ಇಂದು ಬಿಜೆಪಿ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ. ನಡ್ಡಾ ಆಯ್ಕೆ

Monday, January 20th, 2020
jp nadda

ನವದೆಹಲಿ : ಭಾರತೀಯ ಜನತಾ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಜಗತ್ ಪ್ರಕಾಶ್ ನಡ್ಡಾ ಅವರು ಇಂದು ಆಯ್ಕೆಗೊಂಡಿದ್ದಾರೆ. ಪಕ್ಷದ ವಲಯದಲ್ಲಿ ಜೆ.ಪಿ, ನಡ್ಡಾ ಎಂದೇ ಕರೆಯಲ್ಪಡುವ ನಡ್ಡಾ ಅವರು ನಿರ್ಗಮನ ಅಧ್ಯಕ್ಷರಾಗಿರುವ ಅಮಿತ್ ಶಾ ಅವರಂತೆಯೇ ಸಂಘಟನಾ ಚತುರ ಎಂದೇ ಪಕ್ಷದೊಳಗೆ ಗುರುತಿಸಲ್ಪಡುತ್ತಿದ್ದಾರೆ. ಇಷ್ಟು ಮಾತ್ರವಲ್ಲದೇ ನಡ್ಡಾ ಅವರು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಪರಮಾಪ್ತರಾಗಿದ್ದಾರೆ. ಪಕ್ಷದ ರಾಷ್ಟ್ರಾಧ್ಯಕ್ಷರಾಗಿದ್ದ ಅಮಿತ್ ಶಾ ಅವರು ಕಳೆದ ಲೋಕಸಭಾ ಚುನಾವಣೆಯ ಬಳಿಕ ಪ್ರಧಾನಿ […]

ಮೈಸೂರು ಜಿಲ್ಲೆಗೆ ಶಾಸಕ ಸಾ.ರಾ ಮಹೇಶ್ ಅವರೇ ಜೆಡಿಎಸ್ ವರಿಷ್ಠರಾಗಿದ್ದಾರೆ : ಜಿ. ಟಿ ದೇವೇಗೌಡ ಮಾರ್ಮಿಕ ನುಡಿ

Saturday, January 18th, 2020
G.T-Devegowda

ಮೈಸೂರು : ಮೈಸೂರು ಜಿಲ್ಲೆಗೆ ಶಾಸಕ ಸಾ.ರಾ ಮಹೇಶ್ ಅವರೇ ಜೆಡಿಎಸ್ ವರಿಷ್ಠರಾಗಿದ್ದಾರೆ ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡರು ಮಾರ್ಮಿಕವಾಗಿ ನುಡಿದರು. ಇಂದು ಮೈಸೂರು ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಮೇಯರ್ ಆಯ್ಕೆಗೆ ಮತದಾನ ಮಾಡಲು ಮೈಸೂರು ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣಕ್ಕೆ ಶಾಸಕ ಜಿ. ಟಿ ದೇವೇಗೌಡ ಆಗಮಿಸಿದರು. ಎಂಎಲ್ಸಿಗಳಾದ, ಮರಿತಿಬ್ಬೇಗೌಡ, ಸಂದೇಶ್ ನಾಗರಾಜ್, ಕೆ.ಟಿ.ಶ್ರೀಕಂಠೇಗೌಡ, ಧರ್ಮಸೇನಾ ಸಹ ಪಾಲಿಕೆಗೆ ಆಗಮಿಸಿದರು. ಜಿಟಿ ದೇವೇಗೌಡರು ಬರುತ್ತಿದ್ದಂತೆ ಅವರನ್ನು ಪಾಲಿಕೆ ಸದಸ್ಯರು […]

ಮೈಸೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ತಸ್ಲೀಂ ಆಯ್ಕೆ

Saturday, January 18th, 2020
taslim

ಮೈಸೂರು : ಮೈಸೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಜೆಡಿಎಸ್ ನ ತಸ್ಲೀಂ ಆಯ್ಕೆಯಾಗಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಂ ಮಹಿಳೆ ಮೇಯರ್ ಆಗಿ ಆಯ್ಕೆಯಾಗಿದ್ದು, 47 ಮತಗಳಿಂದ ತಸ್ಲೀಂ ಪಾಲಿಕೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಮುಸ್ಲಿಂ ಮಹಿಳಾ ಮೇಯರ್ ಆಗಿ ಅಧಿಕಾರ ನಡೆಸಲಿದ್ದಾರೆ. ತಸ್ಲೀಂ 47 ಮತಗಳನ್ನು ಪಡೆದಿದ್ದು, ಬಿಜೆಪಿಯ ಗೀತಾ ಯೋಗಾನಂದ್ 23 ಮತಗಳನ್ನು ಪಡೆದಿದ್ದಾರೆ.  

