ಜನ ಪ್ರತಿನಿಧಿಗಳಿಗೆ ವಿದ್ಯಾರ್ಥಿನಿ ಹಿಗ್ಗಾಮುಗ್ಗಾ ತರಾಟೆ..!

Saturday, July 21st, 2018
student

ಗದಗ: ಜನ ಪ್ರತಿನಿಧಿಗಳಿಗೆ ವಿದ್ಯಾರ್ಥಿನಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ. 38 ನೇ ನರಗುಂದ ಬಂಡಾಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿನಿ ಸುಮಾ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದ್ದಾಳೆ. ಗದಗ ಜಿಲ್ಲೆಯ ನರಗುಂದ ಪಟ್ಟಣದ ರೈತರ ಸಾವಿನ ಬಗ್ಗೆ ಸರ್ಕಾರ ಜನಪ್ರತಿನಿಧಿಗಳು ಕೇವಲವಾಗಿ ಕಾಣ್ತಾರೆ. ಚುನಾವಣೆಯಲ್ಲಿ ಕೈಮುಗಿದು ಅಕ್ಕಾ-ಅಣ್ಣಾ ಅಂತ ಬರ್ತಾರೆ. ಚುನಾವಣೆಯಲ್ಲಿ ಹಣ, ಮದ್ಯ ಹಂಚುತ್ತಾರೆ. ಮದ್ಯ ಕುಡಿದು ಮನೆಯಲ್ಲಿ ಹೆಂಡತಿಯನ್ನೇ ಹೊಡಿತಾರೆ. ಇಂಥವರಿಗೆ ಮತ ಹಾಕಿ […]

ದೇಶದಾದ್ಯಂತ ಲಾರಿ ಮುಷ್ಕರ..ಕರ್ನಾಟಕ ಸರಕು ಸಾಗಣೆದಾರರ ಸಂಘದಿಂದ ಪ್ರತಿಭಟನೆ!

Friday, July 20th, 2018
lori-protest

ಬೆಂಗಳೂರು: ದೇಶದಾದ್ಯಂತ ಲಾರಿ ಮುಷ್ಕರ ಹಿನ್ನಲೆ ನಗರದ ಟೌನ್ ಹಾಲ್ ಮುಂದೆ ಅಖಿಲ ಭಾರತ ಮೋಟಾರ್ ಟ್ರಾನ್ಸ್ಪೋರ್ಟ್ ಕಾಂಗ್ರೆಸ್ ಹಾಗೂ ಕರ್ನಾಟಕ ಸರಕು ಸಾಗಣೆದಾರರ ಸಂಘದಿಂದ ಪ್ರತಿಭಟನೆ ನಡೆಯಿತು. ಟೋಲ್ ಮುಕ್ತ ಭಾರತಕ್ಕೆ ಒತ್ತಾಯಿಸಿ ಹಾಗೂ ಇಂಧನ ದರ ಕಡಿಮೆ ಮಾಡಬೇಕು ಹಾಗೂ ಥರ್ಡ್ ಪಾರ್ಟಿ ಇನ್ಸೂರೆನ್ಸ್ ದರ ಕಡಿಮೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು‌. ದೇಶಾದ್ಯಂತ ವಾಣಿಜ್ಯ ವಾಹನಗಳ ಸ್ಥಗಿತ ಮಾಡಲಾಗುವುದು, ದೇಶದಲ್ಲಿ 412 ಟೋಲ್ ಗೇಟ್ ಹಾಗೂ ರಾಜ್ಯದಲ್ಲಿ 29 ಟೋಲ್ ಗೇಟ್ ಗಳಿವೆ. […]

ಸರ್ಕಾರದಿಂದ ಕಾರ್ಮಿಕರಿಗೆ ಮನೆ ನಿರ್ಮಾಣ ವೆಚ್ಚದಲ್ಲಿ ಹೆಚ್ಚಳ..!

