ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ: ನಟ ಕಮಲ್​ ಹಾಸನ್​

Saturday, December 22nd, 2018
kamal-hassan

ಚೆನ್ನೈ: ತಮಿಳಿನ ಖ್ಯಾತ ನಟ ಕಮಲ್ ಹಾಸನ್ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ರಾಜಕೀಯ ರಂಗ ಪ್ರವೇಶಿಸಿದ ಕಮಲ್, ಮಕ್ಕಳ್ ನಿಧಿ ಮೈಯಂ ಪಕ್ಷ ಸ್ಥಾಪನೆ ಮಾಡಿದ್ದರು. ಮುಂಬರುವ ಲೋಕಸಭೆ ಚುನಾವಣೆಗೆ ತಮ್ಮ ಪಕ್ಷ ಸನ್ನದ್ಧವಾಗಿದೆ ಎಂದೂ ತಮ್ಮ ಹುಟ್ಟುಹಬ್ಬದಂದು ಹೇಳಿದ್ದರು. ಆದರೆ ಅವರು ಸ್ಪರ್ಧಿಸುವ ಬಗ್ಗೆ ಸ್ಪಷ್ಟ ಮಾಹಿತಿ ಹೊರಬಿದ್ದಿರಲಿಲ್ಲ. ಈಗ ಅವರೇ ಹೇಳಿಕೊಂಡಿರುವಂತೆ ಮುಂದಿನ ಲೋಕಸಭೆ ಚುನಾವಣೆಗೆ ಅವರು ಸ್ಪರ್ಧಿಸುತ್ತಿರುವುದು ಖಚಿತ. ಆದರೆ ಯಾವ ಕ್ಷೇತ್ರದಿಂದ […]

ರಾಜ್ಯ ಸರಕಾರದ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸಿ: ಜೆ. ಆರ್. ಲೋಬೊ

Saturday, December 22nd, 2018
j-r-lobo

ಮಂಗಳೂರು: ಕರ್ನಾಟಕ ಸರಕಾರವು ಹಿಂದುಳಿದ ವರ್ಗದ ಜನರಿಗೆ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ರೂಪಿಸಿದೆ. ಅದನ್ನು ಜನತೆಗೆ ತಲುಪಿಸುವಂತಹ ಕೆಲಸವು ಕಾಂಗ್ರೆಸ್ ಹಿಂದುಳಿದ ವರ್ಗ ಘಟಕದ ಪದಾಧಿಕಾರಿಗಳ ಮೂಲಕ ಆಗಬೇಕು ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಶ್ರೀ ಜೆ. ಆರ್. ಲೋಬೊ ರವರು ತಾರೀಕು 21.12.2018 ರಂದು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ಘಟಕದ ನೂತನ ಅಧ್ಯಕ್ಷರಾದ ಶ್ರೀ ರಮಾನಂದ ಪೂಜಾರಿ ಯವರಿಗೆ ಅಧಿಕರ ಹಸ್ತಾಂತರ […]

