೆಲ್ ಮಾತನಾಡಿ, ಹೆಣ್ಣುಮಕ್ಕಳ ಇಂದಿನ ಚಿಂತಾಜನಕ ಪರಿಸ್ಥಿತಿ ಈಗಾಗಲೇ ಎಲ್ಲರಿಗೂ […]

ದುಬಾಯಿಯಲ್ಲಿ ವಿಶ್ವ ತುಳು ಸಮ್ಮೇಳನ ಲಾಂಛನ ಲೋಕಾರ್ಪಣೆ

Monday, July 30th, 2018
tulu-sahitya

ಮಂಗಳೂರು: ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪ್ರಥಮ ಬಾರಿಗೆ ವಿಶ್ವ ತುಳು ಸಮ್ಮೇಳನ ದುಬಾಯಿ 2018 ನವೆಂಬರ್23 ಮತ್ತು 24ರಂದು ದುಬಾಯಿಯ ಅಲ್ ನಾಸರ್ ಲೀಸರ್ ಲ್ಯಾಂಡ್‌ಐಸ್‌ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು ಆ ನಿಮಿತ್ತ ವಿಶ್ವ ತುಳು ಸಮ್ಮೇಳನದ ಸಲಹಾ ಸಮಿತಿಯ ಸರ್ವ ಸದಸ್ಯರ ಸಭೆ ಕಳೆದ ಶುಕ್ರವಾರ ದುಬಾಯಿ ಮಾರ್ಕೊಪೋಲ್ ಹೋಟೆಲ್ ಸಭಾಂಗಣದಲ್ಲಿ ಸಾಗರೋತ್ತರ ತುಳುವರ ಮುಖ್ಯ ಸಂಘಟಕ ಸರ್ವೋತ್ತಮ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಸರ್ವೋತ್ತಮ ಶೆಟ್ಟಿ ಮಾತನಾಡಿ ವಿಶ್ವ ತುಳು ಸಮ್ಮೇಳನ ದುಬಾಯಿ-2018ರ ವಿವರಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಸಭೆಯಲ್ಲಿ […]

ನವ ದೆಹಲಿಯಲ್ಲಿ ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ

Monday, July 30th, 2018
new-delhi

ಬೆಂಗಳೂರು: ಶ್ರೀ ಪುಷ್ಪಾಂಜಲಿ ನಾಟ್ಯ ಕಲಾ ಅಕಾಡೆಮಿ, ಕೆ.ಆರ್.ಪುರಂ, ಬೆಂಗಳೂರು ವತಿಯಿಂದ ನಾಡ ಪ್ರಭುಕೆಂಪೇಗೌಡ ಫೌಂಡೇಷನ್, ನವದೆಹಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಸಹಕಾರದಲ್ಲಿದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿಜುಲೈ 28, 2018ರಂದು ನಡೆದ ನಾಡಪ್ರಭುಕೆಂಪೇಗೌಡರಾಷ್ಟ್ರೀಯ ಸಾಂಸ್ಕೃತಿಕಉತ್ಸವವು ವಿಜೃಂಭಣೆಯಾಗಿ ನಡೆಯಿತು. ಕರ್‌ಕರ್‌ಡೂಮ್‌ಕೋರ್ಟ್‌ನಮುಖ್ಯ ನ್ಯಾಯಾಧೀಶರಾದ ಶ್ರೀ ಎ.ಎಸ್. ಜಯಚಂದ್ರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶ್ರೀ ಎಚ್.ವಿಶ್ವನಾಥ, ಮಾಜಿ ಸಚಿವರು ಹಾಗೂ ಶಾಸಕರು ಕರ್ನಾಟಕ ಸರ್ಕಾರಇವರು ವಹಿಸಿದ್ದರು. ಮುಖ್ಯಅತಿಥಿಗಳಾಗಿ ಶ್ರೀ ಎಸ್. ರಾಘವೇಂದ್ರರಾವ್, ಪ್ರಧಾನ ಕಾರ್ಯದರ್ಶಿ, ವಿಜ್ಞಾನ […]

ಆಳ್ವಾಸ್‌ನಲ್ಲಿ “ಕಾರ್ಗಿಲ್ ವಿಜಯ ದಿವಸ್”

Monday, July 30th, 2018
kargil-deves

ಮೂಡಬಿದೆರೆ: ಆಳ್ವಾಸ್ ಕಾಲೇಜಿನ ಎನ್‌ಸಿಸಿ ಭೂಸೇನೆಯು ತನ್ನ ವಾರ್ಷಿಕ ಕಾರ‍್ಯಕ್ರಮಗಳ ಉದ್ಘಾಟನೆ ಹಾಗೂ ಕಾರ್ಗಿಲ್ ವಿಜಯ ದಿನದ ಸಂಭ್ರಮಾಚರಣೆಯ ಅಂಗವಾಗಿ ಹಾನರಿಂಗ್ ಆವರ್ ನೇಶನ್ ಹೀರೋಸ್ ”ಕಾರ್ಗಿಲ್ ವಿಜಯ ದಿವಸ್” ಎಂಬ ಕಾರ‍್ಯಕ್ರಮವನ್ನು ಕಾಲೇಜಿನ ಕುವೆಂಪು ಸಭಾ ಭವನದಲ್ಲಿ, ಶನಿವಾರ ಹಮ್ಮಿಕೊಂಡಿತ್ತು. ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಮಾಜಿ ಸುಬೇದಾರ್ ಮೇಜರ್ ರಾಜೇಂದ್ರ ಜಿ .ಕೆ ಕಾರ್ಗಿಲ್ ಯುದ್ದದ ಸನ್ನಿವೇಶವನ್ನು ವಿವರಿಸಿದರು. ಕಾರ್ಗಿಲ್ ಯುದ್ದದಲ್ಲಿ ಹೋರಾಡಿದ ಮಾಜಿ ವೀರ ಯೋಧ ಹವಾಲ್ದರ ಪ್ರಭಾಕರ ರೈ ಅವರನ್ನು ಗೌರವಿಸಲಾಯಿತು. […]

