ಏಷ್ಯನ್ ಕ್ರೀಡಾಕೂಟ : ಯೋಗೇಶ್ವರ್ ಗೆ ಚಿನ್ನ, ರಾಜ್ಯದ ಅಥ್ಲೀಟ್ ಪೂವಮ್ಮಗೆ ಕಂಚು

Monday, September 29th, 2014
Yogeshwar Poovamma

ಇಂಚೆನ್ : ಭಾರತದ ಕುಸ್ತಿ ಪಟು ಯೋಗೇಶ್ವರ್ ದತ್ ಪುರುಷರ 65 ಕೆ.ಜಿ. ವಿಭಾಗದ ಫ್ರೀ ಸ್ಟೈಲ್‌ ವಿಭಾಗದಲ್ಲಿ ಚಿನ್ನದ ಸಾಧನೆ ತೋರಿದರೆ ರಾಜ್ಯದ ಅಥ್ಲೀಟ್ ಎಂ.ಆರ್.ಪೂವಮ್ಮ ಮಹಿಳೆಯರ 400 ಮೀ. ಓಟದಲ್ಲಿ ಕಂಚಿನ ಪದಕ್ ಪಡೆದಿದ್ದಾರೆ. ಪಂಜಾಬಿನ ಖುಷ್‌ಬಿರ್‌ ಕೌರ್ ಅವರು ಮಹಿಳೆಯ 20 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಬೆಳ್ಳಿ ಪಡೆದು, 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾನುವಾರ 9ನೇ ದಿನವೂ ಭಾರತದ ಪರ ಭರ್ಜರಿ ಪದಕ ಬೇಟೆಯಾಡಿದರು. ಯೋಗೇಶ್ವರ್ ಅವರ ಚಿನ್ನದ ಸಾಧನೆಯೊಂದಿಗೆ ಭಾರತದ ಚಿನ್ನದ […]

ಮುಖ್ಯಮಂತ್ರಿ ಸಿದ್ಧರಾಮಯ್ಯರಿಂದ ಮಂಗಳೂರು ದಸರಾ-2014 ಕ್ಕೆ ಚಾಲನೆ

Sunday, September 28th, 2014
Kudroli Dasara

ಮಂಗಳೂರು: ಮಂಗಳೂರು ದಸರಾ-2014 ನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಿದರು. ಜನಾರ್ದನ ಪೂಜಾರಿ ಮಾರ್ಗದರ್ಶನದಲ್ಲಿ ಸಾಮಾಜಿಕ ಬದಲಾವಣೆ ನಡೆದಿದ್ದು, ಅದರಲ್ಲೂ ಅರ್ಚಕರಾಗಿ ವಿಧವೆಯರ ನೇಮಕ ಮಾಡಿರುವುದು ಬದಲಾವಣೆಯ ಹೊಸ ಯುಗ ಎಂದೇ ಹೇಳಬಹುದು. ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ಸಮಾಜ ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು, ಸಮಾಜದಲ್ಲಿರುವ ಮೂಡನಂಭಿಕೆಗಳನ್ನು ತೊಲಗಿಸಿ ಮಹಿಳೆಯರೂ ಪುರುಷರಂತೆ ಸಮಾನರು ಎಂಬುದನ್ನು ತಿಳಿಸಿಕೊಡಬೇಕು, ಸರಕಾರದ ಮುಜರಾಯಿ ದೇವಸ್ಥಾನಗಳಲ್ಲಿ ಮಹಿಳಾ ಅರ್ಚಕಿಯರನ್ನು ಪ್ರಾಯೋಗಿಕವಾಗಿ ನೇಮಕ ಮಾಡುವ ಸಂಬಂಧ ಸರಕಾರ ಕ್ರಮಕೈಗೊಳ್ಳಲಿದೆ ಎಂದು […]

