ಕರಾವಳಿಯ ಶಾಸ್ತ್ರ ಎಸ್.ಶೆಟ್ಟಿಗೆ ‘ಮಿಸ್ ಕ್ವೀನ್ ಕರ್ನಾಟಕ’ ಪ್ರಶಸ್ತಿ..!

Tuesday, July 3rd, 2018
miss-karnataka

ಉಡುಪಿ: ಬಾಲ್ಯದಲ್ಲೇ ಸೌಂದರ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಬಾಚಿಕೊಂಡ ಕರಾವಳಿಯ ಬೆಡಗಿ ಶಾಸ್ತ್ರ ಎಸ್.ಶೆಟ್ಟಿ ಇದೀಗ ಕೇರಳದ ಕೊಚ್ಚಿಯಲ್ಲಿ ಇತ್ತೀಚೆಗೆ ನಡೆದ ಸ್ಪರ್ಧೆಯಲ್ಲಿ ‘ಮಿಸ್ ಕ್ವೀನ್ ಕರ್ನಾಟಕ’ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. 5 ದಿನದ ಸ್ಪರ್ಧೆಯಲ್ಲಿ ದಕ್ಷಿಣ ಭಾರತದಿಂದ ಸುಮಾರು 22 ಸ್ಪರ್ಧಿಗಳು ಭಾಗವಹಿಸಿದ್ದರು. ತೀವ್ರ ಸ್ಪರ್ಧೆ ಎದುರಿಸಿ, ಐದು ಸುತ್ತಿನಲ್ಲಿ ತಾವು ಒಬ್ಬರಾಗಿ ‘ಮಿಸ್ ಕ್ವೀನ್ ಕರ್ನಾಟಕ’ ಪಟ್ಟ ಆಲಂಕರಿಸಿದ್ದಾರೆ ಶಾಸ್ತ್ರ. ಮೂವತ್ತು ದೇಶಗಳ ಸ್ಪರ್ಧಿಗಳಿಂದ ತೀವ್ರ ಸ್ಪರ್ಧೆ ಎದುರಿಸಿ ಗೆಲುವಿನ ನಗೆ ಬೀರಿರುವ ಶಾಸ್ತ್ರ ಉಡುಪಿಯ […]

ವೈಯಕ್ತಿಕ ಸ್ವಾರ್ಥಕ್ಕಾಗಿ ನಿಷ್ಠೆರಹಿತ ರಾಜಕಾರಣ ಮಾಡುತ್ತಿರುವ ಆನಂದ್ ಅಸ್ನೋಟಿಕರ್ ಪರಮ ನೀಚ: ಸುನೀಲ್ ಹೆಗಡೆ

Tuesday, July 3rd, 2018
sunil-hegde

ಕಾರವಾರ: ಅಧಿಕಾರದ ಆಸೆಗೆ ಹಾಗೂ ವೈಯಕ್ತಿಕ ಸ್ವಾರ್ಥಕ್ಕಾಗಿ ನಿಷ್ಠೆರಹಿತ ರಾಜಕಾರಣ ಮಾಡುತ್ತಿರುವ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಓರ್ವ ಪರಮ ನೀಚ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರ ವಿರುದ್ಧ ಮಾತನಾಡಿದಲ್ಲಿ ಮುಂದಿನ ಲೋಕಸಭಾ ಚುನಾವಣೆಗೆ ಪ್ರಚಾರ ಗಿಟ್ಟಿಸಿಕೊಂಡು ಈ ಮೂಲಕ ಆನಂದ್ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯವನಾಗಿ ತೋರಿಸಿಕೊಳ್ಳುವ ಕುತಂತ್ರ ನಡೆಸಿದ್ದಾರೆ. ಆನಂದ್ ಅಸ್ನೋಟಿಕರ್ಗೆ ಅನಂತಕುಮಾರ್ ಹೆಗಡೆ ಅವರ ಕಾಲ […]

ಬಸ್ ನಿಲ್ದಾಣದ ಬಳಿ ಗಾಂಜಾ ಮಾರಾಟ..ಮೂವರು ಬಂಧನ!

