ಉಜಿರೆ ಎಸ್.ಡಿ.ಎಂ.ಎಂಜಿನಿಯರಿಂಗ್‌ ಕಾಲೇಜಿನಲ್ಲಿ ರಾಜ್ಯಮಟ್ಟದ ವಿಜ್ಞಾನ ಮೇಳ

Saturday, November 30th, 2019
Ujire

ಉಜಿರೆ : ಮನದಲ್ಲಿ ಮೂಡಿದ ಯೋಚನೆಗಳಿಗೆ, ಯೋಜನೆಗಳಿಗೆ ಮೂರ್ತರೂಪ ನೀಡಿ ಪ್ರಾಯೋಗಿಕವಾಗಿ ಪರೀಕ್ಷೆಗೊಳಪಡಿಸಿ ತಜ್ಞರಿಂದಅರ್ಹತೆ ಮತ್ತು ಬಳಕೆ ಬಗ್ಯೆಅಧಿಕೃತ ಪ್ರಮಾಣ ಪತ್ರ ಪಡೆದಾಗ ಮಾತ್ರ ತಯಾರಿಸಿದ ಮಾದರಿಗಳು ಸಮಾಜಕ್ಕೆ ಉಪಯುಕ್ತವಾಗುತ್ತವೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಪ್ರಾಧ್ಯಾಪಕ ಡಾ. ಎನ್. ಎಸ್. ದಿನೇಶ್ ಹೇಳಿದರು. ಅವರು ಉಜಿರೆಯಲ್ಲಿ ಎಸ್.ಡಿ.ಎಂ.ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಂಶೋಧನೆ ಮಾಡಿ, ಅನುಭವಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ಆಯೋಜಿಸಿದ ರಾಜ್ಯಮಟ್ಟದ ವಿಜ್ಞಾನ ಮೇಳವನ್ನು ಶನಿವಾರ ಉದ್ಘಾಟಿಸಿ ಮಾತ ನಾಡಿದರು. ಯುವಜನತೆದೇಶದಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು ಹೊಸ […]

ಮಕರ ರಾಶಿಯವರಿಗೆ ನಂಬಿಕಸ್ಥ ಜನಗಳಿಂದ ದ್ರೋಹ ವಾಗುವ ಸಾಧ್ಯತೆ ಇದೆ

Saturday, November 30th, 2019
veera-hanuman

ಶ್ರೀ ಹನುಮನ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ. ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ. ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ 9380281393 ವಿಕಾರಿ ನಾಮ ಸಂವತ್ಸರ ಭಾದ್ರಪದ ಮಾಸ ನಕ್ಷತ್ರ : ಪೂರ್ವಷಾಡ ಋತು : ಹೇಮಂತ ರಾಹುಕಾಲ 09:17 – 10:43 ಗುಳಿಕ ಕಾಲ 06:26 -07:52 ಸೂರ್ಯೋದಯ 06:26:28 ಸೂರ್ಯಾಸ್ತ 17:49:48 ತಿಥಿ : ಚತುರ್ಥಿ ಪಕ್ಷ : ಶುಕ್ಲ ಮೇಷ ರಾಶಿ ಆತ್ಮೀಯರು ನಿಮ್ಮನ್ನು ಉನ್ನತ ಸ್ಥಾನದಲ್ಲಿ ಕಾಣುವರು ಅವರಿಗೆ […]

ಲಿಂಗತ್ವ ಹಕ್ಕುಗಳ ರಕ್ಷಣಾ ಮಸೂದೆ ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Friday, November 29th, 2019
transgenders

ಮಂಗಳೂರು : ಕೇಂದ್ರ ಸರಕಾರವು ಜಾರಿಗೊಳಿಸಿರುವ ” ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ಹಕ್ಕುಗಳ  ರಕ್ಷಣಾ ಮಸೂದೆ 2019 ” ಲಿಂಗತ್ವ ಅಲ್ಪಸಂಖ್ಯಾತರು ವಿರೋಧಿಸಿದ್ದು ಈ ಮಸೂದೆಯನ್ನು ರಾಷ್ಟ್ರ ಪತಿಗಳು ಅಂಗೀಕರಿಸಬಾರದು ಎಂದು ನವಸಹಜ ಸಮುದಾಯ ಸಂಘಟನೆ ಪದವು ಮಂಗಳೂರು ಇವರು ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಕೇಂದ್ರ ಸರಕಾರ ಈ ಮಸೂದೆಯನ್ನು ಜಾರಿಗೊಳಿಸುವ ಮುನ್ನ ಲಿಂಗತ್ವ ಅಲ್ಪಸಂಖ್ಯಾತರ ಅಭಿಪ್ರಾಯವನ್ನು ಪಡೆಯದೇ ಜಾರಿಗೊಳಿಸಿರುವುದರಿಂದ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಪ್ತ್ರತಿಭಟನೆಯಲ್ಲಿ ಅವರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. […]

