ಡಿ.ಕೆ.ಶಿವಕುಮಾರ್ ಗೆ ಇಂದು ಸುಪ್ರೀಂ ಕೋರ್ಟ್​ನಲ್ಲಿ ಇಡಿ ಮೇಲ್ಮನವಿ ಅರ್ಜಿ ವಿಚಾರಣೆ

Friday, November 15th, 2019
DKShi

ನವದೆಹಲಿ : ಅಕ್ರಮ ಹಣ ವರ್ಗಾವಣೆ ವಿಚಾರವಾಗಿ ನ್ಯಾಯಾಂಗ ಬಂಧನದಲ್ಲಿದ್ದ ಕಾಂಗ್ರೆಸ್ನ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ದೆಹಲಿ ಹೈಕೋರ್ಟ್ನಿಂದ ಜಾಮೀನು ಪಡೆದಿದ್ದರು. ಈ ಕುರಿತು ಇಡಿ ಅಧಿಕಾರಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇಂದು ಮೇಲ್ಮನವಿ ಅರ್ಜಿ ವಿಚಾರಣೆ ನಡೆಯಲಿದೆ. ಮನಿ ಲಾಂಡರಿಂಗ್ ಪ್ರಕರಣದಲ್ಲಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಇಡಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಇಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಮಾಡುವಂತೆ ಡಿ.ಕೆ. […]

ಸರ್ಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಿಶ್ಚಿತ : ಎಚ್‌.ಡಿ.ದೇವೇಗೌಡ

Friday, June 21st, 2019
Deve Gowda

ಬೆಂಗಳೂರು:  ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಿಶ್ಚಿತ,  ಸಾರ್ವತ್ರಿಕ ಚುನಾವಣೆ ನಂತರ ಕಾಂಗ್ರೆಸ್ ಹೈಕಮಾಂಡ್ ಶಕ್ತಿ ಕಳೆದುಕೊಂಡಿದೆ. ಸರ್ಕಾರ ಎಷ್ಟ್ ದಿನ ಇರುತ್ತೋ ಗೊತ್ತಿಲ್ಲ. ಎಲ್ಲವೂ ಕಾಂಗ್ರೆಸ್ ಮುಖಂಡರ ಕೈಲಿದೆ. ಜೆಡಿಎಸ್ ಜೊತೆ ಹೊರಟ್ರೆ ಕಾಂಗ್ರೆಸ್ ಪಕ್ಷದ ಶಕ್ತಿ ಹೋಗುತ್ತೆ ಅನ್ನೋ ಸಂಕಟ ಹಲವರಲ್ಲಿ ಇದೆ’ ಎಂದು ಜೆಡಿಎಸ್ ನಾಯಕ ಎಚ್‌.ಡಿ.ದೇವೇಗೌಡ ಹೇಳಿದರು. ದೇವೇಗೌಡರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಹಳೆಯ ಅನುಮಾನಕ್ಕೆ ಇದರಿಂದ ಹೊಸ […]

ಹಿಂದಿನ ದಾಖಲೆಯನ್ನು ಮುರಿದು ಹ್ಯಾಟ್ರಿಕ್ ಗೆಲುವು ಸಾಧಿಸಿದ ನಳಿನ್ ಕುಮಾರ್ ಕಟೀಲ್

Thursday, May 23rd, 2019
Nalin

ಮಂಗಳೂರು : ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ 2,74,621 ಮತಗಳ ಅಂತರದಿಂದ  ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ  4,99,664 ಮತಗಳ ಮೂಲಕ ತೃಪ್ತಿ ಪಡಬೇಕಾಯಿತು.  ನಳಿನ್ ಕುಮಾರ್ ಕಟೀಲ್ ಪಡೆದ ಮತಗಳು 7,74,285. ಈಗಾಗಲೆ ಎರಡು ಬಾರಿ ಜಯ ಗಳಿಸಿದ್ದ ನಳಿನ್‌ರನ್ನು ಸೋಲಿಸಲು ಕಾಂಗ್ರೆಸ್ ಸಮರ್ಥ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದೆ ಎಂದು ಬಿಂಬಿಸಲಾಗಿತ್ತು. ಆದರೆ, ಫಲಿತಾಂಶ ಅನಿರೀಕ್ಷಿತ ತಿರುವು ಪಡೆದಿದೆ. ಕಳೆದ ಬಾರಿ 1,43,709 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ನಳಿನ್ ಈ ಬಾರಿ ತನ್ನ ಹಿಂದಿನ […]

