ಚೀನಾ ದೂತಾವಾಸದ ಸಿಬ್ಬಂದಿಯನ್ನು ರಕ್ಷಿಸಿದ ಪೊಲೀಸ್ ಅಧಿಕಾರಿ ಸುಹೈ ಅಜೀಜ್ ತಲ್ಪುರ್

Saturday, November 24th, 2018
karachi

ಪಾಕಿಸ್ತಾನ: ‘ಮಗಳಿಗೆ ಕೇವಲ ಧಾರ್ಮಿಕ ಶಿಕ್ಷಣ ಸಾಲದು, ಆಧುನಿಕ ಶಿಕ್ಷಣ ಸಿಗಬೇಕು ಎಂದು ಅಪ್ಪ ನನ್ನನ್ನು ಖಾಸಗಿ ಶಾಲೆಗೆ ಸೇರಿಸಿದರು. ಸಂಬಂಧಿಕರು, ನೆರೆಹೊರೆಯವರು ನಮ್ಮನ್ನು ದೂರ ಮಾಡಿದರು. ಆದರೆ ಅಪ್ಪ ಅಂಜಲಿಲ್ಲ. ಹುಟ್ಟಿದ ಊರನ್ನೇ ಬಿಟ್ಟು ಬೇರೊಂದು ಊರಲ್ಲಿ ನನಗೆ ಬದುಕುಕಟ್ಟಿಕೊಟ್ಟರು. ನನ್ನ ಎಲ್ಲ ಸಾಧನೆ ಅವರಿಗೆ ಅರ್ಪಣೆ…’ ಹೀಗೆ ತಮ್ಮ ಬಾಲ್ಯ ನೆನಪಿಸಿಕೊಂಡು ಭಾವುಕರಾದವರು ಚೀನಾ ದೂತಾವಾಸದ ಸಿಬ್ಬಂದಿಯನ್ನು ಬಲೂಚ್ ಉಗ್ರರ ದಾಳಿಯಿಂದ ಕಾಪಾಡಿದ ಕರಾಚಿಯ ಪೊಲೀಸ್ ವರಿಷ್ಠಾಧಿಕಾರಿ ಸುಹೈ ಅಜೀಜ್ ತಲ್ಪುರ್. ಉಗ್ರರ ನಿಗ್ರಹ […]

ಮಿಸ್‌ ಟೀನ್‌ ಇಂಡಿಯಾ: ಮಂಗಳೂರಿನ ಮಾನ್ಸಿ ಆರ್‌. ಗೆ ಟಾಪ್‌ ಮಾಡೆಲ್‌ ಅವಾರ್ಡ್

Saturday, November 24th, 2018
miss-top-model

ಮಂಗಳೂರು: ಹರಿಯಾಣಾದ ಗುರ್‌ಗಾಂವ್‌ ನಲ್ಲಿ ನಡೆದ ಮಿಸ್‌ ಟೀನ್‌ ಇಂಡಿಯಾ ಸ್ಪರ್ಧೆಯಲ್ಲಿ ಮಂಗಳೂರಿನ ಮಾನ್ಸಿ ಆರ್‌. ಟಾಪ್‌ ಮಾಡೆಲ್‌ ಅವಾರ್ಡ್‌-2018 ಪಡೆದುಕೊಂಡಿದ್ದಾರೆ. ಮಿಸ್‌ ಇಂಡಿಯಾ ಮಲ್ಟಿನ್ಯಾಶನಲ್‌ ಸ್ಪರ್ಧೆಯ ಪ್ರಶಸ್ತಿ ವಿಜೇತೆ ದೀಕ್ಷಿತಾ ಶರ್ಮ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಬೆಂಗಳೂರಿನಲ್ಲಿ ನಡೆದ ಮಿಸ್‌ ಟೀನ್‌ ಇಂಡಿಯಾ ಸೌತ್‌ ಝೋನ್‌ ಸ್ಪರ್ಧೆಯಲ್ಲಿ ಮಾನ್ಸಿ ಆರ್‌. ವಿನ್ನರ್‌ ಆಗಿ ರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಗೊಂಡಿದ್ದರು. ಅವರು ಮಂಗಳೂರು ಅಲೋಶಿಯಸ್‌ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ರೋಹನ್‌- ಚಂದ್ರಕಲಾ ದಂಪತಿಯ ಪುತ್ರಿ.