ಅರ್ಚರಿಯಲ್ಲಿ ಭಾರತಕ್ಕೆ ಬಂಗಾರದ ಅಚ್ಚರಿ

Saturday, September 27th, 2014
ಅರ್ಚರಿಯಲ್ಲಿ ಭಾರತಕ್ಕೆ ಬಂಗಾರದ ಅಚ್ಚರಿ

ಇಂಚೆನ್‌ : ಭಾರತದ ಕ್ರೀಡಾ ಪ್ರೇಮಿಗಳ ಪಾಲಿಗೆ ಶನಿವಾರ ಶುಭದಿನ. 17ನೇ ಏಷ್ಯನ್ ಕ್ರೀಡಾಕೂಟದ ಆರ್ಚರಿ ಸ್ಪರ್ಧೆಯಲ್ಲಿ ಭಾರತವು ತಲಾ ಒಂದು ಬಂಗಾರ ಹಾಗೂ ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದೆ. ಇಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಕ್ರೀಡಾಕೂಟದ ಕಂಪೌಂಡ್ ಪುರುಷರ ಆರ್ಚರಿ  ತಂಡವು ಬಂಗಾರ ಗೆದ್ದಿದೆ. ಈ ಕ್ರೀಡಾಕೂಟದಲ್ಲಿ ಭಾರತಕ್ಕೆ ದೊರೆತ ಎರಡನೇ ಚಿನ್ನದ ಪದಕವಿದು. ಇದೇ ವಿಭಾಗದ ಮಹಿಳೆಯರ ತಂಡವು   ಕಂಚಿನ ಸಾಧನೆ ಮಾಡಿದೆ. ಮತ್ತೊಂದೆಡೆ ಪುರುಷರ […]

ಸಿದ್ದರಾಮಯ್ಯನವರಿಂದ ಗುರುಪೀಠ ಉದ್ಘಾಟನೆ

Saturday, September 27th, 2014
Siddaramaiah-at-guru-peeta

ಬ್ರಹ್ಮಾವರ : ಇಲ್ಲಿನ ಬಾರಕೂರಿನ ಬೆಣ್ಣೆಕುದುರಿನಸಮಸ್ತ ಮೊಗವೀರರ ಕುಲದೇವರು   ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದಲ್ಲಿ  ನವೀಕೃತ ಗುರುಪೀಠವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ  ಬೆಳಗ್ಗೆ 11ಕ್ಕೆ  ಉದ್ಘಾಟಿಸಿದರು. ಸಚಿವರಾದ ವಿನಯ್‌ಕುಮಾರ್‌ ಸೊರಕೆ ,ಶಾಸಕ ಪ್ರಮೋದ್‌ ಮಧ್ವರಾಜ್‌ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಇದೀಗ ಮುಖ್ಯಮಂತ್ರಿಗಳು ಬ್ರಹ್ಮಾವರದ ಗಾಂಧೀ ಮೈದಾನದಲ್ಲಿ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌, ಮೊಗವೀರ ಯುವ ವೇದಿಕೆ,ಮಣಿಪಾಲ ವಿ.ವಿ. ಸಹಯೋಗದಲ್ಲಿ ಕೊಡುವ ಜಿ. ಶಂಕರ್‌- ಮಣಿಪಾಲ ಆರೋಗ್ಯ ಕಾರ್ಡ್‌ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಬಳಿಕ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ […]

ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷರಾದ ಶ್ರೀ ಹರೀಶ್ ಆಚಾರ್ ರಿಂದ ಪೆರಾಜೆ ನಿಧನಕ್ಕೆ ಸಂತಾಪ

Friday, September 26th, 2014
Peraje Srinivas Rao

ಮಂಗಳೂರು: ಹಿರಿಯ ಸಹಕಾರಿ ಧುರೀಣ ಶ್ರೀ ಪೆರಾಜೆ ಶ್ರೀನಿವಾಸ ರಾಯರ ನಿಧನಕ್ಕೆ ದ.ಕ.ಜಿಲ್ಲಾ ಸಹಕಾರಿ ಯೂನಿಯನ್ನ ಅಧ್ಯಕ್ಷರಾದ ಶ್ರೀ ಹರೀಶ್ ಆಚಾರ್ ರವರು ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ರೀಯುತರ ನಿಧನದಿಂದ ಸಹಕಾರಿ ರಂಗವು ಒಂದು ಅನಘ್ರ್ಯ ರತ್ನವನ್ನು ಕಳೆದುಕೊಂಡಂತಾಗಿದೆ. ಶ್ರೀಯುತ ಪೆರಾಜೆ ಶ್ರೀನಿವಾಸ ರಾಯರು ಮತ್ತು ದಿವಗಂತ ಮೊಳಹಳ್ಳಿ ಶಿವರಾಯರಂತಹ ಸಹಕಾರಿ ದಿಗ್ಗಜರಿಂದಾಗಿ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಇಂದು ಸಹಕಾರಿ ಸಂಸ್ಥೆಗಳು ದೃಢವಾಗಿ ಬೆಳದು ನಿಂತಿದೆ. ಇಂದು ದೈವಾಧೀನರಾದ ಶ್ರೀ ಪೆರಾಜೆ ಶ್ರೀನಿವಾಸ ರಾಯರ  ಅಗಲುವಿಕೆಯಿಂದ […]

