ಮಹಾರಾಷ್ಟ್ರದ ಉದ್ಧವ್‌ ಠಾಕ್ರೆ ನೇತೃತ್ವದ ಸರಕಾರ ಅಸ್ವಾಭಾವಿಕ, ಅವಾಸ್ತವಿಕದ್ದು : ಜೆ.ಪಿ. ನಡ್ಡಾ

Monday, February 17th, 2020
JP-Nadda

ಮುಂಬಯಿ : ಮಹಾರಾಷ್ಟ್ರದ ಉದ್ಧವ್‌ ಠಾಕ್ರೆ ನೇತೃತ್ವದಲ್ಲಿನ ಸರಕಾರ ಅಸ್ವಾಭಾವಿಕ, ಅವಾಸ್ತವಿಕ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ. ಮುಂಬಯಿನಲ್ಲಿ ಪಕ್ಷದ ಕಾರ್ಯರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌-ಎನ್‌ಸಿಪಿ- ಶಿವಸೇನೆ ಮೈತ್ರಿ ಕೂಟ ರಾಜ್ಯದ ಅಭಿವೃದ್ಧಿಗೆ ತಡೆಯಾಗಿದೆ ಎಂದು ದೂರಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಪಕ್ಷಕ್ಕೆ ಉತ್ತಮ ಸ್ಥಾನಗಳು ಬಂದಿದ್ದರೂ ಕೆಲವರ ವೈಯಕ್ತಿಕ ಹಿತಾಸಕ್ತಿಗಳಿಂದಾಗಿ ಸರಕಾರ ರಚನೆ ಸಾಧ್ಯವಾಗಿರಲಿಲ್ಲ. ಮುಂಬರುವ ಚುನಾವಣೆಗಾಗಿ ಪಕ್ಷ ಸ್ವಯಂ ಶಕ್ತಿಯಿಂದ ಸ್ಪರ್ಧಿಸಲು ಈಗಿನಿಂದಲೇ ಸಿದ್ಧಗೊಳ್ಳಬೇಕು. ‘ಬಿಜೆಪಿ ವರ್ಸಸ್‌ ಎಲ್ಲರೂ’ ಎಂಬಂಥ ಸ್ಪರ್ಧೆಗೆ ಅಣಿಯಾಗಬೇಕು. […]

ಮಂಗಳೂರು ವಿಶ್ವವಿದ್ಯಾ ಸಂವಾದದಲ್ಲಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ

Monday, February 17th, 2020
VVV

ಮಂಗಳೂರು : ಸಮಸ್ತ ಭಾರತೀಯ ವಿದ್ಯೆ- ಕಲೆಗಳ ಸಂರಕ್ಷಣೆ- ಸಂವರ್ಧನೆ- ಸಂಶೋಧನೆ ಮತ್ತು ಸಂಯೋಜನೆಯ ಮೂಲಕ ದೇಶಭಕ್ತ, ಧರ್ಮನಿಷ್ಠ, ಸಂಸ್ಕೃತಿ ಪ್ರೇಮಿ, ವಿಶ್ವಹಿತೈಷಿ ಸತ್ಪ್ರಜೆಗಳ ನಿರ್ಮಾಣದ ಮಹದುದ್ದೇಶದಿಂದ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಸ್ಥಾಪಿಸಲಾಗುತ್ತಿದೆ. ಇದು ಇತರ ವಿಶ್ವವಿದ್ಯಾಲಯಗಳಂತಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ದರ ಭಾರತೀ ಸ್ವಾಮೀಜಿ ಹೇಳಿದರು. ಮಂಗಳೂರಿನ ಪುರಭವನದಲ್ಲಿ ಭಾನುವಾರ ಆಯೋಜಿಸಲಾದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕುರಿತ ಬೃಹತ್ ಸಂವಾದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತ ಅವರು ಈ ವಿಷಯ ತಿಳಿಸಿದರು. ಸಾಮಾನ್ಯ ವಿಶ್ವವಿದ್ಯಾಲಯಗಳು […]

ಮೀಸಲಾತಿ ಗೊಂದಲ : ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Monday, February 17th, 2020
cog.pratibhatane

ಮಡಿಕೇರಿ : ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಇದ್ದ ಮೀಸಲಾತಿಯ ಹಕ್ಕನ್ನು ದುರ್ಬಲಗೊಳಿಸಲು ಹೊರಟಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಮೀಸಲಾತಿ ಪ್ರತಿಪಾದನೆ ಕುರಿತು ಸರ್ಕಾರ ಮತ್ತೆ ಸುಪ್ರೀಂಕೋರ್ಟ್‌ನಲ್ಲಿ ಮರು ಪರಿಶೀಲನಾ ಅರ್ಜಿ […]

ಮುಖ್ಯಮಂತ್ರಿಗಳನ್ನು ಭೇಟಿಯಾದ ಹೋರಾಟ ಸಮಿತಿ : ಫೆ.18 ರಂದು ದೊರೆಸ್ವಾಮಿ ಬಾಳುಗೋಡು ಗ್ರಾಮಕ್ಕೆ ಭೇಟಿ

