ಕದ್ರಿಯಲ್ಲಿ ವಿವೇಕಾನಂದ ಜಯಂತಿ ದಿನವೇ ವಿವೇಕಾನಂದರ ನಾಮಫಲಕವನ್ನು ಕಿತ್ತೆಸೆದ ಮನಾಪ

Friday, January 13th, 2017
roopa bangera

ಮಂಗಳೂರು : ಕದ್ರಿಯ ವಿವೇಕಾನಂದ ರಸ್ತೆಗೆ ‘ ವಿವೇಕಾನಂದ ರಸ್ತೆ ’ ಎಂದು ನಮೂದಿಸಿ ಗುರುವಾರ ಅಳವಡಿಸಿದ ಹೊಸ ನಾಮಫಲಕವನ್ನು ಮಂಗಳೂರು ಮಹಾ ನಗರ ಪಾಲಿಕೆ ಆಡಳಿತ ಕಿತ್ತೆಸೆಯುವ ಮೂಲಕ ವಿವೇಕಾನಂದರಿಗೆ ಅಪಮಾನ ಮಾಡಿದೆ. ಪಾಲಿಕೆ ಸರ್ವಾಧಿಕಾರಿ ನೀತಿ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲಾಗುವುದೆಂದು ಮನಪಾ ಪ್ರತಿಪಕ್ಷ ನಾಯಕಿ ರೂಪಾ.ಡಿ.ಬಂಗೇರ ತಿಳಿಸಿದ್ದಾರೆ. ಕದ್ರಿ ಉದ್ಯಾನವನ ಮುಂಭಾಗದ ರಸ್ತೆಗೆ ಹಿಂದಿನಿಂದಲೂ ವಿವೇಕಾನಂದ ರಸ್ತೆ ಎಂದು ಹೆಸರಿತ್ತು. ಮನಪಾ ದಾಖಲೆಗಳಲ್ಲೂ ಇದೇ ಹೆಸರಿದೆ. ಇಲ್ಲಿನ ಅಡ್ಡ ರಸ್ತೆಗಳಿಗೆ ವಿವೇಕಾನಂದ ಅಡ್ಡ […]

ನೋಟ್ ರದ್ಧತಿ ಮೋದಿ ಸರ್ಕಾರದ ಏಕಾಏಕಿ ನಿರ್ಧಾರವಲ್ಲ : ನಿರ್ಮಲಾ ಸೀತಾರಾಮನ್

Friday, January 13th, 2017
nirmala

ಮಂಗಳೂರು : ಚೀನಿ ಉತ್ಪನ್ನಗಳನ್ನು ನಿಷೇಧಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಆದರೆ  ಅಲ್ಲಿನ ಉತ್ಪನ್ನಗಳನ್ನು ತಕ್ಷಣಕ್ಕೆ ನಿಷೇಧಿಸಲು ಸಾಧ್ಯವಾಗದು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ದ.ಕ. ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಅಪನಗದೀಕರಣ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು. ಪಾಕಿಸ್ತಾನ ವೈರಿ ರಾಷ್ಟ್ರವಾದರೂ ಚೀನಾ ಆರ್ಥಿಕತೆಯಲ್ಲಿ ಹೊಡೆತ ನೀಡುವ ರಾಷ್ಟ್ರವಾಗಿದೆ. ಅಲ್ಲಿನ ಕಳಪೆ ಉತ್ಪನ್ನಗಳು ಕಡಿಮೆ ದರಕ್ಕೆ ಭಾರತದಲ್ಲಿ ಮಾರಾಟವಾಗುತ್ತಿವೆ. ಆದ್ದರಿಂದ ಚೀನಿ ಉತ್ಪನ್ನಗಳನ್ನು ನಿಷೇಧಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬ […]