Friday, July 20th, 2018
venkatramanappa

ಬೆಂಗಳೂರು: ಕಾರ್ಮಿಕರಿಗೆ ಮನೆ ನಿರ್ಮಾಣ ವೆಚ್ಚದಲ್ಲಿ ಹೆಚ್ಚಳ ಮಾಡಿದ್ದು, ೨ ಲಕ್ಷ ರೂ.ನಿಂದ ೫ ಲಕ್ಷಕ್ಕೆ ಮನೆ ನಿರ್ಮಾಣ ವೆಚ್ಚ ಹೆಚ್ಚಳ ಮಾಡಲು ನಿರ್ಧರಿಸಿದ್ದೇವೆ ಎಂದು ಕಾರ್ಮಿಕ ಸಚಿವ ವೆಂಕಟ್ರಮಣಪ್ಪ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, 9ಲಕ್ಷಕ್ಕೆ ಮನೆ ಕಟ್ಟಲು ಆಗುವುದಿಲ್ಲ. ಹಾಗಾಗಿ ವೆಚ್ಚ ಹೆಚ್ಚಳ ಮಾಡಿದ್ದೇವೆ. ನಿವೇಶನ ಇರುವ ಕಾರ್ಮಿಕರಿಗೆ ಮಾತ್ರ ಮನೆ ನಿರ್ಮಾಣ ಮಾಡಿಕೊಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ರಾಜೀವ್ ಗಾಂಧಿ ವಸತಿ ನಿಗಮದಡಿ ಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಹಂತ ಹಂತವಾಗಿ ಕಾರ್ಮಿಕರಿಗೆ ಮನೆಗಳ ನಿರ್ಮಾಣ […]

ಉಚಿತ ಬಸ್ ​ಪಾಸ್​​​ಗಾಗಿ ನಾಳೆ ಶಾಲಾ-ಕಾಲೇಜು ಬಂದ್​ಗೆ ಕರೆ

Friday, July 20th, 2018
strike

ಬೆಂಗಳೂರು: ಉಚಿತ ಬಸ್ ಪಾಸ್ಗಾಗಿ ಆಗ್ರಹಿಸಿ ನಾಳೆ ಶಾಲಾ-ಕಾಲೇಜು ಬಂದ್ ಮಾಡಿ ಪ್ರತಿಭಟನೆ ಮಾಡಲು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ನಿರ್ಧರಿಸಿವೆ. ಕಳೆದ ಒಂದು ತಿಂಗಳಿನಿಂದಲೂ ರಾಜ್ಯಾದ್ಯಂತ ಸಾವಿರಾರು ವಿದ್ಯಾರ್ಥಿಗಳನ್ನು ಸಂಘಟಿಸಿ ಬಸ್‍ ಪಾಸ್ ಸಮಸ್ಯೆಯ ಬಗ್ಗೆ ಅಹವಾಲನ್ನು ಸರ್ಕಾರದ ಮುಂದಿಟ್ಟಿವೆ. ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‍ ಪಾಸ್ ನೀಡುವುದಾಗಿ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಮತ್ತು ಈಗಾಗಲೇ ಬಸ್ ಪಾಸ್ ಪಡೆದ ವಿದ್ಯಾರ್ಥಿಗಳಿಗೆ ಹಣ ವಾಪಸ್ಸು ಮಾಡಬೇಕೆಂಬ ಬೇಡಿಕೆಗಳನ್ನು ವಿದ್ಯಾರ್ಥಿಗಳು ಮುಂದಿಟ್ಟಿದ್ದಾರೆ. ಈ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದ […]

ಶಿರೂರು ಶ್ರೀಗಳ ಸಾವು ಅಸಹಜ..ದೃಢಪಟ್ಟಲ್ಲಿ ಸೂಕ್ತ ತನಿಖೆ: ಡಾ. ಜಿ.ಪರಮೇಶ್ವರ್‍

Thursday, July 19th, 2018
parameshwar

ಬೆಂಗಳೂರು: ಉಡುಪಿ ಶಿರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳ ನಿಧನಕ್ಕೆ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‍ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಹಿಂದಿನ ಪರ್ಯಾಯ ಅವಧಿಯಲ್ಲಿ ಶ್ರೀಗಳು ಸಾಕಷ್ಟು ಉತ್ತಮ ಕೆಲಸ ಮಾಡಿದ್ದರು. ಅವರ ನಿಧನಕ್ಕೆ ಹಲವು ಕಾರಣಗಳು ಕೇಳಿ ಬರುತ್ತಿವೆ. ಈ ಬಗ್ಗೆ ವಿಚಾರ ಮಾಡಲಾಗುವುದು. ಅವರ ಸಾವು ಅಸಹಜ ಎಂದು ದೃಢಪಟ್ಟಲ್ಲಿ ಸೂಕ್ತ ತನಿಖೆ ನಡೆಸಲಾಗುವುದು ಎಂದರು. ಶ್ರೀಗಳ ಅಗಲಿಕೆ ಧಾರ್ಮಿಕ ಕ್ಷೇತ್ರದಲ್ಲಿ ತುಂಬಲಾಗದ ನಷ್ಟವಾಗಿದೆ. ಕೇವಲ 55 ವರ್ಷಕ್ಕೆ ಅವರು ನಿಧನರಾಗಿದ್ದಾರೆ. ಆಸ್ಪತ್ರೆಯ ಮೂಲಗಳಿಂದ […]