Tuesday, July 3rd, 2018
arrested

ಪುತ್ತೂರು: ಗಾಂಜಾ ಮಾರಾಟ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಬೆಳ್ಳಾರೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬೇಲೂರು ತಾಲೂಕು ಹಳೇಬೀಡು ಕೆರೆಕ್ಕೋಡಿ ಸಂತೆ ಮೈದಾನದ ನಿವಾಸಿ ಸಾಧಿಕ್ (35), ಸುಳ್ಯ ಐವತ್ತೊಕ್ಲು ಜನತಾ ಕಾಲೋನಿ ನಿವಾಸಿ ಮಹಮ್ಮದ್ ಇಕ್ಬಾಲ್ ಅಲಿಯಾಸ್ ಇಕ್ಕು (25), ಸುಳ್ಯ ಕಳಂಜ ಗ್ರಾಮದ ವಿಷ್ಣು ನಗರ ನಿವಾಸಿ ಮಹಮ್ಮದ್ ನೌಸಾದ್ ಅಲಿಯಾಸ್ ನೌಸು ಬಂಧಿತ ಆರೋಪಿಗಳು. ಬಂಧಿತರಿಂದ 20,000 ರೂ. ಮೌಲ್ಯದ 950 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ […]

ಈ ಬಾರಿ ಲೋಕಸಭಾ ಚುನಾವಣೆಗೆ ಬಿ.ರಮಾನಾಥ್ ರೈ ಸ್ಪರ್ಧಿಸುತ್ತಾರಂತೆ !

Monday, July 2nd, 2018
Ramanatha Rai

ಮಂಗಳೂರು : ವಿಧಾನ ಸಭಾ ಚುನಾವಣೆಯಲ್ಲಿ ಸೋತ ಬಳಕ ಮಾಜಿ ಸಚಿವ ರಮಾನಾಥ್ ರೈ ಸ್ವಲ್ಪ ಸಮಯದ ಬಿಡುವಿನ ಬಳಿಕ ರಾಜಕೀಯವಾಗಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.  ಮುಂಬರುವ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ. ಹಾಗಂತ ಅವರೇ ಕಾರ್ಯಕರ್ತರ ಬಳಿ ಪದೇ ಪದೇ ಹೇಳಿಕೊಳ್ಳುತ್ತಿದ್ದರಂತೆ. ಆ ಬಗ್ಗೆ ಮಾಧ್ಯಮದ ಪ್ರತಿನಿಧಿಗಳಲ್ಲಿಯೂ ಹೇಳಿದ್ದಾರೆ. ಅದಕ್ಕೆ ಪೂರಕವಾಗಿ ಈಗಾಗಲೇ ನಳಿನ್ ಕುಮಾರ್ ವಿರುದ್ಧ ವಾಕ್ ಸಮರಕ್ಕೆ ಇಳಿದಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್ ಪಕ್ಷವು ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಕಳೆದ ಲೋಕ ಸಭೆ ಚುನಾವಣೆಯಲ್ಲಿ […]

ತಲೆ ಮರೆಸಿಕೊಂಡಿದ್ದ ಕುಖ್ಯಾತ ದನ ಕಳ್ಳನ ಬಂಧನ

Monday, July 2nd, 2018
Musthafa

ಮಂಗಳೂರು : ಮಂಗಳೂರು ರೌಡಿ ನಿಗ್ರಹ ದಳದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ದಕ್ಷಿಣ ಕನ್ನಡ , ಉಡುಪಿ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಸಕ್ರಿಯವಾಗಿದ್ದ ದನಗಳ್ಳತನದ ಜಾಲವನ್ನು ಭೇದಿಸಿ ಕುಖ್ಯಾತ ದನಗಳ್ಳನನ್ನು ಬಂಧಿಸಿದ್ದಾರೆ. 2017ರ ನವೆಂಬರ್ 18ರಂದು ನಡೆದ ಗೋಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಬಂಧಿತನನ್ನು ಮಂಗಳೂರು ತಾಲೂಕಿನ ಮಲ್ಲೂರು ಉದ್ದಬೆಟ್ಟು ಗುಡ್ಡದ ಮೇಲ್ ಮನೆ ನಿವಾಸಿ ಮಹಮ್ಮದ್ ಮುಸ್ತಫಾ (20) ಎಂದು ಗುರುತಿಸಲಾಗಿದೆ. 2017 ನವೆಂಬರ್ 18ರಂದು ಮಂಗಳೂರು ಹೊರವಲಯದ ಮಲ್ಲೂರು ಗ್ರಾಮದ ಪಲ್ಲಿಬೆಟ್ಟು ಮಸೀದಿಯ ಬಳಿ […]