ವೈಭವದ ಕರಾವಳಿ ಉತ್ಸವ: ವಸ್ತು ಪ್ರದರ್ಶನಕ್ಕೆ ಸಂಗೀತ ನಿರ್ದೇಶಕ ಗುರುಕಿರಣ್ ಚಾಲನೆ

Saturday, December 22nd, 2018
gurukiran

ಮಂಗಳೂರು: ದ‌.ಕ. ಜಿಲ್ಲಾಡಳಿತದ ವತಿಯಿಂದ ನಡೆಯುವ ವೈಭವದ ಕರಾವಳಿ ಉತ್ಸವದ ವಸ್ತು ಪ್ರದರ್ಶನಕ್ಕೆ ಸಂಗೀತ ನಿರ್ದೇಶಕ ಗುರುಕಿರಣ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕರಾವಳಿ ಅಂದರೆ ಎಲ್ಲರಿಗೂ ಎಲ್ಲರ ಪರಿಚಯ ಇರುತ್ತದೆ. ಎಲ್ಲರಿಂದಲೂ ಸಹಾಯ ಕೇಳುತ್ತಾರೆ. ಸಹಾಯ ಮಾಡುತ್ತಾರೆ. ಸಚಿವ ಯು.ಟಿ. ಖಾದರ್ ಮತ್ತು ನಾನು ಶಾಲೆಗೆ ಒಟ್ಟಿಗೆ ಹೋಗುತ್ತಿದ್ದೆವು. ಮೇಯರ್ ಭಾಸ್ಕರ ಕೆ. ನಮ್ಮ ಊರಿನವರು. ನಾವು ಯಾವಾಗಲೂ ಜೊತೆಗಿರುತ್ತಿದ್ದೆವು. ಮನೋಹರ ಪ್ರಸಾದ್ ಅವರು ನನ್ನ ಮೊದಲ ಸಿನಿಮಾ ಬದ್ಕೊಂಜಿ ಕಬಿತೆಗೆ ಅವರೇ ಮುಹೂರ್ತ […]

ಕಲ್ಲಿನಿಂದ ತಲೆಗೆ ಜಜ್ಜಿ ವ್ಯಕ್ತಿಯ ಬರ್ಬರ ಕೊಲೆ

Saturday, December 22nd, 2018
murdered

ಬೆಂಗಳೂರು: ಆನೇಕಲ್ ತಾಲೂಕಿನ ಅತ್ತಿಬೆಲೆ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿದ್ದು, ವ್ಯಕ್ತಿಯ ತಲೆಗೆ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೊಲೆಯಾಗಿರುವ ವ್ಯಕ್ತಿಯ ಚಹರೆ ಕಾಣದ ರೀತಿ ಮುಖವನ್ನು ಜಜ್ಜಲಾಗಿದೆ. ನಿನ್ನೆ ರಾತ್ರಿ ತಲೆಗೆ ಕಲ್ಲಿನಿಂದ ಜಜ್ಜಿದ್ದು ಇಂದು ದಾರಿ ಹೋಕರಿಗೆ ಶವ ಕಾಣಿಸಿದ್ದು ಪೊಲೀಸರಿಗೆ ತಿಳಿಸಿದ್ದಾರೆ. ಯಡವನಹಳ್ಳಿಯ ಸರ್ಕಾರಿ ಶಾಲೆಯ ಆವರಣದ ಮುಂಭಾಗದ ದಟ್ಟವಾದ ಹುಲ್ಲಿನ ಮರೆಯಲ್ಲಿ ಶವ ಬಿದ್ದಿದೆ. ತಲೆಯಲ್ಲಿ ರಕ್ತಗಾಯಗಳಿಂದ ಕೂಡಿದ್ದು ಸಹಚರರೊಡನೆ ಜಗಳ ತೆಗೆದು ಕೊಲೆಯಾಗಿರಬಹುದು ಎಂಬ ಶಂಕೆ ಸ್ಥಳ […]

ತಲೆಮರೆಸಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದ ಆರೋಪಿಯ ಬಂಧನ

Saturday, December 22nd, 2018
arrest

ಮಂಗಳೂರು: ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಮುಖ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದ ಪ್ರಮುಖ ಆರೋಪಿಯನ್ನು ಬಜ್ಪೆಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಉಳಾಯಿಬೆಟ್ಟುವಿನ ಮೂಡುಜೆಪ್ಪುಮನೆಯ ಮಹಮ್ಮದ್ ಅಶ್ರಫ್ (25) ಬಂಧಿತ ಆರೋಪಿ. ಈ ಹಿಂದೆ ಆರೋಪಿಯ ಪತ್ತೆಗೆ ಎಲ್.ಓ.ಸಿ ಪ್ರಕಟಣೆ ಹೊರಡಿಸಿದ ಮೇರೆಗೆ ಆರೋಪಿಯು ದುಬೈನಿಂದ ಮಂಗಳೂರು ಬಜ್ಪೆ ವಿಮಾನ ನಿಲ್ದಾಣಕ್ಕೆ ಬಂದಾಗ ವಶಕ್ಕೆ ಪಡೆದುಕೊಂಡು, ಕಾನೂನು ಕ್ರಮ ಜರುಗಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಮೂರು ಲಾರಿ ವಶ