Monday, February 17th, 2020
horata

ಮಡಿಕೇರಿ : ಸರ್ಕಾರಿ ಜಾಗದಲ್ಲಿ ನೆಲೆನಿಂತಿರುವ ಬಡಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಒಕ್ಕಲೆಬ್ಬಿಸುವುದಿಲ್ಲವೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭರವಸೆ ನೀಡಿರುವುದಾಗಿ ಬಹುಜನ ಕಾರ್ಮಿಕ ಸಂಘದ ಅಧ್ಯಕ್ಷ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಕೆ.ಮೊಣ್ಣಪ್ಪ ತಿಳಿಸಿದ್ದಾರೆ. ಬಹುಜನ ಕಾರ್ಮಿಕರ ಸಂಘ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ವತಿಯಿಂದ ಕೇಂದ್ರ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಅವರ ನೇತೃತ್ವದ ನಿಯೋಗ ಮುಖ್ಯಮಂತ್ರಿ […]

ಅಯೋಧ್ಯೆಯ ರಾಮಜನ್ಮ ಭೂಮಿಗೆ ಭೇಟಿ ನೀಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ

Saturday, February 15th, 2020
virendra-heggade

ಉಜಿರೆ : ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ದೇಶದ ಪ್ರತಿಷ್ಠಿತ ವಿಶ್ವ ವಿದ್ಯಾಲಯವಾದ ಲಕ್ನೋದ ಕಿಂಗ್‌ ಜಾರ್ಜ್‌ ಚಿಕಿತ್ಸಾ ವಿಶ್ವವಿದ್ಯಾಲಯದ ಮಾತಾ ಶಾರದಾಲಯವನ್ನು ಲೋಕಾರ್ಪಣೆ ಮಾಡಲು ಹೋಗುವ ಸಂದರ್ಭದಲ್ಲಿ ಶುಕ್ರವಾರ ಅಯೋಧ್ಯೆಯ ರಾಮಜನ್ಮ ಭೂಮಿಗೆ ಭೇಟಿ ನೀಡಿದರು. ಉತ್ತರ ಪ್ರದೇಶದ ಮಾನ್ಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರವರನ್ನುಅವರ ನಿವಾಸದಲ್ಲಿ ಶನಿವಾರ ಭೇಟಿ ಮಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವರಗಳನ್ನು ನೀಡಿ ಮಾತುಕತೆ ನಡೆಸಿದರು. ಮಾನ್ಯ ಮುಖ್ಯಮಂತ್ರಿಗಳು ಗಂಗಾ ನದಿಯ ಶುದ್ಧೀಕರಣ ಯೋಜನೆಯ ಬಗ್ಗೆ […]

ಕರಾವಳಿಯಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯ ಪತ್ರಕರ್ತರ 35ನೇ ಸಮ್ಮೇಳನ

Saturday, February 15th, 2020
patrakrta

ಮಂಗಳೂರು : ಮಾ.7 ಮತ್ತು 8ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದ್ದು, ಇದು ಕರಾವಳಿ ಕರ್ನಾಟಕದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಆಶ್ರಯದಲ್ಲಿ ನಡೆಯಲಿರುವ ಮೊದಲ ಸಮ್ಮೇಳನವಾಗಿದೆ. ಮಂಗಳೂರು ನಗರವು ಕನ್ನಡ ಪತ್ರಿಕೋದ್ಯಮದ ತವರೂರು. ಪತ್ರಿಕಾ ರಂಗಕ್ಕೆ ಸಂಬಂಧಿಸಿದಂತೆ ಅನೇಕ ಚಾರಿತ್ರಿಕ ಹೆಜ್ಜೆ ಗುರುತುಗಳನ್ನು ಮೂಡಿಸಿದ ನಗರ. 177 ವರ್ಷಗಳ ಹಿಂದೆ ಈ ಊರಿನಲ್ಲಿಯೇ ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ ಹುಟ್ಟಿತು. ಇಲ್ಲಿ ಶುರುವಾದ ಕನ್ನಡ ಪತ್ರಿಕೋದ್ಯಮ ಆಂದೋಲನ ಕನ್ನಡ ನಾಡಿನಾದ್ಯಂತ ವ್ಯಾಪಿಸಿತ್ತು. ಆ ದಿನಗಳಲ್ಲೇ […]

ತುಳು ಭಾಷೆಯ ಮಹಾಕಾವ್ಯ ಮಂದಾರ ರಾಮಾಯಣ

Saturday, February 15th, 2020
thulu-bhashe

ವಿದ್ಯಾಗಿರಿ : ಆಡುಮಾತಿನಲ್ಲಿ ತುಳುವಿನ ಮಹಾಕಾವ್ಯ ಬರೆದವರಲ್ಲಿ ಮಂದಾರ ಕೇಶವ ಭಟ್ಟ ಮೊದಲಿಗರಾಗಿದ್ದಾರೆ ಎಂದು ಮಂಗಳೂರಿನ್ತ ಕಲಾ ವಿಮರ್ಶಕ ಡಾ. ಪ್ರಭಾಕರ ಜೋಷಿ ಹೇಳಿದರು. ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಆಳ್ವಾಸ್ ಕಾಲೇಜಿನ ಇತಿಹಾಸ ವಿಭಾಗ ಹಾಗೂ ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಡೆದ ಮಂದಾರ ರಾಮಾಯಣ: ಇತಿಹಾಸ ಮತ್ತು ಸಂಸ್ಕ್ರತಿ […]

