ಕಣ್ಣೂರಿನಲ್ಲಿ ನಿಂತಿದ್ದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಓರ್ವ ಸಾವು, ನಾಲ್ವರು ಗಂಭೀರ

Wednesday, June 27th, 2018
Kannaur Accident

ಮಂಗಳೂರು:  ‌ಕಣ್ಣೂರಿನಲ್ಲಿ ಬುಧವಾರ  ಮುಂಜಾನೆ ನಡೆದ ಸರಣಿ‌ ಅಪಘಾತದಲ್ಲಿ ಓರ್ವ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ನಡೆದಿದೆ. ಬಿಸಿ ರೋಡ್ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ನೋಂದಾವಣೆಯಾಗದ ಹೊಸ ಪೋಲೊ ಕಾರು. ಅಲ್ಲೇ ನಿಂತಿದ್ದ ಬಿಎಂಡಬ್ಲ್ಯೂ ಕಾರಿಗೆ ಡಿಕ್ಕಿ ಹೊಡೆದು ಒಬ್ಬ ಮೃತರಾಗಿದ್ದಾರೆ. ಇದು ಕಣ್ಣೂರು ಮಸೀದಿ ಮುಂಭಾಗದಲ್ಲಿ ನಡೆದಿದ್ದು ಎರಡು ಕಾರು, ಬೈಕ್ , ರಿಕ್ಷಾ ಒಂದಕ್ಕೊಂದು ಬಡಿದುಕೊಂಡು ಈ ಘಟನೆ ನಡೆದಿದೆ. ಘಟನೆಯಲ್ಲಿ ಕಾರು ಚಾಲಕ ಫಾರುಕ್ (26) ಎಂಬವರು ಮೃತಪಟ್ಟಿದ್ದು, ಜುನೈದ್, ಸರ್ಫಾರಾಜ್ ಹಾಗು ಪೋಲೊ ಕಾರಿನಲ್ಲಿದ್ದ ಇಬ್ಬರಿಗೆ […]

ಮೊಬೈಲ್ ಟವರ್​ನ ಬ್ಯಾಟರಿ ಕಳವು…ಮೂವರ ಬಂಧನ!

Wednesday, June 27th, 2018
arrested

ಮಂಗಳೂರು: ಕಂಪನಿಯ ಗುತ್ತಿದಾರರಿಂದಲೇ ಮೊಬೈಲ್ ಟವರ್ನ ಬ್ಯಾಟರಿ ಕಳವು ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಉರ್ವ ಠಾಣಾ ಪೊಲೀಸರು ಮೂವರನ್ನ ಬಂಧಿಸಿದ್ದಾರೆ. ಮೊಬೈಲ್ ಟವರ್ನ 48 ಬ್ಯಾಟರಿಗಳ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರು ದಾಖಲು ಮಾಡಿಕೊಂಡಿದ್ದ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪುತ್ತೂರು ಬಿಳಿನಿಲೆ ಗ್ರಾಮದ ಮಾಲಾಜೆ ನಿವಾಸಿ ಆನಂದ (28), ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಸಿಂಗಟಿಗೆರೆ ನಿವಾಸಿ ಕೆ.ಎನ್.ಗಿರೀಶ್ (36) ಮತ್ತು ಭಟ್ಕಳ ಜಾಲಿಕೋಡಿ ಹೋಬಳಿ ನಿವಾಸಿ ಜಗನ್ನಾಥ್ ಮುಗೇರ (32) ಬಂಧಿತ ಆರೋಪಿಗಳು. ಬಂಧಿತರ […]

