ಕಲಾವಿದೆ ಶೋಭಾ ರೈಗೆ ಗೌರವ ಡಾಕ್ಟರೇಟ್ ಪ್ರದಾನ

Monday, June 3rd, 2019
shobha-rai

ಮಂಗಳೂರು : ಖ್ಯಾತ ರಂಗಭೂಮಿ ಮತ್ತು ಸಿನಿಮಾ ನಟಿ ಶೋಭಾ ರೈ ಅವರಿಗೆ ಚೆನ್ನೈಯ ಇಂಟರ್ ನ್ಯಾಷನಲ್ ಗ್ಲೋಬಲ್ ಪೀಸ್ ಯುನಿರ್ಸಿಟಿಯು ಗೌರವ ಡಾಕ್ಟರೇಟ್ ನೀಡಿದೆ. ಹೊಸೂರುವಿನಲ್ಲಿರುವ ಸಂಪೂರ್ಣ ಕಾನ್ಪರೆನ್ಸ್ ಹಾಲ್‌ನಲ್ಲಿ ಜರಗಿದ ಸಮಾರಂಭ ದಲ್ಲಿ ಡಾ ಕೆ. ಅಶೋಕ್ ಕುಮಾರ್ ಶೀಬಾ ಗ್ರೇಸ್. ಡಾ ಎನ್. ಮರ್ಕಾನಂದನ್ ಅವರು ಶೋಭಾ ರೈಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಡಾ. ರಮಾಲಕ್ಷ್ಮೀ ಚೆಲ್ಲಪ್ಪ, ಡಾ.ಸಿ ಪೌಲ್ ಎಂಬಾನೆಜರ್, ತಿರು ಎನ್. ಜೀವನಂಥಮ್, ಬಿ.ಎಸ್ ಕಣ್ಣನ್, ಆರ್.ಬಾಲಾಜಿ, ಎಂ […]

ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲು ನಿರಾಕರಣೆ ಮಗು ಸಾವು

Saturday, June 1st, 2019
Kusumavati

ಮಂಗಳೂರು: ವೈದ್ಯರ ನಿರ್ಲಕ್ಷ್ಯವೇ ನಮ್ಮ ಮಗು ಸಾವಿಗೆ ಕಾರಣವೆಂದು ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ರಾಘವಗೌಡ ಹಾಗೂ ಕುಸುಮಾವತಿ ದಂಪತಿ ಆರೋಪಿಸಿದ್ದಾರೆ. ಗರ್ಭಿಣಿಗೆ ಸಿಜೇರಿಯನ್ ಮಾಡಿದ ಸಂದರ್ಭ ಬದುಕಿದ್ದ ಮಗು, ಸರ್ಕಾರಿ ವೈದ್ಯರ ನಿರ್ಲಕ್ಷ್ಯದಿಂದ ಬಲಿಯಾಯಿತು ಎಂದು ದಂಪತಿ ದೂರಿದ್ದಾರೆ. ಮೊನ್ನೆ ಕುಸುಮಾವತಿ ಅವರನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಗ ವೈದ್ಯರು ಗರ್ಭಿಣಿಯನ್ನು ಪರೀಕ್ಷಿಸಿ, ಮಗು ಹೊಟ್ಟೆಯಲ್ಲಿಯೇ ಮೃತಪಟ್ಟಿದೆ. ಅದನ್ನು ಹೊರಗೆ ತೆಗೆಯಬೇಕು ಎಂದು ಹೇಳಿದ್ದರಂತೆ. ಮಗು ಕಳೆದುಕೊಂಡ ತಾಯಿಆದರೆ ಶಸ್ತ್ರಚಿಕಿತ್ಸೆ ಮಾಡಿದಾಗ ಮಗು ಬದುಕಿರುವುದಾಗಿ […]

