ಪಾಕಿಸ್ತಾನದಲ್ಲಿ 1,300 ವರ್ಷಗಳ ಹಿಂದೆ ನಿರ್ಮಿಸಲಾದ ಶ್ರೀವಿಷ್ಣುವಿನ ದೇವಾಲಯ ಪತ್ತೆ

Saturday, November 21st, 2020
Share

Pakistaan Templeಪೇಶಾವರ್ : ವಾಯುವ್ಯ ಪಾಕಿಸ್ತಾನದ ಸ್ವಾತ್ ಜಿಲ್ಲೆಯ ಪರ್ವತ ಪ್ರಾಂತ್ಯದಲ್ಲಿ 1,300 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎನ್ನಲಾದ ಶ್ರೀವಿಷ್ಣುವಿಗೆ ಸೇರಿದ ಹಿಂದೂ ದೇವಾಲಯವು ಪತ್ತೆಯಾಗಿದೆ. ಪಾಕಿಸ್ತಾನ ಹಾಗೂ ಇಟಾಲಿಯನ್ ಪುರಾತತ್ವ ತಜ್ಞರು ಈ ದೇವಾಲಯವನ್ನು ಪತ್ತೆ ಹಚ್ಚಿದ್ದಾರೆ.

ಬ್ಯಾರಿಕೋಟ್ ಘುಂಡೈನಲ್ಲಿ ಉತ್ಖನನ ನಡೆಸಿದಾಗ ಈ ದೇವಾಲಯ ಪತ್ತೆಯಾಗಿದೆ.

ಇದೊಂದು ವಿಷ್ಣುವಿನ ದೇವಾಲಯವಾಗಿದ್ದು ಇದನ್ನು ಹಿಂದೂಶಾಹಿ ಅವಧಿಯಲ್ಲಿ1,300 ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದಾಗಿ ಖೈಬರ್ ಪಖ್ತುನ್ಖ್ವಾ ಪುರಾತತ್ವ ವಿಭಾಗದ ಫಜಲ್ ಖಲೀಕ್ ಹೇಳಿದ್ದಾರೆ.

ಹಿಂದೂ ಶಾಹಿಸ್ ಅಥವಾ ಕಾಬೂಲ್ ಶಾಹಿಸ್ (ಕ್ರಿ.ಶ. 850 1026) ಕಾಬೂಲ್ ಕಣಿವೆ (ಪೂರ್ವ ಅಫ್ಘಾನಿಸ್ತಾನ), ಗಾಂಧಾರ (ಆಧುನಿಕ ಕಾಲದ ಪಾಕಿಸ್ತಾನ, ಅಫ್ಘಾನಿಸ್ತಾನ) ಮತ್ತು ಇಂದಿನ ವಾಯುವ್ಯ ಭಾರತವನ್ನು ಆಳಿದ ಹಿಂದೂ ರಾಜವಂಶ.

Pakistaan Temple ತಮ್ಮ ಉತ್ಖನನದ ಸಮಯದಲ್ಲಿ, ಪುರಾತತ್ತ್ವಜ್ಞರು ದೇವಾಲಯದ ಸಮೀಪ ಕಂಟೋನ್ಮೆಂಟ್ ಮತ್ತು ವಾಚ್‌ಟವರ್‌ಗಳ ಕುರುಹುಗಳನ್ನು ಸಹ ಕಂಡುಕೊಂಡಿದ್ದಾರೆ. ದೇವಾಲಯದ ಸ್ಥಳದ ಬಳಿ ನೀರಿನ ಬಾವಿಯನ್ನು ತಜ್ಞರು ಕಂಡುಕೊಂಡರು, ಅದನ್ನು ದೇವಾಲಯದಲ್ಲಿ ದೇವರ ಪೂಜೆಗೆ ಮುನ್ನ ಸ್ನಾನಕ್ಕಾಗಿ ಬಳಸಲಾಗುತ್ತಿತ್ತು.

ಸ್ವಾತ್ ಜಿಲ್ಲೆಯು ಸಾವಿರ ವರ್ಷಗಳಷ್ಟು ಹಳೆಯದಾದ ಪುರಾತತ್ವ ಸ್ಥಳಗಳಿಗೆ ನೆಲೆಯಾಗಿದೆ ಮತ್ತು ಹಿಂದೂ ಶಾಹಿ ಕಾಲದ ಕುರುಹುಗಳು ಈ ಪ್ರದೇಶದಲ್ಲಿ ಮೊದಲ ಬಾರಿಗೆ ಕಂಡುಬಂದಿವೆ ಎಂದು ಫಜಲ್ ಖಲೀಕ್ ಹೇಳಿದ್ದಾರೆ. ಸ್ವಾತ್ ಜಿಲ್ಲೆಯಲ್ಲಿ ಪತ್ತೆಯಾದ ಗಾಂಧಾರ ನಾಗರಿಕತೆಯ ಮೊದಲ ದೇವಾಲಯ ಇದಾಗಿದೆ ಎಂದು ಇಟಾಲಿಯನ್ ಪುರಾತತ್ವ ಕಾರ್ಯಾಚರಣೆಯ ಮುಖ್ಯಸ್ಥರಾದ ಡಾ. ಲೂಕ ಹೇಳಿದರು.

ಮುಸ್ಲಿಂ ರಾಷ್ಟ್ರ ಅಬುಧಾಬಿಯಲ್ಲಿ ಪ್ರಥಮ ಹಿಂದು ದೇವಾಲಯ ನಿರ್ಮಾಣ

Wednesday, November 11th, 2020
Share

Hindu Templeಅಬುಧಾಬಿ: ಮುಸ್ಲಿಂ ರಾಷ್ಟ್ರ ಅಬುಧಾಬಿಯಲ್ಲಿ ನಿರ್ಮಾಣವಾಗುತ್ತಿರುವ ಪ್ರಥಮ ಹಿಂದು ದೇವಾಲಯ ಅಂತಿಮ ರೂಪ ಪಡೆದಾಗ ಹೇಗಿರಲಿದೆ ಎಂದು ತಿಳಿಯುವಂತಾಗಲು ದೇವಳದ ಅಂತಿಮ ವಿನ್ಯಾಸದ ಚಿತ್ರಗಳನ್ನು ಆಡಳಿತ ಮಂಡಳಿ- ಬಿಎಪಿಎಸ್ ಹಿಂದು ಮಂದಿರ್ ಬಿಡುಗಡೆಗೊಳಿಸಿದೆ.

ಈ ಕುರಿತಾದ ವೀಡಿಯೋವೊಂದು ದೇವಳ ನಿರ್ಮಾಣದ ಆರಂಭದಿಂದ ಹಿಡಿದು ಪ್ರಸಕ್ತ ನಿರ್ಮಾಣ ಹಂತದ ತನಕದ ಚಿತ್ರಣವನ್ನು ನೀಡುತ್ತದೆ.

ಅಬುಧಾಬಿಯ ಅಬು ಮುರೇಖಾಹ್ ಪ್ರದೇಶದಲ್ಲಿ ತಲೆಯೆತ್ತುತ್ತಿರುವ ಈ ದೇವಸ್ಥಾನದ ಎದುರುಗಡೆ ದೊಡ್ಡ ಸಭಾಂಗಣವಿರಲಿದ್ದು ಜತೆಗೆ ಅಲ್ಲಿ ಗ್ರಂಥಾಲಯ,  ಧಾರ್ಮಿಕ ಸಭಾಂಗಣ  ಹಾಗೂ ಸಮುದಾಯ ಕೇಂದ್ರವೂ ಇರಲಿದೆ. ದೇವಳದ ಪ್ರವೇಶದ್ವಾರದ ಮೆಟ್ಟಿಲುಗಳ ಸುತ್ತ ನೀರಿನ ಝರಿ ಹಾಗೂ ದೇವಳ ಕಾಂಪ್ಲೆಕ್ಸ್ ಸುತ್ತಲೂ ಕೊಳಗಳಿವೆ.

ರಾಜಸ್ಥಾನ ಹಾಗೂ ಗುಜರಾತ್ ರಾಜ್ಯದ ಕುಶಲಕರ್ಮಿಗಳು ಈ ದೇವಳಕ್ಕಾಗಿ ಆಕರ್ಷಕ ಕಲ್ಲಿನ ಕೆತ್ತನೆ ನಡೆಸಿದ್ದಾರೆ.