ರಾಜ್ಯದಲ್ಲಿ 10ಕೋಟಿ ಸಸಿಗಳನ್ನು ನೆಡಲು ಯೋಜನೆ : ಅರಣ್ಯ ಸಚಿವ ಆರ್.ಶಂಕರ್

Tuesday, June 26th, 2018
R shankar

ಸುಬ್ರಹ್ಮಣ್ಯ: ರಾಜ್ಯದಲ್ಲಿ 10ಕೋಟಿ ಸಸಿಗಳನ್ನು ನೆಡಲು ಯೋಜನೆ ರೂಪಿತವಾಗಿದೆ. ರಾಜ್ಯವನ್ನು ಹಸಿರು ಹೊದೆಕೆಯನ್ನಾಗಿಸಲು ಪ್ರಯತ್ನ ಮಾಡುತ್ತೇನೆ. ಈ ಯೋಜನೆ ಜಾರಿಗೊಂಡಲ್ಲಿ ಅರಣ್ಯ ಸಂರಕ್ಷಣೆಯಲ್ಲಿ ರಾಜ್ಯವು ದೇಶದಲ್ಲೇ ಮಾದರಿಯಾಗಲಿದೆ. ಅರಣ್ಯ ಇಲಾಖೆಗೆ ಬಜೆಟ್‌ನಲ್ಲಿ 1500 ಕೋಟಿ ದೊರಕುತ್ತಿತ್ತು. ಈ ಮೊತ್ತವು ಕಡಿಮೆಯಾಗುತ್ತದೆ. ಈ ಬಾರಿ ಬಜೆಟ್‌ನಲ್ಲಿ ಅರಣ್ಯ ಸಂರಕ್ಷಣೆಗೆ ೫೦೦ಕೋಟಿ ಹೆಚ್ಚುವರಿ ಅನುದಾನ ಒದಗಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಅರಣ್ಯ ಸಂರಕ್ಷಣೆಗೆ ಪ್ರಾಧಾನ ಆದ್ಯತೆ ನೀಡುವುದು ನನ್ನ ಧ್ಯೇಯ ಎಂದು ರಾಜ್ಯ ಅರಣ್ಯ ಸಚಿವ ಆರ್.ಶಂಕರ್ ಹೇಳಿದರು. ಕುಕ್ಕೆ […]

ಉಡುಪಿ ಸಿರಿಬೀಡುವಿನಲ್ಲಿ ನೇತಾಡುವ ಬೀದಿ ದೀಪ

Tuesday, June 26th, 2018
tube light hanging

ಉಡುಪಿ : ದಿನನಿತ್ಯ ನೂರಾರು ಜನ ಓಡಾಡುವ ರಸ್ತೆಯಲ್ಲಿ ಬೀದಿ ದೀಪವೊಂದು ತಲೆಕೆಳಗಾಗಿ ಯಾರ ತಲೆ ಮೇಲೆ ಬೀಳುತ್ತದೋ ಎನ್ನುವ ಆತಂಕ ಸಿರಿಬೀಡುವಿನ ಜನರಲ್ಲಿ ಮಡುಗಟ್ಟಿದೆ. ಬನ್ನಂಜೆಯ ಸರ್ವಿಸ್ ಬಸ್‌ಸ್ಟ್ಯಾಂಡ್ ನಿಂದ ಹಳೆ ಡಿಸಿ ಆಫೀಸಿಗೆ ಹೋಗುವ ರಸ್ತೆಯಲ್ಲಿ ಗುರುರಾಜ್ ಆಚಾರ್ಯ ಎಂಬವರ ಮನೆ ಪಕ್ಕದಲ್ಲಿ ಸುಮಾರು ಒಂದೂವರೆ ತಿಂಗಳಿನಿಂದ ಈ ಬೀದಿ ದೀಪ ಕಂಬದಲ್ಲೇ ಮುರಿದು ಬಿದ್ದ ಸ್ಥಿತಿಯಲ್ಲಿ ನೇತಾಡುತ್ತಿದೆ. ಪುಟ್ಟ ಮಕ್ಕಳು ಆಟವಾಡುತ್ತಾರೆ, ಮಕ್ಕಳು ಶಾಲೆಗೆ ಇದೇ ದಾರಿಯಿಂದ ಹೋಗುತ್ತಾರೆ, ತಾಲೂಕು ಆಫೀಸಿನ ಕೆಲಸಕ್ಕೆಂದು ಜನ […]