ವೇದಾಧ್ಯಯನ ನಿರತರಿಗೆ ಶುತಿತತ್ತ್ವ ಪ್ರದೀಪಿಕಾ ಉಪಯುಕ್ತಗ್ರಂಥ : ಪೇಜಾವರ ಶ್ರೀ

Friday, November 29th, 2019
Pradipika

ಮಂಗಳೂರು : ಚತುರ್ವೇದ ಪಂಡಿತರೂ, ವ್ಯಾಖ್ಯಾನಕಾರರೂ, ವ್ಯಾಕರಣ ವಿದ್ವಾಂಸರೂ ಆಗಿರುವ ಕದ್ರಿಯ ಡಾ| ಪ್ರಭಾಕರಅಡಿಗರು ರಚಿಸಿರುವ ಶುತಿತತ್ತ್ವ ಪ್ರದೀಪಿಕಾ (ಫಿಟ್ ಸೂತ್ರಾರ್ಥವ್ಯಾಖ್ಯಾನಮ್) ಗ್ರಂಥ ಸಾರಸ್ವತ ಲೋಕಕ್ಕೆ ಅಪೂರ್ವ ಕೊಡುಗೆಯಾಗಿದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ನುಡಿದರು. ಇತ್ತೀಚೆಗೆ ನಗರದ ಮಲ್ಲಿಕಟ್ಟೆಯಲ್ಲಿರುವ ಶ್ರೀ ಕೃಷ್ಣ ಮಂದಿರದಲ್ಲಿ ’ಗ್ರಂಥ’ ಲೋಕಾರ್ಪಣೆಗೈದುಅವರು ಮಾತನಾಡಿದರು. ವೇದದ ಶಬ್ದ ಸ್ವರಗಳಿಗೆ ಸಂಬಂಧಿಸಿದ ಈ ಗ್ರಂಥವು ವೇದಾಧ್ಯಯನವನ್ನು ಸಾಂಗವಾಗಿ ಮಾಡುವವರಿಗೆಅತ್ಯಂತಉಪಯುಕ್ತವಾಗಿದೆಎಂದರು. ಶ್ರೀಯುತ ಅಡಿಗರಿಂದಇನ್ನಷ್ಟು ಮೌಲ್ಯಯುತ ಹಾಗೂ ಸಂಶೋಧನಾತ್ಮಕವಾದ ಗ್ರಂಥಗಳು ರಚಿಸಿಲ್ಪಡುವಂತಾಗಲೆಂದು ಶುಭ ಹಾರೈಸಿದರು. […]

ಗೋಡ್ಸೆ ದೇಶಭಕ್ತ ಹೇಳಿಕೆಗೆ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಕ್ಷಮೆಯಾಚನೆ

Friday, November 29th, 2019
Prajna-takur

ನವದೆಹಲಿ : ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಂತಕ ನಾಥೂರಾಂ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಕ್ಷಮೆ ಕೋರಿದ್ದಾರೆ. ಇಂದು ಸದನದ ಕಲಾಪದ ಸಮಯದಲ್ಲಿ ಮಾತನಾಡಿದ ಪ್ರಜ್ಞಾ ಠಾಕೂರ್, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಆದರೆ ನನ್ನ ಹೇಳಿಕೆಯನ್ನು ತಿರುಚಿ ತಪ್ಪಾಗಿ ವಿಶ್ಲೇಷಿಸಿದ್ದಾರೆ. ಇದು ಖಂಡನೀಯ ಎಂದರು. ಪ್ರಜ್ಞಾ ಸಿಂಗ್ ಅವರ ಈ ಹೇಳಿಕೆಯನ್ನು ಖಂಡಿಸಿ ಲೋಕಸಭೆಯಲ್ಲಿ ವಿಪಕ್ಷಗಳು ಭಾರಿ ಗದ್ದಲ ಉಂಟು ಮಾಡಿದ್ದವು. ಪ್ರಜ್ಞಾ ಅವರ ಹೇಳಿಕೆಯನ್ನು […]