ಉಡುಪಿ ಚಿಕ್ಕಮಗಳೂರು – ಶೋಭಾ ಕರಂದ್ಲಾಜೆಗೆ 1,18,339 ಸಾವಿರ ಮತಗಳ ಮುನ್ನಡೆ

Thursday, May 23rd, 2019
Shobha

ಉಡುಪಿ : ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭೆ ಚುನಾವಣೆಯಲ್ಲಿ ಪ್ರಮೋದ್ ಮಧ್ವರಾಜ್ ವಿರುದ್ಧ ಶೋಭಾ ಕರಂದ್ಲಾಜೆಗೆ  1,18,339 ಸಾವಿರ ಮತಗಳ  ಅಂತರದಿಂದ ಮುನ್ನಡೆ  ಯಲ್ಲಿದ್ದಾರೆ  .  ಶೋಭಾ ಕರಂದ್ಲಾಜೆಗೆ 234451 ಮತಗಳು . ಪ್ರಮೋದ್ ಮಧ್ವರಾಜ್ಗೆ 116112 ಮತಗಳು. Karnataka-Udupi Chikmagalur Results O.S.N. Candidate Party EVM Votes Postal Votes Total Votes % of Votes 1 SHOBHA KARANDLAJE BJP 234451 0 234451 63.08 2 MAGGALAMAKKI GANESHA IND 1265 0 1265 […]

ಕುಮಾರಸ್ವಾಮಿ ಮೇ 24ರ ವರೆಗೆ ಮಾತ್ರ ಮುಖ್ಯಮಂತ್ರಿ

Thursday, May 23rd, 2019
kumara swamy

ಬೆಂಗಳೂರು: ಲೋಕಸಭೆ ಚುನಾವಣೆ 2019ರ ಫಲಿತಾಂಶ ಮೇ 23 ರಂದು ಪ್ರಕಟಗೊಳ್ಳಲಿದ್ದು, ಮೇ 24ರ ವರೆಗೆ ಮಾತ್ರ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಭವಿಷ್ಯ ನುಡಿದಿದ್ದಾರೆ. ಎಚ್‌ಡಿ ಕುಮಾರಸ್ವಾಮಿ ಅವರು ಮೇ 24, ಶುಕ್ರವಾರ ಬೆಳಗ್ಗಿನ ವರೆಗೆ ಮಾತ್ರ ಸಿಎಂ ಆ ನಂತರ ಮೈತ್ರಿ ಸರ್ಕಾರ ಮುರಿದು ಬೀಳಲಿದೆ. ಹೊಸ ಸರ್ಕಾರ ರಚನೆಗೆ ವೇದಿಕೆ ಸಿದ್ಧವಾಗಿದೆ ಎಂದು ಸದಾನಂದ ಗೌಡ ಹೇಳಿದ್ದಾರೆ. ನಾಳೆ ಸಂಜೆ ಅಥವಾ ನಾಡಿದ್ದು ಬೆಳಗ್ಗೆ ವರೆಗೆ ಮಾತ್ರ. ನಾಳೆ […]

