ಪುಲ್ವಾಮ ಕರಾಳ ದಿನ : ಹುತಾತ್ಮ ಯೋಧರ ಸ್ಮರಣಾರ್ಥ ಸ್ಮಾರಕ ಸ್ತಂಭ ಗೌರವ ಸಮರ್ಪಣೆ

Friday, February 14th, 2020
pulwama

ಶ್ರೀನಗರ : ಪುಲ್ವಾಮದಲ್ಲಿ 2019 ಫೆ .14ರಂದು ನಡೆದಿದ್ದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಸ್ಮರಣಾರ್ಥ ಸ್ಮಾರಕ ಸ್ತಂಭ ಸಮರ್ಪಣೆ ಮೂಲಕ ಕೇಂದ್ರ ಮೀಸಲು ಪೊಲೀಸ್ ಪಡೆ ಗೌರವ ಸಲ್ಲಿಸಲಿದೆ. ಪುಲ್ವಾಮದ ಲೆಟ್ ಪೋರಾ ಎಂಬಲ್ಲಿರುವ ಸಿಆರ್ ಪಿ ಎಫ್ ತರಭೇತಿ ಕೇಂದ್ರದಲ್ಲಿ ಇಂದು ನಡೆಯುವ ಸಮಾರಂಭದಲ್ಲಿ ಸಿಆರ್ ಪಿ ಎಫ್ ವಿಶೇಷ ಮಹಾ ನಿರ್ದೇಶಕಜೂಲ್ಫಿಕರ್ ಹಸನ್, ಕಾಶ್ಮೀರ ವಲಯದ ಪೊಲೀಸ್ ಮಹಾ ನಿರ್ದೇಶಕ ರಾಜೇಶ್ ಕುಮಾರ್ ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಈ ಸ್ತಂಭದ ಮೇಲೆ […]

ಮೀಸಲಾತಿ ಗೊಂದಲಕ್ಕೆ ಕೇಂದ್ರ ಕಾರಣ : ಕಾಂಗ್ರೆಸ್ ಆರೋಪ; ಫೆ.16 ರಂದು ಮಡಿಕೇರಿಯಲ್ಲಿ ಪ್ರತಿಭಟನೆ

Friday, February 14th, 2020
manjunath

ಮಡಿಕೇರಿ : ಸುಪ್ರೀಂಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪಿನಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಪ್ರತಿಪಾದನೆ ಮೂಲಭೂತ ಹಕ್ಕು ಅಲ್ಲ ಎಂದು ತಿಳಿಸಿದೆ. ಕೇಂದ್ರ ಸರ್ಕಾರ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸದೆ ಇರುವುದರಿಂದಲೇ ಈ ರೀತಿಯ ತೀರ್ಪು ಹೊರ ಬಂದಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೇಂದ್ರ ಸರ್ಕಾರದ ವೈಫಲ್ಯದ ವಿರುದ್ಧ ಫೆ16 ರಂದು ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ. ಸುಪ್ರೀಂಕೋರ್ಟ್ […]

ಮಂಗಳೂರು: ಟ್ಯಾಂಕರ್‌ ಬೈಕ್ ಡಿಕ್ಕಿ ಬೆಸೆಂಟ್‌ ವಿದ್ಯಾರ್ಥಿ ಮೃತ್ಯು

Thursday, February 13th, 2020
Nanthur Accident

ಮಂಗಳೂರು: ನಗರದ ಬೆಸೆಂಟ್‌ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಯೊಬ್ಬ ಟ್ಯಾಂಕರ್‌  ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ನಂತೂರು ಸರ್ಕಲ್‌ ಬಳಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಮಣ್ಣಗುಡ್ಡೆ ನಿವಾಸಿ,  ಕಾರ್ತಿಕ್‌ ಮಲ್ಯ ಎಂದು ಗುರುತಿಸಲಾಗಿದೆ. ಮೃತ ವಿದ್ಯಾರ್ಥಿ ಕಾರ್ತಿಕ್‌ ಸುರತ್ಕಲ್‌ ಕಡೆಯಿಂದ ನಂತೂರು ಸರ್ಕಲ್‌ ಬಳಿ ಬೈಕಿನಲ್ಲಿ ಬರುತ್ತಿದ್ದಂತೆ ನಂತೂರು ಸರ್ಕಲ್‌ ಬಳಿ ಡಿಕ್ಕಿ ಹೊಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಳಿಸಿದ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ

Thursday, February 13th, 2020
alvas

ಮೂಡುಬಿದಿರೆ : ಜೀವನದಲ್ಲಿ ಕಲಿತ ಜ್ಞಾನವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ಯಶಸ್ಸನ್ನು ಗಳಿಸಬಹುದು ಎಂದು ಗುಜರಾತಿನ ರಾಷ್ಟ್ರಕಥಾ ಶಿಬಿರದ ಸಂಸ್ಥಾಪಕ ಸ್ವಾಮಿ ಧರ್ಮಬಂಧುಜಿ ತಿಳಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಂ ಸ್ಪೀಕರ‍್ಸ್ ಕ್ಲಬ್ ವತಿಯಿಂದ ನಡೆದ ಸಂವಾದ ಕಾರ‍್ಯಕ್ರಮದಲ್ಲಿ ಮಾತನಾಡಿದರು. ಅವಿವೇಕದಿಂದ ಯಾವುದನ್ನು ನಂಬದೆ, ಬೌದ್ದಿಕ ಮಟ್ಟದಲ್ಲಿ ವಿಚಾರ ಮಾಡುವುದರ ಮೂಲಕ ವಿಷಯವನ್ನು ಅರಿಯಬೇಕು. ತಾವು ಗಳಿಸಿದ ಜ್ಞಾನವನ್ನು ತಮ್ಮಲ್ಲೇ ಇಟ್ಟುಕೊಳ್ಳದೇ, ಎಲ್ಲರಿಗೂ ಧಾರೆಯೆರೆಯಬೇಕು. ತಮ್ಮ ತಪ್ಪನ್ನು ಒಪ್ಪಿಕೊಳ್ಳದೇ ವಿನಾ ಜೀವನದಲ್ಲಿ ಸುಧಾರಣೆ ಸಾಧ್ಯವಿಲ್ಲ ಎಂದು ಹೇಳಿದರು. ಆಳ್ವಾಸ್ […]

ವ್ಯಾಪಾರಿಗಳಿಂದ ದಿಢೀರ್ ಪ್ರತಿಭಟನೆ : ನಗರಸಭೆ ವಿರುದ್ಧ ಅಸಮಾಧಾನ

Thursday, February 13th, 2020
market-protest

ಮಡಿಕೇರಿ : ಮಡಿಕೇರಿಯ ಮಾರುಕಟ್ಟೆ ಆವರಣ ಅಶುಚಿತ್ವದಿಂದ ಕೂಡಿದ್ದು, ಮಾಂಸದ ಮಾರುಕಟ್ಟೆ ಗಬ್ಬೆದ್ದು ನಾರುತ್ತಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಇದ್ದರೂ ನಗರಸಭೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿ ಸಂತೆ ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು. ತರಕಾರಿ ಮತ್ತು ಮಾಂಸದ ಮಾರುಕಟ್ಟೆಗಳ ಅವ್ಯವಸ್ಥೆ ಹಾಗೂ ಅಶುಚಿತ್ವದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಮಾರುಕಟ್ಟೆ ಆವರಣದಲ್ಲಿ ನಗರಸಭೆಯ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಮೀನು ಮತ್ತು ಮಾಂಸ ಮಾರಾಟದ ಪ್ರದೇಶ ಅಭಿವೃದ್ಧಿ ಕಾಣದೆ ಅವೈಜ್ಞಾನಿಕ ವ್ಯವಸ್ಥೆಯಿಂದ ದುರ್ವಾಸನೆ ಬೀರುತ್ತಿದೆ […]