ಮಂಗಳೂರು ಪೊಲೀಸರ ಗಸ್ತಿಗೆ 25 ಹೈಟೆಕ್ ಹೊಯ್ಸಳ ವಾಹನಗಳ ಸೇರ್ಪಡೆ

Friday, January 13th, 2017
police-car

ಮಂಗಳೂರು: ಗೃಹ ಸಚಿವ ಡಾ. ಜಿ. ಪರಮೇಶ್ವರ್ ನಗರದ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ 25 ಹೈಟೆಕ್ ಹೊಯ್ಸಳ ವಾಹನಗಳಿಗೆ ಹಸಿರು ನಿಶಾನೆ ತೋರಿದ್ದಾರೆ. ಈಗಾಗಲೇ 13 ವಾಹನಗಳು ದಿನದ 24 ಗಂಟೆಯೂ ಗಸ್ತಿನಲ್ಲಿದ್ದು, ಇದೀಗ ಮತ್ತಷ್ಟು ವಾಹನಗಳು ಬಂದಿರುವುದರಿಂದ ಮಂಗಳೂರಿನ ಪೊಲೀಸರಿಗೆ ಬಲ ಬಂದಿದೆ. ಜೊತೆಗೆ ಎಸ್ಪಿ ವ್ಯಾಪ್ತಿಗೂ ಎರಡು ವಾಹನಗಳು ಬಂದಿದ್ದು, ಮುಂದಿನ ತಿಂಗಳಿನಿಂದ ಜಿಲ್ಲೆಯಲ್ಲೂ ಅದು ಕಾರ್ಯನಿರ್ವಹಿಸಲಿದೆ. ಹೈಟೆಕ್ ಮಾದರಿಯ ಹೊಯ್ಸಳ ಬೆಂಗಳೂರಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ 322 ವಾಹನಗಳು ಓಡಾಡುತ್ತಿವೆ. ಮುಂದಿನ ದಿನಗಳಲ್ಲಿ […]

ಡಿ ವೈ ಎಫ್ ಐ – ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ -ಕಾರಿಗೆ ಬೆಂಕಿ

Thursday, January 12th, 2017
car fire

ಕಾಸರಗೋಡು  : ಡಿ ವೈ ಎಫ್ ಐ – ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದ ಘಟನೆ ಬುಧವಾರ ಸಂಜೆ ಬೋವಿಕ್ಕಾನದಲ್ಲಿ ನಡೆದಿದ್ದು, ಒಂದು ಕಾರಿಗೆ ಬೆಂಕಿ ಹಚ್ಚಲಾಗಿದೆ. ಆಟೋ ರಿಕ್ಷಾ ಹಾನಿಗೊಳಿಸಲಾಗಿದ್ದು , ಅಂಗಡಿಯೊಂದಕ್ಕೆ ನುಗ್ಗಿ ದಾಂಧಲೆ ನಡೆಸಲಾಗಿದೆ. ಎಂಡೋಸಲ್ಫಾನ್ ಸಂತ್ರಸ್ಥರಿಗೆ ನಷ್ಟ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಅಭಿನಂದನೆ ಸಲ್ಲಿಸಿ ಡಿ ವೈ ಎಫ್ ಐ ಕಾರ್ಯಕರ್ತರು ಸಂಜೆ ಬೋವಿಕ್ಕಾನ ಪೇಟೆಯಲ್ಲಿ ಮೆರವಣಿಗೆ ನಡೆಸಿತ್ತು .ಈ ಸಂದರ್ಭದಲ್ಲಿ ಘರ್ಷಣೆ ನಡೆದಿದ್ದು, ಈ […]

ಬಿ. ಆರ್ ಅಂಬೇಡ್ಕರ್ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಬರಹ ಒಬ್ಬ ಅರೆಸ್ಟ್

Thursday, January 12th, 2017
deepak

ಮಂಗಳೂರು: ಎರಡು ತಿಂಗಳ ಹಿಂದೆ ಡಾ. ಬಿ. ಆರ್ ಅಂಬೇಡ್ಕರ್ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಬರಹ ಪೋಸ್ಟ್‌ ಮಾಡಿದ್ದ ವ್ಯಕ್ತಿಯೊಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ದೀಪಕ್ ಎಂಬಾತ ಬಂಧಿತ ಆರೋಪಿಯಗಿದ್ದು, ಈತ ಎರಡು ತಿಂಗಳ ಹಿಂದೆ ಅಂಬೇಡ್ಕರ್‌ ಕುರಿತು ಅವಹೇಳನಕಾರಿ ಬರಹವನ್ನು ಪೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ. ಈ ಸಂಬಂಧ ದಲಿತ ಮುಖಂಡ ರಮೇಶ್ ಕೋಟ್ಯಾನ್ ಎಂಬುವರು ದೀಪಕ್‌ ವಿರುದ್ಧ ದೂರು ದಾಖಲಿಸಿದ್ದರು. ಮಂಗಳೂರು ಪಾಂಡೇಶ್ವರ ಠಾಣೆಯ ಪೊಲೀಸರು ದೀಪಕ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಕಾಜೂರು ದರ್ಗಾಕ್ಕೆ ಭೇಟಿ ನೀಡಿ ವಾಪಸ್ ಬರುವಾಗ ನಾಲ್ವರು ನೀರು ಪಾಲು