ವೆನ್ಲಾಕ್ ಆಸ್ಪತ್ರೆ ಕಾರ್ಮಿಕರಿಂದ ಜಿಲ್ಲಾ ಅಧೀಕ್ಷಕರ ಕಚೇರಿಗೆ ಮುತ್ತಿಗೆ

Saturday, November 24th, 2018
wenlock

ಮಂಗಳೂರು : ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರನ್ನು ವಿನಾಃ ಕಾರಣ ಕೆಲಸದಿಂದ ವಜಾ ಮಾಡಿದ್ದು,ಅವರ ಮರು ನೇಮಕವಾಗಬೇಕು,ಹಾಗೂ ಕಾರ್ಮಿಕರಿಗೆ ಸಂಬಳ ನೀಡದೆ ಸತಾಯಿಸುತ್ತಿರುವ ಸಾಯಿ ಸೆಕ್ಯುರಿಟಿ ಸಂಸ್ಥೆ ಹಾಗೂ ಜಿಲ್ಲಾ ಅಧೀಕ್ಷಕರ ಸರ್ವಾಧಿಕಾರಿ ಧೋರಣೆ ಖಂಡಿಸಿ CITU ನೇತ್ರತ್ವದಲ್ಲಿ ಗುತ್ತಿಗೆ ಕಾರ್ಮಿಕರಿಂದ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರ ಕಚೇರಿಗೆ ಮುತ್ತಿಗೆ ಹಾಕಲಾಯಿತು. ಪ್ರತಿಭಟನ ಸಭೆಯನ್ನುದ್ದೇಶಿಸಿ ಮಾತನಾಡಿದ CITU ದ.ಕ.ಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಲೈಸನ್ಸ್ ಪಡೆಯದೆ ಸರಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ವಹಿಸಿದ ಸಾಯಿ […]

ಟ್ಯಾಂಕರ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

Saturday, November 24th, 2018
kadaba

ಕಡಬ: ಟ್ಯಾಂಕರ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಡಬದ ನೆಲ್ಯಾಡಿ ಗ್ರಾಮದ ಆರ್ಲದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ. ಡಿಕ್ಕಿಯ ರಭಸಕ್ಕೆ ಟ್ಯಾಂಕರ್ ಲಾರಿಯು ಮಗುಚಿ ಬಿದ್ದಿದೆ. ಕೊನಾಲು ಗ್ರಾಮದ ಕಡೆಂಬಿಲ ನಿವಾಸಿ ಅಣ್ಣಿ ಪೂಜಾರಿ ಎಂಬುವರ ಪುತ್ರ ಜಗದೀಶ್ (44) ಮೃತರು. ಜಗದೀಶ್ ಬೈಕ್ನಲ್ಲಿ ನೆಲ್ಯಾಡಿಯಿಂದ ಮನೆಗೆ ಹೋಗುತ್ತಿದ್ದಾಗ ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಟ್ಯಾಂಕರ್ ಬೈಕ್ಗೆ ಗುದ್ದಿದೆ. ಪರಿಣಾಮ ಜಗದೀಶ್ ಅವರ ದೇಹ ಛಿದ್ರಗೊಂಡು ಅವರು ಸ್ಥಳದಲ್ಲೇ […]