ಅನಾರೋಗ್ಯದಿಂದ ಬಳಲುತ್ತಿದ್ದ ಕುಟುಂಬಕ್ಕೆ ರೂ.2,00,000 ಪರಿಹಾರ ನೀಡಿದ ಬಂಟ್ವಾಳ ಶಾಸಕ

Saturday, June 1st, 2019
Rajesh Naik

ಬಂಟ್ವಾಳ : ತಾಲೂಕಿನ ಕುಕ್ಕಿಪ್ಪಾಡಿ ಗ್ರಾಮದ ನೇಲ್ಯರುಮೇರು ನಿವಾಸಿಯಾದ ಶ್ರೀಮತಿ ತ್ರಿವೇಣಿ ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಕುಟುಂಬಸ್ಥರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ರೂ.2,00,000 ಪರಿಹಾರ ನಿಧಿಯ ಚೆಕ್‌ನ್ನು ಶಾಸಕರ ಕಚೇರಿಯಲ್ಲಿ ವಿತರಿಸಿದರು.

ಮಹರಾಷ್ಟ್ರ ವ್ಯಕ್ತಿಯಲ್ಲಿ 80 ಲಕ್ಷ ರೂ. ಹವಾಲ ಹಣ

Friday, May 31st, 2019
Maharashtrian

ಕಾಸರಗೋಡು :  ಮಹರಾಷ್ಟ್ರ ನಿವಾಸಿಯೊಬ್ಬ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಕೇರಳಕ್ಕೆ ಸಾಗಾಟ ಮಾಡುತ್ತಿದ್ದ 80 ಲಕ್ಷ ರೂ. ಹವಾಲ ಹಣವನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮಹರಾಷ್ಟ್ರ ನಿವಾಸಿ ಭರತ್ ದೇಶ್ ಮುಖ್ ಎಂಬಾತನ ಶರ್ಟ್, ಪ್ಯಾಂಟ್ ಹಾಗೂ ಜಾಕೆಟ್ ನೊಳಗೆ ತುಂಬಿಸಿಕೊಂಡು ಹಣ ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ. ಬದಿಯಡ್ಕ ಅಬಕಾರಿ ದಳದ ಸಿಬ್ಬಂದಿಗಳು ನಡೆಸಿದ ಕಾರ್ಯಾಚರಣೆಯಲ್ಲಿಅಧಿಕಾರಿಗಳು ಬಸ್ಸು ತಪಾಸಣೆ ನಡೆಸುತ್ತಿದ್ದ ವೇಳೆ ಪ್ರಕರಣ ಬೆಳಕಿಗೆ ಬಂದಿದ್ದು ಆರೋಪಿಯನ್ನು ಬಂಧಿಸಲಾಗಿದೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಂದಿಗೆ ಹೃದಯಾಘಾತ

Friday, May 31st, 2019
puttur-Nandi

ಪುತ್ತೂರು : ತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಂದಿ ಹೆಸರಿನ ಬಸವ ಹೃದಯಾಘಾತಕ್ಕೆ ಒಳಗಾಗಿ ಮೇ.30ರ ರಾತ್ರಿ ಮೃತಪಟ್ಟಿದೆ . ನಂದಿ ದಿನ ನಿತ್ಯದಂತೆ ಮೇ30ರ ಮಧ್ಯಾಹ್ನ ಪೂಜೆ ವೇಳೆ ದೇವಸ್ಥಾನದ ಮುಂಭಾಗ ಬಂದು ದೇವರ ಪೂಜೆ ವೀಕ್ಷಿಸಿತ್ತು. ಆದರೆ ರಾತ್ರಿ 7.45 ರ ವೇಳೆಗೆ ನಂದಿ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಎಲ್ಲರಿಗೂ ಪ್ರೀತಿ ಪಾತ್ರವಾಗಿದ್ದ ಬಸವನ ಸಾವಿಗೆ ಭಕ್ತರು ಕಂಬನಿ ಮಿಡಿದಿದ್ದಾರೆ.