15 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ : ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ

Friday, November 29th, 2019
Govinda-karajola

ಬೆಂಗಳೂರು : ಈಗಾಗಲೇ  12 ಕ್ಷೇತ್ರಗಳಲ್ಲಿ ಪ್ರಚಾರ ಮಾಡಿ ಬಂದಿದ್ದು, ಜನ ಬಿಜೆಪಿ ಪರ ಇದ್ದಾರೆ. 15 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು. ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ಯಾಕೆ ಅಷ್ಟೊಂದು ಭಯ ಶುರುವಾಗಿದೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರು ಕೀಳು ಮಟ್ಟದ ಭಾಷೆ ಬಳಸಿದ್ದಾರೆ. ಇದರಿಂದ ಅವರ ಯೋಗ್ಯತೆಗೆ, ಘನತೆಗೆ ಕುಂದು ಬರುತ್ತದೆ. ಕೂಡಲೇ ಅವರು ಜನತೆಯ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ಮಲ್ಲಿಕಾರ್ಜುನ ಖರ್ಗೆ, […]

ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಜೀವಂತ ಸುಟ್ಟ ದುಷ್ಕರ್ಮಿಗಳು

Friday, November 29th, 2019
Priyanka

ಹೈದರಾಬಾದ್ : ಪಶುವೈದ್ಯೆಯೊಬ್ಬರ ಮೆಲೆ ಅತ್ಯಾಚಾರ ನಡೆಸಿ ಬಳಿಕ ಅವರನ್ನು ಜೀವಂತ ಸುಟ್ಟುಹಾಕಿರುವ ಬೀಭತ್ಸ ಘಟನೆ ಹೈದರಾಬಾದ್ ಹೊರವಲಯದಲ್ಲಿ ನಡೆದಿದೆ. ದುಷ್ಕರ್ಮಿಗಳಿಂದ ಅತ್ಯಾಚಾರಕ್ಕೊಳಗಾಗಿ ಬಳಿಕ ಕೊಲೆಯಾದ ಮಹಿಳೆ 27 ವರ್ಷದ ಪ್ರಿಯಾಂಕ ರೆಡ್ಡಿ ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ಪ್ರಿಯಾಂಕ ಅವರು ತನ್ನ ಕ್ಲಿನಿಕ್ ನಿಂದ ವಾಪಾಸಾಗುತ್ತಿದ್ದ ಸಂದರ್ಭದಲ್ಲಿ ಹೈದರಾಬಾದ್ ನಗರದ ಹೊರವಲಯದಲ್ಲಿರುವ ತೊಂಡುಪಲ್ಲಿ ಟೋಲ್ ಪ್ಲಾಝಾದ ಬಳಿ ತಲುಪಿತ್ತದ್ದಂತೆಯೇ ಅವರ ಸ್ಕೂಟರ್ ನ ಟಯರ್ ಪಂಕ್ಚರ್ ಆಗಿರುವುದು ಅವರ ಗಮನಕ್ಕೆ ಬಂದಿದೆ. ತಕ್ಷಣವೇ ಪ್ರಿಯಾಂಕ ಅವರು […]

ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌ ಬ್ಯಾಡ್ಮಿಂಟನ್‌ : ಶ್ರೀಕಾಂತ್‌, ಸೌರಭ್‌ ಕ್ವಾರ್ಟರ್‌ ಫೈನಲ್‌ ಪ್ರವೇಶ

