ಏಕದಿನದಲ್ಲಿ ವಿರಾಟ್​ ಕೊಹ್ಲಿಯನ್ನೇ ಹಿಂದಿಕ್ಕಿದ ಮಹಿಳಾ ಆಟಗಾರ್ತಿ ಸ್ಮೃತಿ ಮಂಧಾನ

Thursday, November 7th, 2019
virat

ನವದೆಹಲಿ : ಟೀಮ್ ಇಂಡಿಯಾದ ಮಹಿಳಾ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದು, ಅತಿ ವೇಗವಾಗಿ 2000 ರನ್ ದಾಖಲಿಸಿದ ಎರಡನೇ ಭಾರತೀಯಳು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ವಿಶೇಷವೆಂದರೆ ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನೇ ಸ್ಮೃತಿ ಹಿಂದಿಕ್ಕಿದ್ದಾರೆ. ಎಡಗೈ ಬ್ಯಾಟ್ಸ್ವುಮೆನ್ ಆಗಿರುವ ಸ್ಮೃತಿ, ಬುಧವಾರ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ವೆಸ್ಟ್ಇಂಡೀಸ್ ವಿರುದ್ಧದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಇದೇ ಪಂದ್ಯವನ್ನು ಭಾರತ […]

ಕಾಮನ್​ವೆಲ್ತ್ ಬೆಂಚ್ ಪ್ರೆಸ್ ಪವರ್ ಲಿಫ್ಟ್​​ ಚಾಂಪಿಯನ್ ಶಿಪ್ ನಲ್ಲಿ ಋತ್ವಿಕ್ ಗೆ ಅವಳಿ ಚಿನ್ನ

Wednesday, September 18th, 2019
vruthvik

ಮಂಗಳೂರು : ಕೆನಡಾದ ಸೇಂಟ್ ಜೋನ್ಸ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಅಂತಾರಾಷ್ಟ್ರೀಯ ಬೆಂಚ್ ಪ್ರೆಸ್ ಪವರ್ ಲಿಫ್ಟ್ ಚಾಂಪಿಯನ್ ಶಿಪ್ 83 ಕಿಲೋ ಸಬ್ ಜೂನಿಯರ್ ವಿಭಾಗದಲ್ಲಿ ಭಾರತ ಪ್ರತಿನಿಧಿಸಿರುವ ಋತ್ವಿಕ್ ಅಲೆವೂರಾಯ ಕೆ.ವಿ. ಎರಡು ಚಿನ್ನದ ಪದಕ‌ ಪಡೆದಿದ್ದಾರೆ. ಕ್ಲಾಸಿಕ್ ಮತ್ತು ಎಕ್ವಿಪ್ಡ್ ವಿಭಾಗದಲ್ಲಿ ಭಾರ ಎತ್ತಿ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾರೆ.ಇವರು ಪ್ರದೀಪ್ ಆಚಾರ್ಯ ಅವರಿಂದ ತರಬೇತಿ ಪಡೆಯುತ್ತಿದ್ದು, ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ. ಶಾರದಾ ವಿದ್ಯಾನಿಕೇತನ ಶಾಲೆಯ ಹಳೆ ವಿದ್ಯಾರ್ಥಿ. ಇವರು ವಾಸುದೇವ ಭಟ್ […]

ಸ್ಪೀಡ್ ಸ್ಕೇಟಿಂಗ್ ಓಪನ್ ಚಾಲೆಂಜ್ ನಲ್ಲಿ ರಾಜ್ಯಕ್ಕೆ ಚಿನ್ನ ತಂದ ಮಂಗಳೂರಿನ ಬಾಲಕಿ

Monday, May 27th, 2019
Anagha

ಮಂಗಳೂರು  : ದೆಹಲಿಯ ಗುರುಗ್ರಾಮ್ ನಲ್ಲಿ ಐಸ್ ಸ್ಕೇಟಿಂಗ್ ಅಸೋಸಿಯೇಷನ್‌ ಆಫ್‌ ಇಂಡಿಯಾ ಆಯೋಜಿಸಿದ ಸ್ಪೀಡ್ ಸ್ಕೇಟಿಂಗ್ ಓಪನ್ ಚಾಲೆಂಜ್ 2019 ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ ಮಂಗಳೂರಿನ ಅನಘಾ ಚಿನ್ನದ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. 8 ರಿಂದ 10 ವರ್ಷದೊಳಗಿನ ಬಾಲಕಿಯರ ವಿಭಾಗದ 500 ಮೀಟರ್ ಐಸ್ ರಿಂಕ್ ರೇಸ್ ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.ಮಂಗಳೂರಿನ‌ ಡಾ.ರಾಜೇಶ್ ಹುಕ್ಕೇರಿ ಹಾಗೂ ಡಾ.ಅನಿತಾ ರಾಜೇಶ್ ದಂಪತಿಯ ಪುತ್ರಿಯಾದ ಅನಘಾ ಬಿಜೈ ಲೂರ್ಡ್ಸ್ ಸಿಬಿಎಸ್ಇ ಶಾಲೆಯ […]

ಇಂದು ಐಪಿಎಲ್​ ಹರಾಜು…ಈ ಆಟಗಾರರ ಮೇಲಿದೆ ಫ್ರಾಂಚೈಸಿಗಳ ಕಣ್ಣು..!

Tuesday, December 18th, 2018
premier-legue

ಜೈಪುರ: ಐಪಿಎಲ್ ಆರಂಭಕ್ಕೆ ಇನ್ನು ಕೆಲ ತಿಂಗಳು ಬಾಕಿ ಇರುವಂತೆ ಚಟುವಟಿಕೆಗಳು ಜೋರಾಗಿ ನಡೆಯುತ್ತಿದ್ದು, ಇಂದು ಜೈಪುರದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ತಂಡದಲ್ಲಿ ಹಲವು ಆಟಗಾರರನ್ನು ಉಳಿಸಿಕೊಂಡಿರುವ ಫ್ರಾಂಚೈಸಿಗಳು ಇಂದಿನ ಹರಾಜಿನಲ್ಲಿ ಬಲಿಷ್ಠ ಆಟಗಾರರನ್ನು ಖರೀದಿ ಮಾಡಲು ಪ್ಲಾನ್ ಮಾಡಿವೆ. ವೆಸ್ಟ್ ಇಂಡೀಸ್ ತಂಡದ ಯುವ ಆಟಗಾರ ಶಿಮ್ರೋನ್ ಹೇಟ್ಮಯರ್ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಬಿಕರಿಯಾಗುವ ಸಾಧ್ಯತೆ ಇದೆ. ಕೆಲ ತಿಂಗಳ ಹಿಂದೆ ಭಾರತ ಪ್ರವಾಸ ಕೈಗೊಂಡಿದ್ದ ವಿಂಡೀಸ್ ತಂಡದಲ್ಲಿ […]

ಇಂಡಿಯನ್​ ಪ್ರೀಮಿಯರ್​ ಲೀಗ್: ಈ ಮೂವರು ಸ್ಟಾರ್​ ಪ್ಲೇಯರ್ಸ್​ ಕೈಬಿಡಲು ಪ್ರಾಂಚೈಸಿಗಳ ನಿರ್ಧಾರ..!

Thursday, November 15th, 2018
manish-pandey

ಮುಂಬೈ: ಕಳೆದ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ದುಬಾರಿ ಬೆಲೆ ನೀಡಿ ಸ್ಟಾರ್ ಪ್ಲೇಯರ್ಸ್ ಖರೀದಿ ಮಾಡಿದ್ದ ಕೆಲ ಪ್ರಾಂಚೈಸಿಗಳು ಕೈಸುಟ್ಟುಕೊಂಡಿದ್ದು ಗೊತ್ತೇ ಇದೆ. ಇದೇ ಕಾರಣಕ್ಕಾಗಿ ಈ ಸಲ ಅವರನ್ನ ತಂಡದಿಂದ ಕೈಬಿಡಲು ಪ್ರಮುಖ ಪ್ರಾಂಚೈಸಿಗಳು ನಿರ್ಧಾರ ಮಾಡಿರುವ ಹಾಗೇ ಕಾಣಿಸುತ್ತದೆ. 2018ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತಿ ದುಬಾರಿ ಬೆಲೆಗೆ ಬಿಕರಿಯಾಗಿದ್ದ ಕನ್ನಡಿಗರಾದ ಮನೀಷ್ ಪಾಂಡೆ, ಇಂಗ್ಲೆಂಡ್ನ ಬೆನ್ ಸ್ಟೋಕ್ಸ್ ಹಾಗೂ ಜಯದೇವ್ ಉನ್ಕದತ್ ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನು ಏನು ನೀಡಿಲ್ಲ. ಹೀಗಾಗಿ ಈ […]

