ಧರ್ಮಸ್ಥಳದ ವತಿಯಿಂದ ಲೋಕ ಕಲ್ಯಾಣಕ್ಕಾಗಿ ಹಲವು ಹೊಸ ಯೋಜನೆಗಳು

Friday, October 24th, 2014
pattabhisheka

ಧರ್ಮಸ್ಥಳ : ಬೆಂಗಳೂರಿನಲ್ಲಿ 350 ಹಾಸಿಗೆ ಸಾಮಥ್ರ್ಯದ ಆಯುರ್ವೇದ ಆಸ್ಪತ್ರೆ ಪ್ರಾರಂಭಗೊಂಡಿದ್ದು ಮುಂದಿನ ವರ್ಷ ಪೂರ್ಣ ಪ್ರಮಾಣದ ಆಯುರ್ವೇದ ಆಸ್ಪತ್ರೆ ಮತ್ತು ಕಾಲೇಜು ಸೇವೆಗೆ ಸಜ್ಜಾಗಲಿವೆ. ಧರ್ಮಸ್ಥಳದಲ್ಲಿ ಯಾತ್ರಿಕರ ಅನುಕೂಲಕ್ಕಾಗಿ 520 ಕೊಠಡಿಗಳುಳ್ಳ ಹೊಸ ವಸತಿ ಛತ್ರ ನಿರ್ಮಾಣದ ಕಾಮಗಾರಿ ಈಗಾಗಲೇ ಪ್ರಾರಂಭಿಸಲಾಗಿದೆ. ಧಾರವಾಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭಗೊಂಡಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಪ್ರಕಟಿಸಿದರು. ಧರ್ಮಸ್ಥಳದಲ್ಲಿ ಮಹೋತ್ಸವ ಸಭಾ ಭವನದಲ್ಲಿ ಶುಕ್ರವಾರ ನಡೆದ ಪಟ್ಟಾಭಿಷೇಕದ 47ನೇ ವರ್ಧಂತ್ಯತ್ಸವ ಸಮಾರಂಭದಲ್ಲಿ ಅವರು […]

ತಿರುನಲ್ವೇಲಿ ಕ್ರೀಡಾಕೂಟದಲ್ಲಿ ಕೊಂಡೆವೂರಿನ ಪ್ರತಿಭೆ ರಾಷ್ಟ್ರಮಟ್ಟಕ್ಕೆ

Thursday, October 23rd, 2014
Kondevoor students

ಉಪ್ಪಳ : ತಮಿಳುನಾಡಿನ ತಿರುನಲ್ವೇಲಿಯಲ್ಲಿ ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳನ್ನೊಳಗೊಂಡ ದಕ್ಷಿಣ ಕ್ಷೇತ್ರೀಯ ಕ್ರೀಡಾಕೂಟವು ಅಕ್ಟೋಬರ್10 ರಿಂದ 12 ವರೆಗೆ ಜರಗಿತು. ಇದರಲ್ಲಿ ಕೊಂಡೆವೂರಿನ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ 10ನೇ ತರಗತಿ ವಿದ್ಯಾರ್ಥಿನಿ ಕು. ನಿಶಾ ವಿಜಯ್ 5000 ಮೀ ನಡುಗೆ ಸ್ಪರ್ಧೆಯಲ್ಲಿ 2 ನೇ ಸ್ಥಾನ,ಹ್ಯಾಮರ್ ಎಸೆತದಲ್ಲಿ 3 ನೇ ಸ್ಥಾನ, 9 ನೇ ತರಗತಿಯ ಕು. ಶ್ರೇಯಾ ಬಿ.ಎಮ್ 3000 ಮೀ ರೇಸ್ ನಲ್ಲಿ 3 ನೇ ಸ್ಥಾನ ಮತ್ತು 9 […]

2.31 ಕೋಟಿ ವೆಚ್ಚದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀ ಜೆ.ಆರ್ ಲೋಬೊರವರಿಂದ ಚಾಲನೆ.

