ಸಿದ್ದರಾಮಯ್ಯ ಅವರೇ ಆಡಳಿತ ನಡೆಸಲಾಗದಿದ್ದರೆ ಕುರ್ಚಿ ಬಿಟ್ಟುಬಿಡಿ : ಪೂಜಾರಿ ಸವಾಲು

Monday, February 27th, 2017
poojary

ಮಂಗಳೂರು:  ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ, ಮಲೆನಾಡು ಬರದಿಂದ ತತ್ತರಿಸಿ ಹೋಗಿದೆ, ಹೀಗಿರಬೇಕಾದ್ರೆ ಮುಖ್ಯಮಂತ್ರಿ ನಿದ್ದೆ ಮಾಡುತ್ತಿದ್ದಾರೆಯೇ?. ಸಿದ್ದರಾಮಯ್ಯ ಅವರೇ ಆಡಳಿತ ನಡೆಸಲಾಗದಿದ್ದರೆ ಕುರ್ಚಿ ಬಿಟ್ಟುಬಿಡಿ ಎಂದು ಜನಾರ್ದನ ಪೂಜಾರಿ ಸವಾಲು ಹಾಕಿದ್ದಾರೆ . ಕುಮಾರಸ್ವಾಮಿಯವರೇ, ನಿಮ್ಮಲ್ಲಿ ಸಿಡಿ ಇದ್ದರೆ ತೋರಿಸಿ, ಬಿಜೆಪಿಯವರು ಕಪ್ಪ ಕೊಟ್ಟಿರುವ ವಿಚಾರ ಇದ್ದರೆ ಜನರಿಗೆ ತೋರಿಸಿ, ಇಲ್ಲದೇ ಇದ್ದರೆ ಜನರನ್ನು ಮೋಸಗೊಳಿಸಿದಂತಾಗುತ್ತೆ. ತಾಕತ್ತಿದ್ದರೆ ಸಂಜೆಯೊಳಗೆ ಸಿಡಿ ಬಿಡುಗಡೆ ಮಾಡಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಗೂ ಇದೇ ವೇಳೆ ಜನಾರ್ದನ ಪೂಜಾರಿ ಸವಾಲು ಹಾಕಿದರು. ಸಂವಿಧಾನದಲ್ಲಿ […]

ಆರ್‌ಎಸ್ಎಸ್ ನಾಯಕರು ಕೇರಳದಲ್ಲಿ ತಮ್ಮ ಸಿದ್ಧಾಂತವನ್ನು ಬಿತ್ತಲು ಮಾತ್ರ ಸಾಧ್ಯವಿಲ್ಲ : ಪಿಣರಾಯಿ ವಿಜಯನ್

Saturday, February 25th, 2017
Karavail Souhardha

ಮಂಗಳೂರು : ಸಿಪಿಐಎಂ ಪಕ್ಷದ ಮಂಗಳೂರು ಘಟಕ ನೆಹರೂ ಮೈದಾನದಲ್ಲಿ  ಆಯೋಜಿಸಿದ್ದ ಕೋಮು ಸೌಹಾರ್ದ ಜಾಥಾ ಉದ್ದೇಶಿಸಿ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ 1947ರ ಜುಲೈ 17ರಂದು ಆರ್ಗನೈಸರ್ ಎಂಬ ಪತ್ರಿಕೆಗೆ ಬರೆದ ಪ್ರಮುಖ ಲೇಖನವೊಂದರಲ್ಲಿ ಈ ದೇಶದ ಬಾವುಟ ಭಾರತಕ್ಕೆ ತಕ್ಕುದಾದುದಲ್ಲ ಎಂದು ಪ್ರತಿಪಾದಿಸಿದ್ದ ಆರ್‌‌ಎಸ್‌‌ಎಸ್‌ ದೇಶದಲ್ಲಿ ನಡೆದ ಎಲ್ಲಾ ಕೋಮು ಗಲಭೆಗಳಲ್ಲೂ ಕೈವಾಡವಿದೆ. ಕೋಮು ದ್ವೇಷದ ಕಿಡಿಗಳನ್ನು ಯುವಕರಲ್ಲಿ ಹಚ್ಚಿ ವಿಷ ಬೀಜವನ್ನು ಬಿತ್ತುವ ಮೂಲಕ ಗಲಭೆಗೆ ಕಿಚ್ಚು ಹಚ್ಚುತ್ತಿದ್ದಾರೆ ಎಂದು  ಆರೋಪಿಸಿದ್ದಾರೆ. ಆರ್‌‌ಎಸ್‌‌ಎಸ್‌ ಯೋಚನೆ ಇಂದಿಗೂ […]

