ಮಿಸ್ಟರ್/ಮಿಸ್/ಟೀನ್/ಮಿಸ್ಟ್ರೆಸ್ ಕರಾವಳಿ 2024 ಸ್ಪರ್ಧೆ

Friday, September 20th, 2024
miss-karavali

ಮಂಗಳೂರು : ಅಪ್ಸ್ ಮಾಡೆಲ್ ಮ್ಯಾನೇಜ್ಮೆಂಟ್ ಮತ್ತು ಅಸ್ತ್ರ ಗ್ರೂಪ್ ವತಿಯಿಂದ ಮಿಸ್ಟರ್/ಮಿಸ್/ಟೀನ್/ಮಿಸ್ಟ್ರೆಸ್ ಕರಾವಳಿ 2024 ಸ್ಪರ್ಧೆಯನ್ನು ಸೆಪ್ಟೆಂಬರ್ 15 ರಂದು ಮಂಗಳೂರಿನ ಎ.ಜೆ. ಗ್ರ್ಯಾಂಡ್ ಹೋಟೆಲ್ ನಲ್ಲಿ ಆಯೋಜಿಸಲಾಯಿತು. ಈ ಇವೆಂಟ್‌ನಲ್ಲಿ ವಿವಿಧ ವಿಭಾಗಗಳ ಸ್ಪರ್ಧಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು. ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ವಿಜೇತರ ವಿವರಗಳು : ಮಿಸ್ಟರ್. ಕರಾವಳಿ ಪ್ರಶಸ್ತಿ ವಿಜೇತ: ರಂಜಿತ್ ಗಾಣಿಗ , ಮೊದಲನೇ ರನ್ನರ್-ಅಪ್: ಕೌಸ್ತುಭ ಶೆಟ್ಟಿ. ಎರಡನೇ ರನ್ನರ್-ಅಪ್: ಕಾರ್ತಿಕ್ ವೈ.ಬಿ . ಮಿಸ್ […]

ಮನೆಯ ಹಿಂದಿನ ಗುಡ್ಡ ದಲ್ಲಿ ಗಂಡ ಹೆಂಡತಿ ಆತ್ಮಹತ್ಯೆ

Friday, September 20th, 2024
nonaya-poojary

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕಾಶಿಪಟ್ಣ ಗ್ರಾಮದ ಉರ್ದು ಗುಡ್ಡೆಯಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನೊಣಯ್ಯ ಪೂಜಾರಿ(63 ವರ್ಷ) ಮತ್ತು ಅವರ ಪತ್ನಿ ಬೇಬಿ (46 ವರ್ಷ) ಆತ್ಮಹತ್ಯೆ ಮಾಡಿಕೊಂಡ ದಂಪತಿಯಾಗಿದ್ದಾರೆ. ನೊಣಯ್ಯ ಪೂಜಾರಿ ಕಳೆದ ಐದು ವರ್ಷಗಳಿಂದ ವಿಪರೀತ ತಲೆನೋವಿನಿಂದ ಬಳಲುತ್ತಿದ್ದರೆ ಪತ್ನಿ ಬೇಬಿ ಮಕ್ಕಳಿಲ್ಲದ ಕೊರಗಲ್ಲಿದ್ದರು ಎಂದು ಹೇಳಲಾಗಿದೆ. ನೋಣಯ್ಯ ಪೂಜಾರಿಯವರಿಗೆ ಇದು ಎರಡನೇ ಮದುವೆ ಯಾಗಿದ್ದು ಹಿಂದಿನ ಪತ್ನಿ ಕಳೆದ ಹತ್ತು ವರ್ಷದ ಹಿಂದೆ ಸಾವನ್ನಪ್ಪಿದರು. ಬಳಿಕ […]

ತಿರುಪತಿ ಲಡ್ಡುವಿನಲ್ಲಿ ಮೀನಿನ ಎಣ್ಣೆ, ಬೀಫ್, ಹಂದಿ ಕೊಬ್ಬು ಬಳಸಿರುವುದು ಲ್ಯಾಬ್ ವರದಿಯಿಂದ ಬಹಿರಂಗ