Thursday, October 23rd, 2014
Soutth Mla

ಮಂಗಳೂರು : ಮಂಗಳೂರು ದಕ್ಷಿಣ ವಿಧಾನಸಭಾ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು 2.31ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವುದರ ಮೂಲಕ ಈ ವರ್ಷದ ದೀಪಾವಳಿ ಹಬ್ಬವನ್ನು ಆಚರಿಸಿದರು. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜಪ್ಪಿನಮೊಗರು, ಕೊಡಿಯಾಲ್ ಬೈಲ್, ಶಕ್ತಿನಗರ, ಅತ್ತಾವರ, ಮರೋಳಿ, ಅಳಪೆ ಉತ್ತರ ಮುಂತಾದ ವಾರ್ಡ್‌ಗಳಲ್ಲಿ ಅಭಿವೃದ್ಧಿಯ ವಿವಿಧ ಕಾಮಗಾರಿಗಳನ್ನು ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಶಂಕುಸ್ಥಾಪನೆ ಮಾಡಿದರು. ಜಪ್ಪಿನಮೊಗರು ಕಲ್ಲತಡಮೆ ರಸ್ತೆ ಅಭಿವೃದ್ಧಿಗೆ 40 ಲಕ್ಷ, ಕೊಡಿಯಾಲ್ ಬೈಲ್ ವಿವೇಕ್ ನಗರದಲ್ಲಿ […]

ಉರ್ವದ ಮಾರಿಗುಡಿ ಸಮೀಪ ಮಧ್ಯ ವಯಸ್ಕ ವ್ಯಕ್ತಿಯ ಕೊಲೆ

Thursday, October 23rd, 2014
Urva Murder

ಮಂಗಳೂರು : ನಗರದ ಉರ್ವದ ಮಾರಿಗುಡಿಯ ಸಮೀಪ ಮಂಗಳೂರು ಮಹಾನಗರ ಪಾಲಿಕೆಯ ಬಯಲು ರಂಗ ಮಂಟಪದ ಬಳಿ ಮಧ್ಯ ವಯಸ್ಕ ವ್ಯಕ್ತಿಯೊಬ್ಬರ ಮೃತ ದೇಹ ಗುರುವಾರ ಪತ್ತೆಯಾಗಿದ್ದು ಇದೊಂದು ಕೊಲೆ ಎಂದು ಶಂಕಿಸಲಾಗಿದೆ. ಹತ್ಯೆಗೀಡಾದ ವ್ಯಕ್ತಿಯನ್ನು ನಾರಾಯಣ ಎಂದು ಗರುತಿಸಲಾಗಿದ್ದು, ಬುಧವಾರ ಮಧ್ಯರಾತ್ರಿಯ ವೇಳೆಗೆ ಅಪರಿಚಿತ ವ್ಯಕ್ತಿಗಳು ಅವರ ತಲೆ ಬಾಗಕ್ಕೆ ದೊಡ್ಡ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆಗೈದಿದ್ದಾರೆ ಎನ್ನಲಾಗಿದೆ. ಕೊಲೆಗೆ ಕಾರಣವೇನೆಂದು ಇನ್ನಷ್ಟೆ ತಿಳಿದು ಬರಬೇಕಿದೆ. ಈತ ಮನೆ ಹಾಗು ಕುಟುಂಬದಿಂದ ಬೇರೆಯಾಗಿದ್ದ ಬೀದಿ […]

ಕೆ.ಎಸ್.ಆರ್.ಟಿ.ಸಿ ವೋಲ್ವೊ ಬಸ್ ದರ-ಬೆಜ್ಜಿಬಿದ್ದ ಪ್ರಯಾಣಿಕರು

Wednesday, October 22nd, 2014
ksrtc

ಮುಂಬಯಿ : ಮಂಗಳೂರು-ಮುಂಬಯಿ ಅಥವಾ ಮುಂಬಯಿ-ಮಂಗಳೂರು ಪ್ರಯಾಣ ತುಳು ಕನ್ನಡಿಗರ ಪಾಲಿಗೆ ಕಂಠಕವಾಗುತ್ತಿದ್ದು, ಈ ಮಾರ್ಗವಾಗಿ ಸೇವೆಗೈಯುವ ಬಸ್ ಗಳಲ್ಲಿ ಯಾವುದೇ ಸುಸಮಯ ಬಂದಾಗ (ಸೀಝನ್) ಅತೀಯಾದ ದರ ಬೆಳೆಸಿ ಪ್ರಯಾಣಿಕರನ್ನು ಸಂಕಷ್ಟಕ್ಕೊಳ ಪಡಿಸುವ ಬಸ್ ಸಂಸ್ಥೆಗಳ ಉಪಟಲ ತೀರಾ ಖಂಡನೀಯ ಎಂದು ಪ್ರಯಾಣಿಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಅದಕ್ಕೆ ಪೂರಕ ಎಂಬಂತೆ ಈ ಬಾರಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಸಂಸ್ಥೆಯ ವೋಲ್ವೊ ಬಸ್ ದರವೂ ಪ್ರಯಣಿಕರನ್ನು ಕೆರಳಿಸಿದೆ. ಮಂಗಳೂರು-ಮುಂಬಯಿ ಮತ್ತು ಬೆಂಗಳೂರು-ಮುಂಬಯಿ […]