50 ಸಾವಿರ ಹಣಕ್ಕಾಗಿ ಕಿಡ್ನಾಪ್​ ಮಾಡಿದ್ದ ಐವರ ಆರೋಪಿಗಳ ಬಂಧನ

Friday, November 23rd, 2018
bengaluru

ಬೆಂಗಳೂರು: 50 ಸಾವಿರ ರೂ.ಗಾಗಿ ಯುವಕನೊಬ್ಬನನ್ನು ಕಿಡ್ನಾಪ್ ಮಾಡಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಬೊಮ್ಮನಹಳ್ಳಿ‌ ಪೊಲೀಸರು ಯಶಸ್ವಿಯಾಗಿದ್ದಾರೆ. ಕೃಷ್ಣನಾಯಕ್, ಯಶವಂತ್, ರಮೇಶ್, ಶಶಿಕುಮಾರ್ ಹಾಗೂ ಅರುಣ್ ಬಂಧಿತ ಆರೋಪಿಗಳು. ಬಂಧಿತರಿಂದ 3.65 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರ ಬಂಧನದಿಂದ ದರೋಡೆ, ಸುಲಿಗೆ ಸೇರಿದಂತೆ ನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾಗಿದ್ದ 8 ಪ್ರಕರಣಗಳು ಬೆಳಕಿಗೆ ಬಂದಿವೆ. ಮೋಜು‌‌‌ ಜೀವನ ನಡೆಸುವುದೇ ಕಾಯಕ ಮಾಡಿಕೊಂಡಿದ್ದ ಆರೋಪಿಗಳು ಕಾರು, ಆಟೋ ಮೂಲಕ ರಾತ್ರಿ ವೇಳೆ ಒಂಟಿಯಾಗಿ ಒಡಾಡುವವರನ್ನು ಗುರಿಯಾಗಿಸಿಕೊಂಡು […]

ನವೆಂಬರ್ 24 ರಂದು ಅನಂತಕುಮಾರ್ ವೈಕುಂಠ ಸಮಾರಾಧನೆ

Friday, November 23rd, 2018
ananth-bjp

ಬೆಂಗಳೂರು: ಇತ್ತೀಚಿಗೆ ಅಗಲಿದ ಕೇಂದ್ರ ಸಚಿವ ಅನಂತಕುಮಾರ್ ಅವರ ವೈಕುಂಠ ಸಮಾರಾಧನೆಯನ್ನು ನವೆಂಬರ್ 24 ರಂದು ಬೆಂಗಳೂರಿನ ಪಂಪ ಮಹಾಕವಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ, ಉತ್ತರಾದಿ ಮಠದಲ್ಲಿ ಆಯೋಜಿಸಲಾಗಿದೆ. ದುಃಖದ ಸಂಧರ್ಭದಲ್ಲಿ ಲಕ್ಷಾಂತರ ಜನರು ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದ್ದಾರೆ. ಸಮಯದ ಅಭಾವದ ಕಾರಣ ಈ ಎಲ್ಲಾ ಜನರನ್ನು ತಲುಪುವುದು ಸಾಧ್ಯವಾಗುತ್ತಿಲ್ಲ. ಅನಂತಕುಮಾರ್ ಅವರ ಒಡನಾಡಿಗಳು ಹಾಗೂ ಸಾರ್ವಜನಿಕರಿಗೆ ವೈಕುಂಠ ಸಮಾರಾಧನೆಯ ಮಾಹಿತಿಯನ್ನು ತಿಳಿಸುವ ದೃಷ್ಟಿಯಿಂದ, ತಮ್ಮ ಮಾಧ್ಯಮದ ಮೂಲಕ ಈ ಮಾಹಿತಿಯನ್ನು ಪ್ರಕಟಿಸುವಂತೆ […]

