ಕಟೀಲು ಮೇಳಕ್ಕೆ ಬೆಳಗ್ಗಿನವರೆಗೆ ನಡೆಸಲು ಹೈಕೋರ್ಟ್‌ ಅನುಮತಿ

Tuesday, December 12th, 2023
kateelu Mela

ಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಿಂದ ನಡೆಸಲ್ಪಡುವ ಯಕ್ಷಗಾನವನ್ನು ಮೊದಲಿಂದಂತೆ ಬೆಳಗ್ಗಿನವರೆಗೆ ನಡೆಸಲು ಹೈಕೋರ್ಟು ಅನುಮತಿ ನೀಡಿದೆ. ಕಟೀಲು ಮೇಳ ವಿಶೇಷ ಪ್ರಕರಣವೆಂದು ಭಾವಿಸಿ ರಾತ್ರಿ 12.30ರವರೆಗೆ ಮಾತ್ರ ನಡೆಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ 2022ರ ನವೆಂಬರ್ 15ರಂದು ಎಂದು ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ದೇಗುಲದ ಭಕ್ತ ಕೃಷ್ಣಕುಮಾರ್‌ ಹೈಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆದು ಕೋವಿಡ್‌ ಪೂರ್ವದಲ್ಲಿ ಚಾಲ್ತಿಯಲ್ಲಿ ಇದ್ದಂತೆ ಯಕ್ಷಗಾನ ಪ್ರದರ್ಶನ ನೀಡಲು ಜಿಲ್ಲಾಧಿಕಾರಿ ಅಥವಾ ಸಮಕ್ಷ […]

ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಮಕ್ಕಳ ಶಸ್ತ್ರಕ್ರಿಯೆಯಲ್ಲಿ ಹೊಸ ಅಧ್ಯಾಯ

Tuesday, December 12th, 2023
AJ Hospital

ಮಂಗಳೂರು : ವೈದ್ಯಕ ನಾವೀನ್ಯತೆಯಲ್ಲಿ ಗಮನಾರ್ಹ ಸಾಧನೆಯಲ್ಲಿ, ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು 4 ವರ್ಷದ ಹುಡುಗನಿಗೆ ಬಹು ಎಟ್ರಿಯಲ್ ಸೆಪ್ಟಲ್ ನ್ಯೂನತೆಗಳನ್ನು (ಎಎಸ್ಡಿಗಳು) ಸೂಕ್ಷ್ಮ ಸಾಧನ ಮುಚ್ಚುವಿಕೆಯ ವಿಧಾನ ಬಳಸಿಕೊಂಡು ಯಶಸ್ವಿಯಾಗಿ ಚಿಕಿತ್ಸೆ ನೀಡಿ, ತೆರೆದ ಹೃದಯ ಶಸ್ತ್ರಕ್ರಿಯೆಯ ಅಗತ್ಯವನ್ನು ತಪ್ಪಿಸಿದೆ. ಕವಿನ್ (ಹೆಸರು ಬದಲಾಯಿಸಲಾಗಿದೆ) ಚಿಕ್ಕಂದಿನಿಂದಲೂ ಪುನರಾವರ್ತಿತ ಶ್ವಾಸಕೋಶದ ಸೋಂಕುಗಳು, ಕಡಿಮೆ ತೂಕ ಹೆಚ್ಚಳ ಮತ್ತು ಕಡಿಮೆ ಹಸಿವಿನಿಂದ ಬಳಲುತ್ತಿದ್ದನು. ಅವನ ಸ್ಥಿತಿಯು ಹದಗೆಟ್ಟು, ಹಲವಾರು ಬಾರಿ ಮಕ್ಕಳ ಐಸಿಯುಗೆ ದಾಖಲಾಗುವಂತೆ ಮಾಡಿತು […]