ಪಿಬಿಎಲ್ ಬ್ಯಾಡ್ಮಿಂಟನ್​ ಲೀಗ್​: ಭಾರಿ ಮೊತ್ತಕ್ಕೆ ಸೈನಾ ನೆಹ್ವಾಲ್​, ಪಿ.ವಿ. ಸಿಂಧು

Tuesday, October 9th, 2018
badmitton

ನವದೆಹಲಿ:ಭಾರತದ ಬ್ಯಾಡ್ಮಿಂಟನ್ ಸ್ಟಾರ್ಗಳಾದ ಸೈನಾ ನೆಹ್ವಾಲ್, ಸಿಂಧೂ ಹಾಗೂ ಕಿಡಂಬಿ ಶ್ರೀಕಾಂತ್ ಪ್ರಸಕ್ತ ವರ್ಷದ ಪಿಬಿಎಲ್ನಲ್ಲಿ ಭಾರಿ ಮೊತ್ತಕ್ಕೆ ಹರಾಜಾಗಿದ್ದಾರೆ. ಗರಿಷ್ಠ ಬೆಲೆ ಪಡೆದ ದೇಶಿ ಹಾಗೂ ವಿದೇಶಿ ಪ್ಲೇಯರ್ಸ್: ಒಟ್ಟು 9 ತಂಡಗಳು ಭಾಗವಹಿಸಿದ್ದ 2018ರ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ ಹರಾಜಿನಲ್ಲಿ (ಪಿಬಿಎಲ್‌) ಸೈನಾ ನೆಹ್ವಾಲ್‌ ನಾರ್ತ್‌ ಈಸ್ಟರ್ನ್ ವಾರಿಯರ್ ತಂಡಕ್ಕೂ ಪಿ.ವಿ. ಸಿಂಧು ಹೈದರಾಬಾದ್‌ ಹಂಟರ್ ತಂಡಕ್ಕೂ, ಶ್ರೀಕಾಂತ್‌ ಬೆಂಗಳೂರು ರ‍್ಯಾಪ್ಟರ್ ತಂಡಕ್ಕೆ ಮತ್ತೊಬ್ಬ ಯುವ ಆಟಗಾರ ಪ್ರಣಯ್‌ ಅವರನ್ನು ಡೆಲ್ಲಿ ಡ್ಯಾಶರ್ ಖರೀದಿಸಿತು. […]

ಏಷ್ಯಾಕಪ್​ ಫೈನಲ್​ ಪಂದ್ಯದಲ್ಲಿ ಟೀಂ ಇಂಡಿಯಾಗೆ ರೋಚಕ ಗೆಲುವು: 7ನೇ ಬಾರಿ ಚಾಂಪಿಯನ್​ ಪಟ್ಟ..!

Saturday, September 29th, 2018
indai

  ದುಬೈ: ಯುಎಇನಲ್ಲಿ ನಡೆದ 14ನೇ ಆವೃತ್ತಿ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 3ವಿಕೆಟ್ಗಳ ರೋಚಕ ಗೆಲುವು ದಾಖಲು ಮಾಡಿಕೊಳ್ಳುವ ಮೂಲಕ 7ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ಬಲಗೈ ಓಪನರ್ ಲಿಟನ್ ದಾಸ್ ಅವರ ಚೊಚ್ಚಲ ಶತಕದ (121) ನೇರವಿನಿಂದ 48.3 ಓವರ್‌ಗಳಲ್ಲೇ 222 ರನ್‌ಗಳಿಗೆ ಸರ್ವಪತನವನ್ನು ಕಂಡಿತ್ತು. ಇದರ ಬೆನ್ನತ್ತಿದ್ದ ಟೀಂ ಇಂಡಿಯಾ ಲಾಸ್ಟ್ ಓವರ್ನ […]

2019ರ ವಿಶ್ವಕಪ್​ ಟೂರ್ನಿ..ಕೊಹ್ಲಿ ಪಡೆಯಲ್ಲಿ ಇವರೆಲ್ಲ ಸ್ಥಾನ ಪಡೆಯೋ ಸಾಧ್ಯತೆ!