ಸ್ಥಳೀಯ ಸಂಸ್ಥೆ : ಮೂಡಬಿದ್ರೆ ಪುರಸಭೆ, ಸುಳ್ಯ ನಗರ ಪಂಚಾಯತ್ ಬಿಜೆಪಿ ಗೆ

Friday, May 31st, 2019
localboddy

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 2ರಲ್ಲಿ ಬಿಜೆಪಿ ಪಾರಮ್ಯ ಮೆರೆದಿದೆ. ಒಂದರಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಸುಳ್ಯ ನಗರ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿ ಸುಳ್ಯ ನಗರ ಸಭೆ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ. ಮೂಡಬಿದ್ರೆ ಪುರಸಭೆ ಅಧಿಕಾರದ ಚುಕ್ಕಾಣಿ ಬಿಜೆಪಿ ಹಿಡಿದಿದ್ದು, ಮುಲ್ಕಿ ನಗರ ಪಂಚಾಯತ್ ನಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಸುಳ್ಯ ನಗರ ಪಂಚಾಯತ್ ನ 20 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 14ರಲ್ಲಿ ಬಿಜೆಪಿ ಹಾಗು […]

ಎಂಟು ತಿಂಗಳ ಹೆಣ್ಣು ಮಗುವನ್ನು ಕೊಲೆ ಮಾಡಿದ ತಂದೆ

Thursday, May 30th, 2019
laxmana

ಮಂಗಳೂರು :  ತಂದೆಯೇ ಎಂಟು ತಿಂಗಳ ಹೆಣ್ಣು ಮಗುವನ್ನು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮಂಗಳೂರಿನ ಬೋಳಾರ ಸಮೀಪ ನೇತ್ರಾವತಿ ನದಿ ದಡದಲ್ಲಿ ಸೋಮವಾರ ಮೇ 27ರಂದು ಎಂಟು ತಿಂಗಳ ಹೆಣ್ಣು ಮಗುವಿನ ಮೃತದೇಹ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಂದೆ, ಕೊಪ್ಪಳ ಮೂಲದ ಲಕ್ಷ್ಮಣ ತೆಂಗಿನಹಾಳ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮಣ ತೆಂಗಿನಹಾಳ ಮತ್ತು ರೂಪಾ ದಂಪತಿ ಬೋಳಾರದಲ್ಲಿರುವ ಕಟ್ಟಡ ನಿರ್ಮಾಣ ಸಂಸ್ಥೆಯೊಂದರ ತಾತ್ಕಾಲಿಕ ಶೆಡ್ ‌ನಲ್ಲಿ ಮಗುವಿನೊಂದಿಗೆ ವಾಸವಾಗಿದ್ದರು. […]

ಶಕ್ತಿ ವಸತಿ ಶಾಲೆಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿಅಕ್ಷರಭ್ಯಾಸ

Tuesday, May 28th, 2019
Shakti School

ಮಂಗಳೂರು :  ಶಕ್ತಿ ವಸತಿ ಶಾಲೆಯಲ್ಲಿಒಂದನೆಯ ತರಗತಿಯ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿ, ಸಂಪ್ರದಾಯದಂತೆ ಅಕ್ಷರಭ್ಯಾಸ ಮಾಡಲಾಯಿತು. ಶಾರದೆಯ ವಿಗ್ರಹದೆದುರು ಹರಿವಾಣದಲ್ಲಿಅಕ್ಕಿಯನ್ನು ಹಾಕಿ ಅದರ ಮೇಲೆ ಪೋಷಕರು ಮಕ್ಕಳಿಂದ ’ಓಂ’ ಬರೆಯಿಸಿ ಶಿಕ್ಷಣಕ್ಕೆ ಓಂಕಾರ ಹಾಡಿದರು. ಶಾಲಾ ಪ್ರಾಚಾರ್ಯರಾದ ಶ್ರೀಮತಿ ವಿದ್ಯಾಕಾಮತ್ ಜಿ. ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಆನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಪೋಷಕರಿಗೆ ಶಾಲೆ ಹಾಗೂ ಶಾಲೆಯಲ್ಲಿ ನಡೆಯಲಿರುವ ಪಠ್ಯ ಮತ್ತು ಪಠ್ಯೇತರಚಟುವಟಿಕೆಯ ಬಗ್ಗೆ ಶಾಲಾ ಪ್ರಾಯರ್ಯೆ ಮಾಹಿತಿ ನೀಡಿದರು. […]

