ರನ್​ವೇಯಲ್ಲಿ ವಿಮಾನ ಜಾರಿದ ಪರಿಣಾಮ : ಮೂರು ತುಂಡಾದ ವಿಮಾನ; ಮೂವರು ಪ್ರಯಾಣಿಕರ ದುರ್ಮರಣ

Thursday, February 6th, 2020
Share

vimana

ಇಸ್ತಾನ್ಬುಲ್ : ಲ್ಯಾಂಡಿಂಗ್ ಮಾಡುವ ವೇಳೆ ಕೆಟ್ಟ ಹವಾಮಾನದಿಂದಾಗಿ ರನ್ವೇಯಲ್ಲಿ ವಿಮಾನ ಜಾರಿದ ಪರಿಣಾಮ ಮೂವರು ಸಾವನ್ನಪ್ಪಿದ್ದು, 179 ಜನ ಗಾಯಗೊಂಡಿರುವ ಘಟನೆ ಟರ್ಕಿಯಲ್ಲಿ ನಡೆದಿದೆ,

ವಿಮಾನ ಮೂರು ತುಂಡಾಗಿದ್ದು, ಜನರು ಪ್ರಾಣರಕ್ಷಣೆಗಾಗಿ ವಿಮಾನದ ಮುರಿದ ರೆಕ್ಕೆ ಸಹಾಯದಿಂದ ಮೇಲೆ ಬಂದಿದ್ದಾರೆ. ಇಸ್ತಾನ್ಬುಲ್ನ ಸಬಿಹಾ ಗೊಕ್ಸ್ ಹಾಗೂ ಏಜಿಯನ್ ಪೋರ್ಟ್ ಸಿಟಿ ನಡುವೆ ಹಾರಾಟ ನಡೆಸುತ್ತಿದ್ದ ಬೋಯಿಂಗ್ 737 ವಿಮಾನ ಅಪಘಾತಗೊಂಡಿದೆ.

ಇಸ್ತಾನ್ಬುಲ್ನಲ್ಲಿ ಅತಿಯಾದ ಗಾಳಿ ಮತ್ತು ಮಳೆಯಿಂದಾಗಿ ಈ ಅನಾಹುತ ನಡೆದಿದೆ. ಅಪಘಾತ ನಡೆದಾಗ ಪ್ರಯಾಣಿಕರು ಕೆಲವರು ತಾವೇ ವಿಮಾನದಿಂದ ಹೊರ ಬರುವ ಪ್ರಯತ್ನ ನಡೆಸಿದ್ದಾರೆ. ಎಂದು ಇಲ್ಲಿನ ಸಾರಿಗೆ ಸಚಿವರು ತಿಳಿಸಿದ್ದಾರೆ.

ವಿಮಾನದಲ್ಲಿ 177 ಮಂದಿ ಪ್ರಯಾಣಿಕರು ಹಾಗೂ 6 ಮಂದಿ ಸಿಬ್ಬಂದಿಗಳಿದ್ದರು. ಇದರಲ್ಲಿ 12 ಮಂದಿ ಮಕ್ಕಳು ಇದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆಟ್ಟ ಹವಾಮಾನದಿಂದ ಮಂದ ಬೆಳಕಿನಿಂದಾಗಿ ಈ ಅನಾಹುತ ಸಂಭವಿಸಿದೆ. ಇನ್ನು ಈ ಅಪಘಾತದ ಸಂಪೂರ್ಣ ದೃಶ್ಯ ಕೂಡ ಸೆರೆಯಾಗಿದೆ.

 

