ಮಣ್ಣಿನಿಂದ ಗಿಡವಾಗಿ ಬೆಳೆಯೋ ಗಣೇಶ… ಶಾಸಕರಿಂದ ಪರಿಸರಸ್ನೇಹಿ ಗಣಪನ ಬಗ್ಗೆ ಜಾಗೃತಿ

Wednesday, September 12th, 2018
Sowmya

ಬೆಂಗಳೂರು: ಎಲ್ಲರೂ ಮಣ್ಣಿನ ಗಣಪನನ್ನೇ ಬಳಸಿ, ಕೆರೆ ಪರಿಸರ ರಕ್ಷಿಸಿ ಅಂತಾ ಭಾಷಣ ಮಾಡೋದನ್ನು ಕೇಳಿರುತ್ತೇವೆ. ಆದ್ರೆ ಜಯನಗರದ ಶಾಸಕಿ ಸೌಮ್ಯಾ ರೆಡ್ಡಿ ಮಾತ್ರ ಒಂದು ಹೆಜ್ಜೆ ಮುಂದುವರಿದು ಗಣೇಶ ವಿಸರ್ಜನೆ ಬಳಿಕ ಅದರಿಂದಲೇ ಗಿಡ ಮರ ಬೆಳೆಸೋ ಪ್ಲಾನ್ ಕೂಡಾ ಮಾಡಿದ್ದಾರೆ. ಹೌದು, ಕಲರ್ ಕಲರ್ ಆಗಿ ಕಾಣಿಸುತ್ತಾ ಪರಿಸರದ ಸೊಬಗನ್ನೇ ಹಾಳು ಮಾಡುವ ಪಿಒಪಿ ಗಣೇಶನ ಪ್ರತಿಷ್ಠಾಪನೆಗೆ ಬ್ರೇಕ್ ಹಾಕಿ.. ಜೇಡಿ ಮಣ್ಣಿನಿಂದ ಮಾಡಿದ ಈ ಹಸಿರು ಗಣಪನನ್ನು ಕೂರಿಸಿ ನೀವು ಪರಿಸರ ಸ್ನೇಹಿಗಳಾಗಿ. […]

ಬಿಜೆಪಿ-ಕಾಂಗ್ರೆಸ್ ನಾಯಕರು ಮಾತುಕತೆ ನಡೆಸಬಾರದಾ: ಸಿ.ಟಿ. ರವಿ

Tuesday, September 11th, 2018
c.t-ravi

ಬೆಂಗಳೂರು: ಮಾತುಕತೆ ಭಾರತ ಮತ್ತು ಪಾಕಿಸ್ತಾನ ಮಧ್ಯೆಯೂ ನಡೆಯುತ್ತದೆ. ಅಂತಹದ್ದರಲ್ಲಿ ಬಿಜೆಪಿ-ಕಾಂಗ್ರೆಸ್ ನಾಯಕರು ಮಾತುಕತೆ ನಡೆಸಬಾರದಾ?‌ ಎಂದು ಶಾಸಕ ಸಿ.ಟಿ. ರವಿ ಪ್ರಶ್ನಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಶಾಸಕ ಶ್ರೀರಾಮುಲು ಅವರು ಜಾರಕಿಹೊಳಿ ಸಹೋದರರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನುವ ಸುದ್ದಿಗೆ ಪ್ರತಿಕ್ರಿಯಿಯಿಸಿದರು. ಸರ್ಕಾರವನ್ನು ನಾವು ಬೀಳಿಸುವ ಪ್ರಯತ್ನ ಮಾಡುವುದಿಲ್ಲ. ಅವಕಾಶ ಬಂದಾಗ ಕಣ್ಮುಚ್ಚಿ ಕುಳಿತುಕೊಳ್ಳುವ ಮೂರ್ಖರು ನಾವಲ್ಲ. ಸರ್ಕಾರವೇ ತನ್ನ ಆಂತರಿಕ ಕಿತ್ತಾಟದಿಂದ ಪತನವಾಗುತ್ತದೆ ಎಂದರು. ಬಿಜೆಪಿ ಅಧಿಕಾರಕ್ಕೆ […]

ಮೈಸೂರಿನಲ್ಲಿ ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನ- 2018 ಕಾರ್ಯಕ್ರಮ: ಕುಮಾರಸ್ವಾಮಿಯಿಂದ ಉದ್ಘಾಟನೆ

