ಹೆಚ್ಚಿನ ಚಿಕಿತ್ಸೆಗಾಗಿ ಅಂಬಿ ವಿದೇಶಕ್ಕೆ?

Friday, February 28th, 2014
Ambarish

ಬೆಂಗಳೂರು: ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿರುವ ಹಿರಿಯ ನಟ, ವಸತಿ ಸಚಿವ ಅಂಬರೀಷ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ. ಕಳೆದ ಒಂದು ವಾರದಿಂದ ಅಂಬರೀಷ್ ಅವರು ನಗರದ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೂರು ದಿನಗಳ ಹಿಂದೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಅಂಬಿ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಆಗಮಿಸಿದ್ದರು. ಈ ವೇಳೆ ವೈದ್ಯರು ಹಾಗೂ ಅಂಬರೀಷ್ ಅವರ ಪತ್ನಿ ಸುಮಲತಾ ಅವರೊಂದಿಗೆ ಮಾತುಕತೆ ನಡೆಸಿದ ರಜನಿ, ಹೆಚ್ಚಿನ ಚಿಕಿತ್ಸೆಗಾಗಿ ಅಂಬರೀಷ್ ಅವರನ್ನು ಸಿಂಗಾಪುರದ […]

DYFI ಜಿಲ್ಲಾಧ್ಯಕ್ಷರಾಗಿ ಮುನೀರ್ ಕಾಟಿಪಳ್ಳ ಪುನರಾಯ್ಕೆ

Thursday, February 27th, 2014
muneer

ಮಂಗಳೂರು : ಫೆಬ್ರವರಿ 23-24ರಂದು ನಡೆದ ಆಙಈ ದ.ಕ. ಜಿಲ್ಲಾ ಸಮ್ಮೇಳನ ಹೊಸ ಜಿಲ್ಲಾ ಸಮಿತಿಯನ್ನು ಮುಂದಿನ ಅವಧಿಗೆ ಸರ್ವಾನುಮತದಿಂದ ಚುನಾಯಿಸಿತು. ಜಿಲ್ಲಾಧ್ಯಕ್ಷರಾಗಿ ಮುನೀರ್ ಕಾಟಿಪಳ್ಳ ಮೂರನೇ ಅವಧಿಗೆ ಆಯ್ಕೆಯಾದರು. ಕಾರ್ಯದರ್ಶಿ ಯಾಗಿ ದಯಾನಂದ ಶೆಟ್ಟಿ, ಕೋಶಾಧಿಕಾರಿಯಾಗಿ ಜೀವನ್ರಾಜ್ ಕುತ್ತಾರ್, ಉಪಾಧ್ಯಕ್ಷರಾಗಿ ಬಿ.ಕೆ. ಇಮ್ತಿಯಾಜ್, ಪ್ರಮೀಳಾ ಕೆ., ಅಶೋಕ್ ಶೆಟ್ಟಿ, ಜೊತೆ ಕಾರ್ಯದದರ್ಶಿ ಗಳಾಗಿ ಸಂತೋಷ್ ಬಜಾಲ್, ಮನೋಜ್ ವಾಮಂಜೂರು, ರಫೀಕ್ ಹರೇಕಳ ಆಯ್ಕೆಯಾದರು. ಒಟ್ಟು 23 ಜನರ ಜಿಲ್ಲಾ ಸಮಿತಿಯನ್ನು ಸಮ್ಮೇಳನ ಮುಂದಿನ ಅವಧಿಗೆ ಚುನಾಯಿಸಿತು. […]

ಮೋದಿ ಬಗ್ಗೆ ಖುರ್ಷಿದ್ ಹೇಳಿಕೆಗೆ ರಾಹುಲ್ ಅಸಮಾಧಾನ

Thursday, February 27th, 2014
Rahul-Gandhi

ನವದೆಹಲಿ: ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ನೀಡಿದ್ದ ‘ನಪುಂಸಕ’ ಹೇಳಿಕೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎರಡು ದಿನಗಳ ಬಳಿಕ ಖುರ್ಷಿದ್ ಹೇಳಿಕೆ ಬಗ್ಗೆ ಇಂದು ವರದಿಗಾರರಿಗೆ ಪ್ರತಿಕ್ರಿಯಿಸಿರುವ ರಾಹುಲ್, ‘ಇಂತಹ ಭಾಷೆ ಬಳಸುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ’ ಎಂದಿದ್ದಾರೆ. 2002ರ ಗುಜರಾತ್ ಗಲಭೆ ನಿಯಂತ್ರಿಸಲು ಸಾಧ್ಯವಾಗದ ಮೋದಿ ಒಬ್ಬ ‘ನಪುಂಸಕ’ ಎಂದು ಸಲ್ಮಾನ್ ಖರ್ಷಿದ್ ಹೇಳಿದ್ದರು. ಈ […]