ಮಾರಕ ಕರೊನಾ ಸೋಂಕಿಗೆ 490 ಜನ ಬಲಿ : 24 ಸಾವಿರಕ್ಕೂ ಅಧಿಕ ಜನರಿಗೆ ಸೋಂಕು ದೃಢ

Thursday, February 6th, 2020
Share

virus

ಬೀಜಿಂಗ್ : ಮಾರಕ ಕರೊನಾ ಸೋಂಕಿಗೆ ಚೀನಾದಲ್ಲಿ ಬಲಿಯಾದವರ ಸಂಖ್ಯೆ 490ಕ್ಕೆ ಏರಿದೆ. ಸೋಂಕಿನ ಕೇಂದ್ರ ಬಿಂದು ವುಹಾನ್ನಲ್ಲಿ ಸೋಂಕಿತರ ಸಂಖ್ಯೆಯಲ್ಲಿ 3,887 ಹೆಚ್ಚಳವಾಗಿದ್ದು, ಒಟ್ಟಾರೆ ಚೀನಾದಲ್ಲಿ 24,324 ಮಂದಿಗೆ ವೈರಸ್ ತಗುಲಿರುವುದು ದೃಢಪಟ್ಟಿದೆ. ಹಾಂಕಾಂಗ್ ಮತ್ತಿತರ ಕಡೆಗಳಲ್ಲಿ ಕರೊನಾ ವೈರಸ್ನಿಂದ ಆತಂಕ ಹೆಚ್ಚಿದೆ. ಈ ಮಧ್ಯೆ, ಜಪಾನ್ನ ಜಹಜಿನಲ್ಲಿ 10 ಮಂದಿಯಲ್ಲಿ ಮಾರಣಾಂತಿಕ ವೈರಸ್ ಕಾಣಿಸಿಕೊಂಡಿದೆ. ಈ ಮೂಲಕ ಜಪಾನ್ನಲ್ಲಿ ಸೋಂಕು ಪೀಡಿತರ ಸಂಖ್ಯೆ 33ಕ್ಕೆ ಏರಿದೆ. ಹಾಂಕಾಂಗ್ನಲ್ಲಿ ಸೋಂಕು ತಗುಲಿರುವ ನಾಲ್ಕು ಪ್ರಕರಣಗಳು ಪತ್ತೆಯಾಗಿದ್ದು, ಓರ್ವ ಸಾವನ್ನಪ್ಪಿದ್ದಾನೆ. ಫಿಲಿಪ್ಪೀನ್ಸ್ನಲ್ಲಿ 180 ಪ್ರಕರಣಗಳು ವರದಿಯಾಗಿದ್ದು, ಇಬ್ಬರು ಅಸುನೀಗಿದ್ದಾರೆ.

ತನ್ನ ಮೇಲೆ ಅತ್ಯಾಚಾರಗೈಯಲು ಮುಂದಾದ ಕಾಮುಕನಿಂದ ಬಚಾವಾಗಲು ಚೀನಿ ಮಹಿಳೆ ಕರೊನಾ ವೈರಸ್ ಅಸ್ತ್ರ ಬಳಸಿದ್ದಾಳೆ. ವುಹಾನ್ನಿಂದ ಸ್ವಲ್ಪವೇ ದೂರವಿರುವ ಪಿಂಗ್ಬಾ ಪಟ್ಟಣದಲ್ಲಿ ಈ ಪ್ರಕರಣ ನಡೆದಿದೆ. ಮನೆಯಲ್ಲಿ ಮಹಿಳೆ ಒಂಟಿಯಾಗಿದ್ದಾಗ ದುಷ್ಕರ್ವಿುಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದ. ‘ನಾನು ಈಗಷ್ಟೆ ವುಹಾನ್ನಿಂದ ಮರಳಿದ್ದೇನೆ. ನನಗೆ ಕರೊನಾ ವೈರಸ್ ತಗಲಿದ್ದು ಮನೆಯಲ್ಲಿ ಒಂಟಿಯಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ’ ಎಂದು ಯುವತಿ ಹೇಳಿದ್ದಾಳೆ. ಕೆಮ್ಮು ಬಂದಂತೆ ಆಕೆ ನಟಿಸಿದ್ದಾಳೆ. ಇದರಿಂದ ಹೆದರಿದ ದುಷ್ಕರ್ವಿು ಅಲ್ಲಿಂದ ಪರಾರಿಯಾದ.

ವುಹಾನ್ನಲ್ಲಿ ನವಜಾತ ಶಿಶುವಿಗೂ (ಜನಿಸಿ 30 ತಾಸು) ಮಾರಕ ಕರೊನಾ ವೈರಸ್ ತಗುಲಿದ್ದು, ಗರ್ಭಾವಸ್ಥೆ ಅಥವಾ ಜನಿಸಿದ ಕೆಲವು ತಾಸಿನಲ್ಲೇ ಸೋಂಕು ತಗುಲಿರುವ ಶಂಕೆಯನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ. ಹೆರಿಗೂ ಮುನ್ನ ನಡೆಸಿದ ತಪಾಸಣೆಯಲ್ಲಿ ತಾಯಿಯಲ್ಲಿ ವೈರಸ್ ದೃಢಪಟ್ಟಿತ್ತು. ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ತೆರೆದಿರುವ ಆಸ್ಪತ್ರೆಗಳಲ್ಲಿ ವಿಪರೀತ ಜನಸಂದಣಿ ಉಂಟಾಗಿದೆ. 10 ದಿನಗಳಲ್ಲಿ ನಿರ್ವಣವಾದ 1 ಸಾವಿರ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಮತ್ತು 1,500 ಹಾಸಿಗೆ ವ್ಯವಸ್ಥೆಯುಳ್ಳ ಆಸ್ಪತ್ರೆಗಳು ವೈರಸ್ ಶಂಕಿತರಿಂದ ತುಂಬಿ ಹೋಗಿವೆ. ಒಟ್ಟಾರೆ ತಾತ್ಕಾಲಿಕ ಆಸ್ಪತ್ರೆಗಳಲ್ಲಿ 3,400 ಜನರಿಗೆ ಚಿಕಿತ್ಸೆ ನೀಡಲಾಗಿದೆ.

