105 ದಿನಗಳ ಜೈಲುವಾಸ ಅಂತ್ಯ : ಪಿ.ಚಿದಂಬರಂ ಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು

Wednesday, December 4th, 2019
Chidambaram

ನವದೆಹಲಿ : ಐಎನ್ ಎಕ್ಸ್ ಮೀಡಿಯಾ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 105 ದಿನಗಳಿಂದ ಜೈಲು ಶಿಕ್ಷೆ ಅನುಭವಿಸಿದ್ದ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರಿಗೆ ಸುಪ್ರೀಂಕೋರ್ಟ್ ಬುಧವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ನ್ಯಾ.ಭಾನುಮತಿ ನೇತೃತ್ವದ ತ್ರಿಸದಸ್ಯ ಪೀಠ ಚಿದಂಬರಂಗೆ ಷರತ್ತು ಬದ್ಧ ಜಾಮೀನು ನೀಡಿದೆ. ಸಾರ್ವಜನಿಕ ಹೇಳಿಕೆ, ಸಂದರ್ಶನ ನೀಡದಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಪಾಸ್ ಪೋರ್ಟ್ ಪೊಲೀಸರ ವಶಕ್ಕೆ ಒಪ್ಪಿಸಬೇಕು, ಇಬ್ಬರ ಶ್ಯೂರಿಟಿ ಹಾಗೂ 2 ಲಕ್ಷ […]

ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಮುಖಂಡರ ಮೇಲೆ ಹಲ್ಲೆ

Wednesday, December 4th, 2019
Hasan

ಹಾಸನ : ಹಣ ಹಂಚುವುದಕ್ಕೆ ಬಂದಿದ್ದಾರೆ ಎಂಬ ಅನುಮಾನದ ಮೇಲೆ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಮುಖಂಡರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದಿದೆ. ಚನ್ನರಾಯಪಟ್ಟಣ ತಾಲೂಕಿನ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ದಂಡಿಗನಹಳ್ಳಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ನಂಬಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಕೆ.ಆರ್ ಪೇಟೆ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈಗಾಗಲೇ ಜೆಡಿಎಸ್ ಮತ್ತು ಬಿಜೆಪಿ ನಡುವೆ ಹಣಾಹಣಿ ನಡೆದಿದ್ದು, ಬಿಜೆಪಿಯ ನಾರಾಯಣಗೌಡ ಮತ್ತು ಜೆಡಿಎಸ್ ನ ಕೆಬಿ ಚಂದ್ರಶೇಖರ್ ನಡುವೆ […]

ಕಡಬ : ದಿನಸಿ ಅಂಗಡಿಗಳಿಗೆ ನುಗ್ಗಿದ ಕಳ್ಳರು

Wednesday, December 4th, 2019
Kadaba

ಕಡಬ : ಕಡಬ ಸಮೀಪದ ಪೇರಡ್ಕದಲ್ಲಿ ಅಂಗಡಿಯೊಂದಕ್ಕೆ ಕಳ್ಳರು ನುಗ್ಗಿರುವ ಘಟನೆ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಠಾಣಾ ವ್ಯಾಪ್ತಿಯಲ್ಲಿ ಕಳೆದ ಕೆಲವು ಸಮಯಗಳಿಂದ ಸುಮ್ಮನಿದ್ದ ಕಳ್ಳರು ಇದೀಗ ಮತ್ತೆ ತಮ್ಮ ಕೈಚಳಕವನ್ನು ತೋರಿದ್ದಾರೆ. ಕಡಬ ಸಮೀಪದ ಪೇರಡ್ಕ ಎಂಬಲ್ಲಿ ಉಮ್ಮರ್ ಪೊಸವಳಿಕೆ ಹಾಗೂ ಮಹಮ್ಮದ್ ಪೆಲತ್ರಾಣೆ ಎಂಬವರಿಗೆ ಸೇರಿದ ಅಂಗಡಿಗೆ ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಿಗ್ಗಿನ ನಡುವೆ ನುಗ್ಗಿರುವ ಕಳ್ಳರು ಅಂಗಡಿಯೊಳಗಿದ್ದ ಅಕ್ಕಿ, ಎಣ್ಣೆ ಸೇರಿದಂತೆ ದಿನಸಿ ಸಾಮಾನುಗಳನ್ನು ಕದ್ದೊಯ್ದಿದ್ದಾರೆ.    