ಮಂಡ್ಯದ ಸಮಸ್ಯೆಗಳ ಬಗ್ಗೆ ದೆಹಲಿಯಲ್ಲಿ ಹೋರಾಡಲು ಸಿದ್ದನಿದ್ದೇನೆ : ಸುಮಲತಾ ಅಂಬರೀಶ್

Thursday, April 4th, 2019
sumalatha

ಬೆಂಗಳೂರು: ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್‌ ಅವರು ಬೆಂಗಳೂರು ಪ್ರಸ್‌ಕ್ಲಬ್‌ನಲ್ಲಿ ಸುದೀರ್ಘ‌ ಸುದ್ದಿಗೋಷ್ಠಿಯಲ್ಲಿ ನಡೆಸಿ ಪತ್ರಕರ್ತರ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದರು. ಜನರ ಅಭಿಪ್ರಾಯದಂತೆ ರಾಜಕೀಯ ಪ್ರವೇಶಿಸಿದ್ದೇನೆ . ರಾಜಕೀಯ ಪ್ರವೇಶ ಮಾಡಿ ತಾಳ್ಮೆ ಕಲಿತಿಲ್ಲ. ತಾಳ್ಮೆ ಅನ್ನುವುದು ನನ್ನ ಹುಟ್ಟುಗುಣ, ಅಂಬರೀಶ್‌ ಅವರನ್ನು ಮದುವೆಯಾಗಿ 27 ವರ್ಷ ಸಂಸಾರ ನಡೆಸಿದ್ದೇನೆ ಇದಕ್ಕೆ ನನ್ನ ತಾಳ್ಮೆಯೆ ಕಾರಣ ಎಂದು ಜೆಡಿಎಸ್‌ ನಾಯಕರಿಗೆ ತಿರುಗೇಟು ನೀಡಿದರು. ಮೂವರು ಸುಮಲತಾರಿಂದ ಜೆಡಿಎಸ್‌ಗೆ ಮತಗಳು ಬೀಳುವುದಿಲ್ಲ. ಇನ್ನೊಂದು ಸುಮಲತಾಗೆ […]

ಕೆಲವೇ ಉದ್ಯಮಿಗಳ ರಕ್ಷಣೆಗಾಗಿ ವಿಜಯ ಬ್ಯಾಂಕನ್ನು ಬಲಿ ಕೊಡಲಾಯಿತು : ಮಹಾಬಲ ಮಾರ್ಲ

Thursday, April 4th, 2019
Mahabala marla

ಮಂಗಳೂರು: ಏಪ್ರಿಲ್ 1 ರಂದು ಬ್ಯಾಂಕ್ ಆಫ್ ಬರೋಡಾದೊಂದಿಗೆ  ವಿಲೀನಗೊಂಡಿರುವ ದ.ಕ. ಜಿಲ್ಲೆಯ  ಪ್ರತಿಷ್ಠಿತ ವಿಜಯ ಬ್ಯಾಂಕ್  ಬಗ್ಗೆ ಹೇಳಿಕೆ ನೀಡಿರುವ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲು, ಈ ವಿಲೀನೀಕರಣಕ್ಕೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹಾಗೂ ಚಿದಂಬರಂ ಅವರೇ ಕಾರಣ ಎಂದು ಹೇಳುತ್ತಿದ್ದಾರೆ. ಇದರಿಂದ ಸಂಸದ ನಳಿನ್ ಕುಮಾರ್ ಅವರು ತಮ್ಮ ವೈಫಲ್ಯತೆಯನ್ನು ಮುಚ್ಚಿಹಾಕಲು ಮತ್ತೊಬ್ಬರ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಮಹಾಬಲ ಮಾರ್ಲ ಹೇಳಿದರು. ನಗರದ ಬೆಂದೂರ್ ವೆಲ್ನಲ್ಲಿರುವ ಕಾಂಗ್ರೆಸ್ […]

ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ರಂಜನ್ ಗೌಡ ಕಾಂಗ್ರೆಸಿಗೆ

Tuesday, April 2nd, 2019
Ranjan Gowda

ಬೆಳ್ತಂಗಡಿ : ಬಿಜೆಪಿ ಮಂಡಲ ಅಧ್ಯಕ್ಷರಾಗಿದ್ದ ರಂಜನ್ ಗೌಡ ಕಾಂಗ್ರೆಸ್ ಸೇರಿದ್ದಾರೆ. ಈ ಬೆಳವಣಿಗೆ ಬಿಜೆಪಿ ಪಾಳಯದಲ್ಲಿ ಗೊಂದಲ ಮೂಡಿಸಿದೆ. ಬೆಳ್ತಂಗಡಿಯಲ್ಲಿ ಆಪರೇಷನ್ ಹಸ್ತ ಯಶಸ್ವಿಯಾಗಿದೆ. ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ‌ ಹೊಂದಿದ್ದ ರಂಜನ್ ಗೌಡ ಕಾಂಗ್ರೆಸ್‌ಗೆ ಹಾರಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ರಂಜನ್ ಗೌಡ ಅವರಿಗೆ ಕೊನೆಯ ಹಂತದಲ್ಲಿ ಟಿಕೆಟ್ ಕೈ ತಪ್ಪಿತ್ತು. ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಹರೀಶ್ ಪೂಂಜಾ ಅವರಿಗೆ ಟಿಕೆಟ್ ನೀಡಲಾಗಿತ್ತು . ಇದರಿಂದ […]