ಫೆ. 28 ರಿಂದ ಭಾವೈಕ್ಯತೆಯ ಕ್ಷೇತ್ರ್ರ ಎಮ್ಮೆಮಾಡು ಮುಖಾಂ ಉರೂಸ್ ಆರಂಭ

Thursday, February 13th, 2020
emmemadu

ಮಡಿಕೇರಿ : ಭಾವೈಕ್ಯತೆಯ ಎಮ್ಮೆಮಾಡು ಕ್ಷೇತ್ರದಲ್ಲಿ ವಾರ್ಷಿಕ ಉರೂಸ್ ಕಾರ್ಯಕ್ರಮ ಫೆ.28 ರಿಂದ ಮಾ.6 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಜರುಗಲಿದೆ. ಉರೂಸ್ ಸಂದರ್ಭ ಸಾರ್ವಜನಿಕ ಸಮ್ಮೇಳನ, ಸಾಮೂಹಿಕ ವಿವಾಹ, ಅನ್ನಸಂತರ್ಪಣೆ, ಮತಪ್ರವಚನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಉರೂಸ್ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭದಂದು ಧಾರ್ಮಿಕ ಪಂಡಿತರು, ಉಲಮಾಗಳು, ಉಮಾರಗಳು ಸೇರಿದಂತೆ ಪ್ರಮುಖ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಮಾ.2 ರಂದು ಸಾರ್ವಜನಿಕ ಸಮ್ಮೇಳನ ಮತ್ತು ಸಾಮೂಹಿಕ ಅನ್ನಸಂತರ್ಪಣೆಯಾಗಲಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಲಕ್ಷಾಂತರ […]

ತುಳುನಾಡಿನ ಕೈಗಾರಿಕೆಗಳಲ್ಲಿ ತುಳುವರಿಗೆ 80% ಉದ್ಯೋಗ ಮೀಸಲಾತಿ ನೀಡುವಂತೆ ಯೋಗೀಶ್ ಶೆಟ್ಟಿ ಜೆಪ್ಪು ಒತ್ತಾಯ

Thursday, February 13th, 2020
yogish-shetty

ಮಂಗಳೂರು : ತುಳುನಾಡಿನಲ್ಲಿ ತುಳುವರಿಗೆ ಉದ್ಯೋಗ ಮೀಸಲಾತಿ ಹೋರಾಟ ಸಮಿತಿ ಪ್ರತಿಭಟನಾ ಸಭೆಯು ಗುರುವಾರ 13-2-2020 ಬೆಳಿಗ್ಗೆ 11:30ಕ್ಕೆ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಉದ್ಯೋಗ ಮೀಸಲಾತಿಗಾಗಿ ಪ್ರತಿಭಟನೆ ಸಭೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಯೋಗಿಶ್ ಶೆಟ್ಟಿ ಜಪ್ಪುರವರು ಸಭೆಯನ್ನು ಉದ್ದೇಶೀಸಿ ವಿದ್ಯಾಭ್ಯಾಸ ಪ್ರತಿಯೊಬ್ಬರಿಗೂ ಜೀವನ ಸಾಗಿಸಲು ಅಗತ್ಯ. ಹಾಗೂ ಹೆತ್ತವರು ತಮ್ಮ ಬೆವರು ಸುರಿಸಿ ನಮ್ಮನ್ನು ವಿದ್ಯಾವಂತರನ್ನಾಗಿ ಮಾಡಿದಕ್ಕೆ ತಾಯಿ ನಾಡಿನಲ್ಲಿ ಉದ್ಯೋಗ ಮಾಡಿ ಅವರನ್ನು ಸಂತೋಷದಲ್ಲಿ ಇರಿಸುವುದು ಅತಿಮುಖ್ಯ. ಪ್ರಸ್ತುತ ತುಳುನಾಡದಲ್ಲಿ ವಾಸಿಸುವ ಯುವಕರಿಗೆ ಉದ್ಯೋಗ […]

ಲಕ್ನೋ ನ್ಯಾಯಾಲಯದ ಆವರಣದಲ್ಲಿ ಸಜೀವ ಬಾಂಬ್​ ಸ್ಫೋಟ : ಹಲವರಿಗೆ ಗಾಯ

Thursday, February 13th, 2020
lacknow

ಉತ್ತರ ಪ್ರದೇಶ : ವಕೀಲರನ್ನು ಗುರಿಯಾಗಿಸಿಕೊಂಡು ಲಕ್ನೋ ನ್ಯಾಯಾಲಯದಲ್ಲಿ ಸಜೀವ ಬಾಂಬ್ ಸ್ಪೋಟಿಸಲಾಗಿದ್ದು, ಘಟನೆಯಲ್ಲಿ ಅನೇಕ ವಕೀಲರು ಗಾಯಗೊಂಡಿದ್ದಾರೆ. ಬಾಂಬ್ ಸ್ಪೋಟ ಘಟನೆ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಗಾಯಗೊಂಡ ವಕೀಲರನ್ನು ತಕ್ಷಣಕ್ಕೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವಸಿರ್ಗಂಜ್ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದರು. ಈ ವೇಳೆ ಮೂರು ಸಜೀವ ಬಾಂಬ್ ಪತ್ತೆಯಾಗಿದೆ. ಇಲ್ಲಿನ ಜಿಲ್ಲಾ ನ್ಯಾಯಾಲಯದ ವಕೀಲ ಸಂಜೀವ್ ಲೋದಿ ಅವರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಕೂದಲೆಳೆ ಅಂತರದಲ್ಲಿ […]

