ಖ್ಯಾತ ನಟ ಇರ್ಫಾನ್ ಖಾನ್ (54) ನಿಧನ

Wednesday, April 29th, 2020
irfan-khan

ಮುಂಬೈ :  ಭಾರತೀಯ ಚಿತ್ರರಂಗದ ಖ್ಯಾತ ನಟ ಇರ್ಫಾನ್ ಖಾನ್ (54) ಕರುಳಿನ ಸೋಂಕು ಕಾಣಿಸಿಕೊಂಡು ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ  ಫಲಕಾರಿಯಾಗದೆ ಏಪ್ರಿಲ್ 29, 2020 ರಂದು ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಕೊಲೊನ್ ಇನ್‌ಫೆಕ್ಷನ್‌(ಕರುಳಿನ ಸೋಂಕು)ನಿಂದಾಗಿ ಕೋಕಿಲಬೆನ್‌ ಆಸ್ಪತ್ರೆಗೆ ದಾಖಲಾಗಿದ್ದ ಇರ್ಫಾನ್‌ ತುರ್ತು ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೂರು ದಿನಗಳ ಹಿಂದಷ್ಟೇ ಜೈಪುರದಲ್ಲಿ ಇರ್ಫಾನ್‌ ತಾಯಿ ಸಯೀದಾ ಬೇಗಂ (95) ನಿಧನರಾಗಿದ್ದರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅವರು ಅಂತ್ಯಕ್ರಿಯೆಗೆ ಹೋಗಿರಲಿಲ್ಲ. ಈ ವಿಚಾರದಿಂದ ಇರ್ಫಾನ್ ಬಹಳಷ್ಟು ನೊಂದಿದ್ದರು. […]

ಸೆಟ್ಟೇರಿತು ಹ್ಯಾಟ್ರಿಕ್ ಹೀರೋ ಶಿವಣ್ಣನ ‘ಆರ್‌ಡಿಎಕ್ಸ್‌’ ಚಿತ್ರ : ಶುಭ ಕೋರಲು ಬಂದ ‘ಪವರ್‌ ಸ್ಟಾರ್‌’

Wednesday, February 19th, 2020
ಸೆಟ್ಟೇರಿತು ಹ್ಯಾಟ್ರಿಕ್ ಹೀರೋ ಶಿವಣ್ಣನ 'ಆರ್‌ಡಿಎಕ್ಸ್‌' ಚಿತ್ರ : ಶುಭ ಕೋರಲು ಬಂದ 'ಪವರ್‌ ಸ್ಟಾರ್‌'

ಬೆಂಗಳೂರು : ಶಿವರಾಜ್‌ಕುಮಾರ್‌ ನಟನೆಯ ಹೊಸ ಸಿನಿಮಾ ಸೆಟ್ಟೇರಿದೆ. ‘ಆರ್‌ಡಿಎಕ್ಸ್‌’ ಎಂದು ಆಕರ್ಷಕ ಟೈಟಲ್‌ ಇಡಲಾಗಿದ್ದು, ಕಾಲಿವುಡ್‌ ಮೂಲದ ನಿರ್ದೇಶಕ ರವಿ ಅರಸು ಆ್ಯಕ್ಷನ್‌-ಕಟ್ ಹೇಳಲಿದ್ದಾರೆ. ಈ ಸಿನಿಮಾ ಮೂಲಕ ದಕ್ಷಿಣ ಭಾರತದ ಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆ ‘ಸತ್ಯ ಜ್ಯೋತಿ ಫಿಲಂಸ್‌’ ಬಹು ವರ್ಷಗಳ ಬಳಿಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದೆ. ಇಂದು ಫೆ.19ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ‘ಆರ್‌ಡಿಎಕ್ಸ್‌’ ಮುಹೂರ್ತ ನೆರವೇರಿತು. ಆ ಸಂದರ್ಭದ ಕಲರ್‌ಫುಲ್‌ ಕ್ಷಣಗಳು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿವೆ.  

ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ನಿಶ್ಚಿತಾರ್ಥ

Monday, February 10th, 2020
nikil

ಬೆಂಗಳೂರು : ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ನಿಶ್ಚಿತಾರ್ಥ ಇಂದು ಬೆಂಗಳೂರಿನ ತಾಜ್ ವೆಸ್ಟ್ ಹೋಟೆಲ್‌ನಲ್ಲಿ ಶಾಸ್ತ್ರೋಕ್ತವಾಗಿ ನಡೆದಿದೆ. ಈ ನಿಶ್ಚಿತಾರ್ಥಕ್ಕೆ ಅನಿತಾ ಕುಮಾರಸ್ವಾಮಿ ಸಹೋದರಿಯರಾದ ಶೈಲಜಾ ಮತ್ತು ಅನುಸೂಯ, ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಮಾರ್ಗದರ್ಶನದಲ್ಲಿ ಎಲ್ಲ ತಯಾರಿಗಳು ನಡೆದಿವೆ. ತಾಜ್‌ ವೆಸ್ಟ್‌ನ ಪೂರ್ವ ದಿಕ್ಕಿಗೆ ಇರುವ ವೆಸ್ಟೆಂಡ್‌ ಕೋರ್ಟ್‌ನಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ. ತಾಜ್‌ ವೆಸ್ಟೆಂಡ್‌ ಹೊಟೇಲ್‌ನಲ್ಲಿರುವ ಮರಗಿಡಗಳ ನಡುವೆ ನಿಶ್ಚಿತಾರ್ಥ ನಡೆಯಬೇಕು ಎಂಬುದು ನಿಖಿಲ್‌ಕುಮಾರ್‌ ಅವರ ಆಸೆಯಾಗಿತ್ತು. ನಿಶ್ಚಿತಾರ್ಥ ಸಂಪೂರ್ಣ ವೈಟ್‌ ಥೀಮ್‌ನಲ್ಲಿ […]

ನಟ ನಿಖಿಲ್‌ ಕುಮಾರ್‌ ಮೂವತ್ತನೇ ವರ್ಷದ ಜನ್ಮದಿನಾಚರಣೆ

Wednesday, January 22nd, 2020
nikil-kumar

ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಪುತ್ರ ನಟ ಕಂ ರಾಜಕಾರಣಿ ನಿಖಿಲ್‌ ಕುಮಾರ್‌ ಇಂದು (ಜ. 22) ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಮೂವತ್ತನೇ ವರ್ಷಕ್ಕೆ ಕಾಲಿಡುತ್ತಿರುವ ನಿಖಿಲ್‌ ಕುಮಾರ್‌ಗೆ ಚಿತ್ರರಂಗ ಮತ್ತು ರಾಜಕೀಯ ರಂಗದ ಅನೇಕ ಗಣ್ಯರು, ಅಭಿಮಾನಿಗಳು, ಬೆಂಬಲಿಗರು ಶುಭಾಶಯ ಕೋರುತ್ತಿದ್ದಾರೆ. ಇನ್ನು ರಾಜಕೀಯ ರಂಗದ ಜೊತೆ ಚಿತ್ರರಂಗದಲ್ಲೂ ಗುರುತಿಸಿಕೊಂಡಿರುವ ನಿಖಿಲ್‌ ಕುಮಾರ್‌ ಸದ್ಯ ಮೂರು ಬಿಗ್‌ ಬಜೆಟ್‌ನ ದೊಡ್ಡ ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ರಜನಿಕಾಂತ್‌ ಅಭಿನಯದ ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ “ಲೈಕಾ […]

‘ರಡ್ಡ್ ಎಕ್ರೆ’ ತುಳು ಸಿನಿಮಾ ಕರಾವಳಿಯಾದ್ಯಂತ ಬಿಡುಗಡೆ

Friday, January 10th, 2020
radd-yekare

ಮಂಗಳೂರು : ಒನ್‌ಲೈನ್ ಸಿನಿಮಾ ಲಾಂಛನದಲ್ಲಿ ಸಂದೇಶ್ ರಾಜ್ ಬಂಗೇರ, ರೋಹನ್ ಕೋಡಿಕಲ್ ನಿರ್ಮಾಣದಲ್ಲಿ ವಿಸ್ಮಯ ವಿನಾಯಕ್ ನಿರ್ದೇಶನದಲ್ಲಿ ತಯಾರಾದ ‘ರಡ್ಡ್ ಎಕ್ರೆ’ ತುಳು ಸಿನಿಮಾ ಭಾರತ್ ಮಾಲ್‌ನ್ ಬಿಗ್ ಸಿನಿಮಾಸ್‌ನಲ್ಲಿ ಬಿಡುಗಡೆ ಗೊಂಡಿತು. ಸಮಾರಂಭವನ್ನು ಶ್ರೀನಿವಾಸ ಯುನಿರ್ವಸಿಟಿಯ ಚಾನ್ಸಿಲರ್ ರಾಘವೇಂದ್ರ ರಾವ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ‘ರಡ್ಡ್ ಎಕ್ರೆ’ ಸಿನಿಮಾದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗಲಿ. ಪ್ರಾದೇಶಿಕ ಭಾಷೆಯಲ್ಲಿ ಬರುತ್ತಿರುವ ಸಿನಿಮಾಗಳನ್ನು ಪ್ರೇಕ್ಷಕರು ಪ್ರೋತ್ಸಾಹಿಸಬೇಕು ಎಂದು ಅವರು ತಿಳಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ […]