Thursday, September 19th, 2024
Tirupaty-Laddu1

ತಿರುಪತಿ : ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದವಾಗಿ ನೀಡುವ ಲಡ್ಡೂಗಳಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಇದೆ ಎಂದು ಲ್ಯಾಬ್ ವರದಿ ಗುರುವಾರ ದೃಢಪಡಿಸಿದೆ . ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರವು ತಿರುಪತಿ ಲಡ್ಡೂ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಗುಣಮಟ್ಟವಿಲ್ಲದ ಪದಾರ್ಥಗಳನ್ನು ಬಳಸಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಆರೋಪಿಸಿದ ನಂತರ ದೊಡ್ಡ ವಿವಾದವೊಂದು ಭುಗಿಲೆದ್ದಿದೆ. ಈಗ, ಪಶು ಆಹಾರ ಮತ್ತು ಹಾಲಿನ ಉತ್ಪನ್ನಗಳನ್ನು ಪರೀಕ್ಷಿಸುವ ಖಾಸಗಿ ಪ್ರಯೋಗಾಲಯದ NDDB CALF […]

ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಮನೋಜ್ ಕುಮಾರ್ ಮತ್ತು ಉಪಮೇಯರ್ ಆಗಿ ಭಾನುಮತಿ ಆಯ್ಕೆ

Thursday, September 19th, 2024
Manoj and Bhanamati

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ 25ನೇ ಅವಧಿಗೆ ಮೇಯರ್ ಆಗಿ ದೇರೆಬೈಲ್ ವಾರ್ಡ್‌ನಿಂದ ಮನೋಜ್ ಕುಮಾರ್ ಆಯ್ಕೆಯಾದರು, ಉಪಮೇಯರ್ ಆಗಿ ಬೋಳಾರ್ ವಾರ್ಡ್‌ನ ಭಾನುಮತಿ ಆಯ್ಕೆಯಾದರು. ಮೇಯರ್, ಉಪಮೇಯರ್ ಹಾಗೂ ನಾಲ್ವರು ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಸೆ.19ರಂದು ಎಂಸಿಸಿಯ ಮಂಗಳಾ ಸಭಾಂಗಣದಲ್ಲಿ ಚುನಾವಣೆ ನಡೆಯಿತು. ಚುನಾವಣಾಧಿಕಾರಿಯಾಗಿ ಪ್ರಾದೇಶಿಕ ಆಯುಕ್ತ ರಮೇಶ್ ಕಾರ್ಯ ನಿರ್ವಹಿಸಿದ್ದರು. ಮನೋಜ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು. ಮೇಯರ್ ಸ್ಥಾನ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲಾಗಿದ್ದು, ಬಿಜೆಪಿಯಿಂದ ಮನೋಜ್ ಕುಮಾರ್ ಮಾತ್ರ ನಾಮಪತ್ರ […]

ಮಂಗಳೂರಿನಲ್ಲಿ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠದ ಬೇಡಿಕೆ

Thursday, September 19th, 2024
High-court-peeta

ಮಂಗಳೂರು : ವಕೀಲರ ಸಂಘದ ದಶಕಗಳ ಬೇಡಿಕೆಯಾದ ಮಂಗಳೂರು ನಲ್ಲಿ ಹೈಕೋರ್ಟ್ ನ ಸ್ಥಾಪನೆ ಆಗಬೇಕೆಂಬ ವಿಚಾರದಲ್ಲಿ ಮಂಗಳೂರು ವಕೀಲರ ಸಂಘದಲ್ಲಿ ಹೋರಾಟ ಸಮಿತಿಯನ್ನು ರಚಿಸಲಾಯಿತು, ಈ ಸಂದರ್ಭದಲ್ಲಿ ಮಂಗಳೂರು ವಕೀಲರ ಸಂಘದ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜರವರು ಸಭೆಯ ನೇತೃತ್ವನವಹಿಸಿ ವಕೀಲರ ಸಂಘದ ಹಿರಿಯರ ಮಾರ್ಗದರ್ಶನ ಸಾರ್ವಜನಿಕರ ಸಹಕಾರ ದಂದಿಗೆ ತಮ್ಮ ಹೋರಾಟವನ್ನು ತೀವ್ರಗೊಳಿಸುವ ಗೊಳಿಸುವ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸುವಂತೆ ಸಲಹೆ ನೀಡಲಾಯಿತು. ದಕ್ಷಿಣ ಕನ್ನಡ ಜಿಲ್ಲೆ ಇತರ ತಾಲೂಕುಗಳ […]