ಹಿಂದು ಧರ್ಮಗ್ರಂಥಗಳು, ಭಾರತದ ಪೌರಾಣಿಕ ಪ್ರಸಂಗಗಳನ್ನಾಧರಿಸಿದ ಕೆತ್ತನೆಗಳಿಂದ ಈ ಅಬುಧಾಬಿಯ ಹಿಂದು ದೇವಳ ಕಂಗೊಳಿಸಲಿದೆ.

Hindu Temple

Hindu Temple

ಪತ್ನಿ ಮತ್ತು ತಾಯಿಯನ್ನು ಕೊಂದ ಶಾಟ್‌ಪುಟ್‌ ಆಟಗಾರ

Wednesday, August 26th, 2020
Share

iqbal Singhವಾಷ್ಟಿಂಗ್ಟನ್‌: ನ್ಯೂಟೌನ್‌ ಸ್ಕ್ವೇರ್‌ನ ರಾಕ್‌ವುಡ್‌ ರಸ್ತೆಯಲ್ಲಿ ಶಾಟ್‌ಪುಟ್‌ ಆಟಗಾರ ಇಕ್ಬಾಲ್‌ ಸಿಂಗ್ ಎಂಬಾತ ತಮ್ಮ ಪತ್ನಿ ಮತ್ತು ತಾಯಿಯನ್ನು ಕೊಂದು ಪೊಲೀಸರಿಗೆ ಶರಣಾಗಿದ್ದಾರೆ.

62 ವರ್ಷದ ಇಕ್ಬಾಲ್‌ ಸಿಂಗ್‌ ಬೊಪರಾಯ್‌  ಪ್ರಸ್ತುತ ಅಮೆರಿಕ ನಿವಾಸಿ. ಪೆನ್ಸಿಲ್ವೇನಿಯದ ಡೆಲಾವೇರ್‌ ಕೌಂಟಿಯ, ನ್ಯೂಟೌನ್‌ ಸ್ಕ್ವೇರ್‌ನಲ್ಲಿ ರವಿವಾರ ಬೆಳಗ್ಗೆ ಘಟನೆ ನಡೆದಿದೆ.

1983ರ ಕುವೈಟ್‌ ಏಶ್ಯನ್‌ ಆ್ಯತ್ಲೆಟಿಕ್ಸ್‌ ಚಾಂಪಿ ಯನ್‌ಶಿಪ್‌ನ ಶಾಟ್‌ಪುಟ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಇಕ್ಬಾಲ್‌ ಸಿಂಗ್‌ ಬೊಪರಾಯ್‌ ಈಗ ಕೊಲೆ ಗಾರ!. ಆದರೆ ಕಾರಣವೇನೆಂದು ತಿಳಿದುಬಂದಿಲ್ಲ.

ನ್ಯೂಟೌನ್‌ ಸ್ಕ್ವೇರ್‌ನ ರಾಕ್‌ವುಡ್‌ ರಸ್ತೆಯಲ್ಲಿರುವ ಆ ಮನೆಯ ಮೊದಲನೇ ಮಹಡಿಯಲ್ಲಿ ಇಕ್ಬಾಲ್‌ ತಾಯಿ ನಸೀಬ್‌ ಕೌರ್‌ (90 ) ನಿಸ್ತೇಜಗೊಂಡು ಬಿದ್ದಿದ್ದರು. ಮೆಟ್ಟಿಲ ಮೇಲೆ ಪತ್ನಿ ಜಸ್ಪಾಲ್‌ ಕೌರ್‌ ಶವ ಸಿಕ್ಕಿದೆ. ಇಬ್ಬರ ಕತ್ತನ್ನು ಸೀಳಿ ಕೊಲೆ ಮಾಡಲಾಗಿದೆ. ಬಳಿಕ ತಮ್ಮನ್ನು ತಾವೇ ಇಕ್ಬಾಲ್‌ ಇರಿದುಕೊಂಡಿದ್ದಾರೆ. ಪರಿಣಾಮ, ಸ್ವತಃ ಅವರೇ ರಕ್ತಮಯವಾಗಿದ್ದರು.

ಪೊಲೀಸರು ಬರುವ ವೇಳೆ ಇಬ್ಬರು ಸ್ತ್ರೀಯರೂ ಮೃತಪಟ್ಟಿದ್ದರು. ಕೊಲೆ ಮಾಡಿದ ಅನಂತರ ತಮ್ಮ ಪುತ್ರ ಮತ್ತು ಪುತ್ರಿಗೆ ಇಕ್ಬಾಲ್‌ ಸಿಂಗ್‌ ಕರೆ ಮಾಡಿ ಕೃತ್ಯವೆಸಗಿರುವುದಾಗಿ ಹೇಳಿದ್ದಾರೆ. ಮಾತ್ರವಲ್ಲ, ತಾವಾಗಿಯೇ ಪೊಲೀಸ ರಿಗೆ ಶರಣಾಗಿದ್ದಾರೆ.

ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯ ಉರ್ಮರ್‌ ತಂಡಾದಲ್ಲಿ ಇಕ್ಬಾಲ್‌ ಸಿಂಗ್‌ ಜನಿಸಿದರು. ಭಾರತದ ಅಗ್ರ 20 ಶಾಟ್‌ಪುಟ್‌ ಸ್ಪರ್ಧಿಗಳಲ್ಲಿ ಇವರೂ ಒಬ್ಬರು. 18.77 ಮೀ. ಅವರ ಶ್ರೇಷ್ಠ ಸಾಧನೆ. ಆರಂಭದಲ್ಲಿ ಟಾಟಾ ಸ್ಟೀಲ್‌ನಲ್ಲಿ ಉದ್ಯೋಗಿಯಾಗಿದ್ದ ಅವರು, ಅನಂತರ ಪಂಜಾಬ್‌ ಪೊಲೀಸ್‌ನಲ್ಲಿ ಇನ್ಸ್‌ಪೆಕ್ಟರ್‌ ಆಗಿದ್ದರು. ಬಳಿಕ ಅಮೆರಿಕದಲ್ಲಿ ನೆಲೆ ನಿಂತರು. ಸದ್ಯ ಅಲ್ಲಿ ಕ್ಯಾಬ್‌ ಚಾಲಕನಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ.

ಭಯೋತ್ಪಾದಕರಿಗೆ ನೆರವು ನೀಡುತ್ತಿದ್ದ ಪಾಕಿಸ್ತಾನ, ದಾವೂದ್ ಇಬ್ರಾಹಿಂ ಕರಾಚಿ ಯಲ್ಲಿರುವುದನ್ನು ಒಪ್ಪಿಕೊಂಡಿದೆ

Sunday, August 23rd, 2020
Share

Davoodಇಸ್ಲಾಮಾಬಾದ್ : ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದರ ಮೇಲೆ ನಿಗಾ ಇಡುವ ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆ ಹಣಕಾಸು ಕಾರ್ಯಪಡೆಯ (ಎಫ್‌ಎಟಿಎಫ್‌) ‘ಬೂದು ಪಟ್ಟಿ’ಯಲ್ಲಿ ಗುರುತಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ದಾವೂದ್ ಇಬ್ರಾಹಿಂ, ಹಫೀಜ್ ಸಯೀದ್, ಮಸೂದ್ ಅಜರ್ ಮತ್ತು ನಿಷೇಧಿತ 88 ಉಗ್ರ ಸಂಘಟನೆಗಳು, ಅವುಗಳ ನಾಯಕರ ಮೇಲೆ ಪಾಕಿಸ್ತಾನ ಮತ್ತಷ್ಟು ಕಠಿಣ ಹಣಕಾಸು ನಿರ್ಬಂಧ ವಿಧಿಸಿದೆ.

ದಾವೂದ್ ಇಬ್ರಾಹಿಂ, ಹಫೀಜ್ ಸಯೀದ್, ಮಸೂದ್ ಅಜರ್ ಮತ್ತು ಇತರ ಉಗ್ರ ನಾಯಕರ ಎಲ್ಲ ಆಸ್ತಿ, ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸರ್ಕಾರ ಆದೇಶಿಸಿದೆ. ಈ ಆದೇಶದ ಪ್ರತಿಯಲ್ಲಿ ದಾವೂದ್‌ನ ಕರಾಚಿ ವಿಳಾಸವೂ ಉಲ್ಲೇಖವಾಗಿದೆ ಎಂದು ಹೇಳಲಾಗಿದೆ.