ಜಗ್ಗೇಶ್ ನಟಿಸಿದ ಚಿತ್ರ ನೋಡುತ್ತಲೇ ಮೃತಪಟ್ಟ ಬೋರೆಗೌಡ

Tuesday, November 26th, 2019
kalidasa kannada mestru

ಬೆಂಗಳೂರು: ನವರಸನಾಯಕ ಜಗ್ಗೇಶ್ ನಟಿಸಿರುವ ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರ ನೋಡುತ್ತಿದ್ದ ವ್ಯಕ್ತಿಯೊಬ್ಬರು ಚಿತ್ರಮಂದಿರದಲ್ಲೇ ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಜಗ್ಗೇಶ್ ಮೃತಪಟ್ಟ ವ್ಯಕ್ತಿಗೆ ಸಂತಾಪ ಸೂಚಿಸಿದ್ದಾರೆ. ವ್ಯಕ್ತಿಯೊಬ್ಬರು ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾ ನೋಡಲು ಸೋಮವಾರ ಮೈಸೂರಿನ ಪ್ರಭಾ ಚಿತ್ರಮಂದಿರಕ್ಕೆ ಬಂದಿದ್ದರು. ಈ ವೇಳೆ ಸಿನಿಮಾ ನೋಡುತ್ತಿದ್ದಂತೆ ವ್ಯಕ್ತಿ ಮೃತಪಟ್ಟಿದ್ದಾರೆ. ಕೊನೆಗೆ ಚಿತ್ರ ಮುಗಿದ ನಂತರ ಚಿತ್ರಮಂದಿರ ಸ್ವಚ್ಛಗೊಳಿಸಲು ಸಿಬ್ಬಂದಿ ಹೋಗಿದ್ದಾರೆ. ಈ ವೇಳೆ ವ್ಯಕ್ತಿ ಮೃತಪಟ್ಟಿರುವುದು ತಿಳಿದು ಬಂದಿದೆ. ಮೃತಪಟ್ಟ ವ್ಯಕ್ತಿಯನ್ನು ನೋಡಿ ಸಿಬ್ಬಂದಿ […]

ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧಾರಾವಾಹಿ ನಟ ಭವಾನಿ ಸಿಂಗ್

Tuesday, November 19th, 2019
Bhavani-singh

ಬೆಂಗಳೂರು : ಧಾರಾವಾಹಿಯಲ್ಲಿ ಈ ಹಿಂದೆ ನಟಿಸುತ್ತಿದ್ದ ನಟ ಭವಾನಿ ಸಿಂಗ್ ತಮ್ಮ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭವಾನಿ ಸಿಂಗ್ ತಮ್ಮ ಬಹುಕಾಲದ ಗೆಳತಿ ಪಂಕಜಾ ಶಿವಣ್ಣ ಅವರ ಜೊತೆ ಮದುವೆ ಆಗಿದ್ದಾರೆ. ಭವಾನಿ ಹಾಗೂ ಪಂಕಜಾ ಎರಡು ವರ್ಷದಿಂದ ಸ್ನೇಹಿತರಾಗಿದ್ದರು. ಬಳಿಕ ಭವಾನಿ ಅವರು ಪಂಕಜಾ ಅವರನ್ನು ಪ್ರಪೋಸ್ ಮಾಡಿದ್ದು, ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ ಈಗ ಮದುವೆಯಾಗಿದ್ದಾರೆ. ಕೆಲ ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ ಇದೀಗ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದಾರೆ. […]

ಚಂದನ್ ಶೆಟ್ಟಿ- ನಿವೇದಿತಾ ಗೌಡ ಅದ್ಧೂರಿ ನಿಶ್ಚಿತಾರ್ಥ

Monday, October 21st, 2019
chandan-shetty

ಮೈಸೂರು : ಗಾಯಕ ಚಂದನ್ ಶೆಟ್ಟಿ ಮತ್ತು ಬಾರ್ಬಿ ಗರ್ಲ್ ನಿವೇದಿತಾ ಗೌಡ ನಿಶ್ವಿತಾರ್ಥ ಇಂದು ಮೈಸೂರಿನ ಖಾಸಗಿ ಹೋಟೆಲಿನಲ್ಲಿ ಅದ್ಧೂರಿಯಾಗಿ ನಡೆದಿದೆ. ಈ ಶುಭಸಮಾರಂಭದಲ್ಲಿ ಎರಡೂ ಕುಟುಂಬದ ಸದಸ್ಯರು ಹಾಗೂ ಆಪ್ತರಷ್ಟೇ ಭಾಗಿಯಾಗಿದ್ದರು. ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ಅಭಿಮಾನಿಗಳ ಮುಂದೆ ಗೆಳತಿ ನಿವೇದಿತಾರಿಗೆ ಪ್ರಪೋಸ್ ಮಾಡಿದ್ದರು. ವೇದಿಕೆಯಲ್ಲಿಯೇ ರಿಂಗ್ ತೊಡಿಸಿ ತಮ್ಮ ಪ್ರೇಮ ವಿಚಾರವನ್ನು ಚಂದನ್ ಅಧಿಕೃತವಾಗಿ ಹೇಳಿಕೊಂಡಿದ್ದರು. ಇದೀಗ ಚಂದನ್, ನಿವೇದಿತಾಗೆ ಮತ್ತೊಮ್ಮೆ ರಿಂಗ್ ತೊಡಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಖಾಸಗಿ ವಾಹಿನಿಯ […]