3ನೇ ಸೌತ್‌ ಏಶ್ಯನ್‌ ಗೇಮ್ಸ್‌ನ ಆ್ಯತ್ಲೆಟಿಕ್‌ ಸ್ಪರ್ಧೆಯಲ್ಲಿ ಭಾರತಕ್ಕೆ 10 ಪದಕ

Wednesday, December 4th, 2019
Athletics

ಕಾಠ್ಮಂಡು : ಇಲ್ಲಿ ಸಾಗುತ್ತಿರುವ 13ನೇ ಸೌತ್‌ ಏಶ್ಯನ್‌ ಗೇಮ್ಸ್‌ನ ಆ್ಯತ್ಲೆಟಿಕ್‌ ಸ್ಪರ್ಧೆಯಲ್ಲಿ ಭಾರತೀಯ ಆ್ಯತ್ಲೀಟ್‌ಗಳು ಪ್ರಾಬಲ್ಯ ಸ್ಥಾಪಿಸಿದ್ದಾರೆ. ನಾಲ್ಕು ಚಿನ್ನ ಸಹಿತ 10 ಪದಕ ಗೆದ್ದು ಸಂಭ್ರಮಿಸಿದ್ದಾರೆ. ಅರ್ಚನಾ ಸುಶೀಂದ್ರನ್‌, ಎಂ. ಜಸ್ನಾ, ಸರ್ವೇಶ್‌ ಅನಿಲ್‌ ಕುಶಾರೆ ಮತ್ತು ಅಜಯ್‌ ಕುಮಾರ್‌ ಸರೋಜ್‌ ಆ್ಯತ್ಲೆಟಿಕ್ಸ್‌ ಸ್ಪರ್ಧೆಯ ಮೊದಲ ದಿನ ಚಿನ್ನ ಗೆದ್ದ ಸಾಧಕರಾಗಿದ್ದಾರೆ. ವನಿತೆಯರ 100 ಮೀ. ಓಟದಲ್ಲಿ ಅರ್ಚನಾ ಸುಶೀಂದ್ರನ್‌ 11.80 ಸೆ.ನಲ್ಲಿ ಗುರಿ ತಲುಪಿ ಗೇಮ್ಸ್‌ ನ ಅತೀವೇಗದ ಓಟಗಾರ್ತಿ ಎಂದೆನಿಸಿಕೊಂಡಿದ್ದಾರೆ. ಶ್ರೀಲಂಕಾದ […]

ಪಾಕೃತಿಕ ಸೌಂದರ್ಯ, ನದಿಯನ್ನು ನಾಶಮಾಡುತ್ತಿರುವುದು ವಿಷಾದನೀಯ : ಉಮಾನಾಥ್ ಕೋಟೆಕಾರ್

Wednesday, December 4th, 2019
Ullal

ಮಂಗಳೂರು : ನಾಶವಾಗುತ್ತಿರುವ ನದಿ ಸಂಪನ್ಮೂಲಗಳನ್ನು ಸಂರಕ್ಷಿಸಿ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಉಳ್ಳಾಲ ಉಳಿಯ ನದಿ ತೀರದಲ್ಲಿ ಪರಿಸರದ ನಿವಾಸಿಗಳು ನದಿ ಸಂರಕ್ಷಣೆ ಅಭಿಯಾನದ ಭಾಗವಾಗಿ ಜನ ಜಾಗೃತಿಗಾಗಿ ನದಿ ಪರಿಸರದ ಸ್ವಚ್ಚತಾ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳು ಸೇರಿ ಉಳ್ಳಾಲ ಉಳಿಯ ನದಿ ತೀರದಲ್ಲಿ ಸ್ವಚ್ಚತಾ ಕಾರ್ಯ ನಡೆಸುವ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ರಾಮಕೃಷ್ಣ ಮಠ ಸ್ವಚ್ಛ ಮಂಗಳೂರು ವಿಭಾಗದ ಸಂಯೋಜಕರಾದ ಶ್ರೀ ಉಮಾನಾಥ್ ಕೋಟೆಕಾರ್ ಮಾತನಾಡಿ, […]

ಸುಳ್ಯ : ಡಿ.22 ರಂದು ಮಡಪ್ಪಾಡಿಯಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ

Wednesday, December 4th, 2019
Sulya

ಸುಳ್ಯ : ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಹಯೋಗದಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ಸುಳ್ಯ ತಾಲೂಕಿನ ಮಡಪ್ಪಾಡಿಯಲ್ಲಿ ಡಿಸೆಂಬರ್ 22 ರಂದು ನಡೆಯಲಿದೆ. ಈ ಕುರಿತು ಚರ್ಚಿಸಲು ಸುಳ್ಯದ ಎಪಿಎಂಸಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಯಿತು. ಗ್ರಾಮ ವಾಸ್ತವ್ಯದ ಸಿದ್ಧತೆಗಳ ಬಗ್ಗೆ ಚರ್ಚಿಸಲು ಡಿ.7 ರಂದು ಅಪರಾಹ್ನ 2.30ಕ್ಕೆ ಮಡಪ್ಪಾಡಿಯಲ್ಲಿ ಸಭೆ ನಡೆಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಮಾತನಾಡಿದ ಶಾಸಕ ಎಸ್‌.ಅಂಗಾರ ಗ್ರಾಮ ವಾಸ್ತವ್ಯದ ಯಶಸ್ವಿಗೆ […]