ಶ್ರೀಗಳ ಅಗಲಿಕೆಯಿಂದ ಇಡೀ ಭಕ್ತ ಸಮೂಹಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ: ಹೆಚ್.ಡಿ.ದೇವೇಗೌಡ

Thursday, July 19th, 2018
devegowda

ಬೆಂಗಳೂರು: ಉಡುಪಿ ಶಿರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳ ನಿಧನದ ಸುದ್ದಿ ಕೇಳಿ ತೀವ್ರ ನೋವುಂಟಾಗಿದೆ. ಶ್ರೀಗಳ ಅಗಲಿಕೆಯಿಂದ ಇಡೀ ಭಕ್ತ ಸಮೂಹಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ರೀಗಳು ನಮಗೆಲ್ಲ ಮಾರ್ಗದರ್ಶಕರಾಗಿದ್ದರು. ಶಿರೂರು ಶ್ರೀಗಳು ಅತ್ಯಂತ ಕಿರಿಯ ವಯಸ್ಸಿನಲ್ಲೇ ಸನ್ಯಾಸತ್ವವನ್ನು ತೆಗೆದುಕೊಂಡವರು. ಶ್ರೀಗಳಿಗೆ ಸಾಹಿತ್ಯ ಮತ್ತು ಸಂಗೀತದ ಬಗ್ಗೆ ಬಹಳ ಆಸಕ್ತಿ ಇತ್ತು ಎಂದು ಅವರನ್ನು ಗುಣಗಾನ ಮಾಡಿದರು. ಸಮಾಜವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುವಲ್ಲಿ ಶ್ರೀಗಳು ಮಾರ್ಗದರ್ಶಕರಾಗಿದ್ದರು ಎಂದು […]

ಸಹೋದರನ ಅನಾರೋಗ್ಯದ ಕಾರಣದಿಂದಾಗಿ‌ ದೆಹಲಿಗೆ ತೆರಳಲಿಲ್ಲ: ಡಾ.ಜಿ. ಪರಮೇಶ್ವರ್

Wednesday, July 18th, 2018
g-parameshwar

ಬೆಂಗಳೂರು: ಸಹೋದರನ ಅನಾರೋಗ್ಯದ ಕಾರಣದಿಂದಾಗಿ‌ ದೆಹಲಿಗೆ ತೆರಳಲಿಲ್ಲ. ಇದರ ಹೊರತು ಬೇರೆ ಯಾವುದೇ ಕಾರಣ ಇಲ್ಲ, ಸರಿಯಾಗಿ ಆಹ್ವಾನ ಬಂದಿರಲಿಲ್ಲ ಎನ್ನುವುದೆಲ್ಲಾ ಸತ್ಯಕ್ಕೆ ದೂರವಾದ ಮಾತುಗಳು ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ಸ್ಪಷ್ಟೀಕರಣ ನೀಡಿದ್ದಾರೆ. ವಿಧಾನಸೌಧದಲ್ಲಿ‌ ಸುದ್ದಿಗಾರರ ಜೊತೆ ಮಾತನಾಡಿದ ಅವರು , ನಮ್ಮ ಅಣ್ಣನ ಆರೋಗ್ಯ ಗಂಭೀರವಾಗಿದೆ. ಹೀಗಾಗಿ ನಾನು ದೆಹಲಿಗೆ ಹೋಗಲಿಲ್ಲ. ಕಾವೇರಿ ವಿಚಾರ ಸಭೆ ಸಂಬಂಧ ಸಂಸದರಿಗೆ ಮಾಹಿತಿ ನೀಡಿಲ್ಲ ಅನ್ನೋದು ತಪ್ಪು. ಎಲ್ಲರಿಗೂ ಸರ್ಕಾರದ ವತಿಯಿಂದ ಮಾಹಿತಿ ಹೋಗಿದೆ ಅನ್ನಿಸುತ್ತದೆ ಎಂದರು. […]