ಮುಖ್ಯಮಂತ್ರಿಯಾಗಿ ನಿಮಗೆ ಅಮೃತ ಕೊಟ್ಟು ನಾನು ವಿಷ ಕುಡಿಯುತ್ತೇನೆ: ಹೆಚ್.ಡಿ.ಕುಮಾರಸ್ವಾಮಿ

Saturday, July 14th, 2018
kumarswamy-sarkar

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿದ್ದೇನೆ. ಸಿದ್ದರಾಮಯ್ಯ ಅವರು ಕೊಟ್ಟಿರುವ ಮಾತನ್ನು ನಾನು ಉಳಿಸಿಕೊಳ್ಳಬೇಕು ಎಂದು ಜೆಡಿಎಸ್ ಕಚೇರಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಸಿದ್ದರಾಮಯ್ಯನವರು ಮಾಡಿದ್ದ 50,000 ರೂ.ವರೆಗಿನ ಸಾಲ ಮನ್ನಾದ 8,000 ಕೋಟಿ ಬಾಕಿಯನ್ನೂ ನಾನೇ ತೀರಿಸಬೇಕಾಗಿದೆ. ನಾನು ಚಾಲೆಂಜ್ ಆಗಿ ಸ್ವೀಕರಿಸಿ ರೈತರ ಒಂದು ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡಲು ತೀರ್ಮಾನಿಸಿದ್ದೇನೆ. ಆದರೆ, ರೈತರು ಅನ್ನ ಕೊಡ್ತೀರೋ.. ವಿಷ  ಕೊಡ್ತೀರೋ ತೀರ್ಮಾನಿಸಿ… ನಿಮ್ಮ ತೀರ್ಮಾನದಿಂದ ನನಗೆ ನಷ್ಟವಿಲ್ಲ. ನನಗೆ ಇದು ದೇವರು ಕೊಟ್ಟ ಅಧಿಕಾರ. ಆದರೆ, ಅಧಿಕಾರದಲ್ಲಿ […]

ಈ ಬಾರಿ ಲೋಕಸಭಾ ಚುನಾವಣೆಗೆ ಬಿ.ರಮಾನಾಥ್ ರೈ ಸ್ಪರ್ಧಿಸುತ್ತಾರಂತೆ !

Monday, July 2nd, 2018
Ramanatha Rai

ಮಂಗಳೂರು : ವಿಧಾನ ಸಭಾ ಚುನಾವಣೆಯಲ್ಲಿ ಸೋತ ಬಳಕ ಮಾಜಿ ಸಚಿವ ರಮಾನಾಥ್ ರೈ ಸ್ವಲ್ಪ ಸಮಯದ ಬಿಡುವಿನ ಬಳಿಕ ರಾಜಕೀಯವಾಗಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.  ಮುಂಬರುವ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ. ಹಾಗಂತ ಅವರೇ ಕಾರ್ಯಕರ್ತರ ಬಳಿ ಪದೇ ಪದೇ ಹೇಳಿಕೊಳ್ಳುತ್ತಿದ್ದರಂತೆ. ಆ ಬಗ್ಗೆ ಮಾಧ್ಯಮದ ಪ್ರತಿನಿಧಿಗಳಲ್ಲಿಯೂ ಹೇಳಿದ್ದಾರೆ. ಅದಕ್ಕೆ ಪೂರಕವಾಗಿ ಈಗಾಗಲೇ ನಳಿನ್ ಕುಮಾರ್ ವಿರುದ್ಧ ವಾಕ್ ಸಮರಕ್ಕೆ ಇಳಿದಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್ ಪಕ್ಷವು ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಕಳೆದ ಲೋಕ ಸಭೆ ಚುನಾವಣೆಯಲ್ಲಿ […]