Tuesday, September 11th, 2018
kumarswamy

ಮೈಸೂರು: ಮೈಸೂರು ನಗರ ಪತ್ರಿಕಾ ಛಾಯಾಗ್ರಾಹಕರ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಮಂಗಳವಾರ ಮೈಸೂರಿನಲ್ಲಿ ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನ- 2018 ಕಾರ್ಯಕ್ರಮವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸುಮಾರು 20 ವರ್ಷ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ ಹಾಗೂ 60 ವರ್ಷ ವಯೋಮಾನ ಹೊಂದಿದ ಪತ್ರಕರ್ತರಿಗೆ ಅಗತ್ಯ ಸವಲತ್ತುಗಳನ್ನು ಸರ್ಕಾರದ ವತಿಯಿಂದ ಕೊಡುವ ಬಗ್ಗೆ ಸದ್ಯದಲ್ಲೇ ಗಮನ ಹರಿಸಲಾಗುವುದು ಎಂದರು. ಸಂಕಷ್ಟದಲ್ಲಿರುವ ಪತ್ರಕರ್ತರ ಜೀವನ ಉತ್ತಮಗೊಳಿಸುವ ರೀತಿಯಲ್ಲಿ ಕಾರ್ಯಕ್ರಮ ಕೊಡಬೇಕಾಗಿದೆ ಎಂದರು. […]

ಇಂಜಿನಿಯರಿಂಗ್ ಸೀಟು ಕೊಡಿಸುವುದಾಗಿ ಲಕ್ಷಾಂತರ ಹಣ ವಂಚನೆ

Tuesday, September 11th, 2018
arrested

ಬೆಂಗಳೂರು: ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ಸೀಟು ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆಮಾಡಿದ ಇಬ್ಬರು ಖದೀಮರನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಇಂದ್ರೇಶ್ ದುಬೆ ಹಾಗೂ ಗೌರವ್ ಬಂಧಿತ ಆರೋಪಿಗಳು.‌ ವಾರಣಾಸಿ ಮೂಲದ ಸತ್ಯಪ್ರಕಾಶ್ ಎಂಬುವರು ವಂಚನೆಗೊಳಗಾದವರು. ಸತ್ಯಪ್ರಕಾಶ್ ಎಂಬುವರ ಪುತ್ರನಿಗೆ ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ಸೀಟು ಕೊಡಿಸಲು ಆರೋಪಿಗಳು 10 ಲಕ್ಷ ರೂ. ಹಣ ಪಡೆದು ವಂಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಮೂವರು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು […]

ಉತ್ತರ ಕರ್ನಾಟಕಕ್ಕೆ ಹಲವು ಇಲಾಖೆಗಳ ವರ್ಗಾವಣೆ

Friday, September 7th, 2018
HD-Kumaraswamy

ಬೆಂಗಳೂರು : ಉತ್ತರ ಕರ್ನಾಟಕ ವಿರೋಧಿ ಎಂಬ ಆರೋಪದಿಂದ ಮುಕ್ತವಾಗಲು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಇದೀಗ ಸರ್ಕಾರದ ಕೆಲವು ಪ್ರಮುಖ ಇಲಾಖೆಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಕೃಷ್ಣ ಭಾಗ್ಯ ಜಲನಿಗಮ ಲಿಮಿಟೆಡ್ ಬೆಂಗಳೂರಿನಿಂದ ಆಲಮಟ್ಟಿಗೆ, ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್ ನ್ನು ಉತ್ತರ ಕರ್ನಾಟಕದ ಸರಿಯಾದ ಸ್ಥಳವೊಂದಕ್ಕೆ ಸ್ಥಳಾಂತರಗೊಳಿಸಲು ನಿರ್ಧರಿಸಲಾಗಿದ್ದು ಆ ಕಾರ್ಯ ಸದ್ಯದಲ್ಲಿಯೇ ನಡೆಯಲಿದೆ. ರಾಜ್ಯ ಸಚಿವ ಸಂಪುಟ ಈ ಕುರಿತು ನಿನ್ನೆ ಮಹತ್ವದ ನಿರ್ಧಾರ […]