ಸಮಾಜದ ಸಭ್ಯ ನಾಗರಿಕರಾಗಿ ದುಶ್ಚಟ ಮುಕ್ತ ಜೀವನ ನಡೆಸಿದರೆ ಶಾಂತಿ, ನೆಮ್ಮದಿ

Monday, July 2nd, 2018
Drug day

ಉಜಿರೆ : ಸುಸಂಸ್ಕೃತರಾಗಿ, ಸಮಾಜದ ಸಭ್ಯ ನಾಗರಿಕರಾಗಿ ದುಶ್ಚಟ ಮುಕ್ತ ಜೀವನ ನಡೆಸಿದರೆ ಶಾಂತಿ, ನೆಮ್ಮದಿ ಸಿಗುತ್ತದೆ. ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ. ವ್ಯಸನದಿಂದ ವ್ಯಕ್ತಿತ್ವ ನಾಶವಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಸೋಮವಾರ ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಪ್ರಾಯೋಜಕತ್ವದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ರಾಜ್ಯವ್ಯಾಪಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳಿಗೆ […]

ಪ್ರೊ.ಪಿ.ಸಿ.ಮಹಾಲನೋಬಿಸ್ 125ನೇ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆ

Monday, July 2nd, 2018
Mahalonobis

ಮಂಗಳೂರು  : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರೊ.ಪಿ.ಸಿ.ಮಹಾಲನೋಬಿಸ್, ಸಾಂಖ್ಯಿಕ ತಜ್ಞರು, ಇವರ 125ನೇ ಜನ್ಮ ದಿನದ ಅಂಗವಾಗಿ 12ನೇ ರಾಷ್ಟ್ರೀಯ “ಸಾಂಖ್ಯಿಕ ದಿನಾಚರಣೆ” ಆಚರಿಸುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಜೂನ್ 29 ರಂದು ಸಾಂಖ್ಯಿಕ ದಿನವನ್ನು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಛೇರಿಯಲ್ಲಿ ಆಚರಿಸಲಾಯಿತು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಡಾ|| ಉದಯ ಶೆಟ್ಟಿ ಕಾರ್ಯಕ್ರಮದ ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎಂ. ವಿ. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರದೀಪ್ […]

ಉಡುಪಿಯ ತೆಂಕಪೇಟೆ ಒಳಕಾಡು ವಾರ್ಡ್ ನಲ್ಲಿ ಉಕ್ಕಿ ಹರಿಯುವ ಡ್ರೈನೇಜ್

Monday, July 2nd, 2018
drainage

ಉಡುಪಿ : ಸುಮಾರು ಹದಿನೈದು ದಿನಗಳಿಂದ ಉಡುಪಿಯ ಒಳಕಾಡು ವಾರ್ಡ್ ವೆಂಕಟರಮಣ ದೇವಸ್ಥಾನ ಮತ್ತು ಮಿತ್ರಪ್ರೀಯ ಆಸ್ಪತ್ರೆಗೆ ಹೋಗುವ ರಸ್ತೆಯಲ್ಲಿರುವ ಡ್ರೈನೇಜ್‌ವೊಂದು ಉಕ್ಕಿ ಹರಿಯುತ್ತಿದ್ದು ದಾರಿಹೋಕರು ಮೂಗು ಮುಚ್ಚಿಕೊಂಡು ಅದನ್ನು ದಾಟಿ ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಲ್ಲಿ ಡ್ರೈನೇಜ್ ವಾಸನೆ ಸ್ವಲ್ಪ ಕಡಿಮೆ ಇತ್ತು ಮಳೆನಿಂತ ಮೇಲಂತು ಜನಸಾಮಾನ್ಯರಿಗೆ ನಡೆದು ಹೋಗಲಾರದೆ ಚಿಂತಿತರಾಗಿದ್ದಾರೆ. ಪಕ್ಕದಲ್ಲೇ ಅನಂತಶಯನ ಹೋಟೇಲಿದೆ. ಸಮೀಪವೇ ನಾಗ ಬನವಿದೆ ಇಲ್ಲಿಗೆ ಹೋಗಬೇಕಾದರೂ ಡ್ರೈನೇಜ್ ದಾಟಿಯೇ ಮುಂದೆ ಸಾಗಬೇಕು. ಉಕ್ಕಿಬರುವ ಡ್ರೈನೇಜ್ ನೀರು […]