ಕರಾವಳಿ ಸೌಹಾರ್ದ ರ‍್ಯಾಲಿಯ ಭದ್ರತೆಗಾಗಿ 3,000ಕ್ಕೂ ಅಧಿಕ ಪೊಲೀಸರು

Saturday, February 25th, 2017
police

ಮಂಗಳೂರು:  ಸಿಪಿಐಎಂ ಮಂಗಳೂರಿನ ನೆಹರು ಮೈದಾನದಲ್ಲಿ  ಹಮ್ಮಿಕೊಂಡಿರುವ ಕರಾವಳಿ ಸೌಹಾರ್ದ ರ‍್ಯಾಲಿಯ ಭದ್ರತೆಗಾಗಿ ಜಿಲ್ಲೆ, ಹೊರ ಜಿಲ್ಲೆಗಳಿಂದ ಉನ್ನತ ಅಧಿಕಾರಿಗಳು, ಸಿಬ್ಬಂದಿ ಸೇರಿ ಒಟ್ಟು 3,000ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಭದ್ರತೆಗಾಗಿ 6 ಎಸ್ಪಿಗಳು, 10 ಡಿಎಸ್ಪಿಗಳು, 20 ಪೊಲೀಸ್ ಇನ್ಸ್ಪೆಕ್ಟರ್, 20 ಕೆಎಸ್ಆರ್ಪಿ ಪ್ಲಟೂನ್‌ಗಳು ಸೇರಿ 2,000 ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ವಿವಿಧ ಭಾಗಗಳಲ್ಲಿ 600 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಇವುಗಳಲ್ಲಿ 50-60 ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. 6 ಡ್ರೋನ್ […]

‘ಕರಾವಳಿ ಸೌಹಾರ್ದ ರ‍್ಯಾಲಿ’ ಯನ್ನು ಯಶಸ್ವಿಗೊಳಿಸಲು ಜಿ.ವಿ.ಶ್ರೀರಾಮರೆಡ್ಡಿ ಮನವಿ

Saturday, February 25th, 2017
shivarama reddy

ಮಂಗಳೂರು  :  ಕರಾವಳಿ ಸೌಹಾರ್ದ ರ‍್ಯಾಲಿ’ ವಿಫಲಗೊಳಿಸಲು ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಭೇಟಿಯನ್ನು ತಡೆಯಲು ಯತ್ನಿಸುತ್ತಿರುವ ಸಂಘಪರಿವಾರದ  ಕೃತ್ಯವನ್ನು ಖಂಡಿಸುವುದಾಗಿ ಸಿಪಿಎಂ ರಾಜ್ಯ ಸಮಿತಿ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ, ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಕರಾವಳಿ ಪ್ರಾಂತ್ಯದಲ್ಲಿ ಕೋಮು ವಾದಿಗಳ ಅಟ್ಟಹಾಸ ನೆಲದ ಸಂಸ್ಕೃತಿಗೆ ಅಪಮಾನವಾಗಿದ್ದು, ದಲಿತ, ಹಿಂದುಳಿದ ವರ್ಗಗಳ ಸ್ವಾಭಿಮಾನಕ್ಕೆ ಧಕ್ಕೆಯನ್ನುಂಟು ಮಾಡುತ್ತಿದೆ. ಸಂಘಪರಿವಾರದ ಶಕ್ತಿಗಳ ಬಗ್ಗೆ ದಲಿತ, ಹಿಂದುಳಿದ ವರ್ಗದವರು ಎಚ್ಚೆತ್ತುಕೊಳ್ಳಬೇಕೆಂದು ಹೇಳಿದರು. ಪಿಣರಾಯಿ ವಿಜಯನ್ […]

ಕರಾವಳಿ ಸೌಹಾರ್ದ ಸಮಾವೇಶದ ಸಿದ್ಧತೆಗಾಗಿ ಸಿಪಿಐಎಂ ಕಾಲ್ನಡಿಗೆ ಜಾಥಾ

Friday, February 24th, 2017
cpim

ಮಂಗಳೂರು : ನೆಹರೂ ಮೈದಾನದಲ್ಲಿ ಫೆ. 25ರಂದು ಸಿಪಿಎಂ ವತಿಯಿಂದ ನಗರದಲ್ಲಿ ನಡೆಯುವ ಕರಾವಳಿ ಸೌಹಾರ್ದ ರ್ಯಾಲಿ ಹಾಗೂ ಸಮಾವೇಶ ಪ್ರಯುಕ್ತ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸಿಪಿಐಎಂ ಹಮ್ಮಿಕೊಂಡಿದ್ದ ಕಾಲ್ನಡಿಗೆ  ಜಾಥಾಕ್ಕೆ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಚಾಲನೆ ನೀಡಿದರು. ಸೌಹಾರ್ದ ರ‍್ಯಾಲಿಯನ್ನು ನಿಲ್ಲಿಸಿ ಇಲ್ಲದಿದ್ದರೆ ಬಂದ್ ಕರೆ ನೀಡಿರುವುದನ್ನು ವಾಪಾಸು ಪಡೆಯಿರಿ ಸಂಘಪರಿವಾರದ ಯಾವ ಬೆದರಿಕೆಗೂ ಮಣಿಯುವುದಿಲ್ಲ. ಬಂದ್ ಇದ್ದರೂ ಕಾಲ್ನಡಿಯಲ್ಲಾದರೂ ಬಂದು ನೆಹರೂ ಮೈದಾನದಲ್ಲಿ ಸೇರುವ ಮೂಲಕ ಸೌಹಾರ್ದ ಸಮಾವೇಶವನ್ನು ಯಶಸ್ವಿಗೊಳಿಸುತ್ತೇವೆ ಎಂದು […]