ಎಸ್‌ಸಿಡಿಸಿಸಿ ಬ್ಯಾಂಕ್‌ನ ಮೊಬೈಲ್‌ ಬ್ಯಾಂಕಿಗ್ ವಾಹನಕ್ಕೆ ಜಿ.ಆರ್‌. ಚಿಂತಲ ಚಾಲನೆ

Sunday, September 21st, 2014
SCDCC Mobile Bank

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ (ಎಸ್‌ಸಿಡಿಸಿಸಿ) ಮೊಬೈಲ್‌ ಬ್ಯಾಂಕಿಂಗ್‌ನ ಹೊಸ ವಾಹನ, ಕ್ಯಾಶ್‌ ಡೆಪಾಸಿಟ್‌ ಹಾಗೂ ಚೆಕ್‌ ಡೆಪಾಸಿಟ್‌ (ನಗದು ಹಾಗೂ ಚೆಕ್‌ ಠೇವಣಿ) ಕಿಯಾಸ್ಕ್ ಯಂತ್ರಗಳನ್ನು ಅವರು ಬ್ಯಾಂಕಿನ ಆವರಣದಲ್ಲಿ ನಬಾರ್ಡ್‌ ಮುಖ್ಯ ಮಹಾ ಪ್ರಬಂಧಕ ಜಿ.ಆರ್‌. ಚಿಂತಲ ಶನಿವಾರ ಉದ್ಘಾಟಿಸಿದರು. ಉದ್ಘಾಟನೆ ಬಳಿಕ ಮಾತನಾಡಿದ ಅವರು ಅ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಸಹಕಾರಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ದೇಶಕ್ಕೆ ಮಾದರಿಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆ, ನಾವೀನ್ಯತೆ ಹಾಗೂ […]

ಬಿಜೈ ಯಲ್ಲಿ ಮೆಸ್ಕಾಂ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ಬರ್ಬರ ಹತ್ಯೆ

Sunday, September 21st, 2014
Mescom Engineer murder

ಮಂಗಳೂರು : ಇಬ್ಬರು ದುಷ್ಕರ್ಮಿಗಳು ಮೆಸ್ಕಾಂ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ಒಬ್ಬರನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಸೆಪ್ಟೆಂಬರ್ 21 ರ ಭಾನುವಾರ ಬೆಳಗಿನ ಜಾವ ನಗರದ ಬಿಜೈ ನಲ್ಲಿ ನಡೆದಿದೆ. ಹತ್ಯೆಗೀಡಾದವರನ್ನು ಮೆಸ್ಕಾಂ ಕಾರ್ಪೋರೇಟ್‌ ಕಜೇರಿಯಲ್ಲಿ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ಆಗಿರುವ ಜಗದೀಶ್‌ ರಾವ್‌ (55) ಎನ್ನುವವರಾಗಿದ್ದಾರೆ. ರಾತ್ರಿ 2.30 ರ ವೇಳೆಗೆ ಗಾಢ ನಿದ್ದೆಯಲ್ಲಿದ್ದ ಜಗದೀಶ್‌ ಅವರ ಪತ್ನಿ ಅರಚಾಟ ಕೇಳಿ ಎಚ್ಚರಗೊಂಡು ನೋಡಿದಾಗ ಜಗದೀಶ್‌ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎನ್ನಲಾಗಿದೆ. ಕೂಡಲೇ ನೆರಮನೆವರನ್ನು ಕರೆದು ಆಸ್ಪತ್ರಗೆ […]

ಬೀಜದ ಪ್ಯಾಕ್ಟರಿಗೆ ಕೆಲಸಕ್ಕೆ ಹೋಗಿದ್ದ ಯುವತಿಯೋರ್ವಳು ಕಾಣೆ

Sunday, September 21st, 2014
Sumalatha Mugera

ಬಂಟ್ವಾಳ: ಬೀಜದ ಪ್ಯಾಕ್ಟರಿಗೆ ಕೆಲಸಕ್ಕೆ ಹೋಗಿದ್ದ ಯುವತಿಯೋರ್ವಳು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾದ ಯುವತಿಯನ್ನು ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಕಾರಿಂಜಕೊಡಿ ನಿವಾಸಿ ದಿ.ಕೃಷ್ಣಪ್ಪ ಮುಗೇರ ಅವರ ಮಗಳು ಸುಮಲತಾ (22)ಎಂದು ಹೆಸರಿಲಾಗಿದೆ. ಸುಮಾರು 1 ವರ್ಷದಿಂದ ವಗ್ಗದ ಬೀಜದ ಪ್ಯಾಕ್ಟರಿಗೆ ಕೆಲಸಕ್ಕೆ ಹೋಗುತ್ತಿದ್ದು ಸೆ.13ರಮದು ಬೆಳಿಗ್ಗೆ 6.30ಕ್ಕೆ ಕೆಲಸಕ್ಕೆಂದು ಮನೆಯಲ್ಲಿ ಹೇಳಿ ಹೋದವಳು ವಾಪಸು ಮನೆಗೆ ಬಾರದೆ , ಸಂಬಂದಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದಾರೆ ಎಂದು ಗ್ರಾಮಾಂತರ ಠಾಣೆಯಲ್ಲಿ ತಾಯಿ […]