 

ಹಾಲಿವುಡ್ ದಂತಕಥೆ ಕಿರ್ಕ್ ಡೌಗ್ಲಾಸ್ ನಿಧನ

Thursday, February 6th, 2020
Share

kirk

ನ್ಯೂಯಾರ್ಕ್ : ಹಾಲಿವುಡ್ ದಂತಕಥೆ ಕಿರ್ಕ್ ಡೌಗ್ಲಾಸ್ ಅವರು ನಿಧನರಾಗಿದ್ದಾರೆ. 103 ವರ್ಷದ ಕಿರ್ಕ್ ಡೌಗ್ಲಾಸ್ ಬುಧವಾರ ನಿಧನರಾಗಿದ್ದಾರೆ ಎಂದು ನಾನು ಮತ್ತು ನನ್ನ ಸಹೋದರರು ಅತ್ಯಂತ ನೋವಿನಿಂದ ಪ್ರಕಟಿಸುತ್ತೇವೆ ಎಂದು ಅವರ ಮಗ ಆಸ್ಕರ್ ಪ್ರಶಸ್ತಿ ವಿಜೇತ ನಟ ಮೈಕಲ್ ಡೌಗ್ಲಾಸ್ ಹೇಳಿಕೆ ನೀಡಿದ್ದಾರೆ.

ಹಾಲಿವುಡ್ ನ ಸುವರ್ಣಯುಗದ ಕಾಲದಲ್ಲಿ ಮೆರೆದಾಡಿದ್ದ ನಟ ಕಿರ್ಕ್ ಡೌಗ್ಲಾಸ್. ಸುಮಾರು ಏಳು ದಶಕಗಳ ಕಾಲ ಚಿತ್ರ ಜಗತ್ತಿನಲ್ಲಿ ಕಳೆದಿದ್ದ ಕಿರ್ಕ್ ಡೌಗ್ಲಾಸ್ 90ಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿದ್ದರು. 1950ರ ಮತ್ತು 60ರ ಅತೀ ದೊಡ್ಡ ಬಾಕ್ಸ್ ಆಫಿಸ್ ಹಿಟ್ ಗಳಾದ ಸ್ಪಾರ್ಟಕಸ್, ದಿ ವಿಕಿಂಗ್ಸ್ ಗಳಿಂದ ಕಿರ್ಕ್ ಡೌಗ್ಲಾಸ್ ಜನಪ್ರಿಯತೆಯ ತುತ್ತ ತುದಿಯನ್ನು ತಲುಪಿದ್ದರು.

ಕಿರ್ಕ್ ಅವರು ತುಂಬು ಜೀವನ ಜೀವಿಸಿದ್ದಾರೆ. ಮುಂದಿನ ಪೀಳಿಗೆಯೂ ಮೆಚ್ಚಿಕೊಳ್ಳುವಂತಹ ಚಿತ್ರಗಳ ಪರಂಪರೆಯನ್ನು ಉಳಿಸಿ ಹೋಗಿದ್ದಾರೆ. ಅಂತವರು ನನ್ನ ತಂದೆ ಎನ್ನಲು ನನಗೆ ಹೆಮ್ಮೆಯಿದೆ ಎಂದು ಮೈಕಲ್ ಹೇಳಿದ್ದಾರೆ.

 

ಟೆಕ್ಸಾಸ್ ನ ಎ & ಎಂ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಅಪರಿಚಿತರಿಂದ ಗುಂಡಿನ ದಾಳಿ: ಇಬ್ಬರು ಮಹಿಳೆಯರ ಸಾವು

Tuesday, February 4th, 2020
Share

america

ಅಮೆರಿಕಾ : ಟೆಕ್ಸಾಸ್ ನ ಎ & ಎಂ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿ, ಮಗುವೊಂದು ಗಾಯಗೊಂಡಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡ 2 ವರ್ಷದ ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ಟೆಕ್ಸಾಸ್ ಎ&ಎಂ ಪೊಲೀಸ್ ಅಧಿಕಾರಿ ಬ್ರಯಾನ್ ವಾಘನ್ ತಿಳಿಸಿದ್ದಾರೆ. ಮಹಿಳೆಯರು ಅಥವಾ ಮಗುವಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸಲಿಲ್ಲ ಎಂದು ವರದಿಯಾಗಿದೆ

ಬೆಳಿಗ್ಗೆ 10: 17ಕ್ಕೆ ವಿದ್ಯಾರ್ಥಿಯೊಬ್ಬ ಫೋನ್ ಕರೆ ಮಾಡಿ ಅಪರಿಚಿತರು ಗುಂಡಿನ ದಾಳಿ ನಡೆಸಿರುವ ಕುರಿತು ಮಾಹಿತಿ ನೀಡಿದ್ದು ಕೂಡಲೇ ಸ್ಥಳಕ್ಕಾಗಮಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಆದರೇ ಮೃತಪಟ್ಟವರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಅಥವಾ ಕಾಲೇಜಿನ ಸಿಬ್ಬಂದಿಯೇ ಎಂಬುದು ಧೃಡಪಟ್ಟಿಲ್ಲ ಎಂದು ತಿಳಿಸಿದ್ದಾರೆ.