11ನೇ ದ್ವೈವಾರ್ಷಿಕ ಲೇಕ್ ಸಮ್ಮೇಳನದ ಉದ್ಘಾಟನಾ ಸಮಾರಂಭ

Friday, November 23rd, 2018
moodbidri

ಮೂಡಬಿದಿರೆ: “ನಗರೀಕರಣದ ಹೆಚ್ಚುವಿಕೆ ಹಾಗೂ ಜಾಗತಿಕ ತಾಪಮಾನದ ಏರಿಕೆಯೇ ನಮ್ಮ ಮುಂದಿರುವ ಮೂಲಭೂತ ಸಮಸ್ಯೆಗಳಾಗಿವೆ. ಇವುಗಳನ್ನು ನಿವಾರಿಸದ ಹೊರತು ಪರಿಸರ ವೈಪರೀತ್ಯಗಳ ತಡೆಗಟ್ಟುವಿಕೆಅಸಾಧ್ಯ” ಎಂದುಕೇಂದ್ರ ಸರ್ಕಾರದ ಪರಿಸರ ಮತ್ತುಅರಣ್ಯ ಸಂರಕ್ಷಣಾ ಸಚಿವಾಲಯದ ಪ್ರಧಾನ ಸಲಹೆಗಾರ್ತಿಡಾ. ಆನಂದಿ ಸುಬ್ರಮಣಿಯನ್‌ಅಭಿಪ್ರಾಯಪಟ್ಟರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಬೆಂಗಳೂರಿನ ಎನರ್ಜಿಆಂಡ್ ವೆಟ್‌ಲ್ಯಾಂಡ್ಸ್‌ ರೀಸರ್ಚ್‌ಗ್ರೂಪ್ – ಸೆಂಟರ್ ಫಾರ್‌ ಇಕಾಲೋಜಿಕಲ್ ಸೈನ್ಸೆಸ್, ಭಾರತೀಯ ವಿಜ್ಞಾನಕೇಂದ್ರದ ಸಂಯುಕ್ತಆಶ್ರಯದಲ್ಲಿಗುರುವಾರ ಆಳ್ವಾಸ್ ಕಾಲೇಜಿನ ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ೧೧ನೇ ದ್ವೈವಾರ್ಷಿಕ ಲೇಕ್ ಸಮ್ಮೇಳನವನ್ನು ಉದ್ಘಾಟಿಸಿ […]

ದೇಶದ 121, ರಾಜ್ಯದ 8 ಜಿಲ್ಲೆಗಳ ಮನೆ ಮನೆಗೂ ಅನಿಲ ಸರಬರಾಜು

Friday, November 23rd, 2018
narendra-modi

ನವದೆಹಲಿ: ದೇಶದ 121 ಜಿಲ್ಲೆ ಹಾಗೂ ರಾಜ್ಯದ 8 ಜಿಲ್ಲೆಗಳಲ್ಲಿ ಕೊಳವೆಗಳ ಮೂಲಕ ನೈಸರ್ಗಿಕ ಅನಿಲವನ್ನು (ಸಿಎನ್‌ಜಿ) ಮನೆ ಮನೆಗೂ ತಲುಪಿಸುವ ಯೋಜನೆಯಾದ ಅನಿಲ ವಿತರಣಾ ವ್ಯವಸ್ಥೆ (ಸಿಜಿಡಿ) ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಬಡವರಿಗೆ ಕಡಿಮೆ ಬೆಲೆಯಲ್ಲಿ ಎಲ್‌ಪಿಜಿ ಸಂಪರ್ಕ ಒದಗಿಸುವ ಕ್ರಾಂತಿಕಾರಿ ಯೋಜನೆ ಇದಾಗಿದೆ. ಮುಂದಿನ 3-4 ವರ್ಷಗಳಲ್ಲಿ ಕೊಳವೆ ಮೂಲಕ ನೈಸರ್ಗಿಕ ಅನಿಲ (ಸಿಎನ್‌ಜಿ) ಮನೆ ಮನೆಗೆ ವಿತರಿಸುವ ಯೋಜನೆಯನ್ನು ಸುಮಾರು 400 ಜಿಲ್ಲೆಗಳಿಗೆ […]

ಹಾಸ್ಪಿಟಲ್ ಸೇರುವ ಸಂದರ್ಭದಲ್ಲೇ ಮುಖ್ಯಮಂತ್ರಿ ಹುದ್ದೆ ತೊರೆಯಲು ನಿರ್ಧರಿಸಿದ್ದರು: ವಿಜಯ್ ಸರ್ದೇಸಾಯಿ