ಸಲಿಂಗಕಾಮಿಗಳಿಗೆ ಇತರ ನಾಗರಿಕರಂತೆ ಸಮಾನ ಹಕ್ಕು : ಸುಪ್ರಿಂಕೋರ್ಟ್

Thursday, September 6th, 2018
transgender

ಬೆಂಗಳೂರು:  ನಿಸರ್ಗ ವಿರುದ್ಧವಾದ ಲೈಂಗಿಕ ಸಂಬಂಧ ಅಪರಾಧ’ ಎನ್ನುವ ಐಪಿಸಿ ಸೆಕ್ಷನ್ 377ರ ಅನ್ವಯ ಅಪರಾಧಿಗಳಿಗೆ ದಂಡ, ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಿತ್ತು. ಈ ಕಾನೂನನ್ನು ಪೊಲೀಸರು ಎಲ್‌ಜಿಬಿಟಿ ಸಮುದಾಯದ ಶೋಷಣೆಗೆ ಬಳಸುತ್ತಿದ್ದಾರೆ ಎಂಬ ಆರೋಪಗಳು ವ್ಯಾಪಕವಾಗಿದ್ದವು. 2009ರಲ್ಲಿ ದೆಹಲಿ ಹೈಕೋರ್ಟ್‌ ಸಲಿಂಗ ಕಾಮ ಅಪರಾಧವಲ್ಲ ಎಂದಿತ್ತು. 2013ರಲ್ಲಿ ಈ ತೀರ್ಪನ್ನು ಸುಪ್ರೀಂಕೋರ್ಟ್ ವಜಾ ಮಾಡಿತ್ತು. ನಿರ್ಬಂಧ ಹಿಂಪಡೆಯುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ಅದೇ ವರ್ಷ ಡಿಸೆಂಬರ್ ತಿಂಗಳಲ್ಲಿ ಮನವಿ ಮಾಡಿತ್ತು. ಈ ಮನವಿಯನ್ನು […]

ಉಲ್ಲಾಳದಲ್ಲಿ ಹುಚ್ಚ ವೆಂಕಟ್ ಕುಡಿದು ಸಾರ್ವಜನಿಕರ ಮೇಲೆ ಹಲ್ಲೆ

Thursday, September 6th, 2018
Hucha-Venkat

ಬೆಂಗಳೂರು:  ನಟ ಹುಚ್ಚ ವೆಂಕಟ್ ಇದೀಗ ರಿಯಲ್ ಲೈಫ್ ನಲ್ಲೂ ಹುಚ್ಚಾಟ ಮೆರೆದಿದ್ದಾರೆ. ಉಲ್ಲಾಳದ ಅಂಗಡಿ ಬಳಿ ನಿಂತಿದ್ದ ಜನರು ಹಾಗೂ ಅಂಗಡಿಯವನ ಮೇಲೆ ಹಲ್ಲೆ ಮಾಡಿದ್ದಾರೆ. ಬಿಗ್ ಬಾಸ್ ಹಾಗೂ ರಿಯಾಲಿಟಿ ಶೋಗಳಲ್ಲಿ ಹುಚ್ಚಾಟ ನಡೆಸುವ ಮೂಲಕ ಸುದ್ದಿಯಾಗಿದ್ದ ಹುಚ್ಚ ವೆಂಕಟ್,  ನಗರದ ಜ್ಞಾನಭಾರತಿ ಕ್ಯಾಂಪಸ್ ನ ಉಲ್ಲಾಳ ಮುಖ್ಯ ರಸ್ತೆಯ ಬಾರ್ ಒಂದರಲ್ಲಿ  ಕುಡಿದು ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡಿದ್ದ ವೆಂಕಟ್ ರಸ್ತೆ ಬರುತ್ತಿದ್ದಂತೆ  ಮಧ್ಯಾಹ್ನ ನಡುರಸ್ತೆಯಲ್ಲಿ ಕುಡಿದು ತೂರಾಡುತ್ತಾ ಗಲಾಟೆ ಮಾಡಿದ್ದಾರೆ. ಬಾರ್ ನಲ್ಲಿ  ಹುಚ್ಚ ವೆಂಕಟ್ ಕಂಡೊಡನೆ ಜನರು ಅವರು […]