ಸಿಂಡಿಕೇಟ್ ಬ್ಯಾಂಕ್ ಸಂಸ್ಥಾಪನಾ ದಿನಾಚರಣೆ

Wednesday, October 22nd, 2014
Syndicate Bank

ಮಂಗಳೂರು : ಸಿಂಡಿಕೇಟ್ ಬ್ಯಾಂಕಿನ ’89ನೇ ಸಂಸ್ಥಾಪನಾ ದಿನಾಚರಣೆ’ಯು ಬ್ಯಾಂಕಿನ ಮಣಿಪಾಲದ ಪ್ರಧಾನ ಆಡಳಿತ ಕಛೇರಿಯ ಸ್ವರ್ಣ ಮಹೋತ್ಸವ ಸಭಾಂಗಣದಲ್ಲಿ ತಾ| 20.10.2014ರಂದು ವಿಜೃಂಭಣೆಯಿಂದ ಜರಗಿತು. ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಯವರು ಸಮಾರಂಭವನ್ನು ಉದ್ಘಾಟಿಸಿ, ದೇಶದ ಆರ್ಥಿಕ ಪ್ರಗತಿಯಲ್ಲಿ ಸಿಂಡಿಕೇಟ್ ಬ್ಯಾಂಕಿನ ಪಾತ್ರ ಮಹತ್ವವಾದುದು. ಅವಿಭಜಿತ ದ.ಕ. ಜಿಲ್ಲೆಯು ಬ್ಯಾಂಕಿಂಗ್ ಕ್ಷೇತ್ರದ ತವರೂರಾಗಿದ್ದು, ಇಲ್ಲಿ ಸ್ಥಾಪನೆಗೊಂಡ ಸಿಂಡಿಕೇಟ್ ಬ್ಯಾಂಕ್ ದೇಶದ ಬೃಹತ್ ಮತ್ತು ದೀರ್ಘಕಾಲದ ಅಸ್ತಿತ್ವ ಹೊಂದಿರುವ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ […]

ಅ.28ರಂದು ಜಿಲ್ಲೆಯ 16 ಬ್ಲಾಕ್ ಗಳಲ್ಲಿ ಕಾಂಗ್ರೆಸ್ ಸದಸ್ಯರ ನೋಂದಾವಣೆ ಅಭಿಯಾನಕ್ಕೆ ಚಾಲನೆ

Monday, October 20th, 2014
Kodijal

ಮಂಗಳೂರು : ಮಹಾರಾಷ್ಟ್ರ ಮತ್ತು ಹರಿಯಾಣದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಿನಾಯ ಸೋಲು ಅನುಭವಿಸಿದ ನ್ತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಅ.28ರಂದು ಜಿಲ್ಲೆಯ 16 ಬ್ಲಾಕ್ ಗಳಲ್ಲಿ ಕಾಂಗ್ರೆಸ್ ಸದಸ್ಯರ ನೋಂದಾವಣೆ ಅಭಿಯಾನಕ್ಕೆ ಚಾಲನೆ ನೀಡಲಿದೆ. ದ.ಕ. ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಈ ಬಗ್ಗೆ ಸೋಮವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಮಾತನಾಡಿದ .ಕ. ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ , […]

