ದ್ವಿಚಕ್ರ ವಾಹನ ಕಳ್ಳತನ: ಮೂವರು ಆರೋಪಿಗಳ ಬಂಧನ

Thursday, November 15th, 2018
accused

ಮಂಗಳೂರು: ಅಂತಾರಾಜ್ಯ ದ್ವಿಚಕ್ರ ವಾಹನ ಕಳ್ಳತನದ 15 ಪ್ರಕರಣಗಳನ್ನು ಭೇದಿಸಿದ ಉಳ್ಳಾಲ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಸುಮಾರು 20 ಲಕ್ಷ ರೂ. ಮೌಲ್ಯದ 15 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಶಾಹಿರ್(23), ಉಪ್ಪಳದ ಮೊಹಮ್ಮದ್ ಆದಿಲ್(26), ಅಬ್ದುಲ್ ಮುನಾವರ್ ಅಲಿಯಾಸ್ ಮುನ್ನ(21) ಬಂಧಿತ ಆರೋಪಿಗಳು. ಆರೋಪಿಗಳು ಮಂಗಳೂರು ನಗರ‌ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಟ್ಟು 15 ದ್ವಿಚಕ್ರ ವಾಹನಗಳನ್ನು ಕಳವು ನಡೆಸಿದ್ದರು. ಕಳವುಗೈದ ದ್ವಿಚಕ್ರ ವಾಹನಗಳ ಅಂದಾಜು ಮೌಲ್ಯ 20 ಲಕ್ಷ ರೂ. ಆಗಿರುತ್ತದೆ […]

ಅಲೆಮಾರಿಗಳ ಸೋಗಿನಲ್ಲಿದ್ದ ಕುಖ್ಯಾತ ಕಳ್ಳಿಯರು ಪೊಲೀಸ್ ಬಲೆಗೆ

Thursday, November 15th, 2018
arrested

ಮಂಗಳೂರು: ಅಲೆಮಾರಿಗಳ ಸೋಗಿನಲ್ಲಿ ಮನೆಗಳಿಗೆ ಬಂದು ಕಳವು ಮಾಡುತ್ತಿದ್ದ ಮೂವರು ಕುಖ್ಯಾತ ಕಳ್ಳಿಯರನ್ನು ಪೊಲೀಸರು ಬಂಧಿಸಿದ್ದಾರೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕು ಹನುಮಪ್ಪನ ಗುಡಿಯ ಬಳಿ ನಿವಾಸಿಗಳಾದ ದೇವಮ್ಮ (19), ನಾಗಮ್ಮ ಅಲಿಯಾಸ್ ರೂಪಾ (18 ವರ್ಷ) ಗೀತಾ(24) ಬಂಧಿತ ಆರೋಪಿಗಳು. ಬಂಧಿತರಿಂದ ಚಿನ್ನದ ರೋಪ್ ಚೈನ್, ಚಿನ್ನದ ಉಂಗುರಗಳು, ಚಿನ್ನದ ಕಡಗಗಳು, ಎರಡು ಮೊಬೈಲ್, ಸಹಿತ ಒಟ್ಟು 4,31,680 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಅಲೆಮಾರಿಗಳಂತೆ ಮೂವರು ಹೆಂಗಸರು ಚಿಕ್ಕಮಕ್ಕಳೊಂದಿಗೆ […]

ಕೊಲೆ ಯತ್ನ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಕೇರಳದಲ್ಲಿ ಬಂಧನ

Wednesday, November 14th, 2018
arret-kerala

ಮಂಗಳೂರು: ಕೊಲೆ ಯತ್ನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ. ಆರೋಪಿ ಕೇರಳದ ಕಾಸರಗೋಡು ಜಿಲ್ಲೆಯ ಬಿ.ಎ ಸಂಶುದ್ದೀನ್ ಎಂಬಾತ 2013ರಲ್ಲಿ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದವನು. ಇದೀಗ ಈತನನ್ನು ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ರಾಜ್ಯ ಸಮ್ಮಿಶ್ರ ಸರ್ಕಾರ ಇಬ್ಬಗೆಯ ನೀತಿ ಅನುಸರಿಸುತ್ತಿದೆ: ಬಿಜೆಪಿ ವಕ್ತಾರ ಸಿ.ಟಿ. ರವಿ