ಇದರೊಂದಿಗೆ, ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಇರುವುದನ್ನು ಆ ದೇಶ ಅಧಿಕೃತವಾಗಿ ಒಪ್ಪಿಕೊಂಡಂತಾಗಿದೆ ಎನ್ನಲಾಗಿದೆ.

ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ನೀಡುವುದಕ್ಕೆ ಕಡಿವಾಣ ಹಾಕುವಲ್ಲಿ ಗಂಭೀರ ಪ್ರಯತ್ನ ಮಾಡದ ಕಾರಣ, ಪಾಕಿಸ್ತಾನವನ್ನು ಎಫ್‌ಎಟಿಎಫ್‌ 2018ರ ಜೂನ್‌ನಲ್ಲಿ ‘ಬೂದು ಪಟ್ಟಿಗೆ’ ಸೇರಿಸಿತ್ತು. ಅಲ್ಲದೇ, 27 ಅಂಶಗಳನ್ನು ಈಡೇರಿಸುವ ಸಲುವಾಗಿ 2019ರ ಅಕ್ಟೋಬರ್‌ ವರೆಗೆ ಗಡುವು ನೀಡಿತ್ತು. ಆದರೆ, ಈ ಪೈಕಿ 25 ಅಂಶಗಳನ್ನು ಈಡೇರಿಸುವಲ್ಲಿಯೇ ಪಾಕಿಸ್ತಾನ ವಿಫಲವಾಗಿತ್ತು.

ಉಗ್ರ ಸಂಘಟನೆಗಳಾದ ಲಷ್ಕರ್‌–ಎ–ತಯಬಾ (ಎಲ್‌ಇಟಿ), ಜೈಷ್‌–ಎ–ಮೊಹಮ್ಮದ್‌ (ಜೆಇಎಂ), ಉಗ್ರರ ಚಟುವಟಿಕೆಗಳನ್ನು ಬೆಂಬಲಿಸುವ ಜಮಾತ್‌–ಉದ್‌–ದಾವಾ ಹಾಗೂ ಫಲ್ಹಾ–ಎ–ಇನ್ಸಾನಿಯತ್‌ ಫೌಂಡೇಷನ್‌ಗಳಿಗೆ ಹಣ ಹರಿದು ಬರುವುದರ ಮೇಲೆ ನಿಗಾ ಇಡುವಂತೆ ಎಫ್‌ಎಟಿಎಫ್‌ ಪಾಕಿಸ್ತಾನಕ್ಕೆ ಸೂಚಿಸಿತ್ತು.

ಕರೊನಾ ದಿಂದಾಗಿ ಬ್ರಿಟನ್ ವಿಶ್ವವಿದ್ಯಾಲಯಗಳಿಗೆ ಶೇ.50 ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆ

Tuesday, July 7th, 2020
Share

london Educationಲಂಡನ್: ಬ್ರಿಟನ್ ವಿಶ್ವವಿದ್ಯಾಲಯಗಳೀಗ ಕರೊನಾ ದಿಂದಾಗಿ ನಷ್ಟದ ಸುಳಿಯಲ್ಲಿ ಸಿಲುಕುವ ಆತಂಕಕ್ಕೀ ಡಾಗಿವೆ. ಕರೊನಾ ಸೋಂಕು ಜಾಗತಿಕವಾಗಿ ಹಬ್ಬಿದ ಬಳಿಕ ವಿದ್ಯಾಭ್ಯಾಸಕ್ಕಾಗಿ ಬ್ರಿಟನ್ಗೆ ಆಗಮಿಸುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ. ಇದಂದಾಗಿ ಸುಮಾರು 13 ವಿಶ್ವವಿದ್ಯಾಲಯಗಳು -13 ಸಾವಿರ ಕೋಟಿಯಿಂದ 40 ಸಾವಿರ ಕೋಟಿ ರೂ. ವರೆಗೆ ನಷ್ಟಕ್ಕೆ ಗುರಿಯಾಗುವ ಅಂದಾಜಿದೆ. ಈ ಎಲ್ಲ ವಿಶ್ವವಿದ್ಯಾಲಯಗಳು ಸಂಕಷ್ಟದಿಂದ ಪಾರಾಗಲು ಸರ್ಕಾರದಿಂದ ವಿಶೇಷ ಪ್ಯಾಕೇಜ್ ನಿರೀಕ್ಷಿಸುತ್ತಿವೆ.

ಸೆಪ್ಟೆಂಬರ್ನಲ್ಲಿ ಕಾಲೇಜಿಗೆ ನೋಂದಣಿ ಶುರುವಾಗುವ ವೇಳೆಗೆ ಶೇ.50 ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾದರೂ ಅಚ್ಚರಿ ಇಲ್ಲ ಎಂದು ಬ್ರಿಟನ್ನ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಅಮಿತ್ ತಿವಾರಿ ತಿಳಿಸಿದ್ದಾರೆ. ಸ್ಥಳೀಯ ವಿದ್ಯಾರ್ಥಿಗಳು ಪಾವತಿಸುವ ಶುಲ್ಕಕ್ಕಿಂತ 3 ಪಟ್ಟು ಹೆಚ್ಚಿನ ಶುಲ್ಕ ಪಾವತಿಸುತ್ತಿದ್ದ ವಿದೇಶಿ ವಿದ್ಯಾರ್ಥಿಗಳ ಕೊರತೆಯಿಂದಾಗಿ ಬ್ರಿಟನ್ ವಿವಿಗಳ ಪರಿಸ್ಥಿತಿ ಕಳವಳಕಾರಿಯಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಬ್ರಿಟನ್ನಲ್ಲಿ ಓದುವ ವಿದ್ಯಾರ್ಥಿಗಳು ಭಾರಿ ಶುಲ್ಕ ನೀಡಿ ವಿದ್ಯಾಭ್ಯಾಸ ಮುಂದುವರಿಸಬೇಕಿಲ್ಲ. ಸಂಪೂರ್ಣವಾಗಿ ಆನ್ಲೈನ್ನಲ್ಲೇ ಶಿಕ್ಷಣ ನೀಡಲು ವ್ಯವಸ್ಥೆಯಾಗುತ್ತಿದೆ ಎಂದು ಹಳೆಯ ವಿದ್ಯಾರ್ಥಿಗಳ ಸಂಘಟನೆ ವಕ್ತಾರೆ ಸನಮ್ ಅರೋರಾ ತಿಳಿಸಿದ್ದಾರೆ. ಮತ್ತೊಂದು ಮೂಲಗಳ ಪ್ರಕಾರ, ಆನ್ಲೈನ್ ಶಿಕ್ಷಣ ಜಾರಿಯಾದಲ್ಲಿ ನಾವು ನೋಂದಣಿ ಆಗಲು ಬಯಸುವುದಿಲ್ಲ ಎಂದು ಶೇ.80 ಭಾರತೀಯ ವಿದ್ಯಾರ್ಥಿಗಳು ಸಮೀಕ್ಷೆಯೊಂದರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.50

ಮಂದಿ ಆಫ್ಲೈನ್ನಲ್ಲೇ ತಾವಿರುವ ಸ್ಥಳದಿಂದಲೇ ವಿದ್ಯಾಭ್ಯಾಸ ಮುಂದುವರಿಸಲು ಒಲವು ತೋರಿದ್ದಾರೆನ್ನಲಾಗಿದೆ. ಕಳೆದ ವರ್ಷ 37,450 ಭಾರತೀಯ ವಿದ್ಯಾರ್ಥಿಗಳು ಬ್ರಿಟನ್ ವಿಶ್ವವಿದ್ಯಾಲಯಗಳಲ್ಲಿ ನೋಂದಣಿ ಆಗಿದ್ದರು.