Wednesday, January 11th, 2017
udupi family

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ನಡ ಗ್ರಾಮದ ಅಂತ್ರಾಯಿಪಲ್ಕೆ ಹೊಳೆಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ನೀರು ಪಾಲಾಗಿರುವ ದಾರುಣ ಘಟನೆ ಬುಧವಾರ ನಡೆದಿದೆ. ಮೃತರು ಉಡುಪಿ ಜಿಲ್ಲೆಯ ಕಾಪು ಫಕೀರನಕಟ್ಟೆ ನಿವಾಸಿಗಳಾದ ರಹೀಮ್30), ಪತ್ನಿ ರುಬೀನಾ(25), ಯಾಸ್ಮಿನ್(23), ಸುಬಾನ್(15) ಎಂದು ಗುರುತಿಸಲಾಗಿದ್ದು, ನಾಲ್ವರ ಮೃತದೇಹ ಹೊರ ತೆಗೆಯಲಾಗಿದೆ. ನೀರಿನಲ್ಲಿ ಮುಳುಗುತ್ತಿದ್ದ ಮತ್ತೊಬ್ಬ ಮಹಿಳೆ ಮೈಮೂನಾ ಎಂಬುವವರನ್ನು ಸ್ಥಳೀಯರು ರಕ್ಷಿಸಿದ್ದು, ಬೆಳ್ತಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬೆಳಗ್ಗೆ ಇಲ್ಲಿನ ಪ್ರಸಿದ್ಧ ಕಾಜೂರು ದರ್ಗಾಕ್ಕೆ […]

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತವಾಗಿ ಗ್ಯಾಸ್ ಸ್ಟೌವ್ ಮತ್ತು ರೆಗ್ಯುಲೇಟರ್

Wednesday, January 11th, 2017
utkhader

ಬೆಂಗಳೂರು : ಬಡತನ ರೇಖೆಗಿಂತ ಕೆಳಗಿರುವ ಅಂದರೆ ಬಿಪಿಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ರಾಜ್ಯ ಸರ್ಕಾರ ಉಚಿತವಾಗಿ ಗ್ಯಾಸ್ ಸ್ಟೌವ್ ಮತ್ತು ರೆಗ್ಯುಲೇಟರ್ ನೀಡಲು ಮುಂದಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಈ ಕುರಿತು ಮಾತನಾಡಿ,’ಕೇಂದ್ರ ಸರ್ಕಾರ ಜಾರಿಗೊಳಿಸಲಿರುವ ಒಂದು ಸಿಲಿಂಡರ್ ಸೌಲಭ್ಯವುಳ್ಳ ಅಡುಗೆ ಅನಿಲ ಸಂಪರ್ಕ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಉತ್ತಮ ಗುಣಮಟ್ಟದ ಸ್ಟೌವ್ ಮತ್ತು ರೆಗ್ಯುಲೇಟರ್ ನೀಡಲಿದೆ’ ಎಂದರು. ಕರ್ನಾಟಕದಲ್ಲಿ ಉಜ್ವಲ ಯೋಜನೆಯಡಿ […]

ಮಂಗಳೂರು-ಚೆನ್ನೈ ಮೈಲ್‌ ರೈಲಿನಲ್ಲಿ ಪ್ರಥಮ ಬಾರಿಗೆ ಕ್ಯಾಪ್ಟನ್‌ ನೇಮಕ

Wednesday, January 11th, 2017
anoop kumar

ಮಂಗಳೂರು: ದಕ್ಷಿಣ ರೈಲ್ವೇ ಪಾಲಕ್ಕಾಡ್‌ ವಿಭಾಗದಲ್ಲಿ  ಮಂಗಳೂರು-ಚೆನ್ನೈ ಮೈಲ್‌ ರೈಲಿನಲ್ಲಿ  ಪ್ರಥಮವಾಗಿ ಕ್ಯಾಪ್ಟನ್‌ ವ್ಯವಸ್ಥೆಯನ್ನು ಅನುಷ್ಠಾನಿಸಲಾಗಿದೆ. ರೈಲಿನಲ್ಲಿ ಪ್ರಯಾಣಿಕರು ನಿಶ್ಚಿಂತೆಯಿಂದ, ಆರಾಮವಾಗಿ ಪ್ರಯಾಣಿಲು ಮತ್ತು  ಪ್ರಯಾಣದ ಸಂದರ್ಭ ಯಾವುದೇ ಸಮಸ್ಯೆ ಬಂದರೂ ಅದರ ಬಗ್ಗೆ ನಿಗಾ ವಹಿಸಿ ಪರಿಹರಿಸಲು ಕ್ಯಾಪ್ಟನ್‌ ವ್ಯವಸ್ಥೆ ಮಾಡಲಾಗಿದೆ . ಮಂಗಳೂರು ಸೆಂಟ್ರಲ್‌ ರೈಲ್ವೇ ನಿಲ್ದಾಣದಿಂದ ಸೋಮವಾರ 1.25ಕ್ಕೆ ನಿರ್ಗಮಿಸಿದ ಚೆನ್ನೈ ಮೈಲ್‌ ರೈಲಿನಲ್ಲಿ ಪ್ರಥಮ ಕ್ಯಾಪ್ಟನ್‌ ಅನೂಪ್‌ ಕುಮಾರ್‌ ಕರ್ತವ್ಯ ವಹಿಸಿ ಪ್ರಯಾಣಿಸಿದರು. ಇದರ ಯಶಸ್ಸು ಅವಲೋಕಿಸಿ ಮುಂದೆ ಇತರ ರೈಲುಗಳಲ್ಲೂ ಅನುಷ್ಠಾನಗೊಳಿಸಲು ದಕ್ಷಿಣ ರೈಲ್ವೇ ಚಿಂತನೆ ನಡೆಸಿದೆ. […]