Wednesday, November 14th, 2018
c-t-ravi

ಮಂಗಳೂರು: ಪತ್ರಕರ್ತ ಸಂತೋಷ್ ತಮ್ಮಯ್ಯರನ್ನು ಬಂಧಿಸಿದ ರಾಜ್ಯ ಸಮ್ಮಿಶ್ರ ಸರ್ಕಾರ ಇಬ್ಬಗೆಯ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಸಿ.ಟಿ. ರವಿ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀರಾಮ, ಭಗವದ್ಗೀತೆ, ವಿವೇಕಾನಂದ, ‌ಮೋದಿ ಅವಹೇಳನ ಮಾಡುವವರಿಗೆ ಒಂದು ನೀತಿ, ಟಿಪ್ಪು ವಿರೋಧಿಸುವವರಿಗೆ ಒಂದು ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ ಎಂದರು. ರಾಮ, ರಾಮಾಯಣ ಅವಹೇಳನ ಮಾಡಿದ ಪ್ರೊ ಭಗವಾನ್, ಮಹೇಶ್ ಚಂದ್ರ, ಯೋಗೀಶ್ ಮಾಸ್ಟರ್ ಅವರನ್ನು ಸರ್ಕಾರ ಬಂಧಿಸುವುದಿಲ್ಲ. ನಗರ ನಕ್ಸಲ್ ಎಂದು ಬೋರ್ಡ್ […]

ಜನಾರ್ದನ ರೆಡ್ಡಿ ಪ್ರಕರಣದಲ್ಲಿ ಯಾವುದೇ ಹಸ್ತಕ್ಷೇಪ ಇಲ್ಲ: ಕುಮಾರಸ್ವಾಮಿ

Wednesday, November 14th, 2018
kumarswamy

ಬೆಂಗಳೂರು: ಈ ವಿಚಾರದಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪ ಇಲ್ಲ. ಅವರ ಆಪ್ತರೊಬ್ಬರು 18 ಕೋಟಿಯನ್ನು ತಿರುಪತಿ ಹುಂಡಿಗೆ ಹಾಕಿದ್ದೇವೆ ಎಂದಿದ್ದಾರೆ. ಇದು ವ್ಯಂಗ್ಯವೋ ಸತ್ಯವೋ ನನಗೆ ತಿಳಿಯುತ್ತಿಲ್ಲ. ಇದರ ಬಗ್ಗೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಗಮನಿಸಬೇಕು. ನಾನಾಗಲಿ ನಮ್ಮ ಸರ್ಕಾರದ ಸಚಿವರಾಗಲಿ ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದರು. ಪತ್ರಕರ್ತ ಸಂತೋಷ ತಮ್ಮಯ್ಯ ಬಂಧನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಇದು ಅಧಿಕಾರಿಗಳ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಕೈಗೊಂಡ ಕ್ರಮವಾಗಿದ್ದು, ಮಾಹಿತಿ ಪಡೆದು ಈ ಬಗ್ಗೆ ಮಾತಾನಾಡುತ್ತೇನೆ […]