ಮಂಗಳೂರಿಗೆ 180 ಜನರು ಹಾಗೂ 5 ಶಿಶುಗಳ ಜೊತೆ ಮೃತದೇಹ ಕರೆತಂದ ವಂದೇ ಭಾರತ್ ಮಿಷನ್ ವಿಮಾನ

Saturday, June 20th, 2020
Share

dohaquatarಕತಾರ್  : ಸತತವಾಗಿ ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರಗಳಿಗೆ ಅಲ್ಲಿನ ಕನ್ನಡ ಸಂಘಟನೆಗಳೂ ಸೇರಿದಂತೆ ಹಲವಾರು ಜನ ಪ್ರಯತ್ನಿಸಿದ್ದರ ಫಲವಾಗಿ ವಂದೇ ಭಾರತ್ ಮಿಷನ್ ಅಡಿಯಲ್ಲಿ ದೋಹಾದಿಂದ ಮಂಗಳೂರಿಗೆ ಮೊದಲ ವಿಮಾನ ಶುಕ್ರವಾರ ಮಧ್ಯಾಹ್ನ 12:00 ಕ್ಕೆ ಹಾರಿಸಲಾಯಿತು.

ವಿಮಾನ ಸಂಜೆ 06:35 ರ ವೇಳೆಗೆ ಮಂಗಳೂರು ವಿಮಾನ ನಿಲ್ದಾಣವನ್ನು ತಲುಪಲಿದೆ, ಇದು ದಕ್ಷಿಣ ಕೆನರಾ ಜನರಿಗೆ ಬಹಳ ದೊಡ್ಡ ಪರಿಹಾರವಾಗಿದೆ, ಕತಾರ್ನಲ್ಲಿ ಕನ್ನಡಿಗ ಜನಸಂಖ್ಯೆಯ ದಕ್ಷಿಣ ಕೆನರಾದಿಂದ ಬಂದವರು ಕತಾರ್‌ನಲ್ಲಿ ನಮ್ಮ ಕನ್ನಡಿಗರು ಅನುಭವಿಸುತ್ತಿರುವ ನೋವಿನ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ಸಂದೇಶಗಳನ್ನು ತಲುಪಿಸಲು ದಿನ್ಯೂಸ್ 24 ಕನ್ನಡ ಸಹ ದೊಡ್ಡ ಪ್ರಯತ್ನವನ್ನು ಮಾಡಿತ್ತು ಅಂತಿಮವಾಗಿ ಇದೀಗ ಫಲಿತಾಂಶ ಬಂದಿದೆ.

ಕತಾರ್ನಲ್ಲಿ ನಮ್ಮ ಕನ್ನಡಿಗರಿಗೆ ನಿರಂತರ ಬೆಂಬಲ ನೀಡಿದ್ದಕ್ಕಾಗಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ಅಲ್ಲಿನ ಕನ್ನಡಿಗರು ಧನ್ಯವಾದಗಳನ್ನ ಸಲ್ಲಿಸಿದ್ದಾರೆ.

ವಾಪಸಾತಿ ಪಟ್ಟಿಯನ್ನು ಭಾರತದ ರಾಯಭಾರ ಕಚೇರಿಯಿಂದ ತಯಾರಿಸಲಾಗಿದ್ದು, ಅಲ್ಲಿ ವೃದ್ಧರು, ಗರ್ಭಿಣಿಯರು, ಕಡಿಮೆ ಸಂಬಳ ಪಡೆಯುವ ಕಾರ್ಮಿಕರು ಹಾಗೂ ಉದ್ಯೋಗ ಕಳೆದುಕೊಂಡವರಿದ್ದಾರೆ.

ಇದರ ಜೊತೆಗೆ ಜೂನ್ 6 ರ ಶನಿವಾರ ಹೃದಯಾಘಾತದಿಂದ ಮೃತಪಟ್ಟ ಮಂಗಳೂರಿನ ಚಾಲಕನ ಮೃತದೇಹವನ್ನೂ ಅದೇ ಹಾರಾಟದಲ್ಲಿ ಕಳುಹಿಸಿದರು.

ಭಾರತೀಯ ಸಮುದಾಯ ಬೆನೆವೊಲೆಂಟ್ ಫೋರಂ ಉಪಾಧ್ಯಕ್ಷ ಮಹೇಶ್ ಗೌಡ ಮತ್ತು ಸುಬ್ರಮಣ್ಯ ಹೆಬ್ಬಾಗೇಲು ಅವರು ಕತಾರ್ ನಲ್ಲಿನ ಎಲ್ಲಾ ದಾಖಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ತೆರವುಗೊಳಿಸಲು ಸಹಾಯ ಮಾಡಿದರು.

ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿರುವ ಅನಾರೋಗ್ಯದ ಕೆಲಸಗಾರನಿಗೆ ಐಸಿಬಿಎಫ್ ಏರ್ ಟಿಕೆಟ್‌ಗೆ ಹಣ ನೀಡುವ ಮೂಲಕ ಸಹಾಯ ಮಾಡಿತು.

ಭಾರತೀಯ ಸಮುದಾಯಕ್ಕೆ ನಿರಂತರ ಬೆಂಬಲ ನೀಡಿದ್ದಕ್ಕಾಗಿ ಭಾರತೀಯ ರಾಯಭಾರಿ ಪಿ.ಕುಮಾರನ್ ಮತ್ತು ರಾಯಭಾರ ಕಚೇರಿ ಅಧಿಕಾರಿಗಳಿಗೂ ಸಹ ಅಲ್ಲಿನ ಕನ್ನಡಿಗರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಮುಂಬರುವ ವಾರಗಳಲ್ಲಿ ಐಸಿಬಿಎಫ್ ಮತ್ತು ಕರ್ನಾಟಕ ಸಂಘದಿಂದ ಬೆಂಗಳೂರಿಗೆ ಹೆಚ್ಚಿನ ಚಾರ್ಟರ್ಡ್ ವಿಮಾನಗಳನ್ನು ನಿರೀಕ್ಷಿಸಬಹುದಾಗಿದೆ. ಇವರ ಸತತ ಪ್ರಯತ್ನಕ್ಕೆ ಸೆಲ್ಯೂಟ್ ಹೇಳ್ತಿದ್ದಾರೆ ದೋಹಾದ ಕನ್ನಡಿಗರು.

ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿರುವ ಅನಾರೋಗ್ಯದ ಕೆಲಸಗಾರನಿಗೆ ಐಸಿಬಿಎಫ್‌ ಏರ್ ಟಿಕೆಟ್‌ಗೆ ಹಣ ನೀಡುವ ಮೂಲಕ ಸಹಾಯ ಮಾಡಿತು.

ಒಟ್ಟಾರೆ ವಿಶ್ವದಾದ್ಯಂತ ಕೊರೊನ ಹಾವಳಿಯಿಂದ ಪ್ರತಿಯೊಬ್ಬನೂ ಸಹ ಒಂದಲ್ಲಾ ಒಂದು ರೀತಿಯಲ್ಲಿ ಸಮಸ್ಯೆಗಳನ್ನು ಅನುಭವಿಸಿದ್ದಾರೆ. ತಾಯ್ನಾಡುಗಳನ್ನ ಬಿಟ್ಟು ಹೊರ ದೇಶಗಳಿಗೆ ಹೋಗಿದ್ದವರನ್ನಂತೂ ಈ ಕೊರೊನ ಕೊಂಚ ಹೆಚ್ಚಾಗಿಯೇ ಕಾಡಿದೆ. ಈ ದಿನಗಳಲ್ಲಿ ತಾಯ್ನಾಡಿಗೆ ಮರಳುವುದು ಅಸಾಧ್ಯ ಎಂಬಂತಾಗಿತ್ತು. ಇದೀಗ ಹಲವರ ಪರಿಶ್ರಮದಿಂದ ರಾಜ್ಯ ಸರ್ಕಾರದ ಕಾಳಜಿಯಿಂದ ದೇಶಕ್ಕೆ ಮರಳುತ್ತಿರುವುದು ಅನಿವಾಸಿ ಭಾರತೀಯರು ನಿಟ್ಟುಸಿರು ಬಿಡುವಂತಾಗಿದೆ.