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಯಾವುದೇ ಸಮಸ್ಯೆ ಇಲ್ಲ: ಡಿ.ಸಿ‌.ತಮ್ಮಣ್ಣ

Wednesday, July 18th, 2018
d-c-tamanna

ಬೆಂಗಳೂರು: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಯಾವುದೇ ಸಮಸ್ಯೆ ಇಲ್ಲ. ಇನ್ನೊಂದು ವಾರದಲ್ಲಿ ಬಸ್ ಪಾಸ್ ಕುರಿತು ಅಧಿಕೃತ ತೀರ್ಮಾನ ಪ್ರಕಟಿಸಲಾಗುತ್ತದೆ ಎಂದು ಸಾರಿಗೆ ಸಚಿವ ಡಿ.ಸಿ‌.ತಮ್ಮಣ್ಣ ಹೇಳಿದ್ದು, ಜೊತೆಗೆ ಬಸ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಬಂದಿರುವ ಮಾಹಿತಿ ನೀಡಿ ಪ್ರಯಾಣ ದರ ಹೆಚ್ಚಳ ಸಾಧ್ಯತೆಯ ಸುಳಿವು ನೀಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಚಿತ ಬಸ್ ಪಾಸ್ಗೆ 2 ಸಾವಿರ ಕೋಟಿ ರೂ. ಖರ್ಚು ಬರಲಿದೆ. ಶಿಕ್ಷಣ ಮಂತ್ರಿಗಳು ಶಿಕ್ಷಣ ಇಲಾಖೆಯಿಂದ ಶೇ. 25ರಷ್ಟು […]

ಸಿಎಂ ಕುಮಾರಸ್ವಾಮಿಗೆ ಮತ ಹಾಕಿದ ಜನ ಉಗಿಯುತ್ತಿದ್ದಾರೆ: ಕಾಂಗ್ರೆಸ್ ಮುಖಂಡ

Wednesday, July 18th, 2018
congres-party

ಮಂಡ್ಯ: ಸಿಎಂ ಕುಮಾರಸ್ವಾಮಿಗೆ ಮತ ಹಾಕಿದ ಜನ ಉಗಿಯುತ್ತಿದ್ದಾರೆ ಎಂದು ಮಂಡ್ಯದ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಬಿ.ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ. ಕೆ.ಆರ್.ಪೇಟೆ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿಯಾದ ಕೆ.ಬಿ.ಚಂದ್ರಶೇಖರ್, ಕೆ.ಆರ್.ಪೇಟೆಯ ಪ್ರವಾಸಿ ಮಂದಿರದಲ್ಲಿ‌ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ಏಕವಚನದಲ್ಲಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡ್ತಾರೆ ಅಂದುಕೊಂಡು ಜನ ಮತ ಹಾಕಿದ್ರು. ಸಿಎಂ‌ ಆದ ಮೇಲೆ ಕುಮಾರಸ್ವಾಮಿ ಏನು ಮಾಡಿದರು ಅನ್ನೋದು ಜನಕ್ಕೆ […]

ಲೋಕಸಭಾ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ..!

Wednesday, July 18th, 2018
congress

ಬೆಂಗಳೂರು: ಮುಂಬರಲಿರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಕೊಳ್ಳಲು ನಿರ್ಧರಿಸಿವೆ. 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡಲಿದ್ದು, 8 ಸ್ಥಾನಗಳು ಜೆಡಿಎಸ್ ಪಾಲಿಗೆ ಸಿಗಲಿವೆ ಎನ್ನುವ ಎಕ್ಸ್ಕ್ಲ್ಯೂಸಿವ್ ಮಾಹಿತಿ ಲಭ್ಯವಾಗಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ನಡೆಸುತ್ತಿರುವ ದೋಸ್ತಿ ಪಕ್ಷಗಳು ಮುಂಬರುವ ಲೋಕಸಭಾ ಚುಮಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿ ಬಿಜೆಪಿಯನ್ನು ಮಣಿಸಲು ನಿರ್ಧರಿಸಿವೆ. ಇದಕ್ಕೆ ಪೂರಕ ಎನ್ನುವಂತೆ ಸ್ಥಾನಗಳ ಹಂಚಿಕೆ ಕಾರ್ಯದ ಮೊದಲ ಸುತ್ತಿನ ಮಾತುಕತೆಯನ್ನು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ […]