ಉಡುಪಿ : ಮೊಬೈಲ್‌ ಅಂಗಡಿಯಿಂದ ಕಳವು; ಮೂವರು ಅಂತರ್ ರಾಜ್ಯ ಕಳ್ಳರ ಬಂಧನ

Tuesday, December 3rd, 2019
UdupiUdupi

ಉಡುಪಿ : ನಗರದ ತ್ರಿವೇಣಿ ಜಂಕ್ಷನ್‌ ಬಳಿ ಇರುವ ಪ್ಲೇ ಝೋನ್‌ ಮೊಬೈಲ್‌ ಅಂಗಡಿಯಲ್ಲಿ ನ.5ರಂದು ರಾತ್ರಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಅಂತಾರಾಜ್ಯ ಕಳ್ಳರ ತಂಡವನ್ನು ಡಿ.1ರಂದು ಪೊಲೀಸರು ಬಂಧಿಸಿದ್ದಾರೆ. ನ.5ರಂದು ಮೊಬೈಲ್‌ ಅಂಗಡಿಯಿಂದ 8,34,990 ರೂ. ಬೆಲೆ ಬಾಳುವ ಮೊಬೈಲ್‌ ಫೋನ್‌ಗಳು ಹಾಗೂ ನಗದು ಕಳವಾಗಿದ್ದವು. ಅಂತಾರಾಜ್ಯ ಕಳವು ತಂಡದ ಸದಸ್ಯರಾದ ಮಹಾರಾಷ್ಟ್ರದ ರಝಾಕ್‌ ಅಸ್ಲಾಂ ಮುಜಾವರ್‌, ಕೊಪ್ಪಳದ ರಾಜಾಸಾಬ್‌ ನಾಯಕ್‌, ಬಿಹಾರದ ದೀಪಕ್‌ ಪ್ರಸಾದ್‌ರನ್ನು ಬಂಧಿಸಿರುವ ಪೊಲೀಸರು, ಸುಮಾರು 3 ಲ.ರೂ. ಮೌಲ್ಯದ […]

ಕೊಡಗು ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀಸುಬ್ರಹ್ಮಣ್ಯ ಷಷ್ಠಿ

Tuesday, December 3rd, 2019
shashti

ಮಡಿಕೇರಿ : ಕೊಡಗು ಜಿಲ್ಲೆಯಾದ್ಯಂತ ವಿವಿಧ ದೇವಾಲಯಗಳಲ್ಲಿ ಶ್ರೀಸುಬ್ರಹ್ಮಣ್ಯ ಷಷ್ಠಿ ಶ್ರದ್ಧಾಭಕ್ತಿಯಿಂದ ನಡೆಯಿತು. ನಗರದ ಇತಿಹಾಸ ಪ್ರಸಿದ್ಧ ಶ್ರೀಓಂಕಾರೇಶ್ವರ ದೇವಾಲಯದಲ್ಲಿ ಶ್ರೀಸುಬ್ರಹ್ಮಣ್ಯ ದೇವರಿಗೆ ಅಭಿಷೇಕ, ಅಲಂಕಾರ, ಅರ್ಚನೆ ಸೇರಿದಂತೆ ವಿವಿಧ ಪೂಜಾ ವಿಧಿ ವಿಧಾನಗಳು ಬೆಳಗ್ಗೆಯಿಂದಲೇ ನಡೆಯಿತು. ಮಹಾಪೂಜೆ ಮತ್ತು ಮಹಾಮಂಗಳಾರತಿ ಸಂದರ್ಭ ಸಾವಿರಾರು ಭಕ್ತರು ಶ್ರದ್ಧಾಭಕ್ತಿಯನ್ನು ಮೆರೆದರು. ಭಕ್ತಾಧಿಗಳಿಗೆ ಅನ್ನದಾನದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಬ್ರಾಹ್ಮಣರ ಬೀದಿಯ ಅಶ್ವತ್ಥ ಕಟ್ಟೆಯಲ್ಲೂ ನಾಗಾರಾಧನೆ ನಡೆಯಿತು. ಭಕ್ತರು ಅಭಿಷೇಕ ಮತ್ತು ವಿಶೇಷ ಪೂಜೆ ಸಲ್ಲಿಸಿದರು. ಕೂಡಿಗೆಯಲ್ಲಿ ರಥೋತ್ಸವ ಶ್ರೀಸುಬ್ರಹ್ಮಣ್ಯ ಷಷ್ಠಿ […]