ನಳಿನಿ ಸೇರಿದಂತೆ 4 ರಾಜೀವ್ ಹಂತಕರ ಬಿಡುಗಡೆಗೆ ಸುಪ್ರೀಂ ತಡೆ

Thursday, February 27th, 2014
Rajeev-Gandhi

ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರಿಗೆ ಭಾರಿ ಹಿನ್ನಡೆಯಾಗಿದೆ. ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಳಿನಿ ಸೇರಿದಂತೆ ನಾಲ್ವರು ಅಪರಾಧಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ. ಈ ಮುಂಚೆ ಪ್ರಕರಣದ ಮೂವರು ಅಪರಾಧಿಗಳ ಬಿಡುಗಡೆಗೆ ತಡೆಯಾಜ್ಞೆ ನೀಡಿದ್ದ ಸುಪ್ರೀಂ ಕೋರ್ಟ್, ಇಂದು ನಳಿನಿ, ರಾಬರ್ಟ್, ಜಯಕುಮಾರ್ ಹಾಗೂ ರವಿಚಂದ್ರನ್   ಬಿಡುಗಡೆಗೂ ತಡೆ ನೀಡಿದೆ. ಪ್ರಕರಣದ ಏಳು ಹಂತಕರ ಬಿಡುಗಡೆ ತಮಿಳುನಾಡು ಸರ್ಕಾರ ನಿರ್ಧರಿಸಿತ್ತು. ತಮಿಳುನಾಡು ಸರ್ಕಾರದ ನಿರ್ಧಾರ […]

ಬಿಜೆಪಿ, ಕಾಂಗ್ರೆಸ್‌ಗೆ ಪರ್ಯಾಯ ರಂಗ ಸ್ಥಾಪನೆ, ಚುನಾವಣೆಗೂ ಮುನ್ನ ಪ್ರಧಾನಿ ಅಭ್ಯರ್ಥಿ ಇಲ್ಲ

Wednesday, February 26th, 2014
ಬಿಜೆಪಿ, ಕಾಂಗ್ರೆಸ್‌ಗೆ ಪರ್ಯಾಯ ರಂಗ ಸ್ಥಾಪನೆ, ಚುನಾವಣೆಗೂ ಮುನ್ನ ಪ್ರಧಾನಿ ಅಭ್ಯರ್ಥಿ ಇಲ್ಲ

ನವದೆಹಲಿ: ಕಾಂಗ್ರೆಸ್-ಬಿಜೆಪಿಯೇತರ,  ಜೆಡಿಎಸ್ ಸೇರಿದಂತೆ ಪ್ರಮುಖ ಹನ್ನೊಂದು ಪಕ್ಷಗಳನ್ನೊಳಗೊಂಡ ತೃತೀಯ ರಂಗ ಮಂಗಳವಾರ ಅಸ್ವಿತ್ವಕ್ಕೆ ಬಂದಿದೆ. ಭ್ರಷ್ಟ ಕಾಂಗ್ರೆಸ್ ಹಾಗೂ ಕೋಮುವಾದಿ ಬಿಜೆಪಿಯನ್ನು ಕೇಂದ್ರದಿಂದ ದೂರ ಇಡಲು ತೃತೀಯ ರಂಗ ರಚಿಸಿರುವುದಾಗಿ ಘೋಷಿಸಿರುವ ನಾಯಕರು, ಒಗ್ಗೂಡಿ ಚುನಾವಣೆ ಎದುರಿಸಲಿದ್ದಾರೆ. ಆದರೆ, ಚುನಾವಣೆಗೂ ಮುನ್ನ ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡದಿರಲು ಮಂಗಳವಾರ ತ್ರಿಪುರ ಭವನದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬಹುತೇಕ ಪಕ್ಷಗಳು ಬೇರೆ ಬೇರೆ ರಾಜ್ಯಗಳನ್ನು ಪ್ರತಿನಿಧಿಸುವುದರಿಂದ ಆಯಾ ಪ್ರದೇಶದಲ್ಲಿ ಸೀಟು ಹಂಚಿಕೆ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. […]