ಕತಾರಿನ ಸಂಕಷ್ಠದಿಂದ ಹಾರಿದ 2ನೇ ಆಪತ್ಭಾಂಧವ ವಿಮಾನ

Monday, June 15th, 2020
Share

qutar ಕತಾರ್  : ಪ್ರಸ್ತುತ ಸಂದಿಗ್ಧ ಪರಿಸ್ಥಿತಿಯಲ್ಲಿ ಕರೋನಾ ಮಹಾಮಾರಿಯು ವಿದ್ಯುತ್ ವೇಗದಲ್ಲಿ ಹರಡುತ್ತಿರುವುದು ಪ್ರಚಲಿತ ವಿದ್ಯಮಾನವಾಗಿದೆ. ಇದರ ಕಾರಣದಿಂದಾಗಿ ಭಾರತ ಮೂಲದ ಸಾವಿರಾರು ಜನರು ಕೊಲ್ಲಿ ದೇಶಗಳಲ್ಲೊಂದಾದ ಕತಾರಿನಲ್ಲಿ ವಿವಿಧ ಕಾರಣಗಳಿಂದ ಸಲುಕಿ ಸಂಕಷ್ಠದಲ್ಲಿರುವರು. ಕೆಲವರು ಕೆಲಸ ಕಳೆದುಕೊಂಡಿರುವರು, ಇನ್ನೂ ಕೆಲವರು ಅತೀವ ಅನಾರೋಗ್ಯದಿಂದ ನರಳುತ್ತಿರುವರು, ಮತ್ತೂ ಕೆಲವರು ಅನ್ನಾಹಾರಗಳಿಗೂ ಪರದಾಡುತ್ತಿರುವರು. ಇಂತಹವರಲ್ಲಿ 177 ಜನರಿಗೆ ಫ್ರಥಮ ಆದ್ಯತೆ ನೀಡಿ, ದಿನಾಂಕ 22 ಮೇ 2020 ರಂದು ’ವಂದೇ ಭಾರತ ನಿಯೋಗ’ದ ಸೇವೆಯಲ್ಲಿ ಬಂದ ವಿಮಾನದ ಮೂಲಕ ಮಾತೃಭೂಮಿಗೆ ಕಳುಹಿಸಿಕೊಡಲಾಗಿತ್ತು. ಇನ್ನೂ ಉಳಿದ ಸಾವಿರಾರು ಜನರಿಗೆ ಸಾಮಾನ್ಯ ವಿಮಾನ ಸೇವೆ ಇಲ್ಲದ ಕಾರಣ ತುರ್ತು ಪರಿಸ್ಥಿತಿಯಲ್ಲಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತಿತ್ತು.

qutar ಈ ಜನರ ಕರೆಗೆ ಓಗೊಟ್ಟು, ಕತಾರಿನಲ್ಲಿರುವ ಸುಬ್ರಮಣ್ಯ ಹೆಬ್ಬಾಗಿಲು ಅವರು ಬಾಗಿಲಿನಿಂದ ಬಾಗಿಲಿಗೆ ಓಡಾಡಿ, ಕದವನ್ನು ತಟ್ಟಿ, ತೆಗೆಸಿ, ಸಮರ್ಪಕವಾಗಿ ದ್ವಿತೀಯ ವಿಮಾನ ಸೇವೆಯನ್ನು ವಾಸ್ತವ್ಯಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಸುಬ್ರಮಣ್ಯ ಅವರು ಕತಾರಿನ ಭಾರತೀಯ ರಾಯಭಾರಿ ಕಾರ್ಯಾಲಯ, ಭಾರತ ಸರಕಾರದ ವಿದೇಶಿ ಮಂತ್ರಾಲಯ, ಕರ್ನಾಟಕ ಸರಕಾರ ಮುಖ್ಯ ಮಂತ್ರಿಗಳ ಕಾರ್ಯಾಲಯ, ನಾಗರೀಕ ವಿಮಾನಯಾನ ಮಂತ್ರಾಲಯ, ಕೇಂದ್ರ ಹಾಗೂ ರಾಜ್ಯ ಸರಕಾರದ ಆರೋಗ್ಯ ಮಂತ್ರಾಲಯಗಳು ಮತ್ತು ಕೋವಿಡ್ ತುರ್ತು ಕಚೇರಿಗಳು, ಇವೆಲ್ಲದರೊಂದಿಗೆ ಯಾಚಿಸಿ, ಕಾಡಿ-ಬೇಡಿ, ಅಭಯ ಹಸ್ತವನ್ನು ಕೋರಿದುದರ ಪರಿಣಾಮ ಈ ಎರಡನೆಯ ವಿಮಾನ ಸಾಕಾರವಾಯಿತು ಎಂದು ಅಲ್ಲಿ ಸಿಕ್ಕಿ ಕೊಂಡವರು ಹೇಳಿದ್ದಾರೆ.

ಸುಬ್ರಮಣ್ಯ ಹೆಬ್ಬಾಗಿಲು, ಜಂತಿ ಕಾರ್ಯದರ್ಶಿ, ಐ.ಸಿ ಬಿ.ಎಫ಼್, ಶ್ರೀ ಮಹೇಶ್ ಗೌಡ, ಉಪಾಧ್ಯಕ್ಷರು, ಐ.ಸಿ.ಬಿ.ಎಫ಼್ ಮತ್ತು  ನಾಗೇಶ್ ರಾಯರು, ಅಧ್ಯಕ್ಷರು, ಕರ್ನಾಟಕ ಸಂಘ ಕತಾರ್, ಮತ್ತಿತರ ಸೇವಾಕರ್ತರ ಅವಿರತ ಪರಿಶ್ರಮದಿಂದ ನೂರಾರು ಜನರ ಕೂಗಿಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿ, ಪ್ರತ್ಯೇಕ ವಿಮಾನದ ವ್ಯವಸ್ಥೆ ಮಾಡಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.

ಜೂನ್ 15, 2020, ಸೋಮವಾರ ಮುಂಜಾನೆ 11.45 ಕ್ಕೆ, 180  ಜನರು ಹಾಗು 6 ಶಿಶುಗಳನ್ನು ಕತಾರಿನ ’ಹಮಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ದಿಂದ ಸಕಲ ಸಿದ್ಧತೆಗಳೊಂದಿಗೆ, ಅಂದರೆ ಕೈಗೆ ರಕ್ಷಣೆ, ಮುಖಕ್ಕೆ ಅಡ್ಡಲಾಗಿ ಪಾರದರ್ಶಕ ಕವಚ, ಇವುಗಳೊಂದಿಗೆ ಬೀಲ್ಕೊಡುಗೆ ನೀಡಲಾಯಿತು. ಪ್ರಯಾಣಿಕರು ಕರೋನಾ ಮಹಾಮಾರಿಯನ್ನು ತಡೆಗಟ್ಟಲು ಕೈಗವಸು ಹಾಗೂ ಮುಖ ಕವಚಗಳನ್ನು ಧರಿಸಿದ್ಧರು. ’ಗೋ ಏರ್’ ಸಂಸ್ಥೆಯ ವಿಮಾನವನ್ನು ಬಾಡಿಗೆಗೆ ಪಡೆದ ಕತಾರ್ ಕರ್ನಾಟಕ ಸಂಘವು, ಕತಾರಿನ ಇತರೆ ಕರ್ನಾಟಕ ಮೂಲದ ಸಂಸ್ಥೆಗಳ ಸಹಕಾರದೊಂದಿಗೆ, ಹಾಗೂ ಐ.ಸಿ.ಬಿ.ಎಫ಼್ (ಭಾರತೀಯ ಸಮುದಾಯ ಹಿತೈಷಿ ವೇದಿಕೆ) ಮತ್ತು ಕತಾರಿನ ಭಾರತೀಯ ರಾಯಭಾರಿ ಕಚೇರಿಯ ಸಹಯೋಗದೊಂದಿಗೆ, ಈ ಮಹತ್ತರ ಕಾರ್ಯವನ್ನು ಕೈಗೊಳ್ಳಲಾಯಿತು ಎಂದು ಸಂಘಟಕರು ಹೇಳಿದ್ದಾರೆ .

qutar ಕತಾರಿನಿಂದ ಪ್ರಯಾಣಿಸುವ ಮುನ್ನಾ, ಬೆಂಗಳೂರಿಗೆ ತಲುಪಿದ ಮೇಲೆ ಪಾಲಿಸಬೇಕಾದ ಸೂಚನೆಗಳನ್ನು ನಿರ್ದೇಶಾನುಸಾರ ಒಪ್ಪಿಕೊಂಡು, ಸೂಕ್ತ ಪತ್ರಗಳಿಗೆ ಯಾವುದೇ ಆಕ್ಷೇಪವಿಲ್ಲದೆ, ಹಸ್ತಾಕ್ಷರ ನೀಡಿ ಅನುಮೋದಿಸಿದ್ದರು. ಬೇರ್ಪಡಿಸುವ ಕಾಯ್ದೆ, ಕಾಲಾವಕಾಶ, ಅದರ ಸ್ಥಳ ಸವಲತ್ತುಗಳೆಲ್ಲವನ್ನು ಮುಂಚಿತವಾಗಿ ಅಂಗೀಕರಿಸಿದ್ದರು. ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿಯಮಾನುಸಾರ ಎಲ್ಲಾ ಕಾಗದ ಪತ್ರಗಳಿಗೆ ಸಹಿ ಹಾಕಿ ಕತಾರಿನ ಕನ್ನಡಿಗರು ಸ್ವೀಕರಿಸಿದ್ದರು ಎಂದು ಹೇಳಿದ್ದಾರೆ .