ಮುಡಿಪು ಪ್ರಜ್ಞಾ ಸ್ವಾಧಾರ ಕೇಂದ್ರದಲ್ಲಿದ್ದ 22 ವರ್ಷದ ಮಹಿಳೆ ನಾಪತ್ತೆ

Thursday, September 19th, 2024
Zulekha Khatoon

ಮಂಗಳೂರು : ಮುಡಿಪಿನಲ್ಲಿರುವ ಪ್ರಜ್ಞಾ ಸ್ವಾಧಾರ ಕೇಂದ್ರಕ್ಕೆ 4 ವರ್ಷಗಳ ಹಿಂದೆ ಬಂದಿದ್ದ ಪಶ್ಚಿಮ ಬಂಗಾಳ ಮೂಲದ ಜುಲೇಖಾ ಖಾಟೂನ್ (22 ವರ್ಷ) ಎಂಬ ಮಹಿಳೆ ಕಾಣೆಯಾಗಿರುವುದಾಗಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜುಲೇಖಾ ಖಾಟೂನ್ 2024 ನೇ ಮಾರ್ಚ ತಿಂಗಳಲ್ಲಿ ಭೂಮಿ ಸಂಸ್ಥೆಗೆ ಕಳುಹಿಸಿಕೊಟ್ಟಿದ್ದು ಅಲ್ಲಿ ಆಕೆ ಹೊಂದಿಕೊಳ್ಳಲು ಆಗದೇ ಇರುವುದರಿಂದ ಏಪ್ರೀಲ್ 18 ನೇ ತಾರೀಖು ಕಾಣೆಯಾಗಿದ್ದು ಬಳಿಕ ಆಕೆಯನ್ನು ಮಂಗಳೂರು ಸೇಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಪತ್ತೆ ಹಚ್ಚಿ ಮುಡಿಪು ಪ್ರಜ್ಞಾ ಸ್ವಾದರ […]

ಪರಶುರಾಮ ಥೀಂ ಪಾರ್ಕ್‌ ಕಾಮಗಾರಿ ಕುರಿತು ಪದೇ ಪದೇ ಸುಳ್ಳು ಹೇಳುತ್ತಿರುವ ಉದಯ್‌ ಕುಮಾರ್‌ ಶೆಟ್ಟಿ

Thursday, September 19th, 2024
Mahaveer-Hegde

ಕಾರ್ಕಳ : ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಿನಿಂದ ನೀವು ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪರಶುರಾಮ ಥೀಂ ಪಾರ್ಕ್‌ ಕಾಮಗಾರಿ ಕುರಿತು ಪದೇ ಪದೇ ಸುಳ್ಳು ಹೇಳಿ ತಗಾದೆ ಮಾಡುತ್ತಿರುವ ಉದಯ್‌ ಕುಮಾರ್‌ ಶೆಟ್ಟಿಯವರೇ, ಪರಶುರಾಮನ ಮೂರ್ತಿ ಮಾಡುವ ಶಿಲ್ಪಿ GST ಕಟ್ಟಿಲ್ಲ ಎಂಬ ಮಾತ್ರಕ್ಕೆ ಮೂರ್ತಿಯ ನಿರ್ಮಾಣ ಕೆಲಸ ಮಾಡಬಾರದು ಎಂದಾದರೆ, ಸರ್ಕಾರದ ಗುತ್ತಿಗೆದಾರರಾದ ನೀವು ಅನೇಕ ಕಳಪೆ ಕಾಮಗಾರಿಗಳನ್ನು ಮಾಡಿ ಕಳಪೆ ಕಾಮಗಾರಿಯ ಸರದಾರ ಎಂದೇ ಪ್ರಸಿದ್ಧಿ ಪಡೆದವರು. ಅದರಲ್ಲೂ ಒಮ್ಮೆ ನಿಮ್ಮ ಹೆಸರನ್ನು […]

ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ ಮಹಾಸಭೆ ರೂ 1.49 ಕೋಟಿ ಲಾಭ, ಸದಸ್ಯರಿಗೆ ಶೇ 20 ಡಿವಿಡೆಂಟ್ ಘೋಷಣೆ