ಉಸ್ತುವಾರಿ ಸಚಿವರ ಸೀಮೆಎಣ್ಣೆ ಮುಕ್ತ ನಗರ ಅವಾಸ್ತವಿಕ DYFI

Wednesday, September 17th, 2014
Rai

ಮಂಗಳೂರು : ಮಂಗಳೂರು ನಗರವನ್ನು ನವೆಂಬರ್ ಒಂದರಿಂದ ಸೀಮೆಎಣ್ಣೆ ಮುಕ್ತ ನಗರವನ್ನಾಗಿ ಘೋಷಿಸಲಾಗುವುದು ಎಂಬ ಉಸ್ತುವಾರಿ ಸಚಿವರ ಹೇಳಿಕೆಯನ್ನು ಅವಾಸ್ತವಿಕ ಎಂದು DYFI ನಗರ ಸಮಿತಿ ಹೇಳಿದೆ. ಮಂಗಳೂರು ನಗರದಲ್ಲಿ ವಾಸಿಸುವ ಕಡುಬಡವರಿಗೆ ಬ್ಯಾಂಕ್ ಸಾಲದ ಮೂಲಕ ಅಡುಗೆ ಅನಿಲ ಸಂಪರ್ಕವನ್ನು ಬಲವಂತವಾಗಿ ನೀಡುವುದು, ಹಾಗೆಯೇ ವಾಸ್ತವ್ಯ ದಾಖಲೆ ಗುರುತು ಚೀಟಿ ಇದ್ದವರಿಗಷ್ಟೇ ಅಡುಗೆ ಸಂಪರ್ಕ ನೀಡುತ್ತೇವೆ. ಅದಕ್ಕಾಗಿ ಪ್ರತ್ಯೇಕ ಕೌಂಟರ್ಗಳನ್ನು ತೆರೆಯುತ್ತೇವೆ ಅನ್ನುವ ಮಾತುಗಳು ಆಡಳಿತದ ಬಾಲಿಶತನವನ್ನು ಎತ್ತಿ ತೋರಿಸುತ್ತಿದೆ. ಇನ್ನು ಪ್ರತಿಯೊಬ್ಬರಿಗೂ ಪಡಿತರ ಚೀಟಿ […]

ಮಂಗಳೂರು ಪುರಭವನ ನವೀಕರಣಕ್ಕೆ ಚಾಲನೆ

Tuesday, September 16th, 2014
ಮಂಗಳೂರು ಪುರಭವನ ನವೀಕರಣಕ್ಕೆ ಚಾಲನೆ

ಮಂಗಳೂರು : ಮಂಗಳೂರು ಪುರಭವನಕ್ಕೆ 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಪುರಭವನದ ಆಧುನೀಕರಣ ಮತ್ತು ನವೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಮುಂದಿನ 2 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮೇಯರ್ ಮಹಾಬಲ ಮಾರ್ಲ ಹೇಳಿದರು. ಅವರು ಮಂಗಳವಾರ(ಸೆ.16) ಪುರಭವನದಲ್ಲಿ ಮಾತನಾಡಿ, ಪುರಭವನಕ್ಕೆ ಸಂಪೂರ್ಣ ಎ.ಸಿ.ಅಳವಡಿಕೆ,ನೆಲಹಾಸು,ಹೊರಭಾಗದಲ್ಲಿ ಗ್ರಾನೈಟ್ ಅಳವಡಿಕೆ,ಆಕರ್ಷಕ ಬಾಗಿಲು ,ವಿಐಪಿ ಕೊಠಡಿ,ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು. ಸುಮಾರು 2 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು,ಡಿಸೆಂಬರ್ 29 ರಂದು ಮುಕ್ತಾಯಗೊಳ್ಳಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಜೆ.ಆರ್.ಲೋಬೋ,ಉಪಮೇಯರ್ […]