ಕನ್ನಡ ಚಿತ್ರರಂಗದ ಹಿರಿಯ ನಟಿ ಬೆಳ್ತಂಗಡಿ ಮೂಲದ ಲೀಲಾವತಿ ನಿಧನ

Friday, December 8th, 2023
Leelavathi

ಮಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ (85) ಅವರು ವಯೋಸಹಜ ಅನಾರೋಗ್ಯದಿಂದ ಇಂದು ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಪುತ್ರ ವಿನೋದ್​ ರಾಜ್ ಅವರನ್ನು ಲೀಲಾವತಿ ಅಗಲಿದ್ದಾರೆ. ನೆಲಮಂಗಲದ ಜ್ಯೂನಿಯರ್ ಕಾಲೇಜು ಎದುರಿನ ಅಂಬೇಡ್ಕರ್ ಮೈದಾನದಲ್ಲಿ ನಾಳೆ ಮಧ್ಯಾಹ್ನದವರೆಗೂ ಸಾರ್ವಜನಿಕರ ದರ್ಶನಕ್ಕೆ ಸಿದ್ದತೆ ಮಾಡಲಾಗುತ್ತಿದೆ. 1938ರಲ್ಲಿ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಜನಿಸಿದ್ದ ಲೀಲಾವತಿ ಅವರು 50 ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದರು. ಕನ್ನಡ ದಿಗ್ಗಜ ನಟರಾಟ ರಾಜ್​ಕುಮಾರ್​, ವಿಷ್ಣುವರ್ಧನ್​ ಮುಂತಾದವರ ಜೊತೆ ಅಭಿನಯಿಸಿ […]

ಮಂಗಳೂರಿನಲ್ಲಿ ಬೀದಿ ಬದಿಯಲ್ಲಿ ಮಲಗುವ ವಸತಿ ರಹಿತ ನಾಗರೀಕರಿಗೆ ತಂಗಲು ವ್ಯವಸ್ಥೆ

Friday, December 8th, 2023
ಮಂಗಳೂರಿನಲ್ಲಿ ಬೀದಿ ಬದಿಯಲ್ಲಿ ಮಲಗುವ ವಸತಿ ರಹಿತ ನಾಗರೀಕರಿಗೆ ತಂಗಲು ವ್ಯವಸ್ಥೆ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದೀನ್ ದಯಾಳ್ ಅಂತ್ಯೋದಯ ಯೋಜನೆ ರಾಷ್ತ್ರೀಯ ನಗರ ಜೀವನೋಪಾಯ ಅಭಿಯಾನದ ನಗರದ ವಸತಿ ರಹಿತ ರಿಗೆ ಆಶ್ರಯ ಉಪಘಟಕದಡಿ ನಗರದ ಬೀದಿ ಬದಿಗಳಲ್ಲಿ, ಬಸ್ಸು ನಿಲ್ದಾಣ, ಅಂಗಡಿಗಳ ಎದುರುಗಡೆ, ಹಳೆ ಕಟ್ಟಡ, ಸಾರ್ವಜನಿಕ ಮೈದಾನ ಅಥವಾ ಇನ್ನಿತರೇ ಪ್ರದೇಶಗಳಲ್ಲಿ ರಾತ್ರಿ ಸಮಯದಲ್ಲಿ ವಿಶ್ರಾಂತಿ ಪಡೆಯುತ್ತಿರುವ ರಾತ್ರಿ ವಸತಿ ರಹಿತ ನಾಗರೀಕರಿಗೆ ತಂಗಲು ವ್ಯವಸ್ಥೆ ಮಾಡಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯು ಸ್ವಯಂ ಸೇವಾ ಸಂಸ್ಥೆಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಯಲ್ಲಿ ಬಂದರು, […]

ಸಿಸಿಬಿ ಕಾರ್ಯಾಚರಣೆ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಗಳಿಬ್ಬರ ಸೆರೆ

Friday, December 8th, 2023
MMDA

ಮಂಗಳೂರು : “ಡ್ರಗ್ಸ್ ಫ್ರಿ ಮಂಗಳೂರು” ಮಾಡುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಮುಂದುವರಿಸಿದ ಕಾರ್ಯಾಚರಣೆಯಲ್ಲಿ ನಗರದಾದ್ಯಂತ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತುವಾದ (Methylene dioxy methamphetamine) MDMA ನ್ನು ಮಾರಾಟ ಮಾಡುತ್ತಿದ್ದವವರನ್ನು ದಸ್ತಗಿರಿ ಮಾಡಿ 6 ಲಕ್ಷ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿರುತ್ತಾರೆ. ಮಂಗಳೂರು ನಗರದ ಕದ್ರಿ ಪಾರ್ಕ್ ಪರಿಸರದಲ್ಲಿ ಇಬ್ಬರು ವ್ಯಕ್ತಿಗಳು MDMA ಮಾದಕ ವಸ್ತುವನ್ನು ವಶದಲ್ಲಿರಿಸಿಕೊಂಡು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ […]