ಕ್ಲಬ್​ವೊಂದರಲ್ಲಿ ಜೂಜಾಟ..19 ಮಂದಿ ವಶಕ್ಕೆ!

Monday, July 30th, 2018
jootata

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿನ ಕ್ಲಬ್ವೊಂದರಲ್ಲಿ ಜೂಜಾಟ ಆಡುತ್ತಿದ್ದ 19 ಮಂದಿಯನ್ನು ಬೆಳ್ತಂಗಡಿ ಪೊಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಉಜಿರೆಯಲ್ಲಿರುವ ಕ್ಲಬ್ನಲ್ಲಿ ಜೂಜಾಟವಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ 19 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳಿಂದ ಎರಡು ಲಕ್ಷದ 18 ಸಾವಿರ ನಗದು , 52 ಇಸ್ಪೀಟು ಎಲೆಗಳು, 4 ದ್ವಿಚಕ್ರ ವಾಹನ, ಪೀಠೋಪಕರಣಗಳು ಹಾಗೂ 22 ವಿವಿಧ ಕಂಪನಿಯ ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.

ಹರಿನಾರಾಯಣ ಅಸ್ರಣ್ಣ ಮನೆಗೆ ಯು.ಟಿ.ಖಾದರ್ ಭೇಟಿ..ಕುಟುಂಬಕ್ಕೆ ಸದಸ್ಯರಿಗೆ ಸಾಂತ್ವಾನ!

Monday, July 30th, 2018
u-t-kader

ಮಂಗಳೂರು: ಇತ್ತೀಚೆಗೆ ನಡೆದ ವಾಹನ ಅಪಘಾತದಲ್ಲಿ ಮೃತ ಪಟ್ಟಿದ್ದ ಕಟೀಲು ದೇವಸ್ಥಾನದ ಅರ್ಚಕರಾದ ಹರಿನಾರಾಯಣ ಅಸ್ರಣ್ಣ ಅವರ ಪುತ್ರ ಶ್ರೀನಿಧಿರವರ ಮನೆಗೆ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾದ ಯು.ಟಿ.ಖಾದರ್ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕಟೀಲು ದೇವಾಲಯದ ಅರ್ಚಕರು ನೆಲಮಂಗಲದಲ್ಲಿ ಕಳೆದ ಕೆಲವು ದಿನಗಳ ಹಿಂದೆ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಇಂದು ಖಾದರ್ರವರು ಮೃತರ ಮನೆಗೆ ತೆರಳಿ ಹೆತ್ತವರಿಗೆ ಹಾಗೂ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು. ಮೃತರು […]

ಓಮ್ನಿಯಲ್ಲಿ ಗಾಂಜಾ ಪತ್ತೆ..ಆರೋಪಿ ಸೆರೆ!

Monday, July 30th, 2018
omni-ganja

ಮಂಗಳೂರು: ಬಂಟ್ವಾಳ ತಾಲೂಕಿನ ಕಲ್ಲಡ್ಕದಿಂದ ಬಿ.ಸಿ ರೋಡ್ ಕಡೆಗೆ ಸಂಚರಿಸುತ್ತಿದ್ದ ಓಮ್ನಿ ವಾಹನ ತಪಾಸಣೆ ಮಾಡಿದಾಗ ಓಮ್ನಿಯಲ್ಲಿ ಗಾಂಜಾ ಪತ್ತೆಯಾಗಿದೆ. ಬಂಟ್ವಾಳದ ಗೋಳ್ತಮಜಲುವಿನ ಅಲೀಮ್ ಎಂಬಾತ ಗಾಂಜಾ ಸಾಗಿಸುತ್ತಿದ್ದ ಆರೋಪಿ. ಮೆಲ್ಕಾರ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಓಮ್ನಿ ವಾಹನವನ್ನು ತಪಾಸಣಾ ಸ್ಥಳದಿಂದ ಸ್ವಲ್ಪ ದೂರ ನಿಲ್ಲಿಸಿ ಪರಾರಿಯಾಗಲು ಆರೋಪಿ ಯತ್ನಿಸಿದ್ದ. ಈ ಸಂದರ್ಭದಲ್ಲಿ ಪೊಲೀಸರು ಆತನನ್ನು ಸುತ್ತುವರಿದು ಬಂಧಿಸಿದ್ದು, ಆತನ ಕಾರಿನಲ್ಲಿದ್ದ 2,33,550 ರೂ. ಮೌಲ್ಯದ 2 ಕಿಲೋ 100 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.