ಗೌರಿ ಲಂಕೇಶ್​ಗೆ ಫ್ರಾನ್ಸ್​​ನಿಂದ ಮರಣೋತ್ತರ ಪ್ರಶಸ್ತಿ

Wednesday, September 5th, 2018
gouri-journalist

ಬೆಂಗಳೂರು: ಕಳೆದ ವರ್ಷ ಸೆ. 5 ರಂದು ನಗರದಲ್ಲಿ ಹತ್ಯೆಗೀಡಾಗಿದ್ದ ಪತ್ರಕರ್ತೆ ಗೌರಿ ಲಂಕೇಶ್ ಮರಣೋತ್ತರವಾಗಿ ಫ್ರಾನ್ಸ್ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಹಂತಕರ ಗುಂಡೇಟಿಗೆ ಬಲಿಯಾಗಿದ್ದ ಗೌರಿ ಲಂಕೇಶ್ ಗೆ ಮರಣೋತ್ತರವಾಗಿ ದಿ ಬೇಯಕ್ಸ್ ಕಲ್ವಾಡೊಸ್ ಪ್ರಶಸ್ತಿ ನೀಡಲಾಗ್ತಿದೆ. ಅಕ್ಟೋಬರ್ 8 ರಂದು ಫ್ರಾನ್ಸ್ ನಲ್ಲಿ ಪ್ರಶಸ್ತಿ ವಿತರಿಸಲಾಗುತ್ತಿದ್ದು, ಈ ಪ್ರಶಸ್ತಿಯನ್ನ ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ಸ್ವೀಕರಿಸಲಿದ್ದಾರೆ.

ಗೌರಿ ಮೆಮೋರಿಯಲ್ ಟ್ರಸ್ಟ್ ನಿಂದ ಗೌರಿ ದಿನಾಚರಣೆ..!

Wednesday, September 5th, 2018
gouri-lankesh

ಬೆಂಗಳೂರು: ಗೌರಿಲಂಕೇಶ್ ಹತ್ಯೆಯಾಗಿ ಒಂದು ವರ್ಷವಾದ ಹಿನ್ನೆಲೆ ಗೌರಿ ಲಂಕೇಶ್ ಬಳಗ ಮತ್ತು ಗೌರಿ ಮೆಮೋರಿಯಲ್ ಟ್ರಸ್ಟ್ ನಿಂದ ಗೌರಿ ದಿನಾಚರಣೆ ಆಚರಿಸಲಾಯ್ತು. ಗೌರಿ ದಿನಾಚರಣೆ ಅಂಗವಾಗಿ ಟಿಆರ್ ಮಿಲ್ ಸಮೀಪದ ಲಿಂಗಾಯಿತ/ ವಿರಶೈವ ರುದ್ರಭೂಮಿಯಲ್ಲಿರುವ ಗೌರಿಯ ಸಮಾಧಿ ಬಳಿ ಗೌರಿ ಅಮರ್ ರಹೇ ಶೀರ್ಷಿಕೆಯಡಿ ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು. ಕಾರ್ಯಕ್ರಮದಲ್ಲಿ ಸ್ವಾಮಿ ಅಗ್ನಿವೇಶ್, ನಟ ಪ್ರಕಾಶ್ ರೈ, ಸಾಹಿತಿ ವಿಜಯಮ್ಮ, ವಿಚಾರವಾದಿ ಬಿಟಿ ಲಲಿತಾನಾಯ್ಕ್, ಸೇರಿದಂತೆ ಗೌರಿ ಲಂಕೇಶ್ ಅಭಿಮಾನಿ […]

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್​​ ಸದಸ್ಯರಿಗೆ ಸಿದ್ದರಾಮಯ್ಯ ಅಭಿನಂದನೆ..!

Tuesday, September 4th, 2018
siddaramaih

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಿ ಪಕ್ಷದ ಜಯಭೇರಿಗೆ ಕಾರಣರಾದ ಮತದಾರರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದು, ಪಕ್ಷದ ಅಭ್ಯರ್ಥಿಗಳ ಪರವಾಗಿ ಶ್ರಮಿಸಿದ ಮುಖಂಡರು, ಕಾರ್ಯಕರ್ತರಿಗೆ ಸಿದ್ದರಾಮಯ್ಯ ಧನ್ಯವಾದ ಹೇಳಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗಳಿಸಿದೆ. ಇದಕ್ಕೆ ಜನತೆ ಪಕ್ಷದ ಮೇಲಿಟ್ಟಿರುವ ವಿಶ್ವಾಸವೇ ಕಾರಣ. ಜನತೆಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವಲ್ಲಿ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ ಮಹತ್ತರವಾಗಿದೆ. ಆ […]