ಆ ಮೂಲಕ ಇತ್ತೀಚಿನ ದಿನಗಳಲ್ಲಿ ಅಮೆರಿಕಾದಲ್ಲಿನ ಕಾಲೇಜು ಮತ್ತು ಫ್ರೌಡ ಶಾಲೆಗಳಲ್ಲಿ ನಡೆದ ಶೂಟೌಟ್ ಪ್ರಕರಣಗಳಲ್ಲಿ ಇದು ಒಂದೆನಿಸಿದೆ.

ಸದ್ಯ ಎ & ಎಂ-ಕಾಮರ್ಸ್ ವಿಶ್ವವಿದ್ಯಾಲಯದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು ಕಾಲೇಜಿನಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

 

ಅಬ್ದುಲ್ ಶಕೀಲ್ ದೇರಳಕಟ್ಟೆ ಮತ್ತು ಶ್ರೀಮತಿ ಸಂಸದ್ ಕುಂಜತ್ತಬೈಲ್ ಇವರಿಗೆ ಗೌರವ ಡಾಕ್ಟರೇಟ್ ಪ್ರದಾನ

Monday, February 3rd, 2020
Share

doctarate

ಥೈಲ್ಯಾಂಡ್ : ಯುನಿವರ್ಸಿಟಿ ಆಫ್ ಡಿಶ್ಟಂನ್ಸ್ ಲಾರ್ನಿಂಗ್ ಎಜ್ಯುಕೇಶನ್ ಆರ್ಜೇಂಟೈನಾ ಪ್ರಸಿದ್ಧಿಯ ಸೈಂಟ್ ಪಾವ್ಲ್’ಸ್ ಇಂಟರ್ನೇಶನಲ್ ಯುನಿವರ್ಸಿಟಿ (ಎಸ್ಪಿಐಯು) ಶೈಕ್ಷಣಿಕ ಸಂಸ್ಥೆಯು ವಾರ್ಷಿಕ ಅಂತರಾಷ್ಟ್ರೀಯ ಘಟಿಕೋತ್ಸವ ಸಮಾರಂಭ ಇಂದಿಲ್ಲಿ ಶನಿವಾರ ಸಂಜೆ ಥೈಲ್ಯಾಂಡ್ ರಾಷ್ಟ್ರದ ಸಿಲೋಮ್ ಇಲ್ಲಿನ ಹೊಟೇಲ್ ಹಾಲೀಡೇ ಇನ್ನ್ ಸಿಲೊಮ್ ಇದರ ಕ್ರಿಸ್ಟಲ್ ಬಾಲ್ರೂಂನ ಸಭಾಗೃಹದಲ್ಲಿ ಮಾಜಿ ವಿದೇಶಗಳ ಭಾರತೀಯ ರಾಯಭಾರಿ ಡಾ. ವಿ.ಬಿ ಸೋನಿ ಅಧ್ಯಕ್ಷತೆಯಲ್ಲಿ ನೆರವೇರಿತು.

ಘಟಿಕೋತ್ಸವದಲ್ಲಿ ಪಿ.ಎನ್ ಅಕಾಡೆಮಿ ಥೈಲ್ಯಾಂಡ್ ಇದರ ಮುಖ್ಯಸ್ಥ ಪಾವ್ಲ್ ಪಿ.ಸ್ರಿನರೂಲಾ ಮುಖ್ಯ ಅತಿಥಿಯಾಗಿ ಮತ್ತು ಗೌರವ ಅತಿಥಿಯಾಗಳಾಗಿ ಥೈಲ್ಯಾಂಡ್ ನ ಪ್ರತಿಷ್ಠಿತ ಶಿಕ್ಷಣತಜ್ಞೆ ಕೆ.ರೋನೆಲ್, ಪ್ರಾಂಶುಪಾಲ ಅಡೋಲ್ಫ್ ಪೆರಿ ಜರ್ಮನ್ ಮತ್ತು ಎಸ್ಪಿಐಯು ಇದರ ಭಾರತೀಯ ಪ್ರತಿನಿಧಿ ಡಾ| ಎಂ.ಬಿಸಾನ್ವಿ ಉಪಸ್ಥಿತರಿದ್ದು ಕರ್ನಾಟಕದ ಮಂಗಳೂರು ಮೂಲತಃ ವಿದೇಶಿ ಯುವ್ಯೋದ್ಯಮಿಯ ಸಾಧನಾಶೀಲತೆ ಮತ್ತು ಸಮಾಜ ಸೇವೆ ಗುರುತಿಸಿ ಯುನೈಟೆಡ್ ರೆಡಿಮಿಕ್ಸ್ ಕಾಂಕ್ರೀಟ್ ಇಂಡಿಯಾ ಸಂಸ್ಥೆಯ ನಿರ್ದೇಶಕ ಅನಿವಾಸಿ ಭಾರತೀಯ ಉದ್ಯಮಿ, ಕೆಪಿಸಿಸಿ ಎನ್‌ಆರ್‌ಐ ಸೌದಿ ಅರೇಬಿಯಾ ಘಟಕದ ಅಧ್ಯಕ್ಷ ಅಬ್ದುಲ್ ಶಕೀಲ್ ದೇರಳಕಟ್ಟೆ (ರೆಂಜಡಿ) ಮತ್ತು ಅತ್ಯಮೂಲ್ಯ ಸಮಾಜ ಸೇವೆ ಪರಿಗಣಿಸಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಸಮಾಜ ಸೇವಕಿ ಶ್ರೀಮತಿ ಸಂಸದ್ ಕುಂಜತ್ತಬೈಲ್ (ಮಂಗಳೂರು) ಇವರಿಗೆ ಗೌರವ ಡಾಕ್ಟರೇಟ್ ಸನದು ಪ್ರದಾನಿಸಿ ಅಭಿನಂದಿಸಿದರು.