Wednesday, July 25th, 2018
team-india

ಮುಂಬೈ: ಇಂಗ್ಲೆಂಡ್ನಲ್ಲಿ ನಡೆಯಲಿರುವ ಬಹುನೀರಿಕ್ಷಿತ 2019ರ ಏಕದಿನ ವಿಶ್ವಕಪ್ ಟೂರ್ನಿಗೆ ಈಗಾಗಲೇ ಎಲ್ಲ ತಂಡಗಳು ಭರದ ತಯಾರಿ ನಡೆಸಿದ್ದು, ಟೀಂ ಇಂಡಿಯಾ ಕೂಡ ಅದರಿಂದ ಹೊರತಾಗಿಲ್ಲ. ಅದಕ್ಕಾಗಿ ಕೆಲವೊಂದು ಪರೀಕ್ಷೆಗೆ ತಂಡ ಒಳಗಾಗಿದೆ. ಈ ಹಿಂದಿನ ಸರಣಿಗಳಲ್ಲಿ ಆಟಗಾರರು ನೀಡಿರುವ ಪ್ರದರ್ಶನದ ಆಧಾರದ ಮೇಲೆ ಈ ಎಲ್ಲ ಆಟಗಾರರು ಇಂಗ್ಲೆಂಡ್ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿವೆ. ಈಗಾಗಲೇ ಈ ಹಿಂದಿನ ಅನೇಕ ಸರಣಿಗಳಲ್ಲಿ ಉತ್ತಮ ಜೊತೆಯಾಟ ನೀಡಿರುವ ಶಿಖರ್ […]

20 ವರ್ಷಗಳ ಬಳಿಕ 2ನೇ ಬಾರಿ ಚಾಂಪಿಯನ್​ ಆಗಿ ಹೊರಹೊಮ್ಮಿದ ಫ್ರಾನ್ಸ್​..!

Monday, July 16th, 2018
france

ಮಾಸ್ಕೋ: ಫ್ರಾನ್ಸ್ ತಂಡವು ಫುಟ್ಬಾಲ್ ಜಗತ್ತಿನ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫಿಫಾ ವಿಶ್ವಕಪ್ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಕ್ರೋವೇಶಿಯಾವನ್ನು ಮಣಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ರಷ್ಯಾದ ಮಾಸ್ಕೋದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡವು ಕ್ರೋವೇಶಿಯಾವನ್ನು 4-2 ಅಂತರದ ಗೋಲುಗಳಿಂದ ಮಣಿಸಿದೆ. 20 ವರ್ಷಗಳ ಬಳಿಕ 2ನೇ ಬಾರಿಗೆ ಫ್ರಾನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಹಿಂದೆ 1998ರಲ್ಲಿ ಫ್ರಾನ್ಸ್ ತಂಡ ಫುಟ್ಬಾಲ್ ವಿಶ್ವಕಪ್ ಗೆದ್ದಿತ್ತು. ಕ್ರೋವೇಶಿಯಾವು ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯ ಫೈನಲ್ ತಲುಪಿತ್ತು.

ವಿಶ್ವ ಜೂನಿಯರ್​ ಅಥ್ಲೆಟಿಕ್ಸ್..ಚಿನ್ನದ ಪದಕ ಗೆದ್ದ ಹಿಮಾದಾಸ್!

Saturday, July 14th, 2018
hima-das

ಹೈದರಾಬಾದ್: 18 ವರ್ಷದ ತರುಣಿ ಹಿಮಾದಾಸ್ ಫಿನ್ಲ್ಯಾಂಡ್ನಲ್ಲಿ ನಡೆದ 20ರ ವಯೋಮಿತಿ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ನೂತನ ಇತಿಹಾಸ ರಚನೆ ಮಾಡಿರುವ ಜತೆಗೆ ಕೋಟಿ ಕೋಟಿ ಭಾರತೀಯರ ಹೃದಯ ಗೆದ್ದಿದ್ದಾಳೆ. 400 ಮೀ. ಓಟವನ್ನ 18ರ ಹರೆಯದ ಹಿಮಾ ಕೇವಲ 51.46 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇನ್ನು ಇದೇ ವಿಭಾಗದಲ್ಲಿ ಸ್ಪರ್ಧಿಸಿದ ರೊಮನಿಯಾದ ಆಂಡ್ರಿಯಾ ಮಿಕ್ಲೋಸ್ (52.07 ಸೆಕೆಂಡು) ಬೆಳ್ಳಿ ಹಾಗೂ ಅಮೆರಿಕದ ಟೇಲರ್ ಮ್ಯಾನ್ಸನ್ (52.28 […]