ಉಭಯ ಸದನಗಳಲ್ಲಿ ಲೋಕಾಯುಕ್ತ ಸದ್ದು

Wednesday, February 26th, 2014
Jagadish-Shettar

ಬೆಂಗಳೂರುಃ ಲೋಕಾಯುಕ್ತ ಕಾಯಿದೆ ತಿದ್ದುಪಡಿ ವಿಚಾರವು ಉಭಯ ಸದನಗಳಲ್ಲಿ ಮಂಗಳವಾರ ಸದ್ದು ಮಾಡಿತು. ಲೋಕಾಯುಕ್ತ ಕಾಯಿದೆಯನ್ನು ರಾಜ್ಯ ಸರ್ಕಾರ ಶಕ್ತಿ ಹೀನ ಮಾಡುತ್ತಿದೆ ಎಂದು ವಿಧಾನಸಭೆ ವಿರೋಧಪಕ್ಷ ನಾಯಕ ಜಗದೀಶ್ ಶೆಟ್ಟರ್ ಕಿಡಿಕಾರಿದರೆ, ಭ್ರಷ್ಟಾಚಾರ ನಿಯಂತ್ರಣ ಎನ್ನುವುದು ಕಾಂಗ್ರೆಸ್ ಪಾಲಿಗೆ ಘೋಷಣೆಗೆ ಮಾತ್ರ ಸೀಮಿತ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಡಿ.ವಿ.ಸದಾನಂದಗೌಡ ಲೇವಡಿ ಮಾಡಿದರು. ಲೋಕಾಯುಕ್ತ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ಸರ್ಕಾರ ಅದನ್ನು ಶಕ್ತಿಹೀನಗೊಳಿಸಲು ನಿರ್ಧರಿಸಿದಂತಿದೆ. ಕ್ಯಾಬಿನೆಟ್‌ನಲ್ಲೇ ಇದಕ್ಕೆ ಅನುಮತಿ ನೀಡಿ, ವಾಪಸ್ ತೆಗೆದುಕೊಳ್ಳುವ ಗೊಂದಲ […]

ಸಲ್ಮಾನ್ ಖುರ್ಷಿದ್‌ಗೆ ಮಾನಸಿಕ ಸ್ಥಿಮಿತ ಇಲ್ಲ: ಬಿಜೆಪಿ

Wednesday, February 26th, 2014
Narendra-Modi

ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ದೇಶದ ಎರಡು ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಮಾತಿನ ಸಮರ ಆರಂಭವಾಗಿದ್ದು, ಹಿರಿಯ ಕಾಂಗ್ರೆಸ್ ನಾಯಕ, ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರ ಹೇಳಿಕೆಗೆ ಪ್ರತಿಪಕ್ಷ ಬಿಜೆಪಿ ಬುಧವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. 2002ರ ಗುಜರಾತ್ ಗಲಭೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಒಬ್ಬ ‘ನಪುಂಸಕ’ ಎಂದು ಖುರ್ಷಿದ್ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಕಾಂಗ್ರೆಸ್ ಸೋಲಿನ ಹತಾಶೆಯಿಂದ ಈ ರೀತಿ ಹೇಳಿಕೆ ನೀಡುತ್ತಿದೆ […]