ಈ ಶುಭಾವಸರದಲ್ಲಿ ಝೈನೂದ್ಧೀನ್ ಮುನ್ನೂರು, ಸನದ್ ಅಬ್ದುಲ್ ರಹಮಾನ್, ಮಹಮ್ಮದ್ ಇಕ್ಬಾಲ್, ಮಹಮ್ಮದ್ ಹರ್ಷದ್ ಗಣ್ಯರು ಉಪಸ್ಥಿತರಿದ್ದು ಪುರಸ್ಕೃತರಿಗೆ ಅಭಿನಂದಿಸಿದರು.

 

ಚೀನಾದಲ್ಲಿ ಮಾರಣಾಂತಿಕ ಕೊರೊನಾ ವೈರಸ್‍ಗೆ 170 ಮಂದಿ ಬಲಿ

Thursday, January 30th, 2020
Share

karona-viras

ಬೀಜಿಂಗ್ : ವಿಶ್ವಾದ್ಯಂತ ಕೊರೊನಾ ವೈರಸ್ ಭೀತಿ ಹೆಚ್ಚಾಗಿದ್ದು, ಚೀನಾದಲ್ಲಿ ಕಂಡುಬಂದಿರುವ ಮಾರಣಾಂತಿಕ ಕೊರೋನ್ ವೈರಸ್‍ಗೆ ಬಲಿಯಾದವರ ಸಂಖ್ಯೆ 170ಕ್ಕೆ ಏರಿದೆ. ದಿನೇ ದಿನೇ ಚೀನಾದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಈವರೆಗೆ 7,700 ಮಂದಿಗೆ ಸೋಂಕು ತಗುಲಿರುವುದು ಖಚಿತಗೊಂಡಿದೆ.

ಇತ್ತ ಭಾರತದಲ್ಲಿ ಸುಮಾರು 670 ಮಂದಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಇದರಲ್ಲಿ ಕೇರಳದಲ್ಲಿಯೇ ಅತಿ ಹೆಚ್ಚು ಅಂದರೆ 633 ಮಂದಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಇನ್ನು ದೆಹಲಿಯಲ್ಲಿ 3, ಪಂಜಾಬ್‍ನಲ್ಲಿ 16, ಹರ್ಯಾಣದಲ್ಲಿ 2, ಬಿಹಾರ್ ನಲ್ಲಿ 1, ಮಹಾರಾಷ್ಟ್ರದಲ್ಲಿ 6, ರಾಜಸ್ಥಾನದಲ್ಲಿ 1 ಹಾಗೂ ಕರ್ನಾಟದಲ್ಲಿ 4 ಕೊರೊನಾ ವೈರಸ್ ಸೋಂಕು ತಗುಲಿರುವ ಶಂಕಿತ ಪ್ರಕರಣಗಳು ವರದಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಸೋಂಕು ತಗುಲಿರುವ 7,700 ಮಂದಿಯಲ್ಲಿ ಸುಮಾರು 1,370 ಜನರ ಸ್ಥಿತಿ ಗಂಭೀರವಾಗಿದೆ. ಅಲ್ಲದೇ ಸುಮಾರು 12,167 ಜನರಿಗೆ ಕೊರೊನಾ ವೈರಸ್ ತಗುಲಿರುವುದಾಗಿ ಶಂಕೆ ವ್ಯಕ್ತವಾಗಿದೆ. ಬೀಜಿಂಗ್ ಮತ್ತು ಶಾಂಘೈನಲ್ಲಿ 100ಕ್ಕಿಂತ ಹೆಚ್ಚು ಮಂದಿಗೆ ಸೋಂಕು ತಗುಲಿರುವ ಮಾಹಿತಿ ಲಭ್ಯವಾಗಿದೆ.