ಮತ್ಸ್ಯ ಬಳಕೆಗೆ ಗೊಂದಲ ಬೇಡ: ಹಸಿಮೀನು ಮದ್ಯವರ್ತಿ ಸಂಘಟನೆ

Tuesday, June 26th, 2018
Fish

ಮಂಗಳೂರು : ಇತ್ತೀಚೆಗೆ ವಿವಿಧ ಮಾಧ್ಯಮಗಳಲ್ಲಿ ಮತ್ಸ್ಯಗಳಿಗೆ ರಸಾಯನಿಕ ಬಳಸಿ ವಿತರಿಸಲಾಗುತ್ತಿದೆ ಎಂಬುದಾಗಿ ಅಪಪ್ರಚಾರ ನಡೆಸಲಾಗುತ್ತಿದ್ದು, ಈ ಬಗ್ಗೆ ಮತ್ಸ್ಯ ಬಳಕೆದಾರರು ಯಾವುದೇ ಗೊಂದಲಕ್ಕೊಳಗಾಗಬಾರದು ಎಂದು ಹಸಿಮೀನು ಮಧ್ಯವರ್ತಿಗಳ ಸಂಘಟನೆ ಮಂಗಳೂರು ಗ್ರಾಹಕರಿಗೆ ಕರೆ ನೀಡಿದೆ. ಮಂಗಳೂರು ನಗರದ ಬಂದರಿನ ಧಕ್ಕೆಯು ಕರಾವಳಿಯಲ್ಲಿ ಪ್ರಮುಖ ಸಮುದ್ರೋತ್ಪನ್ನ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ಈ ಬಂದರಿನಿಂದ ವಿತರಿಸಲ್ಪಡುವ ಯಾವುದೇ ಮತ್ಸ್ಯೋತ್ಪನ್ನಗಳಲ್ಲಿ ಯಾವುದೇ ರೀತಿಯ ರಾಸಾಯನಿಕಗಳನ್ನು ಬಳಸಲಾಗುವುದಿಲ್ಲ. ಮತ್ಸ್ಯ ಶೇಖರಣೆಗೆ ಸಾಂಪ್ರಾದಾಯಿಕ ಪದ್ದತಿಯಾದ ಶೀತಲೀಕರಣ ವ್ಯವಸ್ಥೆಯನ್ನೇ ಉಪಯೋಗಿಸಲಾಗುತ್ತದೆಯೇ ಹೊರತು, ಯಾವುದೇ ಕಾರಣಕ್ಕೂ ಆರೋಗ್ಯ […]

ಮೂಲರಪಟ್ಣದ ಸೇತುವೆ ಕುಸಿತ…3 ತಿಂಗಳು ಮೊದ್ಲೇ ಭವಿಷ್ಯ ನುಡಿದಿದ್ದ ವ್ಯಕ್ತಿ!

Tuesday, June 26th, 2018
mangalore

ಮಂಗಳೂರು: ಇದು ಸೋಜಿಗವೆನಿಸಿದರೂ ನಂಬಲೇಬೇಕಾದ ವಿಷಯವಾಗಿದೆ. ನಿನ್ನೆಯಷ್ಟೇ ಮಂಗಳೂರಿನ ಮೂಲರಪಟ್ಣದಲ್ಲಿ ಕುಸಿದ ಸೇತುವೆಯ ಕುರಿತಾಗಿ ಗ್ರಾಮಸ್ಥರೊಬ್ಬರು ಮೂರು ತಿಂಗಳ ಮೊದಲೇ ಗ್ರಹಿಸಿ ಎಚ್ಚರಿಕೆ ನೀಡಿದ್ದ ವಿಡಿಯೋ ಸದ್ಯ ವೈರಲ್ ಆಗಿದೆ. ಜಿಲ್ಲೆಯ ಮೂಲರಪಟ್ಣ ಸೇತುವೆ ಕುಸಿದು ಬಿದ್ದು ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಈಗ ಅದೇ ಸೇತುವೆ ಕುರಿತಾಗಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡ್ತಿದೆ. ವಿಡಿಯೋದಲ್ಲಿ ಮೂಲರಪಟ್ಣದ ಸ್ಥಳೀಯ ಹಮೀದ್ ಎಂಬುವರು ಬ್ಯಾರಿ ಭಾಷೆಯಲ್ಲಿ ಮಾತನಾಡುತ್ತಾ ನೆರೆಹೊರೆಯವರಿಗೆ ಸೇತುವೆಯಲ್ಲಿ ಕಾಣಿಸಿಕೊಂಡ ಬಿರುಕನ್ನು ತೋರಿಸಿದ್ದರು. ಇದು ಈ ಬಾರಿ ಉರುಳಿ […]

