ಪತಿಯನ್ನು ಕಳೆದುಕೊಂಡ ಮಹಿಳೆಯರಿಂದ ಹೋಮದ ಪೂರ್ಣಾಹುತಿ
Tuesday, October 4th, 2011ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವದ, ಮಂಗಳೂರು ದಸರಾ ಸಂಭ್ರಮದಲ್ಲಿ ಸೋಮವಾರ ಪತಿಯನ್ನು ಕಳೆದುಕೊಂಡ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಸಮಾಜದಲ್ಲಿ ನೆಲೆಯೂರಿರುವ ಅನಿಷ್ಟ ಪದ್ಧತಿಯೆನಿಸಿ ಕೊಂಡ ವಿಧವಾ ಪದ್ದತಿಯನ್ನು ಧಿಕ್ಕರಿಸಲು ಪತಿಯನ್ನು ಕಳೆದುಕೊಂಡ ಸುಮಾರು 2,500 ಮಹಿಳೆಯರ ಪಾಲ್ಗೊಳ್ಳುವಿಕೆಯೊಂದಿಗೆ ಚಂಡಿಕಾಹೋಮ, ಬೆಳ್ಳಿ ರಥೋತ್ಸವ ನಡೆಸಿ ವಿಧವೆಯರಿಗೆ ಸೀರೆ, ಕುಂಕುಮ, ಹೂವು, ಬಳೆಯನ್ನು ಪ್ರಸಾದ ರೂಪದಲ್ಲಿ ನೀಡಲಾಯಿತು. ಬಿ. ಜನಾರ್ದನ ಪೂಜಾರಿ ಅವರು, ಹೋಮದ ಸಂಕಲ್ಪ ವಿಧಿಯನ್ನು ನೆರವೇರಿಸಿದ ಬಲಿಕ ಮಾತನಾಡಿ ಭಾರತದಲ್ಲಿ […]