ಪಿಣರಾಯಿ ವಿಜಯನ್ ಮಂಗಳೂರು ಆಗಮನಕ್ಕೆ ಸೂಕ್ತ ಬಂದೋಬಸ್ತ್

Thursday, February 23rd, 2017
commissioner

ಮಂಗಳೂರು : ಫೆಬ್ರವರಿ 25 ರಂದು ಹಿಂದೂ ಸಂಘಟನೆಗಳು ನೀಡಿರುವ ಕರೆಗೆ  ಸರ್ವೊಚ್ಛ ನ್ಯಾಯಾಲಯದ ನಿರ್ದೇಶನದಂತೆ ಬಂದ್‌‌ ನಡೆಸಲು ಅವಕಾಶ ಇಲ್ಲ. ಈ ಹಿನ್ನೆಲೆಯಲ್ಲಿ ಬಂದ್‌‌ಗೆ ಕರೆ ನೀಡಿರುವ 44 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಚಂದ್ರಶೇಖರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆಗೆ ತೊಂದರೆ ಉಂಟು ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ. ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾವ ರೀತಿ ಬಂದ್ ಅಥವಾ ಹರತಾಳ […]

ಆ್ಯಂಟನಿ ವೇಸ್ಟ್ ಕಂಪನಿಗೆ ಸೇರಿದ ಕಾರ್ಮಿಕರಿಂದ ಸಂಬಳಕ್ಕೆ ಪ್ರತಿಭಟನೆ

Wednesday, February 22nd, 2017
waste company

ಮಂಗಳೂರು :  ಮನಪಾ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಯ ಗುತ್ತಿಗೆ ವಹಿಸಿರುವ ಆ್ಯಂಟನಿ ವೇಸ್ಟ್ ಕಂಪನಿಗೆ ಸೇರಿದ ಕಾರ್ಮಿಕರು ಸಕಾಲದಲ್ಲಿ ಸಂಬಳ ಪಾವತಿಯಾಗದಿರುವುದನ್ನು ವಿರೋಧಿಸಿ ಬುಧವಾರ ಬಿಎಂಎಸ್ ಆಶ್ರಯದಲ್ಲಿ ಪಾಲಿಕೆ ಕಚೇರಿ ಎದುರು ಧರಣಿ ನಡೆಸಿದರು. ಈ ಮಧ್ಯೆ ತ್ಯಾಜ್ಯ ವಿಲೇವಾರಿಯಾಗದೆ ನಗರದೆಲ್ಲೆಡೆ ಮನೆ ಹಾಗೂ ಬೀದಿಗಳಲ್ಲಿ ಕಸ ರಾಶಿ ಬಿದ್ದಿದ್ದು ಮಧ್ಯಾಹ್ನದ ಬಳಿಕ ವಿಲೇವಾರಿ ಆರಂಭಗೊಂಡಿದೆ. ತ್ಯಾಜ್ಯ ವಿಲೇವಾರಿಯ ಗುತ್ತಿಗೆ ವಹಿಸಿರುವ ಆ್ಯಂಟನಿ ವೇಸ್ಟ್ ಕಂಪೆನಿಯಲ್ಲಿ 785 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ 630 ಮಂದಿ ತ್ಯಾಜ್ಯ […]