ಉಮೇಶ್ ಶೆಟ್ಟಿ ಪ್ರಕರಣ : ಕೋಟಿ ಆಸೆಗಾಗಿ ಗೆಳೆಯನನ್ನು ಗೆಳೆಯರೇ ಕೊಂದರು

Wednesday, January 11th, 2017
umesh shetty

ಮಂಗಳೂರು:  ನಿಡ್ಡೋಡಿ ದಡ್ಡು ಚರ್ಚ್‌ ಬಳಿಯ ಗುಡ್ಡ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಹೆಣವಾಗಿದ್ದ  ಉಮೇಶ್ ಶೆಟ್ಟಿ(29 ವರ್ಷ) ಯನ್ನು ಕೋಟಿ ಆಸೆಗಾಗಿ ಆತನ ಗೆಳೆಯರೇ  ಕೊಂದಿದ್ದಾರೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಗೆಯಿಂದ ಬೆಳಕಿಗೆ ಬಂದಿದೆ. ಆರೋಪಿಗಳಲ್ಲಿ ನಾಲ್ವರು ಉಮೇಶ್ ಶೆಟ್ಟಿಯ ಸ್ನೇಹಿತರಾಗಿದ್ದು, ಕೊಲೆಯಲ್ಲಿ ರಾಜೇಶ್ ಶೆಟ್ಟಿ ಪ್ರಕರಣದ ಸೂತ್ರದಾರ ಎಂದು ತಿಳಿದು ಬಂದಿದೆ. ರಾಜೇಶ್ ಶೆಟ್ಟಿ ಹಾಗೂ ಉಮೇಶ್ ಶೆಟ್ಟಿ ಆತ್ಮೀಯ ಮಿತ್ರರಾಗಿದ್ದು, ಎಂಆರ್‌ಪಿಲ್‌ನಲ್ಲಿ ಕೆಲಸ ಮಾಡಿಕೊಂಡು ಕಲ್ಲಿನ ಕೋರೆ ಉದ್ಯಮವನ್ನು ಮಾಡಲು ಚಿಂತನೆ ನಡೆಸಿದ್ದರು. ಮೂರು ವರ್ಷದ ಹಿಂದೆ […]

ನಗದು ರಹಿತ ವ್ಯವಹಾರ ಮಂಗಳೂರಿನ ವಿಶ್ವನಾಥ ಪ್ರಭು ಅವರಿಗೆ ಬಹುಮಾನ

Wednesday, January 11th, 2017
vishwanath prabhu

ಮಂಗಳೂರು: ನಗದು ರಹಿತ ವ್ಯವಹಾರ ನಡೆಸಿದ್ದಕ್ಕೆ ಕೇಂದ್ರ ಸರಕಾರದ `ಲಕ್ಕಿ ಗ್ರಾಹಕ ಯೋಜನೆ’ಯಡಿ ಉರ್ವದ ವಿಶ್ವನಾಥ ಪ್ರಭು ಅವರಿಗೆ ಸಾವಿರ ರೂ. ಬಹುಮಾನ ಲಭಿಸಿದೆ. ಡಿ. 31ರಂದು ನಗರದ ಕೆಎಂಸಿ ಆಸ್ಪತ್ರೆಯ ಮೆಡಿಕಲ್‍ನಲ್ಲಿ ತಾಯಿಗಾಗಿ 1000 ರೂ.ಗಳ ಔಷಧಿಯನ್ನು ರೂಪೇ ಕಾರ್ಡ್ ಮೂಲಕ ಸ್ವೈಪ್ ಮಾಡಿ ಖರೀದಿಸಿದ್ದರು. ಜ. 2ರಂದು ವಿಶ್ವನಾಥ್ ಬ್ಯಾಂಕ್ ಖಾತೆಗೆ 1000 ರೂ. ಜಮಾ ಆಗಿದೆ. ಲಕ್ಕಿ ಗ್ರಾಹಕ ಯೋಜನೆಗೆ ಆಯ್ಕೆಯಾಗಿರುವ ಬಗ್ಗೆ ಅವರ ಮೊಬೈಲ್‍ಗೆ ಸಂದೇಶ ಕೂಡಾ ಬಂದಿದೆ. ಸಣ್ಣ ಮೊತ್ತದ ವ್ಯವಹಾರವನ್ನೂ ನಗದು […]