ಯೋಗ ಮತ್ತು ನ್ಯಾಚುರೋಪತಿಯನ್ನು ಭಾರತೀಯ ಔಷಧ ಪದ್ಧತಿಯ ರಾಷ್ಟ್ರೀಯ ಆಯೋಗಕ್ಕೆ ಸೇರಿಸಲು ಕೇಂದ್ರ ಸರಕಾರಕ್ಕೆ ಆಗ್ರಹ

Thursday, February 13th, 2020
yoga

ಧರ್ಮಸ್ಥಳ : ಶ್ರೀ. ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರುಗಳು ಯೋಗ ಮತ್ತು ನ್ಯಾಚುರೋಪತಿಯನ್ನು ಭಾರತೀಯ ಔಷಧ ಪದ್ಧತಿಯ ರಾಷ್ಟ್ರೀಯ ಆಯೋಗ (ಎನ್‌ಸಿಐಎಸ್‌ಎಂ)ಕ್ಕೆ ಸೇರಿಸಲು ಭಾರತ ಸರಕಾರವನ್ನು ಆಗ್ರಹಿಸಿ ಕಾಲೇಜಿನ ಆವರಣದಲ್ಲಿ ಸಾಂಕೇತಿಕವಾಗಿ ಒಂದು ದಿನದ ಮೌನ ಮತ್ತು ಉಪವಾಸ ಸತ್ಯಾಗ್ರಹವನ್ನು ತಾರೀಕು 12.02.2020 ರಂದು ನಡೆಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಭಾರತೀಯ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ಪದವಿದರರ ವೈದ್ಯಕೀಯ ಸಂಘದ ಕಾರ್ಯದರ್ಶಿಗಳಾದ ಡಾ.ಪ್ರಶಾಂತ […]

ಕಕ್ಕೆಪದವಿನಲ್ಲಿ ಕ್ಯಾಂಪ್ಕೊ ಶಾಖೆ ಆರಂಭ

Thursday, February 13th, 2020
kakkepadavu

ಮಂಗಳೂರು : ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊದ ನೂತನ ಅಡಿಕೆ ಖರೀದಿ ಕೇಂದ್ರವು ಬಂಟ್ವಾಳ ತಾಲೂಕಿನ ಕಕ್ಕೆಪದವು ಶ್ರೀ ಪಂಚದುರ್ಗಾ ದೇವಸ್ಥಾನ ರಸ್ತೆಯ ಪಂಚಾಕ್ಷರಿ ಕಟ್ಟಡದಲ್ಲಿ ಇಂದು ಶುಭಾರಂಭಗೊಂಡಿತು. ಈ ಪ್ರದೇಶದ ಅಡಿಕೆ ಕೃಷಿಕರಿಗೆ ತಮ್ಮ ಬೆಳೆಗೆ ಸ್ಥಳೀಯವಾಗಿ ಉತ್ತಮ ಮಾರುಕಟ್ಟೆಯ ಕೊರತೆಯಿದ್ದು, ಇಲ್ಲಿ ಕ್ಯಾಂಪ್ಕೊ ಶಾಖೆಯನ್ನುತೆರೆಯಬೇಕೆಂಬ ಕೂಗು ಬಹುದಿನಗಳಿಂದ ಕೃಷಿಕ ವಲಯದಲ್ಲಿ ಕೇಳಿಬಂದಿತ್ತು. ಇದೀಗ ಸಂಸ್ಥೆಯು ತನ್ನ ನೂತನ ಖರೀದಿ ಕೇಂದ್ರವನ್ನುಇಲ್ಲಿ ಸ್ಥಾಪಿಸಿದ್ದು, ಅಡಿಕೆಖರೀದಿಯನ್ನು ಆರಂಭಿಸಿದೆ.