ಹಾಸನ ಜಿಲ್ಲೆಯ ಯುವತಿಗೆ ಮೋಸಮಾಡಿದ ಮಂಗಳೂರಿನ ಯುವಕ

Wednesday, February 22nd, 2017
Lovecase

ಮಂಗಳೂರು : ಪ್ರೀತಿಸಿ ತನ್ನನ್ನು ಮದುವೆಯಾಗಿದ್ದಲ್ಲದೆ, ಗುಪ್ತವಾಗಿ ಇನ್ನೊಬ್ಬಳನ್ನು ವಿವಾಹವಾಗುವ ಮೂಲಕ ವಂಚನೆ ನಡೆಸಿ ತನ್ನನ್ನು ಬೀದಿಗೆ ತಳ್ಳಲಾಗಿದೆ ಎಂದು ದಲಿತ ಯುವತಿ ಆರೋಪಿಸಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲತಾ ಯಾನೆ ಲಲಿತಾ, ಹಾಸನ ಜಿಲ್ಲೆಯ ತಾನು ಹೋಂ ನರ್ಸಿಂಗ್ ಮಾಡಲು ಮಂಗಳೂರಿಗೆ ಬಂದಿದ್ದೆ. ಆವಾಗ ವಾಮಂಜೂರಿನ ಐತಪ್ಪಪೂಜಾರಿಯ ಮಗ ಗಿರೀಶ್‌ನ ಪರಿಚಯವಾಗಿತ್ತು. 2005ರಲ್ಲಿ ಧರ್ಮಸ್ಥಳದಲ್ಲಿ ನಾವಿಬ್ಬರು ಮದುವೆಯಾಗಿ ಬಾಡಿಗೆ ಮನೆಯಲ್ಲಿ ಸಂಸಾರ ಸಾಗಿಸತೊಡಗಿದೆವು. ಬಳಿಕ ಹಾಸನದ ಚೆನ್ನಕೇಶವ ದೇವಸ್ಥಾನದಲ್ಲಿ ಮದುವೆಯೂ ಆಗಿದೆ. 2016ರಲ್ಲಿ ರಿಜಿಸ್ಟಾರ್ ನೋಂದಣಿಯಾಗಿದೆ. […]

ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ

Monday, February 20th, 2017
BJP Protest

ಮಂಗಳೂರು: ದ. ಕ. ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರ ಭ್ರಷ್ಟಾಚಾರದ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ ದ.ಕ. ಸಂಸದ ನಳಿನ್‌ಕುಮಾರ್ ಕಟೀಲು, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಇದಕ್ಕೆ ಪುರಾವೆ ಎಂಬಂತೆ ರಾಜ್ಯದಲ್ಲಿ ಐದಕ್ಕೂ ಹೆಚ್ಚು ಪ್ರಮುಖ ವ್ಯಕ್ತಿಗಳ ಮನೆಗಳ ಮೇಲೆ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಯಲಯದ ದಾಳಿ ನಡೆದಿದೆ. ರಾಜ್ಯ ಸರ್ಕಾರ ಸಂಪೂರ್ಣ ಭ್ರಷ್ಟತೆಯ ಕೂಪದಲ್ಲಿ ಬಿದ್ದಿದೆ ಎಂದು ದೂರಿದರು. ಚಿಕ್ಕರಾಯಪ್ಪ ಮತ್ತು […]

ದಿ| ನಾರಾಯಣಸ್ವಾಮಿ ಅವರ ಹೆಸರು ಗೋಕರ್ಣನಾಥ ಕ್ಷೇತ್ರದಲ್ಲಿರುವ ಕೆರೆ ಹಾಗೂ ಹೂದೋಟಕ್ಕೆ ನಾಮಕರಣ

Monday, February 20th, 2017
Narayana Swamy

ಮಂಗಳೂರು:  ಬಿಲ್ಲವ ಸಮುದಾಯದ ಮುಖಂಡ, ಸಾಮಾಜಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡ ದಿ| ನಾರಾಯಣಸ್ವಾಮಿ ಅವರ ಹೆಸರನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿರುವ ಕೆರೆ ಹಾಗೂ ಹೂದೋಟಕ್ಕೆ ಇಡಲಾಗಿದೆ ಎಂದು  ಬಿ. ಜನಾರ್ದನ ಪೂಜಾರಿ ಹೇಳಿದ್ದಾರೆ. ನಾಮಫಲಕವನ್ನು ಅನಾವರಣಗೊಳಿಸಿ ಮಾತನಾಡಿದ  ಕೇಂದ್ರದ ಮಾಜಿ ಸಚಿವ ಹಾಗೂ ಕ್ಷೇತ್ರದ ನವೀಕರಣದ ರೂವಾರಿ ಬಿ. ಜನಾರ್ದನ ಪೂಜಾರಿ ಸಮಾಜದಲ್ಲಿ ಸೇವೆ ಮಾಡಿದವರನ್ನು ಗುರುತಿಸಿ ಅವರ ಸಾಧನೆಗಳನ್ನು ಅವರ ನಿಧನಾ ನಂತರ ಉಲ್ಲೇಖ ಮಾಡುವಂತಹುದು ಅಗತ್ಯವಾಗಿ ನಡೆಯಬೇಕು. ಸಮಾಜಕ್ಕಾಗಿ ಸೇವೆ ಮಾಡಿದವರನ್ನು ಸ್ಮರಿಸುವುದು ಭಾರತೀಯ ಸಂಸ್ಕೃತಿ […]