Wednesday, September 18th, 2024
lakshmananada

ಮಂಗಳೂರು : ಶ್ರೀ ಲಕ್ಷ್ಮಣಾನಂದವಿವಿಧೋದ್ದೇಶ ಸಹಕಾರ ಸಂಘವು ತನ್ನ ಸದಸ್ಯರೆಲ್ಲರ ಸಂಪೂರ್ಣ ಸಹಕಾರದಿಂದ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ಸಂಘವು 2023-24ನೇ ಸಾಲಿನಲ್ಲಿ ರೂ 1,49,64,955 ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 20 ಡಿವಿಡೆಂಡ್ ಎಂದು ಸಂಘದ ಅಧ್ಯಕ್ಷರಾದ ಜೆ. ಕೃಷ್ಣ ಪಾಲೆಮಾರ್ ತಿಳಿಸಿದ್ದಾರೆ. ಮೋರ್ಗನ್ಸ್ಗೇಟ್ ಜೆಪ್ಪುವಿನ ರಾಮಕ್ಷತ್ರಿಯ ಮಂದಿರದಲ್ಲಿ ದಿನಾಂಕ 15.09.2024ನೇ ಆದಿತ್ಯವಾರ ಅಪರಾಹ್ನ ಗಂಟೆ 4.00ಕ್ಕೆ 27ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಕಾರ ಸಂಘ ಸಾಲ ಹಾಗೂ ಠೇವಣಿಗಳಿಗೆ ಆಕರ್ಷಕ […]

ಸರ್ವ ಕಾಲೇಜು ವಿಧ್ಯಾರ್ಥಿ ಸಂಘದ ಚುನಾವಣೆ-2024: ಪುತ್ತೂರು ತಾಲೂಕು ವಿಧ್ಯಾರ್ಥಿ ನಾಯಕ ಸ್ಥಾನಕ್ಕೆ ಗಗನ್ ದೀಪ್ ಸ್ಪರ್ಧೆ!

Wednesday, September 18th, 2024
gagan

ಪುತ್ತೂರು : ಸರ್ವ ಕಾಲೇಜು ವಿಧ್ಯಾರ್ಥಿ ಸಂಘ (ರಿ) ದಕ್ಷಿಣ ಕನ್ನಡ ಇದರ ವಿದ್ಯಾರ್ಥಿ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಪುತ್ತೂರು ತಾಲೂಕಿನಲ್ಲೂ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯ ಕಾವು ಗರಿಗೆದರಿದ್ದು,ಈ ಬಾರಿ ಯುವನಾಯಕ ಗಗನ್ ದೀಪ್ ಅವರು ನಾಯಕನಾಗುವುದು ಭಾಗಶಃ ಸ್ಪಷ್ಟವಾಗಿದೆ. ಗಗನ್ ದೀಪ್ ಮೂಲತಃ ಪುತ್ತೂರಿನ ಬನ್ನೂರು ನಿವಾಸಿಯಾಗಿದ್ದು,ವಿಧ್ಯಾರ್ಥಿಗಳ ಪರವಾದ ಹಲವಾರು ಹೋರಾಟ, ಪ್ರತಿಭಟನೆಯಲ್ಲಿ ನಾಯಕತ್ವ ವಹಿಸಿ ಅನುಭವ ಹೊಂದಿದ್ದಾರೆ. ಇದರೊಂದಿದೆ ಹಲವು ಜನಪರ ಕೆಲಸಗಳ ಮೂಲಕ ವಿಧ್ಯಾರ್ಥಿಗಳ ಮನಸ್ಸು ಗೆದ್ದಿದ್ದಾರೆ. ಸದ್ಯ, ಭಾರತೀಯ […]

ಸರಕಾರಿ ಶಾಲೆಗೆ 1 ಕೋಟಿ ದೇಣಿಗೆ ನೀಡಿದ ಹಳೆ ವಿದ್ಯಾರ್ಥಿ!

Wednesday, September 18th, 2024
kavoru-school

ಕಾವೂರು: ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾವೂರು ಇದರ ನೂತನ ಕಟ್ಟಡದ ಶಂಕುಸ್ಥಾಪನೆ ಬುಧವಾರ ಬೆಳಗ್ಗೆ ನಡೆಯಿತು. ಕೊಡುಗೈ ದಾನಿ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೇಶವ ಅಮೀನ್ ಅವರು ಅಂದಾಜು 1 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ. ಅವರು ಕಾರ್ಯಕ್ರಮ ನೆರವೇರಿಸಿ ಮಾತಾಡಿದರು. “ಸರಕಾರಿ ಶಾಲೆಗಳು ಮಕ್ಕಳಿಲ್ಲದೆ ಸುಸಜ್ಜಿತ ಕಟ್ಟಡ ಮತ್ತು ಮೂಲಭೂತ ಸೌಲಭ್ಯವಿಲ್ಲದೆ ಬರಡಾಗುತ್ತಿರುವ ಈ ಸಂದರ್ಭದಲ್ಲಿ ಕೇಶವ […]