ನೆಹರೂ ಪ್ರತಿಮೆಯ ಮುಂಭಾಗ ಮಕ್ಕಳ ದಿನಾಚರಣೆ ಆಚರಣೆ

Wednesday, November 14th, 2018
childrens-day

ಮಂಗಳೂರು: ಭಾರತ ‌ಸೇವಾದಳದ ವತಿಯಿಂದ ಭಾರತದ ಮೊದಲ ಪ್ರಧಾನಿ‌ ಜವಹರಲಾಲ್ ನೆಹರುರವರ ಜನ್ಮ ದಿನಾಚರಣೆಯನ್ನು ಇಂದು ಬೆಳಗ್ಗೆ ನಗರದ ಪಾಂಡೇಶ್ವರದಲ್ಲಿರುವ ನೆಹರೂ ಪ್ರತಿಮೆಯ ಮುಂಭಾಗ ಆಚರಿಸಲಾಯಿತು. ಈ ಸಂದರ್ಭ ನೆಹರೂ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಭಾರತ ಸೇವಾದಳದ ದ.ಕ. ಜಿಲ್ಲಾಧ್ಯಕ್ಷ ಬಶೀರ್ ಬೈಕಂಪಾಡಿ, ಇಂದು ಭಾರತ ಸೇವಾದಳದ ಪ್ರಥಮ ಅಧ್ಯಕ್ಷ ಹಾಗೂ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರುರವರ ಜನ್ಮದಿನಾಚರಣೆಯನ್ನು‌ ಆಚರಿಸಲಾಗುತ್ತಿದೆ. ಜವಹರಲಾಲ್ ನೆಹರುರವರು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು‌ ಮಾಡಿದ್ದು, ಇಂದು ನಮ್ಮ ದೇಶ […]

ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಕಂಚಿನ ಪ್ರತಿಮೆ ಅನಾವರಣ

Wednesday, November 14th, 2018
jaylalitha

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಕಂಚಿನ ಪ್ರತಿಮೆಯೊಂದನ್ನು ಚೆನ್ನೈನಲ್ಲಿ ಬುಧವಾರ ಅನಾವರಣಗೊಳಿಸಲಾಯಿತು. ಚೆನ್ನೈನ ರೋಯಪೆಟ್ಟಾದಲ್ಲಿರುವ ಎಐಡಿಎಂಕೆ ಮುಖ್ಯ ಕಚೇರಿಯ ಪ್ರಾಂಗಣದಲ್ಲಿ ಜಯಾ ಅವರ ಪ್ರತಿಮೆಯನ್ನು ಮುಖ್ಯಮಂತ್ರಿ ಎಡಪ್ಪಡಿ ಕೆ. ಪಳನಿಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಒ. ಪನ್ನೀರ್ಸೆಲ್ವಂ ಅವರು ಲೋಕಾರ್ಪಣೆಗೊಳಿಸಿದರು. 2016ರ ಡಿಸೆಂಬರ್ನಲ್ಲಿ ಜಯಲಲಿತಾ ಅವರ 70ನೇ ಹುಟ್ಟುಹಬ್ಬದ ಅಂಗವಾಗಿ ಮಾಜಿ ಸಿಎಂ ದಿ. ಎಂ.ಜಿ. ರಾಮಚಂದ್ರನ್ ಅವರ ಪ್ರತಿಮೆ ಪಕ್ಕದಲ್ಲೇ ಜಯಾ ಅವರ ಕಂಚಿನ ಪ್ರತಿಮೆಯೊಂದನ್ನು ನಿರ್ಮಿಸಲಾಗಿತ್ತು. ಆದರೆ, ಆ ಪ್ರತಿಮೆಯು […]

ಟಿಪ್ಪು ಸುಲ್ತಾನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪ: ಪತ್ರಕರ್ತ ಸಂತೋಷ್ ಗೆ ಜಾಮೀನು