ಈ ಪ್ರತ್ಯೇಕ ವಿಶೇಷ ವಿಮಾನವನ್ನು ನನಸಾಗಿಸಲು ತಮ್ಮ ಅಮೂಲ್ಯವಾದ ಸಮಯ, ಪರಿಶ್ರಮ ಹಾಗೂ ಬೆಲೆಕಟ್ಟಲಾಗದ ಕೊಡುಗೆಯನ್ನು ನೀಡಿರುವ ರವಿಕುಮಾರ್, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಕಾರ್ತಿಕ್. ಕೆ.ಆರ್. ವಿಶೇಷ ಅಧಿಕಾರಿ, ಕರ್ನಾಟಕ ರಾಜ್ಯ ಸರಕಾರ,  ಶ್ರೀಮತಿ ಮೀನಾ ನಾಗರಾಜ್, ಐ.ಎ.ಎಸ್ ಅಧಿಕಾರಿ, ಪ್ರತ್ಯಾವರ್ತನ ಚಟುವಟಿಕೆಗಳ ನೋಡಲ್ ಅಧಿಕಾರಿಣಿ, ಶ್ರೀಮತಿ ದೀಪ್ತಿ, ವಿದೇಶಿ ಮಂತ್ರಾಲಯ, ನವ ದೆಹಲಿ ಹಾಗೂ ಕತಾರಿನ ಪ್ರಧಾನ ವಾಣಿಜ್ಯ ದೂತರು,  ಯು.ಟಿ.ಖಾದರ್, ಎಂ.ಎಲ್.ಎ,ನಿರ್ದೇಶಕರು, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ,  ಬೆಂಗಳೂರು ನಗರ ಜಿಲ್ಲಾ ಆಯುಕ್ತರು ಮತ್ತು ಇವರುಗಳಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸಿದೆ, ಮಾನ್ಯ  ಪಿ. ಕುಮರನ್, ಕತಾರ್ ದೇಶಕ್ಕೆ ಭಾರತೀಯ ರಾಯಭಾರಿಗಳು, ಬಾಬುರಾಜನ್, ಅಧ್ಯಕ್ಷರು, ಐ.ಸಿ.ಬಿ.ಎಫ಼್, ಬಿ.ವೈ. ರಾಘವೇಂದ್ರ, ಸಂಸತ್ತಿನ ಸದಸ್ಯರು, ಶಿವಮೊಗ್ಗ ಕ್ಷೇತ್ರ ಇವರೆಲ್ಲರೂ ಅರ್ಪಿಸಿದ ಮಾನವೀಯತೆ, ಹಾಗೂ ಮನುಷ್ಯತ್ವದ ಮೌಲ್ಯಕ್ಕೆ ತೋರಿದ ಗೌರವಕ್ಕೆ ವಂದನೆ ಗಳನ್ನು ಸಂಘಟಕರು ಸಲ್ಲಿಸಿದ್ದಾರೆ.

ಕತಾರಿನಿಂದ ಬೆಂಗಳೂರು ಹಾಗು ಮಂಗಳೂರಿಗೆ ಹೆಚ್ಚುವರಿ ವಿಮಾನ ಸೇವೆಯನ್ನು ಯಾಚಿಸಿ ಪತ್ರ

Sunday, June 7th, 2020
Share

hakki-pikki-dubaiಕತಾರ್  :  ಕರೋನಾ ಮಹಾಮಾರಿಯ ತಾಂಡವ ಕತಾರಿನಲ್ಲಿ ಇನ್ನೂ ಹೆಚ್ಚುತ್ತಿರುವ ಕಾರಣ, ಹೆಚ್ಚಿನ ಪ್ರಮಾಣದಲ್ಲಿ ಕನ್ನಡಿಗರು ಕೆಲಸ ಕಳೆದುಕೊಂಡು, ಅನ್ನಾಹಾರಗಳಿಗೆ ಕಷ್ಟಪಡುತ್ತಿರುವರು, ಕೆಲವರ ಕುಟುಂಬದ ಸದಸ್ಯರು ಕರ್ನಾಟಕದಲ್ಲಿ ಕಾಲವಾಗಿ ಹೋಗಿರುವರು, ಅವರು ಹಿಂತಿರುಗಲು ತುದಿಗಾಲಿನಲ್ಲಿರುವರು, 6 ಜನ ಹಕ್ಕಿ-ಪಿಕ್ಕಿಗಳನ್ನು ಹಿಂದಕ್ಕೆ ಕಳುಹಿಸಬೇಕಾಗಿದೆ, ಕೆಲವರಿಗೆ ಅನಾರೋಗ್ಯದ ಕಾರಣ ಮಾತೃಭೂಮಿಗೆ ಹಿಂತಿರುಗಬೇಕಾಗಿದೆ, ಮತ್ತು ಹಲವರು ನಿರಾಶ್ರಿತರಾಗಿ ಬೇರೆ ದಾರಿ ಕಾಣದೆ ತಾಯ್ನಾಡಿಗೆ ಹೋಗಲು ಚಡಪಡಿಸುತ್ತಿರುವರು. ದಿನೇ ದಿನೇ ಇಂತಹವರ ಸಂಖ್ಯೆ ಹೆಚ್ಚುತ್ತಿದೆ ಹಾಗೂ ಪರಿಸ್ಥಿತಿ ಗಂಭೀರವಾಗುತ್ತಿದೆ ಎಂದು ಕನ್ನಡಿಗರ ಸಂಸ್ಥೆ ಭಾರತ ಸಮುದಾಯ ಹಿತೈಷಿ ವೇದಿಕೆ ಕೇಳಿಕೊಂಡಿದೆ.