Saturday, December 22nd, 2018
tempo

  ಮಂಗಳೂರು: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಮೂರು ಟಿಪ್ಪರ್ ಲಾರಿಗಳನ್ನು ತಿರುವೈಲು ಗ್ರಾಮದ ಪರಾರಿ ಜಂಕ್ಷನ್ ಬಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಟಿಪ್ಪರ್ನಲ್ಲಿ ತುಂಬಿದ್ದ ಮರಳಿನ ಒಟ್ಟು ಅಂದಾಜು ಮೌಲ್ಯ 25 ಲಕ್ಷದ 15 ಸಾವಿರ ಆಗಬಹುದು ಎಂದು ಅಂದಾಜಿಸಲಾಗಿದೆ . ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಆದೇಶದಂತೆ ಮಂಗಳೂರು ಗ್ರಾಮಾಂತರ ಠಾಣೆಯ ಪಿಎಸ್ಐ ಮತ್ತು ಸಿಬ್ಬಂದಿ ಹಾಗೂ ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹದಳದ ತಂಡದೊಂದಿಗೆ ಎಎಸ್ಐ ಮೋಹನ್ ವಿಶೇಷ ಕರ್ತವ್ಯದಲ್ಲಿದ್ದಾಗ, […]

ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ: ಇಬ್ಬರ ಬಂಧನ

Saturday, December 22nd, 2018
arrested

ಮಂಗಳೂರು: ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಡಿ. 19ರ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಪಣಂಬೂರು ಠಾಣಾ ಸಿಬ್ಬಂದಿ ರಾತ್ರಿ 2.30ಕ್ಕೆ ತೋಟಬೆಂಗ್ರೆಯ ಸರ್ಕಾರಿ ಶಾಲೆಯ ಬಳಿ ತಲುಪುತ್ತಿದ್ದಂತೆ ಅಲ್ಲಿದ್ದ 4 ಪುಂಡರು ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಇಬ್ಬರನ್ನು ಇಂದು ಬಂಧಿಸಿದ್ದಾರೆ. ಮಂಗಳೂರು ತೋಟಬೆಂಗ್ರೆಯ ವಿಜೀತ್ ಯಾನೆ ಶಿವರಾಜ್ ಕುಮಾರ್, ಉಳ್ಳಾಲ […]