ಮೈಸೂರು ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಸ್ಥಾನಕ್ಕೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

Saturday, January 18th, 2020
meyor

ಮೈಸೂರು : ಮೈಸೂರು ಮಹಾನಗರ ಪಾಲಿಕೆಯ ಮೇಯರ್-ಉಪಮೇಯರ್ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಮೇಯರ್ ಅಭ್ಯರ್ಥಿಯಾಗಿ ಜೆಡಿಎಸ್‌‌ನಿಂದ ವಾರ್ಡ್ ನಂ 26ರ ಸದಸ್ಯೆಯಾಗಿರುವ ತಸ್ಲಿಮ್ ಜೆಡಿಎಸ್ ಮುಖಂಡರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಬಿಜೆಪಿ ಮೇಯರ್ ಅಭ್ಯರ್ಥಿಯಾಗಿ ಗೀತಾಶ್ರೀ ಯೋಗಾನಂದ್ ನಾಮಪತ್ರ ಸಲ್ಲಿಸಿದರು. ಶಾಂತಮ್ಮ ವಡಿವೇಲು ಉಪ ಮೇಯರ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಪಾಲಿಕೆಯ ವಿರೋಧ ಪಕ್ಷದ ನಾಯಕ ಬಿ.ವಿ ಮಂಜುನಾಥ್ ಜೊತೆ ಸೇರಿ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿಗಳು ಸಂಖ್ಯಾಬಲ […]

ಕಾಯ್ದೆ ತಿದ್ದುಪಡಿಗೆ ಸಂವಿಧಾನದಲ್ಲಿ ಅವಕಾಶವಿದೆ

Saturday, January 18th, 2020
meeting

ಮಡಿಕೇರಿ : ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನ ವಿರೋಧಿ ಎಂದು ಕೆಲವರು ಟೀಕಿಸುತ್ತಿದ್ದು, ಕಾಯ್ದೆ ತಿದ್ದುಪಡಿಗೆ ಸಂವಿಧಾನದಲ್ಲೆ ಅವಕಾಶವಿದೆ ಎಂದರು. ನೆಹರು ಅವರ ಕಾಲದಲ್ಲಿ ಪ್ರಸ್ತಾಪವಾದ ಈ ಕಾಯ್ದೆಯನ್ನು ನಂತರದ ಕಾಂಗ್ರೆಸ್ ಸರ್ಕಾರ ಅನೇಕ ಬಾರಿ ತಿದ್ದುಪಡಿ ಮಾಡಿದೆ. ಸಂವಿಧಾನದ ಅಡಿಯಲ್ಲೆ ರಚನೆಯಾದ ಕಾಯ್ದೆ ಇದಾಗಿದ್ದು, ಲೋಕಸಭೆಯಲ್ಲಿ ವಿಸ್ತೃತ ಚರ್ಚೆಯಾದ ನಂತರವೆ ಕಾಯ್ದೆಯನ್ನು ಜಾರಿಗೆ ತರಲಾಗಿದೆಯೇ ಹೊರತು, ಏಕಾಏಕಿ ಜಾರಿ ಮಾಡಿಲ್ಲವೆಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್ ಸೇರಿದಂತೆ ಕೆಲವು ಪಕ್ಷಗಳು […]

ಶೇ99 ರಷ್ಟು ಮಂದಿ ಕಾಯ್ದೆಯ ಪರವಾಗಿದ್ದಾರೆ : ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್

Saturday, January 18th, 2020
ravi-kumar

ಮಡಿಕೇರಿ : ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ ಶೇ.1 ರಷ್ಟಿರುವ ಸುಶಿಕ್ಷಿತ ಅನಾಗರೀಕರು ಪೌರತ್ವ ಕಾಯ್ದೆಯನ್ನು ವಿರೋಧಿಸುತ್ತಿದ್ದು, ಶೇ.99 ರಷ್ಟು ಮಂದಿ ಕಾಯ್ದೆಯ ಪರವಾಗಿದ್ದಾರೆ ಎಂದರು. ಭಾರತದ ಪಕ್ಕದ ರಾಷ್ಟ್ರಗಳಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ತುತ್ತಾಗಿ ಸಂಕಷ್ಟಕ್ಕೆ ಸಿಲುಕುವ ಆರು ಧರ್ಮದವರಿಗೆ ದೇಶದಲ್ಲಿರಲು ಅವಕಾಶ ಕಲ್ಪಿಸುವುದಕ್ಕಾಗಿ ಪೌರತ್ವವನ್ನು ನೀಡುವ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪಘಾನಿಸ್ತಾನದಲ್ಲಿರುವ ಮುಸಲ್ಮಾನರ ಮೇಲೆ ಧಾರ್ಮಿಕ ಶೋಷಣೆ ನಡೆಯುತ್ತಿದೆಯೇ ಎಂದು ಅವರು ಪ್ರಶ್ನಿಸಿದರು. […]

ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಹುಬ್ಬಳ್ಳಿಗೆ

Friday, January 17th, 2020
hubballi

ಹುಬ್ಬಳ್ಳಿ : ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ನೇತೃತ್ವದಲ್ಲಿ ಜ. 18ರಂದು ನಡೆಯಲಿರುವ ಬೃಹತ್ ಸಭೆಗೆ ಹುಬ್ಬಳ್ಳಿ ಸಂಪೂರ್ಣ ಕೇಸರಿಮಯಗೊಳ್ಳಲಿದೆ. ಈಗಾಗಲೇ ಐ ಸಪೋರ್ಟ್ ಸಿಎಎ ಎಂದು ಬರೆದಿರುವ 50 ಸಾವಿರ ಕೇಸರಿ ಟೊಪ್ಪಿಗಳು ಸಿದ್ಧಗೊಂಡಿದ್ದು, 20 ಸಾವಿರ ಬಿಜೆಪಿ ಧ್ವಜಗಳು ತಯಾರಾಗಿವೆ. ಈ ಧ್ವಜಗಳನ್ನು ಕಟ್ಟುವುದಕ್ಕಾಗಿ ಕಟ್ಟಿಗೆ ಬಡಿಗೆ ಸಿದ್ಧಗೊಳ್ಳುತ್ತಿವೆ. ವಿಮಾನ ನಿಲ್ದಾಣದಿಂದ ಅಂಬೇಡ್ಕರ ವೃತ್ತದವರೆಗಿನ ಮಾರ್ಗದುದ್ದಕ್ಕೂ ಬಿಜೆಪಿ ಧ್ವಜ, ಹೋರ್ಡಿಂಗ್ಗಳು ರಾರಾಜಿಸಲಿವೆ. ನೆಹರು ಮೈದಾನದಲ್ಲಿ 40 ಅಡಿ […]

ಕೆಪಿಸಿಸಿ ಅಧ್ಯಕ್ಷರ ನೇಮಕದಲ್ಲಿ ವಿಳಂಬ ಸರಿಯಲ್ಲ, ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳಬೇಕು : ದಿನೇಶ್ ಗುಂಡೂರಾವ್

Thursday, January 16th, 2020
dinesh-gundu-rao

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರ ನೇಮಕದಲ್ಲಿ ಇನ್ನು ವಿಳಂಬ ಸರಿಯಲ್ಲ, ಆದಷ್ಟು ಬೇಗ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ನೇಮಕದಲ್ಲಿ ಇನ್ನೂ ವಿಳಂಬ ಮಾಡಕೂಡದು. ವಿಳಂಬವಾದರೆ ಗೊಂದಲ ಹೆಚ್ಚಾಗುತ್ತದೆ. ಆದಷ್ಟು ಬೇಗ ಈ ಬಗ್ಗೆ ಹೈ ಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದು, ಬೇಗ ನೇಮಕ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಇದೇ ವೇಳೆ ತಿಳಿಸಿದರು. ಕೆಲಸ ಇಲ್ಲದ […]

ಮುಂದಿನ ಮೂರು ವರ್ಷ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಅವಿರೋಧ ಆಯ್ಕೆ

Thursday, January 16th, 2020
nalin

ಬೆಂಗಳೂರು : ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಸರ್ವಾನುಮತದಿಂದ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಸಹ ಚುನಾವಣಾಧಿಕಾರಿಯಾದ ರಾಜ್ಯ ಅಧ್ಯಕ್ಷರ ಆಯ್ಕೆ ಚುನಾವಣಾ ವೀಕ್ಷಕ ಸಿ.ಟಿ.ರವಿ ಘೋಷಿಸಿದರು. ನೂತನ ಅಧ್ಯಕ್ಷರ ಅಧಿಕಾರಾವಧಿ 2023ರ ಜನವರಿ 16ಕ್ಕೆ ಮುಕ್ತಾಯವಾಗಲಿದೆ. ಬಳಿಕ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಅಧ್ಯಕ್ಷನಾಗಿ ಆಯ್ಕೆಯಾದಾಗ ಕೆಲ ಸವಾಲುಗಳಿದ್ದವು. ರಾಜ್ಯಾದ್ಯಂತ ಪ್ರವಾಸ ಮಾಡಿ ಎಲ್ಲ […]

ಜನವರಿ 18ರಂದು ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್​ ಷಾ ಆಗಮನ

Thursday, January 16th, 2020
amith

ಬೆಂಗಳೂರು : ಜನವರಿ 18ರ ಶನಿವಾರ ರಾಜ್ಯಕ್ಕೆ ಆಗಮಿಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯ ಗರಿಗೆದರಿದೆ. ಅಮಿತ್ ಷಾ ಭೇಟಿಗೆ ಉತ್ಸುಕರಾಗಿರೋ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಷಾ ಮುಂದೆ ಚರ್ಚಿಸಲು ಸಿದ್ಧತೆ ನಡೆಸಿದ್ದಾರೆ. ಹಾಗಾಗಿ ಸಚಿವ ಸ್ಥಾನಾಕಾಂಕ್ಷಿಗಳಲ್ಲಿ ಮತ್ತೆ ಆಸೆ ಚಿಗುರಿದೆ. ಅಮಿತ್ ಷಾ ಭೇಟಿ ವೇಳೆ ಕೆಲವು ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಲು ಮುಖ್ಯಮಂತ್ರಿ ಅವರು ಸಿದ್ಧತೆ ನಡೆಸಿದ್ದಾರೆ. ಅದರಲ್ಲಿನ ಪ್ರಮುಖ ವಿಷಯಗಳ […]