Friday, November 23rd, 2018
manohar-parrikar

ಪಣಜಿ: ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಗೋವಾ ಸಿಎಂ ಮನೋಹರ್ ಪರಿಕ್ಕರ್, ಹಾಸ್ಪಿಟಲ್ ಸೇರುವ ಸಂದರ್ಭದಲ್ಲೇ ಮುಖ್ಯಮಂತ್ರಿ ಹುದ್ದೆ ತೊರೆಯಲು ನಿರ್ಧರಿಸಿದ್ದರು ಎಂದು ಗೋವಾ ಕೃಷಿ ಸಚಿವ ವಿಜಯ್ ಸರ್ದೇಸಾಯಿ ಹೇಳಿದ್ದಾರೆ. ಆಸ್ಪತ್ರೆಗೆ ದಾಖಲಾಗುವ ವೇಳೆ ಪರಿಕ್ಕರ್ ಸಿಎಂ ಹುದ್ದೆ ಜೊತೆಗೆ ತಮ್ಮಲ್ಲಿರುವ ಎಲ್ಲ ಅಧಿಕಾರವನ್ನೂ ಹಸ್ತಾಂತರ ಮಾಡಲು ಇಚ್ಛಿಸಿದ್ದರು. ಆದರೆ ಬಳಿಕ ಹಲವಾರು ಘಟನೆಗಳು ಸಂಭವಿಸಿದವು. ಬಿಜೆಪಿ ಹೈಕಮಾಂಡ್ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಹುದ್ದೆ ತೊರೆಯದಂತೆ ಪರಿಕ್ಕರ್ಗೆ ಆದೇಶಿಸಿತ್ತು ಎಂದು ಸರ್ದೇಸಾಯಿ ಹೇಳಿದ್ದಾರೆ. ಮನೋಹರ್ ಪರಿಕ್ಕರ್ […]

ರಾಜ್ಯದಲ್ಲಿ ಖೋಟಾನೋಟು ಹಾವಳಿ: ಗ್ರಾಮೀಣಕ್ಕೂ ಬಂತು 200 ರೂ. ಖೋಟಾನೋಟು!

Friday, November 23rd, 2018
currency

ಸುಬ್ರಹ್ಮಣ್ಯ: ರಾಜ್ಯದಲ್ಲಿ ಖೋಟಾನೋಟು ಹಾವಳಿ ತೀವ್ರಗೊಂಡಿದೆ ಎನ್ನುವ ಆತಂಕದ ನಡುವೆಯೇ ಧಾರ್ಮಿಕ ಕೇಂದ್ರ ಕುಕ್ಕೆ ಸುಬ್ರಹ್ಮಣ್ಯದಲ್ಲೂ ಜಾಲ ಸಕ್ರಿಯವಾಗಿರುವ ಶಂಕೆ ಉಂಟಾಗಿದೆ. ಕೆಲವು ದಿನಗಳ ಹಿಂದೆ ಅಪರಿಚಿತ ವ್ಯಕ್ತಿಯೊಬ್ಬ ಇಲ್ಲಿನ ಬಡ ವ್ಯಾಪಾರಸ್ಥ ಮಹಿಳೆಯೊಬ್ಬರಿಂದ ಸಣ್ಣ ಪುಟ್ಟ ವಸುಗಳನ್ನು ಖರೀದಿಸಿ 200 ರೂ. ಮುಖ ಬೆಲೆಯ ನೋಟು ನೀಡಿ ತೆರಳಿದ್ದ. ನೋಟು ಪಡೆದ ಮಹಿಳೆ ತತ್‌ಕ್ಷಣ ಅದನ್ನು ಪರಿಶೀಲಿಸಿರಲಿಲ್ಲ. ಆದರೆ ವ್ಯಕ್ತಿ ಸ್ಥಳದಿಂದ ತೆರಳಿದ ಬಳಿಕ ಅವರಿಗೆ ನೋಟಿನ ಕುರಿತು ಅನುಮಾನ ಮೂಡಿದ್ದು, ಸೂಕ್ಷ್ಮವಾಗಿ ಗಮನಿಸಿದಾಗ ಖೋಟಾ […]