ಆಳ್ವಾಸ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಕುರಿಯನ್ ಅಭಿಮತ

Saturday, February 15th, 2020
kuriyan

ಮೂಡುಬಿದಿರೆ : ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯಗಳೆರಡೂ ಉತ್ತಮವಾರುತ್ತದೆ. ಹೀಗಾಗಿ ಕ್ರೀಡೆಯಿಂದ ಮನಃಶಾಂತಿ, ಉಲ್ಲಾಸ ಲಭಿಸುತ್ತದೆ ಎಂದು ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಅಥ್ಲೆಟಿಕ್ ತರಬೇತುದಾರ ಕುರಿಯನ್ ಪಿ. ಮ್ಯಾಥಿವ್ ಹೇಳಿದರು. ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆದ ಆಳ್ವಾಸ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಂದು ಆರೋಗ್ಯವೇ ಭಾಗ್ಯ ಎಂಬುದು ಕೇವಲ ನುಡಿಯಾಗಿಯೇ ಉಳಿದಿದೆ. ಆದರೆ, ಇದು ತುಂಬ ಕಳವಳಕಾರಿ ವಿಷಯ. ಪ್ರತಿಯೊಬ್ಬರೂ ಆರೋಗ್ಯವಾಗಿ ಇರಬೇಕೆಂದರೆ ದೈಹಿಕ ಚಟುವಟಿಕೆ ಬೇಕು, ಅದಕ್ಕೆ […]

ಮದೆಮಹೇಶ್ವರ ಪದವಿ ಪೂರ್ವ ಕಾಲೇಜ್ ನಲ್ಲಿ ಕಾನೂನು ಅರಿವು ಕಾರ್ಯಕ್ರಮ

Saturday, February 15th, 2020
college-madikeri

ಮಡಿಕೇರಿ : ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಮಡಿಕೇರಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸೋಮೇಗೌಡ ಅವರು ವಿದ್ಯಾರ್ಥಿಗಳಿಗೆ ಪೋಕ್ಸೊ ಕಾಯ್ದೆ ಮತ್ತು ಮಕ್ಕಳ ಹಕ್ಕಗಳ ರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜ್ ನ ಪ್ರಾಂಶುಪಾಲರಾದ ಗುಲಾಬಿ ಜನಾರ್ಧನ ಮಹಿಳೆಯರು ಹಾಗೂ ಮಕ್ಕಳು ಕಾನೂನಿನ ಕುರಿತು ಹೆಚ್ಚು ತಿಳಿದುಕೊಂಡಿರಬೇಕೆಂದರು. ಫ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಿ.ಎಸ್.ಗಣಪತಿ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.  

ವಂಶದ ಹಿತಾಸಕ್ತಿ ಮತ್ತು ಅಭಿವೃದ್ಧಿಯನ್ನು ಬಯಸತಕ್ಕ ಪ್ರಜಾಪ್ರಭುತ್ವ ಇದು ಇಂದಿನ ವಿಪರ್ಯಾಸ : ಸಚಿವ ಸಿ.ಟಿ.ರವಿ

Saturday, February 15th, 2020
ct-ravi

ಮೈಸೂರು : ಮಹಾರಾಜರ ಕಾಲದಲ್ಲಿ ವಂಶಪಾರಂಪರ್ಯ ಅಧಿಕಾರ ಇದ್ದರೂ ಕೂಡ ವಂಶದ ಹಿತಾಸಕ್ತಿಗಾಗಿ ಕೆಲಸ ಮಾಡದ ರಾಜಪ್ರಭುತ್ವ. ಈಗ ಪ್ರಜಾಪ್ರಭುತ್ವದ ಒಳಗೇನೇ ವಂಶದ ಹಿತಾಸಕ್ತಿ ಮತ್ತು ವಂಶದ ಅಭಿವೃದ್ಧಿಯನ್ನು ಬಯಸತಕ್ಕ ಪ್ರಜಾಪ್ರಭುತ್ವ ಇದು ಇಂದಿನ ವಿಪರ್ಯಾಸ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ.ರವಿ ವಿಷಾದ ವ್ಯಕ್ತಪಡಿಸಿದರು. ಅವರಿಂದು ಮೈಸೂರು ಸರಸ್ವತಿಪುರಂದಲ್ಲಿರುವ ಜೆಎಸ್ ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಜಗದ್ಗುರು ಶ್ರೀವೀರ ಸಿಂಹಾಸನ ಮಹಾಸಂಸ್ಥಾನ ಮಠ, ಸುತ್ತೂರು ಶ್ರೀಕ್ಷೇತ್ರ ಮತ್ತು ಜಗದ್ಗುರು ಶ್ರೀಶಿವರಾತ್ರೀಶ್ವರ ಮಹಾವಿದ್ಯಾಪೀಠ […]