ಆ್ಯಕ್ಷನ್​ ಪ್ರಿನ್ಸ್​ ಧ್ರುವಾ ಸರ್ಜಾಗೆ ಕಂಕಣ ಭಾಗ್ಯ: ಬಾಲ್ಯದ ಸ್ನೇಹಿತೆಯೊಂದಿಗೆ ಹಸೆಮಣೆ ಏರಲು ಸರ್ಜಾ ರೆಡಿ..!

Friday, November 16th, 2018
dhruva-sarja

ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾಗೆ ಕಂಕಣ ಭಾಗ್ಯ ಕೂಡಿಬಂದಿದೆ. ತಮ್ಮ ಬಾಲ್ಯದ ಸ್ನೇಹಿತೆಯೊಂದಿಗೆ ಹಸೆಮಣೆ ಏರಲು ಸರ್ಜಾ ರೆಡಿಯಾಗಿದ್ದಾರೆ. ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಅವರೊಂದಿಗೆ ಧ್ರುವಾ ಸರ್ಜಾ ಡಿಸೆಂಬರ್ 10ರಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಈ ಹಿಂದೆ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ತಾವು ಲವ್ ಮ್ಯಾರೇಜ್ ಆಗುವುದಾಗಿ ಸುಳಿವು ಬಿಟ್ಟುಕೊಟ್ಟಿದ್ದರು. ಅದರಂತೆ ಬನಶಂಕರಿಯ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಸ್ನೇಹಿತೆ ಪ್ರೇರಣಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಸದ್ಯದಲ್ಲೇ ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ಮದುವೆಗೆ […]

ಕನ್ನಡ ನಟಿ ನೇಹಾ ಪಾಟೀಲ್​​​​ಗೆ ಇಂದು ನಿಶ್ಚಿತಾರ್ಥದ ಸಂಭ್ರಮ

Friday, October 19th, 2018
neha-patil

ಬೆಂಗಳೂರು: ಸ್ಮೈಲ್ ಪ್ಲೀಸ್, ಸಿತಾರ, ವರ್ಧನ ಸಿನಿಮಾಗಳಲ್ಲಿ ನಟಿಸಿದ್ದ ನಟಿ ನೇಹಾ ಪಾಟೀಲ್ಗೆ ಇಂದು ನಿಶ್ಚಿತಾರ್ಥದ ಸಂಭ್ರಮ. ಬೆಂಗಳೂರು ಮೂಲದ ಪ್ರಣವ್ ಜೊತೆ ಇಂದು ನೇಹಾ ನಿಶ್ಚಿತಾರ್ಥ ಜರುಗಿದೆ. ಮಾಗಡಿ ರಸ್ತೆಯಲ್ಲಿರುವ ವಿಸ್ಮಯ ಪಾರ್ಟಿ ಹಾಲ್ನಲ್ಲಿ ನೇಹಾ ಪಾಟೀಲ್ ಎಂಗೇಜ್ ಮೆಂಟ್ ಜರುಗಿದೆ. ಎರಡು ಕುಟುಂಬಗಳ ಸಮ್ಮುಖದಲ್ಲಿ, ನೇಹಾ ಪಾಟೀಲ್ ಹಾಗು ಪ್ರಣವ್ ನಿಶ್ಚಿತಾರ್ಥ ಶಾಸ್ತ್ರ, ಸಂಪ್ರದಾಯದಂತೆ ನಡೆಸಲಾಯಿತು. ಕೆಂಪು ಸೀರೆ ಹಾಗೂ ಹಸಿರು ಬ್ಲೌಸ್ನಲ್ಲಿ ನೇಹಾ ಬಹಳ ಮುದ್ದಾಗಿ ಕಾಣುತ್ತಿದ್ದರು. ಚಿತ್ರರಂಗದ ಹಾಗೂ ಕಿರುತೆರೆಯ ಸಾಕಷ್ಟು […]