ದ.ಕ. ಜಿಲ್ಲಾ ಕರಾವಳಿ ಉತ್ಸವ ಉದ್ಘಾಟನೆಗೆ ವಿವಿಧ ಕಲಾತಂಡಗಳ ಮೆರವಣಿಗೆ ಯ ಮೆರುಗು

Friday, December 21st, 2018
Karavali Utsava

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಕರಾವಳಿ ಉತ್ಸವ ಸಮಿತಿಯ ವತಿಯಿಂದ ಡಿಸೆಂಬರ್ 21ರಿಂದ ಹತ್ತು ದಿನಗಳ ಕಾಲ ನಡೆಯಲಿರುವ ದ.ಕ. ಜಿಲ್ಲಾ ಕರಾವಳಿ ಉತ್ಸವದ ಸಾಂಸ್ಕೃತಿಕ ಮೆರವಣಿಗೆಗೆ ನಗರದ ನೆಹರೂ ಮೈದಾನದಲ್ಲಿ  ಶುಕ್ರವಾರ ಮಧ್ಯಾಹ್ನ ಚಾಲನೆ ನೀಡಲಾಯಿತು. ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಭಾಸ್ಕರ್ ಕೆ. ಸಾಂಸ್ಕೃತಿಕ ಮೆರವಣಿಗೆಗೆವಿಧ್ಯುಕ್ತವಾಗಿ ಚಾಲನೆ ನೀಡಿದರು. ರಾಜ್ಯದ ಸುಮಾರು 80ಕ್ಕೂ ವಿವಿಧ ಕಲಾತಂಡಗಳ ಪ್ರದರ್ಶನಗಳು, ನೃತ್ಯಗಳು, ಚೆಂಡೆ, ಡೋಲು ವಿಶೇಷವಾಗಿ ಮಹಿಳಾ ವೀರಗಾಸೆ, ಚಿಕ್ಕಮಗಳೂರು, ಶಿವಮೊಗ್ಗದ ಡೊಳ್ಳು ಕುಣಿತ, ಸಾಗರದ ಕೋಲಾಟ, […]

ಬಿಜೆಪಿ ರಥಯಾತ್ರೆಗೆ ವಿರೋಧ: ಕೋರ್ಟ್ ಮೆಟ್ಟಿಲೇರಿದ ಪಶ್ಚಿಮ ಬಂಗಾಳ ಸರ್ಕಾರ

Friday, December 21st, 2018
amit-shah

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ರಥಯಾತ್ರೆ ಆಯೋಜಿಸುವ ಕುರಿತಾಗಿ ಬಿಜೆಪಿ ಹಾಗೂ ರಾಜ್ಯ ಸರ್ಕಾರದ ಹಗ್ಗಜಗ್ಗಾಟ ಮುಂದುವರೆದಿದೆ. ಬಿಜೆಪಿ ರಥಯಾತ್ರೆ ಆಯೋಜನೆಗೆ ಅವಕಾಶ ನೀಡಿರುವ ತೀರ್ಪಿನ್ನು ಪ್ರಶ್ನಿಸಿ ಬಂಗಾಳ ಸರ್ಕಾರ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ. ನಿನ್ನೆ ಕೋಲ್ಕತ್ತಾ ಹೈಕೋರ್ಟಿನ ಏಕಸದಸ್ಯ ಪೀಠವು ಬಿಜೆಪಿ ರಥಯಾತ್ರೆಗೆ ಅವಕಾಶ ನೀಡಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ. ಮುಖ್ಯನಾಯಮೂರ್ತಿ ದೆಬಸಿಶ್ ಕರ್ಗುಪ್ತ ಹಾಗೂ ನ್ಯಾ. ಶಂಪ ಸರ್ಕಾರ ಅವರ ಪೀಠದ ಎದುರು ಮೇಲ್ಮನವಿ […]

ಇಂದಿನಿಂದ ನಂದಿನಿ ಸಿಹಿ ಉತ್ಸವ ಆರಂಭ: ಗ್ರಾಹಕರಿಗೆ 10 ಶೇಕಡಾ ರಿಯಾಯಿತಿ

Friday, December 21st, 2018
nandini

ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ವತಿಯಿಂದ ಮಂಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ಡಿ . 21 ರಿಂದ 20 ದಿವಸಗಳ ಕಾಲ ನೆಡೆಯಲಿದೆ. ಮಂಗಳೂರಿನ ರಥಬೀದಿ ವೆಂಕಟರಮಣ ದೇವಸ್ಥಾನದ ಬಳಿ ಇರುವ ನಂದಿನಿ ಹಾಲಿನ ಬೂತಿನಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷರಾದ ಸುಚರಿತ ಶೆಟ್ಟಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಕೊಡುಗೆ ದಕ್ಷಿಣ ಕನ್ನಡ ಮತ್ತು ಉಡುಪಿಯ ಎಲ್ಲಾ ನಂದಿನಿ ಬೂತು ಹಾಗು ಸಿಹಿ ಉತ್ಪನ್ನಗಳಿಗೆ ಲಭ್ಯ. ಈ ಸಂದರ್ಭದಲ್ಲಿ […]