ನನ್ನ ಬಜೆಟ್ ಸುಳ್ಳಿನ ಸರಮಾಲೆ ಅಲ್ಲ, ಸಾಧನೆಗಳ ಸರಮಾಲೆ: ಸಿಎಂ

Wednesday, February 26th, 2014
Siddaramaiah

ಬೆಂಗಳೂರು: ತಮ್ಮ ಬಜೆಟ್‌ನ್ನು ಸುಳ್ಳಿನ ಸರಮಾಲೆ ಎಂದಿದ್ದ ಪ್ರತಿಪಕ್ಷದ ನಾಯಕರಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನನ್ನ ಬಜೆಟ್ ಸುಳ್ಳಿನ ಸರಮಾಲೆ ಅಲ್ಲ. ಸಾಧನೆಗಳ ಸರಮಾಲೆ ಎಂದು ಬುಧವಾರ ಹೇಳಿದ್ದಾರೆ. ಇಂದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಸಿಎಂ, ನಮ್ಮದು ನಡಿದಂತೆ ನಡೆಯುವ ಸರ್ಕಾರ. ಮೊದಲು ನೀವು ಬಜೆಟ್ ನೋಡುವ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಿ ಎಂದು ಪ್ರತಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದರು. ನನ್ನ ಬಜೆಟ್ ಸುಳ್ಳಿನ ಸರಮಾಲೆ […]

ವಿದ್ಯಾರ್ಥಿನಿಯರಿಗೆ ಉಚಿತ ಕಾಲೇಜು ಶಿಕ್ಷಣ.

Wednesday, February 26th, 2014
R.V-Deshpande

ಬೆಳ್ತಂಗಡಿ: ಉಜಿರೆಯಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸ್ನಾತಕೋತ್ತರ ಪದವಿ ಅಧ್ಯಯನ ಕೇಂದ್ರದ ನೂತನ ಕಟ್ಟಡವನ್ನು ಮಂಗಳವಾರ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಉದ್ಘಾಟಿಸಿದರು. ಧರ್ಮಸ್ಥಳದ ಧಮರ್ಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆ, ಮಂಗಳೂರು ವಿ.ವಿ. ಕುಲಪತಿ ಡಾ. ಟಿ.ಸಿ. ಶಿವಶಂಕರಮೂರ್ತಿ, ಪ್ರೊ.ಎಸ್. ಪ್ರಭಾಕರ್. ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಯಶೋವರ್ಮ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಯೋಗಾನಂದ ಉಪಸ್ಥಿತರಿದ್ದರು. ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಕಾಲೇಜುಗಳಲ್ಲಿ ಮತ್ತು […]

ಬಾಂಗ್ಲಾದೇಶಿ ಕಳ್ಳ ನುಸುಳುಕಾರರನ್ನು ದೇಶದಿಂದ ಓಡಿಸಿ : ವಿಶ್ವ ಹಿಂದು ಪರಿಷತ್, ಬಜರಂಗದಳ

Wednesday, February 26th, 2014
Bajranga Dal

ಮಂಗಳೂರು: ಕಳೆದ ಕೆಲವು ವರ್ಷಗಳಿಂದ ಬಾಂಗ್ಲಾ ನುಸುಳುಕೋರರು ನಿರಂತರ ಭಾರತಕ್ಕೆ ನುಸುಳುತ್ತಿದ್ದಾರೆ. ಈ ದೇಶದ ಅರ್ಥವ್ಯವಸ್ಥೆ ಹಾಗೂ ಆತಂರಿಕ ಭದ್ರತೆಗೆ ಅಪಾಯ ತರುತ್ತಿದ್ದಾರೆ. ಅಸ್ಸಾಂನಿಂದ ಪ್ರಾರಂಭವಾದ ಈ ಕಳ್ಳ ನುಸುಳುವಿಕೆ ಇಡೀ ದೇಶವನ್ನು ವ್ಯಾಪಿಸಿ ಸಂಕಟಮಯ ಪರಿಸ್ಥಿಯನ್ನು ತಂದಿದೆ. ಆಯಾ ರಾಜ್ಯಗಳಲ್ಲಿ ನುಸುಳುಕೋರರಿಂದ ಲೂಟಿ, ಭಯೋತ್ಪಾದನೆ, ಡಕಾಯಿತಿ ಮುಂತಾದ ಅಪರಾಧಿ ಕೃತ್ಯಗಳಲ್ಲಿ ಸೇರಿಕೊಂಡಿದ್ದಾರೆ. ಒಂದೆಡೆ ಈ ಕಳ್ಳ ನುಸುಳುವಿಕೆ ಗಂಭೀರ ಅಪಾಯವನ್ನು ತಂದೊಡ್ಡಿದರೆ ಇನ್ನೊಂದೆಡೆ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ಅತ್ಯಾಚಾರ, ಸಂಪತ್ತನ್ನು ಲೂಟಿಮಾಡುವುದು ಈ ಕೃತ್ಯಗಳಿಂದ […]