ಇಂದಿನ ರಾಶಿಫಲ : ಸಿಂಹ ರಾಶಿ ಯವರಿಗೆ ಉದ್ಯಮವನ್ನು ವಿಸ್ತರಣೆ ಮಾಡುವ ಸದಾವಕಾಶ

Wednesday, December 4th, 2019
Mahaganapathy

ಶ್ರೀ ಮಹಾಗಣಪತಿ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ. ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ. ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ 9380281393 ವಿಕಾರಿ ನಾಮ ಸಂವತ್ಸರ ಮಾರ್ಗಶಿರ ಮಾಸ ನಕ್ಷತ್ರ : ಶತಭಿಷ ಋತು : ಹೇಮಂತ ರಾಹುಕಾಲ 12:14 – 13:39 ಗುಳಿಕ ಕಾಲ 10:48 -12:14 ಸೂರ್ಯೋದಯ 06:31:18 ಸೂರ್ಯಾಸ್ತ 17:55:42 ತಿಥಿ : ಅಷ್ಟಮಿ ಪಕ್ಷ : ಶುಕ್ಲ ಮೇಷ ರಾಶಿ ಈ ದಿನ ಅಧಿಕ ಖರ್ಚು ಕಂಡುಬರುತ್ತದೆ, ಮನೆಗೆ […]

ವಿಕಲತೆ ಸಾಧನೆಗೆ ಅಡ್ಡಿಯಾಗಬಾರದು- ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್

Tuesday, December 3rd, 2019
handi-cap day

ಮಂಗಳೂರು: ವಿಕಲಚೇತನರು ಎಂಬುದನ್ನು ಮನಸ್ಸಿನಿಂದ ದೂರವಿಟ್ಟು, ಸಾಧನೆಯ ಹಾದಿಯಲ್ಲಿ ಸಾಗುವ ಮನೋಭಾವ ಬೆಳಿಸಿಕೊಳ್ಳಬೇಕು. ವಿಕಲತೆ ಸಾಧನೆಗೆ ಅಡ್ಡಿಯಾಗಬಾರದು ಎಂದು ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಹೇಳಿದರು. ಮಂಗಳವಾರ ಪುರಭವನದಲ್ಲಿ ದ.ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಲಯನ್ಸ್ ಕ್ಲಬ್ ಗಾಂಧನಗರ, ವಿಕಲಚೇತನರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆಯ […]

ಡಾ.ಪ್ರಿಯಾಂಕ ರೆಡ್ಡಿ ಹತ್ಯೆಗೆ ಜ್ಞಾನ ಸಂಜೀವಿನಿ ಖಂಡನೆ

Tuesday, December 3rd, 2019
jana-sanjeevini

ಮಂಗಳೂರು  : ಜ್ಞಾನ ಸಂಜೀವಿನಿ ವತಿಯಿಂದ 26 ವರ್ಷದ ಡಾ.ಪ್ರಿಯಾಂಕ ರೆಡ್ಡಿಯವರ ಅತ್ಯಾಚಾರ ಮಾಡಿ ಹತ್ಯೆ ಮಾಡಿದ ಆರೋಪಿಗಳ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಯವರ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಯಿತು. ಪ್ರಮುಖರಾದ ಸಾಕ್ಷಾತ್ ಶೆಟ್ಟಿ,ಜೀವನ್ ಗೌಡ,ಕೇದರ್ ಶೇಣವ,ಶಿವಪ್ರಸಾದ್, ಸಚಿನ್,ಸುಮನ್ ರಾಜ್,ಸ್ವಸ್ತಿಕ್ ಆಳ್ವ,ಪ್ರಜ್ವಲ್ ಶೇಣವ,ವಿನೀತ್ ಪುತ್ರನ್,ವಿನೀತ್ ಪೂಜಾರಿ ಮತ್ತು ಕೀರ್ತನ್ ದಾಸ್ ಉಪಸ್ಥಿತರಿದ್ದರು.

ಶಿಕ್ಷಣದೊಂದಿಗೆ ಉತ್ತಮ ಹವ್ಯಾಸ ರೂಢಿಸಿಕೊಳ್ಳಿ : ವಿದ್ಯಾರ್ಥಿಗಳಿಗೆ ಶಿಕ್ಷಣಾಧಿಕಾರಿ ಮಚ್ಚಾಡೋ ಕಿವಿಮಾತು

Tuesday, December 3rd, 2019
shikshana

ಮಡಿಕೇರಿ : ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಹವ್ಯಾಸವನ್ನು ರೂಢಿಸಿಕೊಂಡು ಸ್ವಾವಲಂಬಿಗಳಾಗಲು ಶ್ರಮವಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪೆರಿಗ್ರೀನ್ ಮಚ್ಚಾಡೋ ಅವರು ತಿಳಿಸಿದರು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ವೃತ್ತಿ ಶಿಕ್ಷಣ ಕಲಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮನೆಯಲ್ಲಿ ಹೊಲಿಗೆ ಯಂತ್ರ ಇದ್ದಲ್ಲಿ ಪದೇಪದೇ ಟೈಲರ್ ಬಳಿ ಹೋಗುವ ಅವಶ್ಯಕತೆ ಇರುವುದಿಲ್ಲ. ಹರಿದ ಬಟ್ಟೆಗಳನ್ನು ಮನೆಯಲ್ಲಿ ನಾವೇ ಹೊಲಿದುಕೊಳ್ಳಬಹುದು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು. ನಂತರ […]