ಕುಂದಾಪುರ : ಮದುವೆ ದಿನವೇ ವಧು ನಾಪತ್ತೆ; ಪ್ರಿಯಕರನೊಂದಿಗೆ ಮದುವೆಯಾಗಿ ಬಂದ ಯುವತಿ

Tuesday, December 3rd, 2019
Maduve

ಕುಂದಾಪುರ : ಎರಡು ಕುಟುಂಬದವರು ಸೇರಿ ನಿಶ್ಚಯ ಮಾಡಿದ ಮದುವೆ ದಿಕ್ಕರಿಸಿ ಮದುವೆ ದಿನವೇ ಮನೆಯಿಂದ ಯುವತಿಯೊಬ್ಬಳು ನಾಪತ್ತೆಯಾದ್ದರಿಂದ ಮದುವೆ ಮುರಿದು ಬಿದ್ದ ಘಟನೆ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. ಮದುವೆ ಧಿಕ್ಕರಿಸಿ ನಾಪತ್ತೆಯಾದ ಮರವಂತೆಯ ಯುವತಿಯೋರ್ವಳು ಪ್ರಿಯಕರನ ಕೈಹಿಡಿದು ಪ್ರತ್ಯಕ್ಷವಾಗಿದ್ದಾಳೆ. ತ್ರಾಸಿಯ ಸಭಾಭವನದಲ್ಲಿ ಮರವಂತೆಯ ಯುವತಿ ಹಾಗೂ ತ್ರಾಸಿ ಮೂಲದ ಯುವಕನ ಹೆತ್ತವರು ಹಾಗೂ ಸಂಬಂಧಿಕರೆಲ್ಲ ಸೇರಿ ಗೊತ್ತುಪಡಿಸಿದ ಹುಡುಗನೊಂದಿಗೆ ಹಸೆಮಣೆ ಏರಬೇಕಿದ್ದ ವಧುವೊಬ್ಬಳು ಬೆಳ್ಳಂಬೆಳ್ಳಗ್ಗೆ ಗಂಗೊಳ್ಳಿ ಮೂಲದ ಸದ್ಯ ತೆಕ್ಕಟ್ಟೆ ಆಸುಪಾಸಿನ […]

ಒಕ್ಕಲಿಗರ ಸಂಘದ ಮಹಾಸಭೆ : ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ; ಸಾಧಕರಿಗೆ ಸನ್ಮಾನ

Tuesday, December 3rd, 2019
Okkaliga

ಮಡಿಕೇರಿ : ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಪ್ರಸಕ್ತ ಸಾಲಿನ ಮಹಾಸಭೆಯು ಜಿಲ್ಲಾಧ್ಯಕ್ಷ ಎಸ್.ಎಂ.ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಗರದ ಬಾಲಭವನದ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ 2018ನೇ ಸಾಲಿನ 10ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಜಿಲ್ಲೆಯ ಜನಾಂಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸೋಮವಾರಪೇಟೆಯ ತೋಳೂರು ಶೆಟ್ಟಳ್ಳಿ ನಿವಾಸಿ ಎಂ.ಇ.ಉದಯ ಕುಮಾರ್ ಅವರ ಪುತ್ರಿ ಎಂ.ಯು.ಶ್ರಾವಣಿ ಅವರಿಗೆ ಮಡಿಕೇರಿಯ ಆರ್.ಆರ್. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಸಿ.ನವೀನ್ ಕುಮಾರ್ ಅವರು ನೀಡಿದ ಹತ್ತು ಸಾವಿರ ರೂ. […]

ಅಂಗನವಾಡಿಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಆಗ್ರಹ : ಮಡಿಕೇರಿಯಲ್ಲಿ ಪ್ರತಿಭಟನೆ

Tuesday, December 3rd, 2019
madikeri

ಮಡಿಕೇರಿ : ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕ ಸಿಐಟಿಯು ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಿತು. ನಗರದ ಗಾಂಧಿ ಮೈದಾನದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಹಾಗೂ ಸಹಾಯಕಿಯರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಸುನಂದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ ಉದಾರೀಕರಣ ನೀತಿಗಳ ಮೂಲಕ ಸರ್ಕಾರ ಎಲ್ಲಾ […]

ಕರ್ಕಾಟಕ ರಾಶಿಯವರಿಗೆ ನಿರೀಕ್ಷಿತ ಹಣಕಾಸು ಕೈಸೇರಲಿದೆ

Tuesday, December 3rd, 2019
durganjaneya

ಶ್ರೀ ದುರ್ಗಾ ಆಂಜನೇಯ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ. ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ. ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ 9380281393 ವಿಕಾರಿ ನಾಮ ಸಂವತ್ಸರ ಮಾರ್ಗಶಿರ ಮಾಸ ನಕ್ಷತ್ರ : ಧನಿಷ್ಟ ಋತು : ಹೇಮಂತ ರಾಹುಕಾಲ 15:04 – 16:30 ಗುಳಿಕ ಕಾಲ 12:13 -13:39 ಸೂರ್ಯೋದಯ 06:30:46 ಸೂರ್ಯಾಸ್ತ 17:55:26 ತಿಥಿ : ಸಪ್ತಮಿ ಪಕ್ಷ : ಶುಕ್ಲ ಮೇಷ ರಾಶಿ ನಾವು ಹೇಗೆ ನಡೆದುಕೊಳ್ಳುತ್ತೇವೆ ಅದೇ ರೀತಿಯಲ್ಲಿ […]

ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ

Monday, December 2nd, 2019
Kudupu shashti

ಮಂಗಳೂರು :  ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ ಹಾಗೂ  ಬ್ರಹ್ಮರಥೋತ್ಸವವು  ಸೋಮವಾರ ವಿಜೃಂಭಣೆಯಿಂದ ನೆರವೇರಿತು. ದೇವರ ಬಲಿ ಉತ್ಸವ ನಡೆದ ಬಳಿಕ ರಥೋತ್ಸವ, ನಾಗಬನದಲ್ಲಿ ತಂಬಿಲ ಸೇವೆ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಸೀಯಾಳ ಅಭಿಷೇಕಗಳು ನಡೆದವು. ಚಂಪಾಷಷ್ಠಿಯಂದು ಹಗಲು ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಅನಂತಪದ್ಮನಾಭ, ನಾಗದೇವರು ಹಾಗೂ ಸುಬ್ರಹ್ಮಣ್ಯ ದೇವರು ಮೂವರು ಕೂಡಾ ಒಟ್ಟಾಗಿ ನೆಲೆಸಿರುವ ಅಪರೂಪದ ಕ್ಷೇತ್ರ ಇದಾಗಿದೆ. ದೇವಳ ದಕ್ಷಿಣಕ್ಕೆ ಪವಿತ್ರ ಭದ್ರಾ ಸರಸ್ವತಿ ಕೆರೆ. ಪೂರ್ವಭಾಗದಲ್ಲಿ 500ಕ್ಕೂ ಹೆಚ್ಚಿನ ನಾಗಶಿಲೆಗಳಿರುವ ನಾಗಬನವಿದೆ. ಕರಾವಳಿಯ […]

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದಲ್ಲಿ ಸಂಭ್ರಮದ ಚಂಪಾಷ‌ಷ್ಠಿ- ಬ್ರಹ್ಮರಥೋತ್ಸವ