Friday, November 29th, 2019
Srikanth

ಲಕ್ನೋ : “ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌ ಬ್ಯಾಡ್ಮಿಂಟನ್‌” ಪಂದ್ಯಾವಳಿಯಲ್ಲಿ ಕೆ. ಶ್ರೀಕಾಂತ್‌ ಮತ್ತು ಸೌರಭ್‌ ವರ್ಮ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಆದರೆ ಭಾರೀ ನಿರೀಕ್ಷೆ ಮೂಡಿಸಿದ್ದ ಲಕ್ಷ್ಯ ಸೇನ್‌ ಪರಾಭವಗೊಂಡಿದ್ದಾರೆ. ವನಿತಾ ಡಬಲ್ಸ್‌ ನಲ್ಲಿ ಯುವ ಆಟಗಾರ್ತಿಯರಾದ ಶಿಮ್ರಾನ್‌ ಶಿಂಗಿ-ರಿತಿಕಾ ಠಾಕರ್‌ ಕೂಡ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. 3ನೇ ಶ್ರೇಯಾಂಕಿತ ಕೆ. ಶ್ರಿಕಾಂತ್‌ ತಮ್ಮದೇ ದೇಶದ ಪಿ.ಕಶ್ಯಪ್‌ ವಿರುದ್ಧ ಭಾರೀ ಹೋರಾಟ ನಡೆಸಿ 18-21, 22-20, 21-16 ಅಂತರದಿಂದ ಗೆದ್ದು ಮುನ್ನಡೆದರು. […]

ಗೃಹ ಸಚಿವ ಬಸವರಾಜ್ ಬೊಮ್ಮಾಯಿರವರನ್ನು ಚುನಾವಣೆ ಪ್ರಕ್ರಿಯೆಯಿಂದ ದೂರ ಇಡಬೇಕು : ಹೆಚ್‍ಕೆ ಪಾಟೀಲ್ ಆಗ್ರಹ

Friday, November 29th, 2019
HK-Pateel

ಕಾರವಾರ : ಇಂದು ಶಿರಸಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ನಡೆಯುವವರೆಗೂಗೃಹ ಸಚಿವ ಬಸವರಾಜ್ ಬೊಮ್ಮಾಯಿ ಚುನಾವಣೆ ಪ್ರಕ್ರಿಯೆಯಿಂದ ದೂರ ಇಡಬೇಕು ಎಂದು ಮಾಜಿ ಸಚಿವ ಎಚ್‍ಕೆ ಪಾಟೀಲ್ ಆಗ್ರಹಿಸಿದ್ದಾರೆ. ನವೆಂಬರ್ 20 ರಂದು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಯಲ್ಲಿ ಗೃಹ ಸಚಿವರ ಕಾರು ತಪಾಸಣೆ ಮಾಡದೇ ಹಾಗೇ ಬಿಡಲಾಗಿತ್ತು. ಈ ಬಗ್ಗೆ ಚೆಕ್‍ಪೋಸ್ಟ್ ನಲ್ಲಿದ್ದ ಪೊಲೀಸರು ಬೆಂಗಾವಲು ವಾಹನದ ಚಾಲಕನನ್ನು ಅಮಾನತು ಮಾಡಲಾಗಿದೆ. ಅಮಾನತು ಮಾಡಿರುವುದು ನೋಡಿದರೆ ಗೃಹ ಸಚಿವರೇ ಅಕ್ರಮ ನಡೆಸಿದಂತೆ ಕಾಣುತ್ತಿದೆ. ಈ […]

ಜಪಾನ್ ನ ಪ್ರಧಾನ ಮಂತ್ರಿ ಶಿಂಜೋ ಅಬೆ ಅವರು ಮುಂದಿನ ತಿಂಗಳು ಭಾರತಕ್ಕೆ ಭೇಟಿ

Friday, November 29th, 2019
Emfal

ಇಂಫಾಲ್ : ಜಪಾನ್ ದೇಶದ ಪ್ರಧಾನ ಮಂತ್ರಿ ಶಿಂಜೋ ಅಬೆ ಅವರು ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಡಿಸೆಂಬರ್ ತಿಂಗಳ ಮಧ್ಯದಲ್ಲಿ ಇಂಫಾಲ್ ಗೆ ಭೇಟಿ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಶಿಂಜೋ ಅಬೆ ನಡುವಿನ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಇಂಫಾಲ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಂತರ ಇಂಫಾಲ್ ಯುದ್ಧದ 75 ವರ್ಷದ ಸ್ಮರಣೆಯ ಹಿನ್ನಲೆಯಲ್ಲಿ ಇಲ್ಲಿನ ಶಾಂತಿ ಸಂಗ್ರಹಾಲಯಕ್ಕೆ ಭೇಟಿ ನೀಡಲಿದ್ದಾರೆ. ಮಣಿಪುರದ ರಾಜಧಾನಿ ಇಂಫಾಲ್ […]