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಜಯಂತ ನಡುಬೈಲು ಆಯ್ಕೆ

Monday, July 2nd, 2018
Jayantha Nadubailu

ಮಂಗಳೂರು : ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಾದ್ಯಂತ 31 ಘಟಕಗಳನ್ನು ಹೊಂದಿರುವ ಯುವವಾಹಿನಿ (ರಿ) ಕೇಂದ್ರ ಸಮಿತಿಯ 2018-19 ನೇ ಸಾಲಿನ ಅಧ್ಯಕ್ಷರಾಗಿ ಜಯಂತ ನಡುಬೈಲು ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳು ಉಪಾಧ್ಯಕ್ಷರು : ನರೇಶ್ ಕುಮಾರ್ ಸಸಿಹಿತ್ಲು, ಡಾ.ರಾಜಾರಾಮ್.ಕೆ.ಬಿ, ಪ್ರಧಾನ ಕಾರ್ಯದರ್ಶಿ : ಸುನೀಲ್.ಕೆ.ಅಂಚನ್, ಕೋಶಾಧಿಕಾರಿ : ಹರೀಶ್ ಎಸ್.ಕೋಟ್ಯಾನ್ ಬಂಟ್ವಾಳ, ಜತೆ ಕಾರ್ಯದರ್ಶಿ : ಶರತ್ ಕುಮಾರ್ ಹಳೆಯಂಗಡಿ. ನಿರ್ದೇಶಕರು ಕಲೆ ಮತ್ತು ಸಾಹಿತ್ಯ : ವಿಠ್ಠಲ್.ಎಮ್.ಪೂಜಾರಿ ಬೆಳುವಾಯಿ, ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ : ಸಂಜೀವ ಸುವರ್ಣ […]

ಮಕ್ಕಳಿಗೆ ಸಾಹಿತ್ಯದ ಒಲವು ಮೂಡಿಸಿದರೆ ಮಾತ್ರ ಸಾಹಿತ್ಯ ಬೆಳವಣಿಯಾಗಲು ಸಾಧ್ಯ : ಪುನರೂರು

Monday, July 2nd, 2018
Punarooru

ಮಂಗಳೂರು : ಚಿಕ್ಕಮಕ್ಕಳಿಗೆ ಸಾಹಿತ್ಯದ ಒಲವು ಮೂಡಿಸಿದರೆ ಮಾತ್ರ ಸಾಹಿತ್ಯ, ಸಂಸ್ಕೃತಿ ಬೆಳವಣಿಯಾಗಲು ಸಾಧ್ಯ. ಇಂಗ್ಲಿಷ್ ಭಾಷೆ ಎಲ್ಲೆಡೆ ಪ್ರಭುತ್ವ ಸಾಧಿಸಿದರೂ ಕೂಡ ತಾಯಿ ಭಾಷೆಯಲ್ಲಿ ಓದಲು, ಬರೆಯಲು ಕಲಿಯುವಂತೆ ಮಕ್ಕಳಿಗೆ ಪ್ರೋತ್ಸಾಹ ನೀಡುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಹೆತ್ತವರು ಪ್ರೋತ್ಸಾಹ ನೀಡಬೇಕಿದೆ ಎಂದು  ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು. ರಾಜ್ಯ ಯುವ ಬರಹಗಾರರ ಒಕ್ಕೂಟದ ಕೇಂದ್ರ ಸಮಿತಿ ಬೆಂಗಳೂರು ಇದರ ವತಿಯಿಂದ ವಿವಿಧ ಸಾಧಕರಿಗೆ ಕುದ್ಮಲ್ ರಂಗರಾವ್ ರಾಜ್ಯ […]