ಭಾರತ ಸರಕಾರದಲ್ಲಿ ಕನ್ನಡಿಗರಾದ ಶ್ರೀ ಸದಾನಂದಗೌಡ, ಕೇಂದ್ರ ಮಂತ್ರಿಗಳು – ರಾಸಾಯನ ಹಾಗು ಗೊಬ್ಬರ ಮಂತ್ರಾಲಯ, ಮತ್ತು ಶ್ರೀ ಸುರೇಶ ಅಂಗಡಿ, ರಾಜ್ಯ ಮಂತ್ರಿಗಳು – ರೈಲ್ವೇ ಮಂತ್ರಾಲಯ, ಇವರುಗಳ ಸಹಕಾರ ಸಹಯೋಗದಿಂದ, ಮತ್ತು ಕರ್ನಾಟಕ ಸರಕಾರದ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್. ಎಡಿಯೂರಪ್ಪ, ಶ್ರೀ ನಳಿನ್ ಕುಮಾರ್ ಕಟಿಲ್, ಅಧ್ಯಕ್ಷರು – ಭಾರತೀಯ ಜನತಾ ಪಾರ್ಟಿ, ಕರ್ನಾಟಕ ರಾಜ್ಯ, ಹಾಗು ಶ್ರೀ ಸಿ.ಟಿ. ರವಿ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಸಚಿವರು, ಕರ್ನಾಟಕ ರಾಜ್ಯ ಸರಕಾರ, ಇವರುಗಳಿಗೆ ಕರ್ನಾಟಕ ಸಂಘ ಕತಾರ್ ಹಾಗು ಕರ್ನಾಟಕ ಮೂಲದ ಇತರ ಸಹೋದರ ಸಂಸ್ಥೆಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕನ್ನಡಿಗರನ್ನು ಕತಾರಿನಿಂದ ಮಾತೃಭೂಮಿಗೆ ಹಿಂತಿರುಗಲು ವಿಮಾನದ ವ್ಯವಸ್ಥೆ ಮಾಡುವಂತೆ ಕೋರಿಕೊಳ್ಳುತ್ತಿದೆ. ಇದರಿಂದ ಬಹು ದೊಡ್ಡ ಉಪಕಾರವಾಗುವುದೆಂದು ಪುನರುಚ್ಚರಿಸುತ್ತಾ, ಮನವಿ ಸಲ್ಲಿಸಲಾಗುತ್ತಿದೆ. ಹಿಂತಿರುಗುವವರು ನಿಯಮಾನುಸಾರ ಕರೋನಾ ಸಂಬಂಧಿಸಿದಂತೆ ಸರಕಾರದ ಸೂಚನೆಗಳನ್ನು ಪಾಲಿಸುವವರು. ’ಭಾರತ ಸಮುದಾಯ ಹಿತೈಷಿ ವೇದಿಕೆ’ಯ (ಐ.ಸಿ.ಬಿ.ಎಫ಼್) ಕರ್ನಾಟಕ ಪ್ರತಿನಿಧಿಗಳಾದ ಶ್ರೀ ಮಹೇಶ್ ಗೌಡ, ಉಪಾಧ್ಯಕ್ಷರು, ಐ.ಸಿ.ಬಿ.ಎಫ಼್ ಮತ್ತು ಶ್ರೀ ಸುಬ್ರಮಣ್ಯ ಹೆಬ್ಬಾಗಿಲು, ಜಂಟಿ ಕಾರ್ಯದರ್ಶಿ, ಐ.ಸಿ.ಬಿ.ಎಫ಼್, ಮತ್ತು ಕರ್ನಾಟಕ ಸಂಘ ಕತಾರಿನ ಅಧ್ಯಕ್ಷರಾದ ಶ್ರೀ ನಾಗೇಶ್ ರಾಯರು, ಕತಾರಿನಲ್ಲಿರುವ ಕನ್ನಡಿಗರನ್ನು ಸಂತೈಸುತ್ತಾ, ಅವರ ಹಾರೈಕೆ ಮಾಡುತ್ತಿರುವವರು, ತಮಗೆ ಸಾಧ್ಯವಾದ ಸಹಾಯವನ್ನು ಮಾಡುತ್ತಿರುವರು. ಇವರುಗಳ ವಿಮಾನ ಸೇವೆಗಾಗಿ ಪರಿಶ್ರಮಿಸುತ್ತಿರುವವರು.

hakki-pikki-dubaiಕತಾರಿನ ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಭಾರತೀಯ ರಾಯಭಾರಿ ಕಚೇರಿಯು ಐ.ಸಿ.ಬಿ.ಎಫ಼್ ಮೂಲಕ ದಕ್ಷಿಣ ಭಾರತದ ರಾಜ್ಯಗಳ ರಾಜಧಾನಿಗಳಿಗೆ ವಿಶೇಷ ವಿಮಾನಗಳನ್ನು ನಿಗದಿಪಡಿಸಲಾಗುತ್ತಿದೆ. ವಿಶೇಷ ವಿಮಾನಕ್ಕೆ ಬೇಕಾದ ಕಾಗದ ಪತ್ರಗಳು, ಅನುಮತಿ-ಪರವಾನಿಗೆಗಳನ್ನು ಶ್ರೀ ಮಹೇಶ್ ಗೌಡ ಮತ್ತು ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಅವರು ಪ್ರತ್ಯೇಕವಾಗಿ ವ್ಯವಸ್ಥೆ ಮಾಡುತ್ತಿರುವರು.

ಕೊಲ್ಲಿದೇಶವಾದ ಕತಾರಿನಲ್ಲಿರುವ ಕನ್ನಡಿಗರಿಗೆ, ಭಾರತ ಸರಕಾರ ಹಾಗು ಕರ್ನಾಟಕ ಸರಕಾರವು ಮತ್ತೆ ತಮ್ಮ ವಿಶಾಲ ಹೃದಯದಿಂದ, ಅಭಯ ಹಸ್ತವನ್ನು ನೀಡಿ ಸಹಾಯ ಮಾಡಿ, ಬೆಂಗಳೂರಿಗೆ ಮತ್ತು ಮಂಗಳೂರಿಗೆ ವಿಮಾನ ಸೇವೆಯನ್ನು ವ್ಯವಸ್ಥೆ ಮಾಡುವುದೆಂದು ನಂಬಿ, ಅದೇ ವಿಶ್ವಾಸ, ಆಸೆ ಹೊತ್ತು ಮತ್ತೊಮ್ಮೆ ಈ ಮೂಲಕ ಕೋರಿಕೊಳ್ಳಲಾಗುತ್ತಿದೆ ಎಂದು  ಕತಾರಿನಲ್ಲಿರುವ ಐ.ಸಿ.ಬಿ.ಎಫ಼್ (ಭಾರತೀಯ ಸಮುದಾಯ ಹಿತೈಷಿ ಸಮಿತಿ) ಸಂಸ್ಥೆಯ ಪ್ರತಿನಿಧಿ ಸುಬ್ರಮಣ್ಯ ಹೆಬ್ಬಾಗಿಲು  ಕೊಂಡಿದ್ದಾರೆ.

ಜೊತೆಗೆ  ಕತಾರಿನಿಂದ ಕನ್ನಡಿಗರ ಆರ್ತನಾದವನ್ನು ಕೇಳಿ, ಸ್ಪಂದಿಸಿದ ಭಾರತ ಹಾಗು ಕರ್ನಾಟಕ ಸರಕಾರವು, ದಿನಾಂಕ 22-ಮೇ-2020 ರಂದು “ಒಂದೇ ಭಾರತ ನಿಯೋಗ”ದ ಅಡಿಯಲ್ಲಿ ದೋಹಾದಿಂದ ಬೆಂಗಳೂರಿಗೆ ಪ್ರತ್ಯೇಕ ವಿಮಾನವನ್ನು ನಿಗದಿಪಡಿಸಿ ಹಾರಲು ವ್ಯವಸ್ಥೆ ಮಾಡಿದುದಕ್ಕೆ ಅನಂತಾನಂತ ವಂದನೆಗಳನ್ನು ಸಲ್ಲಿಸಿದ್ದಾರೆ.

ಭೂಗತ ಪಾತಕಿ ದಾವೂದ್‌ ಹಾಗೂ ಆತನ ಪತ್ನಿಗೂ ಕೋವಿಡ್ ಸೋಂಕು

Saturday, June 6th, 2020
Share

Dawood-Ibrahimಹೊಸದಿಲ್ಲಿ: ಭಾರತದ ಮೋಸ್ಟ್‌ ವಾಂಟೆಡ್‌ ಭೂಗತ ಪಾತಕಿ 1993ರ ಮುಂಬಯಿ ಸ್ಫೋಟದ ರೂವಾರಿ,  ದಾವೂದ್‌ ಇಬ್ರಾಹಿಂ ಮತ್ತು ಆತನ ಪತ್ನಿ ಜುಬಿನಾ ಜೈರಿನ್‌ರನ್ನೂ ಕೋವಿಡ್ ಸೋಂಕು ತಗುಲಿದೆ  ಎಂದು ಗುಪ್ತಚರ ಮೂಲ  ಮತ್ತು ಮಾಧ್ಯಮಗಳು ವರದಿ ಮಾಡಿವೆ.

ದಾವೂದ್‌ ತನ್ನಲ್ಲಿಲ್ಲ ಎಂದು ಹೇಳುತ್ತಲೇ ಬಂದಿದ್ದ ಪಾಕಿಸ್ಥಾನವು ಈಗ ಕೋವಿಡ್ ಪೀಡಿತ ಪಾತಕಿ ಮತ್ತು ಆತನ ಪತ್ನಿಗೆ ಕದ್ದುಮುಚ್ಚಿ ಚಿಕಿತ್ಸೆ ನೀಡುತ್ತಿದೆ. ಕರಾಚಿಯ ಮಿಲಿಟರಿ ಆಸ್ಪತ್ರೆಯಲ್ಲಿ ಆತ ಇದ್ದಾನೆ ಎಂಬ ಮಾಹಿತಿ ಹೊರಬಿದ್ದಿದೆ.