ಅಬ್ದುಲ್ ನಾಸಿರ್ ಮದನಿಗೆ ಸುಪ್ರಿಂ ಕೋಟ್೯ ನೀಡಿರುವ ಜಾಮೀನು ರದ್ದುಪಡಿಸಬೇಕು : ಪ್ರಣವಾನಂದ

Monday, October 20th, 2014
Pravananda

ಮಂಗಳೂರು : ಭಾರತೀಯ ಕ್ರಾಂತಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಸುಪ್ರಿಂ ಕೋಟ್೯ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿಯಾಗಿದ್ದ ಅಬ್ದುಲ್ ನಾಸಿರ್ ಮದನಿಗೆ ಜಾಮೀನು ನೀಡಿರುವುದನ್ನು ಖಂಡಿಸಿದ್ದಾರೆ. ಆ ಬಗ್ಗೆ ಸೋಮವಾರ ಮಂಗಳೂರಿನ ಪತ್ತುಮುಡಿ ಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದರು. 1992 ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರ ಹತ್ಯೆಗೆ ಸಂಚು, 1998 ಕೊಯಂಬುತ್ತೂರು ಬಾಂಬ್ ಸ್ಪೋಟ, 2008 ಬೆಂಗಳೂರು ಸರಣಿ ಬಾಂಬ್ ಸ್ಪೋಟ ಪ್ರಕರಣದಲ್ಲಿ ಬಂಧಿಯಾಗಿದ್ದ ಅಬ್ದುಲ್ ನಾಸಿರ್ ಮದನಿಗೆ ಸುಪ್ರಿಂ ಕೋಟ್೯ […]

ಕಾವೂರು ಪ್ರತಿಭಟನೆಗೆ ಯಡಿಯೂರಪ್ಪ ಭೇಟಿ

Sunday, October 19th, 2014
BSY

ಮಂಗಳೂರು : ಮೂಲ್ಕಿಯಲ್ಲಿ ನಡೆಯುತ್ತಿರುವ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಯಡಿಯೂರಪ್ಪ ಕಾವೂರಿನಲ್ಲಿ ಭಜರಂಗದಳ ಮತ್ತು ವಿಶ್ವಹಿಂದೂ ಪರಿಷದ್‌ ನ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಎಸ್‌ವೈ ಹಲ್ಲೆ ನಡೆಸಿದ ಎಸ್‌ಐಯನ್ನು ಸರ್ಕಾರ ಕೂಡಲೆ ಅಮಾನತು ಮಾಡಬೇಕೆಂದು ಆಗ್ರಹಿಸಿದರು. ಕಾವೂರು ಪೊಲೀಸ್‌ ಠಾಣೆಯೆದುರು ಶುಕ್ರವಾರ ದಿಂದ ಸಂಘಟನೆಯ ಕಾರ್ಯಕರ್ತನ ಮೇಲೆ ವೀನಾ ಕಾರಣ ಹಲ್ಲೆ ನಡೆಸಿದ ಠಾಣಾ ಎಸ್‌ಐ ಉಮೇಶ್‌ ಕುಮಾರ್‌ ಅವರ ಅಮಾನತಿಗೆ ಭಜರಂಗದಳ ಮತ್ತು ವಿಶ್ವಹಿಂದೂ ಪರಿಷದ್‌ ಸಂಘಟನೆಯ […]

ಐ.ಎ.ಎಸ್. ಅಧಿಕಾರಿ ರಶ್ಮೀ ಮಹೇಶ್ ಹಲ್ಲೆಗೆ ಎಬಿವಿಪಿ ಖಂಡನೆ

Saturday, October 18th, 2014
abvp

ಮಂಗಳೂರು : ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ ದಕ್ಷ ಐಎಎಸ್ ಅಧಿಕಾರಿ ರಶ್ಮಿ ಮಹೇಶ್ ಹಲ್ಲೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ. ಭ್ರಷ್ಟಾಚಾರವನ್ನು ನಿಯಂತ್ರಣದಲ್ಲಿ ಇಡಬೇಕಾದ ಸರ್ಕಾರವೇ ಭ್ರಷ್ಟಾಚಾರದ ಪರನಿಂತು ದಕ್ಷ ಅಧಿಕಾರಿಗೆ ಹಲ್ಲೆಯಾದಾಗ ಪೋಲೀಸ್ ಅಧಿಕಾರಿಗಳು ಇದ್ದರೂ ತಡೆಯಲಾಗದಿರುವುದು ವಿಷಾದನೀಯ. ಈ ವ್ಯವಸ್ಥೆಯನ್ನು ಸಾಮಾನ್ಯ ಜನರು ಸಹ ತಲೆ ತಗ್ಗಿಸುವಂತೆ ಮಾಡಿದೆ. ಈ ಘಟನೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರವು ಗಂಭೀರವಾಗಿ ತೆಗೆದುಕೊಂಡು ಹಲ್ಲೆ ನಡೆಸಿದ ವ್ಯಕ್ತಿಗಳ ಮೇಲೆ ಕ್ರಮ ಜರುಗಿಸಿ, ಮುಂದೆಂದೂ […]