ಸ್ಪೀಡ್ ಸ್ಕೇಟಿಂಗ್ ಓಪನ್ ಚಾಲೆಂಜ್ ನಲ್ಲಿ ರಾಜ್ಯಕ್ಕೆ ಚಿನ್ನ ತಂದ ಮಂಗಳೂರಿನ ಬಾಲಕಿ

Monday, May 27th, 2019
Anagha

ಮಂಗಳೂರು  : ದೆಹಲಿಯ ಗುರುಗ್ರಾಮ್ ನಲ್ಲಿ ಐಸ್ ಸ್ಕೇಟಿಂಗ್ ಅಸೋಸಿಯೇಷನ್‌ ಆಫ್‌ ಇಂಡಿಯಾ ಆಯೋಜಿಸಿದ ಸ್ಪೀಡ್ ಸ್ಕೇಟಿಂಗ್ ಓಪನ್ ಚಾಲೆಂಜ್ 2019 ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ ಮಂಗಳೂರಿನ ಅನಘಾ ಚಿನ್ನದ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. 8 ರಿಂದ 10 ವರ್ಷದೊಳಗಿನ ಬಾಲಕಿಯರ ವಿಭಾಗದ 500 ಮೀಟರ್ ಐಸ್ ರಿಂಕ್ ರೇಸ್ ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.ಮಂಗಳೂರಿನ‌ ಡಾ.ರಾಜೇಶ್ ಹುಕ್ಕೇರಿ ಹಾಗೂ ಡಾ.ಅನಿತಾ ರಾಜೇಶ್ ದಂಪತಿಯ ಪುತ್ರಿಯಾದ ಅನಘಾ ಬಿಜೈ ಲೂರ್ಡ್ಸ್ ಸಿಬಿಎಸ್ಇ ಶಾಲೆಯ […]

ಪೆರ್ಲಾದ ಇಂಗ್ಲಿಷ್ ಶಿಕ್ಷಕಿ ಶಾರ್ಜಾದಲ್ಲಿ ಹೃದಯಾಘಾತ

Saturday, May 25th, 2019
mushruna

ಕಾಸರಗೋಡು : ಪೆರ್ಲ ನಿವಾಸಿಯಾದ ಶಿಕ್ಷಕಿಯೋರ್ವಳು ಶಾರ್ಜಾದಲ್ಲಿ ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ಮನೆಯವರಿಗೆ ಮಾಹಿತಿ ಲಭಿಸಿದೆ. ಪೆರ್ಲ ಇಡಿಯಡ್ಕ ಮರ್ಸೂನ (28) ಮೃತಪಟ್ಟವರು. ಈ ಹಿಂದೆ ಬದಿಯಡ್ಕ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಇವರು ಆರು ತಿಂಗಳ ಹಿಂದೆ ಸಂಬಂಧಿಕರ ಜತೆ ಶಾರ್ಜಾಕ್ಕೆ ತೆರಳಿದ್ದರು. ಅಲ್ಲಿನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಶುಕ್ರವಾರ ಬೆಳಿಗ್ಗೆ ವಾಸಸ್ಥಳಲ್ಲಿಯೇ ಹೃದಯಾಘಾತಕ್ಕೊಳಗಾದ ಮರ್ಸೂನ ರನ್ನು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ಮೃತದೇಹವನ್ನು ಊರಿಗೆ ತರುವ ಸಿದ್ಧತೆ ನಡೆಯುತ್ತಿದೆ ಎಂದು ಕುಟುಂಬ […]