ಅವಕಾಶ ಸಿಕ್ಕರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ‌ ರಚಿಸುತ್ತೇವೆ: ಉಮೇಶ್ ಕತ್ತಿ

Tuesday, June 26th, 2018
umesh-katthi

ಬೆಂಗಳೂರು: ಯಡಿಯೂರಪ್ಪ ನಿವಾಸದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ, ಇದರ ಬೆನ್ನಲ್ಲೇ ಮಾಜಿ ಸಚಿವ ಉಮೇಶ್‌ ಕತ್ತಿಯವರು ಅವಕಾಶ ಸಿಕ್ಕರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುತ್ತೇವೆ ಎನ್ನುವ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಾಜಿ ಸಚಿವ ಉಮೇಶ್‌ ಕತ್ತಿ ಮತ್ತು ಮುರುಗೇಶ್‌ ನಿರಾಣಿ ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಡಾಲರ್ಸ್‌ ಕಾಲೊನಿ ನಿವಾಸಕ್ಕೆ ತೆರಳಿದ್ದರು. ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದಾರೆ. ಬಿಎಸ್‌ವೈ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ರಾಜಕೀಯ […]

ಮುಲ್ಲರಪಟ್ನ ಸೇತುವೆ ಕುಸಿಯಲು ಮರಳು ಮಾಫಿಯಾ, ಅಧಿಕಾರಿ ನಿರ್ಲಕ್ಷ ಕಾರಣ: ಸಂಸದ ನಳಿನ್ ಕುಮಾರ್

Tuesday, June 26th, 2018
nalin-kumar

ಮಂಗಳೂರು: ಮುಲ್ಲರಪಟ್ನ ಸೇತುವೆಯು ಮರಳು ಮಾಫಿಯಾಕ್ಕೆ ಬಲಿಯಾದ ಮೊದಲ ಸೇತುವೆಯಾಗಿದ್ದು, ಅಧಿಕಾರಿಗಳ ನಿರ್ಲಕ್ಷವೂ ಕಾರಣ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ. ಮಂಗಳೂರಿನಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಲ್ಲಿ ಅಧಿಕಾರಿಗಳಿಗೆ ಅಲ್ಲಿಯ ಸ್ಥಳೀಯರು ಮರಳು ತೆಗೆಯುವುದರಿಂದ ಆಗಿರುವ ಹಾನಿ ಬಗ್ಗೆ, ಪಿಲ್ಲರ್ ಕುಸಿತದ ಬಗ್ಗೆ ವೀಡಿಯೋ ರೆಕಾರ್ಡ್ ಮಾಡಿ ಕಳುಹಿಸಿದ್ದರು. ಆಗ ಜಿಲ್ಲಾಡಳಿತ ಸೇತುವೆ ಬದಿ ಯಂತ್ರಗಳನ್ನು ಉಪಯೋಗಿಸಿ ಮರಳು ತೆಗೆಯುವುದನ್ನು ನಿಲ್ಲಿಸಿಲ್ಲ. ಅಲ್ಲಿ ಕಳೆದ ಅವಧಿಯಲ್ಲಿ ಆಡಳಿತದಲ್ಲಿದ್ದವರ ಪ್ರಭಾವ, ಬೆಂಬಲದೊಂದಿಗೆ […]

ಮುಡಿಪು-ಮಿತ್ತಕೋಡಿ ಬಳಿ ರಸ್ತೆಗೆ ಗುಡ್ಡಕುಸಿತ ಪರಿಣಾಮ ವಾಹನ ಸಂಚಾರ ಅಸ್ತವ್ಯಸ..!