ಚೀನಾದ ವುಹಾನ್ ಮತ್ತು ಹುಬೈ ಪ್ರಾಂತ್ಯದಲ್ಲಿ ಮೊದಲು ಈ ಕೊರೊನಾ ವೈರಸ್ ಪತ್ತೆಯಾಗಿತ್ತು. ಈ ಪ್ರದೇಶದಲ್ಲಿಯೇ ಸುಮಾರು 160 ಬಂದಿ ಕೊರೊನಾ ವೈರಸ್‍ಗೆ ಬಲಿಯಾಗಿದ್ದಾತೆ. ಚೀನಾದಲ್ಲಿ ಪತ್ತೆಯಾದ ಈ ವೈರಸ್ ವಿಶ್ವಾದ್ಯಂತ ಹರಡುತ್ತಿದೆ. ಸುಮಾರು 16 ರಾಷ್ಟ್ರದಲ್ಲಿ ಕೊರೊನಾ ವೈರಸ್ ಹರಡಿರುವುದು ವರದಿಯಾಗಿದೆ.

ಅಮೆರಿಕ, ಜಪಾನ್, ದಕ್ಷಿಣ ಕೊರಿಯಾ, ತೈಲ್ಯಾಂಡ್, ತೈವಾನ್, ಸಿಂಗಪೂರ್, ಮಲೇಷ್ಯಾ, ಆಸ್ಟ್ರೇಲಿಯಾ, ಫ್ರಾನ್ಸ್, ನೇಪಾಳ, ವಿಯೆಟ್ನಾಂ ಸೇರಿದಂತೆ 16 ದೇಶಗಳಲ್ಲಿ ಕೊರೊನಾ ವೈರಸ್ ತಗುಲಿರುವ ಪ್ರಕರಣಗಳು ವರದಿಯಾಗಿದೆ.

 

ತೀಯಾ ಸಮಾಜ ಯು. ಎ. ಇ. ಯ ವಾರ್ಷಿಕ ಮಹಾಸಭೆ ನೂತನ ಅಧ್ಯಕ್ಷರಾಗಿ ರಾಜೇಶ್ ಪಳ್ಳಿಕೆರೆ ಆಯ್ಕೆ

Tuesday, January 28th, 2020
Share

rajesh

ದುಬಾಯಿ : ತೀಯಾ ಸಮಾಜ ಯು. ಎ. ಇ. 2004ರಲ್ಲಿ ದುಬಾಯಿಯ ಜನಪ್ರಿಯ ಸಮಾಜ ಸೇವಕ ದಿ. ಉಮೇಶ್ ನಂತೂರು ಮತ್ತು ಶ್ರೀಮತಿ ಬಿಸಜಾಕ್ಷಿ ಎಂ. ಪಿ. ಯವರ ನೇತೃತ್ವದಲ್ಲಿ ತೀಯಾ ಸಮಾಜ ಮುಂಬಯಿಯ ಮಾಜಿ ಪ್ರಧಾನ ಕಾರ್ಯದರ್ಶಿ, ಪತ್ರಕರ್ತ ಈಶ್ವರ ಎಂ. ಐಲ್ ರಿಂದ ಸ್ಥಾಪನೆಗೊಂಡಿದ್ದು ಇದರ
ಹದಿನಾರನೆಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಜ. 24 ರಂದು ಅಧ್ಯಕ್ಷರಾದ ಮನೀಷ್ ಕರ್ಕೇರ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಸಮಾಜದ ನೂತನ ಅಧ್ಯಕ್ಷರಾಗಿ ರಾಜೇಶ್ ಪಳ್ಳಿಕೆರೆ, ಉಪಾಧ್ಯಕ್ಷರಾಗಿ ಆಮರ್ ನಂತೂರು, ಪ್ರಧಾನ ಕಾರ್ಯದರ್ಶಿಯಾಗಿ ಜಸ್ಮಿತಾ ವಿವೇಕ್, ಕೋಶಾಧಿಕಾರಿಯಾಗಿ ಶ್ರೀನಿವಾಸ ಕೋಟ್ಯಾನ್ ಮತ್ತು ಜೊತೆ ಕೋಶಾಧಿಕಾರಿಯಾಗಿ ಮನೋಹರ ಕೋಟ್ಯಾನ್ ಆಯ್ಕೆಯಾರಿದ್ದಾತೆ.

ಸಮಾಜದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರೋಶನ್ ಬೋಳಾರ್, ಮನೀಶ್ ಕರ್ಕೇರ, ಧರ್ಮೇಂದ್ರ ಬಂಗೇರ, ಜಗನ್ನಾಥ ಕೋಟ್ಯಾನ್, ಜಗದೀಶ ಕದ್ರಿ, ರಾಜೀವ ಬಿಲ್ಲವ, ಮಹೇಶ್ ರಾಜ್, ಸುರೇಶ್ ಕೋಟ್ಯಾನ್, ಸತೀಶ್ ಕಲ್ಲಾಪು, ಸತೀಶ್ ಪಾಲನ್, ಆದಿತ್ಯ ಬೋಳಾರ್, ಶರ್ಮಿಳಾ ಬೋಳಾರ್, ಚಂದ್ರಿಕ
ರಾಜೀವ, ಸಮಿತ ಬಂಗೇರ, ಗೀತಾ ಪಳ್ಳಿಕೆರೆ, ಅನುಪಮಾ ಕರ್ಕೇರ, ವೀಣಾ ಜಗದೀಶ್, ಲತಾ ಕೋಟ್ಯಾನ್, ಮಲ್ಲಿಕ ಕೋಟ್ಯಾನ್, ನೈನ ಕೋಟ್ಯಾನ್, ಸರಿತ ಕೋಟ್ಯಾನ್, ಪ್ರಿಯಾ ಸಂದೀಪ್ ಇವರನ್ನು ಆಯ್ಕೆಮಾಡಲಾಯಿತು.

ಸಮಾಜದ ಸಾಗರೋತ್ತರ ಪ್ರತಿನಿಧಿಗಳಾಗಿ ಸಮಾಜದ ಸ್ಥಾಪಕ ಹಾಗೂ ಮಾಜಿ ಕೋಶಾಧಿಕಾರಿ ನಾಗೇಶ್ ಸುವರ್ಣ,ಸ್ಥಾಪಕ ಹಾಗೂ ಮಾಜಿ ಉಪಾಧ್ಯಕ್ಷರಾದ ಯೋಗೇಶ್ ಉಳ್ಳಾಲ್ ಮತ್ತು ಸದಾಶಿವ ಮಂಜೇಶ್ವರ್, ಸ್ಥಾಪಕ ಹಾಗೂ ಮಾಜಿ ಪ್ರಧಾನ ಕಾರ್ಯದರ್ಶಿ ಈಶ್ವರ ಎಂ. ಐಲ್, ಕಾರ್ಯಕಾರಿ ಸಮಿತಿಯ ಸ್ಥಾಪಕ ಹಾಗೂ ಮಾಜಿ ಸದಸ್ಯ ರಾಜೇಶ್ ಉಳ್ಳಾಲ್, ಕವಿತ ಉಳ್ಳಾಲ್ ಮತ್ತು ಪಲ್ಲವಿ ದವೆ ಇವರನ್ನು ನೇಮಿಸಲಾಯಿತು. ಸಭೆಯಲ್ಲಿ ಸ್ಥಳೀಯ ತೀಯಾ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

 

 

ಗ್ರೀಸ್‌ಗೆ ಮೊದಲ ಮಹಿಳಾ ಅಧ್ಯಕ್ಷೆ ಕ್ಯಾಟರಿನಾ ಸಕಲೊರಾಪುಲು

Thursday, January 23rd, 2020
Share

cytarina

ಅಥೆನ್ಸ್ ‌: ಗ್ರೀಸ್‌ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಹಿಳೆಯನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಬುಧವಾರ ಅಲ್ಲಿನ ಸಂಸತ್‌ನಲ್ಲಿ ನಡೆದ ಮತದಾನದಲ್ಲಿ ಕ್ಯಾಟರಿನಾ ಸಕಲೊರಾಪುಲು (63) 261 ಮತಗಳನ್ನು ಪಡೆದು ಜಯ ಸಾಧಿಸಿದ್ದಾರೆ.

ಗ್ರೀಸ್‌ನ ಅತ್ಯುನ್ನತ ಆಡಳಿತಾತ್ಮಕ ನ್ಯಾಯಮಂಡಳಿ ಆಗಿರುವ ಕೌನ್ಸಿಲ್‌ ಆಫ್ ಸ್ಟೇಟ್‌ನ ಮುಖ್ಯಸ್ಥರಾಗಿದ್ದಾರೆ. ಅವರು ಸಾಂವಿಧಾನಿಕ ಕಾನೂನು ಮತ್ತು ಪರಿಸರ ವಿಚಾರದಲ್ಲಿ ಪರಿಣತರು. ನೂತನ ಅಧ್ಯಕ್ಷೆ ಮಾ.13ರಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

 

 

ಕಾಣೆಯಾಗಿದ್ದ ಭಾರತದ ಮೂಲದ ಯುವತಿ ಕಾರಿನಲ್ಲಿ ಶವವಾಗಿ ಪತ್ತೆ

Saturday, January 18th, 2020
Share

suril

ವಾಷಿಂಗ್ಟನ್ : ಕಳೆದ ತಿಂಗಳು ಕಾಣೆಯಾಗಿದ್ದ ಭಾರತದ ಮೂಲದ ಅಮೆರಿಕದಲ್ಲಿ ತನ್ನದೇ ಕಾರಿನಲ್ಲಿ ಶವವಾಗಿ ಪತ್ತೆಯಾದ ಘಟನೆ ಅಮೆರಿಕದಲ್ಲಿ ನಡೆದಿದೆ.