Wednesday, November 14th, 2018
journalist

ಕೊಡಗು: ಪ್ರವಾದಿ ಮೊಹಮ್ಮದ್ ಮತ್ತು ಟಿಪ್ಪು ಸುಲ್ತಾನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಬಂಧಿತರಾಗಿದ್ದ ಪತ್ರಕರ್ತ ಸಂತೋಷ್ ತಮ್ಮಯ್ಯ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ ಕೋರ್ಟ್ನ ನ್ಯಾಯಾಧೀಶ ಮೋಹನ್ ಗೌಡ ಅವರು ಅರ್ಧಗಂಟೆಗೂ ಹೆಚ್ಚು ಹೊತ್ತು ವಿಚಾರಣೆ ನಡೆಸಿದ ಬಳಿಕ ಸಂತೋಷ್ಗೆ ಷರತ್ತುಬದ್ಧ ಜಾಮೀನು ನೀಡಿದರು. 50 ಸಾವಿರ ರೂ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೌಲ್ಯದ ಇನ್ನಿಬ್ಬರ ಬಾಂಡ್ ಪಡೆದು ಸಂತೋಷ್ರನ್ನು ಬಿಡುಗಡೆಗೊಳಿಸಲು ಆದೇಶ ನೀಡಿದರು. ಸುಪ್ರೀಂ ಕೋರ್ಟ್ನಲ್ಲಿ […]

ಬಂಧಿಸಲು ಹೋದಾಗ ಹಲ್ಲೆಗೆ ಯತ್ನ: ಪೊಲೀಸರಿಂದ ಫೈರಿಂಗ್​..!

Wednesday, November 14th, 2018
arrested

ಬೆಂಗಳೂರು: ಕುಖ್ಯಾತ ಕಳ್ಳ ದಿನೇಶ್ ದೋರಾ ಎಂಬಾತನ ಮೇಲೆ ನಿನ್ನೆ ತಡರಾತ್ರಿ 12ರ ವೇಳೆಗೆ ಬಾಣಸವಾಡಿ ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿ ದಿನೇಶ್ ದೋರಾ ಇಂದಿರಾನಗರ, ಡಿಜೆಹಳ್ಳಿ ,ಹೆಣ್ಣೂರು, ಜೆಸಿನಗರ, ಬಸವೇಶ್ವರ ನಗರ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿ ಸೇರಿದಂತೆ 12 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಕಳ್ಳತನ ಮಾಡಿ ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಈತ ಕೆ.ಜಿ. ಹಳ್ಳಿಯ ಹೆಚ್ಬಿಆರ್ ಲೇಔಟ್ನಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಆರೋಪಿಯನ್ನ ಬಂಧಿಸಲು ಬಾಣಸವಾಡಿ ಪೊಲೀಸರು […]

ಕೊಡಗಿಗೆ ತಮಿಳುನಾಡು ಪರಿಹಾರ ಕೊಡಬೇಕು: ಎಸ್.ಎಲ್.ಭೈರಪ್ಪ

Wednesday, November 14th, 2018
kodagu

ಮೈಸೂರು: ಪ್ರವಾಹದಿಂದ ತತ್ತರಿಸಿರುವ ಕೊಡಗಿಗೆ ತಮಿಳುನಾಡು ಸರ್ಕಾರ ಕೂಡ ಪರಿಹಾರ ಕೊಡಬೇಕು ಎಂದು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಪ್ರತಿಪಾದಿಸಿದ್ದಾರೆ. ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಡಗಿನಿಂದ ಕಾವೇರಿ ನೀರು ಹೋಗಲಿಲ್ಲವೆಂದರೆ, ತಮಿಳುನಾಡು ಸರ್ಕಾರ ಕಾವೇರಿ ನೀರು ಬಂದಿಲ್ಲವೆಂದು ಸುಪ್ರೀಂಕೋರ್ಟ್ ಮೊರೆಹೋಗುತ್ತದೆ. ಸದ್ಯ ಕೊಡುಗಿನಲ್ಲಿ ಭೀಕರ ಪ್ರವಾಹವಾಗಿದ್ದು, ಇಲ್ಲಿಂದ ನೀರು ಪಡೆಯಲು ಹಠಕ್ಕೆ ಬೀಳುವ ತಮಿಳುನಾಡಿಗೆ ಕೊಡುಗಿನ ಮೇಲೆ ಮಾನವೀಯತೆ ಬಂದಿದಿಯಾ? ಎಂದು […]