ಶ್ರೀ ಮಂಗಳಾದೇವಿ ದೇವಸ್ಥಾನದದಲ್ಲಿ ಕಾರ್ತಿಕ ದೀಪೋತ್ಸವ – ವಿಡಿಯೋ

Thursday, December 7th, 2023
Laksha-deepotsava

ಮಂಗಳೂರು : ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದದಲ್ಲಿ ಶ್ರೀ ಮಂಗಳಾದೇವಿ ಕಾರ್ತಿಕ ದೀಪೋತ್ಸವ ಬುಧವಾರ ನಡೆಯಿತು. ಸಾಯಂಕಾಲ ದೀಪೋತ್ಸವದ ಕಟ್ಟೆ ಸವಾರಿ, ಶಮೀಕಟ್ಟೆ ಪೂಜೆ, ಭವ್ಯ ತಿರುಗುವ ಗುರ್ಜಿಯಲ್ಲಿ ಕಾರ್ತಿಕ ಮಾಹಾಪೂಜೆ, ಲಕ್ಷ ದೀಪೋತ್ಸವ, ರಾಜಾಂಗಣದಲ್ಲಿ ಕರ್ಪೂರ ದೀಪೋತ್ಸವ, ದೀಪೋತ್ಸವ ಬೆಳಕಿನಲ್ಲಿ ಉಡುಕೆ ಸುತ್ತು, ವಸಂತ ಪೂಜೆ ನಡೆಯಿತು. ರಥಬೀದಿಯಲ್ಲಿ ಶ್ರೀ ಮಂಗಳಾದೇವಿ ಸೇವಾಸಮಿತಿಯ ವತಿಯಿಂದ ಗೀತಾ ಮೆಲೋಡಿಸ್ ಆರ್ಕೆಸ್ಟ್ರಾ ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.

ನಿಯಂತ್ರಣ ತಪ್ಪಿದ ಮೈನ್ಸ್ ಸಾಗಾಟದ ಲಾರಿ, ಪೊಲೀಸ್ ಕಾಸ್ಟೇಬಲ್ ಸಹಿತ ಹಲವರಿಗೆ ಗಾಯ

Thursday, December 7th, 2023
lorry

ಮಂಗಳೂರು: ಲಾರಿ ಚಾಲಕನೋರ್ವ ನಿಯಂತ್ರಣ ತಪ್ಪಿ ಚಾಲನೆ ಮಾಡಿ ರಸ್ತೆ ಬದಿಯಲ್ಲಿದ್ದ ವಾಹನ ಹಾಗೂ ಹಲವರಿಗೆ ಡಿಕ್ಕಿ ಹೊಡೆದ ಘಟನೆ ಮಂಗಳೂರಿನ ಮುಲ್ಕಿಯಲ್ಲಿ ನಡೆದಿದೆ. ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮುಲ್ಕಿ ಜಂಕ್ಷನ್ ನಲ್ಲಿ ಉಡುಪಿ ಕಡೆಯಿಂದ ಬಂದ ಮೈನ್ಸ್ ಸಾಗಾಟದ ಖಾಲಿ ಲಾರಿ ಅತೀ ವೇಗದಿಂದ ಏಕಾಏಕಿ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಬಂದು ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದ ಒಂದು ಸ್ಕೂಟರ್, ಒಂದು ಆಟೋಗೆ ಡಿಕ್ಕಿ ಹೊಡೆದಿದ್ದು ಎರಡು ವಾಹನವೂ ಪಲ್ಟಿಯಾಗಿ ರಸ್ತೆಯಿಂದ ಎಸೆಯಲ್ಪಟ್ಟಿದೆ. ಜೊತೆಗೆ ಅಲ್ಲೇ ಇದ್ದ […]