ಸುರೀಲ್ ದಾಬಾವಾಲಾ(34) ಕಾಣೆಯಾದ ಯುವತಿ. ಚಿಕಾಗೋದ ಲೊಯೊಲಾ ವಿಶ್ವವಿದ್ಯಾಲಯದಲ್ಲಿ ಎಂಬಿಎ ಓದುತ್ತಿದ್ದ ಸುರೀಲ್ 2019, ಡಿ.30ರಂದು ಕಾಣೆಯಾಗಿದ್ದಳು. ಆಕೆಗಾಗಿ ಪೋಷಕರು ಹುಡುಕಾಟ ನಡೆಸಲು ಶುರು ಮಾಡಿದ್ದರು.

ಹಲವು ದಿನ ಹುಡುಕಾಟ ನಡೆಸಿದ ನಂತರ ಸುರೀಲ್‍ಳ ಮೃತದೇಹ ಬೆಡ್‍ಶೀಟ್‍ನಲ್ಲಿ ಸುತ್ತ ಸ್ಥಿತಿಯಲ್ಲಿ ಆಕೆಯ ಕಾರಿನಲ್ಲಿ ಪತ್ತೆಯಾಗಿತ್ತು. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾರನ್ನು ಬಂಧಿಸಿಲ್ಲ. ಸುರೀಲ್ ತಂದೆ ಮೂಲತಃ ಗುಜರಾತಿನವರಾಗಿದ್ದು, ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಸುರೀಲ್ ಕಾಣೆಯಾಗಿದ್ದಾಗ ಅವರ ಕುಟುಂಬದವರು ಹುಡುಕಿ ಕೊಟ್ಟವರಿಗೆ ಅಥವಾ ಮಾಹಿತಿ ನೀಡಿದವರಿಗೆ 7 ಲಕ್ಷ (10,000 ಡಾಲರ್) ನೀಡುವುದಾಗಿ ಘೋಷಿಸಿದ್ದರು.

ಸುರೀಲ್ ಸಾವಿಗೆ ಕಾರಣ ಏನೂ ಎಂಬುದು ತಿಳಿದು ಬಂದಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ನಾವು ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

 

ಚೀನಾದ ಶಾಂಘೈನಲ್ಲಿ ಬಸ್ ಸಂಚರಿಸುತ್ತಿದ್ದ ವೇಳೆ ಕುಸಿದ ರಸ್ತೆ : ಹತ್ತು ಪ್ರಯಾಣಿಕರು ನಾಪತ್ತೆ

Tuesday, January 14th, 2020
Share

china

ಶಾಂಘೈ : ಬಸ್ಸೊಂದು ಸಂಚರಿಸುತ್ತಿದ್ದ ವೇಳೆಯೇ ರಸ್ತೆ ಕುಸಿದು ಹೋದ ಪರಿಣಾಮ ಬಸ್ ನಲ್ಲಿದ್ದ ಕನಿಷ್ಠ ಹತ್ತು ಪ್ರಯಾಣಿಕರು ನಾಪತ್ತೆಯಾದ ಘಟನೆ ಚೀನಾದ ಶಾಂಘೈನಲ್ಲಿ ನಡೆದಿದೆ.

ಈ ಅವಗಢ ಸೋಮವಾರ ಸಂಜೆಯ ವೇಳೆಗೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಗ್ರೇಟ್ ವಾಲ್ ಆಸ್ಪತ್ರೆಗೆ ಮುಂಭಾಗದಲ್ಲಿ ರಸ್ತೆಯ ಒಂದು ಭಾಗ ಕುಸಿದು ಕಂದಕ ಉಂಟಾಗಿದೆ. ಅದೇ ವೇಳೆ ಅಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕ ಸಂಸ್ಥೆಯ ಬಸ್ ಅದರೊಳಗೆ ಬಿದ್ದಿದೆ. ಬಸ್ ಬಿದ್ದ ರಭಸಕ್ಕೆ ಅದು ಸ್ಫೋಟಗೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸ್ಥಳೀಯರ ಪ್ರಕಾರ ಕನಿಷ್ಠ ಹತ್ತು ಜನರು ನಾಪತ್ತೆಯಾಗಿದ್ದಾರೆ. ಮತ್ತು 15 ಜನರು ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಕ್ಷಣಾ ಕಾರ್ಯ ಮುಂದುವರಿದಿದೆ. ಘಟನೆಯ ಬಗ್ಗೆ ತನಿಖೆಯೂ ಆರಂಭವಾಗಿದೆ.