ಐಷಾರಾಮಿ ಭದ್ರ ಕೋಟೆಯೊಳಗಿರುವ ದಾವೂದ್‌ ದಂಪತಿಗೆ ಸೋಂಕು ತಗುಲಿದ್ದು ಹೇಗೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಆತನಿಗೆ ಕೋವಿಡ್ ದೃಢಪಡುತ್ತಿದ್ದಂತೆಯೇ ಅಂಗರಕ್ಷಕರಿಗೆ ಆತಂಕ ಆರಂಭವಾಗಿದೆ. ಮಕ್ಕಳು, ಅಂಗರಕ್ಷಕರು, ಇತರ ಸಿಬಂದಿ, ಕೆಲಸದಾಳುಗಳಿಗೂ ಕೋವಿಡ್ ಪರೀಕ್ಷೆ ನಡೆಸಲಾಗಿದೆ ಎನ್ನಲಾಗಿದೆ.

ದಾವೂದ್‌ಗೆ ಕೋವಿಡ್ ತಗುಲಿದೆ ಎನ್ನಲಾದ ಸುದ್ದಿಯನ್ನು ಆತನ ಸೋದರ, ಕರಾಚಿಯಲ್ಲಿ ಡಿ ಕಂಪೆನಿಯನ್ನು ಮುನ್ನಡೆಸುತ್ತಿರುವ ಅನೀಸ್‌ ಇಬ್ರಾಹಿಂ ಅಲ್ಲಗಳೆದಿದ್ದಾನೆ.

‘ಭಾಯ್‌ (ದಾವೂದ್‌) ಚೆನ್ನಾಗಿದ್ದಾನೆ. ಛೋಟಾ ಶಕೀಲ್‌ ಕೂಡ ಆರಾಮವಾಗಿದ್ದಾನೆ. ಯಾರಿಗೂ ಕೋವಿಡ್ ತಗುಲಿಲ್ಲ. ಭಾಯ್‌ ಕುಟುಂಬದಲ್ಲಿ ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ’ ಎಂದು ಅನೀಸ್‌ ಹೇಳಿದ್ದಾನೆ.

ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವ ದಾವೂದ್‌ಗೆ ಸೋಂಕು ತಗುಲಿರುವ ವಿಚಾರ ಗುಪ್ತಚರ ಮೂಲಗಳಿಂದ ಬಹಿರಂಗವಾದರೂ ಪಾಕ್‌ ಮಾತ್ರ ಈ ಬಗ್ಗೆ ತುಟಿ ಬಿಚ್ಚಿಲ್ಲ. 30 ವರ್ಷಗಳಿಂದ ದಾವೂದ್‌ನನ್ನು ರಹಸ್ಯವಾಗಿ ಕಾಪಾಡಿಕೊಂಡು ಬಂದಿರುವ ಅದು ಕೋವಿಡ್ ವಿಚಾರದಲ್ಲೂ ಬಾಯಿ ಬಿಟ್ಟಿಲ್ಲ.

ಪಾಕಿಸ್ಥಾನದಲ್ಲಿ ಈಗಾಗಲೇ 90 ಸಾವಿರ ಮಂದಿಗೆ ಸೋಂಕು ದೃಢಪಟ್ಟಿದ್ದು, 1,850ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ಕೋವಿಡ್- 19 ರೋಗಿಗಳಿಗೆ ಚಿಕಿತ್ಸೆಗಾಗಿ ಅಮೆರಿಕಾದಿಂದ ಭಾರತಕ್ಕೆ 100 ವೆಂಟಿಲೇಟರ್

Wednesday, June 3rd, 2020
Share

modi-trumpವಾಷಿಂಗ್ಟನ್ :  ಮುಂದಿನ ವಾರ ಕೋವಿಡ್- 19 ರೋಗಿಗಳಿಗೆ ಚಿಕಿತ್ಸೆಗಾಗಿ ಅಮೆರಿಕಾದಿಂದ ಭಾರತಕ್ಕೆ ಮೊದಲ ಹಂತದಲ್ಲಿ 100 ವೆಂಟಿಲೇಟರ್ ಗಳನ್ನು ರವಾನಿಸಲಾಗುವುದು, ಕಾನ್ಫೆರೆನ್ಸ್ ಕಾಲ್ ನಲ್ಲಿ ಡೊನಾಲ್ಡ್ ಟ್ರಂಪ್ ಮೋದಿಗೆ ಈ ವಿಷಯವನ್ನು ತಿಳಿಸಿದ್ದಾರೆ ಎಂದು ಶ್ವೇತ ಭವನ ಹೇಳಿದೆ.

ಮಂಗಳವಾರ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದು, ಜಿ-7 ಶೃಂಗಸಭೆ, ಕೋವಿಡ್-19 ನಿರ್ವಹಣೆ, ಪ್ರಾದೇಶಿಕ ಭದ್ರತೆ ವಿಚಾರಗಳ ಕುರಿತಂತೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಮುಂದಿನ ವಾರ ಭಾರತಕ್ಕೆ ಮೊದಲ ಹಂತದಲ್ಲಿ 100 ವೆಂಟಿಲೇಟರ್ ಗಳ ಕೊಡುಗೆಯನ್ನು ಡೊನಾಲ್ಡ್ ಟ್ರಂಪ್ ಸಂತೋಷದಿಂದ ಘೋಷಿಸಿದ್ದಾರೆ ಎಂದು ವೈಟ್ ಹೌಸ್ ತಿಳಿಸಿದೆ.

ಕೋವಿಡ್-19 ಪೀಡಿತ ರಾಷ್ಟ್ರಗಳ ಪೈಕಿಯಲ್ಲಿ ಅಮೆರಿಕಾ, ಬ್ರೆಜಿಲ್, ರಷ್ಯಾ, ಇಂಗ್ಲೆಡ್ , ಸ್ಪೇನ್ ಮತ್ತು ಇಟಲಿ ನಂತರ ಇದೀಗ ಭಾರತ ಏಳನೇ ಸ್ಥಾನದಲ್ಲಿದೆ. ದೇಶದಲ್ಲಿ ಕೋವಿಡ್-19 ಸೋಂಕಿನಿಂದ 5,815 ಜನರು ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ ಎರಡು ಲಕ್ಷಕ್ಕೆ ಏರಿಕೆ ಆಗಿದೆ ಎಂದು ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.

ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ವೆಂಟಿಲೇಟರ್ ಪ್ರಮುಖ ವೈದ್ಯಕೀಯ ಸಲಕರಣೆಯಾಗಿದೆ. ಕೋವಿಡ್ 19ನಿಂದಾಗಿ ತೀವ್ರ ರೀತಿಯ ಅನಾರೋಗ್ಯಕ್ಕೊಳಾಗಾದ ಪ್ರತಿ 5 ಜನರ ಪೈಕಿ ಒಬ್ಬರಿಗೆ ಉಸಿರಾಟದ ಸಮಸ್ಯೆ ಕಂಡಬರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, ಕಾಯಿಲೆಯಿಂದ ಶ್ವಾಸಕೋಶಕ್ಕೆ ತೊಂದರೆಯಾದಾಗ ಉಸಿರಾಟ ಪ್ರಕ್ರಿಯೆಗೆ ವೆಂಟಿಲೇಟರ್ ನೆರವು ನೀಡಲಿವೆ.

ಟ್ರಂಪ್ ಜೊತೆಗಿನ ಮಾತುಕತೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ, ಮತ್ತಿತರ ವಿಚಾರಗಳ ಬಗ್ಗೆ ಮಾತುಕತೆ ನಡೆಸಿರುವುದಾಗಿ ಮಂಗಳವಾರ ಪ್ರಧಾನಿ ಮೋದಿ ಸರಣಿ ಟ್ವೀಟ್ ಮಾಡಿದ್ದರು.

ಫೆಬ್ರವರಿ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಿದದ್ದು ಹಾಗೂ ಭಾರತ ಹಾಗೂ ಅಮೆರಿಕಾ ನಡುವಣ ಒಪ್ಪಂದಗಳನ್ನು ಕೂಡಾ ಟ್ರಂಪ್ ನೆನಪು ಮಾಡಿಕೊಂಡಿರುವುದಾಗಿ ಪ್ರಧಾನಮಂತ್ರಿ ಕಾರ್ಯಾಲಯದ ಟ್ವೀಟರ್ ನಲ್ಲಿ ಹಾಕಲಾಗಿದೆ.