ವಸತಿ ರಹಿತ ಬಡಕುಟುಂಬಗಳಿಗೆ ಮನೆ ನಿರ್ಮಿಸಲು ಸಹಾಯಧನ

Thursday, December 7th, 2023
ವಸತಿ ರಹಿತ ಬಡಕುಟುಂಬಗಳಿಗೆ ಮನೆ ನಿರ್ಮಿಸಲು ಸಹಾಯಧನ

ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಾಸ್ತವ್ಯವಿರುವ ಸ್ವಂತ ಜಾಗ ಹೊಂದಿರುವ ವಸತಿ ರಹಿತ ಅರ್ಹ ಮಹಿಳಾ ಫಲಾನುಭವಿಗಳಿಗೆ 700 ಚದರ ಅಡಿ ಮಿತಿಯೊಳಗಿರುವ ಮನೆ ನಿರ್ಮಿಸಿಕೊಳ್ಳಲು ಸಾಮಾನ್ಯವರ್ಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ವಸತಿ ರಹಿತ ಬಡ ಕುಟುಂಬಗಳಿಗೆ 2021-22ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯಡಿ ರೂ.1,20,000/- ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಸತಿ ರಹಿತ ಬಡ ಕುಟುಂಬಗಳಿಗೆ ವಸತಿ ಕಲ್ಪಿಸಲು 2021-22ನೇ ಸಾಲಿನ ಡಾ. ಬಿ.ಆರ್. ಅಂಬೇಡ್ಕರ್ […]

ʼ ಆಸಕ್ತಿ, ಕನಸು, ದೂರದೃಷ್ಟಿ, ಹಾಸ್ಯಪ್ರಜ್ಞೆಯ ಸಂಗಮ ಯಶೋವರ್ಮ ʼ

Tuesday, December 5th, 2023
ʼ ಆಸಕ್ತಿ, ಕನಸು, ದೂರದೃಷ್ಟಿ, ಹಾಸ್ಯಪ್ರಜ್ಞೆಯ ಸಂಗಮ ಯಶೋವರ್ಮ ʼ

ಮಂಗಳೂರು: ಹೊಗಳಿಕೆಗೆ ಹಿಗ್ಗದೆ ಟೀಕೆಗೆ ಜಗ್ಗದೆ ಮೌಲ್ಯಾಧಾರಿತ ಶಿಸ್ತಿನ ಜೀವನ ನಡೆಸಿದ ಸಹೋದರನಂತಿದ್ದ ಡಾ. ಬಿ ಯಶೋವರ್ಮ ಅವರು ನಮಗೆ ಶ್ರೇಷ್ಠ ಜೀವನ ಮಾದರಿಯನ್ನು ಬಿಟ್ಟು ಹೋಗಿದ್ದಾರೆ, ಎಂದು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಅಭಿಪ್ರಾಯಪಟ್ಟರು. ನಗರದ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತು, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿನ ಕನ್ನಡ ಸಂಘ ಇವರ ಜಂಟಿ […]

ಕೂಲಿ ಕಾರ್ಮಿಕನ ಮೃತ ದೇಹ ತಳಂಗರೆಯ ಬಾವಿಯಲ್ಲಿ ಪತ್ತೆ

Tuesday, December 5th, 2023
ಕೂಲಿ ಕಾರ್ಮಿಕನ ಮೃತ ದೇಹ ತಳಂಗರೆಯ ಬಾವಿಯಲ್ಲಿ ಪತ್ತೆ

ಕಾಸರಗೋಡು : ತಮಿಳುನಾಡು ಮೂಲದ ಕೂಲಿ ಕಾರ್ಮಿಕನ ಮೃತ ದೇಹ ಮಂಗಳವಾರ ನಗರದ ತಳಂಗರೆಯ ಬಾವಿಯೊಂದರಲ್ಲಿ ಪತ್ತೆಯಾಗಿದೆ. ತಮಿಳುನಾಡು ತಿರುವಣ್ಣ ಮಲೈ ನ ಭೂಮಿನಾಥ್ (27) ಮೃತ ಪಟ್ಟ ಕಾರ್ಮಿಕ. ಭೂಮಿನಾಥ್ ಕಾಸರಗೋಡು ಪರಿಸರದಲ್ಲಿ ಕೂಲಿ ಕೆಲಸ ನಿರ್ವ ಹಿಸುತ್ತಿದ್ದರು. ಇವರು ವಾಸವಿದ್ದ ವಸತಿ ಗೃಹ ಸಮೀಪದ ಬಾವಿಯಲ್ಲಿ ಮಂಗಳವಾರ ಬೆಳಿಗ್ಗೆ ಮೃತ ದೇಹ ಪತ್ತೆಯಾಗಿದೆ. ಅಗ್ನಿ ಶಾಮಕ ದಳದ ಸಿಬಂದಿ ಗಳು ಮೃತ ದೇಹವನ್ನು ಮೇಲಕ್ಕೆ ತ್ತಿದ್ದು, ಬಳಿಕ ಮೃತ ದೇಹವನ್ನು ಮಹಜರು ನಡೆಸಿ, ಕಾಸರಗೋಡು […]