Monday, December 2nd, 2019
Kukke-shashti

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಬ್ರಹ್ಮರಥದ ಸಮರ್ಪಣೆ ಸೋಮವಾರ ಬೆಳಗ್ಗೆ ನಡೆದಿದ್ದು 8.14ರ ಧನುರ್‌ ಲಗ್ನದ ಸುಮುಹೂರ್ತದಲ್ಲಿ ಪ್ರಧಾನ ಅರ್ಚಕ ವೇ|ಮೂ| ಸೀತಾರಾಮ ಎಡಪಡಿತ್ತಾಯರು ವೈದಿಕ ವಿಧಿಗಳನ್ನು ನೆರವೇರಿಸಿದರು. ಬಳಿಕ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಚಂಪಾಷ‌ಷ್ಠಿ ಬ್ರಹ್ಮರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನೆರವೇರಿತು. ವರ್ಷಕ್ಕೊಮ್ಮೆ ನಡೆಯುವ ಬ್ರಹ್ಮರಥೋತ್ಸವ ಸೇವೆಗೆ 99 ಭಕ್ತರು ನೋಂದಾಯಿಸಿದ್ದರು. 400 ವರ್ಷಗಳ ಬಳಿಕ ದೇವರಿಗೆ ನೂತನ ಬ್ರಹ್ಮರಥದ ಸಮರ್ಪಣೆ ನಡೆದಿದ್ದು, ಭಕ್ತ ಜನ ಸಾಗರದ ನಡುವೆ ಸಂಭ್ರಮದಿಂದ ಚಂಪಾಷ‌ಷ್ಠಿ ಮಹಾರಥೋತ್ಸವ […]

ಕ್ರೀಡೆಯಿಂದ ದೈಹಿಕ ಕ್ಷಮತೆ ಕಾಪಾಡಿಕೊಳ್ಳಬಹುದು : ಡಾ.ಎಂ.ಎನ್.ರಾಜೇಂದ್ರ ಕುಮಾರ್

Monday, December 2nd, 2019
v4

ಮಂಗಳೂರು : ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಕ್ಷಮತೆ ಕಾಪಾಡಿಕೊಳ್ಳಲು ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅಭಿಪ್ರಾಯಪಟ್ಟರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತಕ ಸಂಘದ ವತಿಯಿಂದ ಭಾನುವಾರ ನಗರ ನೆಹರೂ ಮೈದಾನದ ಬಳಿಯ ಫುಟ್‌ಬಾಲ್ ಮೈದಾನದಲ್ಲಿ ನಡೆದ ಪತ್ರಕರ್ತರ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ದಿನನಿತ್ಯ ಸುದ್ದಿಯ ಬೆನ್ನತ್ತಿ ಹೋಗುವ ಪತ್ರಕರ್ತರು ಕ್ರೀಡಾಕೂಟ ಆಯೋಜಿಸುತ್ತಿರುವುದು ಒಳ್ಳೆಯ ವಿಷಯ. ಮಾನಸಿಕ ನೆಮ್ಮದಿಗೂ ಕ್ರೀಡೆ […]

ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಬೀಸುತ್ತಿದೆ 15 ಕ್ಷೇತ್ರದಲ್ಲಿ ಗೆಲ್ಲುತ್ತೇವೆ : ಮಾಜಿ ಸಂಸದ ಜಿ.ಎಸ್. ಉಗ್ರಪ್ಪ

Monday, December 2nd, 2019
Ugrappa

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಗೋಚರಿಸುತ್ತಿದ್ದು, ಬಿಜೆಪಿ ಹಾಗೂ ಅನರ್ಹ ಶಾಸಕರ ವಿರುದ್ಧವಾದಂತಹ ಗಾಳಿ 15 ಕ್ಷೇತ್ರಗಳಲ್ಲಿ ಬೀಸುತ್ತಿದೆ ಎಂದು ಮಾಜಿ ಸಂಸದ ಜಿ.ಎಸ್. ಉಗ್ರಪ್ಪ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿಗಳು ಎಲ್ಲಾ 15 ಕ್ಷೇತ್ರದಲ್ಲಿ ಗೆಲ್ಲುವ ಸೂಚನೆ ಸಿಗುತ್ತಿದೆ. ಇದರಿಂದಲೇ ಬಿಜೆಪಿ ನಾಯಕರು ಹಾಗೂ ಅನರ್ಹ ಶಾಸಕರು ಮತ್ತು ಸಿಎಂ ಬಿ.ಎಸ್. ಯಡಿಯೂರಪ್ಪ ಹತಾಶೆಯಿಂದ ಮಾತನಾಡಲು ಆರಂಭಿಸಿದ್ದಾರೆ. ಇವರೆಲ್ಲರೂ ಸದ್ಯ ತಿರುಕನ ಕನಸನ್ನು ಕಾಣುತ್ತಿದ್ದಾರೆ. ಜನರ ದಾರಿ […]