Tuesday, June 26th, 2018
mudipu-mitthagudi

ಮಂಗಳೂರು: ಕಳೆದೆರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಮಂಗಳೂರಿನಿಂದ ಮುಡಿಪು ಮಾರ್ಗವಾಗಿ ಮೆಲ್ಕಾರ್ ಕಡೆ ಸಂಚರಿಸುವ ರಸ್ತೆಯ ಮಿತ್ತಕೋಡಿ ಎಂಬಲ್ಲಿ ಗುಡ್ಡವೊಂದು ಮುಖ್ಯ ರಸ್ತೆಗೆ ಕುಸಿದು ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೊಡಕುಂಟಾದ ಘಟನೆ ಕಳೆದ ತಡರಾತ್ರಿ ನಡೆದಿದೆ. ಮುಡಿಪು ಸಮೀಪದ ಮಿತ್ತಕೋಡಿ ಬಳಿ ಗುಡ್ಡವು ಭಾರೀ ಪ್ರಮಾಣದಲ್ಲಿ ಸಂಪರ್ಕ ರಸ್ತೆಗೆ ಕುಸಿದಿದೆ. ಇದರಿಂದಾಗಿ ಈ ಭಾಗದಲ್ಲಿ ಸಂಚರಿಸುವ ವಾಹನಗಳಿಗೆ ತೊಡಕುಂಟಾಗಿದೆ. ಈ ಹಿನ್ನೆಲೆಯಲ್ಲಿ ಮೆಲ್ಕಾರ್ ಕಡೆಗೆ ಸಂಚರಿಸುವ ವಾಹನವು ಪಜೀರು-ಕಂಬ್ಲಪದವು ಮಾರ್ಗವಾಗಿ ಹಾಗೂ ಕುರ್ನಾಡು ಮಾರ್ಗವಾಗಿ […]

ಪ್ರಾಣಿಯನ್ನು ನುಂಗಿ ರಸ್ತೆಯಲ್ಲಿ ನರಳಾಡಿದ ಹೆಬ್ಬಾವು..!

Tuesday, June 26th, 2018
chikamagaluru

ಚಿಕ್ಕಮಗಳೂರು: ಕೊಟ್ಟಿಗೆಹಾರದ ಮಲೆಮನೆ ಕಾಫಿ ಎಸ್ಟೇಟ್ ನಲ್ಲಿ ಹೆಬ್ಬಾವೊಂದು ಪ್ರಾಣಿಯನ್ನು ನುಂಗಿ ರಸ್ತೆಯಲ್ಲಿ ನರಳಾಡಿದ ಘಟನೆ ನಡೆದಿದೆ. ಬಾರಿ ಗಾತ್ರದ ಹೆಬ್ಬಾವು ಕಾಡು ಕುರಿಯನ್ನು ನುಂಗಿ ರಸ್ತೆಯಲ್ಲಿ ಒದ್ದಾಡುತ್ತಿತ್ತು. ಹೆಬ್ಬಾವು ನೋಡಿ ಭಯಗೊಂಡ ಕಾಫಿ ತೋಟದ ಕಾರ್ಮಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಹಾಗೂ ಸ್ನೇಕ್ ಆರೀಫ್ ಹೆಬ್ಬಾವನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆ ಸಿಬ್ಬಂದಿಗಳು ಹೆಬ್ಬಾವನ್ನು ಚಾರ್ಮಾಡಿ ಘಾಡಿಗೆ ಬಿಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲೆಮನೆ ಎಸ್ಟೇಟ್ ನಲ್ಲಿ ಈ ಘಟನೆ […]